047 ಪಾರ್ಥಾಹಾರಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 47

ಸಾರ

ಪಾಂಡವರ ಆಹಾರ-ಬೇಟೆಗಳ ಕುರಿತು ವರ್ಣನೆ (1-12).

03047001 ಜನಮೇಜಯ ಉವಾಚ।
03047001a ಯದಿದಂ ಶೋಚಿತಂ ರಾಜ್ಞಾ ಧೃತರಾಷ್ಟ್ರೇಣ ವೈ ಮುನೇ।
03047001c ಪ್ರವ್ರಾಜ್ಯ ಪಾಂಡವಾನ್ವೀರಾನ್ಸರ್ವಮೇತನ್ನಿರರ್ಥಕಂ।।

ಜನಮೇಜಯನು ಹೇಳಿದನು: “ಮುನೇ! ವೀರ ಪಾಂಡವರೆಲ್ಲರನ್ನೂ ಹೊರಹಾಕಿದ ನಂತರ ರಾಜ ಧೃತರಾಷ್ಟ್ರನು ಈ ರೀತಿ ಶೋಕಿಸುವುದು ನಿರರ್ಥಕವಾಗಿತ್ತು.

03047002a ಕಥಂ ಹಿ ರಾಜಾ ಪುತ್ರಂ ಸ್ವಮುಪೇಕ್ಷೇತಾಲ್ಪಚೇತಸಂ।
03047002c ದುರ್ಯೋಧನಂ ಪಾಂಡುಪುತ್ರಾನ್ಕೋಪಯಾನಂ ಮಹಾರಥಾನ್।।

ತನ್ನ ಅಲ್ಪಚೇತಸ ಮಗ ದುರ್ಯೋಧನನಿಗೋಸ್ಕರ ರಾಜನು ಮಹಾರಥಿ ಪಾಂಡುಪುತ್ರರನ್ನು ಹೇಗೆ ಕೆರಳಿಸಿದನು?

03047003a ಕಿಮಾಸೀತ್ಪಾಂಡುಪುತ್ರಾಣಾಂ ವನೇ ಭೋಜನಮುಚ್ಯತಾಂ।
03047003c ವಾನೇಯಮಥ ವಾ ಕೃಷ್ಟಮೇತದಾಖ್ಯಾತು ಮೇ ಭವಾನ್।।

ವನದಲ್ಲಿ ಪಾಂಡುಪುತ್ರರು ಯಾವರೀತಿಯ ಆಹಾರವನ್ನು ಸೇವಿಸುತ್ತಿದ್ದರು? ವನಪದಾರ್ಥಗಳನ್ನು ಸೇವಿಸುತ್ತಿದ್ದರೇ ಅಥವಾ ಕೃಷಿಮಾಡಿ ಬೆಳೆದ ಆಹಾರವನ್ನು ಸೇವಿಸುತ್ತಿದ್ದರೇ? ಇದನ್ನು ನೀನು ಹೇಳಬೇಕು.”

03047004 ವೈಶಂಪಾಯನ ಉವಾಚ।
03047004a ವಾನೇಯಂ ಚ ಮೃಗಾಂಶ್ಚೈವ ಶುದ್ಧೈರ್ಬಾಣೈರ್ನಿಪಾತಿತಾನ್।
03047004c ಬ್ರಾಹ್ಮಣಾನಾಂ ನಿವೇದ್ಯಾಗ್ರಮಭುಂಜನ್ಪುರುಷರ್ಷಭಾಃ।।

ವೈಶಂಪಾಯನನು ಹೇಳಿದನು: “ಶುದ್ಧಬಾಣಗಳಿಂದ ವನ್ಯ ಮೃಗಗಳನ್ನು ಬೇಟೆಯಾಡಿ ಅದನ್ನು ಮೊದಲು ಬ್ರಾಹ್ಮಣರಿಗೆ ಬಡಿಸಿ ನಂತರ ಆ ಪುರುಷರ್ಷಭರು ಸೇವಿಸುತ್ತಿದ್ದರು.

03047005a ತಾಂಸ್ತು ಶೂರಾನ್ಮಹೇಷ್ವಾಸಾಂಸ್ತದಾ ನಿವಸತೋ ವನೇ।
03047005c ಅನ್ವಯುರ್ಬ್ರಾಹ್ಮಣಾ ರಾಜನ್ಸಾಗ್ನಯೋಽನಗ್ನಯಸ್ತಥಾ।।

ರಾಜನ್! ಆ ಶೂರ ಮಹೇಷ್ವಾಸರು ವನದಲ್ಲಿ ವಾಸಿಸುವಾಗ ಅಗ್ನಿಯನ್ನು ಹೊಂದಿದ್ದ ಮತ್ತು ಅಗ್ನಿಯನ್ನು ಹೊಂದಿರದ ಬ್ರಾಹ್ಮಣರು ಅವರನ್ನು ಅನುಸರಿಸಿ ಹೋಗಿದ್ದರು.

03047006a ಬ್ರಾಹ್ಮಣಾನಾಂ ಸಹಸ್ರಾಣಿ ಸ್ನಾತಕಾನಾಂ ಮಹಾತ್ಮನಾಂ।
03047006c ದಶ ಮೋಕ್ಷವಿದಾಂ ತದ್ವದ್ಯಾನ್ಬಿಭರ್ತಿ ಯುಧಿಷ್ಠಿರಃ।।

ಯುಧಿಷ್ಠಿರನ ಆಶ್ರಯದಲ್ಲಿ ಮೋಕ್ಷದ ಹತ್ತು ಬಗೆಗಳನ್ನೂ ತಿಳಿದಿದ್ದ ಸಹಸ್ರಾರು ಮಹಾತ್ಮ ಸ್ನಾತಕ ಬ್ರಾಹ್ಮಣರು ಇದ್ದರು.

03047007a ರುರೂನ್ಕೃಷ್ಣಮೃಗಾಂಶ್ಚೈವ ಮೇಧ್ಯಾಂಶ್ಚಾನ್ಯಾನ್ವನೇಚರಾನ್।
03047007c ಬಾಣೈರುನ್ಮಥ್ಯ ವಿಧಿವದ್ಬ್ರಾಹ್ಮಣೇಭ್ಯೋ ನ್ಯವೇದಯತ್।।

ರುರು, ಕೃಷ್ಣಮೃಗ, ಮತ್ತು ಆಹಾರಕ್ಕೆ ಅನುಗುಣವಾದ ಇತರ ವನ್ಯಪ್ರಾಣಿಗಳನ್ನು ಬಾಣಗಳಿಂದ ಬೇಟೆಯಾಡಿ, ವಿಧಿವತ್ತಾಗಿ ಬ್ರಾಹ್ಮಣರಿಗೆ ನೀಡುತ್ತಿದ್ದರು.

03047008a ನ ತತ್ರ ಕಶ್ಚಿದ್ದುರ್ವರ್ಣೋ ವ್ಯಾಧಿತೋ ವಾಪ್ಯದೃಶ್ಯತ।
03047008c ಕೃಶೋ ವಾ ದುರ್ಬಲೋ ವಾಪಿ ದೀನೋ ಭೀತೋಽಪಿ ವಾ ನರಃ।।

ಅವರಲ್ಲಿ ಒಬ್ಬನೂ ವಿವರ್ಣನಾದವನು, ರೋಗಹೊಂದಿದವನು, ಬಡಕಲಾಗಿ ಅಥವಾ ದುರ್ಬಲನಾಗಿ, ದೀನನಾಗಿ ಅಥವಾ ಭೀತನಾಗಿ ಇರುವ ಮನುಷ್ಯನು ಕಾಣುತ್ತಿರಲಿಲ್ಲ.

03047009a ಪುತ್ರಾನಿವ ಪ್ರಿಯಾಂಜ್ಞಾತೀನ್ಭ್ರಾತೄನಿವ ಸಹೋದರಾನ್।
03047009c ಪುಪೋಷ ಕೌರವಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ।।

ಕೌರವಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಅವರನ್ನು ಪ್ರಿಯಪುತ್ರರಂತೆ, ಬಂಧುಗಳಂತೆ, ಸಹೋದರ ತಮ್ಮಂದಿರಂತೆ ಪೋಷಿಸಿದನು.

03047010a ಪತೀಂಶ್ಚ ದ್ರೌಪದೀ ಸರ್ವಾನ್ದ್ವಿಜಾಂಶ್ಚೈವ ಯಶಸ್ವಿನೀ।
03047010c ಮಾತೇವ ಭೋಜಯಿತ್ವಾಗ್ರೇ ಶಿಷ್ಟಮಾಹಾರಯತ್ತದಾ।।

ತಾಯಿಯಂತೆ ಯಶಸ್ವಿನೀ ದ್ರೌಪದಿಯು ಮೊದಲು ಎಲ್ಲ ಬ್ರಾಹ್ಮಣರಿಗೂ, ಗಂಡಂದಿರಿಗೂ ಬಡಿಸಿ ನಂತರ ಉಳಿದ ಆಹಾರವನ್ನು ಸೇವಿಸುತ್ತಿದ್ದಳು.

03047011a ಪ್ರಾಚೀಂ ರಾಜಾ ದಕ್ಷಿಣಾಂ ಭೀಮಸೇನೋ। ಯಮೌ ಪ್ರತೀಚೀಮಥ ವಾಪ್ಯುದೀಚೀಂ।।
03047011c ಧನುರ್ಧರಾ ಮಾಂಸಹೇತೋರ್ಮೃಗಾಣಾಂ। ಕ್ಷಯಂ ಚಕ್ರುರ್ನಿತ್ಯಮೇವೋಪಗಮ್ಯ।।

ರಾಜನು ಪೂರ್ವದಲ್ಲಿ, ಭೀಮಸೇನನು ದಕ್ಷಿಣದಲ್ಲಿ, ಯಮಳರು ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ತಮ್ಮ ಧನುಸ್ಸುಗಳನ್ನು ಹಿಡಿದು ನಿತ್ಯವೂ ಮೃಗಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರು.

03047012a ತಥಾ ತೇಷಾಂ ವಸತಾಂ ಕಾಮ್ಯಕೇ ವೈ। ವಿಹೀನಾನಾಮರ್ಜುನೇನೋತ್ಸುಕಾನಾಂ।
03047012c ಪಂಚೈವ ವರ್ಷಾಣಿ ತದಾ ವ್ಯತೀಯುರ್। ಅಧೀಯತಾಂ ಜಪತಾಂ ಜುಹ್ವತಾಂ ಚ।।

ಹೀಗೆ ಅವರು ಕಾಮ್ಯಕ ವನದಲ್ಲಿ ಅರ್ಜುನನಿಲ್ಲದೇ ಉತ್ಸಾಹಹೀನರಾಗಿ ವಾಸಿಸಿ, ಅಧ್ಯಯನ, ಜಪ ಮತ್ತು ಹೋಮಗಳಲ್ಲಿ ಐದು ವರ್ಷಗಳನ್ನು ಕಳೆದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಪಾರ್ಥಾಹಾರಕಥನೇ ಸಪ್ತಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಪಾರ್ಥಾಹಾರಕಥನವೆಂಬ ನಲ್ವತ್ತೇಳನೆಯ ಅಧ್ಯಾಯವು.