129 ಲೋಮಶತೀರ್ಥಯಾತ್ರಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 129

ಸಾರ

ಯಮುನಾ ತೀರದ ಇತರ ಮಹತ್ವಗಳು (1-22).

03129001 ಲೋಮಶ ಉವಾಚ।
03129001a ಅಸ್ಮಿನ್ಕಿಲ ಸ್ವಯಂ ರಾಜನ್ನಿಷ್ಟವಾನ್ವೈ ಪ್ರಜಾಪತಿಃ।
03129001c ಸತ್ರಮಿಷ್ಟೀಕೃತಂ ನಾಮ ಪುರಾ ವರ್ಷಸಹಸ್ರಿಕಂ।।

ಲೋಮಶನು ಹೇಳಿದನು: “ರಾಜನ್! ಇಲ್ಲಿಯೇ ಸ್ವಯಂ ಪ್ರಜಾಪತಿಯು ಸಹಸ್ರವರ್ಷಗಳ ಪುರಾತನ ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು - ಯಾಜಿಸಿದನು.

03129002a ಅಂಬರೀಷಶ್ಚ ನಾಭಾಗ ಇಷ್ಟವಾನ್ಯಮುನಾಮನು।
03129002c ಯಜ್ಞೈಶ್ಚ ತಪಸಾ ಚೈವ ಪರಾಂ ಸಿದ್ಧಿಮವಾಪ ಸಃ।।

ನಾಭಾಗ ಅಂಬರೀಷನು ಯಮುನಾತೀರದಲ್ಲಿ ಇಷ್ಟಿಯನ್ನು ನೆರವೇರಿಸಿದನು. ಯಜ್ಞ ಮತ್ತು ತಪಸ್ಸಿನ ಮೂಲಕ ಅವನು ಪರಮ ಸಿದ್ಧಿಯನ್ನು ಹೊಂದಿದನು.

03129003a ದೇಶೋ ನಾಹುಷಯಜ್ಞಾನಾಮಯಂ ಪುಣ್ಯತಮೋ ನೃಪ।
03129003c ಯತ್ರೇಷ್ಟ್ವಾ ದಶ ಪದ್ಮಾನಿ ಸದಸ್ಯೇಭ್ಯೋ ನಿಸೃಷ್ಟವಾನ್।।

ನೃಪ! ಇದೇ ಪುಣ್ಯತಮ ಪ್ರದೇಶದಲ್ಲಿ ನಾಹುಷ ಯಯಾತಿಯು ಸದಸ್ಯರಿಗೆ ಹತ್ತು ಪದ್ಮಗಳಷ್ಟನ್ನು ಕೊಟ್ಟು ಯಜ್ಞಮಾಡಿದನು.

03129004a ಸಾರ್ವಭೌಮಸ್ಯ ಕೌಂತೇಯ ಯಯಾತೇರಮಿತೌಜಸಃ।
03129004c ಸ್ಪರ್ಧಮಾನಸ್ಯ ಶಕ್ರೇಣ ಪಶ್ಯೇದಂ ಯಜ್ಞವಾಸ್ತ್ವಿಹ।।

ಕೌಂತೇಯ! ಇದನ್ನು ನೋಡು! ಅಮಿತೌಜಸ ಯಯಾತಿಯು ಇಲ್ಲಿ ಯಜ್ಞಮಾಡಿ ಶಕ್ರನೊಡನೆ ಸ್ಪರ್ಧಿಸಿ ಸಾರ್ವಭೌಮತ್ವವನ್ನು ಪಡೆದನು.

03129005a ಪಶ್ಯ ನಾನಾವಿಧಾಕಾರೈರಗ್ನಿಭಿರ್ನಿಚಿತಾಂ ಮಹೀಂ।
03129005c ಮಜ್ಜಂತೀಮಿವ ಚಾಕ್ರಾಂತಾಂ ಯಯಾತೇರ್ಯಜ್ಞಕರ್ಮಭಿಃ।।

ನೋಡು! ಯಯಾತಿಯ ಯಜ್ಞಕರ್ಮಗಳಿಂದ ನಾನಾವಿಧದ ಅಗ್ನಿವೇದಿ ರಾಶಿಗಳ ಭಾರದಿಂದ ಭೂಮಿಯು ಸೋತು ತಗ್ಗಾದಂತೆ ಕಾಣುತ್ತದೆ.

03129006a ಏಷಾ ಶಮ್ಯೇಕಪತ್ರಾ ಸಾ ಶರಕಂ ಚೈತದುತ್ತಮಂ।
03129006c ಪಶ್ಯ ರಾಮಹ್ರದಾನೇತಾನ್ಪಶ್ಯ ನಾರಾಯಣಾಶ್ರಮಂ।।

ಇದು ಒಂದೇ ಎಲೆಯ ಶಮೀ ವೃಕ್ಷ, ಇದು ಉತ್ತಮ ಚೈತ್ಯ. ಇಲ್ಲಿಯೇ ರಾಮಸರೋವರನ್ನು ನೋಡು ಮತ್ತು ನಾರಾಯಣಾಶ್ರಮವನ್ನೂ ನೋಡು.

03129007a ಏತದಾರ್ಚೀಕಪುತ್ರಸ್ಯ ಯೋಗೈರ್ವಿಚರತೋ ಮಹೀಂ।
03129007c ಅಪಸರ್ಪಣಂ ಮಹೀಪಾಲ ರೌಪ್ಯಾಯಾಮಮಿತೌಜಸಃ।।

ಮಹೀಪಾಲ! ಇಲ್ಲಿ ಅಮಿತೌಜಸ ಆರ್ಚೀಕನ ಮಗನು ರೌಪ್ಯನದಿಯಲ್ಲಿ ತನ್ನ ಯೋಗದಿಂದ ಭೂಮಿಯನ್ನು ಸಂಚರಿಸಿದನು.

03129008a ಅತ್ರಾನುವಂಶಂ ಪಠತಃ ಶೃಣು ಮೇ ಕುರುನಂದನ।
03129008c ಉಲೂಖಲೈರಾಭರಣೈಃ ಪಿಶಾಚೀ ಯದಭಾಷತ।।

ಕುರುನಂದನ! ಉಲೂಖಲ ಆಭರಣಗಳನ್ನು ಧರಿಸಿದ ಪಿಶಾಚಿಗಳು ಹೇಳಿದ ಈ ಅನುವಂಶವನ್ನು ಓದುತ್ತೇನೆ. ಕೇಳು.

03129009a ಯುಗಂಧರೇ ದಧಿ ಪ್ರಾಶ್ಯ ಉಷಿತ್ವಾ ಚಾಚ್ಯುತಸ್ಥಲೇ।
03129009c ತದ್ವದ್ಭೂತಿಲಯೇ ಸ್ನಾತ್ವಾ ಸಪುತ್ರಾ ವಸ್ತುಮಿಚ್ಚಸಿ।।

“ಯುಗಂಧರದಲ್ಲಿ ಮೊಸರನ್ನು ತಿಂದು ಅಚ್ಯುತಸ್ಥಲದಲ್ಲಿ ಒಂದು ರಾತ್ರಿಯನ್ನು ಉಳಿದು ನಂತರ ಭೂಮಿಲಯದಲ್ಲಿ ಸ್ನಾನಮಾಡಿ ಪುತ್ರನೊಂದಿಗೆ ಇಲ್ಲಿ ವಾಸಿಸಲು ಬಯಸುತ್ತೀಯೆ!”

03129010a ಏಕರಾತ್ರಮುಷಿತ್ವೇಹ ದ್ವಿತೀಯಂ ಯದಿ ವತ್ಸ್ಯಸಿ।
03129010c ಏತದ್ವೈ ತೇ ದಿವಾ ವೃತ್ತಂ ರಾತ್ರೌ ವೃತ್ತಮತೋಽನ್ಯಥಾ।।

ಒಂದು ರಾತ್ರಿ ಇಲ್ಲಿ ಉಳಿದು ಎರಡನೇ ದಿನವೂ ಇಲ್ಲಿಯೇ ಉಳಿದರೆ ಹಗಲು ಮಾಡಿದುದೂ ರಾತ್ರಿ ಮಾಡಿದುದೂ ಬದಲಾಗುವವು.

03129011a ಅತ್ರಾದ್ಯಾಹೋ ನಿವತ್ಸ್ಯಾಮಃ ಕ್ಷಪಾಂ ಭರತಸತ್ತಮ।
03129011c ದ್ವಾರಮೇತದ್ಧಿ ಕೌಂತೇಯ ಕುರುಕ್ಷೇತ್ರಸ್ಯ ಭಾರತ।।

ಭರತಸತ್ತಮ! ಇಂದು ಇಲ್ಲಿಯೇ ಉಳಿಯೋಣ. ಭಾರತ ಕೌಂತೇಯ! ಇದು ಕುರುಕ್ಷೇತ್ರದ ದ್ವಾರವೆಂದು ತಿಳಿ.

03129012a ಅತ್ರೈವ ನಾಹುಷೋ ರಾಜಾ ರಾಜನ್ಕ್ರತುಭಿರಿಷ್ಟವಾನ್।
03129012c ಯಯಾತಿರ್ಬಹುರತ್ನಾಢ್ಯೈರ್ಯತ್ರೇಂದ್ರೋ ಮುದಮಭ್ಯಗಾತ್।।

ರಾಜನ್! ಇಲ್ಲಿಯೇ ರಾಜಾ ನಾಹುಷ ಯಯಾತಿಯು ಬಹುರತ್ನಗಳಿಂದ ದೇವೇಂದ್ರನು ಸಂತೋಷಗೊಂಡ ಕ್ರತುವನ್ನು ನೆರವೇರಿಸಿದನು.

03129013a ಏತತ್ಪ್ಲಕ್ಷಾವತರಣಂ ಯಮುನಾತೀರ್ಥಮುಚ್ಯತೇ।
03129013c ಏತದ್ವೈ ನಾಕಪೃಷ್ಠಸ್ಯ ದ್ವಾರಮಾಹುರ್ಮನೀಷಿಣಃ।।

ಈ ಯಮುನಾ ತೀರ್ಥವನ್ನು ಪ್ಲಕ್ಷಾವತರಣ ಎಂದು ಕರೆಯುತ್ತಾರೆ. ಇದೇ ನಾಕಪೃಷ್ಟದ ದ್ವಾರವೆಂದು ತಿಳಿದವರು ಹೇಳುತ್ತಾರೆ.

03129014a ಅತ್ರ ಸಾರಸ್ವತೈರ್ಯಜ್ಞೈರೀಜಾನಾಃ ಪರಮರ್ಷಯಃ।
03129014c ಯೂಪೋಲೂಖಲಿನಸ್ತಾತ ಗಚ್ಚಂತ್ಯವಭೃಥಾಪ್ಲವಂ।।

ಇಲ್ಲಿ ಸಾರಸ್ವತ ಯಜ್ಞವನ್ನು ಮುಗಿಸಿ ಪರಮ ಋಷಿಗಳು ಯೂಪ ಉಲೂಖಗಳನ್ನು ಹಿಡಿದು ಅವಭೃತಸ್ನಾನಕ್ಕೆ ಹೋದರು.

03129015a ಅತ್ರೈವ ಭರತೋ ರಾಜಾ ಮೇಧ್ಯಮಶ್ವಮವಾಸೃಜತ್।
03129015c ಅಸಕೃತ್ಕೃಷ್ಣಸಾರಂಗಂ ಧರ್ಮೇಣಾವಾಪ್ಯ ಮೇದಿನೀಂ।।

ಇಲ್ಲಿಯೇ ರಾಜಾ ಭರತನು ಕೃಷ್ಣಸಾರಂಗವನ್ನು ಹೊದಿಸಿ ಅಶ್ವಮೇಧದ ಕುದುರೆಯನ್ನು ಬಿಟ್ಟು ಧರ್ಮದಿಂದ ಭೂಮಿಯನ್ನು ಪಡೆದನು.

03129016a ಅತ್ರೈವ ಪುರುಷವ್ಯಾಘ್ರ ಮರುತ್ತಃ ಸತ್ರಮುತ್ತಮಂ।
03129016c ಆಸ್ತೇ ದೇವರ್ಷಿಮುಖ್ಯೇನ ಸಂವರ್ತೇನಾಭಿಪಾಲಿತಃ।।

ಪುರುಷವ್ಯಾಘ್ರ! ಇಲ್ಲಿಯೇ ಮರುತ್ತನು ಉತ್ತಮ ಸತ್ರವನ್ನು ದೇವರ್ಷಿಗಳ ಮುಖದಿಂದ ಸಂವರ್ತನನ ರಕ್ಷಣೆಯಲ್ಲಿ ನೆರವೇರಿಸಿದನು.

03129017a ಅತ್ರೋಪಸ್ಪೃಶ್ಯ ರಾಜೇಂದ್ರ ಸರ್ವಾಽಲ್ಲೋಕಾನ್ಪ್ರಪಶ್ಯತಿ।
03129017c ಪೂಯತೇ ದುಷ್ಕೃತಾಚ್ಚೈವ ಸಮುಪಸ್ಪೃಶ್ಯ ಭಾರತ।।

ರಾಜೇಂದ್ರ! ಇಲ್ಲಿ ಸ್ನಾನಮಾಡು! ಭಾರತ! ಸರ್ವಲೋಕಗಳನ್ನೂ ನೋಡುತ್ತೀಯೆ ಮತ್ತು ಎಲ್ಲ ದುಷ್ಕೃತಗಳಿಂದಲೂ ಶುದ್ಧನಾಗುತ್ತೀಯೆ.””

03129018 ವೈಶಂಪಾಯನ ಉವಾಚ।
03129018a ತತ್ರ ಸಭ್ರಾತೃಕಃ ಸ್ನಾತ್ವಾ ಸ್ತೂಯಮಾನೋ ಮಹರ್ಷಿಭಿಃ।
03129018c ಲೋಮಶಂ ಪಾಂಡವಶ್ರೇಷ್ಠ ಇದಂ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ಅಲ್ಲಿ ತಮ್ಮಂದಿರೊಡನೆ ಸ್ನಾನಮಾಡಿ, ಮಹರ್ಷಿಗಳು ಹೊಗಳುತ್ತಿರಲು ಪಾಂಡವಶ್ರೇಷ್ಠನು ಲೋಮಶನಿಗೆ ಈ ಮಾತುಗಳನ್ನಾಡಿದನು:

03129019a ಸರ್ವಾಽಲ್ಲೋಕಾನ್ಪ್ರಪಶ್ಯಾಮಿ ತಪಸಾ ಸತ್ಯವಿಕ್ರಮ।
03129019c ಇಹಸ್ಥಃ ಪಾಂಡವಶ್ರೇಷ್ಠಂ ಪಶ್ಯಾಮಿ ಶ್ವೇತವಾಹನಂ।।

“ಸತ್ಯವಿಕ್ರಮ! ತಪಸ್ಸಿನಿಂದ ಸರ್ವ ಲೋಕಗಳನ್ನು ಕಂಡೆ. ಇಲ್ಲಿ ನಿಂತಿರುವಾಗ ಪಾಂಡವಶ್ರೇಷ್ಠ ಶ್ವೇತವಾಹನನನ್ನು ಕಾಣುತ್ತಿದ್ದೇನೆ.”

03129020 ಲೋಮಶ ಉವಾಚ।
03129020a ಏವಮೇತನ್ಮಹಾಬಾಹೋ ಪಶ್ಯಂತಿ ಪರಮರ್ಷಯಃ।
03129020c ಸರಸ್ವತೀಮಿಮಾಂ ಪುಣ್ಯಾಂ ಪಶ್ಯೈಕಶರಣಾವೃತಾಂ।।

ಲೋಮಶನು ಹೇಳಿದನು: “ಮಹಾಬಾಹೋ! ಪರಮ‌ಋಷಿಗಳೂ ಅದನ್ನೇ ನೋಡುತ್ತಾರೆ. ಸುತ್ತುವರೆದಿರುವವರ ಏಕೈಕ ಶರಣೆಯಾದ ಈ ಪುಣ್ಯ ಸರಸ್ವತಿಯನ್ನು ನೋಡು.

03129021a ಯತ್ರ ಸ್ನಾತ್ವಾ ನರಶ್ರೇಷ್ಠ ಧೂತಪಾಪ್ಮಾ ಭವಿಷ್ಯತಿ।
03129021c ಇಹ ಸಾರಸ್ವತೈರ್ಯಜ್ಞೈರಿಷ್ಟವಂತಃ ಸುರರ್ಷಯಃ।।
03129021e ಋಷಯಶ್ಚೈವ ಕೌಂತೇಯ ತಥಾ ರಾಜರ್ಷಯೋಽಪಿ ಚ।।

ನರಶ್ರೇಷ್ಠ! ಇಲ್ಲಿ ಸ್ನಾನಮಾಡಿದರೆ ಪಾಪಗಳೆಲ್ಲವೂ ತೊಳೆಯಲ್ಪಡುತ್ತವೆ. ಕೌಂತೇಯ! ಇಲ್ಲಿ ಇಷ್ಟವಂತ ಸುರರ್ಷಿಗಳು, ಋಷಿಗಳೂ, ಮತ್ತು ರಾಜರ್ಷಿಗಳೂ ಕೂಡ ಸಾರಸ್ವತ ಯಜ್ಞವನ್ನು ನಡೆಸಿದರು.

03129022a ವೇದೀ ಪ್ರಜಾಪತೇರೇಷಾ ಸಮಂತಾತ್ಪಂಚಯೋಜನಾ।
03129022c ಕುರೋರ್ವೈ ಯಜ್ಞಶೀಲಸ್ಯ ಕ್ಷೇತ್ರಮೇತನ್ಮಹಾತ್ಮನಃ।।

ಇದು ಐದು ಯೋಜನೆ ಪರಿಧಿಯಿರುವ ಪ್ರಜಾಪತಿಯ ವೇದಿ. ಇದು ಯಜ್ಞಶೀಲ ಮಹಾತ್ಮ ಕುರುವಿನ ಕ್ಷೇತ್ರ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.