ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 44
ಸಾರ
ಅಮರಾಮತಿಯಲ್ಲಿ ಅರ್ಜುನನ ಆಗಮನ, ಸ್ವಾಗತ (1-15). ಇಂದ್ರನು ಅರ್ಜುನನನ್ನು ಪ್ರೀತಿಯಿಂದ ಬರಮಾಡಿಕೊಂಡು, ಅರ್ಧ ಸಿಂಹಾಸನವನ್ನು ಕೊಟ್ಟಿದ್ದುದು (16-32).
03044001 ವೈಶಂಪಾಯನ ಉವಾಚ।
03044001a ಸ ದದರ್ಶ ಪುರೀಂ ರಮ್ಯಾಂ ಸಿದ್ಧಚಾರಣಸೇವಿತಾಂ।
03044001c ಸರ್ವರ್ತುಕುಸುಮೈಃ ಪುಣ್ಯೈಃ ಪಾದಪೈರುಪಶೋಭಿತಾಂ।।
03044002a ತತ್ರ ಸೌಗಂಧಿಕಾನಾಂ ಸ ದ್ರುಮಾಣಾಂ ಪುಣ್ಯಗಂಧಿನಾಂ।
03044002c ಉಪವೀಜ್ಯಮಾನೋ ಮಿಶ್ರೇಣ ವಾಯುನಾ ಪುಣ್ಯಗಂಧಿನಾ।।
ವೈಶಂಪಾಯನನು ಹೇಳಿದನು: “ಅವನು ಸಿದ್ಧಚಾರಣರಿಂದ ಸೇವಿತ, ಎಲ್ಲೆಲ್ಲೂ ಕುಸುಮ, ಪುಣ್ಯ ವೃಕ್ಷಗಳಿಂದ ಶೋಭಿತ, ರಮ್ಯ ಪುರಿಯನ್ನು ನೋಡಿದನು. ಅಲ್ಲಿ ಪುಣ್ಯಸುಗಂಧಿತ ಸೌಗಂಧಿಕಗಳ ವೃಕ್ಷಗಳಿದ್ದವು ಮತ್ತು ಆ ಪುಣ್ಯಗಂಧಿ ವೃಕ್ಷಗಳಿಂದ ಬೀಸಿದ ಗಾಳಿಯು ಅವನಿಗೆ ಚಾಮರಗಳಂತೆ ಬೀಸಿದವು.
03044003a ನಂದನಂ ಚ ವನಂ ದಿವ್ಯಮಪ್ಸರೋಗಣಸೇವಿತಂ।
03044003c ದದರ್ಶ ದಿವ್ಯಕುಸುಮೈರಾಹ್ವಯದ್ಭಿರಿವ ದ್ರುಮೈಃ।।
ಅಪ್ಸರಗಣಗಳಿಂದ ಸೇವಿತ, ದಿವ್ಯ ಕುಸುಮಗಳಿಂದ ಕರೆಯುತ್ತಿವೆಯೋ ಎನ್ನುವ ಮರಗಳಿಂದ ಕೂಡಿದ ದಿವ್ಯ ನಂದನವನವನ್ನು ಕಂಡನು.
03044004a ನಾತಪ್ತತಪಸಾ ಶಕ್ಯೋ ದ್ರಷ್ಟುಂ ನಾನಾಹಿತಾಗ್ನಿನಾ।
03044004c ಸ ಲೋಕಃ ಪುಣ್ಯಕರ್ತೄಣಾಂ ನಾಪಿ ಯುದ್ಧಪರಾಙ್ಮುಖೈಃ।।
03044005a ನಾಯಜ್ವಭಿರ್ನಾನೃತಕೈರ್ನ ವೇದಶ್ರುತಿವರ್ಜಿತೈಃ।
03044005c ನಾನಾಪ್ಲುತಾಂಗೈಸ್ತೀರ್ಥೇಷು ಯಜ್ಞದಾನಬಹಿಷ್ಕೃತೈಃ।।
ತಪಸ್ಸನ್ನು ತಪಿಸದೇ ಇದ್ದ ಮತ್ತು ಅಗ್ನಿಯನ್ನು ಪೂಜಿಸದೇ ಇದ್ದವರಿಗೆ, ಯುದ್ಧದಲ್ಲಿ ಪರಾಙ್ಮುಖರಾದವರಿಗೆ, ಯಜ್ಞಗಳನ್ನು ಮಾಡಲು ಅಸಮರ್ಥರಾದವರಿಗೆ, ವೇದ ಮತ್ತು ಶೃತಿಗಳನ್ನು ತ್ಯಜಿಸಿದವರಿಗೆ, ಸುಳ್ಳು ಹೇಳುವವರಿಗೆ, ತೀರ್ಥಗಳಲ್ಲಿ ಮುಳುಗಿ ಸ್ನಾನಮಾಡದೇ ಇರುವವರಿಗೆ ಮತ್ತು ಯಜ್ಞ-ದಾನಗಳನ್ನು ದೂರವಿಟ್ಟವರಿಗೆ ಆ ಪುಣ್ಯಕರ್ತೃಗಳ ಲೋಕವನ್ನು ನೋಡಲು ಶಕ್ಯವಾಗುವುದಿಲ್ಲ.
03044006a ನಾಪಿ ಯಜ್ಞಹನೈಃ ಕ್ಷುದ್ರೈರ್ದ್ರಷ್ಟುಂ ಶಕ್ಯಃ ಕಥಂ ಚನ।
03044006c ಪಾನಪೈರ್ಗುರುತಲ್ಪೈಶ್ಚ ಮಾಂಸಾದೈರ್ವಾ ದುರಾತ್ಮಭಿಃ।।
ಯಜ್ಞಗಳನ್ನು ಕೆಡಿಸುವವರಿಗೂ, ಕುಡಿದು ದುಷ್ಟಕೃತ್ಯಗಳನ್ನು ಮಾಡುವವರಿಗೂ, ತಮ್ಮ ಗುರುಗಳ ಹಾಸಿಗೆಯನ್ನು ಉಲ್ಲಂಘಿಸುವರಿಗೂ, ಮಾಂಸವನ್ನು ತಿನ್ನುವ ದುರಾತ್ಮರಿಗೂ ಎಂದೂ ನೋಡಲಿಕ್ಕಾಗುವುದಿಲ್ಲ.
03044007a ಸ ತದ್ದಿವ್ಯಂ ವನಂ ಪಶ್ಯನ್ದಿವ್ಯಗೀತನಿನಾದಿತಂ।
03044007c ಪ್ರವಿವೇಶ ಮಹಾಬಾಹುಃ ಶಕ್ರಸ್ಯ ದಯಿತಾಂ ಪುರೀಂ।।
ದಿವ್ಯ ಗೀತನಿನಾದದಿಂದ ತುಂಬಿದ್ದ ಆ ದಿವ್ಯ ವನವನ್ನು ನೋಡುತ್ತಾ ಆ ಮಹಾಬಾಹುವು ಶಕ್ರನ ಪ್ರೀತಿಯ ಪುರವನ್ನು ಪ್ರವೇಶಿಸಿದನು.
03044008a ತತ್ರ ದೇವವಿಮಾನಾನಿ ಕಾಮಗಾನಿ ಸಹಸ್ರಶಃ।
03044008c ಸಂಸ್ಥಿತಾನ್ಯಭಿಯಾತಾನಿ ದದರ್ಶಾಯುತಶಸ್ತದಾ।।
ಅಲ್ಲಿ ಬೇಕಾದಲ್ಲಿ ಹೋಗಬಲ್ಲ ಸಹಸ್ರಾರು ದೇವ ವಿಮಾನಗಳು ನಿಂತಿರುವುದನ್ನು ಮತ್ತು ಹಾರಾಡುತ್ತಿರುವುವನ್ನು ನೋಡಿದನು.
03044009a ಸಂಸ್ತೂಯಮಾನೋ ಗಂಧರ್ವೈರಪ್ಸರೋಭಿಶ್ಚ ಪಾಂಡವಃ।
03044009c ಪುಷ್ಪಗಂಧವಹೈಃ ಪುಣ್ಯೈರ್ವಾಯುಭಿಶ್ಚಾನುವೀಜಿತಃ।।
ಗಂಧರ್ವರೂ ಅಪ್ಸರರೂ ಪಾಂಡವನನ್ನು ಸಂಸ್ತುತಿಸುತ್ತಿರಲು ವಾಯುವು ಹೂವಿನ ಸುವಾಸನೆಯನ್ನು ಹೊತ್ತು ಪುಣ್ಯಕರ ಗಾಳಿಯನ್ನು ಬೀಸಿದನು.
03044010a ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ।
03044010c ಹೃಷ್ಟಾಃ ಸಂಪೂಜಯಾಮಾಸುಃ ಪಾರ್ಥಮಕ್ಲಿಷ್ಟಕಾರಿಣಂ।।
ಆಗ ಗಂಧರ್ವರೂ, ಸಿದ್ಧರೂ, ಪರಮಋಷಿಗಳೂ ಸೇರಿ ದೇವತೆಗಳು ಸಂತೋಷದಿಂದ ಅಕ್ಲಿಷ್ಟಕರ್ಮಿಣಿ ಪಾರ್ಥನನ್ನು ಸ್ವಾಗತಿಸಿದರು.
03044011a ಆಶೀರ್ವಾದೈಃ ಸ್ತೂಯಮಾನೋ ದಿವ್ಯವಾದಿತ್ರನಿಸ್ವನೈಃ।
03044011c ಪ್ರತಿಪೇದೇ ಮಹಾಬಾಹುಃ ಶಂಖದುಂದುಭಿನಾದಿತಂ।।
03044012a ನಕ್ಷತ್ರಮಾರ್ಗಂ ವಿಪುಲಂ ಸುರವೀಥೀತಿ ವಿಶ್ರುತಂ।
03044012c ಇಂದ್ರಾಜ್ಞಯಾ ಯಯೌ ಪಾರ್ಥಃ ಸ್ತೂಯಮಾನಃ ಸಮಂತತಃ।।
ಆಶೀರ್ವಾದಗಳಿಂದ ಸ್ತುತಿಸಲ್ಪಟ್ಟು, ದಿವ್ಯವಾದ್ಯಗಳ ನಾದದೊಂದಿಗೆ ಶಂಖದುಂದುಭಿಗಳ ನಾದಗಳೊಂದಿಗೆ, ಮಹಾಬಾಹು ಪಾರ್ಥನು ಸುರಬೀದಿಯೆಂದು ವಿಶ್ರುತವಾದ ಆ ನಕ್ಷತ್ರಮಾರ್ಗದಲ್ಲಿ ನಡೆದು ಇಂದ್ರನ ಆಜ್ಞೆಯಂತೆ ಎಲ್ಲರೂ ಸುತ್ತುವರೆದು ಸ್ತುತಿಸುತ್ತಿರಲು ಮುಂದುವರೆದನು.
03044013a ತತ್ರ ಸಾಧ್ಯಾಸ್ತಥಾ ವಿಶ್ವೇ ಮರುತೋಽಥಾಶ್ವಿನಾವಪಿ।
03044013c ಆದಿತ್ಯಾ ವಸವೋ ರುದ್ರಾಸ್ತಥಾ ಬ್ರಹ್ಮರ್ಷಯೋಽಮಲಾಃ।।
03044014a ರಾಜರ್ಷಯಶ್ಚ ಬಹವೋ ದಿಲೀಪಪ್ರಮುಖಾ ನೃಪಾಃ।
03044014c ತುಂಬುರುರ್ನಾರದಶ್ಚೈವ ಗಂಧರ್ವೌ ಚ ಹಹಾಹುಹೂ।।
ಅಲ್ಲಿ ಸಾಧ್ಯರೂ, ವಿಶ್ಚೇದೇವರೂ, ಮರುತರೂ, ಅಶ್ವಿನಿಯರೂ, ಆದಿತ್ಯರೂ, ವಸುಗಳೂ, ರುದ್ರರೂ, ಅಮಲ ಬ್ರಹ್ಮರ್ಷಿಗಳೂ, ದಿಲೀಪನೇ ಮೊದಲಾದ ಬಹಳಷ್ಟು ಮಂದಿ ರಾಜರ್ಷಿ ನೃಪರೂ, ತುಂಬುರು ನಾರದರೂ, ಹಹಾಹುಹೂ ಮೊದಲಾದ ಗಂಧರ್ವರೂ ಸೇರಿದ್ದರು.
03044015a ತಾನ್ಸರ್ವಾನ್ಸ ಸಮಾಗಮ್ಯ ವಿಧಿವತ್ಕುರುನಂದನಃ।
03044015c ತತೋಽಪಶ್ಯದ್ದೇವರಾಜಂ ಶತಕ್ರತುಮರಿಂದಮಂ।।
ಕುರುನಂದನನು ಅವರೆಲ್ಲರನ್ನೂ ವಿಧಿವತ್ತಾಗಿ ಭೇಟಿಮಾಡಿ, ನಂತರ ಅರಿಂದಮ ದೇವರಾಜ ಶತಕ್ರತುವನ್ನು ಕಂಡನು.
03044016a ತತಃ ಪಾರ್ಥೋ ಮಹಾಬಾಹುರವತೀರ್ಯ ರಥೋತ್ತಮಾತ್।
03044016c ದದರ್ಶ ಸಾಕ್ಷಾದ್ದೇವೇಂದ್ರಂ ಪಿತರಂ ಪಾಕಶಾಸನಂ।।
ಆಗ ಮಹಾಬಾಹು ಪಾರ್ಥನು ಆ ಉತ್ತಮ ರಥದಿಂದಿಳಿದು ತನ್ನ ತಂದೆ ಪಾಕಶಾಸನಿ ಸಾಕ್ಷಾತ್ ದೇವೇಂದ್ರನನ್ನು ನೋಡಿದನು.
03044017a ಪಾಂಡುರೇಣಾತಪತ್ರೇಣ ಹೇಮದಂಡೇನ ಚಾರುಣಾ।
03044017c ದಿವ್ಯಗಂಧಾಧಿವಾಸೇನ ವ್ಯಜನೇನ ವಿಧೂಯತಾ।।
ಬಂಗಾರದ ದಂಡದ ಸುಂದರ ಶ್ವೇತಛತ್ರವನ್ನು ಅವನ ಮೇಲೆ ಹಿಡಿಯಲಾಗಿತ್ತು ಮತ್ತು ದಿವ್ಯಗಂಧಗಳಿಂದ ಕೂಡಿದ ಚಾಮರವು ಬೀಸಿ ಅವನಿಗೆ ತಂಪನ್ನು ನೀಡಿತು.
03044018a ವಿಶ್ವಾವಸುಪ್ರಭೃತಿಭಿರ್ಗಂಧರ್ವೈಃ ಸ್ತುತಿವಂದನೈಃ।
03044018c ಸ್ತೂಯಮಾನಂ ದ್ವಿಜಾಗ್ರ್ಯೈಶ್ಚ ಋಗ್ಯಜುಃಸಾಮಸಂಸ್ತವೈಃ।।
ವಿಶ್ವಾವಸು ಮೊದಲಾದ ಗಂಧರ್ವರು ಸ್ತುತಿವಂದನೆಗಳಿಂದ ಹೊಗಳಲು ದ್ವಿಜಾಗ್ರರು ಋಗ್ವೇದ ಯಜುರ್ವೇದ ಸಾಮಗಳನ್ನು ಹಾಡಿದರು.
03044019a ತತೋಽಭಿಗಮ್ಯ ಕೌಂತೇಯಃ ಶಿರಸಾಭ್ಯನಮದ್ಬಲೀ।
03044019c ಸ ಚೈನಮನುವೃತ್ತಾಭ್ಯಾಂ ಭುಜಾಭ್ಯಾಂ ಪ್ರತ್ಯಗೃಹ್ಣತ।।
03044020a ತತಃ ಶಕ್ರಾಸನೇ ಪುಣ್ಯೇ ದೇವರಾಜರ್ಷಿಪೂಜಿತೇ।
03044020c ಶಕ್ರಃ ಪಾಣೌ ಗೃಹೀತ್ವೈನಮುಪಾವೇಶಯದಂತಿಕೇ।।
ಆಗ ಬಲಶಾಲಿ ಕೌಂತೇಯನು ಹತ್ತಿರ ಹೋಗಿ ಶಿರಬಾಗಿಸಿ ನಮಸ್ಕರಿಸಿದನು. ನಂತರ ಶಕ್ರನು ತನ್ನ ಕೈಗಳಿಂದ ಅವನ ಭುಜಗಳನ್ನು ಹಿಡಿದು ಆಲಂಗಿಸಿ, ಕೈಹಿಡಿದು, ತನ್ನೊಂದಿಗೆ, ದೇವರಾಜರ್ಷಿಗಳಿಂದ ಪೂಜಿತ ಶಕ್ರನ ಆಸನದಲ್ಲಿ ಕುಳ್ಳಿರಿಸಿಕೊಂಡನು.
03044021a ಮೂರ್ಧ್ನಿ ಚೈನಮುಪಾಘ್ರಾಯ ದೇವೇಂದ್ರಃ ಪರವೀರಹಾ।
03044021c ಅಂಕಮಾರೋಪಯಾಮಾಸ ಪ್ರಶ್ರಯಾವನತಂ ತದಾ।।
ಪರವೀರಹ ದೇವೇಂದ್ರನು ಅವನ ನೆತ್ತಿಗೆ ಮುತ್ತನ್ನಿತ್ತು, ಎಲ್ಲರೂ ವಿನಯದಿಂದ ತಲೆಬಾಗಿಸಿಕೊಂಡಿರಲು ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು.
03044022a ಸಹಸ್ರಾಕ್ಷನಿಯೋಗಾತ್ಸ ಪಾರ್ಥಃ ಶಕ್ರಾಸನಂ ತದಾ।
03044022c ಅಧ್ಯಕ್ರಾಮದಮೇಯಾತ್ಮಾ ದ್ವಿತೀಯ ಇವ ವಾಸವಃ।।
ಸಹಸ್ರಾಕ್ಷನ ನಿಯೋಗದಂತೆ ಅಮೇಯಾತ್ಮ ಪಾರ್ಥನು ಎರಡನೆಯೇ ಇಂದ್ರನೋ ಎನ್ನುವಂತೆ ಶಕ್ರನ ಆಸನದಲ್ಲಿ ಕುಳಿತುಕೊಂಡನು.
03044023a ತತಃ ಪ್ರೇಮ್ಣಾ ವೃತ್ರಶತ್ರುರರ್ಜುನಸ್ಯ ಶುಭಂ ಮುಖಂ।
03044023c ಪಸ್ಪರ್ಶ ಪುಣ್ಯಗಂಧೇನ ಕರೇಣ ಪರಿಸಾಂತ್ವಯನ್।।
ಆಗ ವೃತ್ರಶತ್ರುವು ಅರ್ಜುನನ ಸುಂದರ ಮುಖವನ್ನು ಪ್ರೀತಿಯಿಂದ ಮುಟ್ಟಿ, ತನ್ನ ಪುಣ್ಯಗಂಧದ ಕೈಗಳಿಂದ ಸವರಿದನು.
03044024a ಪರಿಮಾರ್ಜಮಾನಃ ಶನಕೈರ್ಬಾಹೂ ಚಾಸ್ಯಾಯತೌ ಶುಭೌ।
03044024c ಜ್ಯಾಶರಕ್ಷೇಪಕಠಿನೌ ಸ್ತಂಭಾವಿವ ಹಿರಣ್ಮಯೌ।।
ಬಿಲ್ಲಿನ ಹಗ್ಗದಿಂದ ಗಡುಸಾಗಿದ್ದ, ಬಂಗಾರದ ಸ್ತಂಭಗಳಂತಿದ್ದ ಅವನ ಸುಂದರ ಬಾಹುಗಳನ್ನು ಮೃದುವಾಗಿ ಸವರಿದನು.
03044025a ವಜ್ರಗ್ರಹಣಚಿಹ್ನೇನ ಕರೇಣ ಬಲಸೂದನಃ।
03044025c ಮುಹುರ್ಮುಹುರ್ವಜ್ರಧರೋ ಬಾಹೂ ಸಂಸ್ಫಾಲಯಂ ಶನೈಃ।।
ಬಲಸೂದನ, ವಜ್ರಪಾಣಿಯು ಪುನಃ ಪುನಃ ಅವನ ತೋಳನ್ನು ಮೆಲ್ಲಮೆಲ್ಲನೆ ವಜ್ರವನ್ನು ಹಿಡಿದು ಕಲೆಯಾದ ತನ್ನ ಕೈಗಳಿಂದ ಒತ್ತುತ್ತಿದ್ದನು.
03044026a ಸ್ಮಯನ್ನಿವ ಗುಡಾಕೇಶಂ ಪ್ರೇಕ್ಷಮಾಣಃ ಸಹಸ್ರದೃಕ್।
03044026c ಹರ್ಷೇಣೋತ್ಫುಲ್ಲನಯನೋ ನ ಚಾತೃಪ್ಯತ ವೃತ್ರಹಾ।।
ಸಹಸ್ರಾಕ್ಷ ವೃತ್ರಹನು ಹರ್ಷದಿಂದ ತೆರೆದ ಕಣ್ಣುಗಳಿಂದ ಮುಗುಳ್ನಗುತ್ತಾ ಗುಡಾಕೇಶನನ್ನು ಎಷ್ಟು ನೋಡಿದರೂ ತೃಪ್ತಿಯಾಗಲಿಲ್ಲವೋ ಎಂಬಂತೆ ನೋಡುತ್ತಿದ್ದನು.
03044027a ಏಕಾಸನೋಪವಿಷ್ಟೌ ತೌ ಶೋಭಯಾಂ ಚಕ್ರತುಃ ಸಭಾಂ।
03044027c ಸೂರ್ಯಾಚಂದ್ರಮಸೌ ವ್ಯೋಮ್ನಿ ಚತುರ್ದಶ್ಯಾಮಿವೋದಿತೌ।।
ಒಂದೇ ಸಿಂಹಾಸನದಲ್ಲಿ ಕುಳಿತುಕೊಂಡ ಅವರಿಬ್ಬರು ಚತುರ್ದಶಿಯಂದು ಒಂದೇ ಸಮಯದಲ್ಲಿ ಉದಯಿಸುವ ಸೂರ್ಯಚಂದ್ರರು ಆಕಾಶವನ್ನು ಹೇಗೋ ಹಾಗೆ ಸಭೆಯನ್ನು ಶೋಭಿಸಿದರು.
03044028a ತತ್ರ ಸ್ಮ ಗಾಥಾ ಗಾಯಂತಿ ಸಾಮ್ನಾ ಪರಮವಲ್ಗುನಾ।
03044028c ಗಂಧರ್ವಾಸ್ತುಂಬುರುಶ್ರೇಷ್ಠಾಃ ಕುಶಲಾ ಗೀತಸಾಮಸು।।
ಗೀತ ಮತ್ತು ಸಾಮಗಳಲ್ಲಿ ಕುಶಲರಾದ ತುಂಬುರುವೇ ಮೊದಲಾದ ಶ್ರೇಷ್ಠ ಗಂಧರ್ವರು ಅಲ್ಲಿ ಸುಮಧುರ ವಾಣಿಯಲ್ಲಿ ಗಾಯನ-ಸಾಮವನ್ನು ಹಾಡುತ್ತಿದ್ದರು.
03044029a ಘೃತಾಚೀ ಮೇನಕಾ ರಂಭಾ ಪೂರ್ವಚಿತ್ತಿಃ ಸ್ವಯಂಪ್ರಭಾ।
03044029c ಉರ್ವಶೀ ಮಿಶ್ರಕೇಶೀ ಚ ಡುಂಡುರ್ಗೌರೀ ವರೂಥಿನೀ।।
03044030a ಗೋಪಾಲೀ ಸಹಜನ್ಯಾ ಚ ಕುಂಭಯೋನಿಃ ಪ್ರಜಾಗರಾ।
03044030c ಚಿತ್ರಸೇನಾ ಚಿತ್ರಲೇಖಾ ಸಹಾ ಚ ಮಧುರಸ್ವರಾ।।
03044031a ಏತಾಶ್ಚಾನ್ಯಾಶ್ಚ ನನೃತುಸ್ತತ್ರ ತತ್ರ ವರಾಂಗನಾಃ।
03044031c ಚಿತ್ತಪ್ರಮಥನೇ ಯುಕ್ತಾಃ ಸಿದ್ಧಾನಾಂ ಪದ್ಮಲೋಚನಾಃ।।
03044032a ಮಹಾಕಟಿತಟಶ್ರೋಣ್ಯಃ ಕಂಪಮಾನೈಃ ಪಯೋಧರೈಃ।
03044032c ಕಟಾಕ್ಷಹಾವಮಾಧುರ್ಯೈಶ್ಚೇತೋಬುದ್ಧಿಮನೋಹರಾಃ।।
ಘೃತಾಚೀ, ಮೇನಕಾ, ರಂಭಾ, ಪೂರ್ವಚಿತ್ತಿ, ಸ್ವಯಂಪ್ರಭಾ, ಉರ್ವಶೀ, ಮಿಶ್ರಕೇಶೀ, ಡುಂಡು, ಗೌರೀ, ವರೂಥಿನೀ, ಗೋಪಾಲೀ, ಸಹಜನ್ಯಾ, ಕುಂಭಯೋನಿ, ಪ್ರಜಾಗರಾ, ಚಿತ್ರಸೇನಾ, ಚಿತ್ರಲೇಖಾ, ಸಹಾ, ಮಧುರಸ್ವರಾ, ಮತ್ತು ಇತರ ವರಾಂಗನೆ-ಪದ್ಮಲೋಚನೆಯರು, ಮಹಾಕಟಿ-ತಟಶ್ರೋಣಿಯರು ಸಿದ್ಧರ ಮನಸ್ಸನ್ನು ಕಡೆಯುತ್ತಾ ತಮ್ಮ ಸ್ತನಗಳನ್ನು ಕಂಪಿಸುತ್ತಾ, ಕಡೆಗಣ್ಣಿನ ಮಧುರ ನೋಟದಲ್ಲಿ ಚೇತನ ಬುದ್ಧಿ, ಮನಸ್ಸನ್ನು ಅಪಹರಿಸುತ್ತಾ ಅಲ್ಲಲ್ಲಿ ನೃತ್ಯಮಾಡುತ್ತಿದ್ದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಇಂದ್ರಸಭಾದರ್ಶನೇ ಚತುಶ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಇಂದ್ರಸಭಾದರ್ಶನವೆಂಬ ನಲ್ವತ್ನಾಲ್ಕನೆಯ ಅಧ್ಯಾಯವು.