ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 108
ಸಾರ
ಹರನು ಒಪ್ಪಿಕೊಂಡು ಗಣಗಳೊಂದಿಗೆ ಹಿಮಾಲಯದ ಮೇಲೆ ನಿಂತು ಗಂಗೆಯನ್ನು ಧರಿಸಿದುದು (1-10). ಗಂಗೆಯು ಸಮುದ್ರವನ್ನು ತುಂಬಿಸಿದುದು; ಸಾಗರರನ್ನು ಪಾವನಗೊಳಿಸಿದುದು (11-19).
03108001 ಲೋಮಶ ಉವಾಚ।
03108001a ಭಗೀರಥವಚಃ ಶ್ರುತ್ವಾ ಪ್ರಿಯಾರ್ಥಂ ಚ ದಿವೌಕಸಾಂ।
03108001c ಏವಮಸ್ತ್ವಿತಿ ರಾಜಾನಂ ಭಗವಾನ್ಪ್ರತ್ಯಭಾಷತ।।
ಲೋಮಶನು ಹೇಳಿದನು: “ಭಗೀರಥನ ಮಾತನ್ನು ಕೇಳಿ ಮತ್ತು ದೇವತೆಗಳ ಹಿತಕ್ಕಾಗಿ ಭಗವಂತನು ರಾಜನಿಗೆ ಈ ರೀತಿ ಉತ್ತರಿಸಿದನು.
03108002a ಧಾರಯಿಷ್ಯೇ ಮಹಾಬಾಹೋ ಗಗನಾತ್ಪ್ರಚ್ಯುತಾಂ ಶಿವಾಂ।
03108002c ದಿವ್ಯಾಂ ದೇವನದೀಂ ಪುಣ್ಯಾಂ ತ್ವತ್ಕೃತೇ ನೃಪಸತ್ತಮ।।
“ಮಹಾಬಾಹೋ! ನೃಪಸತ್ತಮ! ಗಗನದಿಂದ ಕೆಳಬೀಳುವ ಶಿವೆ, ಪುಣ್ಯೆ, ದಿವ್ಯ ದೇವನದಿಯನ್ನು ನಿನಗೋಸ್ಕರ ಧರಿಸುತ್ತೇನೆ.”
03108003a ಏವಮುಕ್ತ್ವಾ ಮಹಾಬಾಹೋ ಹಿಮವಂತಮುಪಾಗಮತ್।
03108003c ಸಂವೃತಃ ಪಾರ್ಷದೈರ್ಘೋರೈರ್ನಾನಾಪ್ರಹರಣೋದ್ಯತೈಃ।।
ಮಹಾಬಾಹೋ! ಹೀಗೆ ಹೇಳಿ ಅವನು ನಾನಾ ತರಹದ ಘೋರ ಆಯುಧಗಳನ್ನು ಹಿಡಿದ ಗಣಗಳಿಂದ ಸುತ್ತುವರೆಯಲ್ಪಟ್ಟು ಹಿಮಾಲಯಕ್ಕೆ ಹೋದನು.
03108004a ತತಃ ಸ್ಥಿತ್ವಾ ನರಶ್ರೇಷ್ಠಂ ಭಗೀರಥಮುವಾಚ ಹ।
03108004c ಪ್ರಯಾಚಸ್ವ ಮಹಾಬಾಹೋ ಶೈಲರಾಜಸುತಾಂ ನದೀಂ।
03108004e ಪತಮಾನಾಂ ಸರಿಚ್ಛ್ರೇಷ್ಠಾಂ ಧಾರಯಿಷ್ಯೇ ತ್ರಿವಿಷ್ಟಪಾತ್।।
ಅಲ್ಲಿ ನಿಂತು ನರಶ್ರೇಷ್ಠ ಭಗೀರಥನಿಗೆ ಹೇಳಿದನು: “ಮಹಾಬಾಹೋ! ಈಗ ಶೈಲರಾಜಸುತೆ ನದಿಯಲ್ಲಿ ಪ್ರಾರ್ಥನೆಮಾಡು. ಸ್ವರ್ಗದಿಂದ ಬೀಳುತ್ತಿರುವ ಆ ನದಿಶ್ರೇಷ್ಠೆಯನ್ನು ಧರಿಸುತ್ತೇನೆ.”
03108005a ಏತಚ್ಛೃತ್ವಾ ವಚೋ ರಾಜಾ ಶರ್ವೇಣ ಸಮುದಾಹೃತಂ।
03108005c ಪ್ರಯತಃ ಪ್ರಣತೋ ಭೂತ್ವಾ ಗಂಗಾಂ ಸಮನುಚಿಂತಯತ್।।
ಶರ್ವನ ಈ ಮಾತನ್ನು ಕೇಳಿ ರಾಜನು ಸಂತೋಷದಿಂದ ವಿನೀತನಾಗಿ, ತಲೆಬಾಗಿ ನಮಸ್ಕರಿಸಿ ತನ್ನ ಮನಸ್ಸಿನೊಂದಿಗೆ ಗಂಗೆಯನ್ನು ನೆನೆದನು.
03108006a ತತಃ ಪುಣ್ಯಜಲಾ ರಮ್ಯಾ ರಾಜ್ಞಾ ಸಮನುಚಿಂತಿತಾ।
03108006c ಈಶಾನಂ ಚ ಸ್ಥಿತಂ ದೃಷ್ಟ್ವಾ ಗಗನಾತ್ಸಹಸಾ ಚ್ಯುತಾ।।
ಆಗ ತನ್ನನ್ನೇ ಚಿಂತಿಸುತ್ತಿರುವ ರಾಜ ಮತ್ತು ಅಲ್ಲೇ ನಿಂತಿರುವ ಈಶಾನನನ್ನು ನೋಡಿ ರಮ್ಯ ಪುಣ್ಯಜಲೆಯು ಒಮ್ಮೆಗೇ ಜೋರಾಗಿ ಗಗನದಿಂದ ಕಳಚಿ ಧುಮುಕಿದಳು.
03108007a ತಾಂ ಪ್ರಚ್ಯುತಾಂ ತತೋ ದೃಷ್ಟ್ವಾ ದೇವಾಃ ಸಾರ್ಧಂ ಮಹರ್ಷಿಭಿಃ।
03108007c ಗಂಧರ್ವೋರಗರಕ್ಷಾಂಸಿ ಸಮಾಜಗ್ಮುರ್ದಿದೃಕ್ಷಯಾ।।
ಧುಮುಕಿ ಬರುತ್ತಿದ್ದ ಅವಳನ್ನು ನೋಡಿ ದೇವತೆಗಳೊಂದಿಗೆ ಮಹರ್ಷಿಗಳೂ, ಗಂಧರ್ವ-ಉರಗ-ರಾಕ್ಷಸರೂ ಕೂಡ ನೋಡಲು ಬಂದು ಸೇರಿದರು.
03108008a ತತಃ ಪಪಾತ ಗಗನಾದ್ಗಂಗಾ ಹಿಮವತಃ ಸುತಾ।
03108008c ಸಮುದ್ಭ್ರಾಂತಮಹಾವರ್ತಾ ಮೀನಗ್ರಾಹಸಮಾಕುಲಾ।।
ಆಗ ಮೀನು-ಮೊಸಳೆಗಳ ಮಹಾ ಸಂಕುಲಗಳೆಲ್ಲವನ್ನೂ ತನ್ನಲ್ಲಿಟ್ಟುಕೊಂಡ ಹಿಮವಂತನ ಮಗಳು ಗಂಗೆಯು ಗಗನದಿಂದ ಧುಮುಕಿ ಬಿದ್ದಳು.
03108009a ತಾಂ ದಧಾರ ಹರೋ ರಾಜನ್ಗಂಗಾಂ ಗಗನಮೇಖಲಾಂ।
03108009c ಲಲಾಟದೇಶೇ ಪತಿತಾಂ ಮಾಲಾಂ ಮುಕ್ತಾಮಯೀಮಿವ।।
ರಾಜನ್! ಆಗ ಹರನು ತನ್ನ ಲಲಾಟದ ಮೇಲೆ ಬೀಳುತ್ತಿದ್ದ ಗಗನಮೇಖಲೆ ಗಂಗೆಯನ್ನು ಮುತ್ತುಗಳನ್ನು ಹಾರದಲ್ಲಿ ಪೋಣಿಸುವಂತೆ ಧರಿಸಿದನು.
03108010a ಸಾ ಬಭೂವ ವಿಸರ್ಪಂತೀ ತ್ರಿಧಾ ರಾಜನ್ಸಮುದ್ರಗಾ।
03108010c ಫೇನಪುಂಜಾಕುಲಜಲಾ ಹಂಸಾನಾಮಿವ ಪಂಕ್ತ್ತಯಃ।।
ರಾಜನ್! ಪ್ರವಾಹವನ್ನು ಕಟ್ಟಿಹಿಡಿದುದರಿಂದುಂಟಾದ ನೊರೆಯಿಂದ ಅಲ್ಲಿ ಆ ಸಮುದ್ರಗೆಯು ಹಂಸಗಳ ಸಾಲಿನಂತೆ ಕಂಡಳು. ಅವಳು ಹೊರಬರಲು ಪ್ರಯತ್ನಿಸುತ್ತಾ1 ಮೂರು ಧಾರೆಗಳಾಗಿ ಚಿಮ್ಮಿದಳು.
03108011a ಕ್ವ ಚಿದಾಭೋಗಕುಟಿಲಾ ಪ್ರಸ್ಖಲಂತೀ ಕ್ವ ಚಿತ್ಕ್ವ ಚಿತ್।
03108011c ಸ್ವಫೇನಪಟಸಂವೀತಾ ಮತ್ತೇವ ಪ್ರಮದಾವ್ರಜತ್।।
03108011e ಕ್ವ ಚಿತ್ಸಾ ತೋಯನಿನದೈರ್ನದಂತೀ ನಾದಮುತ್ತಮಂ।।
ಅವಳು ಒಮ್ಮೆಮ್ಮೆ ಸಿಟ್ಟಿನಿಂದ ಭುಸುಗುಟ್ಟಿ ರೋಷದಲ್ಲಿ ಮುನ್ನುಗ್ಗುವವಳಂತೆ ಮತ್ತು ಇನ್ನೊಮ್ಮೆ ತನ್ನದೇ ನೊರೆಯ ಸೀರೆಯನ್ನುಟ್ಟು, ಅಮಲಿನಲ್ಲಿ ಜೋಲಾಡಿಬರುವ ಸ್ತ್ರೀಯಂತೆ ತೋರುತ್ತಿದ್ದಳು. ಇನ್ನೊಮ್ಮೆ ಅವಳ ಪ್ರವಾಹದಲ್ಲಿ ಇಂಪಾದ ನಾದವನ್ನು ಮಾಡುತ್ತಾ ಬರುವವಳಂತೆ ಕಂಡು ಬರುತ್ತಿದ್ದಳು.
03108012a ಏವಂ ಪ್ರಕಾರಾನ್ಸುಬಹೂನ್ಕುರ್ವಂತೀ ಗಗನಾಚ್ಚ್ಯುತಾ।
03108012c ಪೃಥಿವೀತಲಮಾಸಾದ್ಯ ಭಗೀರಥಮಥಾಬ್ರವೀತ್।।
ಈ ರೀತಿ ಹಲವು ಪ್ರಕಾರಗಳಲ್ಲಿ ಹಲವನ್ನು ಮಾಡುತ್ತಾ ಗಗನವನ್ನು ಬಿಟ್ಟು ಭೂಮಿಯ ತಲವನ್ನು ತಲುಪಿದ ಅವಳು ಭಗೀರಥನಿಗೆ ಹೇಳಿದಳು:
03108013a ದರ್ಶಯಸ್ವ ಮಹಾರಾಜ ಮಾರ್ಗಂ ಕೇನ ವ್ರಜಾಮ್ಯಹಂ।
03108013c ತ್ವದರ್ಥಮವತೀರ್ಣಾಸ್ಮಿ ಪೃಥಿವೀಂ ಪೃಥಿವೀಪತೇ।।
“ಮಹಾರಾಜ! ನಾನು ಯಾವ ಮಾರ್ಗದಲ್ಲಿ ಹೋಗಬೇಕೆನ್ನುವುದನ್ನು ನೀನೇ ತೋರಿಸು. ಭೂಪತೀ! ನಿನಗೋಸ್ಕರವೇ ನಾನು ಭೂಮಿಗೆ ಇಳಿದು ಬಂದಿದ್ದೇನೆ.”
03108014a ಏತಚ್ಛೃತ್ವಾ ವಚೋ ರಾಜಾ ಪ್ರಾತಿಷ್ಠತ ಭಗೀರಥಃ।
03108014c ಯತ್ರ ತಾನಿ ಶರೀರಾಣಿ ಸಾಗರಾಣಾಂ ಮಹಾತ್ಮನಾಂ।।
03108014e ಪಾವನಾರ್ಥಂ ನರಶ್ರೇಷ್ಠ ಪುಣ್ಯೇನ ಸಲಿಲೇನ ಹ।।
ನರಶ್ರೇಷ್ಠ! ಈ ಮಾತುಗಳನ್ನು ಕೇಳಿದ ರಾಜ ಭಗೀರಥನು ಆ ಪುಣ್ಯ ಜಲದಿಂದ ಪಾವನಗೊಳಿಸಲು ಮಹಾತ್ಮ ಸಾಗರರ ಶರೀರಗಳಿರುವಲ್ಲಿ ಹೋದನು.
03108015a ಗಂಗಾಯಾ ಧಾರಣಂ ಕೃತ್ವಾ ಹರೋ ಲೋಕನಮಸ್ಕೃತಃ।
03108015c ಕೈಲಾಸಂ ಪರ್ವತಶ್ರೇಷ್ಠಂ ಜಗಾಮ ತ್ರಿದಶೈಃ ಸಹ।।
ಗಂಗೆಯನ್ನು ಧರಿಸಿ ಲೋಕಮಸ್ಕೃತ ಹರನು ದೇವತೆಗಳೊಂದಿಗೆ ಪರ್ವತಶ್ರೇಷ್ಠ ಕೈಲಾಸಕ್ಕೆ ಹೋದನು.
03108016a ಸಮುದ್ರಂ ಚ ಸಮಾಸಾದ್ಯ ಗಂಗಯಾ ಸಹಿತೋ ನೃಪಃ।
03108016c ಪೂರಯಾಮಾಸ ವೇಗೇನ ಸಮುದ್ರಂ ವರುಣಾಲಯಂ।।
ಗಂಗೆಯೊಡನೆ ನೃಪನು ಸಮುದ್ರವನ್ನು ತಲುಪಿದೊಡನೆಯೇ ವರುಣಾಲಯ ಸಮುದ್ರವು ತುಂಬಿಕೊಂಡಿತು.
03108017a ದುಹಿತೃತ್ವೇ ಚ ನೃಪತಿರ್ಗಂಗಾಂ ಸಮನುಕಲ್ಪಯತ್।
03108017c ಪಿತೄಣಾಂ ಚೋದಕಂ ತತ್ರ ದದೌ ಪೂರ್ಣಮನೋರಥಃ।।
ನೃಪತಿಯಾದರೋ ಅಲ್ಲಿ ಗಂಗೆಯನ್ನು ತನ್ನ ಮಗಳಾಗಿ ಮಾಡಿಕೊಂಡನು ಮತ್ತು ಪಿತೃಗಳಿಗೆ ನೀರನ್ನಿತ್ತು ಪೂರ್ಣಮನೋರಥನಾದನು.
03108018a ಏತತ್ತೇ ಸರ್ವಮಾಖ್ಯಾತಂ ಗಂಗಾ ತ್ರಿಪಥಗಾ ಯಥಾ।
03108018c ಪೂರಣಾರ್ಥಂ ಸಮುದ್ರಸ್ಯ ಪೃಥಿವೀಮವತಾರಿತಾ।।
03108019a ಸಮುದ್ರಶ್ಚ ಯಥಾ ಪೀತಃ ಕಾರಣಾರ್ಥೇ ಮಹಾತ್ಮನಾ।
03108019c ವಾತಾಪಿಶ್ಚ ಯಥಾ ನೀತಃ ಕ್ಷಯಂ ಸ ಬ್ರಹ್ಮಹಾ ಪ್ರಭೋ।।
03108019e ಅಗಸ್ತ್ಯೇನ ಮಹಾರಾಜ ಯನ್ಮಾಂ ತ್ವಂ ಪರಿಪೃಚ್ಚಸಿ।।
ಪ್ರಭೋ! ಮಹಾರಾಜ! ಗಂಗೆಯು ಸಮುದ್ರವನ್ನು ತುಂಬಿಸಲು ಧರೆಗಿಳಿದು ತ್ರಿಪಥೆಯಾದದ್ದು ಹೇಗೆ, ಯಾವ ಕಾರಣಕ್ಕೆ ಮಹಾತ್ಮ ಅಗಸ್ತ್ಯನು ಬ್ರಾಹ್ಮಣರ ಅನ್ನವಾದ ವಾತಾಪಿಯನ್ನು ನಾಶಗೊಳಿಸಿದ ಮತ್ತು ಸಮುದ್ರವನ್ನು ಕುಡಿದ ಎಂಬ ನಿನ್ನ ಪ್ರಶ್ನೆಗಳಿಗೆ ಇವೆಲ್ಲವನ್ನೂ ಹೇಳಿದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಅಷ್ಟಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಕಥನದಲ್ಲಿ ನೂರಾಎಂಟನೆಯ ಅಧ್ಯಾಯವು.
-
ಸರ್ಪಗಳಂತೆ ಕೋಪದಿಂದ ಕಷ್ಟದಲ್ಲಿ ನುಸುಳಿಬರುತ್ತಾ ↩︎