ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 87
ಸಾರ
ಧೌಮ್ಯನು ಯುಧಿಷ್ಠಿರನಿಗೆ ಪಶ್ಚಿಮದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (1-15).
03087001 ಧೌಮ್ಯ ಉವಾಚ।
03087001a ಅವಂತಿಷು ಪ್ರತೀಚ್ಯಾಂ ವೈ ಕೀರ್ತಯಿಷ್ಯಾಮಿ ತೇ ದಿಶಿ।
03087001c ಯಾನಿ ತತ್ರ ಪವಿತ್ರಾಣಿ ಪುಣ್ಯಾನ್ಯಾಯತನಾನಿ ಚ।।
ಧೌಮ್ಯನು ಹೇಳಿದನು: “ಈಗ ನಾನು ಪಶ್ಚಿಮದಿಕ್ಕಿನಲ್ಲಿ ಅವಂತಿಯಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರಗಳ ಕುರಿತು ಹೇಳುತ್ತೇನೆ.
03087002a ಪ್ರಿಯಂಗ್ವಾಮ್ರವನೋಪೇತಾ ವಾನೀರವನಮಾಲಿನೀ।
03087002c ಪ್ರತ್ಯಕ್ಸ್ರೋತಾ ನದೀ ಪುಣ್ಯಾ ನರ್ಮದಾ ತತ್ರ ಭಾರತ।।
ಭಾರತ! ಪಶ್ಚಿಮದಿಕ್ಕಿನಲ್ಲಿ ಹರಿಯುವ, ಪ್ರಿಯಂಗು ಬಳ್ಳಿಗಳು ಮತ್ತು ಮಾವಿನ ವನಗಳಿಂದ ಕೂಡಿದ, ಬೆತ್ತದ ವನಗಳ ತೀರದಲ್ಲಿರುವ ನರ್ಮದೆಯು ಪುಣ್ಯ ನದಿ.
03087003a ನಿಕೇತಃ ಖ್ಯಾಯತೇ ಪುಣ್ಯೋ ಯತ್ರ ವಿಶ್ರವಸೋ ಮುನೇಃ।
03087003c ಜಜ್ಞೇ ಧನಪತಿರ್ಯತ್ರ ಕುಬೇರೋ ನರವಾಹನಃ।।
ಆ ಪುಣ್ಯ ಕ್ಷೇತ್ರದಲ್ಲಿಯೇ ವಿಶ್ರವಸ ಮುನಿಗೆ ಧನಪತಿ, ನರವಾಹನ ಕುಬೇರನು ಜನಿಸಿದನು.
03087004a ವೈಡೂರ್ಯಶಿಖರೋ ನಾಮ ಪುಣ್ಯೋ ಗಿರಿವರಃ ಶುಭಃ।
03087004c ದಿವ್ಯಪುಷ್ಪಫಲಾಸ್ತತ್ರ ಪಾದಪಾ ಹರಿತಚ್ಚದಾಃ।।
ಅಲ್ಲಿ ದಿವ್ಯಪುಷ್ಪಫಲಗಳಿಂದೊಡಗೂಡಿದ ಹಸಿರುಬಣ್ಣದ ಮರಗಳಿರುವ ವೈಡೂರ್ಯಶಿಖರ ಎನ್ನುವ ಪುಣ್ಯ, ಶುಭ ಮತ್ತು ಶ್ರೇಷ್ಠ ಪರ್ವತವಿದೆ.
03087005a ತಸ್ಯ ಶೈಲಸ್ಯ ಶಿಖರೇ ಸರಸ್ತತ್ರ ಚ ಧೀಮತಃ।
03087005c ಪ್ರಫುಲ್ಲನಲಿನಂ ರಾಜನ್ದೇವಗಂಧರ್ವಸೇವಿತಂ।।
ರಾಜನ್! ಆ ಶೈಲದ ಶಿಖರದಲ್ಲಿ ದೇವಗಂಧರ್ವಸೇವಿತ, ಅರಳಿದ ತಾವರೆಗಳಿಂದ ಕೂಡಿದ ಧೀಮಂತ ಸರೋವರವಿದೆ.
03087006a ಬಹ್ವಾಶ್ಚರ್ಯಂ ಮಹಾರಾಜ ದೃಶ್ಯತೇ ತತ್ರ ಪರ್ವತೇ।
03087006c ಪುಣ್ಯೇ ಸ್ವರ್ಗೋಪಮೇ ದಿವ್ಯೇ ನಿತ್ಯಂ ದೇವರ್ಷಿಸೇವಿತೇ।।
ಮಹಾರಾಜ! ಆ ಪರ್ವತದಲ್ಲಿ ಸ್ವರ್ಗಕ್ಕೆ ಸಮಾನವಾದ ಪುಣ್ಯಕರ, ದಿವ್ಯ, ನಿತ್ಯವೂ ದೇವರ್ಷಿ ಸೇವಿತ ಬಹಳಷ್ಟು ಆಶ್ಚರ್ಯಗಳಿವೆ.
03087007a ಹ್ರದಿನೀ ಪುಣ್ಯತೀರ್ಥಾ ಚ ರಾಜರ್ಷೇಸ್ತತ್ರ ವೈ ಸರಿತ್।
03087007c ವಿಶ್ವಾಮಿತ್ರನದೀ ಪಾರಾ ಪುಣ್ಯಾ ಪರಪುರಂಜಯ।।
03087008a ಯಸ್ಯಾಸ್ತೀರೇ ಸತಾಂ ಮಧ್ಯೇ ಯಯಾತಿರ್ನಹುಷಾತ್ಮಜಃ।
03087008c ಪಪಾತ ಸ ಪುನರ್ಲೋಕಾಽಲ್ಲೇಭೇ ಧರ್ಮಾನ್ಸನಾತನಾನ್।।
ಪರಪುರಂಜಯ! ಅಲ್ಲಿಯೇ ಸರೋವರಗಳಿಂದ ಕೂಡಿದ ಪುಣ್ಯತೀರ್ಥ ರಾಜರ್ಷಿ ವಿಶ್ವಾಮಿತ್ರನದಿಯು ಹರಿಯುತ್ತದೆ. ಅದರ ದಡದಲ್ಲಿಯೇ ಸತ್ಯವಂತರ ನಡುವೆ ನಹುಷನ ಮಗ ಯಯಾತಿಯು ಕೆಳಗೆ ಬಿದ್ದು ಪುನಃ ಧರ್ಮ ಸನಾತನ ಲೋಕಗಳನ್ನು ಪಡೆದನು.
03087009a ತತ್ರ ಪುಣ್ಯಹ್ರದಸ್ತಾತ ಮೈನಾಕಶ್ಚೈವ ಪರ್ವತಃ।
03087009c ಬಹುಮೂಲಫಲೋ ವೀರ ಅಸಿತೋ ನಾಮ ಪರ್ವತಃ।।
ವೀರ! ಮಗೂ! ಅಲ್ಲಿ ಪುಣ್ಯ ಸರೋವರವೂ ಮೈನಾಕ ಪರ್ವತವೂ ಮತ್ತು ಬಹಳಷ್ಟು ಫಲಮೂಲಗಳಿರುವ ಅಸಿತ ಎಂಬ ಹೆಸರಿನ ಪರ್ವತವೂ ಇವೆ.
03087010a ಆಶ್ರಮಃ ಕಕ್ಷಸೇನಸ್ಯ ಪುಣ್ಯಸ್ತತ್ರ ಯುಧಿಷ್ಠಿರ।
03087010c ಚ್ಯವನಸ್ಯಾಶ್ರಮಶ್ಚೈವ ಖ್ಯಾತಃ ಸರ್ವತ್ರ ಪಾಂಡವ।।
03087010e ತತ್ರಾಲ್ಪೇನೈವ ಸಿಧ್ಯಂತಿ ಮಾನವಾಸ್ತಪಸಾ ವಿಭೋ।
ಯುಧಿಷ್ಠಿರ! ಪಾಂಡವ! ಅಲ್ಲಿ ಕಕ್ಷಸೇನನ ಪುಣ್ಯಾಶ್ರಮವೂ ಮತ್ತು ಸರ್ವತ್ರ ಖ್ಯಾತ ಚ್ಯವನನ ಆಶ್ರಮವೂ ಇವೆ. ವಿಭೋ! ಅಲ್ಲಿ ಸ್ವಲ್ಪವೇ ತಪಸ್ಸಿನಿಂದ ಮಾನವರು ಸಿದ್ಧಿಯನ್ನು ಹೊಂದುತ್ತಾರೆ.
03087011a ಜಂಬೂಮಾರ್ಗೋ ಮಹಾರಾಜ ಋಷೀಣಾಂ ಭಾವಿತಾತ್ಮನಾಂ।।
03087011c ಆಶ್ರಮಃ ಶಾಮ್ಯತಾಂ ಶ್ರೇಷ್ಠ ಮೃಗದ್ವಿಜಗಣಾಯುತಃ।
ಮಹಾರಾಜ! ಅಲ್ಲಿ ಋಷಿಗಳ ಮತ್ತು ಭಾವಿತಾತ್ಮರ ಆಶ್ರಮಗಳಿಂದೊಡಗೂಡಿದ, ಮೃಗ ಪಕ್ಷಿಗಣಗಳಿಂದೊಡಗೂಡಿದ ಜಂಬೂಮಾರ್ಗವಿದೆ.
03087012a ತತಃ ಪುಣ್ಯತಮಾ ರಾಜನ್ಸತತಂ ತಾಪಸಾಯುತಾ।।
03087012c ಕೇತುಮಾಲಾ ಚ ಮೇಧ್ಯಾ ಚ ಗಂಗಾರಣ್ಯಂ ಚ ಭೂಮಿಪ।
ರಾಜನ್! ಭೂಮಿಪ! ಅಲ್ಲಿಯೇ ಸತತವೂ ತಾಪಸರಿಂದೊಡಗೂಡಿದ ಕೇತುಮಾಲ, ಮೇಧ್ಯ ಮತ್ತು ಗಂಗಾರಣ್ಯಗಳಿವೆ.
03087012e ಖ್ಯಾತಂ ಚ ಸೈಂಧವಾರಣ್ಯಂ ಪುಣ್ಯಂ ದ್ವಿಜನಿಷೇವಿತಂ।।
03087013a ಪಿತಾಮಹಸರಃ ಪುಣ್ಯಂ ಪುಷ್ಕರಂ ನಾಮ ಭಾರತ।
03087013c ವೈಖಾನಸಾನಾಂ ಸಿದ್ಧಾನಾಮೃಷೀಣಾಮಾಶ್ರಮಃ ಪ್ರಿಯಃ।।
ಭಾರತ! ಅಲ್ಲಿಯೇ ಪುಣ್ಯವೂ ದ್ವಿಜಸೇವಿತವೂ ಆದ ಖ್ಯಾತ ಸೈಂಧವಾರಣ್ಯ, ಪುಷ್ಕರ ಎಂಬ ಹೆಸರಿನ ವೈಖಾನಸರ, ಸಿದ್ಧರ ಮತ್ತು ಋಷಿಗಳ ಪ್ರಿಯ ಆಶ್ರಮ ಪಿತಾಮಹ ಬ್ರಹ್ಮನ ಪುಣ್ಯ ಸರೋವರವಿದೆ.
03087014a ಅಪ್ಯತ್ರ ಸಂಸ್ತವಾರ್ಥಾಯ ಪ್ರಜಾಪತಿರಥೋ ಜಗೌ।
03087014c ಪುಷ್ಕರೇಷು ಕುರುಶ್ರೇಷ್ಠ ಗಾಥಾಂ ಸುಕೃತಿನಾಂ ವರ।।
ಕುರುಶ್ರೇಷ್ಠ! ಸುಕೃತರಲ್ಲಿ ಶ್ರೇಷ್ಠ! ಪುಷ್ಕರವನ್ನು ಹೊಗಳಿ ಪ್ರಜಾಪತಿಯು ಹೇಳಿದ ಶ್ಲೋಕವಿದೆ. ಕೇಳು.
03087015a ಮನಸಾಪ್ಯಭಿಕಾಮಸ್ಯ ಪುಷ್ಕರಾಣಿ ಮನಸ್ವಿನಃ।
03087015c ಪಾಪಾಣಿ ವಿಪ್ರಣಶ್ಯಂತಿ ನಾಕಪೃಷ್ಠೇ ಚ ಮೋದತೇ।।
“ಮನಸ್ಸಿನಲ್ಲಿಯಾದರೂ ಪುಷ್ಕರವನ್ನು ಬಯಸುವವನು ಎಲ್ಲ ಪಾಪಗಳನ್ನೂ ಕಳಚಿಕೊಂಡು ಸ್ವರ್ಗದಲ್ಲಿ ಮೆರೆಯುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಸಪ್ತಾಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತೇಳನೆಯ ಅಧ್ಯಾಯವು.