ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 109
ಸಾರ
ಪಾಂಡವರು ನಂದ-ಉಪನಂದಾ ನದಿಗಳಿಗೆ ಹೋದುದು; ಹೇಮಕೂಟದ ಮಹಿಮೆ (1-20).
03109001 ವೈಶಂಪಾಯನ ಉವಾಚ।
03109001a ತತಃ ಪ್ರಯಾತಃ ಕೌಂತೇಯಃ ಕ್ರಮೇಣ ಭರತರ್ಷಭ।
03109001c ನಂದಾಮಪರನಂದಾಂ ಚ ನದ್ಯೌ ಪಾಪಭಯಾಪಹೇ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಅನಂತರ ಕ್ರಮೇಣ ಕೌಂತೇಯನು ಪಾಪಭಯವನ್ನು ನಿವಾರಿಸುವ ನಂದ ಮತ್ತು ಅಪರನಂದಾ ನದಿಗಳಿಗೆ ಬಂದನು.
03109002a ಸ ಪರ್ವತಂ ಸಮಾಸಾದ್ಯ ಹೇಮಕೂಟಮನಾಮಯಂ।
03109002c ಅಚಿಂತ್ಯಾನದ್ಭುತಾನ್ಭಾವಾನ್ದದರ್ಶ ಸುಬಹೂನ್ನೃಪಃ।।
ಆ ನೃಪನು ಅನಾಮಯ ಹೇಮಕೂಟವನ್ನು ತಲುಪಿ ಅಲ್ಲಿ ಯೋಚನೆಗೂ ಸಿಲುಕದ ಹಲವಾರು ಅದ್ಭುತ-ಭಾವಗಳನ್ನು ಕಂಡನು.
03109003a ವಾಚೋ ಯತ್ರಾಭವನ್ಮೇಘಾ ಉಪಲಾಶ್ಚ ಸಹಸ್ರಶಃ।
03109003c ನಾಶಕ್ನುವಂಸ್ತಮಾರೋಢುಂ ವಿಷಣ್ಣಮನಸೋ ಜನಾಃ।।
ಅಲ್ಲಿ ಮಾತನಾಡಿದರೆ ಮೋಡಗಳು ಕವಿಯುವವು ಮತ್ತು ಸಹಸ್ರಾರು ಬಂಡೆಗಳು ಉರುಳುವವು. ಆದುದರಿಂದ ವಿಷಣ್ಣ ಮನಸ್ಕ ಜನರು ಅದನ್ನು ಏರಲು ಅಶಕ್ತರು.
03109004a ವಾಯುರ್ನಿತ್ಯಂ ವವೌ ಯತ್ರ ನಿತ್ಯಂ ದೇವಶ್ಚ ವರ್ಷತಿ।
03109004c ಸಾಯಂ ಪ್ರಾತಶ್ಚ ಭಗವಾನ್ದೃಶ್ಯತೇ ಹವ್ಯವಾಹನಃ।।
ಅಲ್ಲಿ ವಾಯುವು ಸದಾ ಬೀಸುತ್ತಾನೆ, ದೇವತೆಗಳು ನಿತ್ಯವೂ ಮಳೆಸುರಿಸುತ್ತಾರೆ. ಬೆಳಿಗ್ಗೆ ಮತ್ತು ಸಾಯಂಕಾಲಗಳಲ್ಲಿ ಭಗವಾನ್ ಹವ್ಯವಾಹನನು ಕಾಣಿಸಿಕೊಳ್ಳುತ್ತಾನೆ.
03109005a ಏವಂ ಬಹುವಿಧಾನ್ಭಾವಾನದ್ಭುತಾನ್ವೀಕ್ಷ್ಯ ಪಾಂಡವಃ।
03109005c ಲೋಮಶಂ ಪುನರೇವ ಸ್ಮ ಪರ್ಯಪೃಚ್ಚತ್ತದದ್ಭುತಂ।।
ಈ ರೀತಿಯ ಬಹುವಿಧದ ಭಾವ-ಅದ್ಭುತಗಳನ್ನು ನೋಡಿದ ಪಾಂಡವನು ಪುನಃ ಲೋಮಶನನ್ನು ಆ ಅದ್ಭುತಗಳ ಕುರಿತು ಕೇಳಿದನು.
03109006 ಲೋಮಶ ಉವಾಚ।
03109006a ಯಥಾಶ್ರುತಮಿದಂ ಪೂರ್ವಮಸ್ಮಾಭಿರರಿಕರ್ಶನ।
03109006c ತದೇಕಾಗ್ರಮನಾ ರಾಜನ್ನಿಬೋಧ ಗದತೋ ಮಮ।।
ಲೋಮಶನು ಹೇಳಿದನು: “ಅರಿಕರ್ಶನ! ರಾಜನ್! ಹಿಂದೆ ನನಗೆ ಏನನ್ನು ಹೇಳಲಾಗಿತ್ತೋ ಅದನ್ನು ಏಕಾಗ್ರಮನಸ್ಕನಾಗಿ ಕೇಳು.
03109007a ಅಸ್ಮಿನ್ನೃಷಭಕೂಟೇಽಭೂದೃಷಭೋ ನಾಮ ತಾಪಸಃ।
03109007c ಅನೇಕಶತವರ್ಷಾಯುಸ್ತಪಸ್ವೀ ಕೋಪನೋ ಭೃಶಂ।।
ಈ ಋಷಭ ಶಿಖರದಲ್ಲಿ ಋಷಭ ಎಂಬ ಹೆಸರಿನ ತಾಪಸನಿದ್ದನು. ಅನೇಕ ನೂರು ವರ್ಷಗಳು ತಪಸ್ಸಿನಲ್ಲಿ ನಿರತನಾಗಿದ್ದ ಅವನು ಬಹಳ ಕುಪಿತನಾಗಿದ್ದನು.
03109008a ಸ ವೈ ಸಂಭಾಷ್ಯಮಾಣೋಽನ್ಯೈಃ ಕೋಪಾದ್ಗಿರಿಮುವಾಚ ಹ।
03109008c ಯ ಇಹ ವ್ಯಾಹರೇತ್ಕಶ್ಚಿದುಪಲಾನುತ್ಸೃಜೇಸ್ತದಾ।।
ಅಲ್ಲಿ ಬೇರೆಯವರು ಮಾತನಾಡುತ್ತಿದ್ದುದನ್ನು ನೋಡಿ ಕೋಪದಿಂದ ಪರ್ವತಕ್ಕೆ ಹೇಳಿದನು. ಇಲ್ಲಿ ಯಾರಾದರೂ ಏನಾದರೂ ಒಮ್ಮೆಯಾದರೂ ಮಾತನಾಡಿದರೆ ಕಲ್ಲು ಬಂಡೆಗಳನ್ನು ಉದುರಿಸಬೇಕು.
03109009a ವಾತಂ ಚಾಹೂಯ ಮಾ ಶಬ್ಧಮಿತ್ಯುವಾಚ ಸ ತಾಪಸಃ।
03109009c ವ್ಯಾಹರಂಶ್ಚೈವ ಪುರುಷೋ ಮೇಘೇನ ವಿನಿವಾರ್ಯತೇ।।
ಆ ತಾಪಸನು ವಾಯುವನ್ನು ಕರೆದು “ಇಲ್ಲಿ ಶಬ್ಧ ಬೇಡ!” ಎಂದು ಹೇಳಿದನು. ಆದುದರಿಂದ ಮಾತನಾಡಿದ ನರನನ್ನು ಮೇಘಗಳು ತಡೆಯುತ್ತವೆ.
03109010a ಏವಮೇತಾನಿ ಕರ್ಮಾಣಿ ರಾಜಂಸ್ತೇನ ಮಹರ್ಷಿಣಾ।
03109010c ಕೃತಾನಿ ಕಾನಿ ಚಿತ್ಕೋಪಾತ್ಪ್ರತಿಷಿದ್ಧಾನಿ ಕಾನಿ ಚಿತ್।।
ರಾಜನ್! ಹೀಗೆ ಆ ಮಹರ್ಷಿಯು ಕೋಪದಿಂದ ಕೆಲವು ಕೆಲಸಗಳನ್ನು ಮಾಡಿಸಿದನು ಮತ್ತು ಕೆಲವನ್ನು ಇನ್ನೊಬ್ಬರಿಗೆ ನಿಷೇದಿಸಿದನು.
03109011a ನಂದಾಮಭಿಗತಾನ್ದೇವಾನ್ಪುರಾ ರಾಜನ್ನಿತಿ ಶ್ರುತಿಃ।
03109011c ಅನ್ವಪದ್ಯಂತ ಸಹಸಾ ಪುರುಷಾ ದೇವದರ್ಶಿನಃ।।
ರಾಜನ್! ಹಿಂದೆ ದೇವತೆಗಳು ನಂದಾ ನದಿಗೆ ಬರುತ್ತಿದ್ದರೆಂದು ಕೇಳುತ್ತೇವೆ. ಅವರು ಬಂದ ಕೂಡಲೇ ದೇವತೆಗಳನ್ನು ನೋಡಲು ಜನರು ಬರುತ್ತಿದ್ದರು.
03109012a ತೇ ದರ್ಶನಮನಿಚ್ಚಂತೋ ದೇವಾಃ ಶಕ್ರಪುರೋಗಮಾಃ।
03109012c ದುರ್ಗಂ ಚಕ್ರುರಿಮಂ ದೇಶಂ ಗಿರಿಪ್ರತ್ಯೂಹರೂಪಕಂ।।
ಶಕ್ರನೇ ಮೊದಲಾದ ದೇವತೆಗಳು ಈ ರೀತಿ ನೋಟಕ್ಕೊಳಗಾಗುವುದನ್ನು ಮೆಚ್ಚಲಿಲ್ಲ. ಆದುದರಿಂದ ಗಿರಿಗಳಿಂದ ಕೋಟೆಯಂತೆ ಮಾಡಿ ಈ ಪ್ರದೇಶಕ್ಕೆ ಯಾರೂ ಬಾರದಹಾಗೆ ಮಾಡಿದರು.
03109013a ತದಾ ಪ್ರಭೃತಿ ಕೌಂತೇಯ ನರಾ ಗಿರಿಮಿಮಂ ಸದಾ।
03109013c ನಾಶಕ್ನುವನಭಿದ್ರಷ್ಟುಂ ಕುತ ಏವಾಧಿರೋಹಿತುಂ।।
ಕೌಂತೇಯ! ಅಂದಿನಿಂದ ಈ ಪರ್ವತಕ್ಕೆ ನರರು ಏರುವುದೇನು ಬರುವುದಕ್ಕೇ ಅಶಕ್ತರಾದರು
03109014a ನಾತಪ್ತತಪಸಾ ಶಕ್ಯೋ ದ್ರಷ್ಟುಮೇಷ ಮಹಾಗಿರಿಃ।
03109014c ಆರೋಢುಂ ವಾಪಿ ಕೌಂತೇಯ ತಸ್ಮಾನ್ನಿಯತವಾಗ್ಭವ।।
ಕೌಂತೇಯ! ತಪಸ್ಸನ್ನು ತಪಿಸದ ಯಾರೂ ಈ ಮಹಾಗಿರಿಯನ್ನು ನೋಡಲಿಕ್ಕಾಗುವುದಿಲ್ಲ ಮತ್ತು ಹತ್ತಲಿಕ್ಕೂ ಆಗುವುದಿಲ್ಲ. ಆದುದರಿಂದ ನಿನ್ನ ಮಾತನ್ನು ನಿಯಂತ್ರಿಸಿಕೋ.
03109015a ಇಹ ದೇವಾಃ ಸದಾ ಸರ್ವೇ ಯಜ್ಞಾನಾಜಹ್ರುರುತ್ತಮಾನ್।
03109015c ತೇಷಾಮೇತಾನಿ ಲಿಂಗಾನಿ ದೃಶ್ಯಂತೇಽದ್ಯಾಪಿ ಭಾರತ।।
ಇಲ್ಲಿ ಎಲ್ಲ ದೇವತೆಗಳೂ ಸದಾ ಉತ್ತಮ ಯಜ್ಞಗಳನ್ನು ಯಜಿಸುತ್ತಿದ್ದರು. ಭಾರತ! ಈಗಲೂ ಅವುಗಳ ಈ ಗುರುತುಗಳು ಕಾಣಿಸುತ್ತವೆ.
03109016a ಕುಶಾಕಾರೇವ ದೂರ್ವೇಯಂ ಸಂಸ್ತೀರ್ಣೇವ ಚ ಭೂರಿಯಂ।
03109016c ಯೂಪಪ್ರಕಾರಾ ಬಹವೋ ವೃಕ್ಷಾಶ್ಚೇಮೇ ವಿಶಾಂ ಪತೇ।।
ಈ ದೂರ್ವೆಗಳು ದರ್ಬೆಗಳ ಆಕಾರಗಳಲ್ಲಿದ್ದು ನೆಲವನ್ನು ಮುಚ್ಚಿವೆ. ವಿಶಾಂಪತೇ! ಈ ಹಲವಾರು ವೃಕ್ಷಗಳು ಯೂಪಗಳಂತಿವೆ.
03109017a ದೇವಾಶ್ಚ ಋಷಯಶ್ಚೈವ ವಸಂತ್ಯದ್ಯಾಪಿ ಭಾರತ।
03109017c ತೇಷಾಂ ಸಾಯಂ ತಥಾ ಪ್ರಾತರ್ದೃಶ್ಯತೇ ಹವ್ಯವಾಹನಃ।।
ಭಾರತ! ದೇವತೆಗಳು ಮತ್ತು ಋಷಿಗಳು ಇಂದೂ ಇಲ್ಲಿ ವಾಸಿಸುತ್ತಿದ್ದಾರೆ. ಸಾಯಂಕಾಲ ಮತ್ತು ಬೆಳಗಿನ ವೇಳೆಗಳಲ್ಲಿ ಅವರ ಅಗ್ನಿಯನ್ನು ನೋಡುತ್ತೇವೆ.
03109018a ಇಹಾಪ್ಲುತಾನಾಂ ಕೌಂತೇಯ ಸದ್ಯಃ ಪಾಪ್ಮಾ ವಿಹನ್ಯತೇ।
03109018c ಕುರುಶ್ರೇಷ್ಠಾಭಿಷೇಕಂ ವೈ ತಸ್ಮಾತ್ಕುರು ಸಹಾನುಜಃ।।
ಕೌಂತೇಯ! ಇಲ್ಲಿ ಸ್ನಾನಮಾಡಿದವರ ಪಾಪಗಳು ತಕ್ಷಣವೇ ನಾಶಗೊಳ್ಳುತ್ತವೆ. ಕುರುಶ್ರೇಷ್ಠ! ಆದುದರಿಂದ ನಿನ್ನ ತಮ್ಮಂದಿರೊಂದಿಗೆ ಇಲ್ಲಿ ಸ್ನಾನ ಮಾಡು.
03109019a ತತೋ ನಂದಾಪ್ಲುತಾಂಗಸ್ತ್ವಂ ಕೌಶಿಕೀಮಭಿಯಾಸ್ಯಸಿ।
03109019c ವಿಶ್ವಾಮಿತ್ರೇಣ ಯತ್ರೋಗ್ರಂ ತಪಸ್ತಪ್ತಮನುತ್ತಮಂ।।
ನಂದಾ ನದಿಯಲ್ಲಿ ಕೈಕಾಲುಗಳನ್ನು ತೊಳೆದು ಕೌಶಿಕೀ ನದಿಗೆ ಹೋಗೋಣ. ಅಲ್ಲಿ ವಿಶ್ವಾಮಿತ್ರನು ಉತ್ತಮ ಘೋರ ತಪಸ್ಸನ್ನು ತಪಿಸಿದ್ದನು.””
03109020 ವೈಶಂಪಾಯನ ಉವಾಚ।
03109020a ತತಸ್ತತ್ರ ಸಮಾಪ್ಲುತ್ಯ ಗಾತ್ರಾಣಿ ಸಗಣೋ ನೃಪಃ।
03109020c ಜಗಾಮ ಕೌಶಿಕೀಂ ಪುಣ್ಯಾಂ ರಮ್ಯಾಂ ಶಿವಜಲಾಂ ನದೀಂ।।
ವೈಶಂಪಾಯನನು ಹೇಳಿದನು: “ಆಗ ಅಲ್ಲಿ ನೃಪನು ತನ್ನ ತಂಡದವರೊಂದಿಗೆ ಸ್ನಾನಮಾಡಿದನು. ಅನಂತರ, ಪುಣ್ಯೆ, ರಮ್ಯ, ಮಂಗಳಕರ ನೀರಿನ ಕೌಶಿಕೀ ನದಿಗೆ ಹೋದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ನವಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ನೂರಾಒಂಭತ್ತನೆಯ ಅಧ್ಯಾಯವು.