ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 83
ಸಾರ
ಪುಲಸ್ತ್ಯನು ಭೀಷ್ಮನಿಗೆ ಹೇಳಿದ ತೀರ್ಥಫಲಗಳು ಮುಂದುವರೆದುದು; ಪುಲಸ್ತ್ಯನು ಅಂತರ್ಧಾನನಾದುದು (1-95). ಲೋಮಶ ಮಹರ್ಷಿಯು ಬರುತ್ತಾನೆ, ಅವನೊಂದಿಗೆ ನೀನೂ ತೀರ್ಥಯಾತ್ರೆಯನ್ನು ಮಾಡು ಎಂದು ಯುಧಿಷ್ಠಿರನಿಗೆ ಹೇಳಿ ನಾರದನು ಹಿಂದಿರುಗಿದುದು (96-114).
03083001 ಪುಲಸ್ತ್ಯ ಉವಾಚ।
03083001a ಅಥ ಸಂಧ್ಯಾಂ ಸಮಾಸಾದ್ಯ ಸಂವೇದ್ಯಂ ತೀರ್ಥಮುತ್ತಮಂ।
03083001c ಉಪಸ್ಪೃಶ್ಯ ನರೋ ವಿದ್ವಾನ್ಭವೇನ್ನಾಸ್ತ್ಯತ್ರ ಸಂಶಯಃ।।
ಪುಲಸ್ತ್ಯನು ಹೇಳಿದನು: “ಅನಂತರ ಉತ್ತಮ ತೀರ್ಥ ಸಂವೇಧ್ಯಕ್ಕೆ ಸಂಧ್ಯಾಸಮಯದಲ್ಲಿ ಹೋಗಿ ಸ್ನಾನಮಾಡಿದ ನರನು ವಿದ್ವಾನನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03083002a ರಾಮಸ್ಯ ಚ ಪ್ರಸಾದೇನ ತೀರ್ಥಂ ರಾಜನ್ಕೃತಂ ಪುರಾ।
03083002c ತಲ್ಲೋಹಿತ್ಯಂ ಸಮಾಸಾದ್ಯ ವಿಂದ್ಯಾದ್ಬಹು ಸುವರ್ಣಕಂ।।
ರಾಜನ್! ಹಿಂದೆ ರಾಮನ ಪ್ರಸಾದದಿಂದ ರಚಿಸಲ್ಪಟ್ಟ ಲೋಹಿತ ನದಿಗೆ ಹೋದರೆ ಬಹಳಷ್ಟು ಚಿನ್ನವನ್ನು ಪಡೆಯುತ್ತಾರೆ.
03083003a ಕರತೋಯಾಂ ಸಮಾಸಾದ್ಯ ತ್ರಿರಾತ್ರೋಪೋಷಿತೋ ನರಃ।
03083003c ಅಶ್ವಮೇಧಮವಾಪ್ನೋತಿ ಕೃತೇ ಪೈತಾಮಹೇ ವಿಧೌ।।
ಕರತೋಯಕ್ಕೆ ಹೋಗಿ ಅಲ್ಲಿ ಮೂರುರಾತ್ರಿಗಳು ಉಳಿದು ಪಿತೃಗಳ ಕಾರ್ಯವನ್ನು ವಿಧಿವತ್ತಾಗಿ ಮಾಡಿದ ನರನು ಅಶ್ವಮೇಧದ ಫಲವನ್ನು ಪಡೆಯುತ್ತಾನೆ.
03083004a ಗಂಗಾಯಾಸ್ತ್ವಥ ರಾಜೇಂದ್ರ ಸಾಗರಸ್ಯ ಚ ಸಂಗಮೇ।
03083004c ಅಶ್ವಮೇಧಂ ದಶಗುಣಂ ಪ್ರವದಂತಿ ಮನೀಷಿಣಃ।।
ರಾಜೇಂದ್ರ! ಗಂಗಾ ಮತ್ತು ಸಾಗರಗಳ ಸಂಗಮದಲ್ಲಿ ಅಶ್ವಮೇಧದ ಫಲವು ಹತ್ತುಪಟ್ಟಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ.
03083005a ಗಂಗಾಯಾಸ್ತ್ವಪರಂ ದ್ವೀಪಂ ಪ್ರಾಪ್ಯ ಯಃ ಸ್ನಾತಿ ಭಾರತ।
03083005c ತ್ರಿರಾತ್ರೋಪೋಷಿತೋ ರಾಜನ್ಸರ್ವಕಾಮಾನವಾಪ್ನುಯಾತ್।।
ಭಾರತ! ರಾಜನ್! ಗಂಗೆಯ ಇನ್ನೊಂದು ದಡದಲ್ಲಿರುವ ದ್ವೀಪಕ್ಕೆ ಹೋಗಿ ಅಲ್ಲಿ ಸ್ನಾನಮಾಡಿ, ಮೂರುರಾತ್ರಿಗಳು ತಂಗಿದವನು ಸರ್ವ ಕಾಮಗಳನ್ನು ಈಡೇರಿಸಿಕೊಳ್ಳುತ್ತಾನೆ.
03083006a ತತೋ ವೈತರಣೀಂ ಗತ್ವಾ ನದೀಂ ಪಾಪಪ್ರಮೋಚನೀಂ।
03083006c ವಿರಜಂ ತೀರ್ಥಮಾಸಾದ್ಯ ವಿರಾಜತಿ ಯಥಾ ಶಶೀ।।
ಅನಂತರ ಪಾಪಪ್ರಮೋಚನೀ ವೈತರಣಿಗೆ ಹೋಗಿ, ವಿರಜ ತೀರ್ಥಕ್ಕೆ ಹೋದರೆ ಶಶಿಯಂತೆ ವಿರಾಜಿಸುತ್ತಾನೆ.
03083007a ಪ್ರಭವೇಚ್ಚ ಕುಲೇ ಪುಣ್ಯೇ ಸರ್ವಪಾಪಂ ವ್ಯಪೋಹತಿ।
03083007c ಗೋಸಹಸ್ರಫಲಂ ಲಬ್ಧ್ವಾ ಪುನಾತಿ ಚ ಕುಲಂ ನರಃ।।
ಅವನು ಪುಣ್ಯಕುಲದಲ್ಲಿ ಹುಟ್ಟುತ್ತಾನೆ ಮತ್ತು ಸರ್ವಪಾಪಗಳನ್ನು ತೊಳೆದುಕೊಳ್ಳುತ್ತಾನೆ. ಆ ನರನು ಸಹಸ್ರಗೋದಾನದ ಫಲವನ್ನು ಪಡೆದು ತನ್ನ ಕುಲವನ್ನೂ ಪುನೀತಗೊಳಿಸುತ್ತಾನೆ.
03083008a ಶೋಣಸ್ಯ ಜ್ಯೋತಿರಥ್ಯಾಶ್ಚ ಸಂಗಮೇ ನಿವಸಂ ಶುಚಿಃ।
03083008c ತರ್ಪಯಿತ್ವಾ ಪಿತೄನ್ದೇವಾನಗ್ನಿಷ್ಟೋಮಫಲಂ ಲಭೇತ್।।
ಶೋಣ ಮತ್ತು ಜ್ಯೋತಿರಥದ ಸಂಗಮದಲ್ಲಿ ಶುಚಿಯಾಗಿ ವಾಸಿಸಿ, ಪಿತೃ ಮತ್ತು ದೇವತೆಗಳಿಗೆ ತರ್ಪಣೆಯನ್ನಿತ್ತರೆ ಅಗ್ನಿಷ್ಟೋಮಫಲವು ದೊರೆಯುತ್ತದೆ.
03083009a ಶೋಣಸ್ಯ ನರ್ಮದಾಯಾಶ್ಚ ಪ್ರಭವೇ ಕುರುನಂದನ।
03083009c ವಂಶಗುಲ್ಮ ಉಪಸ್ಪೃಶ್ಯ ವಾಜಿಮೇಧಫಲಂ ಲಭೇತ್।।
ಕುರುನಂದನ! ಶೋಣ ಮತ್ತು ನರ್ಮದಾ ನದಿಗಳ ಉದ್ಭವಸ್ಥಾನ ವಂಶಗುಲ್ಮದಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ.
03083010a ಋಷಭಂ ತೀರ್ಥಮಾಸಾದ್ಯ ಕೋಶಲಾಯಾಂ ನರಾಧಿಪ।
03083010c ವಾಜಪೇಯಮವಾಪ್ನೋತಿ ತ್ರಿರಾತ್ರೋಪೋಷಿತೋ ನರಃ।।
ನರಾಧಿಪ! ಕೋಶಲದ ಋಷಭ ತೀರ್ಥಕ್ಕೆ ಹೋಗಿ ಮೂರು ರಾತ್ರಿಗಳು ತಂಗಿದ ನರನು ವಾಜಪೇಯದ ಫಲವನ್ನು ಪಡೆಯುತ್ತಾನೆ.
03083011a ಕೋಶಲಾಯಾಂ ಸಮಾಸಾದ್ಯ ಕಾಲತೀರ್ಥ ಉಪಸ್ಪೃಶೇತ್।
03083011c ವೃಶಭೈಕಾದಶಫಲಂ ಲಭತೇ ನಾತ್ರ ಸಂಶಯಃ।।
ಕೋಶಲದಲ್ಲಿಯೇ ಕಾಲತೀರ್ಥಕ್ಕೆ ಹೋದರೆ ಹನ್ನೊಂದು ಹೋರಿಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
03083012a ಪುಷ್ಪವತ್ಯಾಮುಪಸ್ಪೃಶ್ಯ ತ್ರಿರಾತ್ರೋಪೋಷಿತೋ ನರಃ।
03083012c ಗೋಸಹಸ್ರಫಲಂ ವಿಂದ್ಯಾತ್ಕುಲಂ ಚೈವ ಸಮುದ್ಧರೇತ್।।
ಪುಷ್ಪವತಿಯಲ್ಲಿ ಸ್ನಾನಮಾಡಿ ಮೂರುರಾತ್ರಿಗಳು ತಂಗಿದ ನರನಿಗೆ ಸಹಸ್ರ ಗೋದಾನಫಲವು ದೊರೆಯುತ್ತದೆ ಮತ್ತು ಕುಲವೂ ಉದ್ದಾರವಾಗುತ್ತದೆ.
03083013a ತತೋ ಬದರಿಕಾತೀರ್ಥೇ ಸ್ನಾತ್ವಾ ಪ್ರಯತಮಾನಸಃ।
03083013c ದೀರ್ಘಮಾಯುರವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಅನಂತರ ಪ್ರಯತಮಾನಸನಾಗಿ ಬದರಿಕಾ ತೀರ್ಥದಲ್ಲಿ ಸ್ನಾನಮಾಡಿದರೆ ದೀರ್ಘಾಯಸ್ಸು ದೊರೆಯುತ್ತದೆ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾರೆ.
03083014a ತತೋ ಮಹೇಂದ್ರಮಾಸಾದ್ಯ ಜಾಮದಗ್ನ್ಯನಿಷೇವಿತಂ।
03083014c ರಾಮತೀರ್ಥೇ ನರಃ ಸ್ನಾತ್ವಾ ವಾಜಿಮೇಧಫಲಂ ಲಭೇತ್।।
ಜಾಮದಗ್ನಿ ರಾಮನು ವಾಸಿಸುತ್ತಿದ್ದ ಮಹೇಂದ್ರಕ್ಕೆ ಹೋಗಿ ರಾಮತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ಅಶ್ವಮೇಧದ ಫಲವು ದೊರೆಯುತ್ತದೆ.
03083015a ಮತಂಗಸ್ಯ ತು ಕೇದಾರಸ್ತತ್ರೈವ ಕುರುನಂದನ।
03083015c ತತ್ರ ಸ್ನಾತ್ವಾ ನರೋ ರಾಜನ್ಗೋಸಹಸ್ರಫಲಂ ಲಭೇತ್।।
ಕುರುನಂದನ! ರಾಜನ್! ಅಲ್ಲಿಯೇ ಮತಂಗ ಕೇದಾರದಲ್ಲಿ ಸ್ನಾನಮಾಡಿದ ನರನಿಗೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03083016a ಶ್ರೀಪರ್ವತಂ ಸಮಾಸಾದ್ಯ ನದೀತೀರ ಉಪಸ್ಪೃಶೇತ್।
03083016c ಅಶ್ವಮೇಧಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಶ್ರೀಪರ್ವತಕ್ಕೆ ಹೋಗಿ ಅಲ್ಲಿ ನದೀತೀರದಲ್ಲಿ ಸ್ನಾನಮಾಡಿದರೆ ಅಶ್ವಮೇಧಫಲವು ದೊರೆಯುತ್ತದೆ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾನೆ.
03083017a ಶ್ರೀಪರ್ವತೇ ಮಹಾದೇವೋ ದೇವ್ಯಾ ಸಹ ಮಹಾದ್ಯುತಿಃ।
03083017c ನ್ಯವಸತ್ಪರಮಪ್ರೀತೋ ಬ್ರಹ್ಮಾ ಚ ತ್ರಿದಶೈರ್ವೃತಃ।।
ಶ್ರೀ ಪರ್ವತದಲ್ಲಿ ದೇವಿಯ ಸಹಿತ ಮಹಾದ್ಯುತಿ ಮಹಾದೇವನು ಬ್ರಹ್ಮ ಮತ್ತು ಮೂವತ್ತು ದೇವತೆಗಳಿಂದ ಆವೃತನಾಗಿ ಪರಮಪ್ರೀತನಾಗಿ ವಾಸಿಸುತ್ತಾನೆ.
03083018a ತತ್ರ ದೇವಹ್ರದೇ ಸ್ನಾತ್ವಾ ಶುಚಿಃ ಪ್ರಯತಮಾನಸಃ।
03083018c ಅಶ್ವಮೇಧಮವಾಪ್ನೋತಿ ಪರಾಂ ಸಿದ್ಧಿಂ ಚ ಗಚ್ಚತಿ।।
ಅಲ್ಲಿ ದೇವಸರೋವರದಲ್ಲಿ ಶುಚಿಯಾಗಿಯೂ ಪ್ರಯತಾತ್ಮನಾಗಿಯೂ ಆಗಿದ್ದು ಸ್ನಾನಮಾಡಿದರೆ ಅಶ್ವಮೇದಫಲವು ದೊರೆಯುತ್ತದೆ ಮತ್ತು ಪರಮ ಸಿದ್ಧಿಯನ್ನು ಪಡೆಯುತ್ತಾನೆ.
03083019a ಋಷಭಂ ಪರ್ವತಂ ಗತ್ವಾ ಪಾಂಡ್ಯೇಷು ಸುರಪೂಜಿತಂ।
03083019c ವಾಜಪೇಯಮವಾಪ್ನೋತಿ ನಾಕಪೃಷ್ಠೇ ಚ ಮೋದತೇ।।
ಪಾಂಡ್ಯದಲ್ಲಿ ಸುರಪೂಜಿತ ಋಷಭಪರ್ವತಕ್ಕೆ ಹೋದರೆ ವಾಜಪೇಯಫಲವು ದೊರೆಯುತ್ತದೆ ಮತ್ತು ಸ್ವರ್ಗದ್ವಾರದಲ್ಲಿ ಮೋದಿಸುತ್ತಾರೆ.
03083020a ತತೋ ಗಚ್ಚೇತ ಕಾವೇರೀಂ ವೃತಾಮಪ್ಸರಸಾಂ ಗಣೈಃ।
03083020c ತತ್ರ ಸ್ನಾತ್ವಾ ನರೋ ರಾಜನ್ಗೋಸಹಸ್ರಫಲಂ ಲಭೇತ್।।
ಅನಂತರ ಅಪ್ಸರ ಗಣಗಳ ಬೀಡಾಗಿದ್ದ ಕಾವೇರಿಗೆ ಹೋಗಬೇಕು. ರಾಜನ್! ಅಲ್ಲಿ ಸ್ನಾನಮಾಡಿದ ನರನಿಗೆ ಸಹಸ್ರಗೋದಾನದ ಫಲವು ದೊರೆಯುತ್ತದೆ.
03083021a ತತಸ್ತೀರೇ ಸಮುದ್ರಸ್ಯ ಕನ್ಯಾತೀರ್ಥ ಉಪಸ್ಪೃಶೇತ್।
03083021c ತತ್ರೋಪಸ್ಪೃಶ್ಯ ರಾಜೇಂದ್ರ ಸರ್ವಪಾಪೈಃ ಪ್ರಮುಚ್ಯತೇ।।
ಅನಂತರ ಸಮುದ್ರದೀರದಲ್ಲಿ ಕನ್ಯಾತೀರ್ಥದಲ್ಲಿ ಸ್ನಾನಮಾಡಬೇಕು. ರಾಜೇಂದ್ರ! ಅಲ್ಲಿ ಸ್ನಾನಮಾಡಿದರೆ ಸರ್ವಪಾಪಗಳಿಂದ ವಿಮೋಚನೆ ದೊರೆಯುತ್ತದೆ.
03083022a ಅಥ ಗೋಕರ್ಣಮಾಸಾದ್ಯ ತ್ರಿಷು ಲೋಕೇಷು ವಿಶ್ರುತಂ।
03083022c ಸಮುದ್ರಮಧ್ಯೇ ರಾಜೇಂದ್ರ ಸರ್ವಲೋಕನಮಸ್ಕೃತಂ।।
03083023a ಯತ್ರ ಬ್ರಹ್ಮಾದಯೋ ದೇವಾ ಋಷಯಶ್ಚ ತಪೋಧನಾಃ।
03083023c ಭೂತಯಕ್ಷಪಿಶಾಚಾಶ್ಚ ಕಿನ್ನರಾಃ ಸಮಹೋರಗಾಃ।।
03083024a ಸಿದ್ಧಚಾರಣಗಂಧರ್ವಾ ಮಾನುಷಾಃ ಪನ್ನಗಾಸ್ತಥಾ।
03083024c ಸರಿತಃ ಸಾಗರಾಃ ಶೈಲಾ ಉಪಾಸಂತ ಉಮಾಪತಿಂ।।
03083025a ತತ್ರೇಶಾನಂ ಸಮಭ್ಯರ್ಚ್ಯ ತ್ರಿರಾತ್ರೋಪೋಷಿತೋ ನರಃ।
03083025c ದಶಾಶ್ವಮೇಧಮಾಪ್ನೋತಿ ಗಾಣಪತ್ಯಂ ಚ ವಿಂದತಿ।।
ಅನಂತರ ಮೂರು ಲೋಕಗಳಲ್ಲಿ ವಿಶ್ರುತ, ಸಮುದ್ರದ ಮಧ್ಯದಲ್ಲಿರುವ ಗೋಕರ್ಣಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳೂ, ಋಷಿಗಳೂ, ತಪೋಧನರೂ, ಭೂತ-ಯಕ್ಷ-ಪಿಶಾಚಿಗಳೂ, ಕಿನ್ನರ-ಉರಗಗಳೂ, ಸಿದ್ದ-ಚಾರಣ-ಗಂಧರ್ವರೂ, ಮನುಷ್ಯ-ಪನ್ನಗಗಳು, ನದಿ-ಸಾಗರ-ಪರ್ವತಗಳು ಉಮಾಪತಿಯನ್ನು ಪೂಜಿಸುತ್ತಾರೆ. ಅಲ್ಲಿ ಈಶನನ್ನು ಅರ್ಚಿಸಿ, ಉಪವಾಸದಲ್ಲಿದ್ದು ಮೂರುರಾತ್ರಿಗಳು ಕಳೆದರೆ ಹತ್ತು ಅಶ್ವಮೇಧಗಳ ಫಲವು ದೊರೆಯುತ್ತದೆ ಮತ್ತು ಗಾಣಪತ್ಯವೂ ದೊರೆಯುತ್ತದೆ.
03083025e ಉಷ್ಯ ದ್ವಾದಶರಾತ್ರಂ ತು ಕೃತಾತ್ಮಾ ಭವತೇ ನರಃ।।
03083026a ತತ ಏವ ತು ಗಾಯತ್ರ್ಯಾಃ ಸ್ಥಾನಂ ತ್ರೈಲೋಕ್ಯವಿಶ್ರುತಂ।
03083026c ತ್ರಿರಾತ್ರಮುಷಿತಸ್ತತ್ರ ಗೋಸಹಸ್ರಫಲಂ ಲಭೇತ್।।
ಹನ್ನೆರಡು ರಾತ್ರಿಗಳನ್ನು ಅಲ್ಲಿ ಕಳೆದ ನರನು ಕೃತಾತ್ಮನಾಗುತ್ತಾನೆ. ಅಲ್ಲಿಂದ ತ್ರೈಲೋಕ್ಯವಿಶ್ರುತ ಗಾಯತ್ರಿಯ ಸ್ಥಾನಕ್ಕೆ ಹೋಗಿ ಅಲ್ಲಿ ಮೂರು ರಾತ್ರಿಗಳು ತಂಗಿದರೆ ಸಾವಿರ ಗೋದಾನದ ಫಲವು ದೊರೆಯುತ್ತದೆ.
03083027a ನಿದರ್ಶನಂ ಚ ಪ್ರತ್ಯಕ್ಷಂ ಬ್ರಾಹ್ಮಣಾನಾಂ ನರಾಧಿಪ।
03083027c ಗಾಯತ್ರೀಂ ಪಠತೇ ಯಸ್ತು ಯೋನಿಸಂಕರಜಸ್ತಥಾ।।
03083027e ಗಾಥಾ ವಾ ಗೀತಿಕಾ ವಾಪಿ ತಸ್ಯ ಸಂಪದ್ಯತೇ ನೃಪ।।
ನರಾಧಿಪ! ಅಲ್ಲಿ ಬ್ರಾಹ್ಮಣರ ಒಂದು ಪ್ರತ್ಯಕ್ಷ ನಿದರ್ಶನವಿದೆ. ನೃಪ! ಯೋನಿಸಂಕರದಿಂದ ಹುಟ್ಟಿದವರು ಅಲ್ಲಿ ಗಾಯತ್ರಿಯನ್ನು ಪಠಿಸಿದರೆ ಅದು ವೇದದಲ್ಲಿರದಂತೆ ಅಥವಾ ಸಾಮಾನ್ಯ ಗಾಯನದಂತೆ ಕೇಳುತ್ತದೆ.
03083028a ಸಂವರ್ತಸ್ಯ ತು ವಿಪ್ರರ್ಷೇರ್ವಾಪೀಮಾಸಾದ್ಯ ದುರ್ಲಭಾಂ।
03083028c ರೂಪಸ್ಯ ಭಾಗೀ ಭವತಿ ಸುಭಗಶ್ಚೈವ ಜಾಯತೇ।।
ದುರ್ಲಭವಾದ ವಿಪ್ರರ್ಷಿ ಸಂವರ್ತನ ಸರೋವರಕ್ಕೆ ಹೋದರೆ ಅತ್ಯಂತ ರೂಪವಂತನಾಗುತ್ತಾನೆ ಮತ್ತು ಪ್ರೇಮದಲ್ಲಿ ಅದೃಷ್ಟವಂತನಾಗುತ್ತಾನೆ.
03083029a ತತೋ ವೇಣ್ಣಾಂ ಸಮಾಸಾದ್ಯ ತರ್ಪಯೇತ್ಪಿತೃದೇವತಾಃ।
03083029c ಮಯೂರಹಂಸಸಂಯುಕ್ತಂ ವಿಮಾನಂ ಲಭತೇ ನರಃ।।
ಅನಂತರ ವೇಣ್ಣವನ್ನು ಸೇರಿ ಅಲ್ಲಿ ಪಿತೃ-ದೇವತೆಗಳಿಗೆ ತರ್ಪಣವನ್ನು ನೀಡಿದ ನರನಿಗೆ ನವಿಲು ಮತ್ತು ಹಂಸಗಳಿಂದ ಎಳೆಯಲ್ಪಟ್ಟ ದಿವ್ಯ ವಿಮಾನವು ದೊರೆಯುತ್ತದೆ.
03083030a ತತೋ ಗೋದಾವರೀಂ ಪ್ರಾಪ್ಯ ನಿತ್ಯಂ ಸಿದ್ಧನಿಷೇವಿತಾಂ।
03083030c ಗವಾಮಯಮವಾಪ್ನೋತಿ ವಾಸುಕೇರ್ಲೋಕಮಾಪ್ನುಯಾತ್।।
ಅನಂತರ ನಿತ್ಯವೂ ಸಿದ್ಧರಿಂದ ಕೂಡಿದ ಗೋದಾವರಿಗೆ ಹೋದರೆ ಗವಾಮಯವು ದೊರೆಯುತ್ತದೆ ಮತ್ತು ವಾಸುಕಿಯ ಲೋಕವು ದೊರೆಯುತ್ತದೆ.
03083031a ವೇಣ್ಣಾಯಾಃ ಸಂಗಮೇ ಸ್ನಾತ್ವಾ ವಾಜಪೇಯಫಲಂ ಲಭೇತ್।
03083031c ವರದಾಸಂಗಮೇ ಸ್ನಾತ್ವಾ ಗೋಸಹಸ್ರಫಲಂ ಲಭೇತ್।।
ವೇಣ್ಣಿಯ ಸಂಗಮದಲ್ಲಿ ಸ್ನಾನಮಾಡಿದರೆ ವಾಜಪೇಯದ ಫಲವು ದೊರೆಯುತ್ತದೆ. ವರದಾ ಸಂಗಮದಲ್ಲಿ ಸ್ನಾನಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03083032a ಬ್ರಹ್ಮಸ್ಥಾನಂ ಸಮಾಸಾದ್ಯ ತ್ರಿರಾತ್ರಮುಷಿತೋ ನರಃ।
03083032c ಗೋಸಹಸ್ರಫಲಂ ವಿಂದೇತ್ಸ್ವರ್ಗಲೋಕಂ ಚ ಗಚ್ಚತಿ।।
ಬ್ರಹ್ಮಸ್ಥಾನಕ್ಕೆ ಹೋಗಿ ಮೂರುರಾತ್ರಿಗಳನ್ನು ಕಳೆದ ನರನಿಗೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ ಮತ್ತು ಅವನು ಸ್ವರ್ಗಲೋಕಕ್ಕೆ ಹೋಗುತ್ತಾನೆ.
03083033a ಕುಶಪ್ಲವನಮಾಸಾದ್ಯ ಬ್ರಹ್ಮಚಾರೀ ಸಮಾಹಿತಃ।
03083033c ತ್ರಿರಾತ್ರಮುಷಿತಃ ಸ್ನಾತ್ವಾ ಅಶ್ವಮೇಧಫಲಂ ಲಭೇತ್।।
ಕುಶಪ್ಲವಕ್ಕೆ ಹೋಗಿ ಅಲ್ಲಿ ಬ್ರಹ್ಮಚಾರಿಯಾಗಿ ಸಮಾಹಿತನಾಗಿ ಮೂರುರಾತ್ರಿಗಳು ಉಳಿದು ಸ್ನಾನಮಾಡಿದರೆ ಅಶ್ವಮೇಧಫಲವು ದೊರೆಯುತ್ತದೆ.
03083034a ತತೋ ದೇವಹ್ರದೇ ರಮ್ಯೇ ಕೃಷ್ಣವೇಣ್ಣಾಜಲೋದ್ಭವೇ।
03083034c ಜಾತಿಮಾತ್ರಹ್ರದೇ ಚೈವ ತಥಾ ಕನ್ಯಾಶ್ರಮೇ ನೃಪ।।
03083035a ಯತ್ರ ಕ್ರತುಶತೈರಿಷ್ಟ್ವಾ ದೇವರಾಜೋ ದಿವಂ ಗತಃ।
03083035c ಅಗ್ನಿಷ್ಟೋಮಶತಂ ವಿಂದೇದ್ಗಮನಾದೇವ ಭಾರತ।।
ನೃಪ! ಭಾರತ! ಅನಂತರ ಕೃಷ್ಣವೇಣೀ ನದಿಯ ಉಗಮ ಸ್ಥಾನವಾದ ರಮ್ಯ ದೇವಹ್ರದ ಮತ್ತು ಜಾತಿಮಾತ್ರಹ್ರದ ಹಾಗೂ ನೂರು ಯಾಗಗಳನ್ನು ಮಾಡಿ ದೇವರಾಜನು ಸ್ವರ್ಗಕ್ಕೆ ಸೇರಿದ ಸ್ಥಳವಾದ ಕನ್ಯಾಶ್ರಮಗಳಿಗೆ ಹೋದರೂ ಕೂಡ ನೂರು ಅಗ್ನಿಷ್ಟೋಮ ಯಾಗಗಳ ಫಲವು ದೊರೆಯುತ್ತದೆ.
03083036a ಸರ್ವದೇವಹ್ರದೇ ಸ್ನಾತ್ವಾ ಗೋಸಹಸ್ರಫಲಂ ಲಭೇತ್।
03083036c ಜಾತಿಮಾತ್ರಹ್ರದೇ ಸ್ನಾತ್ವಾ ಭವೇಜ್ಜಾತಿಸ್ಮರೋ ನರಃ।।
ಸರ್ವದೇವ ಸರೋವರದಲ್ಲಿ ಸ್ನಾನಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಜಾತಿಮಾತ್ರಸರೋವರದಲ್ಲಿ ಸ್ನಾನಮಾಡಿದ ನರನಿಗೆ ಹಿಂದಿನ ಜನ್ಮಗಳ ನೆನಪು ಬರುತ್ತದೆ.
03083037a ತತೋಽವಾಪ್ಯ ಮಹಾಪುಣ್ಯಾಂ ಪಯೋಷ್ಣೀಂ ಸರಿತಾಂ ವರಾಂ।
03083037c ಪಿತೃದೇವಾರ್ಚನರತೋ ಗೋಸಹಸ್ರಫಲಂ ಲಭೇತ್।।
ಅನಂತರ ನದಿಗಳಲ್ಲೇ ಶ್ರೇಷ್ಠ ಮಹಾಪುಣ್ಯ ಪಯೋಷ್ಣಿಗೆ ಹೋಗಿ ಪಿತೃ-ದೇವತೆಗಳನ್ನು ಪೂಜಿಸಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03083038a ದಂಡಕಾರಣ್ಯಮಾಸಾದ್ಯ ಮಹಾರಾಜ ಉಪಸ್ಪೃಶೇತ್।
03083038c ಗೋಸಹಸ್ರಫಲಂ ತತ್ರ ಸ್ನಾತಮಾತ್ರಸ್ಯ ಭಾರತ।।
ಮಹಾರಾಜ! ಭಾರತ! ದಂಡಕಾರಣ್ಯಕ್ಕೆ ಹೋಗಿ ಅಲ್ಲಿಯ ನೀರಿನಲ್ಲಿ ಕೇವಲ ಸ್ನಾನಮಾಡಿದರೂ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03083039a ಶರಭಂಗಾಶ್ರಮಂ ಗತ್ವಾ ಶುಕಸ್ಯ ಚ ಮಹಾತ್ಮನಃ।
03083039c ನ ದುರ್ಗತಿಮವಾಪ್ನೋತಿ ಪುನಾತಿ ಚ ಕುಲಂ ನರಃ।।
ಮಹಾತ್ಮ ಶುಕನ ಶರಭಂಗಾಶ್ರಮಕ್ಕೆ ಹೋದರೆ ದುರ್ಗತಿಯು ಪ್ರಾಪ್ತವಾಗುವುದಿಲ್ಲ ಮತ್ತು ಅಂಥಹ ನರನ ಕುಲವು ಪುನೀತವಾಗುತ್ತದೆ.
03083040a ತತಃ ಶೂರ್ಪಾರಕಂ ಗಚ್ಚೇಜ್ಜಾಮದಗ್ನ್ಯನಿಷೇವಿತಂ।
03083040c ರಾಮತೀರ್ಥೇ ನರಃ ಸ್ನಾತ್ವಾ ವಿಂದ್ಯಾದ್ಬಹು ಸುವರ್ಣಕಂ।।
ಅನಂತರ ಜಾಮದಗ್ನಿ ರಾಮನು ಹೋಗಿದ್ದ ಶೂರ್ಪಾರಕಕ್ಕೆ ಹೋಗಬೇಕು. ರಾಮತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ಬಹಳಷ್ಟು ಬಂಗಾರವು ದೊರೆಯುತ್ತದೆ.
03083041a ಸಪ್ತಗೋದಾವರೇ ಸ್ನಾತ್ವಾ ನಿಯತೋ ನಿಯತಾಶನಃ।
03083041c ಮಹತ್ಪುಣ್ಯಮವಾಪ್ನೋತಿ ದೇವಲೋಕಂ ಚ ಗಚ್ಚತಿ।।
ನಿಯತನೂ ನಿಯತಾಶನನೂ ಆಗಿ ಸಪ್ತಗೋದಾವರಿಯಲ್ಲಿ ಸ್ನಾನಮಾಡಿದವನಿಗೆ ಮಹಾ ಪುಣ್ಯವು ದೊರೆಯುತ್ತದೆ ಮತ್ತು ಅವನು ದೇವಲೋಕಕ್ಕೆ ಹೋಗುತ್ತಾನೆ.
03083042a ತತೋ ದೇವಪಥಂ ಗಚ್ಚೇನ್ನಿಯತೋ ನಿಯತಾಶನಃ।
03083042c ದೇವಸತ್ರಸ್ಯ ಯತ್ಪುಣ್ಯಂ ತದವಾಪ್ನೋತಿ ಮಾನವಃ।।
ಅಲ್ಲಿಂದ ನಿಯತನೂ ನಿಯತಾಶನನೂ ಆಗಿ ದೇವಪಥಕ್ಕೆ ಹೋದ ಮಾನವನಿಗೆ ದೇವಸತ್ರದಿಂದ ಯಾವ ಪುಣ್ಯವು ದೊರೆಯುತ್ತದೆಯೋ ಆ ಪುಣ್ಯವು ದೊರೆಯುತ್ತದೆ.
03083043a ತುಂಗಕಾರಣ್ಯಮಾಸಾದ್ಯ ಬ್ರಹ್ಮಚಾರೀ ಜಿತೇಂದ್ರಿಯಃ।
03083043c ವೇದಾನಧ್ಯಾಪಯತ್ತತ್ರ ಋಷಿಃ ಸಾರಸ್ವತಃ ಪುರಾ।।
03083044a ತತ್ರ ವೇದಾನ್ಪ್ರನಷ್ಟಾಂಸ್ತು ಮುನೇರಂಗಿರಸಃ ಸುತಃ।
03083044c ಉಪವಿಷ್ಟೋ ಮಹರ್ಷೀಣಾಮುತ್ತರೀಯೇಷು ಭಾರತ।।
03083045a ಓಂಕಾರೇಣ ಯಥಾನ್ಯಾಯಂ ಸಮ್ಯಗುಚ್ಚಾರಿತೇನ ಚ।
03083045c ಯೇನ ಯತ್ಪೂರ್ವಮಭ್ಯಸ್ತಂ ತತ್ತಸ್ಯ ಸಮುಪಸ್ಥಿತಂ।।
ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದು ತುಂಗಕಾರಣ್ಯಕ್ಕೆ ಹೋಗಬೇಕು. ಅಲ್ಲಿ ಹಿಂದೆ ಋಷಿ ಸಾರಸ್ವತನು ವೇದವನ್ನು ಹೇಳಿಕೊಡುತ್ತಿದ್ದನು. ಭಾರತ! ಅಲ್ಲಿ ಮುನಿ ಅಂಗಿರಸನ ಮಗನು ಕಳೆದುಹೋಗಿದ್ದ ವೇದಗಳನ್ನು ಮಹರ್ಷಿಗಳ ಉತ್ತರೀಯದ ಮೇಲೆ ಕುಳಿತು ಓಂಕಾರದೊಂದಿಗೆ ಯಥಾನ್ಯಾಯವಾಗಿ ಎಲ್ಲವನ್ನೂ ಉಚ್ಚರಿಸಿದನು ಮತ್ತು ಅವನು ಹಿಂದೆ ಏನನ್ನು ಮರೆತುಬಿಟ್ಟಿದ್ದನೋ ಅವೆಲ್ಲವನ್ನೂ ನೆನಪಿಗೆ ಬಂದವು.
03083046a ಋಷಯಸ್ತತ್ರ ದೇವಾಶ್ಚ ವರುಣೋಽಗ್ನಿಃ ಪ್ರಜಾಪತಿಃ।
03083046c ಹರಿರ್ನಾರಾಯಣೋ ದೇವೋ ಮಹಾದೇವಸ್ತಥೈವ ಚ।।
03083047a ಪಿತಾಮಹಶ್ಚ ಭಗವಾನ್ದೇವೈಃ ಸಹ ಮಹಾದ್ಯುತಿಃ।
03083047c ಭೃಗುಂ ನಿಯೋಜಯಾಮಾಸ ಯಾಜನಾರ್ಥೇ ಮಹಾದ್ಯುತಿಂ।।
ಅಲ್ಲಿ ಋಷಿಗಳೂ, ದೇವತೆಗಳೂ, ವರುಣ, ಅಗ್ನಿ, ಪ್ರಜಾಪತಿ, ಹರಿ ನಾರಾಯಣ ದೇವ, ಮಹಾದೇವ ಮತ್ತು ದೇವತೆಗಳೊಂದಿಗೆ ಭಗವಾನ್ ಮಹಾದ್ಯುತಿ ಪಿತಾಮಹನೂ, ಮಹಾದ್ಯುತಿ ಭೃಗುವಿಗೆ ಯಜ್ಞದ ಯಜಮಾನತ್ವವನ್ನು ವಹಿಸಿದರು.
03083048a ತತಃ ಸ ಚಕ್ರೇ ಭಗವಾನೃಷೀಣಾಂ ವಿಧಿವತ್ತದಾ।
03083048c ಸರ್ವೇಷಾಂ ಪುನರಾಧಾನಂ ವಿಧಿದೃಷ್ಟೇನ ಕರ್ಮಣಾ।।
ಅನಂತರ ಭಗವಂತನು ಎಲ್ಲ ಋಷಿಗಳಿಗೆ ವಿಧಿವತ್ತಾಗಿ ಯಜ್ಞ ಕರ್ಮಾಂಗಗಳನ್ನು ಹೇಳಿಕೊಟ್ಟನು.
03083049a ಆಜ್ಯಭಾಗೇನ ವೈ ತತ್ರ ತರ್ಪಿತಾಸ್ತು ಯಥಾವಿಧಿ।
03083049c ದೇವಾಸ್ತ್ರಿಭುವಣಂ ಯಾತಾ ಋಷಯಶ್ಚ ಯಥಾಸುಖಂ।।
ಯಥಾವಿಧಿಯಾಗಿ ನೀಡಿದ ಆಜ್ಯಭಾಗಗಳಿಂದ ತೃಪ್ತರಾದ ದೇವತೆಗಳು ತ್ರಿಭುವನಕ್ಕೆ ತೆರಳಿದರು ಮತ್ತು ಋಷಿಗಳು ತಮಗಿಷ್ಟವಾದಲ್ಲಿಗೆ ಹೋದರು.
03083050a ತದರಣ್ಯಂ ಪ್ರವಿಷ್ಟಸ್ಯ ತುಂಗಕಂ ರಾಜಸತ್ತಮ।
03083050c ಪಾಪಂ ಪ್ರಣಶ್ಯತೇ ಸರ್ವಂ ಸ್ತ್ರಿಯೋ ವಾ ಪುರುಷಸ್ಯ ವಾ।।
ರಾಜಸತ್ತಮ! ಈಗ ಆ ತುಂಗಕ ವನವನ್ನು ಸ್ತ್ರೀಯಾಗಲೀ ಪುರುಷನಾಗಲೀ ಪ್ರವೇಶಿಸಿದರೆ ಸರ್ವ ಪಾಪಗಳೂ ನಾಶವಾಗುತ್ತವೆ.
03083051a ತತ್ರ ಮಾಸಂ ವಸೇದ್ಧೀರೋ ನಿಯತೋ ನಿಯತಾಶನಃ।
03083051c ಬ್ರಹ್ಮಲೋಕಂ ವ್ರಜೇದ್ರಾಜನ್ಪುನೀತೇ ಚ ಕುಲಂ ನರಃ।।
ರಾಜನ್! ಅಲ್ಲಿ ನಿಯತನೂ ನಿಯತಾಶನನೂ ಆಗಿ ಒಂದು ತಿಂಗಳು ವಾಸಿಸುವ ವಿವೇಕಿಯು ಬ್ರಹ್ಮಲೋಕಕ್ಕೆ ಹೋಗುತ್ತಾನೆ ಮತ್ತು ಅವನ ಕುಲವನ್ನು ಪುನೀತಗೊಳಿಸುತ್ತಾನೆ.
03083052a ಮೇಧಾವಿಕಂ ಸಮಾಸಾದ್ಯ ಪಿತೄನ್ದೇವಾಂಶ್ಚ ತರ್ಪಯೇತ್।
03083052c ಅಗ್ನಿಷ್ಟೋಮಮವಾಪ್ನೋತಿ ಸ್ಮೃತಿಂ ಮೇಧಾಂ ಚ ವಿಂದತಿ।।
ಮೇಧಾವಿಕಕ್ಕೆ ಹೋಗಿ ಪಿತೃಗಳಿಗೂ ದೇವತೆಗಳಿಗೂ ತರ್ಪಣವನ್ನಿತ್ತರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ ಮತ್ತು ನೆನಪು ಮತ್ತು ಬುದ್ಧಿಶಕ್ತಿಗಳನ್ನು ಪಡೆಯುತ್ತಾನೆ.
03083053a ತತಃ ಕಾಲಂಜರಂ ಗತ್ವಾ ಪರ್ವತಂ ಲೋಕವಿಶ್ರುತಂ।
03083053c ತತ್ರ ದೇವಹ್ರದೇ ಸ್ನಾತ್ವಾ ಗೋಸಹಸ್ರಫಲಂ ಲಭೇತ್।।
ಅಲ್ಲಿಂದ ಲೋಕವಿಶ್ರುತ ಕಾಲಂಜರ ಪರ್ವತಕ್ಕೆ ಹೋಗಿ ಅಲ್ಲಿ ದೇವಸರೋವರದಲ್ಲಿ ಸ್ನಾನ ಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03083054a ಆತ್ಮಾನಂ ಸಾಧಯೇತ್ತತ್ರ ಗಿರೌ ಕಾಲಂಜರೇ ನೃಪ।
03083054c ಸ್ವರ್ಗಲೋಕೇ ಮಹೀಯೇತ ನರೋ ನಾಸ್ತ್ಯತ್ರ ಸಂಶಯಃ।।
ನೃಪ! ಕಾಲಂಜರ ಗಿರಿಯಲ್ಲಿ ಆತ್ಮ ಸಾಧನೆಯನ್ನು ಮಾಡಿದರೆ ಮನುಷ್ಯನು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03083055a ತತೋ ಗಿರಿವರಶ್ರೇಷ್ಠೇ ಚಿತ್ರಕೂಟೇ ವಿಶಾಂ ಪತೇ।
03083055c ಮಂದಾಕಿನೀಂ ಸಮಾಸಾದ್ಯ ನದೀಂ ಪಾಪಪ್ರಮೋಚನೀಂ।।
03083056a ತತ್ರಾಭಿಷೇಕಂ ಕುರ್ವಾಣಃ ಪಿತೃದೇವಾರ್ಚನೇ ರತಃ।
03083056c ಅಶ್ವಮೇಧಮವಾಪ್ನೋತಿ ಗತಿಂ ಚ ಪರಮಾಂ ವ್ರಜೇತ್।।
ವಿಶಾಂಪತೇ! ಅನಂತರ ಗಿರಿವರಶ್ರೇಷ್ಠ ಚಿತ್ರಕೂಟದಲ್ಲಿರುವ ಪಾಪಪ್ರಮೋಚನೀ ಮಂದಾಕಿನೀ ನದಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಪಿತೃ-ದೇವತೆಗಳ ಪೂಜೆಯನ್ನು ನಿರತನಾದವನು ಅಶ್ವಮೇಧದ ಫಲವನ್ನು ಪಡೆಯುತ್ತಾನೆ ಮತ್ತು ಪರಮ ಗತಿಯನ್ನು ಹೊಂದುತ್ತಾನೆ.
03083057a ತತೋ ಗಚ್ಚೇತ ರಾಜೇಂದ್ರ ಭರ್ತೃಸ್ಥಾನಮನುತ್ತಮಂ।
03083057c ಯತ್ರ ದೇವೋ ಮಹಾಸೇನೋ ನಿತ್ಯಂ ಸನ್ನಿಹಿತೋ ನೃಪಃ।।
ರಾಜೇಂದ್ರ! ಅಲ್ಲಿಂದ ಅನುತ್ತಮ ಭರ್ತೃಸ್ಥಾನಕ್ಕೆ ಹೋಗಬೇಕು. ನೃಪ! ಅಲ್ಲಿ ದೇವ ಮಹಾಸೇನನು ಸದಾ ನೆಲೆಸಿರುತ್ತಾನೆ.
03083058a ಪುಮಾಂಸ್ತತ್ರ ನರಶ್ರೇಷ್ಠ ಗಮನಾದೇವ ಸಿಧ್ಯತಿ।
03083058c ಕೋಟಿತೀರ್ಥೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।।
03083059a ಪ್ರದಕ್ಷಿಣಮುಪಾವೃತ್ಯ ಜ್ಯೇಷ್ಠಸ್ಥಾನಂ ವ್ರಜೇನ್ನರಃ।
03083059c ಅಭಿಗಮ್ಯ ಮಹಾದೇವಂ ವಿರಾಜತಿ ಯಥಾ ಶಶೀ।।
ನರಶ್ರೇಷ್ಠ! ಅಲ್ಲಿ ಹೋಗುವ ಮಾತ್ರದಿಂದಲೇ ಪುರುಷನು ಸಿದ್ಧಿಯನ್ನು ಹೊಂದುತ್ತಾನೆ. ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಅದನ್ನು ಪ್ರದಕ್ಷಿಣೆ ಮಾಡಿದ ನಂತರ ನರನು ಜ್ಯೇಷ್ಠಸ್ಥಾನಕ್ಕೆ ಹೋಗಬೇಕು. ಅಲ್ಲಿ ಮಹಾದೇವನನ್ನು ಪೂಜಿಸಿದರೆ ಶಶಿಯಂತೆ ವಿರಾಜಿಸುತ್ತಾನೆ.
03083060a ತತ್ರ ಕೂಪೋ ಮಹಾರಾಜ ವಿಶ್ರುತೋ ಭರತರ್ಷಭ।
03083060c ಸಮುದ್ರಾಸ್ತತ್ರ ಚತ್ವಾರೋ ನಿವಸಂತಿ ಯುಧಿಷ್ಠಿರ।।
03083061a ತತ್ರೋಪಸ್ಪೃಶ್ಯ ರಾಜೇಂದ್ರ ಕೃತ್ವಾ ಚಾಪಿ ಪ್ರದಕ್ಷಿಣಂ।
03083061c ನಿಯತಾತ್ಮಾ ನರಃ ಪೂತೋ ಗಚ್ಚೇತ ಪರಮಾಂ ಗತಿಂ।।
ಭರತರ್ಷಭ! ಯುಧಿಷ್ಠಿರ! ಮಹಾರಾಜ! ಅಲ್ಲಿ ನಾಲ್ಕು ಸಮುದ್ರಗಳೂ ಸೇರಿರುವ ವಿಶ್ರುತ ಬಾವಿಯಿದೆ. ರಾಜೇಂದ್ರ! ಅಲ್ಲಿ ಮನುಷ್ಯನು ನಿಯತಾತ್ಮನಾಗಿ ಸ್ನಾನಮಾಡಿದರೆ ಅಥವಾ ಪ್ರದಕ್ಷಿಣೆ ಮಾಡಿದರೂ ಕೂಡ ಪುನೀತನಾಗಿ ಪರಮ ಗತಿಯನ್ನು ಹೊಂದುತ್ತಾನೆ.
03083062a ತತೋ ಗಚ್ಚೇತ್ಕುರುಶ್ರೇಷ್ಠ ಶೃಂಗವೇರಪುರಂ ಮಹತ್।
03083062c ಯತ್ರ ತೀರ್ಣೋ ಮಹಾರಾಜ ರಾಮೋ ದಾಶರಥಿಃ ಪುರಾ।।
03083063a ಗಂಗಾಯಾಂ ತು ನರಃ ಸ್ನಾತ್ವಾ ಬ್ರಹ್ಮಚಾರೀ ಸಮಾಹಿತಃ।
03083063c ವಿಧೂತಪಾಪ್ಮಾ ಭವತಿ ವಾಜಪೇಯಂ ಚ ವಿಂದತಿ।।
ಕುರುಶ್ರೇಷ್ಠ! ಅಲ್ಲಿಂದ ಮಹಾ ಶೃಂಗವೇರಪುರಕ್ಕೆ ಹೋಗಬೇಕು. ಮಹಾರಾಜ! ಅಲ್ಲಿ ಹಿಂದೆ ದಾಶರಥಿ ರಾಮನು ಗಂಗೆಯನ್ನು ದಾಟಿದ್ದನು. ಆ ಗಂಗೆಯಲ್ಲಿ ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ಸ್ನಾನಮಾಡಿದರೆ ಪಾಪಗಳನ್ನು ತೊಳೆದುಕೊಂಡು ವಾಜಪೇಯ ಯಾಗದ ಫಲವು ದೊರೆಯುತ್ತದೆ.
03083064a ಅಭಿಗಮ್ಯ ಮಹಾದೇವಮಭ್ಯರ್ಚ್ಯ ಚ ನರಾಧಿಪ।
03083064c ಪ್ರದಕ್ಷಿಣಮುಪಾವೃತ್ಯ ಗಾಣಪತ್ಯಮವಾಪ್ನುಯಾತ್।।
ನರಾಧಿಪ! ಮಹಾದೇವನಲ್ಲಿಗೆ ಹೋಗಿ ಅವನಿಗೆ ಪ್ರದಕ್ಷಿಣೆ ನಮಸ್ಕಾರಗಳಿಂದ ಪೂಜಿಸಿದರೆ ಗಾಣಪತ್ಯ ಪದವಿಯನ್ನು ಹೊಂದುತ್ತಾರೆ.
03083065a ತತೋ ಗಚ್ಚೇತ ರಾಜೇಂದ್ರ ಪ್ರಯಾಗಂ ಋಷಿಸಂಸ್ತುತಂ।
03083065c ಯತ್ರ ಬ್ರಹ್ಮಾದಯೋ ದೇವಾ ದಿಶಶ್ಚ ಸದಿಗೀಶ್ವರಾಃ।।
03083066a ಲೋಕಪಾಲಾಶ್ಚ ಸಾಧ್ಯಾಶ್ಚ ನೈರೃತಾಃ ಪಿತರಸ್ತಥಾ।
03083066c ಸನತ್ಕುಮಾರಪ್ರಮುಖಾಸ್ತಥೈವ ಪರಮರ್ಷಯಃ।।
03083067a ಅಂಗಿರಃಪ್ರಮುಖಾಶ್ಚೈವ ತಥಾ ಬ್ರಹ್ಮರ್ಷಯೋಽಪರೇ।
03083067c ತಥಾ ನಾಗಾಃ ಸುಪರ್ಣಾಶ್ಚ ಸಿದ್ಧಾಶ್ಚಕ್ರಚರಾಸ್ತಥಾ।।
03083068a ಸರಿತಃ ಸಾಗರಾಶ್ಚೈವ ಗಂಧರ್ವಾಪ್ಸರಸಸ್ತಥಾ।
03083068c ಹರಿಶ್ಚ ಭಗವಾನಾಸ್ತೇ ಪ್ರಜಾಪತಿಪುರಸ್ಕೃತಃ।।
ರಾಜೇಂದ್ರ! ಅನಂತರ ಋಷಿಗಳು ಸಂಸ್ತುತಿಸುವ ಪ್ರಯಾಗ1ಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು, ದಿಕ್ಪಾಲಕರೊಂದಿಗೆ ದಿಕ್ಕುಗಳು, ಲೋಕಪಾಲಕರು, ಸಾಧ್ಯರು, ನೈಋತರು, ಪಿತೃಗಳು, ಸನತ್ಕುಮಾರರೇ ಪ್ರಮುಖರಾದ ಪರಮ ಋಷಿಗಳು, ಅಂಗಿರಸ ಪ್ರಮುಖರು, ಮತ್ತು ಇತರ ಬ್ರಹ್ಮರ್ಷಿಗಳು, ಹಾಗೆಯೇ ನಾಗಗಳೂ, ಪಕ್ಷಿಗಳೂ, ಸಿದ್ಧರೂ, ಚಕ್ರಚರರೂ, ನದಿಗಳೂ, ಸಾಗರಗಳೂ, ಗಂಧರ್ವ-ಅಪ್ಸರೆಯರೂ, ಮತ್ತು ಪ್ರಜಾಪತಿಯನ್ನು ಮುಂದಿಟ್ಟುಕೊಂಡು ಭಗವಾನ್ ಹರಿಯೂ ನೆಲೆಸಿರುತ್ತಾರೆ.
03083069a ತತ್ರ ತ್ರೀಣ್ಯಗ್ನಿಕುಂಡಾನಿ ಯೇಷಾಂ ಮಧ್ಯೇ ಚ ಜಾಹ್ನವೀ।
03083069c ಪ್ರಯಾಗಾದಭಿನಿಷ್ಕ್ರಾಂತಾ ಸರ್ವತೀರ್ಥಪುರಸ್ಕೃತಾ।।
ಅಲ್ಲಿರುವ ಮೂರು ಅಗ್ನಿಕುಂಡಗಳ ಮಧ್ಯದಿಂದ ಸರ್ವತೀರ್ಥ ಪುರಸ್ಕೃತೆ ಜಾಹ್ನವಿಯು ಪ್ರಯಾಗದಿಂದ ಹೊರ ಹರಿಯುತ್ತಾಳೆ.
03083070a ತಪನಸ್ಯ ಸುತಾ ತತ್ರ ತ್ರಿಷು ಲೋಕೇಷು ವಿಶ್ರುತಾ।
03083070c ಯಮುನಾ ಗಂಗಯಾ ಸಾರ್ಧಂ ಸಂಗತಾ ಲೋಕಪಾವನೀ।।
ಅಲ್ಲಿ ಮೂರು ಲೋಕಗಳಲ್ಲಿ ವಿಶ್ರುತ ತಪನನ ಮಗಳು ಯಮುನೆಯು ಲೋಕಪಾವನಿ ಗಂಗೆಯೊಡನೆ ಕೂಡಿ ಹರಿಯುತ್ತಾಳೆ.
03083071a ಗಂಗಾಯಮುನಯೋರ್ಮಧ್ಯಂ ಪೃಥಿವ್ಯಾ ಜಘನಂ ಸ್ಮೃತಂ।
03083071c ಪ್ರಯಾಗಂ ಜಘನಸ್ಯಾಂತಮುಪಸ್ಥಮೃಷಯೋ ವಿದುಃ।।
ಗಂಗಾ ಮತ್ತು ಯಮುನೆಯರ ಮಧ್ಯವನ್ನು ಭೂಮಿಯ ಯೋನಿಯೆಂದು ತಿಳಿಯುತ್ತಾರೆ. ಪ್ರಯಾಗವನ್ನು ಯೋನಿಯ ಮುಖವೆಂದು ಋಷಿಗಳು ತಿಳಿದಿದ್ದಾರೆ.
03083072a ಪ್ರಯಾಗಂ ಸಪ್ರತಿಷ್ಠಾನಂ ಕಂಬಲಾಶ್ವತರೌ ತಥಾ।
03083072c ತೀರ್ಥಂ ಭೋಗವತೀ ಚೈವ ವೇದೀ ಪ್ರೋಕ್ತಾ ಪ್ರಜಾಪತೇಃ।।
ಪ್ರಯಾಗ, ಪ್ರತಿಷ್ಠಾನ, ಕಂಬಲ, ಅಶ್ವತರ, ಮತ್ತು ಭೋಗವತೀ ತೀರ್ಥಗಳನ್ನು ಪ್ರಜಾಪತಿಯ ಯಜ್ಞವೇದಿಕೆಗಳೆಂದೂ ಹೇಳುತ್ತಾರೆ.
03083073a ತತ್ರ ವೇದಾಶ್ಚ ಯಜ್ಞಾಶ್ಚ ಮೂರ್ತಿಮಂತೋ ಯುಧಿಷ್ಠಿರ।
03083073c ಪ್ರಜಾಪತಿಮುಪಾಸಂತೇ ಋಷಯಶ್ಚ ಮಹಾವ್ರತಾಃ।।
03083073e ಯಜಂತೇ ಕ್ರತುಭಿರ್ದೇವಾಸ್ತಥಾ ಚಕ್ರಚರಾ ನೃಪ।।
ಯುಧಿಷ್ಠಿರ! ಅಲ್ಲಿ ವೇದಗಳೂ ಯಜ್ಞಗಳೂ ಮೂರ್ತಿವತ್ತಾಗಿವೆ. ಮಹಾವ್ರತ ಋಷಿಗಳು ಪ್ರಜಾಪತಿಯನ್ನು ಆರಾಧಿಸುತ್ತಾರೆ. ನೃಪ! ದೇವತೆಗಳೂ ಚಕ್ರಚರರೂ ಕ್ರತುಗಳನ್ನು ನಡೆಸುತ್ತಿರುತ್ತಾರೆ.
03083074a ತತಃ ಪುಣ್ಯತಮಂ ನಾಸ್ತಿ ತ್ರಿಷು ಲೋಕೇಷು ಭಾರತ।
03083074c ಪ್ರಯಾಗಃ ಸರ್ವತೀರ್ಥೇಭ್ಯಃ ಪ್ರಭವತ್ಯಧಿಕಂ ವಿಭೋ।।
ಭಾರತ! ಅದಕ್ಕಿಂತಲೂ ಪುಣ್ಯತಮವಾದದ್ದು ಮೂರು ಲೋಕಗಳಲ್ಲಿಯೂ ಇಲ್ಲ. ವಿಭೋ! ಸರ್ವತೀರ್ಥಗಳಿಗಿಂಥಲೂ ಪ್ರಯಾಗದ ಪ್ರಭಾವವು ಅತ್ಯಧಿಕ.
03083075a ಶ್ರವಣಾತ್ತಸ್ಯ ತೀರ್ಥಸ್ಯ ನಾಮಸಂಕೀರ್ತನಾದಪಿ।
03083075c ಮೃತ್ತಿಕಾಲಂಭನಾದ್ವಾಪಿ ನರಃ ಪಾಪಾತ್ಪ್ರಮುಚ್ಯತೇ।।
ಈ ತೀರ್ಥದ ಕುರಿತು ಕೇಳುವುದರಿಂದ, ಅಥವಾ ಕೇವಲ ನಾಮ ಸಂಕೀರ್ತನೆ ಮಾಡುವುದರಿಂದಲೂ, ಅಥವಾ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವುದರಿಂದಲೂ ನರನು ಪಾಪಗಳಿಂದ ಮುಕ್ತನಾಗುತ್ತಾನೆ.
03083076a ತತ್ರಾಭಿಷೇಕಂ ಯಃ ಕುರ್ಯಾತ್ಸಂಗಮೇ ಸಂಶಿತವ್ರತಃ।
03083076c ಪುಣ್ಯಂ ಸ ಫಲಮಾಪ್ನೋತಿ ರಾಜಸೂಯಾಶ್ವಮೇಧಯೋಃ।।
ಆ ಸಂಗಮದಲ್ಲಿ ಸಂಶಿತವ್ರತನಾಗಿ ಸ್ನಾನಮಾಡಿದರೆ ರಾಜಸೂಯ ಮತ್ತು ಅಶ್ವಮೇಧಗಳ ಪುಣ್ಯ ಫಲವು ದೊರೆಯುತ್ತದೆ.
03083077a ಏಷಾ ಯಜನಭೂಮಿರ್ಹಿ ದೇವಾನಾಮಪಿ ಸತ್ಕೃತಾ।
03083077c ತತ್ರ ದತ್ತಂ ಸೂಕ್ಷ್ಮಮಪಿ ಮಹದ್ಭವತಿ ಭಾರತ।।
ಭಾರತ! ಇದನ್ನು ಯಾಗಭೂಮಿಯೆಂದು ದೇವತೆಗಳು ಪೂಜಿಸುತ್ತಾರೆ. ಅಲ್ಲಿ ಅಲ್ಪವನ್ನು ಕೊಟ್ಟರೂ ಮಹತ್ತರವಾಗುತ್ತದೆ.
03083078a ನ ವೇದವಚನಾತ್ತಾತ ನ ಲೋಕವಚನಾದಪಿ।
03083078c ಮತಿರುತ್ಕ್ರಮಣೀಯಾ ತೇ ಪ್ರಯಾಗಮರಣಂ ಪ್ರತಿ।।
ಮಗೂ! ವೇದವಚನವಾಗಲೀ ಲೋಕವಚನವಾಗಲೀ ಪ್ರಯಾಗದಲ್ಲಿ ಮರಣಹೊಂದಬೇಕು ಎನ್ನುವ ನಿರ್ಧಾರವನ್ನು ಅತಿಕ್ರಮಿಸಬೇಡ!
03083079a ದಶ ತೀರ್ಥಸಹಸ್ರಾಣಿ ಷಷ್ಟಿಕೋಟ್ತ್ಯಸ್ತಥಾಪರಾಃ।
03083079c ಯೇಷಾಂ ಸಾನ್ನಿಧ್ಯಮತ್ರೈವ ಕೀರ್ತಿತಂ ಕುರುನಂದನ।।
ಕುರುನಂದನ! ಅಲ್ಲಿ ಆರುಕೋಟಿ ಹತ್ತುಸಾವಿರ ತೀರ್ಥಗಳು ಸನ್ನಿಹಿತವಾಗಿವೆ ಎಂದು ಹೇಳುತ್ತಾರೆ.
03083080a ಚಾತುರ್ವೇದೇ ಚ ಯತ್ಪುಣ್ಯಂ ಸತ್ಯವಾದಿಷು ಚೈವ ಯತ್।
03083080c ಸ್ನಾತ ಏವ ತದಾಪ್ನೋತಿ ಗಂಗಾಯಮುನಸಂಗಮೇ।।
ಚತುರ್ವೇದಗಳನ್ನು ಓದಿದರೆ ಮತ್ತು ಸತ್ಯವನ್ನು ಮಾತನಾಡಿದರೆ ಏನು ಪುಣ್ಯವು ದೊರೆಯುತ್ತದೆಯೋ ಅಷ್ಟೇ ಪುಣ್ಯವು ಆ ಗಂಗಾ-ಯಮುನೆಯರ ಸಂಗಮದಲ್ಲಿ ಸ್ನಾನಮಾಡುವುದರಿಂದ ಮಾತ್ರ ದೊರೆಯುತ್ತದೆ.
03083081a ತತ್ರ ಭೋಗವತೀ ನಾಮ ವಾಸುಕೇಸ್ತೀರ್ಥಮುತ್ತಮಂ।
03083081c ತತ್ರಾಭಿಷೇಕಂ ಯಃ ಕುರ್ಯಾತ್ಸೋಽಶ್ವಮೇಧಮವಾಪ್ನುಯಾತ್।।
ಅಲ್ಲಿ ಭೋಗವತೀ ಎಂಬ ಹೆಸರಿನ ವಾಸುಕಿಯ ಉತ್ತಮ ತೀರ್ಥವಿದೆ. ಅಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ.
03083082a ತತ್ರ ಹಂಸಪ್ರಪತನಂ ತೀರ್ಥಂ ತ್ರೈಲೋಕ್ಯವಿಶ್ರುತಂ।
03083082c ದಶಾಶ್ವಮೇಧಿಕಂ ಚೈವ ಗಂಗಾಯಾಂ ಕುರುನಂದನ।।
ಕುರುನಂದನ! ಅಲ್ಲಿ ಗಂಗೆಯಲ್ಲಿ ತ್ರಿಲೋಕವಿಶ್ರುತ ಹಂಸಪ್ರಪತನ ಎನ್ನುವ ತೀರ್ಥವೂ ದಶಾಶ್ವಮೇಧ ಎನ್ನುವ ತೀರ್ಥವೂ ಇವೆ.
03083083a ಯತ್ರ ಗಂಗಾ ಮಹಾರಾಜ ಸ ದೇಶಸ್ತತ್ತಪೋವನಂ।
03083083c ಸಿದ್ಧಕ್ಷೇತ್ರಂ ತು ತಜ್ಜ್ಞೇಯಂ ಗಂಗಾತೀರಸಮಾಶ್ರಿತಂ।।
ಮಹಾರಾಜ! ಗಂಗೆಯು ತಪೋವನವನ್ನು ಸೇರುವಲ್ಲಿ, ಗಂಗಾತೀರದಲ್ಲಿರುವ ಪ್ರದೇಶವು ಸಿದ್ಧಕ್ಷೇತ್ರ ಎಂದು ತಿಳಿಯಲ್ಪಟ್ಟಿದೆ.
03083084a ಇದಂ ಸತ್ಯಂ ದ್ವಿಜಾತೀನಾಂ ಸಾಧೂನಾಮಾತ್ಮಜಸ್ಯ ಚ।
03083084c ಸುಹೃದಾಂ ಚ ಜಪೇತ್ಕರ್ಣೇ ಶಿಷ್ಯಸ್ಯಾನುಗತಸ್ಯ ಚ।।
ಈ ಸತ್ಯವನ್ನು ದ್ವಿಜಾತಿಯವರ, ಸಾಧುಗಳ, ತನ್ನ ಮಗನ, ಸುಹೃದಯರ, ಶಿಷ್ಯನ ಮತ್ತು ಅನುಸರಿಸಿ ಬಂದವರ ಕಿವಿಯಲ್ಲಿ ಜಪಿಸಬೇಕು.
03083085a ಇದಂ ಧರ್ಮ್ಯಮಿದಂ ಪುಣ್ಯಮಿದಂ ಮೇಧ್ಯಮಿದಂ ಸುಖಂ।
03083085c ಇದಂ ಸ್ವರ್ಗ್ಯಮಿದಂ ರಮ್ಯಮಿದಂ ಪಾವನಮುತ್ತಮಂ।।
ಇದು ಧರ್ಮ. ಇದು ಪುಣ್ಯ. ಇದು ಒಳ್ಳೆಯದು. ಇದು ಸುಖ. ಇದು ಸ್ವರ್ಗ. ಇದು ಸುಂದರ. ಇದು ಪಾವನ ಮತ್ತು ಇದು ಉತ್ತಮ!
03083086a ಮಹರ್ಷೀಣಾಮಿದಂ ಗುಹ್ಯಂ ಸರ್ವಪಾಪಪ್ರಮೋಚನಂ।
03083086c ಅಧೀತ್ಯ ದ್ವಿಜಮಧ್ಯೇ ಚ ನಿರ್ಮಲತ್ವಮವಾಪ್ನುಯಾತ್।।
ಇದು ಸರ್ವಪಾಪಗಳಿಂದ ಬಿಡುಗಡೆಯನ್ನು ನೀಡಬಲ್ಲ ಮಹರ್ಷಿಗಳ ಗುಟ್ಟು. ದ್ವಿಜರ ಮಧ್ಯದಲ್ಲಿ ಇದನ್ನು ಕಲಿತುಕೊಂಡವನಿಗೆ ನಿರ್ಮಲತ್ವವು ಪ್ರಾಪ್ತವಾಗುತ್ತದೆ.
03083087a ಯಶ್ಚೇದಂ ಶೃಣುಯಾನ್ನಿತ್ಯಂ ತೀರ್ಥಪುಣ್ಯಂ ಸದಾ ಶುಚಿಃ।
03083087c ಜಾತೀಃ ಸ ಸ್ಮರತೇ ಬಹ್ವೀರ್ನಾಕಪೃಷ್ಠೇ ಚ ಮೋದತೇ।।
ಸದಾ ಶುಚಿಯಾಗಿದ್ದು ನಿತ್ಯವೂ ತೀರ್ಥಕ್ಷೇತ್ರಗಳ ಪುಣ್ಯವನ್ನು ಕೇಳಿದವನಿಗೆ ಹಲವಾರು ಜನ್ಮಗಳ ನೆನಪುಂಟಾಗುತ್ತದೆ ಮತ್ತು ಸ್ವರ್ಗಲೋಕದಲ್ಲಿ ಮೋದಿಸುತ್ತಾನೆ.
03083088a ಗಮ್ಯಾನ್ಯಪಿ ಚ ತೀರ್ಥಾನಿ ಕೀರ್ತಿತಾನ್ಯಗಮಾನಿ ಚ।
03083088c ಮನಸಾ ತಾನಿ ಗಚ್ಚೇತ ಸರ್ವತೀರ್ಥಸಮೀಕ್ಷಯಾ।।
03083089a ಏತಾನಿ ವಸುಭಿಃ ಸಾಧ್ಯೈರಾದಿತ್ಯೈರ್ಮರುದಶ್ವಿಭಿಃ।
03083089c ಋಷಿಭಿರ್ದೇವಕಲ್ಪೈಶ್ಚ ಶ್ರಿತಾನಿ ಸುಕೃತೈಷಿಭಿಃ।।
ಹೋಗಬಲ್ಲ ಮತ್ತು ಹೋಗಲಾಗದ ತೀರ್ಥಗಳ ಕುರಿತು ಹೇಳುತ್ತಾರೆ - ಎಲ್ಲ ತೀರ್ಥಗಳನ್ನೂ ನೋಡಬಯಸಿದರೆ ನೋಡಲಿಕ್ಕಾಗದ ತೀರ್ಥಗಳಿಗೆ ಮನಸ್ಸಿನಲ್ಲಿಯಾದರೂ ಹೋಗಬೇಕು. ಸುಕೃತಗಳನ್ನು ಅರೆಸಲೋಸುಗ ವಸುಗಳು, ಸಾಧ್ಯರು, ಆದಿತ್ಯರು, ಮರುತರು, ಅಶ್ವಿನೀ ದೇವತೆಗಳು, ಋಷಿಗಳು, ಮತ್ತು ದೇವಕಲ್ಪರು ಇವುಗಳನ್ನು ನೋಡಿದ್ದಾರೆ.
03083090a ಏವಂ ತ್ವಮಪಿ ಕೌರವ್ಯ ವಿಧಿನಾನೇನ ಸುವ್ರತ।
03083090c ವ್ರಜ ತೀರ್ಥಾನಿ ನಿಯತಃ ಪುಣ್ಯಂ ಪುಣ್ಯೇನ ವರ್ಧತೇ।।
ಕೌರವ್ಯ! ಸುವ್ರತ! ಅದೇ ರೀತಿ ನೀನೂ ಕೂಡ ವಿಧಿವತ್ತಾಗಿ ನಿಯತನಾಗಿ ತೀರ್ಥಯಾತ್ರೆಗೆ ಹೊರಡು. ಪುಣ್ಯಕರ್ಮದಿಂದ ಪುಣ್ಯವು ಹೆಚ್ಚಾಗುತ್ತದೆ.
03083091a ಭಾವಿತೈಃ ಕಾರಣೈಃ ಪೂರ್ವಮಾಸ್ತಿಕ್ಯಾಚ್ಶ್ರುತಿದರ್ಶನಾತ್।
03083091c ಪ್ರಾಪ್ಯಂತೇ ತಾನಿ ತೀರ್ಥಾನಿ ಸದ್ಭಿಃ ಶಿಷ್ಟಾನುದರ್ಶಿಭಿಃ।।
ಭಾವಿತರಾಗಿದ್ದುಕೊಂಡು, ಉದ್ದೇಶವನ್ನಿಟ್ಟುಕೊಂಡು, ಮೊದಲೇ ಯೋಚಿಸಿದವರಾಗಿದ್ದುಕೊಂಡು, ವೇದದಲ್ಲಿ ಹೇಳಿರುವ ಸಿದ್ಧಿ, ಶಿಷ್ಟಾಚಾರಗಳಿಂದಿದ್ದುಕೊಂಡು ಹಿಂದೆ ಅವರಿಗೆ ಈ ತೀರ್ಥಗಳನ್ನು ನೋಡಲಿಕ್ಕಾಯಿತು.
03083092a ನಾವ್ರತೋ ನಾಕೃತಾತ್ಮಾ ಚ ನಾಶುಚಿರ್ನ ಚ ತಸ್ಕರಃ।
03083092c ಸ್ನಾತಿ ತೀರ್ಥೇಷು ಕೌರವ್ಯ ನ ಚ ವಕ್ರಮತಿರ್ನರಃ।।
ವ್ರತಗಳಿಲ್ಲದವನು, ಕೃತಾತ್ಮನಾಗಿರದವನು, ಅಶುಚಿಯಾಗಿದ್ದವನು, ಅಥವಾ ಕಳ್ಳನು ಈ ತೀರ್ಥಗಳಲ್ಲಿ ಸ್ನಾನಮಾಡುವುದಿಲ್ಲ.
03083093a ತ್ವಯಾ ತು ಸಮ್ಯಗ್ವೃತ್ತೇನ ನಿತ್ಯಂ ಧರ್ಮಾರ್ಥದರ್ಶಿನಾ।
03083093c ಪಿತರಸ್ತಾರಿತಾಸ್ತಾತ ಸರ್ವೇ ಚ ಪ್ರಪಿತಾಮಹಾಃ।।
ನೀನಾದರೋ ನಿನ್ನ ಒಳ್ಳೆಯ ನಡತೆಯಿಂದ ನಿತ್ಯವೂ ಧರ್ಮವನ್ನು ಕಂಡುಕೊಂಡವನಾಗಿರುವುದರಿಂದ, ನಿನ್ನ ಪಿತ, ಪಿತಾಮಹ ಮತ್ತು ಪ್ರಪಿತಾಮಹರನ್ನು ಉದ್ಧರಿಸುತ್ತೀಯೆ ಮಗು!
03083094a ಪಿತಾಮಹಪುರೋಗಾಶ್ಚ ದೇವಾಃ ಸರ್ಷಿಗಣಾ ನೃಪ।
03083094c ತವ ಧರ್ಮೇಣ ಧರ್ಮಜ್ಞ ನಿತ್ಯಮೇವಾಭಿತೋಷಿತಾಃ।।
ನೃಪ! ಧರ್ಮಜ್ಞ! ಪಿತಾಮಹನನ್ನು ಮುಂದಿಟ್ಟುಕೊಂಡು ಎಲ್ಲ ದೇವ ಮತ್ತು ಋಷಿಗಣಗಳು ನಿನ್ನ ಧರ್ಮದಿಂದ ನಿತ್ಯವೂ ಸಂತುಷ್ಟರಾಗಿದ್ದಾರೆ.
03083095a ಅವಾಪ್ಸ್ಯಸಿ ಚ ಲೋಕಾನ್ವೈ ವಸೂನಾಂ ವಾಸವೋಪಮ।
03083095c ಕೀರ್ತಿಂ ಚ ಮಹತೀಂ ಭೀಷ್ಮ ಪ್ರಾಪ್ಸ್ಯಸೇ ಭುವಿ ಶಾಶ್ವತೀಂ।।
ವಾಸವೋಪಮ! ಭೀಷ್ಮ! ನೀನು ವಸುಗಳ ಲೋಕಗಳನ್ನು ಹೊಂದುತ್ತೀಯೆ ಮತ್ತು ಭೂಮಿಯಲ್ಲಿ ಶಾಶ್ವತವಾದ ಮಹಾ ಕೀರ್ತಿಯನ್ನು ಪಡೆಯುತ್ತೀಯೆ.””
03083096 ನಾರದ ಉವಾಚ।
03083096a ಏವಮುಕ್ತ್ವಾಭ್ಯನುಜ್ಞಾಪ್ಯ ಪುಲಸ್ತ್ಯೋ ಭಗವಾನೃಷಿಃ।
03083096c ಪ್ರೀತಃ ಪ್ರೀತೇನ ಮನಸಾ ತತ್ರೈವಾಂತರಧೀಯತ।।
ನಾರದನು ಹೇಳಿದನು: “ಹೀಗೆ ಹೇಳಿ ಬೀಳ್ಕೊಂಡು ಭಗವಾನ್ ಋಷಿ ಪುಲಸ್ತ್ಯನು ಸಂತೋಷದಿಂದ ಪ್ರೀತಮನಸ್ಕನಾಗಿ ಅಲ್ಲಿಯೇ ಅಂತರ್ಧಾನನಾದನು.
03083097a ಭೀಷ್ಮಶ್ಚ ಕುರುಶಾರ್ದೂಲ ಶಾಸ್ತ್ರತತ್ತ್ವಾರ್ಥದರ್ಶಿವಾನ್।
03083097c ಪುಲಸ್ತ್ಯವಚನಾಚ್ಚೈವ ಪೃಥಿವೀಮನುಚಕ್ರಮೇ।।
ಶಾಸ್ತ್ರಗಳ ತತ್ವಾರ್ಥಗಳನ್ನು ಕಂಡುಕೊಂಡಿದ್ದ ಕುರುಶಾರ್ದೂಲ ಭೀಷ್ಮನಾದರೋ ಪುಲಸ್ತ್ಯನ ವಚನದಂತೆ ಪೃಥ್ವಿಯಲ್ಲಿ ತಿರುಗಾಡಿದನು.
03083098a ಅನೇನ ವಿಧಿನಾ ಯಸ್ತು ಪೃಥಿವೀಂ ಸಂಚರಿಷ್ಯತಿ।
03083098c ಅಶ್ವಮೇಧಶತಸ್ಯಾಗ್ರ್ಯಂ ಫಲಂ ಪ್ರೇತ್ಯ ಸ ಭೋಕ್ಷ್ಯತೇ।।
ಈ ವಿಧಿಯಲ್ಲಿ ಯಾರು ಪೃಥ್ವಿಯಲ್ಲಿ ಸಂಚರಿಸುತ್ತಾರೋ ಅವರು ನೂರು ಅಶ್ವಮೇಧ ಯಾಗಗಳ ಫಲವನ್ನು ಪಡೆದು ಭೋಗಿಸುತ್ತಾರೆ.
03083099a ಅತಶ್ಚಾಷ್ಟಗುಣಂ ಪಾರ್ಥ ಪ್ರಾಪ್ಸ್ಯಸೇ ಧರ್ಮಮುತ್ತಮಂ।
03083099c ನೇತಾ ಚ ತ್ವಮೃಷೀನ್ಯಸ್ಮಾತ್ತೇನ ತೇಽಷ್ಟಗುಣಂ ಫಲಂ।।
ಪಾರ್ಥ! ನೀನು ಅದಕ್ಕಿಂತಲೂ ಎಂಟುಪಟ್ಟು ಉತ್ತಮ ಧರ್ಮಫಲವನ್ನು ಪಡೆಯುತ್ತೀಯೆ. ಈ ಋಷಿಗಳನ್ನು ನೀನು ನಾಯಕನಾಗಿ ಕರೆದುಕೊಂಡು ಹೋಗುವುದರಿಂದ ಆ ಎಂಟುಪಟ್ಟು ಫಲವು ನಿನಗೆ ದೊರೆಯುತ್ತದೆ.
03083100a ರಕ್ಷೋಗಣಾವಕೀರ್ಣಾನಿ ತೀರ್ಥಾನ್ಯೇತಾನಿ ಭಾರತ।
03083100c ನ ಗತಿರ್ವಿದ್ಯತೇಽನ್ಯಸ್ಯ ತ್ವಾಮೃತೇ ಕುರುನಂದನ।।
ಭಾರತ! ಕುರುನಂದನ! ಈ ತೀರ್ಥಗಳಲ್ಲಿ ರಾಕ್ಷಸಗಣಗಳು ಸಂಚರಿಸುತ್ತಿರುತ್ತವೆ. ನಿನ್ನನ್ನು ಹೊರತು ಬೇರೆ ಯಾರಿಗೂ ಅಲ್ಲಿ ಹೋಗಲು ಸಾಧ್ಯವಿಲ್ಲ.
03083101a ಇದಂ ದೇವರ್ಷಿಚರಿತಂ ಸರ್ವತೀರ್ಥಾರ್ಥಸಂಶ್ರಿತಂ।
03083101c ಯಃ ಪಠೇತ್ಕಲ್ಯಮುತ್ಥಾಯ ಸರ್ವಪಾಪೈಃ ಪ್ರಮುಚ್ಯತೇ।।
ಬೆಳಿಗ್ಗೆ ಎದ್ದು ಈ ದೇವರ್ಷಿಚರಿತ ಸರ್ವತೀರ್ಥಾರ್ಥಸಂಶ್ರಿತವನ್ನು ಯಾರು ಓದುತ್ತಾನೋ ಅವನು ಸರ್ವಪಾಪಗಳಿಂದ ಮುಕ್ತಿಹೊಂದುತ್ತಾನೆ.
03083102a ಋಷಿಮುಖ್ಯಾಃ ಸದಾ ಯತ್ರ ವಾಲ್ಮೀಕಿಸ್ತ್ವಥ ಕಾಶ್ಯಪಃ।
03083102c ಆತ್ರೇಯಸ್ತ್ವಥ ಕೌಂಡಿನ್ಯೋ ವಿಶ್ವಾಮಿತ್ರೋಽಥ ಗೌತಮಃ।।
03083103a ಅಸಿತೋ ದೇವಲಶ್ಚೈವ ಮಾರ್ಕಂಡೇಯೋಽಥ ಗಾಲವಃ।
03083103c ಭರದ್ವಾಜೋ ವಸಿಷ್ಠಶ್ಚ ಮುನಿರುದ್ದಾಲಕಸ್ತಥಾ।।
03083104a ಶೌನಕಃ ಸಹ ಪುತ್ರೇಣ ವ್ಯಾಸಶ್ಚ ಜಪತಾಂ ವರಃ।
03083104c ದುರ್ವಾಸಾಶ್ಚ ಮುನಿಶ್ರೇಷ್ಠೋ ಗಾಲವಶ್ಚ ಮಹಾತಪಾಃ।।
03083105a ಏತೇ ಋಷಿವರಾಃ ಸರ್ವೇ ತ್ವತ್ಪ್ರತೀಕ್ಷಾಸ್ತಪೋಧನಾಃ।
03083105c ಏಭಿಃ ಸಹ ಮಹಾರಾಜ ತೀರ್ಥಾನ್ಯೇತಾನ್ಯನುವ್ರಜ।।
ಋಷಿಮುಖ್ಯರಾದ ಎಲ್ಲರೂ - ವಾಲ್ಮೀಕಿ, ಕಶ್ಯಪ, ಅತ್ರೇಯ, ಕೌಂಡಿಣ್ಯ, ವಿಶ್ವಾಮಿತ್ರ, ಗೌತಮ, ಅಸಿತ ದೇವಲ, ಮಾರ್ಕಂಡೇಯ, ಗಾಲವ, ಭರದ್ವಾಜ, ವಸಿಷ್ಠ, ಮುನಿ ಉದ್ದಾಲಕ, ಪುತ್ರನೊಂದಿಗೆ ಶೌನಕ, ಜಪಿಗಳಲ್ಲಿ ಶ್ರೇಷ್ಠ ವ್ಯಾಸ, ಮುನಿಶ್ರೇಷ್ಠ ದುರ್ವಾಸ, ಮಹಾತಪಸ್ವಿ ಗಾಲವ ಈ ಎಲ್ಲ ಋಷಿವರ ತಪೋಧನರೂ ನಿನ್ನ ಪ್ರತೀಕ್ಷೆಯಲ್ಲಿದ್ದಾರೆ. ಮಹಾರಾಜ! ಇವರೊಂದಿಗೆ ತೀರ್ಥಯಾತ್ರೆಯನ್ನು ಮಾಡು.
03083106a ಏಷ ವೈ ಲೋಮಶೋ ನಾಮ ದೇವರ್ಷಿರಮಿತದ್ಯುತಿಃ।
03083106c ಸಮೇಷ್ಯತಿ ತ್ವಯಾ ಚೈವ ತೇನ ಸಾರ್ಧಮನುವ್ರಜ।।
ಸದ್ಯದಲ್ಲಿಯೇ ಲೋಮಶ ಎಂಬ ಹೆಸರಿನ ಅಮಿತದ್ಯುತಿ ದೇವರ್ಷಿಯು ನಿನ್ನನ್ನು ಭೇಟಿಯಾಗುತ್ತಾನೆ. ಅವನೊಂದಿಗೆ ನೀನು ಪ್ರಯಾಣಮಾಡಬೇಕು.
03083107a ಮಯಾ ಚ ಸಹ ಧರ್ಮಜ್ಞ ತೀರ್ಥಾನ್ಯೇತಾನ್ಯನುವ್ರಜ।
03083107c ಪ್ರಾಪ್ಸ್ಯಸೇ ಮಹತೀಂ ಕೀರ್ತಿಂ ಯಥಾ ರಾಜಾ ಮಹಾಭಿಷಃ।।
ಧರ್ಮಜ್ಞ! ನನ್ನೊಂದಿಗೂ ತೀರ್ಥಯಾತ್ರೆಯನ್ನು ಮಾಡು. ರಾಜ ಮಹಾಭಿಷನಂತೆ ಮಹಾ ಕೀರ್ತಿಯನ್ನು ಪಡೆಯುತ್ತೀಯೆ.
03083108a ಯಥಾ ಯಯಾತಿರ್ಧರ್ಮಾತ್ಮಾ ಯಥಾ ರಾಜಾ ಪುರೂರವಾಃ।
03083108c ತಥಾ ತ್ವಂ ಕುರುಶಾರ್ದೂಲ ಸ್ವೇನ ಧರ್ಮೇಣ ಶೋಭಸೇ।।
ಧರ್ಮಾತ್ಮ ಯಯಾತಿಯಂತೆ, ರಾಜ ಪುರೂರವನಂತೆ ಕುರುಶಾರ್ದೂಲ! ನೀನೂ ಕೂಡ ನಿನ್ನ ಧರ್ಮದಿಂದ ಶೋಭಿಸುತ್ತೀಯೆ.
03083109a ಯಥಾ ಭಗೀರಥೋ ರಾಜಾ ಯಥಾ ರಾಮಶ್ಚ ವಿಶ್ರುತಃ।
03083109c ತಥಾ ತ್ವಂ ಸರ್ವರಾಜಭ್ಯೋ ಭ್ರಾಜಸೇ ರಶ್ಮಿವಾನಿವ।।
ರಾಜ ಭಗೀರಥನಂತೆ, ವಿಶ್ರುತ ರಾಮನಂತೆ ನೀನೂ ಕೂಡ ಸರ್ವರಾಜರಲ್ಲಿ ರವಿಯಂತೆ ಬೆಳಗುತ್ತೀಯೆ.
03083110a ಯಥಾ ಮನುರ್ಯಥೇಕ್ಷ್ವಾಕುರ್ಯಥಾ ಪೂರುರ್ಮಹಾಯಶಾಃ।
03083110c ಯಥಾ ವೈನ್ಯೋ ಮಹಾತೇಜಾಸ್ತಥಾ ತ್ವಮಪಿ ವಿಶ್ರುತಃ।।
ಮನುವಿನಂತೆ, ಇಕ್ಷ್ವಾಕುವಂತೆ, ಮಹಾಯಶಸ್ವಿ ಪೂರುವಂತೆ, ಮಹಾತೇಜಸ್ವಿ ವೈನ್ಯನಂತೆ ನೀನೂ ಕೂಡ ವಿಶ್ರುತನಾಗುತ್ತೀಯೆ.
03083111a ಯಥಾ ಚ ವೃತ್ರಹಾ ಸರ್ವಾನ್ಸಪತ್ನಾನ್ನಿರ್ದಹತ್ಪುರಾ।
03083111c ತಥಾ ಶತ್ರುಕ್ಷಯಂ ಕೃತ್ವಾ ಪ್ರಜಾಸ್ತ್ವಂ ಪಾಲಯಿಷ್ಯಸಿ।।
ಹಿಂದೆ ವೃತ್ರಹನು ತನ್ನ ಎಲ್ಲ ಪ್ರತಿಸ್ಪರ್ಧಿಗಳನ್ನೂ ಸುಟ್ಟುಹಾಕಿದ ಹಾಗೆ ನೀನೂ ಕೂಡ ಶತ್ರುಗಳನ್ನು ನಾಶಪಡಿಸಿ ನಿನ್ನ ಪ್ರಜೆಗಳನ್ನು ಪರಿಪಾಲಿಸುತ್ತೀಯೆ.
03083112a ಸ್ವಧರ್ಮವಿಜಿತಾಮುರ್ವೀಂ ಪ್ರಾಪ್ಯ ರಾಜೀವಲೋಚನ।
03083112c ಖ್ಯಾತಿಂ ಯಾಸ್ಯಸಿ ಧರ್ಮೇಣ ಕಾರ್ತವೀರ್ಯಾರ್ಜುನೋ ಯಥಾ।।
ರಾಜೀವಲೋಚನ! ಸ್ವಧರ್ಮದಿಂದ ಭೂಮಿಯನ್ನು ಗೆದ್ದು ಧರ್ಮದಿಂದ ಕಾರ್ತವೀರ್ಯಾರ್ಜುನನು ಹೇಗೋ ಹಾಗೆ ಖ್ಯಾತಿಯನ್ನು ಹೊಂದುತ್ತೀಯೆ.””
03083113 ವೈಶಂಪಾಯನ ಉವಾಚ।
03083113a ಏವಮಾಶ್ವಾಸ್ಯ ರಾಜಾನಂ ನಾರದೋ ಭಗವಾನೃಷಿಃ।
03083113c ಅನುಜ್ಞಾಪ್ಯ ಮಹಾತ್ಮಾನಂ ತತ್ರೈವಾಂತರಧೀಯತ।।
ವೈಶಂಪಾಯನನು ಹೇಳಿದನು: “ರಾಜನನ್ನು ಈ ರೀತಿ ಹುರಿದುಂಬಿಸಿ ಭಗವಾನೃಷಿ ನಾರದನು ಆ ಮಹಾತ್ಮನಿಂದ ಬೀಳ್ಕೊಂಡು ಅಲ್ಲಿಯೇ ಅಂತರ್ಧಾನನಾದನು.
03083114a ಯುಧಿಷ್ಠಿರೋಽಪಿ ಧರ್ಮಾತ್ಮಾ ತಮೇವಾರ್ಥಂ ವಿಚಿಂತಯನ್।
03083114c ತೀರ್ಥಯಾತ್ರಾಶ್ರಯಂ ಪುಣ್ಯಮೃಷೀಣಾಂ ಪ್ರತ್ಯವೇದಯತ್।।
ಧರ್ಮಾತ್ಮ ಯುಧಿಷ್ಠಿರನಾದರೋ ಇದರ ಅರ್ಥವನ್ನೇ ಚಿಂತಿಸಿ, ತೀರ್ಥಯಾತ್ರೆಯ ಕುರಿತು ಪುಣ್ಯ ಋಷಿಗಳಿಗೆ ನಿವೇದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಪುಲಸ್ತ್ಯತೀರ್ಥಯಾತ್ರಾಯಾಂ ತ್ರ್ಯಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಪುಲಸ್ತ್ಯತೀರ್ಥಯಾತ್ರಾ ಎನ್ನುವ ಎಂಭತ್ಮೂರನೆಯ ಅಧ್ಯಾಯವು.
-
ಅಲಹಾಬಾದ್ . ↩︎