ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 90
ಸಾರ
ಧನಂಜಯನು ಯುಧಿಷ್ಠಿರನಿಗೆ ಕಳುಹಿಸಿದ ಸಂದೇಶವನ್ನು ಲೋಮಶನು ತಿಳಿಸುವುದು (1-7). ಲೋಮಶನು ಯುಧಿಷ್ಠಿರನಿಗೆ ತೀರ್ಥಯಾತ್ರೆಯನ್ನು ಕೈಗೊಳ್ಳಲೂ, ಜೊತೆಗೆ ತಾನೂ ಬರುವುದಾಗಿಯೂ ಹೇಳಿದುದು (8-13). ತೀರ್ಥಯಾತ್ರೆಗೆ ಮನಸ್ಸುಮಾಡಿ ಯುಧಿಷ್ಠಿರನು ಬಹಳಷ್ಟು ಬ್ರಾಹ್ಮಣರನ್ನು ಹಸ್ತಿನಾಪುರಕ್ಕೆ ಕಳುಹಿಸಿದುದು (14-24).
03090001 ಲೋಮಶ ಉವಾಚ।
03090001a ಧನಂಜಯೇನ ಚಾಪ್ಯುಕ್ತಂ ಯತ್ತಚ್ಛೃಣು ಯುಧಿಷ್ಠಿರ।
03090001c ಯುಧಿಷ್ಠಿರಂ ಭ್ರಾತರಂ ಮೇ ಯೋಜಯೇರ್ಧರ್ಮ್ಯಯಾ ಶ್ರಿಯಾ।।
03090002a ತ್ವಂ ಹಿ ಧರ್ಮಾನ್ಪರಾನ್ವೇತ್ಥ ತಪಾಂಸಿ ಚ ತಪೋಧನ।
03090002c ಶ್ರೀಮತಾಂ ಚಾಪಿ ಜಾನಾಸಿ ರಾಜ್ಞಾಂ ಧರ್ಮಂ ಸನಾತನಂ।।
ಲೋಮಶನು ಹೇಳಿದನು: “ಯುಧಿಷ್ಠಿರ! ಧನಂಜಯನು ಹೇಳಿ ಕಳುಹಿಸಿದುದನ್ನು ಕೇಳು. “ನನ್ನ ಅಣ್ಣ ಯುಧಿಷ್ಠಿರನಿಗೆ ಜಯ, ಧರ್ಮ ಮತ್ತು ಶ್ರೀಯನ್ನು ಕರುಣಿಸು. ತಪೋಧನ! ಶ್ರೇಷ್ಠ ಧರ್ಮವನ್ನೂ ತಪಸ್ಸನ್ನೂ ನೀನು ತಿಳಿದಿದ್ದೀಯೆ. ಸನಾತನ ಶ್ರೀಮಂತ ರಾಜರ ಧರ್ಮವನ್ನೂ ನೀನು ತಿಳಿದಿದ್ದೀಯೆ.
03090003a ಸ ಭವಾನ್ಯತ್ಪರಂ ವೇದ ಪಾವನಂ ಪುರುಷಾನ್ಪ್ರತಿ।
03090003c ತೇನ ಸಮ್ಯೋಜಯೇಥಾಸ್ತ್ವಂ ತೀರ್ಥಪುಣ್ಯೇನ ಪಾಂಡವಂ।।
ಪುರುಷರನ್ನು ಪಾವನಗೊಳಿಸುವ ಬೇರೆ ಏನು ಗೊತ್ತಿದ್ದರೂ ಅದನ್ನೂ ಆ ತೀರ್ಥಪುಣ್ಯದೊಂದಿಗೆ ಪಾಂಡವನಿಗೆ ದಯಪಾಲಿಸಬೇಕು.
03090004a ಯಥಾ ತೀರ್ಥಾನಿ ಗಚ್ಚೇತ ಗಾಶ್ಚ ದದ್ಯಾತ್ಸ ಪಾರ್ಥಿವಃ।
03090004c ತಥಾ ಸರ್ವಾತ್ಮನಾ ಕಾರ್ಯಮಿತಿ ಮಾಂ ವಿಜಯೋಽಬ್ರವೀತ್।।
ಪಾರ್ಥಿವರು ತೀರ್ಥಗಳಿಗೆ ಹೋಗಿ ಗೋವುಗಳ ದಾನವನ್ನಿಡುವಂತೆ ಸಂಪೂರ್ಣಮನಸ್ಸಿನಿಂದ ಈ ಕಾರ್ಯನಡೆಯಲಿ! ” ಎಂದು ವಿಜಯನು ನನಗೆ ಹೇಳಿದ್ದಾನೆ.
03090005a ಭವತಾ ಚಾನುಗುಪ್ತೋಽಸೌ ಚರೇತ್ತೀರ್ಥಾನಿ ಸರ್ವಶಃ।
03090005c ರಕ್ಷೋಭ್ಯೋ ರಕ್ಷಿತವ್ಯಶ್ಚ ದುರ್ಗೇಷು ವಿಷಮೇಷು ಚ।।
“ನಿನ್ನ ರಕ್ಷಣೆಯಲ್ಲಿ ಅವನು ಎಲ್ಲ ತೀರ್ಥಗಳನ್ನೂ ಸಂಚರಿಸಲಿ ಮತ್ತು ದುರ್ಗ-ವಿಷಮ ಪ್ರದೇಶಗಳಲ್ಲಿಯ ರಾಕ್ಷಸರಿಂದ ರಕ್ಷಿತನಾಗಿರಲಿ.
03090006a ದಧೀಚ ಇವ ದೇವೇಂದ್ರಂ ಯಥಾ ಚಾಪ್ಯಂಗಿರಾ ರವಿಂ।
03090006c ತಥಾ ರಕ್ಷಸ್ವ ಕೌಂತೇಯಂ ರಾಕ್ಷಸೇಭ್ಯೋ ದ್ವಿಜೋತ್ತಮ।।
ದಧೀಚಿಯು ದೇವೇಂದ್ರನನ್ನು ಮತ್ತು ಅಂಗಿರಸನು ರವಿಯನ್ನು ರಕ್ಷಿಸಿದಂತೆ ದ್ವಿಜೋತ್ತಮ! ನೀನು ಕೌಂತೇಯನನ್ನು ರಾಕ್ಷಸರಿಂದ ರಕ್ಷಿಸು.
03090007a ಯಾತುಧಾನಾ ಹಿ ಬಹವೋ ರಾಕ್ಷಸಾಃ ಪರ್ವತೋಪಮಾಃ।
03090007c ತ್ವಯಾಭಿಗುಪ್ತಾನ್ಕೌಂತೇಯಾನ್ನಾತಿವರ್ತೇಯುರಂತಿಕಾತ್।।
ಪರ್ವತಗಳ ಮೇಲೆ ಆಕ್ರಮಣಮಾಡುವ ಬಹಳಷ್ಟು ರಾಕ್ಷಸರಿದ್ದಾರೆ. ನೀನು ರಕ್ಷಣೆಯನ್ನಿತ್ತರೆ ಕೌಂತೇಯನನ್ನು ಆಕ್ರಮಣಿಸಿ ಕೊನೆಗೊಳಿಸುವುದಿಲ್ಲ.”
03090008a ಸೋಽಹಮಿಂದ್ರಸ್ಯ ವಚನಾನ್ನಿಯೋಗಾದರ್ಜುನಸ್ಯ ಚ।
03090008c ರಕ್ಷಮಾಣೋ ಭಯೇಭ್ಯಸ್ತ್ವಾಂ ಚರಿಷ್ಯಾಮಿ ತ್ವಯಾ ಸಹ।।
ಹೀಗೆ ಇಂದ್ರನ ಆದೇಶ ಮತ್ತು ಅರ್ಜುನನ ನಿಯೋಗದಂತೆ ನಿಮ್ಮನ್ನು ಭಯದಿಂದ ರಕ್ಷಿಸುತ್ತಾ ನಿಮ್ಮ ಜೊತೆ ನಾನೂ ಸಂಚರಿಸುತ್ತೇನೆ.
03090009a ದ್ವಿಸ್ತೀರ್ಥಾನಿ ಮಯಾ ಪೂರ್ವಂ ದೃಷ್ಟಾನಿ ಕುರುನಂದನ।
03090009c ಇದಂ ತೃತೀಯಂ ದ್ರಕ್ಷ್ಯಾಮಿ ತಾನ್ಯೇವ ಭವತಾ ಸಹ।।
ಕುರುನಂದನ! ಇದಕ್ಕೂ ಹಿಂದೆ ಎರಡು ಬಾರಿ ಈ ತೀರ್ಥಗಳನ್ನು ನೋಡಿದ್ದೇನೆ. ಈಗ ನಿನ್ನೊಂದಿಗೆ ಬಂದು ಅವುಗಳನ್ನು ಮೂರನೆಯ ಬಾರಿ ನೋಡುತ್ತೇನೆ.
03090010a ಇಯಂ ರಾಜರ್ಷಿಭಿರ್ಯಾತಾ ಪುಣ್ಯಕೃದ್ಭಿರ್ಯುಧಿಷ್ಠಿರ।
03090010c ಮನ್ವಾದಿಭಿರ್ಮಹಾರಾಜ ತೀರ್ಥಯಾತ್ರಾ ಭಯಾಪಹಾ।।
ಯುಧಿಷ್ಠಿರ! ಮಹಾರಾಜ! ಪುಣ್ಯಕರ್ಮಿಗಳಾದ ಮನುವೇ ಮೊದಲಾದ ರಾಜರ್ಷಿಗಳು ಭಯವನ್ನು ಕಳೆಯುವ ತೀರ್ಥಯಾತ್ರೆಯನ್ನು ಕೈಗೊಂಡಿದ್ದರು.
03090011a ನಾನೃಜುರ್ನಾಕೃತಾತ್ಮಾ ಚ ನಾವೈದ್ಯೋ ನ ಚ ಪಾಪಕೃತ್।
03090011c ಸ್ನಾತಿ ತೀರ್ಥೇಷು ಕೌರವ್ಯ ನ ಚ ವಕ್ರಮತಿರ್ನರಃ।।
ಕೌರವ್ಯ! ಅಪ್ರಾಮಾಣಿಕನಾದವನು, ಆತ್ಮಸಾಧನೆ ಮಾಡಿಕೊಂಡಿರದವನು, ವಿದ್ಯೆಯಿಲ್ಲದವನು, ಪಾಪಕರ್ಮಗಳನ್ನು ಮಾಡಿದವನು ಮತ್ತು ವಕ್ರಮತಿಯಿರುವ ಯಾವ ನರನೂ ಈ ತೀರ್ಥಗಳಲ್ಲಿ ಸ್ನಾನಮಾಡುವುದಿಲ್ಲ.
03090012a ತ್ವಂ ತು ಧರ್ಮಮತಿರ್ನಿತ್ಯಂ ಧರ್ಮಜ್ಞಃ ಸತ್ಯಸಂಗರಃ।
03090012c ವಿಮುಕ್ತಃ ಸರ್ವಪಾಪೇಭ್ಯೋ ಭೂಯ ಏವ ಭವಿಷ್ಯಸಿ।।
ನೀನಾದರೋ ನಿತ್ಯವೂ ಧರ್ಮಮತಿಯಾಗಿದ್ದು, ಧರ್ಮವನ್ನು ತಿಳಿದುಕೊಂಡವನಾಗಿ, ಸತ್ಯಸಂಗರನಾಗಿದ್ದೀಯೆ. ನಿನ್ನ ಎಲ್ಲ ಪಾಪಗಳಿಂದ ವಿಮುಕ್ತನಾಗುತ್ತೀಯೆ.
03090013a ಯಥಾ ಭಗೀರಥೋ ರಾಜಾ ರಾಜಾನಶ್ಚ ಗಯಾದಯಃ।
03090013c ಯಥಾ ಯಯಾತಿಃ ಕೌಂತೇಯ ತಥಾ ತ್ವಮಪಿ ಪಾಂಡವ।।
ಕೌಂತೇಯ! ಪಾಂಡವ! ರಾಜ ಭಗೀರಥನಂತೆ ಮತ್ತು ಗಯ, ಯಯಾತಿ ಮೊದಲಾದ ರಾಜರಂತೆ ನೀನೂ ಕೂಡ ಆಗುತ್ತೀಯೆ.”
03090014 ಯುಧಿಷ್ಠಿರ ಉವಾಚ।
03090014a ನ ಹರ್ಷಾತ್ಸಂಪ್ರಪಶ್ಯಾಮಿ ವಾಕ್ಯಸ್ಯಾಸ್ಯೋತ್ತರಂ ಕ್ವ ಚಿತ್।
03090014c ಸ್ಮರೇದ್ಧಿ ದೇವರಾಜೋ ಯಂ ಕಿಂ ನಾಮಾಭ್ಯಧಿಕಂ ತತಃ।।
ಯುಧಿಷ್ಠಿರನು ಹೇಳಿದನು: “ಸಂತೋಷದಿಂದ ನನಗೆ ಈ ಮಾತಿಗೆ ಉತ್ತರವೇ ಕಾಣುತ್ತಿಲ್ಲ. ದೇವರಾಜನು ನೆನಪಿಸಿಕೊಂಡಿದ್ದಾನೆ ಎಂದರೆ ಇದಕ್ಕಿಂದ ಹೆಚ್ಚಿನದು ಏನಿದೆ?
03090015a ಭವತಾ ಸಂಗಮೋ ಯಸ್ಯ ಭ್ರಾತಾ ಯಸ್ಯ ಧನಂಜಯಃ।
03090015c ವಾಸವಃ ಸ್ಮರತೇ ಯಸ್ಯ ಕೋ ನಾಮಾಭ್ಯಧಿಕಸ್ತತಃ।।
ಧನಂಜಯನ ಭ್ರಾತನನ್ನು ಇಂದ್ರನೇ ನೆನಪಿಸಿಕೊಂಡ ಮತ್ತು ನೀನು ಭೇಟಿಯಾದ ನನ್ನಂಥವನಿಗೆ ಇದಕ್ಕಿಂದಲೂ ಅಧಿಕವಾದುದು ಏನಿದೆ?
03090016a ಯಚ್ಚ ಮಾಂ ಭಗವಾನಾಹ ತೀರ್ಥಾನಾಂ ದರ್ಶನಂ ಪ್ರತಿ।
03090016c ಧೌಮ್ಯಸ್ಯ ವಚನಾದೇಷಾ ಬುದ್ಧಿಃ ಪೂರ್ವಂ ಕೃತೈವ ಮೇ।।
ತೀರ್ಥದರ್ಶನದ ಕುರಿತು ನೀನು ನನಗೆ ಹೇಳಿದುದಕ್ಕೆ ಮೊದಲೇ ನಾನು ಧೌಮ್ಯನ ಮಾತಿನಂತೆ ಮನಸ್ಸುಮಾಡಿದ್ದೆ.
03090017a ತದ್ಯದಾ ಮನ್ಯಸೇ ಬ್ರಹ್ಮನ್ಗಮನಂ ತೀರ್ಥದರ್ಶನೇ।
03090017c ತದೈವ ಗಂತಾಸ್ಮಿ ದೃಢಮೇಷ ಮೇ ನಿಶ್ಚಯಃ ಪರಃ।।
ಬ್ರಹ್ಮನ್! ತೀರ್ಥದರ್ಶನಕ್ಕೆ ಹೋಗಲು ನೀನು ಎಂದು ಮನಸ್ಸು ಮಾಡುತ್ತೀಯೋ ಅಂದೇ ನಾನೂ ಕೂಡ ನಿಶ್ವಯವಾಗಿಯೂ ಹೊರಡುತ್ತೇನೆ.””
03090018 ವೈಶಂಪಾಯನ ಉವಾಚ।
03090018a ಗಮನೇ ಕೃತಬುದ್ಧಿಂ ತಂ ಪಾಂಡವಂ ಲೋಮಶೋಽಬ್ರವೀತ್।
03090018c ಲಘುರ್ಭವ ಮಹಾರಾಜ ಲಘುಃ ಸ್ವೈರಂ ಗಮಿಷ್ಯಸಿ।।
ವೈಶಂಪಾಯನನು ಹೇಳಿದನು: “ಹೊರಡಲು ಮನಸ್ಸುಮಾಡಿದ್ದ ಆ ಪಾಂಡವನಿಗೆ ಲೋಮಶನು ಹೇಳಿದನು: “ಹಗುರಾಗು ಮಹಾರಾಜ! ಹಗುರಾದರೆ ಸುಲಭವಾಗಿ ಹೋಗಬಹುದು.”
03090019 ಯುಧಿಷ್ಠಿರ ಉವಾಚ।
03090019a ಬಿಕ್ಷಾಭುಜೋ ನಿವರ್ತಂತಾಂ ಬ್ರಾಹ್ಮಣಾ ಯತಯಶ್ಚ ಯೇ।
03090019c ಯೇ ಚಾಪ್ಯನುಗತಾಃ ಪೌರಾ ರಾಜಭಕ್ತಿಪುರಸ್ಕೃತಾಃ।।
ಯುಧಿಷ್ಠಿರನು ಹೇಳಿದನು: “ಭಿಕ್ಷಾರ್ಥಿಗಳಾದ ಬ್ರಾಹ್ಮಣರು ಮತ್ತು ಯತಿಗಳು, ಮತ್ತು ರಾಜಭಕ್ತಿಯಿಂದ ನನ್ನನ್ನು ಗೌರವಿಸಿ ಅನುಸರಿಸಿ ಬಂದ ಪೌರಜನರೂ ಹಿಂದಿರುಗಲಿ.
03090020a ಧೃತರಾಷ್ಟ್ರಂ ಮಹಾರಾಜಮಭಿಗಚ್ಚಂತು ಚೈವ ತೇ।
03090020c ಸ ದಾಸ್ಯತಿ ಯಥಾಕಾಲಮುಚಿತಾ ಯಸ್ಯ ಯಾ ಭೃತಿಃ।।
ಅವರು ಮಹಾರಾಜ ಧೃತರಾಷ್ಟ್ರನಲ್ಲಿಗೆ ಹೋಗಲಿ. ಅವರಿಗೆ ಯಥಾಕಾಲದಲ್ಲಿ ಉಚಿತವಾಗಿ ದೊರೆಯಬೇಕಾದುದನ್ನು ಅವನು ನೀಡುತ್ತಾನೆ.
03090021a ಸ ಚೇದ್ಯಥೋಚಿತಾಂ ವೃತ್ತಿಂ ನ ದದ್ಯಾನ್ಮನುಜೇಶ್ವರಃ।
03090021c ಅಸ್ಮತ್ಪ್ರಿಯಹಿತಾರ್ಥಾಯ ಪಾಂಚಾಲ್ಯೋ ವಃ ಪ್ರದಾಸ್ಯತಿ।।
ಒಂದುವೇಳೆ ಆ ಮನುಜೇಶ್ವರನು ಅವರಿಗೆ ಯಥೋಚಿತವಾದ ವೃತ್ತಿಯನ್ನು ಕೊಡದಿದ್ದರೆ ನನ್ನ ಪ್ರೀತಿಹಿತಾರ್ಥವಾಗಿ ಪಾಂಚಾಲನು ಅವರಿಗೆ ನೀಡುತ್ತಾನೆ.””
03090022 ವೈಶಂಪಾಯನ ಉವಾಚ।
03090022a ತತೋ ಭೂಯಿಷ್ಠಶಃ ಪೌರಾ ಗುರುಭಾರಸಮಾಹಿತಾಃ।
03090022c ವಿಪ್ರಾಶ್ಚ ಯತಯೋ ಯುಕ್ತಾ ಜಗ್ಮುರ್ನಾಗಪುರಂ ಪ್ರತಿ।।
ವೈಶಂಪಾಯನನು ಹೇಳಿದನು: “ಅನಂತರ ತಮ್ಮ ಭಾರವನ್ನು ಹೊತ್ತುಕೊಂಡು ಪೌರಜನರು, ವಿಪ್ರರು ಮತ್ತು ಯತಿಗಳು ತಮ್ಮ ಅನುಯಾಯಿಗಳೊಂದಿಗೆ ಒಂದಾಗಿ ನಾಗಪುರದ ಕಡೆ ಹೊರಟರು.
03090023a ತಾನ್ಸರ್ವಾನ್ಧರ್ಮರಾಜಸ್ಯ ಪ್ರೇಮ್ಣಾ ರಾಜಾಂಬಿಕಾಸುತಃ।
03090023c ಪ್ರತಿಜಗ್ರಾಹ ವಿಧಿವದ್ಧನೈಶ್ಚ ಸಮತರ್ಪಯತ್।।
ಧರ್ಮರಾಜನ ಮೇಲಿನ ಪ್ರೀತಿಯಿಂದ ಅವರೆಲ್ಲರನ್ನೂ ರಾಜ ಅಂಬಿಕಾಸುತನು ಸ್ವಾಗತಿಸಿ ವಿವಿಧ ಧನಗಳಿಂದ ತೃಪ್ತಿಪಡಿಸಿದನು.
03090024a ತತಃ ಕುಂತೀಸುತೋ ರಾಜಾ ಲಘುಭಿರ್ಬ್ರಾಹ್ಮಣೈಃ ಸಹ।
03090024c ಲೋಮಶೇನ ಚ ಸುಪ್ರೀತಸ್ತ್ರಿರಾತ್ರಂ ಕಾಮ್ಯಕೇಽವಸತ್।।
ಅನಂತರ ಕುಂತೀಸುತ ರಾಜನು ಸ್ವಲ್ಪವೇ ಬ್ರಾಹ್ಮಣರು ಮತ್ತು ಲೋಮಶನೊಂದಿಗೆ ಸಂತೋಷದಿಂದ ಕಾಮ್ಯಕದಲ್ಲಿ ಮೂರು ರಾತ್ರಿಗಳನ್ನು ಕಳೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶಸಂವಾದೇ ನವತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶಸಂವಾದ ಎನ್ನುವ ತೊಂಭತ್ತನೆಯ ಅಧ್ಯಾಯವು.