111 ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 111

ಸಾರ

ವಿಭಾಂಡಕನಿಲ್ಲದಿರುವುದನ್ನು ನೋಡಿಕೊಂಡು ವೈಶ್ಯೆಯು ಋಷ್ಯಶೃಂಗನನ್ನು ಭೇಟಿಯಾಗಿ ಅವನ ಕಾಮವನ್ನು ಹೆಚ್ಚಿಸಲು ಪ್ರಯತ್ನಿಸಿ ಹಿಂದಿರುಗಿದುದು (1-17). ವಿಭಾಂಡಕನು ಹಿಂದಿರುಗಿ ಬಂದು ಮಂಕಾಗಿ ಕುಳಿತಿದ್ದ ಮಗನನ್ನು ಪ್ರಶ್ನಿಸಿದುದು (18-22).

03111001 ಲೋಮಶ ಉವಾಚ।
03111001a ಸಾ ತು ನಾವ್ಯಾಶ್ರಮಂ ಚಕ್ರೇ ರಾಜಕಾರ್ಯಾರ್ಥಸಿದ್ಧಯೇ।
03111001c ಸಂದೇಶಾಚ್ಚೈವ ನೃಪತೇಃ ಸ್ವಬುದ್ಧ್ಯಾ ಚೈವ ಭಾರತ।।

ಲೋಮಶನು ಹೇಳಿದನು: “ಭಾರತ! ರಾಜಕಾರ್ಯವನ್ನು ಯಶಸ್ವಿಗೊಳಿಸಲೋಸುಗ ನೃಪತಿಯ ಆದೇಶದಂತೆ ಮತ್ತು ಸ್ವಂತ ಬುದ್ಧಿಯನ್ನು ಓಡಿಸಿ ಅವಳು ಒಂದು ದೋಣಿಯಲ್ಲಿ ಆಶ್ರಮವೊಂದನ್ನು ನಿರ್ಮಿಸಿದಳು.

03111002a ನಾನಾಪುಷ್ಪಫಲೈರ್ವೃಕ್ಷೈಃ ಕೃತ್ರಿಮೈರುಪಶೋಭಿತಂ।
03111002c ನಾನಾಗುಲ್ಮಲತೋಪೇತೈಃ ಸ್ವಾದುಕಾಮಫಲಪ್ರದೈಃ।।

ಅದು ಕೃತ್ರಿಮವಾದ ನಾನಾ ಹೂವು-ಹಣ್ಣುಗಳ ಮರಗಳಿಂದ, ನಾನಾತರಹದ ಗೊಂಚಲು ಹೂವುಗಳಿರುವ ಬಳ್ಳಿಗಳಿಂದ, ಎಲ್ಲ ತರಹದ ರುಚಿಗಳಿರುವ ಹಣ್ಣುಗಳಿಂದ ತುಂಬಿತ್ತು.

03111003a ಅತೀವ ರಮಣೀಯಂ ತದತೀವ ಚ ಮನೋಹರಂ।
03111003c ಚಕ್ರೇ ನಾವ್ಯಾಶ್ರಮಂ ರಮ್ಯಮದ್ಭುತೋಪಮದರ್ಶನಂ।।

ಆ ದೋಣಿಯ ಮೇಲಿನ ಆಶ್ರಮವು ಅತೀವ ರಮಣೀಯವಾಗಿಯೂ, ಅತೀವ ಮನೋಹರವಾಗಿಯೂ ಇದ್ದು ನೋಡಲು ಅದ್ಭುತವೂ ರಮ್ಯವೂ ಆಗಿತ್ತು.

03111004a ತತೋ ನಿಬಧ್ಯ ತಾಂ ನಾವಮದೂರೇ ಕಾಶ್ಯಪಾಶ್ರಮಾತ್।
03111004c ಚಾರಯಾಮಾಸ ಪುರುಷೈರ್ವಿಹಾರಂ ತಸ್ಯ ವೈ ಮುನೇಃ।।

ಆ ನಾವೆಯನ್ನು ಕಾಶ್ಯಪಾಶ್ರಮದ ಸ್ವಲ್ಪವೇ ದೂರದಲ್ಲಿ ನಿಲ್ಲಿಸಿ, ಪುರುಷರು ಆ ಮುನಿಯ ಆಶ್ರಮದಲ್ಲಿ ತಿರುಗಾಡಿದರು.

03111005a ತತೋ ದುಹಿತರಂ ವೇಶ್ಯಾ ಸಮಾಧಾಯೇತಿಕೃತ್ಯತಾಂ।
03111005c ದೃಷ್ಟ್ವಾಂತರಂ ಕಾಶ್ಯಪಸ್ಯ ಪ್ರಾಹಿಣೋದ್ಬುದ್ಧಿಸಮ್ಮತಾಂ।।

ಆಗ ವೇಶ್ಯೆಯು ಮಾಡಬೇಕಾದ ಕೆಲಸವನ್ನೇ ಮನಸ್ಸಿನಲ್ಲಿಟ್ಟುಕೊಂಡು ಅವಕಾಶ ಹುಡುಕಿ ಬುದ್ಧಿವಂತೆ ಮಗಳನ್ನು ಕಾಶ್ಯಪನ ಹತ್ತಿರ ಕಳುಹಿಸಿದಳು.

03111006a ಸಾ ತತ್ರ ಗತ್ವಾ ಕುಶಲಾ ತಪೋನಿತ್ಯಸ್ಯ ಸನ್ನಿಧೌ।
03111006c ಆಶ್ರಮಂ ತಂ ಸಮಾಸಾದ್ಯ ದದರ್ಶ ತಮೃಷೇಃ ಸುತಂ।।

ಆ ಕುಶಲೆಯು ತಪೋನಿತ್ಯನ ಸನ್ನಿಧಿಗೆ ಹೋಗಿ, ಅವನ ಆಶ್ರಮಕ್ಕೆ ಹೋಗಿ, ಅಲ್ಲಿ ಋಷಿಸುತನನ್ನು ಕಂಡಳು.

03111007 ವೇಶ್ಯೋವಾಚ।
03111007a ಕಚ್ಚಿನ್ಮುನೇ ಕುಶಲಂ ತಾಪಸಾನಾಂ। ಕಚ್ಚಿಚ್ಚ ವೋ ಮೂಲಫಲಂ ಪ್ರಭೂತಂ।
03111007c ಕಚ್ಚಿದ್ಭವಾನ್ರಮತೇ ಚಾಶ್ರಮೇಽಸ್ಮಿಂಸ್। ತ್ವಾಂ ವೈ ದ್ರಷ್ಟುಂ ಸಾಂಪ್ರತಮಾಗತೋಽಸ್ಮಿ।।

ವೈಶ್ಯೆಯು ಹೇಳಿದಳು: “ತಾಪಸಿ ಮುನಿಯು ಕುಶಲದಿಂದಿದ್ದಾನೆಯೇ? ಸಾಕಷ್ಟು ಫಲಮೂಲಗಳು ದೊರೆಯುತ್ತವೆಯೇ? ಈ ಆಶ್ರಮದಲ್ಲಿ ನಿನಗೆ ಸಂತೋಷವಾಗುತ್ತಿದೆಯೇ? ನಿನ್ನನ್ನು ಭೇಟಿಯಾಗಲು ಇಂದು ನಾನು ಇಲ್ಲಿಗೆ ಬಂದಿದ್ದೇನೆ.

03111008a ಕಚ್ಚಿತ್ತಪೋ ವರ್ಧತೇ ತಾಪಸಾನಾಂ। ಪಿತಾ ಚ ತೇ ಕಚ್ಚಿದಹೀನತೇಜಾಃ।
03111008c ಕಚ್ಚಿತ್ತ್ವಯಾ ಪ್ರೀಯತೇ ಚೈವ ವಿಪ್ರ। ಕಚ್ಚಿತ್ಸ್ವಾಧ್ಯಾಯಃ ಕ್ರಿಯತೇ ಋಶ್ಯಶೃಂಗ।।

ತಾಪಸರ ತಪಸ್ಸು ವೃದ್ಧಿಯಾಗುತ್ತಿದೆಯೇ? ನಿನ್ನ ತಂದೆಯು ತನ್ನ ತೇಜಸ್ಸನ್ನು ಕಳೆದುಕೊಳ್ಳಲಿಲ್ಲ ತಾನೇ? ಆ ವಿಪ್ರನು ನಿನ್ನಿಂದ ಸಂತೋಷಗೊಂಡಿದ್ದಾನೆ ತಾನೇ? ಋಷ್ಯಶೃಂಗ! ನೀನು ಆಧ್ಯಾಯನವನ್ನು ಮಾಡಿಮುಗಿಸಿದ್ದೀಯಾ?”

03111009 ಋಶ್ಯಶೃಂಗ ಉವಾಚ।
03111009a ಋದ್ಧೋ ಭವಾಂ ಜ್ಯೋತಿರಿವ ಪ್ರಕಾಶತೇ। ಮನ್ಯೇ ಚಾಹಂ ತ್ವಾಮಭಿವಾದನೀಯಂ।
03111009c ಪಾದ್ಯಂ ವೈ ತೇ ಸಂಪ್ರದಾಸ್ಯಾಮಿ ಕಾಮಾದ್। ಯಥಾಧರ್ಮಂ ಫಲಮೂಲಾನಿ ಚೈವ।।

ಋಷ್ಯಶೃಂಗನು ಹೇಳಿದನು: “ನೀನು ಅತಿ ದೊಡ್ಡ ದೀಪದಂತೆ ಬೆಳಗುತ್ತಿದ್ದೀಯೆ! ನಿನಗೆ ಸಮಸ್ಕರಿಸುವುದು ಸರಿ ಎಂದು ನನಗನ್ನಿಸುತ್ತಿದೆ. ನಾನು ಬಯಸಿದಂತೆ ನಿನಗೆ ಪಾದ್ಯವನ್ನು ನೀಡುತ್ತೇನೆ ಮತ್ತು ಯಥಾಧರ್ಮವಾಗಿ ಫಲಮೂಲಗಳನ್ನು ಅರ್ಪಿಸುತ್ತೇನೆ.

03111010a ಕೌಶ್ಯಾಂ ಬೃಸ್ಯಾಮಾಸ್ಸ್ವ ಯಥೋಪಜೋಷಂ। ಕೃಷ್ಣಾಜಿನೇನಾವೃತಾಯಾಂ ಸುಖಾಯಾಂ।
03111010c ಕ್ವ ಚಾಶ್ರಮಸ್ತವ ಕಿಂ ನಾಮ ಚೇದಂ। ವ್ರತಂ ಬ್ರಹ್ಮಂಶ್ಚರಸಿ ಹಿ ದೇವವತ್ತ್ವಂ।।

ಕೃಷ್ಣಾಜಿನವನ್ನು ಹಾಸಿ ಸುಖವನ್ನು ನೀಡುವ ದರ್ಭೆಯ ಆಸನದಲ್ಲಿ ಸುಖಾಸೀನನಾಗು. ನಿನ್ನ ಆಶ್ರಮವು ಎಲ್ಲಿದೆ ಮತ್ತು ಬ್ರಹ್ಮನ್! ದೇವತೆಗಳಂತೆ ಆಚರಿಸುತ್ತಿರುವ ಈ ವ್ರತದ ಹೆಸರೇನು?”

03111011 ವೇಶ್ಯೋವಾಚ।
03111011a ಮಮಾಶ್ರಮಃ ಕಾಶ್ಯಪಪುತ್ರ ರಮ್ಯಸ್। ತ್ರಿಯೋಜನಂ ಶೈಲಮಿಮಂ ಪರೇಣ।
03111011c ತತ್ರ ಸ್ವಧರ್ಮೋಽನಭಿವಾದನಂ ನೋ। ನ ಚೋದಕಂ ಪಾದ್ಯಂ ಉಪಸ್ಪೃಶಾಮಃ।।

ವೈಶ್ಯೆಯು ಹೇಳಿದಳು: “ಸುಂದರ ಕಾಶ್ಯಪಪುತ್ರ! ನನ್ನ ಆಶ್ರಮವು ಈ ಬೆಟ್ಟವನ್ನು ದಾಟಿ ಮೂರು ಯೋಜನ ದೂರದಲ್ಲಿದೆ. ಅಲ್ಲಿ ನಮ್ಮ ಧರ್ಮದ ಪ್ರಕಾರ ಇನ್ನೊಬ್ಬರಿಗೆ ನಮಸ್ಕರಿಸುವುದಿಲ್ಲ ಮತ್ತು ಕಾಲು ತೊಳೆಯಲು ನೀರನ್ನು ಬಳಸುವುದಿಲ್ಲ.”

03111012 ಋಶ್ಯಶೃಂಗ ಉವಾಚ।
03111012a ಫಲಾನಿ ಪಕ್ವಾನಿ ದದಾನಿ ತೇಽಹಂ। ಭಲ್ಲಾತಕಾನ್ಯಾಮಲಕಾನಿ ಚೈವ।
03111012c ಪರೂಷಕಾನೀಂಗುದಧನ್ವನಾನಿ। ಪ್ರಿಯಾಲಾನಾಂ ಕಾಮಕಾರಂ ಕುರುಷ್ವ।।

ಋಷ್ಯಶೃಂಗನು ಹೇಳಿದನು: “ನಾನು ಭಲ್ಲಾತಕ, ಪರೂಷಕ, ಇಂಗುಧ, ಧನ್ವನ, ಪ್ರಿಯಾಲ, ಮೊದಲಾದ ಗಳಿತ ಹಣ್ಣುಗಳನ್ನು ಮತ್ತು ಬೀಜಗಳನ್ನು ನಿನಗೆ ಋಚಿಯನ್ನು ಸವಿದು ಸಂತೋಷಪಡಲು ಕೊಡುತ್ತೇನೆ.””

03111013 ಲೋಮಶ ಉವಾಚ।
03111013a ಸಾ ತಾನಿ ಸರ್ವಾಣಿ ವಿಸರ್ಜಯಿತ್ವಾ। ಭಕ್ಷಾನ್ಮಹಾರ್ಹಾನ್ಪ್ರದದೌ ತತೋಽಸ್ಮೈ।
03111013c ತಾನ್ಯೃಶ್ಯಶೃಂಗಸ್ಯ ಮಹಾರಸಾನಿ। ಭೃಶಂ ಸುರೂಪಾಣಿ ರುಚಿಂ ದದುರ್ಹಿ।।

ಲೋಮಶನು ಹೇಳಿದನು: “ಆ ಎಲ್ಲವನ್ನೂ ತಿರಸ್ಕರಿಸಿ ಅವಳು ಅವನಿಗೆ ಬೆಲೆಬಾಳುವ, ಅತ್ಯಂತ ರುಚಿಕರ ಮತ್ತು ನೋಡಲು ಸುಂದರವಾಗಿದ್ದ ತಿಂಡಿಗಳನ್ನು ಕೊಟ್ಟಳು. ಅವುಗಳು ಋಷ್ಯಶೃಂಗನಿಗೆ ಮಹಾ ಆನಂದವನ್ನು ನೀಡಿದವು.

03111014a ದದೌ ಚ ಮಾಲ್ಯಾನಿ ಸುಗಂಧವಂತಿ। ಚಿತ್ರಾಣಿ ವಾಸಾಂಸಿ ಚ ಭಾನುಮಂತಿ।
03111014c ಪಾನಾನಿ ಚಾಗ್ರ್ಯಾಣಿ ತತೋ ಮುಮೋದ। ಚಿಕ್ರೀಡ ಚೈವ ಪ್ರಜಹಾಸ ಚೈವ।।

ಸುಗಂಧಯುಕ್ತ ಮಾಲೆಗಳನ್ನೂ, ಬಣ್ಣಬಣ್ಣದ ಹೊಳೆಯುವ ಬಟ್ಟೆಗಳನ್ನೂ, ಮತ್ತು ಉತ್ತಮ ಮಾದಕ ಪಾನೀಯಗಳನ್ನೂ ಕೊಟ್ಟು, ನಗುನಗುತ್ತಾ ಆಟವಾಡುತ್ತಾ ಅವನನ್ನು ರಂಜಿಸಿದಳು.

03111015a ಸಾ ಕಂದುಕೇನಾರಮತಾಸ್ಯ ಮೂಲೇ। ವಿಭಜ್ಯಮಾನಾ ಫಲಿತಾ ಲತೇವ।
03111015c ಗಾತ್ರೈಶ್ಚ ಗಾತ್ರಾಣಿ ನಿಷೇವಮಾಣಾ। ಸಮಾಶ್ಲಿಷಚ್ಚಾಸಕೃದೃಶ್ಯಶೃಂಗಂ।।

ಅವನ ಹತ್ತಿರ ಒಂದು ಚೆಂಡನ್ನಿಟ್ಟು, ಅರಳುವ ಹೂಗಳ ಬಳ್ಳಿಯಂತೆ ಅವನ ಅಂಗಾಂಗಗಳಿಗೆ ತನ್ನ ಅಂಗಾಂಗಳನ್ನು ಮುಟ್ಟಿಸುತ್ತಾ ಋಷ್ಯಶೃಂಗನನ್ನು ಮತ್ತೆ ಮತ್ತೆ ಆಲಂಗಿಸಿದಳು.

03111016a ಸರ್ಜಾನಶೋಕಾಂಸ್ತಿಲಕಾಂಶ್ಚ ವೃಕ್ಷಾನ್। ಪ್ರಪುಷ್ಪಿತಾನವನಾಮ್ಯಾವಭಜ್ಯ।
03111016c ವಿಲಜ್ಜಮಾನೇವ ಮದಾಭಿಭೂತಾ। ಪ್ರಲೋಭಯಾಮಾಸ ಸುತಂ ಮಹರ್ಷೇಃ।।

ಅವಳು ಸರ್ಜಾ, ಅಶೋಕ ಮತ್ತು ತಿಲಕ ವೃಕ್ಷಗಳ ರೆಂಬೆಗಳನ್ನು ಬಗ್ಗಿಸಿ ಹೂವನ್ನು ಕಿತ್ತಳು. ಮತ್ತೇರಿದವಳಾಗಿ ನಾಚಿಕೆಯೇ ಇಲ್ಲವೋ ಎನ್ನುವಂತೆ ಆ ಮಹರ್ಷಿಯ ಮಗನ ಕಾಮವನ್ನು ಹೆಚ್ಚಿಸಲು ಪ್ರಯತ್ನಿಸಿದಳು.

03111017a ಅಥರ್ಶ್ಯಶೃಂಗಂ ವಿಕೃತಂ ಸಮೀಕ್ಷ್ಯ। ಪುನಃ ಪುನಃ ಪೀಡ್ಯ ಚ ಕಾಯಮಸ್ಯ।
03111017c ಅವೇಕ್ಷಮಾಣಾ ಶನಕೈರ್ಜಗಾಮ। ಕೃತ್ವಾಗ್ನಿಹೋತ್ರಸ್ಯ ತದಾಪದೇಶಂ।।

ಆಗ ಋಷ್ಯಶೃಂಗನ ದೇಹದಲ್ಲಿ ಬದಲಾವಣೆಗಳನ್ನು ಕಂಡು ಅವನ ದೇಹವನ್ನು ಪುನಃ ಪುನಃ ಅಪ್ಪಿ ಹಿಂಡಿದಳು. ಆಗ ನಿಧಾನವಾಗಿ ಅಗ್ನಿಹೋತ್ರದ ನೆಪವನ್ನು ಹೇಳಿ, ಅವನನ್ನೇ ನೋಡುತ್ತಾ, ಹಿಂದೆ ಹೋದಳು.

03111018a ತಸ್ಯಾಂ ಗತಾಯಾಂ ಮದನೇನ ಮತ್ತೋ। ವಿಚೇತನಶ್ಚಾಭವದೃಶ್ಯಶೃಂಗಃ।
03111018c ತಾಮೇವ ಭಾವೇನ ಗತೇನ ಶೂನ್ಯೋ। ವಿನಿಃಶ್ವಸನ್ನಾರ್ತರೂಪೋ ಬಭೂವ।।

ಅವಳು ಹೋದನಂತರ ಮದನನಿಂದ ಮತ್ತನಾದ ಋಷ್ಯಶೃಂಗನು ತನ್ನ ಮನಸ್ಸನ್ನು ಕಳೆದುಕೊಂಡವನಂತಾದನು. ಅವಳು ಹೋದ ಕಡೆಯಲ್ಲಿಯೇ ಶೂನ್ಯ ದೃಷ್ಟಿಯಿಟ್ಟು ನೋಡುತ್ತಾ, ನಿಟ್ಟಿಸುರು ಬಿಡುತ್ತಾ, ಅವನ ಮುಖವು ಆರ್ತರೂಪವನ್ನು ತಾಳಿತು.

03111019a ತತೋ ಮುಹೂರ್ತಾದ್ಧರಿಪಿಂಗಲಾಕ್ಷಃ। ಪ್ರವೇಷ್ಟಿತೋ ರೋಮಭಿರಾ ನಖಾಗ್ರಾತ್।
03111019c ಸ್ವಾಧ್ಯಾಯವಾನ್ವೃತ್ತಸಮಾಧಿಯುಕ್ತೋ। ವಿಭಾಂಡಕಃ ಕಾಶ್ಯಪಃ ಪ್ರಾದುರಾಸೀತ್।।

ಆಗ ಸ್ವಲ್ಪವೇ ಕ್ಷಣದಲ್ಲಿ ಸಿಂಹದಂತಿದ್ದ ಪಿಂಗಲಾಕ್ಷ, ಉಗುರುಗಳ ವರೆಗೆ ತಲೆಕೂದಲನ್ನು ಬಿಟ್ಟಿದ್ದ, ಸ್ವಾಧ್ಯಾಯದಲ್ಲಿ ನಿರತನಾದ, ಸಮಾಧಿಯುಕ್ತನಾದ, ಕಾಶ್ಯಪ ವಿಭಾಂಡಕನು ಹತ್ತಿರ ಬಂದನು.

03111020a ಸೋಽಪಶ್ಯದಾಸೀನಮುಪೇತ್ಯ ಪುತ್ರಂ। ಧ್ಯಾಯಂತಮೇಕಂ ವಿಪರೀತಚಿತ್ತಂ।
03111020c ವಿನಿಃಶ್ವಸಂತಂ ಮುಹುರೂರ್ಧ್ವದೃಷ್ಟಿಂ। ವಿಭಾಂಡಕಃ ಪುತ್ರಮುವಾಚ ದೀನಂ।।

ಅವನು ವಿಪರೀತಚಿತ್ತನಾಗಿ ಒಬ್ಬನೇ ಯೋಚಿಸುತ್ತಾ ಕುಳಿತಿರುವ ಮಗನನ್ನು ನೋಡಿದನು. ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತಾ ಮೇಲೆ ನೋಡುತ್ತಾ ದೀನನಾಗಿದ್ದ ಮಗನಿಗೆ ವಿಭಾಂಡಕನು ಹೇಳಿದನು.

03111021a ನ ಕಲ್ಪ್ಯಂತೇ ಸಮಿಧಃ ಕಿಂ ನು ತಾತ। ಕಚ್ಚಿದ್ಧುತಂ ಚಾಗ್ನಿಹೋತ್ರಂ ತ್ವಯಾದ್ಯ।
03111021c ಸುನಿರ್ಣಿಕ್ತಂ ಸ್ರುಕ್ಸ್ರುವಂ ಹೋಮಧೇನುಃ। ಕಚ್ಚಿತ್ಸವತ್ಸಾ ಚ ಕೃತಾ ತ್ವಯಾದ್ಯ।।

“ಮಗೂ! ಇನ್ನೂ ಸಮಿಧೆಗಳನ್ನು ತರಲಿಲ್ಲ ಏಕೆ? ಇನ್ನೂ ಇಂದಿನ ಅಗ್ನಿಹೋತ್ರವನ್ನು ನಡೆಸಲಿಲ್ಲವೇ? ಹೋಮದ ಹುಟ್ಟುಗಳನ್ನು ತೊಳೆದಿಟ್ಟಿದ್ದೀಯಾ? ಹೋಮಕ್ಕೆ ಕರುವಿನೊಂದಿಗೆ ಹಸುವನ್ನು ತಂದಿದ್ದೀಯಾ?

03111022a ನ ವೈ ಯಥಾಪೂರ್ವಮಿವಾಸಿ ಪುತ್ರ। ಚಿಂತಾಪರಶ್ಚಾಸಿ ವಿಚೇತನಶ್ಚ।
03111022c ದೀನೋಽತಿಮಾತ್ರಂ ತ್ವಮಿಹಾದ್ಯ ಕಿಂ ನು। ಪೃಚ್ಚಾಮಿ ತ್ವಾಂ ಕ ಇಹಾದ್ಯಾಗತೋಽಭೂತ್।।

ಮಗಾ! ಮೊದಲಿನಂತೆ ನೀನಿಲ್ಲ! ಚೇತನವನ್ನು ಕಳೆದುಕೊಂಡು ಚಿಂತಾಪರನಾಗಿ ಮನಸ್ಸನ್ನು ಕಳೆದುಕೊಂಡಿದ್ದೀಯೆ. ಇಂದು ನೀನು ತುಂಬಾ ದುಃಖಕ್ಕೊಳಗಾದ ಹಾಗಿದೆ. ಆದರೆ ಏಕೆ? ಇಂದು ಇಲ್ಲಿಯೇ ಇದ್ದ ನಿನ್ನನ್ನು ಕೇಳುತ್ತಿದ್ದೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನೇ ಏಕಾದಶಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಋಷ್ಯಶೃಂಗೋಪಾಖ್ಯಾನದಲ್ಲಿ ನೂರಾಹನ್ನೊಂದನೆಯ ಅಧ್ಯಾಯವು.