ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 100
ಸಾರ
ಕಾಲೇಯರು ಭೂಮಿಯಲ್ಲಿ ಬ್ರಾಹ್ಮಣರನ್ನು ನಾಶಗೊಳಿಸಿದುದು (1-15). ದೇವತೆಗಳು ನಾರಾಯಣನ ಮೊರೆಹೊಕ್ಕಿದುದು (16-24).
03100001 ಲೋಮಶ ಉವಾಚ।
03100001a ಸಮುದ್ರಂ ತೇ ಸಮಾಶ್ರಿತ್ಯ ವಾರುಣಂ ನಿಧಿಮಂಭಸಾಂ।
03100001c ಕಾಲೇಯಾಃ ಸಂಪ್ರವರ್ತಂತ ತ್ರೈಲೋಕ್ಯಸ್ಯ ವಿನಾಶನೇ।।
ಲೋಮಶನು ಹೇಳಿದನು: “ವಾರುಣ ನಿಧಿಮಾಂಬುಸ ಸಮುದ್ರವನ್ನು ಆಶ್ರಯಿಸಿದ ಕಾಲೇಯರು ತ್ರೈಲೋಕ್ಯದ ವಿನಾಶನಕ್ಕೆ ತಯಾರಿ ನಡೆಸಿದರು.
03100002a ತೇ ರಾತ್ರೌ ಸಮಭಿಕ್ರುದ್ಧಾ ಭಕ್ಷಯಂತಿ ಸದಾ ಮುನೀನ್।
03100002c ಆಶ್ರಮೇಷು ಚ ಯೇ ಸಂತಿ ಪುನ್ಯೇಷ್ವಾಯತನೇಷು ಚ।।
ಪ್ರತಿ ರಾತ್ರಿಯೂ ಆ ಕೃದ್ಧ ಅಸುರರು ಆಶ್ರಮಗಳಲ್ಲಿ ಮತ್ತು ಪುಣ್ಯಕ್ಷೇತ್ರಗಳಲ್ಲಿದ್ದ ಮುನಿಗಳನ್ನು ಭಕ್ಷಿಸಿದರು.
03100003a ವಸಿಷ್ಠಸ್ಯಾಶ್ರಮೇ ವಿಪ್ರಾ ಭಕ್ಷಿತಾಸ್ತೈರ್ದುರಾತ್ಮಭಿಃ।
03100003c ಅಶೀತಿಶತಮಷ್ಟೌ ಚ ನವ ಚಾನ್ಯೇ ತಪಸ್ವಿನಃ।।
ವಸಿಷ್ಠನ ಆಶ್ರಮದಲ್ಲಿ ಆ ದುರಾತ್ಮರು ನೂರಾಎಂಟು ವಿಪ್ರರನ್ನೂ ಮತ್ತು ಇನ್ನೂ ಇತರ ಒಂಭತ್ತು ತಪಸ್ವಿಗಳನ್ನು ಭಕ್ಷಿಸಿದರು.
03100004a ಚ್ಯವನಸ್ಯಾಶ್ರಮಂ ಗತ್ವಾ ಪುಣ್ಯಂ ದ್ವಿಜನಿಷೇವಿತಂ।
03100004c ಫಲಮೂಲಾಶನಾನಾಂ ಹಿ ಮುನೀನಾಂ ಭಕ್ಷಿತಂ ಶತಂ।।
ಪುಣ್ಯ ದ್ವಿಜನಿಷೇವಿತ ಚ್ಯವನಾಶ್ರಮಕ್ಕೆ ಹೋಗಿ ಫಲಮೂಲಗಳನ್ನೇ ಆಹಾರವಾಗಿಸಿಕೊಂಡಿದ್ದ ಒಂದು ನೂರು ಮುನಿಗಳನ್ನು ಭಕ್ಷಿಸಿದರು.
03100005a ಏವಂ ರಾತ್ರೌ ಸ್ಮ ಕುರ್ವಂತಿ ವಿವಿಶುಶ್ಚಾರ್ಣವಂ ದಿವಾ।
03100005c ಭರದ್ವಾಜಾಶ್ರಮೇ ಚೈವ ನಿಯತಾ ಬ್ರಹ್ಮಚಾರಿಣಃ।।
03100005e ವಾಯ್ವಾಹಾರಾಂಬುಭಕ್ಷಾಶ್ಚ ವಿಂಶತಿಃ ಸಂನಿಪಾತಿತಾಃ।।
ರಾತ್ರಿಯಸಮದಲ್ಲಿ ಹೀಗೆ ಮಾಡಿ ಹಗಲಿನಲ್ಲಿ ಸಮುದ್ರದಲ್ಲಿ ಅಡಗಿರುತ್ತಿದ್ದರು. ಭರದ್ವಾಜನ ಆಶ್ರಮದಲ್ಲಿ ನಿಯತರಾಗಿದ್ದ, ಕೇವಲ ಗಾಳಿ ಮತ್ತು ನೀರನ್ನು ಸೇವಿಸುತ್ತಿದ್ದ ಇಪ್ಪತ್ತು ಬ್ರಹ್ಮಚಾರಿಗಳನ್ನು ಕೊಂದು ಉರುಳಿಸಿದರು.
03100006a ಏವಂ ಕ್ರಮೇಣ ಸರ್ವಾಂಸ್ತಾನಾಶ್ರಮಾನ್ದಾನವಾಸ್ತದಾ।
03100006c ನಿಶಾಯಾಂ ಪರಿಧಾವಂತಿ ಮತ್ತಾ ಭುಜಬಲಾಶ್ರಯಾತ್।।
03100006e ಕಾಲೋಪಸೃಷ್ಟಾಃ ಕಾಲೇಯಾ ಘ್ನಂತೋ ದ್ವಿಜಗಣಾನ್ಬಹೂನ್।।
ಈ ರೀತಿ ಕ್ರಮೇಣವಾಗಿ ಕಾಲವೇ ಅವರನ್ನು ಸುತ್ತುವರೆಯುವವರೆಗೆ ಕಾಲೇಯ ದಾನವರು ತಮ್ಮ ಭುಜಬಲವನ್ನು ಆಶ್ರಯಿಸಿ ಮತ್ತರಾಗಿ ರಾತ್ರಿ ಎಲ್ಲ ಆಶ್ರಮಗಳನ್ನು ಆಕ್ರಮಣಿಸಿ ಬಹಳಷ್ಟು ದ್ವಿಜಗಣಗಳನ್ನು ಸಂಹರಿಸಿದರು.
03100007a ನ ಚೈನಾನನ್ವಬುಧ್ಯಂತ ಮನುಜಾ ಮನುಜೋತ್ತಮ।
03100007c ಏವಂ ಪ್ರವೃತ್ತಾನ್ದೈತ್ಯಾಂಸ್ತಾಂಸ್ತಾಪಸೇಷು ತಪಸ್ವಿಷು।।
ಮನುಜೋತ್ತಮ! ಈ ರೀತಿ ತಾಪಸರನ್ನು ಪೀಡಿಸುತ್ತಿರುವವರು ದೈತ್ಯರು ಎಂದು ಮನುಷ್ಯರ್ಯಾರಿಗೂ ತಿಳಿದಿರಲಿಲ್ಲ.
03100008a ಪ್ರಭಾತೇ ಸಮದೃಶ್ಯಂತ ನಿಯತಾಹಾರಕರ್ಶಿತಾಃ।
03100008c ಮಹೀತಲಸ್ಥಾ ಮುನಯಃ ಶರೀರೈರ್ಗತಜೀವಿತೈಃ।।
ಬೆಳಿಗ್ಗೆ ಸಮಯದಲ್ಲಿ ನಿಯತಾಹಾರಗಳಿಂದ ಕೃಶರಾಗಿದ್ದ ಮುನಿಗಳ ನಿರ್ಜೀವ ಶರೀರಗಳು ಭೂಮಿಯ ಮೇಲೆ ಬಿದ್ದಿರುವುದನ್ನು ನೋಡುತ್ತಿದ್ದರು.
03100009a ಕ್ಷೀಣಮಾಂಸೈರ್ವಿರುಧಿರೈರ್ವಿಮಜ್ಜಾಂತ್ರೈರ್ವಿಸಂಧಿಭಿಃ।
03100009c ಆಕೀರ್ಣೈರಾಚಿತಾ ಭೂಮಿಃ ಶಂಖಾನಾಮಿವ ರಾಶಿಭಿಃ।।
ಕೃಶರಾದ, ಮಾಂಸ-ರಕ್ತ-ಮಜ್ಜಗಳಿಲ್ಲದ, ಕೈಕಾಲುಗಳನ್ನು ತುಂಡರಿಸಿದ, ಅಕೀರ್ಣ ಶಂಖಗಳ ರಾಶಿಯಂತಿದ್ದ ಹೆಣಗಳ ರಾಶಿಗಳಿಂದ ಭೂಮಿಯು ತುಂಬಿ ಕೊಂಡಿತು.
03100010a ಕಲಶೈರ್ವಿಪ್ರವಿದ್ಧೈಶ್ಚ ಸ್ರುವೈರ್ಭಗ್ನೈಸ್ತಥೈವ ಚ।
03100010c ವಿಕೀರ್ಣೈರಗ್ನಿಹೋತ್ರೈಶ್ಚ ಭೂರ್ಬಭೂವ ಸಮಾವೃತಾ।।
ವಿಪ್ರವಿದರ ಒಡೆದ ಕಲಶಗಳ ಚೂರುಗಳಿಂದ ಮತ್ತು ಅಗ್ನಿಹೋತ್ರಗಳ ತುಂಡುಗಳಿಂದ ಭೂಮಿಯು ತುಂಬಿಕೊಂಡಿತು.
03100011a ನಿಃಸ್ವಾಧ್ಯಾಯವಷಟ್ಕಾರಂ ನಷ್ಟಯಜ್ಞೋತ್ಸವಕ್ರಿಯಂ।
03100011c ಜಗದಾಸೀನ್ನಿರುತ್ಸಾಹಂ ಕಾಲೇಯಭಯಪೀಡಿತಂ।।
ಸ್ವಾಧ್ಯಾಯ, ವಷಟ್ಕಾರಗಳು ನಿಂತು, ಯಜ್ಞವೇ ಮೊದಲಾದ ಉತ್ಸವ ಕ್ರಿಯೆಗಳು ನಿಂತು ಕಾಲೇಯರ ಭಯಪೀಡಿತವಾದ ಜಗತ್ತು ಉತ್ಸಾಹವನ್ನೇ ಕಳೆದುಕೊಂಡಿತು.
03100012a ಏವಂ ಪ್ರಕ್ಷೀಯಮಾಣಾಶ್ಚ ಮಾನವಾ ಮನುಜೇಶ್ವರ।
03100012c ಆತ್ಮತ್ರಾಣಪರಾ ಭೀತಾಃ ಪ್ರಾದ್ರವಂತ ದಿಶೋ ಭಯಾತ್।।
ಮನುಜೇಶ್ವರ! ಈ ರೀತಿ ಮಾನವರು ಕುಂದುತ್ತಿರಲು ತಮ್ಮನ್ನು ರಕ್ಷಿಸಿಕೊಳ್ಳಲು ಭಯಭೀತರಾಗಿ ದಿಕ್ಕುದಿಕ್ಕುಗಳಿಗೆ ಓಡಿದರು.
03100013a ಕೇ ಚಿದ್ಗುಹಾಃ ಪ್ರವಿವಿಶುರ್ನಿರ್ಝರಾಂಶ್ಚಾಪರೇ ಶ್ರಿತಾಃ।
03100013c ಅಪರೇ ಮರಣೋದ್ವಿಗ್ನಾ ಭಯಾತ್ಪ್ರಾಣಾನ್ಸಮುತ್ಸೃಜನ್।।
ಕೆಲವರು ಗುಹೆಗಳಲ್ಲಿ ಅಡಗಿಕೊಂಡರೆ, ಇತರರು ಜಲಪಾತಗಳ ಹಿಂದೆ ಅಡಗಿಕೊಂಡರು. ಇನ್ನು ಕೆಲವರು ಸಾವಿಗೆ ಎಷ್ಟು ಹೆದರಿದರೆಂದರೆ ಭಯವೇ ಅವರನ್ನು ಸಾಯಿಸಿತು.
03100014a ಕೇ ಚಿದತ್ರ ಮಹೇಷ್ವಾಸಾಃ ಶೂರಾಃ ಪರಮದರ್ಪಿತಾಃ।
03100014c ಮಾರ್ಗಮಾಣಾಃ ಪರಂ ಯತ್ನಂ ದಾನವಾನಾಂ ಪ್ರಚಕ್ರಿರೇ।।
03100015a ನ ಚೈತಾನಧಿಜಗ್ಮುಸ್ತೇ ಸಮುದ್ರಂ ಸಮುಪಾಶ್ರಿತಾನ್।
03100015c ಶ್ರಮಂ ಜಗ್ಮುಶ್ಚ ಪರಮಮಾಜಗ್ಮುಃ ಕ್ಷಯಮೇವ ಚ।।
ಅಲ್ಲಿದ್ದ ಕೆಲವು ಮಹಾದರ್ಪಿತ ಮಹೇಷ್ವಾಸ ಶೂರರು ದಾನವರನ್ನು ಬೇಟೆಯಾಡಲು ಪರಮ ಯತ್ನವನ್ನು ಮಾಡಿದರು. ಆದರೆ ಆ ದಾನವರು ಸಮದ್ರದಲ್ಲಿ ಅಡಗಿ ಕೊಂಡಿದ್ದುದರಿಂದ ಅವರನ್ನು ಕಾಣದೇ ಅವರ ಪ್ರಯತ್ನದಲ್ಲಿಯೇ ಸೋತು ಮರಣ ಹೊಂದಿದರು.
03100016a ಜಗತ್ಯುಪಶಮಂ ಯಾತೇ ನಷ್ಟಯಜ್ಞೋತ್ಸವಕ್ರಿಯೇ।
03100016c ಆಜಗ್ಮುಃ ಪರಮಾಮಾರ್ತಿಂ ತ್ರಿದಶಾ ಮನುಜೇಶ್ವರ।।
ಮನುಜೇಶ್ವರ! ಯಜ್ಞೋತ್ಸವಗಳು ನಿಂತು ಜಗತ್ತೇ ನಾಶದ ಅಂಚಿನಲ್ಲಿರಲು ದೇವತೆಗಳು ಅತೀವ ಚಿಂತೆಗೊಳಗಾದರು.
03100017a ಸಮೇತ್ಯ ಸಮಹೇಂದ್ರಾಶ್ಚ ಭಯಾನ್ಮಂತ್ರಂ ಪ್ರಚಕ್ರಿರೇ।
03100017c ನಾರಾಯಣಂ ಪುರಸ್ಕೃತ್ಯ ವೈಕುಂಠಮಪರಾಜಿತಂ।।
ಭಯದಿಂದ ಇಂದ್ರನೊಡನೆ ಸೇರಿ ಮಂತ್ರಾಲೋಚನೆ ಮಾಡಿ, ಅಪರಾಜಿತ ವೈಕುಂಠ ನಾರಾಯಣನಲ್ಲಿಗೆ ಬಂದರು.
03100018a ತತೋ ದೇವಾಃ ಸಮೇತಾಸ್ತೇ ತದೋಚುರ್ಮಧುಸೂದನಂ।
03100018c ತ್ವಂ ನಃ ಸ್ರಷ್ಟಾ ಚ ಪಾತಾ ಚ ಭರ್ತಾ ಚ ಜಗತಃ ಪ್ರಭೋ।।
03100018e ತ್ವಯಾ ಸೃಷ್ಟಮಿದಂ ಸರ್ವಂ ಯಚ್ಚೇಂಗಂ ಯಚ್ಚ ನೇಂಗತಿ।।
ಅಲ್ಲಿ ಸೇರಿದ್ದ ದೇವತೆಗಳು ಮಧುಸೂದನನಿಗೆ ಹೇಳಿದರು: “ನೀನೇ ನಮ್ಮ ಸೃಷ್ಟ, ನಮ್ಮ ಪಾಲಕ, ನಮ್ಮ ಒಡೆಯ, ಮತ್ತು ಜಗತ್ತಿನ ಪ್ರಭು! ಹಂದಾಡುವ ಮತ್ತು ಹಂದಾಡದೇ ಇರುವ ಎಲ್ಲವನ್ನೂ ನೀನೇ ಸೃಷ್ಟಿಸಿದೆ.
03100019a ತ್ವಯಾ ಭೂಮಿಃ ಪುರಾ ನಷ್ಟಾ ಸಮುದ್ರಾತ್ಪುಷ್ಕರೇಕ್ಷಣ।
03100019c ವಾರಾಹಂ ರೂಪಮಾಸ್ಥಾಯ ಜಗದರ್ಥೇ ಸಮುದ್ಧೃತಾ।।
ಪುಷ್ಕರೇಕ್ಷಣ! ಹಿಂದೆ ಭೂಮಿಯು ಸಮುದ್ರದಲ್ಲಿ ನಷ್ಟವಾದಾಗ ಜಗತ್ತಿಗಾಗಿ ನೀನು ವರಾಹದ ರೂಪವನ್ನು ತಾಳಿ ಸಮದ್ರದಿಂದ ಮೇಲ್ತಂದೆ!
03100020a ಆದಿದೈತ್ಯೋ ಮಹಾವೀರ್ಯೋ ಹಿರಣ್ಯಕಶಿಪುಸ್ತ್ವಯಾ।
03100020c ನಾರಸಿಂಹಂ ವಪುಃ ಕೃತ್ವಾ ಸೂದಿತಃ ಪುರುಷೋತ್ತಮ।।
ಪುರುಷೋತ್ತಮ! ಮಹಾವೀರ್ಯ ಆದಿದೈತ್ಯ ಹಿರಣ್ಯಕಶಿಪುವನ್ನು ನಾರಸಿಂಹನ ದೇಹತಾಳಿ ಸಂಹರಿಸಿದೆ.
03100021a ಅವಧ್ಯಃ ಸರ್ವಭೂತಾನಾಂ ಬಲಿಶ್ಚಾಪಿ ಮಹಾಸುರಃ।
03100021c ವಾಮನಂ ವಪುರಾಶ್ರಿತ್ಯ ತ್ರೈಲೋಕ್ಯಾದ್ಭ್ರಂಶಿತಸ್ತ್ವಯಾ।।
ಸರ್ವಭೂತಗಳಿಂದಲೂ ಅವಧ್ಯನಾಗಿದ್ದ ಮಹಾಸುರ ಬಲಿಯನ್ನೂ ಕೂಡ ನೀನು ವಾಮನನ ರೂಪಧರಿಸಿ ಮೂರೂ ಲೋಕಗಳಿಂದ ಹೊರಹಾಕಿದೆ.
03100022a ಅಸುರಶ್ಚ ಮಹೇಷ್ವಾಸೋ ಜಂಭ ಇತ್ಯಭಿವಿಶ್ರುತಃ।
03100022c ಯಜ್ಞಕ್ಷೋಭಕರಃ ಕ್ರೂರಸ್ತ್ವಯೈವ ವಿನಿಪಾತಿತಃ।।
ಯಜ್ಞಗಳನ್ನು ಧ್ವಂಸಮಾಡುತ್ತಿದ್ದ ಜಂಭ ಎನ್ನುವ ಮಹೇಷ್ವಾಸ ಕ್ರೂರ ಅಸುರನು ನಿನ್ನಿಂದಲೇ ಕೆಳಗುರಿಳಿದನು.
03100023a ಏವಮಾದೀನಿ ಕರ್ಮಾಣಿ ಯೇಷಾಂ ಸಂಖ್ಯಾ ನ ವಿದ್ಯತೇ।
03100023c ಅಸ್ಮಾಕಂ ಭಯಭೀತಾನಾಂ ತ್ವಂ ಗತಿರ್ಮಧುಸೂದನ।।
ಮಧುಸೂದನ! ಭಯಭೀತರಾದ ನಮಗೆ ಗತಿಯಾದ ನೀನು ಇವೇ ಮೊದಲಾಗಿ ಸಂಖ್ಯೆಯೇ ಸಿಗದಷ್ಟು ಕಾರ್ಯಗಳನ್ನು ಮಾಡಿದ್ದೀಯೆ!
03100024a ತಸ್ಮಾತ್ತ್ವಾಂ ದೇವ ದೇವೇಶ ಲೋಕಾರ್ಥಂ ಜ್ಞಾಪಯಾಮಹೇ।
03100024c ರಕ್ಷ ಲೋಕಾಂಶ್ಚ ದೇವಾಂಶ್ಚ ಶಕ್ರಂ ಚ ಮಹತೋ ಭಯಾತ್।।
ದೇವದೇವೇಶ! ಆದುದರಿಂದಲೇ ಲೋಕಾರ್ಥವಾಗಿ ನಾವು ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಲೋಕಗಳನ್ನೂ, ದೇವತೆಗಳನ್ನು ಮತ್ತು ಇಂದ್ರನನ್ನು ಈ ಮಹಾಭಯದಿಂದ ರಕ್ಷಿಸು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರನೆಯ ಅಧ್ಯಾಯವು.