ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 61
ಸಾರ
ದಮಯಂತಿಯು ರೋದಿಸುತ್ತಾ ನಲನನ್ನು ಅರಸುತ್ತಾ ಮೂರು ಹಗಲು ಮೂರು ರಾತ್ರಿಗಳು ಪ್ರಯಾಣ ಮಾಡಿ ಋಷಿಗಳ ಆಶ್ರಮ ಪದವನ್ನು ಕಂಡಿದುದು (1-57). ಆಶ್ರಮಪದವನ್ನು ಪ್ರವೇಶಿಸಿ ದಮಯಂತಿಯು ತನ್ನ ಕಷ್ಟಗಳನ್ನು ಹೇಳಿಕೊಂಡಿದುದು (58-85). ನೀನು ನಲನನ್ನು ಕಾಣುತ್ತೀಯೆ ಎಂದು ಹೇಳಿ ತಾಪಸರೂ ಆಶ್ರಮಪದವೂ ಅದೃಶ್ಯವಾದುದು (86-91). ವಿಸ್ಮಿತಳಾಗಿ ಮುಂದುವರೆದು ದಮಯಂತಿಯು ಪ್ರಯಾಣಿಸುತ್ತಿರುವ ದಂಡೊಂದನ್ನು ಸೇರಿಕೊಂಡಿದುದು (92-125).
03061001 ಬೃಹದಶ್ವ ಉವಾಚ।
03061001a ಸಾ ನಿಹತ್ಯ ಮೃಗವ್ಯಾಧಂ ಪ್ರತಸ್ಥೇ ಕಮಲೇಕ್ಷಣಾ।
03061001c ವನಂ ಪ್ರತಿಭಯಂ ಶೂನ್ಯಂ ಝಿಲ್ಲಿಕಾಗಣನಾದಿತಂ।।
ಬೃಹದಶ್ವನು ಹೇಳಿದನು: “ಮೃಗವ್ಯಾಧನನ್ನು ಕೊಂದ ಕಮಲಾಕ್ಷಿಯು ಝಿಲ್ಲೀಕ ಗಣಗಳ ನಿನಾದದೊಂದೊಡಗೂಡಿದ ಶೂನ್ಯವಾದ ಭಯಂಕರ ವನವನ್ನು ಪ್ರವೇಶಿಸಿದಳು.
03061002a ಸಿಂಹವ್ಯಾಘ್ರವರಾಹರ್ಕ್ಷರುರುದ್ವೀಪಿನಿಷೇವಿತಂ।
03061002c ನಾನಾಪಕ್ಷಿಗಣಾಕೀರ್ಣಂ ಮ್ಲೇಚ್ಚತಸ್ಕರಸೇವಿತಂ।।
ಆ ವನವು ಸಿಂಹ, ವ್ಯಾಘ್ರ, ವರಾಹ, ರುರು ಮತ್ತು ಆನೆಗಳಿಂದೊಡಗೂಡಿತ್ತು. ನಾನಾ ಪಕ್ಷಿಗಣಗಳು ತುಂಬಿಕೊಂಡಿದ್ದವು ಮತ್ತು ಮ್ಲೇಚ್ಛ-ಡಕಾಯಿತರಿಂದ ಒಡಗೂಡಿತ್ತು.
03061003a ಶಾಲವೇಣುಧವಾಶ್ವತ್ಥತಿಂದುಕೇಂಗುದಕಿಂಶುಕೈಃ।
03061003c ಅರ್ಜುನಾರಿಷ್ಟಸಂಚನ್ನಂ ಚಂದನೈಶ್ಚ ಸಶಾಲ್ಮಲೈಃ।।
03061004a ಜಂಬ್ವಾಂರಲೋಧ್ರಖದಿರಶಾಕವೇತ್ರಸಮಾಕುಲಂ।
03061004c ಕಾಶ್ಮರ್ಯಾಮಲಕಪ್ಲಕ್ಷಕದಂಬೋದುಂಬರಾವೃತಂ।।
03061005a ಬದರೀಬಿಲ್ವಸಂಚನ್ನಂ ನ್ಯಗ್ರೋಧೈಶ್ಚ ಸಮಾಕುಲಂ।
03061005c ಪ್ರಿಯಾಲತಾಲಖರ್ಜೂರಹರೀತಕಬಿಭೀತಕೈಃ।।
ಶಾಲ, ವೇಣು [ಬಿದಿರು], ಧವ, ಅಶ್ವತ್ಥ, ತಿಂಡುಕ, ಇಂಗುದ, ಕಿಂಶುಕ, ಅರ್ಜುನ, ಅರಿಷ್ಟ, ಸಂಚನ್ನ [ಬೇವು], ಚಂದನ, ಶಾಲ್ಮಲ, ಜಂಬೂ [ನೇರಳೆ], ಮಾವು, ಲೋಧ್ರ, ಖದಿರ, ಸಾಲ, ವೇತ್ರ, ಪದ್ಮಕ, ಸ್ಯಂದನ, ಅಮಲಕ, ಪ್ಲ್ಲಕ್ಷ, ಕದಂಬ, ಉದುಂಬರ, ಬದರಿ, ಬಿಲ್ವ, ಆಲ,??ಪ್ರಿಯಾಲ, ತಾಲ, ಖರ್ಜೂರ, ಹರೀತಕ ಮತ್ತು ಬಿಭೀತಕ ಮೊದಲಾದ ವೃಕ್ಷಗಳ ಸಂಕುಲವೇ ಇತ್ತು.
03061006a ನಾನಾಧಾತುಶತೈರ್ನದ್ಧಾನ್ವಿವಿಧಾನಪಿ ಚಾಚಲಾನ್।
03061006c ನಿಕುಂಜಾನ್ಪಕ್ಷಿಸಂಘುಷ್ಟಾನ್ದರೀಶ್ಚಾದ್ಭುತದರ್ಶನಾಃ।।
03061006e ನದೀಃ ಸರಾಂಸಿ ವಾಪೀಶ್ಚ ವಿವಿಧಾಂಶ್ಚ ಮೃಗದ್ವಿಜಾನ್।
03061007a ಸಾ ಬಹೂನ್ಭೀಮರೂಪಾಂಶ್ಚ ಪಿಶಾಚೋರಗರಾಕ್ಷಸಾನ್।।
03061007c ಪಲ್ವಲಾನಿ ತಡಾಗಾನಿ ಗಿರಿಕೂಟಾನಿ ಸರ್ವಶಃ।
03061007e ಸರಿತಃ ಸಾಗರಾಂಶ್ಚೈವ ದದರ್ಶಾದ್ಭುತದರ್ಶನಾನ್।।
03061008a ಯೂಥಶೋ ದದೃಶೇ ಚಾತ್ರ ವಿದರ್ಭಾಧಿಪನಂದಿನೀ।
03061008c ಮಹಿಷಾನ್ವರಾಹಾನ್ಗೋಮಾಯೂನೃಕ್ಷವಾನರಪನ್ನಗಾನ್।।
ಅಲ್ಲಿ ಅನೇಕವಿಧದ ಧಾತುಗಳನ್ನೂ, ಲೋಹಗಳ ಅದಿರನ್ನೂ, ಪಕ್ಷಿಗಳು ಗುಂಪಾಗಿ ನಿನಾದ ಮಾಡುತ್ತಿರುವುದನ್ನೂ, ಅದ್ಭುತವಾಗಿ ತೋರುತ್ತಿದ್ದ ಕಣಿವೆಗಳನ್ನೂ, ನದೀ, ಸರೋವರ, ಬಾವಿಗಳನ್ನೂ, ವಿವಿಧ ಮೃಗಗಳನ್ನೂ, ಬಹಳಷ್ಟು ಘೋರರೂಪಿ ಪಿಶಾಚ, ಉರಗ ಮತು??ರಾಕ್ಷಸರನ್ನೂ, ಅನೇಕ ಚಿಲುಮೆಗಳನ್ನೂ, ತಟಾಕಗಳನ್ನೂ, ಬೆಟ್ಟ-ಶಿಖರಗಳನ್ನೂ, ನದಿ-ಸಾಗರಗಳು ಮತ್ತು ಅವುಗಳ ಅದ್ಭುತ ಪ್ರವಾಹಗಳನ್ನು, ಕಾಡೆಮ್ಮೆ-ಹಂದಿ-ಕರಡಿ-ಹಾವುಗಳು ಎಲ್ಲವನ್ನೂ ವಿದರ್ಭಾಧಿಪನ ಮಗಳು ನೋಡಿದಳು.
03061009a ತೇಜಸಾ ಯಶಸಾ ಸ್ಥಿತ್ಯಾ ಶ್ರಿಯಾ ಚ ಪರಯಾ ಯುತಾ।
03061009c ವೈದರ್ಭೀ ವಿಚರತ್ಯೇಕಾ ನಲಮನ್ವೇಷತೀ ತದಾ।।
03061010a ನಾಬಿಭ್ಯತ್ಸಾ ನೃಪಸುತಾ ಭೈಮೀ ತತ್ರಾಥ ಕಸ್ಯ ಚಿತ್।
03061010c ದಾರುಣಾಮಟವೀಂ ಪ್ರಾಪ್ಯ ಭರ್ತೃವ್ಯಸನಕರ್ಶಿತಾ।।
ಪತಿಯ ವ್ಯಸನದಿಂದ ಸೋತುಹೋಗಿದ್ದ ಆ ತೇಜಸ್ವಿನಿ, ಯಶಸ್ವಿನಿ, ಶ್ರೀ, ಪರಮ ಸಹನಾಶಕ್ತಿಯನ್ನು ಹೊಂದಿದ್ದ, ನಲನನ್ನು ಹುಡುಕುವ ಒಂದೇ ಒಂದು ವಿಚಾರವನ್ನಿಟ್ಟುಕೊಂಡಿದ್ದ ನೃಪಸುತೆ ಭೈಮಿಯು ಅಂಥ ದಾರುಣ ಅಡವಿಯನ್ನು ಸೇರಿಯೂ ಯಾವುದರ ಕುರಿತೂ ಭಯ ಪಟ್ಟುಕೊಳ್ಳಲಿಲ್ಲ.
03061011a ವಿದರ್ಭತನಯಾ ರಾಜನ್ವಿಲಲಾಪ ಸುದುಃಖಿತಾ।
03061011c ಭರ್ತೃಶೋಕಪರೀತಾಂಗೀ ಶಿಲಾತಲಸಮಾಶ್ರಿತಾ।।
ರಾಜನ್! ಒಂದು ಶಿಲೆಯಮೇಲೆ ಕುಳಿತುಕೊಂಡು ಭರ್ತೃಶೋಕದಿಂದ ಪೀಡಿತಳಾದ ವಿದರ್ಭತನಯೆಯು ದುಃಖಿತಳಾಗಿ ವಿಲಪಿಸಿದಳು.
03061012 ದಮಯಂತ್ಯುವಾಚ।
03061012a ಸಿಂಹೋರಸ್ಕ ಮಹಾಬಾಹೋ ನಿಷಧಾನಾಂ ಜನಾಧಿಪ।
03061012c ಕ್ವ ನು ರಾಜನ್ಗತೋಽಸೀಹ ತ್ಯಕ್ತ್ವಾ ಮಾಂ ನಿರ್ಜನೇ ವನೇ।।
ದಮಯಂತಿಯು ಹೇಳಿದಳು: “ಸಿಂಹೋರಸ್ಕ! ಮಹಾಬಾಹೋ! ನಿಷಧ ಜನಾಧಿಪ! ರಾಜನ್! ಈ ನಿರ್ಜನ ವನದಲ್ಲಿ ನನ್ನನ್ನು ಬಿಟ್ಟು ಎಲ್ಲಿ ಹೋಗಿರುವೆ?
03061013a ಅಶ್ವಮೇಧಾದಿಭಿರ್ವೀರ ಕ್ರತುಭಿಃ ಸ್ವಾಪ್ತದಕ್ಷಿಣೈಃ।
03061013c ಕಥಮಿಷ್ಟ್ವಾ ನರವ್ಯಾಘ್ರ ಮಯಿ ಮಿಥ್ಯಾ ಪ್ರವರ್ತಸೇ।।
ವೀರ! ಶ್ರೀಮಂತ ದಕ್ಷಿಣೆಗಳನ್ನಿತ್ತು ಅಶ್ವಮೇಧ ಮುಂತಾದ ಕ್ರತುಗಳನ್ನು ಮಾಡಿದ ನರವ್ಯಾಘ್ರ! ನೀನು ನನಗೆ ಹೇಗೆ ಸುಳ್ಳಾಗಿ ವರ್ತಿಸಿದೆ?
03061014a ಯತ್ತ್ವಯೋಕ್ತಂ ನರವ್ಯಾಘ್ರ ಮತ್ಸಮಕ್ಷಂ ಮಹಾದ್ಯುತೇ।
03061014c ಕರ್ತುಮರ್ಹಸಿ ಕಲ್ಯಾಣ ತದೃತಂ ಪಾರ್ಥಿವರ್ಷಭ।।
ನರವ್ಯಾಘ್ರ! ಮಹಾದ್ಯುತಿ! ಪಾರ್ಥಿವರ್ಷಭ! ಕಲ್ಯಾಣ! ನನ್ನ ಎದುರು ನೀನು ಹೇಳಿದುದನ್ನು ಸತ್ಯವನ್ನಾಗಿಸು.
03061015a ಯಥೋಕ್ತಂ ವಿಹಗೈರ್ಹಂಸೈಃ ಸಮೀಪೇ ತವ ಭೂಮಿಪ।
03061015c ಮತ್ಸಕಾಶೇ ಚ ತೈರುಕ್ತಂ ತದವೇಕ್ಷಿತುಮರ್ಹಸಿ।।
ಭೂಮಿಪ! ನಿನ್ನ ಮತ್ತು ನನ್ನೊಡನೆ ಹಂಸಪಕ್ಷಿಗಳು ಹೇಳಿದ್ದುದನ್ನು ನೆನಪಿಸಿಕೋ.
03061016a ಚತ್ವಾರ ಏಕತೋ ವೇದಾಃ ಸಾಂಗೋಪಾಂಗಾಃ ಸವಿಸ್ತರಾಃ।
03061016c ಸ್ವಧೀತಾ ಮಾನವಶ್ರೇಷ್ಠ ಸತ್ಯಮೇಕಂ ಕಿಲೈಕತಃ।।
ನಾಲ್ಕೂ ವೇದಗಳನ್ನೂ ಸಾಂಗೋಪಾಂಗವಾಗಿ ಸವಿಸ್ತಾರವಾಗಿ ತನ್ನದಾಗಿಸಿಕೊಂಡ ಮನುಜವ್ಯಾಘ್ರನು ಸತ್ಯವಂತನಲ್ಲವೇ?
03061017a ತಸ್ಮಾದರ್ಹಸಿ ಶತ್ರುಘ್ನ ಸತ್ಯಂ ಕರ್ತುಂ ನರೇಶ್ವರ।
03061017c ಉಕ್ತವಾನಸಿ ಯದ್ವೀರ ಮತ್ಸಕಾಶೇ ಪುರಾ ವಚಃ।।
ಶತ್ರುಘ್ನ! ನರೇಶ್ವರ! ವೀರ! ಹಿಂದೆ ನೀನು ನನ್ನ ಎದಿರು ಆಡಿದ ಮಾತನ್ನು ಸತ್ಯವನ್ನಾಗಿಸು.
03061018a ಹಾ ವೀರ ನನು ನಾಮಾಹಮಿಷ್ಟಾ ಕಿಲ ತವಾನಘ।
03061018c ಅಸ್ಯಾಮಟವ್ಯಾಂ ಘೋರಾಯಾಂ ಕಿಂ ಮಾಂ ನ ಪ್ರತಿಭಾಷಸೇ।।
ಹಾ ವೀರ! ಅನಘ! ನಿನಗೆ ನಾನು ಇನ್ನು ಇಷ್ಟವೇ ಇಲ್ಲದವಳಾದೆನೇ? ಈ ಘೋರ ಅಡವಿಯಲ್ಲಿ ಯಾಕೆ ನೀನು ಉತ್ತರಿಸುತ್ತಿಲ್ಲ?
03061019a ಭರ್ತ್ಸಯತ್ಯೇಷ ಮಾಂ ರೌದ್ರೋ ವ್ಯಾತ್ತಾಸ್ಯೋ ದಾರುಣಾಕೃತಿಃ।
03061019c ಅರಣ್ಯರಾಟ್ ಕ್ಷುಧಾವಿಷ್ಟಃ ಕಿಂ ಮಾಂ ನ ತ್ರಾತುಮರ್ಹಸಿ।।
ಈ ರೌದ್ರ ದಾರುಣಾಕಾರದ ಅರಣ್ಯರಾಜನು ನನ್ನನ್ನು ತಿನ್ನಲು ಬಾಯಿ ತೆರೆದಿದ್ದಾನೆಯಾದರೂ ನೀನು ಬಂದು ನನ್ನನ್ನು ಏಕೆ ರಕ್ಷಿಸುವುದಿಲ್ಲ?
03061020a ನ ಮೇ ತ್ವದನ್ಯಾ ಸುಭಗೇ ಪ್ರಿಯಾ ಇತ್ಯಬ್ರವೀಸ್ತದಾ।
03061020c ತಾಮೃತಾಂ ಕುರು ಕಲ್ಯಾಣ ಪುರೋಕ್ತಾಂ ಭಾರತೀಂ ನೃಪ।।
ಅಂದು ನೀನು ಸುಭಗೇ! ನಿನಗಿಂತ ಬೇರೆ ಯಾರೂ ಪ್ರಿಯರಿಲ್ಲ ಎಂದು ಹೇಳಿದ್ದೆ. ಕಲ್ಯಾಣ! ನೃಪ! ಹಿಂದೆ ಹೇಳಿದ ಈ ಮಾತನ್ನು ಸತ್ಯಗೊಳಿಸು.
03061021a ಉನ್ಮತ್ತಾಂ ವಿಲಪಂತೀಂ ಮಾಂ ಭಾರ್ಯಾಮಿಷ್ಟಾಂ ನರಾಧಿಪ।
03061021c ಈಪ್ಸಿತಾಮೀಪ್ಸಿತೋ ನಾಥ ಕಿಂ ಮಾಂ ನ ಪ್ರತಿಭಾಷಸೇ।।
ನರಾಧಿಪ! ನಾಥ! ಈ ಪತ್ನಿಯನ್ನು ನೀನು ಪ್ರೀತಿಸುವುದೇ ಆದರೆ ಉನ್ಮತ್ತಳಾಗಿ ವಿಲಪಿಸುತ್ತಿರುವ ನನಗೆ ಯಾಕೆ ಉತ್ತರಿಸುತ್ತಿಲ್ಲ?
03061022a ಕೃಶಾಂ ದೀನಾಂ ವಿವರ್ಣಾಂ ಚ ಮಲಿನಾಂ ವಸುಧಾಧಿಪ।
03061022c ವಸ್ತ್ರಾರ್ಧಪ್ರಾವೃತಾಮೇಕಾಂ ವಿಲಪಂತೀಮನಾಥವತ್।।
03061023a ಯೂಥಭ್ರಷ್ಟಾಮಿವೈಕಾಂ ಮಾಂ ಹರಿಣೀಂ ಪೃಥುಲೋಚನ।
03061023c ನ ಮಾನಯಸಿ ಮಾನಾರ್ಹ ರುದತೀಮರಿಕರ್ಶನ।।
03061024a ಮಹಾರಾಜ ಮಹಾರಣ್ಯೇ ಮಾಮಿಹೈಕಾಕಿನೀಂ ಸತೀಂ।
03061024c ಆಭಾಷಮಾಣಾಂ ಸ್ವಾಂ ಪತ್ನೀಂ ಕಿಂ ಮಾಂ ನ ಪ್ರತಿಭಾಷಸೇ।।
ವಸುಧಾಧಿಪ! ನಾನು ಕೃಶಳಾಗಿದ್ದೇನೆ, ದೀನಳಾಗಿದ್ದೇನೆ, ವಿವರ್ಣಳಾಗಿದ್ದೇನೆ. ಅರ್ಧವಸ್ತ್ರವನ್ನು ಸುತ್ತಿಕೊಂಡು, ಏಕಾಂಗಿಯಾಗಿ, ಅನಾಥಳಂತೆ ವಿಲಪಿಸುತ್ತಿದ್ದೇನೆ. ಪೃಥುಲೋಚನ! ಗುಂಪಿನಿಂದ ಬೇರೆಯಾದ ಹರಿಣಿಯಂತಾಗಿದ್ದೇನೆ. ಅರಿಕರ್ಶನ! ಮಾನಾರ್ಹ! ರೋದಿಸುತ್ತಿರುವ ನನ್ನನ್ನು ಯಾಕೆ ಗೌರವಿಸುತ್ತಿಲ್ಲ? ಮಾಹಾರಾಜ! ಮಹಾರಣ್ಯದಲ್ಲಿ ಏಕಾಕಿಯಾಗಿ ಮಾತನಾಡುತ್ತಿರುವ ಸತಿಗೆ ನೀನು ಏಕೆ ಉತ್ತರಿಸುತ್ತಿಲ್ಲ?
03061025a ಕುಲಶೀಲೋಪಸಂಪನ್ನಂ ಚಾರುಸರ್ವಾಂಗಶೋಭನಂ।
03061025c ನಾದ್ಯ ತ್ವಾಮನುಪಶ್ಯಾಮಿ ಗಿರಾವಸ್ಮಿನ್ನರೋತ್ತಮ।
03061025e ವನೇ ಚಾಸ್ಮಿನ್ಮಹಾಘೋರೇ ಸಿಂಹವ್ಯಾಘ್ರನಿಷೇವಿತೇ।।
03061026a ಶಯಾನಮುಪವಿಷ್ಟಂ ವಾ ಸ್ಥಿತಂ ವಾ ನಿಷಧಾಧಿಪ।
03061026c ಪ್ರಸ್ಥಿತಂ ವಾ ನರಶ್ರೇಷ್ಠ ಮಮ ಶೋಕವಿವರ್ಧನ।।
ಕುಲಶೀಲೋಪಸಂಪನ್ನ! ಚಾರುಸರ್ವಾಂಗಶೋಭನ! ನರೋತ್ತಮ! ನಿನ್ನನ್ನು ಇಂದು ಈ ಗಿರಿಯ ಮೇಲೆ ಕಾಣುತ್ತಿಲ್ಲ. ನರಾಧಿಪ! ನರಶ್ರೇಷ್ಠ! ಸಿಂಹವ್ಯಾಘ್ರಗಳಿಂದೊಡಗೂಡಿದ ಈ ಮಹಾಘೋರ ವನದಲ್ಲಿ ಮಲಗಿದ್ದೀಯಾ, ಕುಳಿತಿದ್ದೀಯಾ, ನಿಂತಿದ್ದೀಯಾ ಅಥವಾ ನನ್ನ ಶೋಕವನ್ನು ಹೆಚ್ಚಿಸಲು ಹೊರಟುಹೋಗುತ್ತಿದ್ದೀಯಾ?
03061027a ಕಂ ನು ಪೃಚ್ಚಾಮಿ ದುಃಖಾರ್ತಾ ತ್ವದರ್ಥೇ ಶೋಕಕರ್ಶಿತಾ।
03061027c ಕಚ್ಚಿದ್ದೃಷ್ಟಸ್ತ್ವಯಾರಣ್ಯೇ ಸಂಗತ್ಯೇಹ ನಲೋ ನೃಪಃ।।
ನಿನ್ನ ಶೋಕದಿಂದ ಸೋತುಹೋದ, ದುಃಖಾರ್ತಳಾದ ನಾನು ಈ ಅರಣ್ಯದಲ್ಲಿ ನೃಪ ನಲನನ್ನು ನೋಡಿದ್ದೀರಾ ಅಥವಾ ಭೆಟ್ಟಿಯಾಗಿದ್ದೀರಾ ಎಂದು ಯಾರನ್ನು ಕೇಳಲಿ?
03061028a ಕೋ ನು ಮೇ ಕಥಯೇದದ್ಯ ವನೇಽಸ್ಮಿನ್ವಿಷ್ಠಿತಂ ನಲಂ।
03061028c ಅಭಿರೂಪಂ ಮಹಾತ್ಮಾನಂ ಪರವ್ಯೂಹವಿನಾಶನಂ।।
ಕಳೆದುಹೋದ ಪರವ್ಯೂಹವಿನಾಶಕ, ಮಹಾತ್ಮ, ಅಭಿರೂಪಿ ನಲನ ಕುರಿತು ನನಗೆ ಹೇಳುವವರು ಇಲ್ಲಿ ಯಾರಿದ್ದಾರೆ?
03061029a ಯಮನ್ವೇಷಸಿ ರಾಜಾನಂ ನಲಂ ಪದ್ಮನಿಭೇಕ್ಷಣಂ।
03061029c ಅಯಂ ಸ ಇತಿ ಕಸ್ಯಾದ್ಯ ಶ್ರೋಷ್ಯಾಮಿ ಮಧುರಾಂ ಗಿರಂ।।
ನಾನು ಅನ್ವೇಷಿಸುತ್ತಿರುವ ಪದ್ಮನಿಭೇಕ್ಷಣ ರಾಜ ನಲನು ಇಲ್ಲಿ ಇದ್ದಾನೆ ಎನ್ನುವ ಮಧುರ ವಾಖ್ಯವನ್ನು ಇಂದು ಇಲ್ಲಿ ಹೇಳುವವರು ಯಾರಿದ್ದಾರೆ?
03061030a ಅರಣ್ಯರಾಡಯಂ ಶ್ರೀಮಾಂಶ್ಚತುರ್ದಂಷ್ಟ್ರೋ ಮಹಾಹನುಃ।
03061030c ಶಾರ್ದೂಲೋಽಭಿಮುಖಃ ಪ್ರೈತಿ ಪೃಚ್ಚಾಮ್ಯೇನಮಶಂಕಿತಾ।।
ಅದೋ ಅಲ್ಲಿ ಶ್ರೀಮಾನ್ ಅರಣ್ಯರಾಜ ಚತುರ್ದಂಷ್ಟ್ರ ಮಹಾಹನು ಶಾರ್ದೂಲನು ನನ್ನನ್ನು ಭೆಟ್ಟಿಯಾಗಲು ಎದುರಾಗುತ್ತಿದ್ದಾನೆ. ಅಶಂಕಿತಳಾಗಿ ಅವನನ್ನೇ ಕೇಳುತ್ತೇನೆ:
03061031a ಭವಾನ್ಮೃಗಾಣಾಮಧಿಪಸ್ತ್ವಮಸ್ಮಿನ್ಕಾನನೇ ಪ್ರಭುಃ।
03061031c ವಿದರ್ಭರಾಜತನಯಾಂ ದಮಯಂತೀತಿ ವಿದ್ಧಿ ಮಾಂ।।
03061032a ನಿಷಧಾಧಿಪತೇರ್ಭಾರ್ಯಾಂ ನಲಸ್ಯಾಮಿತ್ರಘಾತಿನಃ।
03061032c ಪತಿಮನ್ವೇಷತೀಮೇಕಾಂ ಕೃಪಣಾಂ ಶೋಕಕರ್ಶಿತಾಂ।
03061032e ಆಶ್ವಾಸಯ ಮೃಗೇಂದ್ರೇಹ ಯದಿ ದೃಷ್ಟಸ್ತ್ವಯಾ ನಲಃ।।
ಭವಾನ್! ಮೃಗಗಳ ಅಧಿಪತಿ! ಕಾನನ ಪ್ರಭು! ನನ್ನನ್ನು ವಿದರ್ಭರಾಜತನಯೆ ದಮಯಂತಿ, ಅಮಿತ್ರಘಾತಿ ನಿಷಧಾಧಿಪತಿ ನಲನ ಭಾರ್ಯೆಯೆಂದು ತಿಳಿ. ಪತಿಯನ್ನು ಅನ್ವೇಶಿಸುತ್ತಾ ಒಬ್ಬಳೇ ಕೃಪಣಳಾಗಿ ಶೋಕದಿಂದ ಸೋತುಹೋಗಿದ್ದೇನೆ. ಮೃಗೇಂದ್ರ! ನೀನು ನಲನನ್ನು ಕಂಡಿದ್ದೀಯಾ? ಆಶ್ವಾಸನೆ ಕೊಡು.
03061033a ಅಥ ವಾರಣ್ಯನೃಪತೇ ನಲಂ ಯದಿ ನ ಶಂಸಸಿ।
03061033c ಮಾಮದಸ್ವ ಮೃಗಶ್ರೇಷ್ಠ ವಿಶೋಕಾಂ ಕುರು ದುಃಖಿತಾಂ।।
ಅರಣ್ಯನೃಪತೇ! ಮೃಗಶ್ರೇಷ್ಠ! ಒಂದುವೇಳೆ ನಲನ ಕುರಿತು ಮಾತನಾಡುವುದಿಲ್ಲವಾದರೆ ದುಃಖಿತಳಾದ ನನ್ನನ್ನು ತಿಂದು ವಿಶೋಕಳನ್ನಾಗಿ ಮಾಡು.
03061034a ಶ್ರುತ್ವಾರಣ್ಯೇ ವಿಲಪಿತಂ ಮಮೈಷ ಮೃಗರಾಟ್ಸ್ವಯಂ।
03061034c ಯಾತ್ಯೇತಾಂ ಮೃಷ್ಟಸಲಿಲಾಮಾಪಗಾಂ ಸಾಗರಂಗಮಾಂ।।
ಮೃಗರಾಜನು ಅರಣ್ಯದಲ್ಲಿ ನನ್ನ ಈ ವಿಲಾಪವನ್ನು ಕೇಳಿ ತನ್ನಷ್ಟಕ್ಕೇ ಸಾಗರವನ್ನು ಸೇರಲು ಸಲಿಲವಾಗಿ ಹರಿಯುತ್ತಿರುವ ನದಿಯ ಕಡೆ ಹೋಗುತ್ತಿದ್ದಾನೆ.
03061035a ಇಮಂ ಶಿಲೋಚ್ಚಯಂ ಪುಣ್ಯಂ ಶೃಂಗೈರ್ಬಹುಭಿರುಚ್ಚ್ರಿತೈಃ।
03061035c ವಿರಾಜದ್ಭಿರ್ದಿವಸ್ಪೃಗ್ಭಿರ್ನೈಕವರ್ಣೈರ್ಮನೋರಮೈಃ।।
03061036a ನಾನಾಧಾತುಸಮಾಕೀರ್ಣಂ ವಿವಿಧೋಪಲಭೂಷಿತಂ।
03061036c ಅಸ್ಯಾರಣ್ಯಸ್ಯ ಮಹತಃ ಕೇತುಭೂತಮಿವೋಚ್ಚ್ರಿತಂ।।
03061037a ಸಿಂಹಶಾರ್ದೂಲಮಾತಂಗವರಾಹರ್ಕ್ಷಮೃಗಾಯುತಂ।
03061037c ಪತತ್ರಿಭಿರ್ಬಹುವಿಧೈಃ ಸಮಂತಾದನುನಾದಿತಂ।।
03061038a ಕಿಂಶುಕಾಶೋಕಬಕುಲಪುಂನಾಗೈರುಪಶೋಭಿತಂ।
03061038c ಸರಿದ್ಭಿಃ ಸವಿಹಂಗಾಭಿಃ ಶಿಖರೈಶ್ಚೋಪಶೋಭಿತಂ।
03061038 ಗಿರಿರಾಜಮಿಮಂ ತಾವತ್ಪೃಚ್ಚಾಮಿ ನೃಪತಿಂ ಪ್ರತಿ।।
ಶಿಲೆಗಳಿಂದ ಕೂಡಿದ, ಪುಣ್ಯಕರ, ಆಕಾಶವನ್ನೆ ಮುಟ್ಟುತ್ತವೆಯೋ ಎಂದು ತೋರುತ್ತಿರುವ ಎತ್ತರವಾಗಿರುವ ಬಹಳ ಶಿಖರಗಳಿಂದ ಕೂಡಿದ, ಅದರ ತಪ್ಪಲಿನಲ್ಲಿ ಗೈರಿಕಾದಿ ಧಾತುಗಳನ್ನು ಹೊಂದಿರುವ, ವಿವಿಧ ಪಲಗಳಿಂದ ಭೂಷಿತ, ಸಿಂಹ-ಹುಲಿ-ಆನೆ-ಹಂದಿ-ಬಲ್ಲೂಕ ಮೊದಲಾದ ಪ್ರಾಣಿಗಳಿಂದ ಕೂಡಿದ, ಬಹುವಿಧ ಪಕ್ಷಿಸಂಕುಲಗಳ ನಿನಾದದಿಂದೊಡಗೂಡಿದ, ಕಿಂಶುಕ-ಅಶೋಕ-ಬಕುಲ-ಪುನ್ನಾಗಗಳಿಂದ ಶೋಭಿತ, ಜಲಪಕ್ಷಿ ಸಂಕುಲಗಳಿಂದ ಕೂಡಿದ ನದಿ ಮತ್ತು ಶಿಖರಗಳಿಂದ ಪರಿಶೋಭಿತ ಈ ಗಿರಿರಾಜನನ್ನು ನೃಪತಿಯ ಕುರಿತು ಕೇಳುತ್ತೇನೆ.
03061039a ಭಗವನ್ನಚಲಶ್ರೇಷ್ಠ ದಿವ್ಯದರ್ಶನ ವಿಶ್ರುತ।
03061039c ಶರಣ್ಯ ಬಹುಕಲ್ಯಾಣ ನಮಸ್ತೇಽಸ್ತು ಮಹೀಧರ।।
ಭಗವನ್! ಅಚಲಶ್ರೇಷ್ಠ! ದಿವ್ಯದರ್ಶನ! ವಿಶೃತ! ಬಹುಕಲ್ಯಾಣ! ಶರಣ್ಯ! ಮಹೀಧರ! ನಿನಗೆ ನನ್ನ ನಮಸ್ಕಾರಗಳು.
03061040a ಪ್ರಣಮೇ ತ್ವಾಭಿಗಮ್ಯಾಹಂ ರಾಜಪುತ್ರೀಂ ನಿಬೋಧ ಮಾಂ।
03061040c ರಾಜ್ಞಃ ಸ್ನುಷಾಂ ರಾಜಭಾರ್ಯಾಂ ದಮಯಂತೀತಿ ವಿಶ್ರುತಾಂ।।
ನಾನು ನಿನ್ನಲ್ಲಿಗೆ ಬಂದು ನಮಿಸುತ್ತಿದ್ದೇನೆ. ನನ್ನನ್ನು ರಾಜಪುತ್ರಿ, ರಾಜನ ಸೊಸೆ, ರಾಜನ ಪತ್ನಿ, ವಿಶ್ರುತ ದಮಯಂತಿಯೆಂದು ತಿಳಿ.
03061041a ರಾಜಾ ವಿದರ್ಭಾಧಿಪತಿಃ ಪಿತಾ ಮಮ ಮಹಾರಥಃ।
03061041c ಭೀಮೋ ನಾಮ ಕ್ಷಿತಿಪತಿಶ್ಚಾತುರ್ವರ್ಣ್ಯಸ್ಯ ರಕ್ಷಿತಾ।।
ವಿದರ್ಭಾಧಿಪತಿ ರಾಜ ಮಹಾರಥಿ, ಚಾತುರ್ವಣ್ಯವನ್ನೂ ರಕ್ಷಿಸುವ ಭೀಮ ಎಂಬ ಹೆಸರಿನ ಕ್ಷಿತಿಪತಿಯು ನನ್ನ ಪಿತ.
03061042a ರಾಜಸೂಯಾಶ್ವಮೇಧಾನಾಂ ಕ್ರತೂನಾಂ ದಕ್ಷಿಣಾವತಾಂ।
03061042c ಆಹರ್ತಾ ಪಾರ್ಥಿವಶ್ರೇಷ್ಠಃ ಪೃಥುಚಾರ್ವಂಚಿತೇಕ್ಷಣಃ।।
03061043a ಬ್ರಹ್ಮಣ್ಯಃ ಸಾಧುವೃತ್ತಶ್ಚ ಸತ್ಯವಾಗನಸೂಯಕಃ।
03061043c ಶೀಲವಾನ್ಸುಸಮಾಚಾರಃ ಪೃಥುಶ್ರೀರ್ಧರ್ಮವಿಚ್ಶುಚಿಃ।।
03061044a ಸಮ್ಯಗ್ಗೋಪ್ತಾ ವಿದರ್ಭಾಣಾಂ ನಿರ್ಜಿತಾರಿಗಣಃ ಪ್ರಭುಃ।
03061044c ತಸ್ಯ ಮಾಂ ವಿದ್ಧಿ ತನಯಾಂ ಭಗವಂಸ್ತ್ವಾಮುಪಸ್ಥಿತಾಂ।।
ದಕ್ಷಿಣೆಗಳನ್ನು ಕೊಟ್ಟು ರಾಜಸೂಯ, ಅಶ್ವಮೇಧ ಮೊದಲಾದ ಕ್ರತುಗಳನ್ನು ಮಾಡಿದ, ಪಾರ್ಥಿವಶ್ರೇಷ್ಠ, ಸುಂದರ ವಿಶಾಲ ಕಣ್ಣುಗಳನ್ನುಳ್ಳ, ಬ್ರಹ್ಮಣ್ಯ, ಸಾಧುವೃತ್ತಿ, ಸತ್ಯವಾನ್, ಅನಸೂಯಕ, ಶೀಲವಂತ, ಸುಸಮಾಚಾರ, ಪೃಥುಶ್ರೀ, ಧರ್ಮವಿಂಚುಷಿ, ಅರಿಗಣಗಳನ್ನು ಜಯಿಸಿದ, ವಿದರ್ಭರನ್ನು ಚೆನ್ನಾಗಿ ಪರಿಪಾಲಿಸುತ್ತಿರುವ ಪ್ರಭು ಅವನ ಮಗಳೇ ನಾನು. ನಿನ್ನ ಬಳಿ ಬಂದಿದ್ದೇನೆ ಎಂದು ತಿಳಿ.
03061045a ನಿಷಧೇಷು ಮಹಾಶೈಲ ಶ್ವಶುರೋ ಮೇ ನೃಪೋತ್ತಮಃ।
03061045c ಸುಗೃಹೀತನಾಮಾ ವಿಖ್ಯಾತೋ ವೀರಸೇನ ಇತಿ ಸ್ಮ ಹ।।
ಮಹಾಶೈಲ! ವೀರಸೇನ ಎಂಬ ತಕ್ಕುದಾದ ಹೆಸರಿನಿಂದ ವಿಖ್ಯಾತ ನಿಷಧದ ಮಹಾನೃಪನು ನನ್ನ ಮಾವ.
03061046a ತಸ್ಯ ರಾಜ್ಞಃ ಸುತೋ ವೀರಃ ಶ್ರೀಮಾನ್ಸತ್ಯಪರಾಕ್ರಮಃ।
03061046c ಕ್ರಮಪ್ರಾಪ್ತಂ ಪಿತುಃ ಸ್ವಂ ಯೋ ರಾಜ್ಯಂ ಸಮನುಶಾಸ್ತಿ ಹ।।
ಆ ರಾಜನ ಸುತ ವೀರ, ಶ್ರೀಮಾನ್, ಸತ್ಯಪರಾಕ್ರಮಿ, ಕ್ರಮದಂತೆ ಪ್ರಾಪ್ತವಾದ ಪಿತನ ಈ ರಾಜ್ಯವನ್ನು ಶಾಸನಮಾಡುತ್ತಿದ್ದಾನೆ.
03061047a ನಲೋ ನಾಮಾರಿದಮನಃ ಪುಣ್ಯಶ್ಲೋಕ ಇತಿ ಶ್ರುತಃ।
03061047c ಬ್ರಹ್ಮಣ್ಯೋ ವೇದವಿದ್ವಾಗ್ಮೀ ಪುಣ್ಯಕೃತ್ಸೋಮಪೋಽಗ್ನಿಚಿತ್।।
ಆ ಬ್ರಹ್ಮಣ್ಯ, ವೇದವಿದ್, ವಾಗ್ಮೀ, ಪುಣ್ಯಕೃತ, ಸೋಮಪೋಗ್ನಿಚಿತ್ತ, ಅರಿಂದಮ ಪುಣ್ಯಶ್ಲೋಕನು ನಲ ಎಂಬ ಹೆಸರಿನಿಂದ ಕೇಳಲ್ಪಟ್ಟಿದ್ದಾನೆ.
03061048a ಯಷ್ಟಾ ದಾತಾ ಚ ಯೋದ್ಧಾ ಚ ಸಮ್ಯಕ್ಚೈವ ಪ್ರಶಾಸಿತಾ।
03061048c ತಸ್ಯ ಮಾಮಚಲಶ್ರೇಷ್ಠ ವಿದ್ಧಿ ಭಾರ್ಯಾಮಿಹಾಗತಾಂ।।
03061049a ತ್ಯಕ್ತಶ್ರಿಯಂ ಭರ್ತೃಹೀನಾಮನಾಥಾಂ ವ್ಯಸನಾನ್ವಿತಾಂ।
03061049c ಅನ್ವೇಷಮಾಣಾಂ ಭರ್ತಾರಂ ತಂ ವೈ ನರವರೋತ್ತಮಂ।।
ಯಾಗಮಾಡುತ್ತಾನೆ. ದಾನ ಮಾಡುತ್ತಾನೆ. ಯುದ್ಧ ಮಾಡುತ್ತಾನೆ. ಮತ್ತು ಸರಿಯಾಗಿ ಪ್ರಶಾಸನ ಮಾಡುತ್ತಾನೆ. ಅಚಲಶ್ರೇಷ್ಠ! ಸಂಪತ್ತನ್ನು ಕಳೆದುಕೊಂಡು ಪತಿಯನ್ನೂ ಕಳೆದುಕೊಂಡು ಅನಾಥಳಾಗಿ ವ್ಯಸನಗೊಂಡಿರುವ ನಾನು ಆ ಪತಿ ನರೋತ್ತಮನನ್ನು ಅನ್ವೇಷಿಸುತ್ತಾ ಇಲ್ಲಿಗೆ ಬಂದಿರುವ ಅವನ ಭಾರ್ಯೆಯೆಂದು ತಿಳಿ.
03061050a ಖಮುಲ್ಲಿಖದ್ಭಿರೇತೈರ್ಹಿ ತ್ವಯಾ ಶೃಂಗಶತೈರ್ನೃಪಃ।
03061050c ಕಚ್ಚಿದ್ದೃಷ್ಟೋಽಚಲಶ್ರೇಷ್ಠ ವನೇಽಸ್ಮಿನ್ದಾರುಣೇ ನಲಃ।।
ಅಚಲಶ್ರೇಷ್ಠ! ರಾಜ! ಗಗನವನ್ನು ಮುಟ್ಟುತ್ತಿರುವ ನಿನ್ನ ಈ ಶತ ಶೃಂಗಗಳಿಂದ ಎಲ್ಲಿಯಾದರೂ ಈ ದಾರುಣ ವನದಲ್ಲಿ ನಲನನ್ನು ನೋಡಿದ್ದೀಯಾ?
03061051a ಗಜೇಂದ್ರವಿಕ್ರಮೋ ಧೀಮಾನ್ದೀರ್ಘಬಾಹುರಮರ್ಷಣಃ।
03061051c ವಿಕ್ರಾಂತಃ ಸತ್ಯವಾಗ್ಧೀರೋ ಭರ್ತಾ ಮಮ ಮಹಾಯಶಾಃ।
03061051e ನಿಷಧಾನಾಮಧಿಪತಿಃ ಕಚ್ಚಿದ್ದೃಷ್ಟಸ್ತ್ವಯಾ ನಲಃ।।
ಗಜೇಂದ್ರವಿಕ್ರಮಿ, ಧೀಮಾನ್, ದೀರ್ಘಬಾಹು, ಅಮರ್ಶಣ, ವಿಕ್ರಾಂತ, ಸತ್ಯವಾಗ್ಮಿ, ಧೀರ, ಮಹಾಯಶ, ನಿಷಾಧಾಧಿಪತಿ ನನ್ನ ಪತಿ ನಲನನ್ನು ನೀನು ಎಲ್ಲಿಯಾದರೂ ನೋಡಿದ್ದೀಯಾ?
03061052a ಕಿಂ ಮಾಂ ವಿಲಪತೀಮೇಕಾಂ ಪರ್ವತಶ್ರೇಷ್ಠ ದುಃಖಿತಾಂ।
03061052c ಗಿರಾ ನಾಶ್ವಾಸಯಸ್ಯದ್ಯ ಸ್ವಾಂ ಸುತಾಮಿವ ದುಃಖಿತಾಂ।।
ಪರ್ವತಶ್ರೇಷ್ಠ! ಈ ಪರ್ವತದಲ್ಲಿ ಏಕಾಕಿಯಾಗಿ ದುಃಖಿತಳಾಗಿ ವಿಲಪಿಸುತ್ತಿರುವ ನಿನ್ನ ಮಗಳಂತಿರುವ ನನ್ನನ್ನು ಇಂದು ಯಾಕೆ ಸಂತಯಿಸುತ್ತಿಲ್ಲ?
03061053a ವೀರ ವಿಕ್ರಾಂತ ಧರ್ಮಜ್ಞ ಸತ್ಯಸಂಧ ಮಹೀಪತೇ।
03061053c ಯದ್ಯಸ್ಯಸ್ಮಿನ್ವನೇ ರಾಜನ್ದರ್ಶಯಾತ್ಮಾನಮಾತ್ಮನಾ।।
ವೀರ! ವಿಕ್ರಾಂತ! ಧರ್ಮಜ್ಞ! ಸತ್ಯಸಂಧ! ಮಹೀಪತೇ! ರಾಜನ್! ಈ ವನದಲ್ಲಿ ಇದ್ದರೆ ನಿನ್ನನ್ನು ಕಾಣಿಸಿಕೋ.
03061054a ಕದಾ ನು ಸ್ನಿಗ್ಧಗಂಭೀರಾಂ ಜೀಮೂತಸ್ವನಸಂನಿಭಾಂ।
03061054c ಶ್ರೋಷ್ಯಾಮಿ ನೈಷಧಸ್ಯಾಹಂ ವಾಚಂ ತಾಮಮೃತೋಪಮಾಂ।।
ನೈಷಧನ ಸ್ನಿಗ್ಧ, ಗಂಭೀರ, ಜೀಮೂತಸ್ವರಸನ್ನಿಭ, ಅಮೃತಸಮಾನ ಆ ಮಾತುಗಳನ್ನು ಯಾವಾಗ ಕೇಳುವೆನು?
03061055a ವೈದರ್ಭೀತ್ಯೇವ ಕಥಿತಾಂ ಶುಭಾಂ ರಾಜ್ಞೋ ಮಹಾತ್ಮನಃ।
03061055c ಆಮ್ನಾಯಸಾರಿಣೀಮೃದ್ಧಾಂ ಮಮ ಶೋಕನಿಬರ್ಹಿಣೀಂ।।
ಮಹಾತ್ಮ ರಾಜನ, ಶುಭವಾದ, ನನ್ನ ಶೋಕವನ್ನು ಹರಣಮಾಡುವ ವೈದರ್ಭೀ ಎಂದು ಕರೆಯುವ ಆ ಮಾತನ್ನು ಎಂದು ಕೇಳುತ್ತೇನೆ?”
03061056a ಇತಿ ಸಾ ತಂ ಗಿರಿಶ್ರೇಷ್ಠಮುಕ್ತ್ವಾ ಪಾರ್ಥಿವನಂದಿನೀ।
03061056c ದಮಯಂತೀ ತತೋ ಭೂಯೋ ಜಗಾಮ ದಿಶಮುತ್ತರಾಂ।।
ಈ ರೀತಿಯಲ್ಲಿ ಆ ಪಾರ್ಥಿವನಂದಿನಿ ದಮಯಂತಿಯು ಗಿರಿಶ್ರೇಷ್ಠನನ್ನುದ್ದೇಶಿಸಿ ಮಾತನಾಡಿದ ನಂತರ ಉತ್ತರ ದಿಶೆಯಲ್ಲಿ ಹೊರಟಳು.
03061057a ಸಾ ಗತ್ವಾ ತ್ರೀನಹೋರಾತ್ರಾನ್ದದರ್ಶ ಪರಮಾಂಗನಾ।
03061057c ತಾಪಸಾರಣ್ಯಮತುಲಂ ದಿವ್ಯಕಾನನದರ್ಶನಂ।।
ಮೂರು ಹಗಲು ಮತ್ತು ರಾತ್ರಿ ಪ್ರಯಾಣ ಮಾಡಿ ಆ ಪರಮಾಂಗನೆಯು ಅತುಲ ತಾಪಸಿಗಳಿರುವ ದಿವ್ಯ ಕಾನನ ಅರಣ್ಯವೊಂದನ್ನು ಕಂಡಳು.
03061058a ವಸಿಷ್ಠಭೃಗ್ವತ್ರಿಸಮೈಸ್ತಾಪಸೈರುಪಶೋಭಿತಂ।
03061058c ನಿಯತೈಃ ಸಮ್ಯತಾಹಾರೈರ್ದಮಶೌಚಸಮನ್ವಿತೈಃ।।
03061059a ಅಬ್ಭಕ್ಷೈರ್ವಾಯುಭಕ್ಷೈಶ್ಚ ಪತ್ರಾಹಾರೈಸ್ತಥೈವ ಚ।
03061059c ಜಿತೇಂದ್ರಿಯೈರ್ಮಹಾಭಾಗೈಃ ಸ್ವರ್ಗಮಾರ್ಗದಿದೃಕ್ಷುಭಿಃ।।
ಅದು ವಸಿಷ್ಠ, ಭೃಗು, ಅತ್ರಿ ಮೊದಲಾದ, ನಿಯತ, ಸಂಯಮ, ಅಲ್ಪಾಹಾರಿ, ಶುಚಿಸಮನ್ವಿತ, ನೀರು ಅಥವಾ ವಾಯುವನ್ನೇ ಸೇವಿಸುತ್ತಿರುವ, ಪತ್ರಾಹಾರಿ, ಸ್ವರ್ಗಮಾರ್ಗವನ್ನೇ ನೋಡುತ್ತಿರುವ, ಜಿತೇಂದ್ರಿಯ ಮಹಾಭಾಗರಿಂದ ಉಪಶೋಭಿತವಾಗಿತ್ತು.
03061060a ವಲ್ಕಲಾಜಿನಸಂವೀತೈರ್ಮುನಿಭಿಃ ಸಂಯತೇಂದ್ರಿಯೈಃ।
03061060c ತಾಪಸಾಧ್ಯುಷಿತಂ ರಮ್ಯಂ ದದರ್ಶಾಶ್ರಮಮಂಡಲಂ।।
ವಲ್ಕಲ-ಜಿನಗಳನ್ನು ಧರಿಸಿದ್ದ, ಆ ಇಂದ್ರಿಯಸಂಯಮಿ ಮುನಿ-ತಾಪಸಿಗಳ ರಮ್ಯ ಆಶ್ರಮ ಮಂಡಲವನ್ನು ನೋಡಿದಳು.
03061061a ಸಾ ದೃಷ್ಟ್ವೈವಾಶ್ರಮಪದಂ ನಾನಾಮೃಗನಿಷೇವಿತಂ।
03061061c ಶಾಖಾಮೃಗಗಣೈಶ್ಚೈವ ತಾಪಸೈಶ್ಚ ಸಮನ್ವಿತಂ।।
03061062a ಸುಭ್ರೂಃ ಸುಕೇಶೀ ಸುಶ್ರೋಣೀ ಸುಕುಚಾ ಸುದ್ವಿಜಾನನಾ।
03061062c ವರ್ಚಸ್ವಿನೀ ಸುಪ್ರತಿಷ್ಠಾ ಸ್ವಂಚಿತೋದ್ಯತಗಾಮಿನೀ।।
03061063a ಸಾ ವಿವೇಶಾಶ್ರಮಪದಂ ವೀರಸೇನಸುತಪ್ರಿಯಾ।
03061063c ಯೋಷಿದ್ರತ್ನಂ ಮಹಾಭಾಗಾ ದಮಯಂತೀ ಮನಸ್ವಿನೀ।।
ಮಹಾಭಾಗ! ವಾನರ ಮತ್ತಿತರ ನಾನಾ ಮೃಗಗಳು ವಾಸಿಸುತ್ತಿರುವ, ತಾಪಸಿಗಳು ಸಮಾನ್ವಿತರಿರುವ ಆ ಆಶ್ರಮಪದವನ್ನು ನೋಡಿ, ಸುಂದರ ಹುಬ್ಬಿನ, ಸುಕೇಶೀ, ಸುಶ್ರೋಣೀ, ಸುಕುಚಾ, ಸುದ್ವಿಜಾನನೆ, ವರ್ಚಸ್ವಿನೀ, ಸುಪ್ರತಿಷ್ಠೆ, ಸಂಚಿತೋದ್ಯತಗಾಮಿನೀ, ವೀರಸೇನ ಸುತನ ಪ್ರಿಯೆ, ಸ್ತ್ರೀರತ್ನ, ಮನಸ್ವಿನೀ, ದಮಯಂತಿಯು ಆ ಆಶ್ರಮಪದವನ್ನು ಪ್ರವೇಶಿಸಿದಳು.
03061064a ಸಾಭಿವಾದ್ಯ ತಪೋವೃದ್ಧಾನ್ವಿನಯಾವನತಾ ಸ್ಥಿತಾ।
03061064c ಸ್ವಾಗತಂ ತ ಇತಿ ಪ್ರೋಕ್ತಾ ತೈಃ ಸರ್ವೈಸ್ತಾಪಸೈಶ್ಚ ಸಾ।।
ವಿನಯಾವನತಳಾಗಿ ನಿಂತು ಆ ತಪೋವೃದ್ಧರನ್ನು ಅಭಿನಂದಿಸಿದಳು. ಸರ್ವ ತಪಸ್ವಿಗಳೂ “ಸ್ವಾಗತ!” ಎಂದರು.
03061065a ಪೂಜಾಂ ಚಾಸ್ಯಾ ಯಥಾನ್ಯಾಯಂ ಕೃತ್ವಾ ತತ್ರ ತಪೋಧನಾಃ।
03061065c ಆಸ್ಯತಾಮಿತ್ಯಥೋಚುಸ್ತೇ ಬ್ರೂಹಿ ಕಿಂ ಕರವಾಮಹೇ।।
ಅಲ್ಲಿ ತಪೋಧನರು ಅವಳನ್ನು ಯಥಾವತ್ತಾಗಿ ಸತ್ಕರಿಸಿ, ಕುಳಿತುಕೊಳ್ಳಲು ಹೇಳಿ, “ನಾವು ಏನು ಮಾಡಬಹುದು? ಹೇಳು!” ಎಂದು ಕೇಳಿದರು.
03061066a ತಾನುವಾಚ ವರಾರೋಹಾ ಕಚ್ಚಿದ್ಭಗವತಾಮಿಹ।
03061066c ತಪಸ್ಯಗ್ನಿಷು ಧರ್ಮೇಷು ಮೃಗಪಕ್ಷಿಷು ಚಾನಘಾಃ।
03061066e ಕುಶಲಂ ವೋ ಮಹಾಭಾಗಾಃ ಸ್ವಧರ್ಮಚರಣೇಷು ಚ।।
ವರಾರೋಹೆಯು ಅವರಿಗೆ ಹೇಳಿದಳು: “ಮಹಾಭಾಗರೇ! ಇಲ್ಲಿ ನಿಮ್ಮ ತಪಸ್ಸು, ಅಗ್ನಿ, ಧರ್ಮ, ಮೃಗಪಕ್ಷಿಗಳು ಮತ್ತು ಅನಘರಾದ ನೀವು ಕುಶಲದಿಂದಿದ್ದೀರಾ? ಸ್ವಧರ್ಮದಲ್ಲಿ ನಿರತರಾಗಿದ್ದೀರಾ?”
03061067a ತೈರುಕ್ತಾ ಕುಶಲಂ ಭದ್ರೇ ಸರ್ವತ್ರೇತಿ ಯಶಸ್ವಿನೀ।
03061067c ಬ್ರೂಹಿ ಸರ್ವಾನವದ್ಯಾಂಗಿ ಕಾ ತ್ವಂ ಕಿಂ ಚ ಚಿಕೀರ್ಷಸಿ।।
ಅವರು ಉತ್ತರಿಸಿದರು: “ಭದ್ರೇ! ಯಶಸ್ವಿನೀ! ಇಲ್ಲಿ ಎಲ್ಲವೂ ಕುಶಲವಾಗಿದೆ. ಆದರೆ ಸರ್ವಾನವದ್ಯಾಂಗಿಯಾದ ನೀನು ಯಾರು ಮತ್ತು ಏನು ಮಾಡಲು ಇಚ್ಚಿಸಿರುವೆ ಹೇಳು.
03061068a ದೃಷ್ಟ್ವೈವ ತೇ ಪರಂ ರೂಪಂ ದ್ಯುತಿಂ ಚ ಪರಮಾಮಿಹ।
03061068c ವಿಸ್ಮಯೋ ನಃ ಸಮುತ್ಪನ್ನಃ ಸಮಾಶ್ವಸಿಹಿ ಮಾ ಶುಚಃ।।
ನಿನ್ನ ಈ ಪರಮ ರೂಪ ಮತ್ತು ಕಾಂತಿಯನ್ನು ನೋಡಿ ನಾವೆಲ್ಲ ಬಹುವಿಸ್ಮಿತರಾಗಿದ್ದೇವೆ. ದುಃಖಿಸಬೇಡ, ಸಂತವಿಸಿಕೋ.
03061069a ಅಸ್ಯಾರಣ್ಯಸ್ಯ ಮಹತೀ ದೇವತಾ ವಾ ಮಹೀಭೃತಃ।
03061069c ಅಸ್ಯಾ ನು ನದ್ಯಾಃ ಕಲ್ಯಾಣಿ ವದ ಸತ್ಯಮನಿಂದಿತೇ।।
ಕಲ್ಯಾಣೀ! ಅನಿಂದಿತೇ! ನೀನು ಈ ಅರಣ್ಯ, ಪರ್ವತ ಅಥವಾ ನದಿಗಳ ಮಹಾ ದೇವಿಯಾಗಿರಬಹುದೇ? ಸತ್ಯವನ್ನು ಹೇಳು.”
03061070a ಸಾಬ್ರವೀತ್ತಾನೃಷೀನ್ನಾಹಮರಣ್ಯಸ್ಯಾಸ್ಯ ದೇವತಾ।
03061070c ನ ಚಾಪ್ಯಸ್ಯ ಗಿರೇರ್ವಿಪ್ರಾ ನ ನದ್ಯಾ ದೇವತಾಪ್ಯಹಂ।।
“ಅಲ್ಲ. ವಿಪ್ರರೇ! ನಾನು ಈ ಅರಣ್ಯದ, ಗಿರಿಯ ಅಥವಾ ನದಿಯ ದೇವತೆಯಲ್ಲ!” ಎಂದು ಅವಳು ಋಷಿಗಳಿಗೆ ಹೇಳಿದಳು.
03061071a ಮಾನುಷೀಂ ಮಾಂ ವಿಜಾನೀತ ಯೂಯಂ ಸರ್ವೇ ತಪೋಧನಾಃ।
03061071c ವಿಸ್ತರೇಣಾಭಿಧಾಸ್ಯಾಮಿ ತನ್ಮೇ ಶೃಣುತ ಸರ್ವಶಃ।।
“ತಪೋಧನರಾದ ನೀವೆಲ್ಲರೂ ನನ್ನನ್ನು ಮಾನುಷಿಯೆಂದು ತಿಳಿಯಿರಿ. ನೀವು ಕೇಳುತ್ತೀರಿ ಎಂದಾದರೆ ನಾನು ಸರ್ವವನ್ನೂ ವಿಸ್ತಾರವಾಗಿ ಹೇಳುತ್ತೇನೆ.
03061072a ವಿದರ್ಭೇಷು ಮಹೀಪಾಲೋ ಭೀಮೋ ನಾಮ ಮಹಾದ್ಯುತಿಃ।
03061072c ತಸ್ಯ ಮಾಂ ತನಯಾಂ ಸರ್ವೇ ಜಾನೀತ ದ್ವಿಜಸತ್ತಮಾಃ।।
ದ್ವಿಜಸತ್ತಮರೇ! ನಾನು ವಿದರ್ಭದ ಭೀಮ ಎಂಬ ಹೆಸರಿನ ಮಹಾದ್ಯುತಿ ಮಹೀಪಾಲನ ತನಯೆ ಎಂದು ಸರ್ವರೂ ತಿಳಿಯಿರಿ.
03061073a ನಿಷಧಾಧಿಪತಿರ್ಧೀಮಾನ್ನಲೋ ನಾಮ ಮಹಾಯಶಾಃ।
03061073c ವೀರಃ ಸಂಗ್ರಾಮಜಿದ್ವಿದ್ವಾನ್ಮಮ ಭರ್ತಾ ವಿಶಾಂ ಪತಿಃ।।
ಧೀಮಾನ್, ಮಹಾಯಶ, ವೀರ, ಸಂಗ್ರಾಮಗಳಲ್ಲಿ ವಿಜಯಿ, ವಿದ್ವಾನ್, ವಿಶಾಂಪತಿ, ನಲ ಎಂಬ ಹೆಸರಿನ ನಿಷಧಾಧಿಪತಿಯು ನನ್ನ ಪತಿ.
03061074a ದೇವತಾಭ್ಯರ್ಚನಪರೋ ದ್ವಿಜಾತಿಜನವತ್ಸಲಃ।
03061074c ಗೋಪ್ತಾ ನಿಷಧವಂಶಸ್ಯ ಮಹಾಭಾಗೋ ಮಹಾದ್ಯುತಿಃ।।
ಅವನು ದೇವತೆಗಳ ಅರ್ಚನಪರನಾಗಿದ್ದನು. ದ್ವಿಜರೇ ಮೊದಲಾದ ಜನರ ವತ್ಸಲನಾಗಿದ್ದನು ಮತ್ತು ನಿಷಧವಂಶದ ಮಹಾಭಾಗ ಮಹಾದ್ಯುತಿ ದೊರೆಯಾಗಿದ್ದನು.
03061075a ಸತ್ಯವಾಗ್ಧರ್ಮವಿತ್ಪ್ರಾಜ್ಞಃ ಸತ್ಯಸಂಧೋಽರಿಮರ್ದನಃ।
03061075c ಬ್ರಹ್ಮಣ್ಯೋ ದೈವತಪರಃ ಶ್ರೀಮಾನ್ಪರಪುರಂಜಯಃ।।
03061076a ನಲೋ ನಾಮ ನೃಪಶ್ರೇಷ್ಠೋ ದೇವರಾಜಸಮದ್ಯುತಿಃ।
03061076c ಮಮ ಭರ್ತಾ ವಿಶಾಲಾಕ್ಷಃ ಪೂರ್ಣೇಂದುವದನೋಽರಿಹಾ।।
ಸತ್ಯವಾಗ್ಮಿ, ಧರ್ಮವಿದ, ಪ್ರಾಜ್ಞ, ಸತ್ಯಸಂಧ, ಅರಿಮರ್ದನ, ಬ್ರಹ್ಮಣ್ಯ, ದೈವತಪರ, ಶ್ರೀಮಾನ್ ಮತ್ತು ಪರಪುರಂಜಯ, ದೇವರಾಜ ಸಮದ್ಯುತಿ, ವಿಶಾಲಾಕ್ಷ, ಪೂರ್ಣೇಂದುವದನ ನಲ ಎಂಬ ಹೆಸರಿನ ನೃಪಶ್ರೇಷ್ಠನು ನನ್ನ ಪತಿ.
03061077a ಆಹರ್ತಾ ಕ್ರತುಮುಖ್ಯಾನಾಂ ವೇದವೇದಾಂಗಪಾರಗಃ।
03061077c ಸಪತ್ನಾನಾಂ ಮೃಧೇ ಹಂತಾ ರವಿಸೋಮಸಮಪ್ರಭಃ।।
ವೇದವೇದಾಂಗಪಾರಂಗತನಾಗಿದ್ದ ಅವನು ಪ್ರಧಾನ ಕ್ರತುಗಳನ್ನು ನೆರವೇರಿಸಿದನು. ರವಿ-ಸೋಮ ಸಮಪ್ರಭನಾದ ಅವನು ಯುದ್ಧದಲ್ಲಿ ತನ್ನ ಸ್ಪರ್ಧಾಳುಗಳನ್ನು ಸಂಹರಿಸಿದನು.
03061078a ಸ ಕೈಶ್ಚಿನ್ನಿಕೃತಿಪ್ರಜ್ಞೈರಕಲ್ಯಾಣೈರ್ನರಾಧಮೈಃ।
03061078c ಆಹೂಯ ಪೃಥಿವೀಪಾಲಃ ಸತ್ಯಧರ್ಮಪರಾಯಣಃ।
03061078e ದೇವನೇ ಕುಶಲೈರ್ಜಿಃಮೈರ್ಜಿತೋ ರಾಜ್ಯಂ ವಸೂನಿ ಚ।।
ಕೆಲವು ನಿಕೃತಿಪ್ರಜ್ಞ, ಅಕಲ್ಯಾಣ, ನರಾಧಮರು ಸತ್ಯಧರ್ಮ ಪರಾಯಣನಾದ ಆ ಪೃಥಿವೀಪಾಲನನ್ನು ಜೂಜಾಡಲು ಕರೆದರು ಮತ್ತು ಜೂಜಿನಲ್ಲಿ ಕುಶಲರಾಗಿದ್ದ ಅವರು ರಾಜ್ಯ-ಸಂಪತ್ತನ್ನು ಗೆದ್ದರು.
03061079a ತಸ್ಯ ಮಾಮವಗಚ್ಚಧ್ವಂ ಭಾರ್ಯಾಂ ರಾಜರ್ಷಭಸ್ಯ ವೈ।
03061079c ದಮಯಂತೀತಿ ವಿಖ್ಯಾತಾಂ ಭರ್ತೃದರ್ಶನಲಾಲಸಾಂ।।
ದಮಯಂತಿಯೆಂದು ವಿಖ್ಯಾತಳಾದ ನಾನು ಆ ರಾಜರ್ಷಭನ ಪತ್ನಿ. ಪತಿಯನ್ನು ಕಾಣಲು ಕಾತುರಳಾಗಿದ್ದೇನೆ1.
03061080a ಸಾ ವನಾನಿ ಗಿರೀಂಶ್ಚೈವ ಸರಾಂಸಿ ಸರಿತಸ್ತಥಾ।
03061080c ಪಲ್ವಲಾನಿ ಚ ರಮ್ಯಾಣಿ ತಥಾರಣ್ಯಾನಿ ಸರ್ವಶಃ।।
03061081a ಅನ್ವೇಷಮಾಣಾ ಭರ್ತಾರಂ ನಲಂ ರಣವಿಶಾರದಂ।
03061081c ಮಹಾತ್ಮಾನಂ ಕೃತಾಸ್ತ್ರಂ ಚ ವಿಚರಾಮೀಹ ದುಃಖಿತಾ।।
ಆ ರಣವಿಶಾರದ, ಮಹಾತ್ಮ, ಕೃತಾಸ್ತ್ರ ಪತಿ ನಲನನ್ನು ಅನ್ವೇಷಿಸುತ್ತಾ ಈ ವನ-ಗಿರಿ-ಸರೋವರ-ನದಿಗಳಲ್ಲಿ, ರಮ್ಯ ಹುಲ್ಲುಗಾವಲುಗಳಲ್ಲಿ, ಮತ್ತು ಸರ್ವ ಅರಣ್ಯಗಳಲ್ಲಿ ದುಃಖಿತಳಾಗಿ ಸಂಚರಿಸುತ್ತಿದ್ದೇನೆ.
03061082a ಕಚ್ಚಿದ್ಭಗವತಾಂ ಪುಣ್ಯಂ ತಪೋವನಮಿದಂ ನೃಪಃ।
03061082c ಭವೇತ್ಪ್ರಾಪ್ತೋ ನಲೋ ನಾಮ ನಿಷಧಾನಾಂ ಜನಾಧಿಪಃ।।
ನಲ ಎಂಬ ಹೆಸರಿನ ನಿಷಾಧ ಜನಾಧಿಪ ನೃಪನು ನಿಮ್ಮ ಈ ಪುಣ್ಯ ತಪೋವನಕ್ಕೆ ಎಂದಾದರೂ ಬಂದಿದ್ದನೇ?
03061083a ಯತ್ಕೃತೇಽಹಮಿದಂ ವಿಪ್ರಾಃ ಪ್ರಪನ್ನಾ ಭೃಶದಾರುಣಂ।
03061083c ವನಂ ಪ್ರತಿಭಯಂ ಘೋರಂ ಶಾರ್ದೂಲಮೃಗಸೇವಿತಂ।।
ವಿಪ್ರರೇ! ಅವನ ಸಲುವಾಗಿಯೇ ನಾನು ಈ ಭಯಂಕರ, ಘೋರ, ಶಾರ್ದೂಲಮೃಗಗಳಿಂದ ಕೂಡಿದ, ದಾರುಣ ವನವನ್ನು ಸೇರಿದ್ದೇನೆ.
03061084a ಯದಿ ಕೈಶ್ಚಿದಹೋರಾತ್ರೈರ್ನ ದ್ರಕ್ಷ್ಯಾಮಿ ನಲಂ ನೃಪಂ।
03061084c ಆತ್ಮಾನಂ ಶ್ರೇಯಸಾ ಯೋಕ್ಷ್ಯೇ ದೇಹಸ್ಯಾಸ್ಯ ವಿಮೋಚನಾತ್।।
ಇನ್ನು ಕೆಲವೇ ಅಹೋರಾತ್ರಿಗಳಲ್ಲಿ ನೃಪ ನಲನನ್ನು ನೋಡದಿದ್ದರೆ ನನ್ನ ದೇಹವನ್ನು ತ್ಯಾಗಮಾಡಿ ಶ್ರೇಯ ಲೋಕಕ್ಕೆ ಹೋಗುತ್ತೇನೆ.
03061085a ಕೋ ನು ಮೇ ಜೀವಿತೇನಾರ್ಥಸ್ತಂ ಋತೇ ಪುರುಷರ್ಷಭಂ।
03061085c ಕಥಂ ಭವಿಷ್ಯಾಮ್ಯದ್ಯಾಹಂ ಭರ್ತೃಶೋಕಾಭಿಪೀಡಿತಾ।।
ಆ ಪುರುಷರ್ಷಭನನ್ನು ಬಿಟ್ಟು ನನ್ನ ಜೀವನದಲ್ಲಿ ಬೇರೆ ಯಾವುದಾದರೂ ಅರ್ಥವಿದೆಯೇ? ಭರ್ತೃಶೋಕಪೀಡಿತಳಾದ ನನಗೆ ಇನ್ನು ಯಾವ ಭವಿಷ್ಯವಿದೆ?”
03061086a ಏವಂ ವಿಲಪತೀಮೇಕಾಮರಣ್ಯೇ ಭೀಮನಂದಿನೀಂ।
03061086c ದಮಯಂತೀಮಥೋಚುಸ್ತೇ ತಾಪಸಾಃ ಸತ್ಯವಾದಿನಃ।।
ಈ ರೀತಿ ಏಕಾಂಗಿಯಾಗಿ ಅರಣ್ಯದಲ್ಲಿ ವಿಲಪಿಸುತ್ತಿರುವ ಭೀಮನಂದಿನಿ ದಮಯಂತಿಗೆ ಸತ್ಯವಾದಿ ತಾಪಸರು ಉತ್ತರಿಸಿದರು:
03061087a ಉದರ್ಕಸ್ತವ ಕಲ್ಯಾಣಿ ಕಲ್ಯಾಣೋ ಭವಿತಾ ಶುಭೇ।
03061087c ವಯಂ ಪಶ್ಯಾಮ ತಪಸಾ ಕ್ಷಿಪ್ರಂ ದ್ರಕ್ಷ್ಯಸಿ ನೈಷಧಂ।।
03061088a ನಿಷಧಾನಾಮಧಿಪತಿಂ ನಲಂ ರಿಪುನಿಘಾತಿನಂ।
“ಶುಭೇ! ಕಲ್ಯಾಣಿ! ನಿನಗೆ ಕಲ್ಯಾಣವಾಗುತ್ತದೆ. ರಿಪುನಿಘಾತಿ, ನಿಷಾಧಾಧಿಪತಿ ನಲ ನೈಷಧನನ್ನು ಶೀಘ್ರದಲ್ಲಿಯೇ ಕಾಣುತ್ತೀಯೆ ಎಂದು ನಮ್ಮ ತಪಸ್ಸಿನ ಮೂಲಕ ತಿಳಿದಿದ್ದೇವೆ.
03061088c ಭೈಮಿ ಧರ್ಮಭೃತಾಂ ಶ್ರೇಷ್ಠಂ ದ್ರಕ್ಷ್ಯಸೇ ವಿಗತಜ್ವರಂ।।
03061089a ವಿಮುಕ್ತಂ ಸರ್ವಪಾಪೇಭ್ಯಃ ಸರ್ವರತ್ನಸಮನ್ವಿತಂ।
03061089c ತದೇವ ನಗರಶ್ರೇಷ್ಠಂ ಪ್ರಶಾಸಂತಮರಿಂದಮಂ।।
ಭೈಮಿ! ಆ ಶ್ರೇಷ್ಠ ಅರಿಂದಮ ಧರ್ಮಭೂತನು ಪೀಡೆಯಿಂದ ಬಿಡುಗಡೆಹೊಂದಿ, ಸರ್ವಪಾಪಗಳಿಂದ ವಿಮುಕ್ತನಾಗಿ, ಸರ್ವರತ್ನಗಳನ್ನು ಪಡೆದು ಅದೇ ಶ್ರೇಷ್ಠ ನಗರದಲ್ಲಿ ಪ್ರಶಾಸನಮಾಡುತ್ತಿರುವುದನ್ನು ನೀನು ಕಾಣುತ್ತೀಯೆ.
03061090a ದ್ವಿಷತಾಂ ಭಯಕರ್ತಾರಂ ಸುಹೃದಾಂ ಶೋಕನಾಶನಂ।
03061090c ಪತಿಂ ದ್ರಕ್ಷ್ಯಸಿ ಕಲ್ಯಾಣಿ ಕಲ್ಯಾಣಾಭಿಜನಂ ನೃಪಂ।।
ಕಲ್ಯಾಣೀ! ದ್ವೇಷಿಗಳಿಗೆ ಭಯವನ್ನು ಕೊಡುವ, ಸುಹೃದಯರ ಶೋಕವನ್ನು ನಾಶಪಡಿಸುವ, ಅಭಿಜನರ ಕಲ್ಯಾಣವನ್ನು ಮಾಡುವ, ನಿನ್ನ ಪತಿ ನೃಪನನ್ನು ನೋಡುವವಳಿದ್ದೀಯೆ!”
03061091a ಏವಮುಕ್ತ್ವಾ ನಲಸ್ಯೇಷ್ಟಾಂ ಮಹಿಷೀಂ ಪಾರ್ಥಿವಾತ್ಮಜಾಂ।
03061091c ಅಂತರ್ಹಿತಾಸ್ತಾಪಸಾಸ್ತೇ ಸಾಗ್ನಿಹೋತ್ರಾಶ್ರಮಾಸ್ತದಾ।।
ನಲನ ಇಷ್ಟ ಮಹಿಷಿ, ಪಾರ್ಥಿವಾತ್ಮಜೆಗೆ ಈ ರೀತಿ ಹೇಳಿದ ಆ ತಾಪಸಿಗಳು ಅಗ್ನಿಹೋತ್ರ ಮತ್ತು ಆಶ್ರಮಗಳ ಸಹಿತ ಅಂತರ್ಧಾನರಾದರು2.
03061092a ಸಾ ದೃಷ್ಟ್ವಾ ಮಹದಾಶ್ಚರ್ಯಂ ವಿಸ್ಮಿತಾ ಅಭವತ್ತದಾ।
03061092c ದಮಯಂತ್ಯನವದ್ಯಾಂಗೀ ವೀರಸೇನನೃಪಸ್ನುಷಾ।।
ಆ ಮಹದಾಶ್ಚರ್ಯವನ್ನು ಕಂಡ ವೀರಸೇನನ ಸೊಸೆ ಅನವದ್ಯಾಂಗಿ ದಮಯಂತಿಯು ವಿಸ್ಮಿತಳಾದಳು.
03061093a ಕಿಂ ನು ಸ್ವಪ್ನೋ ಮಯಾ ದೃಷ್ಟಃ ಕೋಽಯಂ ವಿಧಿರಿಹಾಭವತ್।
03061093c ಕ್ವ ನು ತೇ ತಾಪಸಾಃ ಸರ್ವೇ ಕ್ವ ತದಾಶ್ರಮಮಂಡಲಂ।।
03061094a ಕ್ವ ಸಾ ಪುಣ್ಯಜಲಾ ರಮ್ಯಾ ನಾನಾದ್ವಿಜನಿಷೇವಿತಾ।
03061094c ನದೀ ತೇ ಚ ನಗಾ ಹೃದ್ಯಾಃ ಫಲಪುಷ್ಪೋಪಶೋಭಿತಾಃ।।
“ನಾನು ನೋಡಿದ್ದುದು ಸ್ವಪ್ನವೇ? ಇಲ್ಲಿ ನಡೆದದ್ದಾದರೂ ಏನು? ಆ ಎಲ್ಲ ತಾಪಸರೂ ಎಲ್ಲಿದ್ದಾರೆ? ಫಲಪುಷ್ಪಶೋಭಿತ, ಸುಂದರ ಗಿರಿಗಳು ಮತ್ತು ನಾನಾ ದ್ವಿಜರಿಂದ ಕೂಡಿದ, ರಮ್ಯ ಪುಣ್ಯಜಲದ ನದಿಯಿದ್ದಿದ್ದ ಆ ಆಶ್ರಮ ಮಂಡಲವು ಎಲ್ಲಿ ಹೋಯಿತು?”
03061095a ಧ್ಯಾತ್ವಾ ಚಿರಂ ಭೀಮಸುತಾ ದಮಯಂತೀ ಶುಚಿಸ್ಮಿತಾ।
03061095c ಭರ್ತೃಶೋಕಪರಾ ದೀನಾ ವಿವರ್ಣವದನಾಭವತ್।।
ಶುಚಿಸ್ಮಿತೆ ಭೀಮಸುತೆ ದಮಯಂತಿಯು ಯೋಚನೆಯಲ್ಲಿ ಬಿದ್ದು, ಭರ್ತೃಶೋಕಪರಳಾಗಿ, ದೀನಳಾಗಿ, ವಿವರ್ಣವದನಳಾದಳು.
03061096a ಸಾ ಗತ್ವಾಥಾಪರಾಂ ಭೂಮಿಂ ಬಾಷ್ಪಸಂದಿಗ್ಧಯಾ ಗಿರಾ।
03061096c ವಿಲಲಾಪಾಶ್ರುಪೂರ್ಣಾಕ್ಷೀ ದೃಷ್ಟ್ವಾಶೋಕತರುಂ ತತಃ।।
ಅವಳು ಬೇರೊಂದು ಸ್ಥಳಕ್ಕೆ ಹೋಗಿ ಅಲ್ಲಿ ಒಂದು ಅಶೋಕ ವೃಕ್ಷವನ್ನು ನೋಡಿ ಬಾಷ್ಪಗಳಿಂದ ಸಂದಿಗ್ಧ ದನಿಯಲ್ಲಿ, ಕಣ್ಣುಗಳಲ್ಲಿ ಅಶ್ರುಗಳು ತುಂಬಿ ವಿಲಪಿಸಿದಳು.
03061097a ಉಪಗಮ್ಯ ತರುಶ್ರೇಷ್ಠಮಶೋಕಂ ಪುಷ್ಪಿತಂ ತದಾ।
03061097c ಪಲ್ಲವಾಪೀಡಿತಂ ಹೃದ್ಯಂ ವಿಹಂಗೈರನುನಾದಿತಂ।।
ತನ್ನ ರೆಂಬೆಗಳ ಭಾರಕ್ಕೆ ಬಗ್ಗಿದ್ದ, ಪಕ್ಷಿಗಳ ನಿನಾದದಿಂದ ಮನಸೆಳೆಯುತ್ತಿದ್ದ, ಪುಷ್ಪಿತ ಆ ತರುಶ್ರೇಷ್ಠ ಅಶೋಕದ ಬಳಿ ಹೋದಳು.
03061098a ಅಹೋ ಬತಾಯಮಗಮಃ ಶ್ರೀಮಾನಸ್ಮಿನ್ವನಾಂತರೇ।
03061098c ಆಪೀಡೈರ್ಬಹುಭಿರ್ಭಾತಿ ಶ್ರೀಮಾನ್ದ್ರಮಿಡರಾಡಿವ।।
“ಈ ವನಮದ್ಯದಲ್ಲಿ ನಿಂತಿರುವ ಈ ಶ್ರೀಮಾನ್ ವೃಕ್ಷವು ಬಹು ಚಿಗುರುಗಳಿಂದ ಶೋಭಿಸಿ ದ್ರಮಿಡದಂತೆ ಸುಂದರವಾಗಿರುವೆ.
03061099a ವಿಶೋಕಾಂ ಕುರು ಮಾಂ ಕ್ಷಿಪ್ರಮಶೋಕ ಪ್ರಿಯದರ್ಶನ।
03061099c ವೀತಶೋಕಭಯಾಬಾಧಂ ಕಚ್ಚಿತ್ತ್ವಂ ದೃಷ್ಟವಾನ್ನೃಪಂ।।
ನೋಡಲು ಸುಂದರವಾದ ಅಶೋಕವೇ! ನನ್ನ ದುಃಖವನ್ನು ದೂರಮಾಡು. ಶೋಕ, ಭಯ, ಬಾಧೆಗಳ ರಹಿತನಾದ ನೃಪನನ್ನು ಎಲ್ಲಿಯಾದರೂ ನೋಡಿದ್ದೀಯಾ?
03061100a ನಲಂ ನಾಮಾರಿದಮನಂ ದಮಯಂತ್ಯಾಃ ಪ್ರಿಯಂ ಪತಿಂ।
03061100c ನಿಷಧಾನಾಮಧಿಪತಿಂ ದೃಷ್ಟವಾನಸಿ ಮೇ ಪ್ರಿಯಂ।।
ಅರಿದಮನ, ದಮಯಂತಿಯ ಪ್ರಿಯ ಪತಿ ನಿಷಾಧರ ಅಧಿಪತಿ ನನ್ನ ಪ್ರಿಯ ನಲ ಎನ್ನುವವನನ್ನು ನೋಡಿದ್ದೀಯಾ?
03061101a ಏಕವಸ್ತ್ರಾರ್ಧಸಂವೀತಂ ಸುಕುಮಾರತನುತ್ವಚಂ।
03061101c ವ್ಯಸನೇನಾರ್ದಿತಂ ವೀರಮರಣ್ಯಮಿದಮಾಗತಂ।।
03061102a ಯಥಾ ವಿಶೋಕಾ ಗಚ್ಚೇಯಮಶೋಕನಗ ತತ್ಕುರು।
03061102c ಸತ್ಯನಾಮಾ ಭವಾಶೋಕ ಮಮ ಶೋಕವಿನಾಶನಾತ್।।
ಏಕವಸ್ತ್ರಾರ್ಧವನ್ನು ಸುತ್ತಿಕೊಂಡು ಈ ಅರಣ್ಯಕ್ಕೆ ಆಗಮಿಸಿರುವ ಸುಕುಮಾರ ತನು ಮತ್ತು ತ್ವಚೆಯನ್ನು ಹೊಂದಿದ, ವ್ಯಸನದಿಂದ ಆರ್ದಿತನಾದ, ವೀರನನ್ನು ತೋರಿಸು. ಅಶೋಕ ಎನ್ನುವ ನಿನ್ನ ಹೆಸರನ್ನು ಸತ್ಯವನ್ನಾಗಿ ಮಾಡಿ ನನ್ನ ಶೋಕವನ್ನು ನಾಶಪಡಿಸು!”
03061103a ಏವಂ ಸಾಶೋಕವೃಕ್ಷಂ ತಮಾರ್ತಾ ತ್ರಿಃ ಪರಿಗಮ್ಯ ಹ।
03061103c ಜಗಾಮ ದಾರುಣತರಂ ದೇಶಂ ಭೈಮೀ ವರಾಂಗನಾ।।
ಈ ರೀತಿ ಆರ್ತಳಾದ ವರಾಂಗನೆ ಭೈಮಿಯು ಆ ಅಶೋಕ ವೃಕ್ಷವನ್ನು ಮೂರುಸಾರಿ ಸುತ್ತುವರೆದು, ಅದಕ್ಕೂ ಹೆಚ್ಚಿನ ದಾರುಣ ಪ್ರದೇಶವೊಂದಕ್ಕೆ ಹೋದಳು.
03061104a ಸಾ ದದರ್ಶ ನಗಾನ್ನೈಕಾನ್ನೈಕಾಶ್ಚ ಸರಿತಸ್ತಥಾ।
03061104c ನೈಕಾಂಶ್ಚ ಪರ್ವತಾನ್ರಮ್ಯಾನ್ನೈಕಾಂಶ್ಚ ಮೃಗಪಕ್ಷಿಣಃ।।
03061105a ಕಂದರಾಂಶ್ಚ ನಿತಂಬಾಂಶ್ಚ ನದಾಂಶ್ಚಾದ್ಭುತದರ್ಶನಾನ್।
03061105c ದದರ್ಶ ಸಾ ಭೀಮಸುತಾ ಪತಿಮನ್ವೇಷತೀ ತದಾ।।
ಪತಿಯನ್ನು ಅನ್ವೇಷಿಸುತ್ತಾ ಆ ಭೀಮಸುತೆಯು ಹಲವಾರು ವೃಕ್ಷಗಳು, ಅನೇಕ ಝರಿಗಳು, ಅನೇಕ ಪರ್ವತಗಳು, ಅನೇಕ ಮೃಗಪಕ್ಷಿಗಳು, ಕಂದರ-ಕಣಿವೆಗಳು ಮತ್ತು ಅದ್ಭುತ ನದಿಗಳನ್ನು ನೋಡಿದಳು.
03061106a ಗತ್ವಾ ಪ್ರಕೃಷ್ಟಮಧ್ವಾನಂ ದಮಯಂತೀ ಶುಚಿಸ್ಮಿತಾ।
03061106c ದದರ್ಶಾಥ ಮಹಾಸಾರ್ಥಂ ಹಸ್ತ್ಯಶ್ವರಥಸಂಕುಲಂ।।
03061107a ಉತ್ತರಂತಂ ನದೀಂ ರಮ್ಯಾಂ ಪ್ರಸನ್ನಸಲಿಲಾಂ ಶುಭಾಂ।
03061107c ಸುಶೀತತೋಯಾಂ ವಿಸ್ತೀರ್ಣಾಂ ಹ್ರದಿನೀಂ ವೇತಸೈರ್ವೃತಾಂ।।
03061108a ಪ್ರೋದ್ಘುಷ್ಟಾಂ ಕ್ರೌಂಚಕುರರೈಶ್ಚಕ್ರವಾಕೋಪಕೂಜಿತಾಂ।
03061108c ಕೂರ್ಮಗ್ರಾಹಝಷಾಕೀರ್ಣಾಂ ಪುಲಿನದ್ವೀಪಶೋಭಿತಾಂ।।
ಹಾಗೆ ಹೋಗುತ್ತಿರುವಾಗ ಮಾರ್ಗದಲ್ಲಿ ಶುಚಿಸ್ಮಿತೆ ದಮಯಂತಿಯು ಆನೆ-ಕುದುರೆ-ರಥಗಳ ಸಂಕುಲಗಳೊಂದಿಗೆ ಪ್ರಸನ್ನ ಸಲಿಲದಿಂದೊಡಗೂಡಿದ ಶುಭ ಮತ್ತು ರಮ್ಯ ನದಿಯ ಕಡೆ ಹೋಗುತ್ತಿದ್ದ ಒಂದು ದೊಡ್ಡ ಪ್ರಯಾಣಿಕರ ಗುಂಪನ್ನು ಕಂಡಳು. ವಿಸ್ತೀರ್ಣವಾದ ಆ ಆನಂದಕರ ನದಿಯಲ್ಲಿ ತಂಪಾದ ನೀರಿತ್ತು, ಕಳೆಗಳಿದ್ದವು. ಕ್ರೌಂಚ, ಕುರರ ಮತ್ತು ಚಕ್ರವಾಕಗಳ ಕರೆಗಳ ಗದ್ದಲದಿಂದೊಡಗೂಡಿತ್ತು. ಆಮೆ, ಮೊಸಳೆಗಳಿಂದೊಡಗೂಡಿತ್ತು. ಮರಳು ಮತ್ತು ದ್ವೀಪಗಳನ್ನು ಹೊಂದಿತ್ತು.
03061109a ಸಾ ದೃಷ್ಟ್ವೈವ ಮಹಾಸಾರ್ಥಂ ನಲಪತ್ನೀ ಯಶಸ್ವಿನೀ।
03061109c ಉಪಸರ್ಪ್ಯ ವರಾರೋಹಾ ಜನಮಧ್ಯಂ ವಿವೇಶ ಹ।।
ಆ ಮಹಾ ದಂಡನ್ನು ನೋಡಿದ ವರಾರೋಹೆ ಯಶಸ್ವಿನೀ ನಲಪತ್ನಿಯು ಓಡಿ ಹೋಗಿ ಆ ದಂಡಿನ ಮಧ್ಯದಲ್ಲಿ ಸೇರಿಕೊಂಡಳು.
03061110a ಉನ್ಮತ್ತರೂಪಾ ಶೋಕಾರ್ತಾ ತಥಾ ವಸ್ತ್ರಾರ್ಧಸಂವೃತಾ।
03061110c ಕೃಶಾ ವಿವರ್ಣಾ ಮಲಿನಾ ಪಾಂಸುಧ್ವಸ್ತಶಿರೋರುಹಾ।।
ಅರ್ಧವೇ ವಸ್ತ್ರವನ್ನು ಧರಿಸಿದ್ದ, ಕೃಶಳಾಗಿದ್ದ, ವಿವರ್ಣಳಾಗಿದ್ದ, ಮಲಿನಳಾಗಿದ್ದ, ಧೂಳುತುಂಬಿದ ತಲೆಗೂದಲಿನ ಆ ಶೋಕಾರ್ತೆಯು ಹುಚ್ಚಿಯಂತೆ ಕಂಡಳು.
03061111a ತಾಂ ದೃಷ್ಟ್ವಾ ತತ್ರ ಮನುಜಾಃ ಕೇ ಚಿದ್ಭೀತಾಃ ಪ್ರದುದ್ರುವುಃ।
03061111c ಕೇ ಚಿಚ್ಚಿಂತಾಪರಾಸ್ತಸ್ಥುಃ ಕೇ ಚಿತ್ತತ್ರ ವಿಚುಕ್ರುಶುಃ।।
ಅವಳನ್ನು ನೋಡಿದ ಕೆಲವು ಜನರು ಭೀತರಾಗಿ ಓಡಿದರು. ಕೆಲವರು ಚಿಂತಾಪರರಾದರು. ಮತ್ತು ಇನ್ನು ಕೆಲವರು ಮಾತನಾಡಿಕೊಂಡರು.
03061112a ಪ್ರಹಸಂತಿ ಸ್ಮ ತಾಂ ಕೇ ಚಿದಭ್ಯಸೂಯಂತ ಚಾಪರೇ।
03061112c ಚಕ್ರುಸ್ತಸ್ಯಾಂ ದಯಾಂ ಕೇ ಚಿತ್ಪಪ್ರಚ್ಚುಶ್ಚಾಪಿ ಭಾರತ।।
03061113a ಕಾಸಿ ಕಸ್ಯಾಸಿ ಕಲ್ಯಾಣಿ ಕಿಂ ವಾ ಮೃಗಯಸೇ ವನೇ।
03061113c ತ್ವಾಂ ದೃಷ್ಟ್ವಾ ವ್ಯಥಿತಾಃ ಸ್ಮೇಹ ಕಚ್ಚಿತ್ತ್ವಮಸಿ ಮಾನುಷೀ।।
03061114a ವದ ಸತ್ಯಂ ವನಸ್ಯಾಸ್ಯ ಪರ್ವತಸ್ಯಾಥ ವಾ ದಿಶಃ।
03061114c ದೇವತಾ ತ್ವಂ ಹಿ ಕಲ್ಯಾಣಿ ತ್ವಾಂ ವಯಂ ಶರಣಂ ಗತಾಃ।।
03061115a ಯಕ್ಷೀ ವಾ ರಾಕ್ಷಸೀ ವಾ ತ್ವಮುತಾಹೋಽಸಿ ವರಾಂಗನಾ।
03061115c ಸರ್ವಥಾ ಕುರು ನಃ ಸ್ವಸ್ತಿ ರಕ್ಷಸ್ವಾಸ್ಮಾನನಿಂದಿತೇ।।
03061116a ಯಥಾಯಂ ಸರ್ವಥಾ ಸಾರ್ಥಃ ಕ್ಷೇಮೀ ಶೀಘ್ರಮಿತೋ ವ್ರಜೇತ್।
03061116c ತಥಾ ವಿಧತ್ಸ್ವ ಕಲ್ಯಾಣಿ ತ್ವಾಂ ವಯಂ ಶರಣಂ ಗತಾಃ।।
ಭಾರತ! ಕೆಲವರು ನಕ್ಕರೆ ಇನ್ನು ಕೆಲವರು ಅಸಹ್ಯ ಪಟ್ಟುಕೊಂಡರು. ಅದರೆ ಕೆಲವರು ಅವಳಮೇಲೆ ದಯಪಟ್ಟುಕೊಂಡು ಕೇಳಿದರು: “ಕಲ್ಯಾಣಿ! ನೀನು ಯಾರು? ನೀನು ಯಾರವಳು? ವನದಲ್ಲಿ ಏನನ್ನು ಅರಸುತ್ತಿದ್ದೀಯೆ? ನಿನ್ನನ್ನು ನೋಡಿ ನೀನು ಮನುಷ್ಯಳೇ ಎಂದು ವ್ಯಥಿತರಾಗಿದ್ದೇವೆ. ಸತ್ಯವನ್ನು ಹೇಳು. ನೀನು ಈ ವನ, ಪರ್ವತ ಅಥವಾ ದಿಕ್ಕಿನ ದೇವತೆಯೇ? ಕಲ್ಯಾಣಿ! ನಾವು ನಿನ್ನ ಶರಣಾಗುತ್ತೇವೆ. ವರಾಂಗನೆ! ನೀನು ಯಕ್ಷಿಯೋ ಅಥವಾ ರಾಕ್ಷಸಿಯೋ? ಅನಿಂದಿತೇ! ನೀನು ಯಾರಿದ್ದರೂ ನಮಗೆ ಒಳ್ಳೆಯ ಅದೃಷ್ಟವನ್ನಿತ್ತು ರಕ್ಷಿಸು. ಕಲ್ಯಾಣಿ! ಈ ನಮ್ಮ ದಂಡು ಇಲ್ಲಿಂದ ಶೀಘ್ರವಾಗಿ ಕ್ಷೇಮದಿಂದ ಹೊರಡುವಂತೆ ಮಾಡು. ನಿನ್ನನ್ನು ಶರಣು ಹೋಗುತ್ತೇವೆ!”
03061117a ತಥೋಕ್ತಾ ತೇನ ಸಾರ್ಥೇನ ದಮಯಂತೀ ನೃಪಾತ್ಮಜಾ।
03061117c ಪ್ರತ್ಯುವಾಚ ತತಃ ಸಾಧ್ವೀ ಭರ್ತೃವ್ಯಸನದುಃಖಿತಾ।।
03061117e ಸಾರ್ಥವಾಹಂ ಚ ಸಾರ್ಥಂ ಚ ಜನಾ ಯೇ ಚಾತ್ರ ಕೇ ಚನ।
ದಂಡಿನಲ್ಲಿ ಪ್ರಯಾಣಿಸುತ್ತಿದ್ದವರ ಈ ಮಾತುಗಳಿಗೆ ನೃಪಾತ್ಮಜೆ, ಭರ್ತೃವ್ಯಸನ ದುಃಖಿತಳಾದ ಸಾಧ್ವಿ ದಮಯಂತಿಯು ದಂಡಿನ ನಾಯಕ ಮತ್ತು ದಂಡಿನ ಇತರ ಜನರಿಗೆ, ವೃದ್ಧರಿಗೆ ಬಾಲಕರಿಗೆ ಮತ್ತು ದಂಡಿನ ಮಾರ್ಗದರ್ಶಿಗಳಿಗೆ ಉತ್ತರಿಸಿದಳು:
03061118a ಯೂನಃ ಸ್ಥವಿರಬಾಲಾಶ್ಚ ಸಾರ್ಥಸ್ಯ ಚ ಪುರೋಗಮಾಃ।।
03061118c ಮಾನುಷೀಂ ಮಾಂ ವಿಜಾನೀತ ಮನುಜಾಧಿಪತೇಃ ಸುತಾಂ।
03061118e ನೃಪಸ್ನುಷಾಂ ರಾಜಭಾರ್ಯಾಂ ಭರ್ತೃದರ್ಶನಲಾಲಸಾಂ।।
“ನಾನೊಬ್ಬ ಮಾನುಷಿ. ಮನುಜಧಿಪತಿಯ ಸುತೆ, ನೃಪನ ಸೊಸೆ, ಮತ್ತು ಪತಿಯನ್ನು ನೋಡಲು ಕಾತರಿಸುತ್ತಿರುವ ರಾಜಭಾರ್ಯೆ ಎಂದು ತಿಳಿಯಿರಿ.
03061119a ವಿದರ್ಭರಾಣ್ಮಮ ಪಿತಾ ಭರ್ತಾ ರಾಜಾ ಚ ನೈಷಧಃ।
03061119c ನಲೋ ನಾಮ ಮಹಾಭಾಗಸ್ತಂ ಮಾರ್ಗಾಮ್ಯಪರಾಜಿತಂ।।
ವಿದರ್ಭರಾಜ ನನ್ನ ಪಿತ ಮತ್ತು ಅಪರಾಜಿತ ಮಹಾಭಾಗ ನಲ ಎಂಬ ಹೆಸರಿನ ನೈಷಧ ರಾಜನು ನನ್ನ ಪತಿ. ಅವನನ್ನೇ ನಾನು ಅರಸುತ್ತಿರುವೆ.
03061120a ಯದಿ ಜಾನೀತ ನೃಪತಿಂ ಕ್ಷಿಪ್ರಂ ಶಂಸತ ಮೇ ಪ್ರಿಯಂ।
03061120c ನಲಂ ಪಾರ್ಥಿವಶಾರ್ದೂಲಮಮಿತ್ರಗಣಸೂದನಂ।।
ನನ್ನ ಪ್ರಿಯ, ಪಾರ್ಥಿವಶಾರ್ದೂಲ, ಅಮಿತ್ರಗಣಸೂದನ, ನೃಪತಿ ನಲನನ್ನು ನೋಡಿದ್ದರೆ ಬೇಗ ಹೇಳಿ!”
03061121a ತಾಮುವಾಚಾನವದ್ಯಾಂಗೀಂ ಸಾರ್ಥಸ್ಯ ಮಹತಃ ಪ್ರಭುಃ।
03061121c ಸಾರ್ಥವಾಹಃ ಶುಚಿರ್ನಾಮ ಶೃಣು ಕಲ್ಯಾಣಿ ಮದ್ವಚಃ।।
ಆಗ ಶುಚಿ ಎನ್ನುವ ಆ ದೊಡ್ಡ ದಂಡಿನ ಪ್ರಭು, ದಂಡಿನ ನಾಯಕನು ಅವಳಿಗೆ ಹೇಳಿದನು: “ಕಲ್ಯಾಣಿ! ನನ್ನ ಮಾತನ್ನು ಕೇಳು.
03061122a ಅಹಂ ಸಾರ್ಥಸ್ಯ ನೇತಾ ವೈ ಸಾರ್ಥವಾಹಃ ಶುಚಿಸ್ಮಿತೇ।
03061122c ಮನುಷ್ಯಂ ನಲನಾಮಾನಂ ನ ಪಶ್ಯಾಮಿ ಯಶಸ್ವಿನಿ।।
03061123a ಕುಂಜರದ್ವೀಪಿಮಹಿಷಶಾರ್ದೂಲರ್ಕ್ಷಮೃಗಾನಪಿ।
03061123c ಪಶ್ಯಾಮ್ಯಸ್ಮಿನ್ವನೇ ಕಷ್ಟೇ ಅಮನುಷ್ಯನಿಷೇವಿತೇ।
03061123e ತಥಾ ನೋ ಯಕ್ಷರಾಡದ್ಯ ಮಣಿಭದ್ರಃ ಪ್ರಸೀದತು।।
ಶುಚಿಸ್ಮಿತೇ! ನಾನು ಈ ದಂಡಿನ ನಾಯಕ ಸಾರ್ಥವಾಹ. ಯಶಸ್ವಿನೀ! ನಲ ಎನ್ನುವ ಯಾರನ್ನೂ ನಾನು ನೋಡಿಲ್ಲ. ಈ ಕಷ್ಟ ವನದಲ್ಲಿ ಆನೆ, ಚಿರತೆ, ಎಮ್ಮೆ, ಹುಲಿ, ಕರಡಿ ಮತ್ತು ಜಿಂಕೆಗಳನ್ನು ನೋಡಿದ್ದೇನೆ. ಮನುಷ್ಯರು ಯಾರೂ ಇಲ್ಲಿ ವಾಸಿಸುತ್ತಿಲ್ಲ. ಯಕ್ಷರಾಜ ಮಣಿಭದ್ರನು ಮಂಗಳವನ್ನುಂಟು ಮಾಡಲಿ!”
03061124a ಸಾಬ್ರವೀದ್ವಣಿಜಃ ಸರ್ವಾನ್ಸಾರ್ಥವಾಹಂ ಚ ತಂ ತತಃ।
03061124c ಕ್ವ ನು ಯಾಸ್ಯಸಿ ಸಾರ್ಥೋಽಯಮೇತದಾಖ್ಯಾತುಮರ್ಹಥ।।
ಅವಳು ಎಲ್ಲ ವರ್ತಕರ ದಂಡಿನ ನಾಯಕನಿಗೆ ಕೇಳಿದಳು: “ಈ ದಂಡು ಎಲ್ಲಿಗೆ ಹೋಗುತ್ತಿದೆ? ದಯವಿಟ್ಟು ಹೇಳು!”
03061125 ಸಾರ್ಥವಾಹ ಉವಾಚ।
03061125a ಸಾರ್ಥೋಽಯಂ ಚೇದಿರಾಜಸ್ಯ ಸುಬಾಹೋಃ ಸತ್ಯವಾದಿನಃ।
03061125c ಕ್ಷಿಪ್ರಂ ಜನಪದಂ ಗಂತಾ ಲಾಭಾಯ ಮನುಜಾತ್ಮಜೇ।।
ಸಾರ್ಥವಾಹನು ಹೇಳಿದನು: “ಇದು ಸತ್ಯವಾದಿ ಚೇದಿರಾಜ ಸುಬಾಹುವಿನ ಸಾರ್ಥ. ಮನುಜಾತ್ಮಜೇ! ಕ್ಷಿಪ್ರವಾಗಿ ಲಾಭವನ್ನು ಪಡೆಯಲು ಆ ರಾಜ್ಯಕ್ಕೆ ಹೋಗುತ್ತಿದ್ದೇವೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಸಾರ್ಥವಾಹ ಸಂಗಮೇ ಏಕಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀ ಮತ್ತು ಸಾರ್ಥವಾಹನ ಭೇಟಿ ಎನ್ನುವ ಅರವತ್ತೊಂದನೆಯ ಅಧ್ಯಾಯವು.