ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 30
ಸಾರ
ಕ್ರೋಧವು ಹೇಗೆ ಮನುಷ್ಯನನ್ನು ಕೊಲ್ಲುತ್ತದೆ ಮತ್ತು ತನಗೆ ಏಕೆ ಸಿಟ್ಟು ಬರುತ್ತಿಲ್ಲವೆಂದು ಯುಧಿಷ್ಠಿರನು ದ್ರೌಪದಿಗೆ ಉತ್ತರಿಸಿದುದು; “ಕ್ಷಮೆ ಮತ್ತು ಮೃದುತ್ವ ಇವೇ ಆತ್ಮವಂತರು ನಡೆದುಕೊಳ್ಳುವ ಸನಾತನ ಧರ್ಮ. ಅದರಂತೆಯೇ ನಾನೂ ಕೂಡ ನಡೆದುಕೊಳ್ಳುತ್ತೇನೆ” ಎನ್ನುವುದು (1-50).
03030001 ಯುಧಿಷ್ಠಿರ ಉವಾಚ।
03030001a ಕ್ರೋಧೋ ಹಂತಾ ಮನುಷ್ಯಾಣಾಂ ಕ್ರೋಧೋ ಭಾವಯಿತಾ ಪುನಃ।
03030001c ಇತಿ ವಿದ್ಧಿ ಮಹಾಪ್ರಾಜ್ಞೇ ಕ್ರೋಧಮೂಲೌ ಭವಾಭವೌ।।
03030002a ಯೋ ಹಿ ಸಂಹರತೇ ಕ್ರೋಧಂ ಭಾವಸ್ತಸ್ಯ ಸುಶೋಭನೇ।
03030002c ಯಃ ಪುನಃ ಪುರುಷಃ ಕ್ರೋಧಂ ನಿತ್ಯಂ ನ ಸಹತೇ ಶುಭೇ।
03030002e ತಸ್ಯಾಭಾವಾಯ ಭವತಿ ಕ್ರೋಧಃ ಪರಮದಾರುಣಃ।।
ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞೆ! ಕ್ರೋಧವು ಮನುಷ್ಯನನ್ನು ಕೊಲ್ಲುತ್ತದೆ ಮತ್ತೆ ಕ್ರೋಧವೇ ಅವನನ್ನು ಉಚ್ಛಸ್ಥಾನಕ್ಕೆ ಕರೆದೊಯ್ಯಬಹುದು. ಒಳ್ಳೆಯದು ಕೆಟ್ಟದ್ದು ಎರಡಕ್ಕೂ ಕ್ರೋಧವೇ ಮೂಲ ಎಂದು ತಿಳಿ. ಸುಶೋಭನೆ! ಕ್ರೋಧವನ್ನು ಯಾರು ಸಂಹರಿಸುತ್ತಾನೋ ಅವನಿಗೆ ಒಳ್ಳೆಯದಾಗುತ್ತದೆ. ಶುಭೇ! ಅದರಂತೆಯೇ ಪುನಃ ಯಾರು ಕ್ರೋಧವನ್ನು ನಿತ್ಯವೂ ನಿಯಂತ್ರಣದಲ್ಲಿಟ್ಟುಕೊಂಡಿರುವುದಿಲ್ಲವೋ ಅಂಥಹ ಪುರುಷನಿಗೆ ಕೆಟ್ಟದಾಗುತ್ತದೆ. ಕ್ರೋಧವು ಪರಮ ದಾರುಣವಾದುದ್ದು.
03030003a ಕ್ರೋಧಮೂಲೋ ವಿನಾಶೋ ಹಿ ಪ್ರಜಾನಾಮಿಹ ದೃಶ್ಯತೇ।
03030003c ತತ್ಕಥಂ ಮಾದೃಶಃ ಕ್ರೋಧಮುತ್ಸೃಜೇಲ್ಲೋಕನಾಶನಂ।।
ಪ್ರಜೆಗಳ ವಿನಾಶಕ್ಕೆ ಕ್ರೋಧವೇ ಮೂಲವೆಂದು ಕಾಣುತ್ತೇವೆ. ಹೀಗಿರುವಾಗ ನನ್ನಂಥವನು ಹೇಗೆ ಆ ಲೋಕನಾಶಕ ಕ್ರೋಧವನ್ನು ತಾಳಬೇಕು?
03030004a ಕ್ರುದ್ಧಃ ಪಾಪಂ ನರಃ ಕುರ್ಯಾತ್ಕ್ರುದ್ಧೋ ಹನ್ಯಾದ್ಗುರೂನಪಿ।
03030004c ಕ್ರುದ್ಧಃ ಪರುಷಯಾ ವಾಚಾ ಶ್ರೇಯಸೋಽಪ್ಯವಮನ್ಯತೇ।।
ಕೋಪಗೊಂಡ ನರನು ಪಾಪಕೃತ್ಯಗಳನ್ನು ಮಾಡುತ್ತಾನೆ. ಕ್ರುದ್ಧನಾದವನು ಗುರುವನ್ನೂ ಕೊಲ್ಲಬಹುದು. ಕ್ರುದ್ಧ ಪುರುಷನು ತನಗಿಂತ ಶ್ರೇಯಸ್ಸಿನಲ್ಲಿದ್ದವರನ್ನು ಮಾತುಗಳಿಂದ ಅಪಮಾನಿಸುತ್ತಾನೆ.
03030005a ವಾಚ್ಯಾವಾಚ್ಯೇ ಹಿ ಕುಪಿತೋ ನ ಪ್ರಜಾನಾತಿ ಕರ್ಹಿ ಚಿತ್।
03030005c ನಾಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಂ ವಿದ್ಯತೇ ತಥಾ।।
ಯಾಕೆಂದರೆ, ಕುಪಿತನಾದಾಗ ಏನನ್ನು ಮಾತನಾಡಬೇಕು ಏನನ್ನು ಮಾತನಾಡಬಾರದು ಎನ್ನುವುದೇ ತಿಳಿಯುವುದಿಲ್ಲ. ಆದುದರಿಂದ ಕ್ರುದ್ಧನಾದವನು ಏನು ಮಾಡುತ್ತಾನೆ ಏನು ಹೇಳುತ್ತಾನೆ ಎನ್ನುವುದು ಅವನಿಗೇ ಗೊತ್ತಿರುವುದಿಲ್ಲ.
03030006a ಹಿಂಸ್ಯಾತ್ಕ್ರೋಧಾದವಧ್ಯಾಂಶ್ಚ ವಧ್ಯಾನ್ಸಂಪೂಜಯೇದಪಿ।
03030006c ಆತ್ಮಾನಮಪಿ ಚ ಕ್ರುದ್ಧಃ ಪ್ರೇಷಯೇದ್ಯಮಸಾದನಂ।।
ಕ್ರೋಧದಲ್ಲಿ ಅವಧ್ಯರನ್ನು ಕೊಂದಾನು ಅಥವಾ ವಧ್ಯರನ್ನು ಸತ್ಕರಿಸಿಯಾನು. ಕ್ರುದ್ಧನು ಸ್ವತಃ ತನ್ನನ್ನೂ ಕೂಡ ಯಮಸಾದನಕ್ಕೆ ಕಳುಹಿಸಿಕೊಳ್ಳಬಹುದು.
03030007a ಏತಾನ್ದೋಷಾನ್ಪ್ರಪಶ್ಯದ್ಭಿರ್ಜಿತಃ ಕ್ರೋಧೋ ಮನೀಷಿಭಿಃ।
03030007c ಇಚ್ಚದ್ಭಿಃ ಪರಮಂ ಶ್ರೇಯ ಇಹ ಚಾಮುತ್ರ ಚೋತ್ತಮಂ।।
ಈ ದೋಷಗಳನ್ನು ಪರಿಗಣಿಸಿಯೇ ಇಲ್ಲಿ ಪರಮ ಶ್ರೇಯಸ್ಸು ಮತ್ತು ಅಲ್ಲಿ ಉತ್ತಮಗತಿಯನ್ನು ಹೊಂದಲು ಬಯಸುವ ಬುದ್ಧಿವಂತರು ಕ್ರೋಧವನ್ನು ತೊರೆಯುತ್ತಾರೆ.
03030008a ತಂ ಕ್ರೋಧಂ ವರ್ಜಿತಂ ಧೀರೈಃ ಕಥಮಸ್ಮದ್ವಿಧಶ್ಚರೇತ್।
03030008c ಏತದ್ದ್ರೌಪದಿ ಸಂಧಾಯ ನ ಮೇ ಮನ್ಯುಃ ಪ್ರವರ್ಧತೇ।।
ಬುದ್ಧಿವಂತರು ವರ್ಜಿಸುವ ಕ್ರೋಧವನ್ನು ನಾನು ಏಕೆ ನನ್ನದಾಗಿಸಿಕೊಳ್ಳಬೇಕು? ದ್ರೌಪದಿ! ಇದರ ಕುರಿತು ಯೋಚಿಸಿಯೇ ನನ್ನ ಸಿಟ್ಟು ಏರುವುದಿಲ್ಲ.
03030009a ಆತ್ಮಾನಂ ಚ ಪರಂ ಚೈವ ತ್ರಾಯತೇ ಮಹತೋ ಭಯಾತ್।
03030009c ಕ್ರುಧ್ಯಂತಮಪ್ರತಿಕ್ರುಧ್ಯನ್ದ್ವಯೋರೇಷ ಚಿಕಿತ್ಸಕಃ।।
ತನ್ನ ಮೇಲೆ ಸಿಟ್ಟಾದವನ ಮೇಲೆ ಯಾರು ಸಿಟ್ಟಾಗುವುದಿಲ್ಲವೋ ಅವನು ಸ್ವತಃ ತನ್ನನ್ನು ಮತ್ತು ಅನ್ಯನನ್ನು ಒಂದು ಮಹಾ ಭಯದಿಂದ ರಕ್ಷಿಸುತ್ತಾನೆ. ಇಬ್ಬರಿಗೂ ಚಿಕಿತ್ಸಕನಾಗುತ್ತಾನೆ.
03030010a ಮೂಢೋ ಯದಿ ಕ್ಲಿಶ್ಯಮಾನಃ ಕ್ರುಧ್ಯತೇಽಶಕ್ತಿಮಾನ್ನರಃ।
03030010c ಬಲೀಯಸಾಂ ಮನುಷ್ಯಾಣಾಂ ತ್ಯಜತ್ಯಾತ್ಮಾನಮಂತತಃ।।
03030011a ತಸ್ಯಾತ್ಮಾನಂ ಸಂತ್ಯಜತೋ ಲೋಕಾ ನಶ್ಯಂತ್ಯನಾತ್ಮನಃ।
ಶಕ್ತಿಯುಳ್ಳ ಮನುಷ್ಯನು ತಿರಸ್ಕರಿಸಿದನೆಂದು ಅವನ ಮೇಲೆ ಅಷ್ಟೊಂದು ಶಕ್ತಿಯಿಲ್ಲದಿರುವ ಮನುಷ್ಯನು ಸಿಟ್ಟು ಮಾಡಿದರೆ, ಆ ಮೂಢನು ತನ್ನ ಜೀವನವನ್ನೇ ಕಳೆದುಕೊಳ್ಳುತ್ತಾನೆ. ತನ್ನ ಮೇಲೆ ಪ್ರಭುತ್ವವನ್ನು ಹೊಂದಿರದ, ಕಷ್ಟಗಳನ್ನು ಹುಡುಕಿಕೊಂಡು ಹೋಗುವ ಅಂಥವನಿಗೆ ಪರಲೋಕವು ಸುಖಕರವಾಗಿರುವುದಿಲ್ಲ.
03030011c ತಸ್ಮಾದ್ದ್ರೌಪದ್ಯಶಕ್ತಸ್ಯ ಮನ್ಯೋರ್ನಿಯಮನಂ ಸ್ಮೃತಂ।।
03030012a ವಿದ್ವಾಂಸ್ತಥೈವ ಯಃ ಶಕ್ತಃ ಕ್ಲಿಶ್ಯಮಾನೋ ನ ಕುಪ್ಯತಿ।
03030012c ಸ ನಾಶಯಿತ್ವಾ ಕ್ಲೇಷ್ಟಾರಂ ಪರಲೋಕೇ ಚ ನಂದತಿ।।
ದ್ರೌಪದಿ! ಆದುದರಿಂದಲೇ ಅಶಕ್ತರು ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ. ಹಾಗೆಯೇ ಸಿಟ್ಟು ಮಾಡದ ಬಲಶಾಲಿಯು, ಬುದ್ಧಿವಂತನಾಗಿದ್ದರೆ, ತನಗೆ ತೊಂದರೆಕೊಡುತ್ತಿದ್ದವರ ಕಷ್ಟಗಳನ್ನೂ ನಾಶಪಡಿಸಿ, ಪರಲೋಕದಲ್ಲಿ ಆನಂದಿಸುತ್ತಾನೆ.
03030013a ತಸ್ಮಾದ್ಬಲವತಾ ಚೈವ ದುರ್ಬಲೇನ ಚ ನಿತ್ಯದಾ।
03030013c ಕ್ಷಂತವ್ಯಂ ಪುರುಷೇಣಾಹುರಾಪತ್ಸ್ವಪಿ ವಿಜಾನತಾ।।
ಆದುದರಿಂದಲೇ ಇದನ್ನು ತಿಳಿದ ಬಲವಂತರು ಮತ್ತು ದುರ್ಬಲರು ಇಬ್ಬರೂ ನಿತ್ಯವೂ, ಕಷ್ಟದ ಸಮಯದಲ್ಲಿಯೂ ಕೂಡ, ಕ್ಷಮಾವಂತರಾಗಿರಬೇಕು.
03030014a ಮನ್ಯೋರ್ಹಿ ವಿಜಯಂ ಕೃಷ್ಣೇ ಪ್ರಶಂಸಂತೀಹ ಸಾಧವಃ।
03030014c ಕ್ಷಮಾವತೋ ಜಯೋ ನಿತ್ಯಂ ಸಾಧೋರಿಹ ಸತಾಂ ಮತಂ।।
ಕೃಷ್ಣೇ! ಸಿಟ್ಟನ್ನು ಗೆಲ್ಲುವುದನ್ನು ಸಾಧುಗಳು ಪ್ರಶಂಸಿಸುತ್ತಾರೆ. ನಿತ್ಯವೂ ಕ್ಷಮಾವಂತನೇ ಉತ್ತಮ ಜಯವನ್ನು ಹೊಂದುತ್ತಾನೆ ಎನ್ನುವುದೇ ಸಾಧುಗಳ ಅಭಿಪ್ರಾಯ.
03030015a ಸತ್ಯಂ ಚಾನೃತತಃ ಶ್ರೇಯೋ ನೃಶಂಸಾಚ್ಚಾನೃಶಂಸತಾ।
03030015c ತಮೇವಂ ಬಹುದೋಷಂ ತು ಕ್ರೋಧಂ ಸಾಧುವಿವರ್ಜಿತಂ।
03030015e ಮಾದೃಶಃ ಪ್ರಸೃಜೇತ್ಕಸ್ಮಾತ್ಸುಯೋಧನವಧಾದಪಿ।।
ಸುಳ್ಳಿಗಿಂತ ಸತ್ಯವೇ ಒಳ್ಳೆಯದು, ಕ್ರೂರತ್ವಕ್ಕಿಂತ ಮೃದುತ್ವವೇ ಒಳ್ಳೆಯದು. ಸಾಧುಗಳಿಂದ ವಿವರ್ಜಿತವಾದ ಬಹುದೋಷಗಳನ್ನು ಹೊಂದಿದ, ಸುಯೋಧನನನ್ನು ಕೊಲ್ಲಬಹುದಾದ ಕ್ರೋಧವನ್ನು ನನ್ನಂಥವನು ಹೇಗೆ ತಾನೇ ನನ್ನದನ್ನಾಗಿ ಮಾಡಿಕೊಳ್ಳಲಿ?
03030016a ತೇಜಸ್ವೀತಿ ಯಮಾಹುರ್ವೈ ಪಂಡಿತಾ ದೀರ್ಘದರ್ಶಿನಃ।
03030016c ನ ಕ್ರೋಧೋಽಭ್ಯಂತರಸ್ತಸ್ಯ ಭವತೀತಿ ವಿನಿಶ್ಚಿತಂ।।
ದೀರ್ಘದರ್ಶಿ ಪಂಡಿತರು ಯಾವುದನ್ನು ತೇಜಸ್ಸು ಎಂದು ಕರೆಯುತ್ತಾರೋ ಅದರಲ್ಲಿ ಕ್ರೋಧವೇ ಇಲ್ಲ ಎನ್ನುವುದು ನಿಶ್ಚಿತ.
03030017a ಯಸ್ತು ಕ್ರೋಧಂ ಸಮುತ್ಪನ್ನಂ ಪ್ರಜ್ಞಯಾ ಪ್ರತಿಬಾಧತೇ।
03030017c ತೇಜಸ್ವಿನಂ ತಂ ವಿದ್ವಾಂಸೋ ಮನ್ಯಂತೇ ತತ್ತ್ವದರ್ಶಿನಃ।।
ಯಾರು ಹುಟ್ಟಿದ ಕ್ರೋಧವನ್ನು ಪ್ರಜ್ಞೆಯಿಂದ ತಡೆಹಿಡಿಯುತ್ತಾನೋ ಅಂಥವನನ್ನು ತತ್ವದರ್ಶಿ ವಿದ್ವಾಂಸರು ತೇಜಸ್ವಿಯೆಂದು ಗೌರವಿಸುತ್ತಾರೆ.
03030018a ಕ್ರುದ್ಧೋ ಹಿ ಕಾರ್ಯಂ ಸುಶ್ರೋಣಿ ನ ಯಥಾವತ್ಪ್ರಪಶ್ಯತಿ।
03030018c ನ ಕಾರ್ಯಂ ನ ಚ ಮರ್ಯಾದಾಂ ನರಃ ಕ್ರುದ್ಧೋಽನುಪಶ್ಯತಿ।।
ಸುಶ್ರೋಣಿ! ಸಿಟ್ಟಿಗೆದ್ದವನು ಮಾಡಬೇಕಾದುದನ್ನು ಯಥಾವತ್ತಾಗಿ (ಸರಿಯಾಗಿ) ತಿಳಿದುಕೊಳ್ಳುವುದಿಲ್ಲ. ಸಿಟ್ಟಿಗೆದ್ದ ಮನುಷ್ಯನು ಏನು ಮಾಡಬೇಕು ಎನ್ನುವುದನ್ನು ಮತ್ತು ಎಷ್ಟು ಮಾಡಬೇಕು (ಅದರ ಪರಿಮಿತಿ) ಎನ್ನುವುದರ ಕುರಿತು ನೋಡುವುದೇ ಇಲ್ಲ.
03030019a ಹಂತ್ಯವಧ್ಯಾನಪಿ ಕ್ರುದ್ಧೋ ಗುರೂನ್ರೂಕ್ಷೈಸ್ತುದತ್ಯಪಿ।
03030019c ತಸ್ಮಾತ್ತೇಜಸಿ ಕರ್ತವ್ಯೇ ಕ್ರೋಧೋ ದೂರಾತ್ಪ್ರತಿಷ್ಠಿತಃ।।
ಕೃದ್ಧನಾದವನು ದಂಡನೆಗೆ ಅರ್ಹರಲ್ಲದವರಿಗೂ ದಂಡನೆಯನ್ನು ನೀಡುತ್ತಾನೆ ಮತ್ತು ಹಿರಿಯರನ್ನು ಅವಹೇಳನ ಮಾಡುತ್ತಾನೆ. ಆದುದರಿಂದ ಕ್ರೋಧವನ್ನು ದೂರಮಾಡಿ ಕೆಲಸಮಾಡುವವನೇ ತೇಜಸ್ವಿ ಎಂದೆನಿಸಿಕೊಳ್ಳುತ್ತಾನೆ.
03030020a ದಾಕ್ಷ್ಯಂ ಹ್ಯಮರ್ಷಃ ಶೌರ್ಯಂ ಚ ಶೀಘ್ರತ್ವಮಿತಿ ತೇಜಸಃ।
03030020c ಗುಣಾಃ ಕ್ರೋಧಾಭಿಭೂತೇನ ನ ಶಕ್ಯಾಃ ಪ್ರಾಪ್ತುಮಂಜಸಾ।।
ಕ್ರೋಧಕ್ಕೊಳಗಾದವನಿಗೆ ತೇಜಸ್ವಿಯ ಗುಣಗಳಾದ ದಕ್ಷತೆ, ಅಸೂಯೆಪಡೆಯದೇ ಇರುವ, ಶೌರ್ಯ, ಮತ್ತು ಶೀಘ್ನತ್ವವನ್ನು ಹೊಂದಲು ಸಾಧ್ಯವಿಲ್ಲ.
03030021a ಕ್ರೋಧಂ ತ್ಯಕ್ತ್ವಾ ತು ಪುರುಷಃ ಸಮ್ಯಕ್ತೇಜೋಽಭಿಪದ್ಯತೇ।
03030021c ಕಾಲಯುಕ್ತಂ ಮಹಾಪ್ರಾಜ್ಞೇ ಕ್ರುದ್ಧೈಸ್ತೇಜಃ ಸುದುಃಸ್ಸಹಂ।।
ಕ್ರೋಧವನ್ನು ಬಿಟ್ಟ ಪುರುಷನು ತನ್ನ ತೇಜಸ್ಸನ್ನು ಸರಿಯಾಗಿ ಪಡೆಯಬಹುದು. ಮಹಾಪ್ರಾಜ್ಞೆ! ಯಾವಾಗಲೂ ಸಿಟ್ಟು ಮಾಡುವವನಿಗೆ ಕಾಲಬಂದಾಗ ತೇಜಸ್ಸಿನಿಂದ ನಡೆದುಕೊಳ್ಳಲು ಕಷ್ಟವಾಗುತ್ತದೆ.
03030022a ಕ್ರೋಧಸ್ತ್ವಪಂಡಿತೈಃ ಶಶ್ವತ್ತೇಜ ಇತ್ಯಭಿಧೀಯತೇ।
03030022c ರಜಸ್ತಲ್ಲೋಕನಾಶಾಯ ವಿಹಿತಂ ಮಾನುಷಾನ್ಪ್ರತಿ।।
ತಿಳಿಯದೇ ಇರುವವರು ಕ್ರೋಧವನ್ನೇ ತೇಜಸ್ಸೆಂದು ತಪ್ಪು ತಿಳಿಯುತ್ತಾರೆ. ಲೋಕಗಳ ನಾಶಕ್ಕಾಗಿಯೇ ಮನುಷ್ಯನಿಗೆ ಕೋಪವು ವಿಹಿತವಾಗಿದೆ.
03030023a ತಸ್ಮಾಚ್ಛಶ್ವತ್ತ್ಯಜೇತ್ಕ್ರೋಧಂ ಪುರುಷಃ ಸಮ್ಯಗಾಚರನ್।
03030023c ಶ್ರೇಯಾನ್ಸ್ವಧರ್ಮಾನಪಗೋ ನ ಕ್ರುದ್ಧ ಇತಿ ನಿಶ್ಚಿತಂ।।
ಆದುದರಿಂದ ಸರಿಯಾಗಿ ನಡೆದುಕೊಳ್ಳುವ ಪುರುಷನು ಕ್ರೋಧವನ್ನು ತ್ಯಜಿಸಬೇಕು. ಸ್ವಧರ್ಮವನ್ನು ಅಲ್ಲಗಳೆದರೂ ಪರವಾಗಿಲ್ಲ ಸಿಟ್ಟಾಗಬಾರದೇ ಇರುವುದೇ ಶ್ರೇಯಸ್ಸು ಎನ್ನುವುದಂತೂ ನಿಶ್ಚಯವೇ ಸರಿ.
03030024a ಯದಿ ಸರ್ವಮಬುದ್ಧೀನಾಮತಿಕ್ರಾಂತಮಮೇಧಸಾಂ।
03030024c ಅತಿಕ್ರಮೋ ಮದ್ವಿಧಸ್ಯ ಕಥಂ ಸ್ವಿತ್ಸ್ಯಾದನಿಂದಿತೇ।।
ಅನಿಂದಿತೇ! ಬುದ್ಧಿಯಿಲ್ಲದಿರುವವರು ತಿಳುವಳಿಕೆಯಿಲ್ಲದಿರುವವರು ಎಲ್ಲವನ್ನೂ ಮೀರಿ ನಡೆಯುತ್ತಾರೆಂದಾದರೆ ನನ್ನಂಥವನು ಹೇಗೆ ತಾನೇ ಅದನ್ನು ಮೀರಿ ನಡೆಯಲಿ?
03030025a ಯದಿ ನ ಸ್ಯುರ್ಮನುಷ್ಯೇಷು ಕ್ಷಮಿಣಃ ಪೃಥಿವೀಸಮಾಃ।
03030025c ನ ಸ್ಯಾತ್ಸಂಧಿರ್ಮನುಷ್ಯಾಣಾಂ ಕ್ರೋಧಮೂಲೋ ಹಿ ವಿಗ್ರಹಃ।।
ಪೃಥ್ವಿಗೆ ಸಮಾನ ಕ್ಷಮಾವಂತರು ಜನರಲ್ಲಿ ಇಲ್ಲದೇ ಇದ್ದಿದ್ದರೆ ಜನರಲ್ಲಿ ಶಾಂತಿಯೇ ಇರುತ್ತಿರಲಿಲ್ಲ. ಯಾಕೆಂದರೆ ಕ್ರೋಧವೇ ಯುದ್ದದ ಮೂಲ.
03030026a ಅಭಿಷಕ್ತೋ ಹ್ಯಭಿಷಜೇದಾಹನ್ಯಾದ್ಗುರುಣಾ ಹತಃ।
03030026c ಏವಂ ವಿನಾಶೋ ಭೂತಾನಾಮಧರ್ಮಃ ಪ್ರಥಿತೋ ಭವೇತ್।।
ದಬ್ಬಾಳಿಕೆಗೊಳಗಾದವರು ದಬ್ಬಾಳಿಕೆ ಮಾಡಲು ಪ್ರಾರಂಭಿಸಿದರೆ, ಗುರುವಿನಿಂದ ಪೆಟ್ಟುತಿಂದವನು ಗುರುವನ್ನೇ ಹೊಡೆಯಲು ಹೋದರೆ ಇರುವವೆಲ್ಲವುಗಳ ವಿನಾಶ ಮತ್ತು ಅಧರ್ಮವು ನಿಶ್ಚಿತವಾಗುತ್ತದೆ.
03030027a ಆಕ್ರುಷ್ಟಃ ಪುರುಷಃ ಸರ್ವಃ ಪ್ರತ್ಯಾಕ್ರೋಶೇದನಂತರಂ।
03030027c ಪ್ರತಿಹನ್ಯಾದ್ಧತಶ್ಚೈವ ತಥಾ ಹಿಂಸ್ಯಾಚ್ಚ ಹಿಂಸಿತಃ।।
03030028a ಹನ್ಯುರ್ಹಿ ಪಿತರಃ ಪುತ್ರಾನ್ಪುತ್ರಾಶ್ಚಾಪಿ ತಥಾ ಪಿತೄನ್।
03030028c ಹನ್ಯುಶ್ಚ ಪತಯೋ ಭಾರ್ಯಾಃ ಪತೀನ್ಭಾರ್ಯಾಸ್ತಥೈವ ಚ।।
03030029a ಏವಂ ಸಂಕುಪಿತೇ ಲೋಕೇ ಜನ್ಮ ಕೃಷ್ಣೇ ನ ವಿದ್ಯತೇ।
03030029c ಪ್ರಜಾನಾಂ ಸಂಧಿಮೂಲಂ ಹಿ ಜನ್ಮ ವಿದ್ಧಿ ಶುಭಾನನೇ।।
ಬೈಯಲ್ಪಟ್ಟ ಎಲ್ಲ ಜನರೂ ಪುನಃ ಬೈಯಲು ಆಗುತ್ತಿದ್ದರೆ ಅಥವಾ ಹೊಡೆತ ತಿಂದವನು ಪುನಃ ಹೊಡೆಯಲಿಕ್ಕೆ ಹೋದರೆ, ಹಿಂಸೆಗೊಳಗಾದವನು ಹಿಂಸಾಚಾರಕ್ಕೆ ಇಳಿದರೆ, ತಂದೆಯರು ಮಕ್ಕಳನ್ನೂ, ಮಕ್ಕಳು ತಂದೆಯಂದಿರನ್ನೂ ಹೊಡೆಯುವಂತಾದರೆ, ಗಂಡಂದಿರು ಹೆಂಡಂದಿರನ್ನು ಮತ್ತು ಹೆಂಡಿರು ಗಂಡಂದಿರನ್ನು ಹೊಡೆಯುವಂತಾದರೆ, ಹೀಗೆ ಲೋಕದಲ್ಲಿ ಜನರು ಕೋಪದಿಂದ ಇದ್ದಿದ್ದರೆ ಜನರೇ ಹುಟ್ಟುತ್ತಿರಲಿಲ್ಲ ಎಂದು ತಿಳಿ ಕೃಷ್ಣೇ! ಏಕೆಂದರೆ, ಶುಭಾನನೇ! ಶಾಂತಿಯೇ ಪ್ರಜೆಗಳ ಹುಟ್ಟಿಗೆ ಕಾರಣ ಎಂದು ತಿಳಿ.
03030030a ತಾಃ ಕ್ಷೀಯೇರನ್ಪ್ರಜಾಃ ಸರ್ವಾಃ ಕ್ಷಿಪ್ರಂ ದ್ರೌಪದಿ ತಾದೃಶೇ।
03030030c ತಸ್ಮಾನ್ಮನ್ಯುರ್ವಿನಾಶಾಯ ಪ್ರಜಾನಾಮಭವಾಯ ಚ।।
ದ್ರೌಪದಿ! ಅಂಥಹ ಲೋಕದಲ್ಲಿ ಪ್ರಜೆಗಳೆಲ್ಲರೂ ಬೇಗನೆ ಸಾಯುತ್ತಾರೆ. ಸಿಟ್ಟೇ ಪ್ರಜೆಗಳ ವಿನಾಶಕ್ಕೂ, ಅವರು ಇಲ್ಲದಂತೆ ಮಾಡುವುದಕ್ಕೂ ಕಾರಣ.
03030031a ಯಸ್ಮಾತ್ತು ಲೋಕೇ ದೃಶ್ಯಂತೇ ಕ್ಷಮಿಣಃ ಪೃಥಿವೀಸಮಾಃ।
03030031c ತಸ್ಮಾಜ್ಜನ್ಮ ಚ ಭೂತಾನಾಂ ಭವಶ್ಚ ಪ್ರತಿಪದ್ಯತೇ।।
ಈ ಲೋಕದಲ್ಲಿ ಭೂಮಿಗೆ ಸಮನಾದ ಕ್ಷಮಾವಂತರು ಕಾಣಿಸಿಕೊಳ್ಳುವುದರಿಂದಲೇ ಜನರು ಹುಟ್ಟುತ್ತಾರೆ ಮತ್ತು ಇರುವಿಕೆ ಮುಂದುವರೆಯುತ್ತಿದೆ.
03030032a ಕ್ಷಂತವ್ಯಂ ಪುರುಷೇಣೇಹ ಸರ್ವಾಸ್ವಾಪತ್ಸು ಶೋಭನೇ।
03030032c ಕ್ಷಮಾ ಭವೋ ಹಿ ಭೂತಾನಾಂ ಜನ್ಮ ಚೈವ ಪ್ರಕೀರ್ತಿತಂ।।
ಶೋಭನೇ! ಎಲ್ಲ ಆಪತ್ತುಗಳಲ್ಲಿಯೂ ಪುರುಷನು ಕ್ಷಮಾವಂತನಾಗಿರಬೇಕು. ಯಾಕೆಂದರೆ ಕ್ಷಮೆ ಎಂದರೆ ಭೂತಗಳ ಇರುವಿಕೆ ಮತ್ತು ಜನ್ಮ ಎಂದೂ ಕರೆಯಲ್ಪಟ್ಟಿದೆ.
03030033a ಆಕ್ರುಷ್ಟಸ್ತಾಡಿತಃ ಕ್ರುದ್ಧಃ ಕ್ಷಮತೇ ಯೋ ಬಲೀಯಸಾ।
03030033c ಯಶ್ಚ ನಿತ್ಯಂ ಜಿತಕ್ರೋಧೋ ವಿದ್ವಾನುತ್ತಮಪೂರುಷಃ।।
03030034a ಪ್ರಭಾವವಾನಪಿ ನರಸ್ತಸ್ಯ ಲೋಕಾಃ ಸನಾತನಾಃ।
03030034c ಕ್ರೋಧನಸ್ತ್ವಲ್ಪವಿಜ್ಞಾನಃ ಪ್ರೇತ್ಯ ಚೇಹ ಚ ನಶ್ಯತಿ।।
ಬಲವಂತರ ಹೀಯಾಳಿಕೆಗೊಳಲ್ಪಟ್ಟು, ಹೊಡೆತತಿಂದು ಸಿಟ್ಟಿಗೊಳಗಾಗಿದ್ದರೂ ನಿತ್ಯವೂ ಕ್ರೋಧವನ್ನು ಗೆದ್ದವನು ವಿದ್ವಾಂಸ ಮತ್ತು ಉತ್ತಮ ಪುರುಷ. ತನ್ನ ಪ್ರಭಾವದಿಂದ ಸನಾತನ ಲೋಕಗಳೂ ಆ ಮನುಷ್ಯನದಾಗುತ್ತವೆ. ಸ್ವಲ್ವವನ್ನೇ ತಿಳಿದುಕೊಂಡಿರುವವನ ಕೋಪವು ಇದನ್ನೂ ಮತ್ತು ಇತರ ಲೋಕಗಳನ್ನೂ ನಾಶಪಡಿಸುತ್ತದೆ.
03030035a ಅತ್ರಾಪ್ಯುದಾಹರಂತೀಮಾ ಗಾಥಾ ನಿತ್ಯಂ ಕ್ಷಮಾವತಾಂ।
03030035c ಗೀತಾಃ ಕ್ಷಮಾವತಾ ಕೃಷ್ಣೇ ಕಾಶ್ಯಪೇನ ಮಹಾತ್ಮನಾ।।
03030036a ಕ್ಷಮಾ ಧರ್ಮಃ ಕ್ಷಮಾ ಯಜ್ಞಃ ಕ್ಷಮಾ ವೇದಾಃ ಕ್ಷಮಾ ಶ್ರುತಂ।
03030036c ಯಸ್ತಾಮೇವಂ ವಿಜಾನಾತಿ ಸ ಸರ್ವಂ ಕ್ಷಂತುಮರ್ಹತಿ।।
03030037a ಕ್ಷಮಾ ಬ್ರಹ್ಮ ಕ್ಷಮಾ ಸತ್ಯಂ ಕ್ಷಮಾ ಭೂತಂ ಚ ಭಾವಿ ಚ।
03030037c ಕ್ಷಮಾ ತಪಃ ಕ್ಷಮಾ ಶೌಚಂ ಕ್ಷಮಯಾ ಚೋದ್ಧೃತಂ ಜಗತ್।।
ಕೃಷ್ಣೇ! ಆದುದರಿಂದಲೇ ನಿತ್ಯವೂ ಕ್ಷಮಾವಂತರನ್ನು ಹೊಗಳಿ ಹಾಡುಹೇಳಿ ಕ್ಷಮಾವತ ಮಹಾತ್ಮ ಕಾಶ್ಯಪನು ಉದಾಹರಿಸುತ್ತಾನೆ: “ಕ್ಷಮೆಯೇ ಧರ್ಮ. ಕ್ಷಮೆಯೇ ಯಜ್ಞ. ಕ್ಷಮೆಯೇ ವೇದ. ಕ್ಷಮೆಯೇ ಶ್ರುತಿ. ಇದನ್ನು ತಿಳಿದವನು ಎಲ್ಲವನೂ ಕ್ಷಮಿಸಬಲ್ಲನು. ಕ್ಷಮೆಯೇ ಬ್ರಹ್ಮ. ಕ್ಷಮೆಯೇ ಸತ್ಯ. ಕ್ಷಮೆಯೇ ಇರುವಂಥಹುದು ಮತ್ತು ಮುಂದೆ ಇರಬಹುದಾದಂಥುಹುದು. ಕ್ಷಮೆಯೇ ತಪಸ್ಸು. ಕ್ಷಮೆಯೇ ಶೌಚ. ಕ್ಷಮೆಯೇ ಜಗತ್ತನ್ನು ಎತ್ತಿ ಹಿಡಿದಿರುವುದು.
03030038a ಅತಿ ಬ್ರಹ್ಮವಿದಾಂ ಲೋಕಾನತಿ ಚಾಪಿ ತಪಸ್ವಿನಾಂ।
03030038c ಅತಿ ಯಜ್ಞವಿದಾಂ ಚೈವ ಕ್ಷಮಿಣಃ ಪ್ರಾಪ್ನುವಂತಿ ತಾನ್।।
ಬ್ರಹ್ಮವಿದರ, ತಪಸ್ವಿಗಳ ಮತ್ತು ಯಜ್ಞವಿದರ ಲೋಕಗಳು ಕ್ಷಮಾವಂತನಿಗೆ ಸೇರುತ್ತವೆ.
03030039a ಕ್ಷಮಾ ತೇಜಸ್ವಿನಾಂ ತೇಜಃ ಕ್ಷಮಾ ಬ್ರಹ್ಮ ತಪಸ್ವಿನಾಂ।
03030039c ಕ್ಷಮಾ ಸತ್ಯಂ ಸತ್ಯವತಾಂ ಕ್ಷಮಾ ದಾನಂ ಕ್ಷಮಾ ಯಶಃ।।
ತೇಜಸ್ವಿಗಳ ತೇಜಸ್ಸೇ ಕ್ಷಮೆ, ಕ್ಷಮೆಯೇ ತಪಸ್ವಿಗಳ ಬ್ರಹ್ಮ. ಸತ್ಯವಂತರ ಸತ್ಯವೇ ಕ್ಷಮೆ ಮತ್ತು ಕ್ಷಮೆಯೇ ದಾನ ಮತ್ತು ಕ್ಷಮೆಯೇ ಯಶಸ್ಸು.
03030040a ತಾಂ ಕ್ಷಮಾಮೀದೃಶೀಂ ಕೃಷ್ಣೇ ಕಥಮಸ್ಮದ್ವಿಧಸ್ತ್ಯಜೇತ್।
03030040c ಯಸ್ಯಾಂ ಬ್ರಹ್ಮ ಚ ಸತ್ಯಂ ಚ ಯಜ್ಞಾ ಲೋಕಾಶ್ಚ ವಿಷ್ಠಿತಾಃ।
ಕೃಷ್ಣೇ! ಬ್ರಹ್ಮ, ಸತ್ಯ, ಯಜ್ಞ ಮತ್ತು ಲೋಕಗಳು ನೆಲೆಮಾಡಿರುವ ಕ್ಷಮೆಯನ್ನು ನನ್ನಂಥವನು ಹೇಗೆ ತಾನೇ ಬಿಟ್ಟುಬಿಡಲಿ?
03030040e ಭುಜ್ಯಂತೇ ಯಜ್ವನಾಂ ಲೋಕಾಃ ಕ್ಷಮಿಣಾಮಪರೇ ತಥಾ।।
03030041a ಕ್ಷಂತವ್ಯಮೇವ ಸತತಂ ಪುರುಷೇಣ ವಿಜಾನತಾ।
03030041c ಯದಾ ಹಿ ಕ್ಷಮತೇ ಸರ್ವಂ ಬ್ರಹ್ಮ ಸಂಪದ್ಯತೇ ತದಾ।।
ಯಾಜಿಸುವವರು ಲೋಕಗಳನ್ನು ಅನುಭೋಗಿಸುತ್ತಾರೆ ಮತ್ತು ಹಾಗೆಯೇ ಕ್ಷಮಾವಂತರು ನಂತರದ ಲೋಕಗಳನ್ನು ಅನುಭೋಗಿಸುತ್ತಾರೆ. ತಿಳಿದಿರುವ ಪುರುಷನು ಯಾವಾಗಲೂ ಕ್ಷಮಿಸುತ್ತಾನೆ. ಎಲ್ಲವನ್ನೂ ಕ್ಷಮಿಸುವವನೇ ಬ್ರಹ್ಮನಾಗುತ್ತಾನೆ.
03030042a ಕ್ಷಮಾವತಾಮಯಂ ಲೋಕಃ ಪರಶ್ಚೈವ ಕ್ಷಮಾವತಾಂ।
03030042c ಇಹ ಸಮ್ಮಾನಮೃಚ್ಚಂತಿ ಪರತ್ರ ಚ ಶುಭಾಂ ಗತಿಂ।।
ಈ ಲೋಕವು ಕ್ಷಮಾವಂತನದ್ದು, ಪರಲೋಕವೂ ಆ ಕ್ಷಮಾವಂತನದ್ದೇ! ಕ್ಷಮಾವಂತರು ಇಲ್ಲಿ ಸಮ್ಮಾನವನ್ನು ಪಡೆಯುತ್ತಾರೆ ಮತ್ತು ಪರಲೋಕದಲ್ಲಿ ಶುಭಗತಿಯನ್ನು ಹೊಂದುತ್ತಾರೆ.
03030043a ಯೇಷಾಂ ಮನ್ಯುರ್ಮನುಷ್ಯಾಣಾಂ ಕ್ಷಮಯಾ ನಿಹತಃ ಸದಾ।
03030043c ತೇಷಾಂ ಪರತರೇ ಲೋಕಾಸ್ತಸ್ಮಾತ್ ಕ್ಷಾಂತಿಃ ಪರಾ ಮತಾ।।
ಕೋಪವನ್ನು ಕ್ಷಮೆಯಿಂದ ಸದಾ ನಿಯಂತ್ರಣದಲ್ಲಿಟ್ಟುಕೊಂಡಿರುವ ಮನುಷ್ಯನಿಗೆ ಉತ್ತಮ ಲೋಕಗಳು ದೊರೆಯುತ್ತವೆ. ಆದುದರಿಂದ ಕ್ಷಮೆಯೇ ಶ್ರೇಷ್ಠವೆಂದು ಅಭಿಪ್ರಾಯ.”
03030044a ಇತಿ ಗೀತಾಃ ಕಾಶ್ಯಪೇನ ಗಾಥಾ ನಿತ್ಯಂ ಕ್ಷಮಾವತಾಂ।
03030044c ಶ್ರುತ್ವಾ ಗಾಥಾಃ ಕ್ಷಮಾಯಾಸ್ತ್ವಂ ತುಷ್ಯ ದ್ರೌಪದಿ ಮಾ ಕ್ರುಧಃ।।
ಇದೇ ನಿತ್ಯವೂ ಕ್ಷಮಾವಂತರಾಗಿರುವವರ ಕುರಿತು ಕಾಶ್ಯಪನು ಹಾಡಿದ ಗೀತೆ. ದ್ರೌಪದಿ! ಈ ಗೀತೆಯನ್ನು ಕೇಳಿದ ನೀನು ಈಗಲಾದರೂ ಕ್ಷಮಾವಂತಳಾಗಿರು. ಸಿಟ್ಟುಮಾಡಬೇಡ!
03030045a ಪಿತಾಮಹಃ ಶಾಂತನವಃ ಶಮಂ ಸಂಪೂಜಯಿಷ್ಯತಿ।
03030045c ಆಚಾರ್ಯೋ ವಿದುರಃ ಕ್ಷತ್ತಾ ಶಮಮೇವ ವದಿಷ್ಯತಃ।
03030045e ಕೃಪಶ್ಚ ಸಂಜಯಶ್ಚೈವ ಶಮಮೇವ ವದಿಷ್ಯತಃ।।
03030046a ಸೋಮದತ್ತೋ ಯುಯುತ್ಸುಶ್ಚ ದ್ರೋಣಪುತ್ರಸ್ತಥೈವ ಚ।
03030046c ಪಿತಾಮಹಶ್ಚ ನೋ ವ್ಯಾಸಃ ಶಮಂ ವದತಿ ನಿತ್ಯಶಃ।।
ಶಾಂತನವ ಪಿತಾಮಹನು ಶಮೆಯನ್ನು ಪೂಜಿಸುತ್ತಾನೆ. ಆಚಾರ್ಯ ಮತ್ತು ವಿದುರ ಕ್ಷತ್ತರೂ ಶಮೆಯನ್ನೇ ಬೆಂಬಲಿಸುತ್ತಾರೆ. ಕೃಪ, ಸಂಜಯರೂ ಕೂಡ ಶಮೆಯನ್ನೇ ಹೊಗಳುತ್ತಾರೆ. ಸೋಮದತ್ತ, ಯುಯುತ್ಸು, ದ್ರೋಣಪುತ್ರ, ಪಿತಾಮಹ ವ್ಯಾಸನೂ ಕೂಡ ನಿತ್ಯವೂ ಶಮೆಯನ್ನೇ ಪ್ರೋತ್ಸಾಹಿಸುತ್ತಾರೆ.
03030047a ಏತೈರ್ಹಿ ರಾಜಾ ನಿಯತಂ ಚೋದ್ಯಮಾನಃ ಶಮಂ ಪ್ರತಿ।
03030047c ರಾಜ್ಯಂ ದಾತೇತಿ ಮೇ ಬುದ್ಧಿರ್ನ ಚೇಲ್ಲೋಭಾನ್ನಶಿಷ್ಯತಿ।।
ಅವರು ಶಮೆಯ ಕುರಿತಾಗಿ ನಿತ್ಯವೂ ಅವನನ್ನು ಪ್ರಚೋದಿಸುತ್ತಾರಿರುವುದರಿಂದ ರಾಜನೂ ಕೂಡ ನನಗೆ ರಾಜ್ಯವನ್ನು ಕೊಡುತ್ತಾನೆ. ಹಾಗೆ ಬುದ್ಧಿ ಮಾಡದಿದ್ದರೆ ಲೋಭದಿಂದ ವಿನಾಶವನ್ನು ಹೊಂದುತ್ತಾನೆ.
03030048a ಕಾಲೋಽಯಂ ದಾರುಣಃ ಪ್ರಾಪ್ತೋ ಭರತಾನಾಮಭೂತಯೇ।
03030048c ನಿಶ್ಚಿತಂ ಮೇ ಸದೈವೈತತ್ಪುರಸ್ತಾದಪಿ ಭಾಮಿನಿ।।
ಭರತರು ನಾಶಹೊಂದುವ ದಾರುಣ ಕಾಲವು ಬಂದಿದೆ. ಭಾಮಿನಿ! ಇದೇ ನನಗೆ ಇದೂವರೆಗೆ ಇರುವ ಮತ್ತು ಸದಾ ಇರುವ ನಿಶ್ಚಯ.
03030049a ಸುಯೋಧನೋ ನಾರ್ಹತೀತಿ ಕ್ಷಮಾಮೇವಂ ನ ವಿಂದತಿ।
03030049c ಅರ್ಹಸ್ತಸ್ಯಾಹಮಿತ್ಯೇವ ತಸ್ಮಾನ್ಮಾಂ ವಿಂದತೇ ಕ್ಷಮಾ।।
ಸುಯೋಧನನಿಗೆ ಕ್ಷಮೆಯೆಂದರೇನೇ ತಿಳಿದಿಲ್ಲ ಮತ್ತು ಅವನಲ್ಲಿ ಕ್ಷಮೆಯನ್ನು ಕಾಣುವುದಕ್ಕಾಗುವುದಿಲ್ಲ. ನಾನಾದರೋ ಕ್ಷಮೆಯೇನೆಂದು ತಿಳಿದಿದ್ದೇನೆ ಮತ್ತು ಕ್ಷಮಿಸಲು ಸಮರ್ಥನಿದ್ದೇನೆ.
03030050a ಏತದಾತ್ಮವತಾಂ ವೃತ್ತಮೇಷ ಧರ್ಮಃ ಸನಾತನಃ।
03030050c ಕ್ಷಮಾ ಚೈವಾನೃಶಂಸ್ಯಂ ಚ ತತ್ಕರ್ತಾಸ್ಮ್ಯಹಮಂಜಸಾ।।
ಕ್ಷಮೆ ಮತ್ತು ಮೃದುತ್ವ ಇವೇ ಆತ್ಮವಂತರು ನಡೆದುಕೊಳ್ಳುವ ಸನಾತನ ಧರ್ಮ. ಅದರಂತೆಯೇ ನಾನೂ ಕೂಡ ನಡೆದುಕೊಳ್ಳುತ್ತೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ರೌಪದೀಪರಿತಾಪವಾಕ್ಯೇ ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ರೌಪದೀಪರಿತಾಪವಾಕ್ಯದಲ್ಲಿ ಮೂವತ್ತನೆಯ ಅಧ್ಯಾಯವು.