ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 130
ಸಾರ
ಯುಧಿಷ್ಠಿರನ ತೀರ್ಥಯಾತ್ರೆಯು ಮುಂದುವರೆದುದು (1-15). ರಾಜ ಉಶೀನರನು ದೇವತೆಗಳಿಗೆ ಸಮಾನನೇ ಎಂದು ಪರೀಕ್ಷಿಸಲು ಇಂದ್ರನು ಗಿಡುಗವಾಗಿ ಮತ್ತು ಅಗ್ನಿಯು ಪಾರಿವಾಳವಾಗಿ ಅವನ ಯಜ್ಞಶಾಲೆಗೆ ಬಂದು, ಗಿಡುಗನ ಭಯದಿಂದ ಪಾರಿವಾಳವು ರಕ್ಷಣೆಯನ್ನು ಕೇಳಿದುದು (16-20).
03130001 ಲೋಮಶ ಉವಾಚ।
03130001a ಇಹ ಮರ್ತ್ಯಾಸ್ತಪಸ್ತಪ್ತ್ವಾ ಸ್ವರ್ಗಂ ಗಚ್ಚಂತಿ ಭಾರತ।
03130001c ಮರ್ತುಕಾಮಾ ನರಾ ರಾಜನ್ನಿಹಾಯಾಂತಿ ಸಹಸ್ರಶಃ।।
ಲೋಮಶನು ಹೇಳಿದನು: “ಭಾರತ! ರಾಜನ್! ಇಲ್ಲಿ ತಪಸ್ಸನ್ನು ತಪಿಸಿ ಮನುಷ್ಯರು ಸ್ವರ್ಗಕ್ಕೆ ಹೋಗುತ್ತಾರೆ. ಸಾವನ್ನು ಬಯಸಿದ ನರರು ಸಹಸ್ರಾರು ಸಂಖ್ಯೆಗಳಲ್ಲಿ ಇಲ್ಲಿಗೆ ಬರುತ್ತಾರೆ.
03130002a ಏವಮಾಶೀಃ ಪ್ರಯುಕ್ತಾ ಹಿ ದಕ್ಷೇಣ ಯಜತಾ ಪುರಾ।
03130002c ಇಹ ಯೇ ವೈ ಮರಿಷ್ಯಂತಿ ತೇ ವೈ ಸ್ವರ್ಗಜಿತೋ ನರಾಃ।।
ಹಿಂದೆ ದಕ್ಷನು ಇಲ್ಲಿ ಯಜ್ಞಮಾಡಿದಾಗ ಈ ಆಶೀರ್ವಾದವನ್ನು ನುಡಿದನು: “ಇಲ್ಲಿ ಯಾವ ನರರು ಸಾಯುತ್ತಾರೋ ಅವರು ಸ್ವರ್ಗವನ್ನು ಗೆಲ್ಲುತ್ತಾರೆ!”
03130003a ಏಷಾ ಸರಸ್ವತೀ ಪುಣ್ಯಾ ದಿವ್ಯಾ ಚೋಘವತೀ ನದೀ।
03130003c ಏತದ್ವಿನಶನಂ ನಾಮ ಸರಸ್ವತ್ಯಾ ವಿಶಾಂ ಪತೇ।।
03130004a ದ್ವಾರಂ ನಿಷಾದರಾಷ್ಟ್ರಸ್ಯ ಯೇಷಾಂ ದ್ವೇಷಾತ್ಸರಸ್ವತೀ।
03130004c ಪ್ರವಿಷ್ಟಾ ಪೃಥಿವೀಂ ವೀರ ಮಾ ನಿಷಾದಾ ಹಿ ಮಾಂ ವಿದುಃ।।
ವಿಶಾಂಪತೇ! ವೀರ! ಇದು ಪುಣ್ಯೆ, ದಿವ್ಯೆ, ಅಘವತೀ ಸರಸ್ವತೀ ನದಿಯು. ಇದು ಸರಸ್ವತಿಯು ಅದೃಶ್ಯಳಾಗುವ ಸ್ಥಳ. ಇದು ನಿಷಾದರಾಷ್ಟ್ರದ ದ್ವಾರ. ಅವರ ಮೇಲಿನ ದ್ವೇಷದಿಂದ, ನಿಷದರು ಅವಳನ್ನು ತಿಳಿಯಬಾರದು ಎಂದು ಸರಸ್ವತಿಯು ಭೂಮಿಯನ್ನು ಹೊಕ್ಕಳು.
03130005a ಏಷ ವೈ ಚಮಸೋದ್ಭೇದೋ ಯತ್ರ ದೃಶ್ಯಾ ಸರಸ್ವತೀ।
03130005c ಯತ್ರೈನಾಮಭ್ಯವರ್ತಂತ ದಿವ್ಯಾಃ ಪುಣ್ಯಾಃ ಸಮುದ್ರಗಾಃ।।
ಇದು ಚಮಸ ಚಿಲುಮೆ. ಇಲ್ಲಿ ಸರಸ್ವತಿಯನ್ನು ಕಾಣಬಹುದು. ಇಲ್ಲಿಯೇ ಸಮುದ್ರವನ್ನು ಸೇರುವ ದಿವ್ಯ ಪುಣ್ಯ ನದಿಗಳು ಅವಳನ್ನು ಸೇರುತ್ತವೆ.
03130006a ಏತತ್ಸಿಂಧೋರ್ಮಹತ್ತೀರ್ಥಂ ಯತ್ರಾಗಸ್ತ್ಯಮರಿಂದಮ।
03130006c ಲೋಪಾಮುದ್ರಾ ಸಮಾಗಮ್ಯ ಭರ್ತಾರಮವೃಣೀತ ವೈ।।
ಅರಿಂದಮ! ಇದು ಸಿಂಧು ಮಹಾತೀರ್ಥ. ಇಲ್ಲಿಯೇ ಅಗಸ್ತ್ಯನು ಲೋಪಾಮುದ್ರೆಯನ್ನು ಭೇಟಿಯಾದನು ಮತ್ತು ಅವಳು ಅವನನ್ನು ಪತಿಯನ್ನಾಗಿ ವರಿಸಿದಳು.
03130007a ಏತತ್ಪ್ರಭಾಸತೇ ತೀರ್ಥಂ ಪ್ರಭಾಸಂ ಭಾಸ್ಕರದ್ಯುತೇ।
03130007c ಇಂದ್ರಸ್ಯ ದಯಿತಂ ಪುಣ್ಯಂ ಪವಿತ್ರಂ ಪಾಪನಾಶನಂ।।
ಭಾಸ್ಕರದ್ಯುತೇ! ಇದು ಇಂದ್ರನಿಗೆ ಪ್ರಿಯವಾದ, ಪುಣ್ಯವೂ ಪವಿತ್ರವೂ, ಪಾಪನಾಶನವೂ ಆದ ಪ್ರಕಾಶಿಸುತ್ತಿರುವ ಪ್ರಭಾಸ ತೀರ್ಥ.
03130008a ಏತದ್ವಿಷ್ಣುಪದಂ ನಾಮ ದೃಶ್ಯತೇ ತೀರ್ಥಮುತ್ತಮಂ।
03130008c ಏಷಾ ರಮ್ಯಾ ವಿಪಾಶಾ ಚ ನದೀ ಪರಮಪಾವನೀ।।
ಇಲ್ಲಿ ವಿಷ್ಣುಪಾದ ಎಂಬ ಹೆಸರಿನ ಉತ್ತಮ ತೀರ್ಥವು ಕಾಣುತ್ತದೆ. ಇದು ಪರಮಪಾವನೀ ರಮ್ಯ ವಿಪಾಷಾ ನದೀ.
03130009a ಅತ್ರೈವ ಪುತ್ರಶೋಕೇನ ವಸಿಷ್ಠೋ ಭಗವಾನೃಷಿಃ।
03130009c ಬದ್ಧ್ವಾತ್ಮಾನಂ ನಿಪತಿತೋ ವಿಪಾಶಃ ಪುನರುತ್ಥಿತಃ।।
ಇಲ್ಲಿಯೇ ಭಗವಾನ್ ಋಷಿ ವಸಿಷ್ಠನು ಪುತ್ರಶೋಕದಿಂದ ತನ್ನನ್ನು ತಾನೇ ಕಟ್ಟಿಕೊಂಡು ಬಿದ್ದಾಗ, ಏನೂ ಗಾಯನೋವುಗಳಾಗದೇ ಪುನಃ ಮೇಲೆದ್ದಿದ್ದನು1.
03130010a ಕಾಶ್ಮೀರಮಂಡಲಂ ಚೈತತ್ಸರ್ವಪುಣ್ಯಮರಿಂದಮ।
03130010c ಮಹರ್ಷಿಭಿಶ್ಚಾಧ್ಯುಷಿತಂ ಪಶ್ಯೇದಂ ಭ್ರಾತೃಭಿಃ ಸಹ।।
ಅರಿಂದಮ! ಇದು ಸರ್ವಪುಣ್ಯಕಾರಕವಾದ ಕಾಶ್ಮೀರಮಂಡಲ. ಋಷಿಗಳು ವಾಸವಾಗಿರುವ ಈ ಪ್ರದೇಶವನ್ನು ತಮ್ಮಂದಿರೊಡನೆ ನೋಡು.
03130011a ಅತ್ರೋತ್ತರಾಣಾಂ ಸರ್ವೇಷಾಮೃಷೀಣಾಂ ನಾಹುಷಸ್ಯ ಚ।
03130011c ಅಗ್ನೇಶ್ಚಾತ್ರೈವ ಸಂವಾದಃ ಕಾಶ್ಯಪಸ್ಯ ಚ ಭಾರತ।।
ಭಾರತ! ಇಲ್ಲಿಯೇ ಉತ್ತರದ ಋಷಿಗಳೆಲ್ಲರೂ, ನಾಹುಷ ಯಯಾತಿ, ಅಗ್ನಿ ಮತ್ತು ಕಾಶ್ಯಪರು ಸಂವಾದವನ್ನು ನಡೆಸಿದ್ದರು.
03130012a ಏತದ್ದ್ವಾರಂ ಮಹಾರಾಜ ಮಾನಸಸ್ಯ ಪ್ರಕಾಶತೇ।
03130012c ವರ್ಷಮಸ್ಯ ಗಿರೇರ್ಮಧ್ಯೇ ರಾಮೇಣ ಶ್ರೀಮತಾ ಕೃತಂ।।
ಮಹಾರಾಜ! ಇಲ್ಲಿ ಕಾಣಿಸುವುದು ಮಾನಸ ಸರೋವರದ ದ್ವಾರ. ಮಳೆನೀರಿನಿಂದ ತುಂಬಿದ ಇದನ್ನು ಗಿರಿಗಳ ಮಧ್ಯದಲ್ಲಿ ಶ್ರೀಮತ ರಾಮನು ರಚಿಸಿದನು.
03130013a ಏಷ ವಾತಿಕಷಂಡೋ ವೈ ಪ್ರಖ್ಯಾತಃ ಸತ್ಯವಿಕ್ರಮಃ।
03130013c ನಾಭ್ಯವರ್ತತ ಯದ್ದ್ವಾರಂ ವಿದೇಹಾನುತ್ತರಂ ಚ ಯಃ।।
ಇದು ವಿದೇಹದ ಉತ್ತರದಲ್ಲಿರುವ ಸತ್ಯವಿಕ್ರಮಕ್ಕೆ ಪ್ರಖ್ಯಾತವಾದ ವಾತಿಕಷಂಡ. ಇದರ ದ್ವಾರವನ್ನೂ ಯಾರೂ ಉಲ್ಲಂಘಿಸಿಲ್ಲ.
03130014a ಏಷ ಉಜ್ಜಾನಕೋ ನಾಮ ಯವಕ್ರೀರ್ಯತ್ರ ಶಾಂತವಾನ್।
03130014c ಅರುಂಧತೀಸಹಾಯಶ್ಚ ವಸಿಷ್ಠೋ ಭಗವಾನೃಷಿಃ।।
ಇದು ಉಜ್ಜಾನಕ ಎಂಬ ಹೆಸರಿನ ಮಾರುಕಟ್ಟೆ. ಇಲ್ಲಿಯೇ ಭಗವಾನೃಷಿ ವಸಿಷ್ಠನು ಅರುಂಧತಿಯೊಡನೆ ಸುಖವಾಗಿದ್ದನು.
03130015a ಹ್ರದಶ್ಚ ಕುಶವಾನೇಷ ಯತ್ರ ಪದ್ಮಂ ಕುಶೇಶಯಂ।
03130015c ಆಶ್ರಮಶ್ಚೈವ ರುಕ್ಮಿಣ್ಯಾ ಯತ್ರಾಶಾಮ್ಯದಕೋಪನಾ।।
ಇದು ಪದ್ಮದಷ್ಟು ಕುಶಗಳ ಹಾಸಿಗೆಯಿರುವ ಕುಶವನ ಸರೋವರ. ಇಲ್ಲಿಯೇ ಕೋಪದಿಂದ ಶಾಂತಗೊಂಡ ರುಕ್ಮಿಯ ಆಶ್ರಮವೂ ಇದೆ.
03130016a ಸಮಾಧೀನಾಂ ಸಮಾಸಸ್ತು ಪಾಂಡವೇಯ ಶ್ರುತಸ್ತ್ವಯಾ।
03130016c ತಂ ದ್ರಕ್ಷ್ಯಸಿ ಮಹಾರಾಜ ಭೃಗುತುಂಗಂ ಮಹಾಗಿರಿಂ।।
03130017a ಜಲಾಂ ಚೋಪಜಲಾಂ ಚೈವ ಯಮುನಾಮಭಿತೋ ನದೀಂ।
03130017c ಉಶೀನರೋ ವೈ ಯತ್ರೇಷ್ಟ್ವಾ ವಾಸವಾದತ್ಯರಿಚ್ಯತ।।
ಪಾಂಡವೇಯ! ಸಮಾಧಿಗಳ ಸಂಕುಲದ ಕುರಿತು ನೀನು ಕೇಳಿದ್ದೀಯೆ. ಮಹಾರಾಜ! ನೀನು ಭೃಗುತುಂಗ ಮಹಾಗಿರಿಯನ್ನು, ಯಮುನಾ ನದಿಯ ಜೊತೆ ಹರಿಯುವ ಜಲ ಮತ್ತು ಉಪಜಲ ನದಿಗಳನ್ನು ನೋಡುತ್ತೀಯೆ. ಅಲ್ಲಿ ಉಶೀನರನು ಯಾಗಮಾಡಿ ಇಂದ್ರನಿಂದ ಪುರಸ್ಕೃತಗೊಂಡಿದ್ದನು.
03130018a ತಾಂ ದೇವಸಮಿತಿಂ ತಸ್ಯ ವಾಸವಶ್ಚ ವಿಶಾಂ ಪತೇ।
03130018c ಅಭ್ಯಗಚ್ಚತ ರಾಜಾನಂ ಜ್ಞಾತುಮಗ್ನಿಶ್ಚ ಭಾರತ।।
ವಿಶಾಂಪತೇ! ಭಾರತ! ಅವನು ದೇವತೆಗಳಿಗೆ ಸಮಾನನೇ ಎಂದು ಪರೀಕ್ಷಿಸಲು ಇಂದ್ರ ಮತ್ತು ಅಗ್ನಿಯರು ಆ ರಾಜನಲ್ಲಿಗೆ ಬಂದರು.
03130019a ಜಿಜ್ಞಾಸಮಾನೌ ವರದೌ ಮಹಾತ್ಮಾನಮುಶೀನರಂ।
03130019c ಇಂದ್ರಃ ಶ್ಯೇನಃ ಕಪೋತೋಽಗ್ನಿರ್ಭೂತ್ವಾ ಯಜ್ಞೇಽಭಿಜಗ್ಮತುಃ।।
ಮಹಾತ್ಮ ಉಶೀನರನನ್ನು ಪರೀಕ್ಷಿಸಲು ಮತ್ತು ವರಗಳನ್ನು ನೀಡಲು ಇಂದ್ರನು ಒಂದು ಗಿಡುಗವಾಗಿ ಮತ್ತು ಅಗ್ನಿಯು ಒಂದು ಪಾರಿವಾಳವಾಗಿ ಅವನ ಯಜ್ಞಶಾಲೆಗೆ ಆಗಮಿಸಿದರು.
03130020a ಊರುಂ ರಾಜ್ಞಃ ಸಮಾಸಾದ್ಯ ಕಪೋತಃ ಶ್ಯೇನಜಾದ್ಭಯಾತ್।
03130020c ಶರಣಾರ್ಥೀ ತದಾ ರಾಜನ್ನಿಲಿಲ್ಯೇ ಭಯಪೀಡಿತಃ।।
ರಾಜನ್! ಗಿಡುಗದ ಭಯದಿಂದ ಪಾರಿವಾಳವು ರಾಜನ ತೊಡೆಯಮೇಲೆ ಕುಳಿತುಕೊಂಡು ಭಯಪೀಡಿತಗೊಂಡು ರಕ್ಷಣೆಯನ್ನು ಕೇಳಿತು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಶ್ಯೇನಕಪೋತೀಯೇ ತ್ರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಶ್ಯೇನಕಪೋತದಲ್ಲಿ ನೂರಾಮೂವತ್ತನೆಯ ಅಧ್ಯಾಯವು.
-
ಇದರ ಕುರಿತಾದ ಕಥೆಯು ಆದಿಪರ್ವದ 167ನೇ ಅಧ್ಯಾಯದಲ್ಲಿ ಬರುತ್ತದೆ. ↩︎