ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 23
ಸಾರ
ಕೃಷ್ಣ-ಶಾಲ್ವರ ಮಾಯಾ ಯುದ್ಧ ಮುಂದುವರೆದುದು (1-19). ಸೌಭವಧೆ (20-41). ಕೃಷ್ಣನನ್ನೂ ಸೇರಿ ಕಾಮ್ಯಕಕ್ಕೆ ಪಾಂಡವರನ್ನು ಕಾಣಲು ಬಂದಿದ್ದವರೆಲ್ಲರೂ ಮರಳಿದುದು (42-48). ಪಾಂಡವರು ದ್ವೈತವನಕ್ಕೆ ಹೊರಟಿದುದು (49-50).
03023001 ವಾಸುದೇವ ಉವಾಚ।
03023001a ತತೋಽಹಂ ಭರತಶ್ರೇಷ್ಠ ಪ್ರಗೃಹ್ಯ ರುಚಿರಂ ಧನುಃ।
03023001c ಶರೈರಪಾತಯಂ ಸೌಭಾಚ್ಛಿರಾಂಸಿ ವಿಬುಧದ್ವಿಷಾಂ।।
ವಾಸುದೇವನು ಹೇಳಿದನು: “ಭರತಶ್ರೇಷ್ಠ! ಆಗ ನಾನು ಸುಂದರ ಧನುಸ್ಸನ್ನು ಹಿಡಿದು ಸೌಭದಲ್ಲಿದ್ದ ದೇವತೆಗಳ ಶತ್ರುಗಳನ್ನು ಶರಗಳಿಂದ ತುಂಡರಿಸಿದನು.
03023002a ಶರಾಂಶ್ಚಾಶೀವಿಷಾಕಾರಾನೂರ್ಧ್ವಗಾಂಸ್ತಿಗ್ಮತೇಜಸಃ।
03023002c ಅಪ್ರೈಷಂ ಶಾಲ್ವರಾಜಾಯ ಶಾಙ್ರಮುಕ್ತಾನ್ಸುವಾಸಸಃ।।
ನನ್ನ ಶಾಙ್ರದಿಂದ ವಿಷವನ್ನು ಕಾರುತ್ತಿದ್ದ ಸರ್ಪಗಳಂತಿರುವ ಅಗ್ನಿಯ ತೇಜಸ್ಸಿನಿಂದ ಮೇಲೆ ಹಾರುವ ಮೊನಚಾದ ಬಾಣಗಳನ್ನು ಪ್ರಯೋಗಿಸಿ ಶಾಲ್ವರಾಜನೆಡೆಗೆ ಎಸೆದೆನು.
03023003a ತತೋ ನಾದೃಶ್ಯತ ತದಾ ಸೌಭಂ ಕುರುಕುಲೋದ್ವಹ।
03023003c ಅಂತರ್ಹಿತಂ ಮಾಯಯಾಭೂತ್ತತೋಽಹಂ ವಿಸ್ಮಿತೋಽಭವಂ।।
ಕುರುಕುಲೋದ್ಧಹ! ಆಗ ಸೌಭವು ಅದೃಶ್ಯವಾಯಿತು. ಮಾಯೆಯಿಂದ ಅದು ಅದೃಶ್ಯವಾದುದನ್ನು ನೋಡಿ ನಾನು ವಿಸ್ಮಿತನಾದೆನು.
03023004a ಅಥ ದಾನವಸಂಘಾಸ್ತೇ ವಿಕೃತಾನನಮೂರ್ಧಜಾಃ।
03023004c ಉದಕ್ರೋಶನ್ಮಹಾರಾಜ ವಿಷ್ಠಿತೇ ಮಯಿ ಭಾರತ।।
ಭಾರತ! ಮಹಾರಾಜ! ಆಗ ನಾನು ನಿಂತಿರುವಂತೆಯೇ ವಿಕಾರ ಮುಖ-ಹಣೆಗಳ ದಾನವರ ಗುಂಪು ಜೋರಾಗಿ ಕಿರಿಚಿತು.
03023005a ತತೋಽಸ್ತ್ರಂ ಶಬ್ಧಸಾಹಂ ವೈ ತ್ವರಮಾಣೋ ಮಹಾಹವೇ।
03023005c ಅಯೋಜಯಂ ತದ್ವಧಾಯ ತತಃ ಶಬ್ಧ ಉಪಾರಮತ್।।
ತಕ್ಷಣವೇ ನಾನು ಮಹಾರಣದಲ್ಲಿ ಅವರನ್ನು ವಧಿಸಲು ಶಬ್ಧಸಾಹ ಅಸ್ತ್ರವನ್ನು (ಶಬ್ಧವನ್ನು ಹುಡುಕಿ ಕೊಲ್ಲುವ ಅಸ್ತ್ರ) ಪ್ರಯೋಗಿಸಲು ಅವರ ಶಬ್ಧವು ನಿಂತಿತು.
03023006a ಹತಾಸ್ತೇ ದಾನವಾಃ ಸರ್ವೇ ಯೈಃ ಸ ಶಬ್ಧ ಉದೀರಿತಃ।
03023006c ಶರೈರಾದಿತ್ಯಸಂಕಾಶೈರ್ಜ್ವಲಿತೈಃ ಶಬ್ಧಸಾಧನೈಃ।।
ಶಬ್ಧಸಾಧನಗಳಿಂದ ಹೊರಟ ಆದಿತ್ಯನಂತೆ ಉರಿಯುತ್ತಿರುವ ಶರಗಳಿಂದ ಆ ಎಲ್ಲ ದಾನವರೂ ಹತರಾಗಿ ಅವರ ಶಬ್ಧವು ಕಡಿಮೆಯಾಯಿತು.
03023007a ತಸ್ಮಿನ್ನುಪರತೇ ಶಬ್ದೇ ಪುನರೇವಾನ್ಯತೋಽಭವತ್।
03023007c ಶಬ್ಧೋಽಪರೋ ಮಹಾರಾಜ ತತ್ರಾಪಿ ಪ್ರಾಹರಂ ಶರಾನ್।।
ಮಹಾರಾಜ! ಆ ಶಬ್ಧವು ಕಡಿಮೆಯಾಗಲು ಪುನಃ ಇನ್ನೊಂದು ಕಡೆಯಿಂದ ಹೊಸ ತುಮುಲವು ಪ್ರಾರಂಭವಾಯಿತು. ಆ ಕಡೆ ಕೂಡ ಬಾಣಗಳನ್ನು ಪ್ರಯೋಗಿಸಿದೆನು.
03023008a ಏವಂ ದಶ ದಿಶಃ ಸರ್ವಾಸ್ತಿರ್ಯಗೂರ್ಧ್ವಂ ಚ ಭಾರತ।
03023008c ನಾದಯಾಮಾಸುರಸುರಾಸ್ತೇ ಚಾಪಿ ನಿಹತಾ ಮಯಾ।।
ಭಾರತ! ಹೀಗೆ ಹತ್ತೂ ದಿಕ್ಕುಗಳಲ್ಲಿ ಮೇಲೆ ಮತ್ತು ಕೆಳಗೆ ಎಲ್ಲಕಡೆಯಿಂದ ಅಸುರರು ಕಿರುಚಲು ಅವರೆಲ್ಲರನ್ನೂ ನಾನು ಸಂಹರಿಸಿದೆನು.
03023009a ತತಃ ಪ್ರಾಗ್ಜ್ಯೋತಿಷಂ ಗತ್ವಾ ಪುನರೇವ ವ್ಯದೃಶ್ಯತ।
03023009c ಸೌಭಂ ಕಾಮಗಮಂ ವೀರ ಮೋಹಯನ್ಮಮ ಚಕ್ಷುಷೀ।।
ವೀರ! ಆಗ ಬೇಕಾದಲ್ಲಿ ಹೋಗಬಲ್ಲ ಸೌಭವು ಪ್ರಾಗ್ಜ್ಯೋತಿಷಕ್ಕೆ ಹೋಗಿ ಪುನಃ ಕಾಣಿಸಿಕೊಂಡಿತು ಮತ್ತು ನನ್ನ ಕಣ್ಣುಗಳನ್ನು ಕುರುಡುಮಾಡಿತು.
03023010a ತತೋ ಲೋಕಾಂತಕರಣೋ ದಾನವೋ ವಾನರಾಕೃತಿಃ।
03023010c ಶಿಲಾವರ್ಷೇಣ ಸಹಸಾ ಮಹತಾ ಮಾಂ ಸಮಾವೃಣೋತ್।।
ನಂತರ ತಕ್ಷಣವೇ ಲೋಕಾಂತಕನಂತೆ ತೋರುತ್ತಿದ್ದ ದಾನವನು ವಾನರ ವೇಶದಲ್ಲಿ ಬಂದು ನನ್ನ ಮೇಲೆ ದೊಡ್ಡ ದೊಡ್ಡ ಕಲ್ಲುಗಳ ಮಳೆಯನ್ನೇ ಸುರಿಸಿದನು.
03023011a ಸೋಽಹಂ ಪರ್ವತವರ್ಷೇಣ ವಧ್ಯಮಾನಃ ಸಮಂತತಃ।
03023011c ವಲ್ಮೀಕ ಇವ ರಾಜೇಂದ್ರ ಪರ್ವತೋಪಚಿತೋಽಭವಂ।।
ನಾನು ಎಲ್ಲ ಕಡೆಗಳಿಂದಲೂ ಪರ್ವತಗಳ ಮಳೆಯ ಹೊಡೆತಕ್ಕೆ ಸಿಕ್ಕೆ ಮತ್ತು ರಾಜೇಂದ್ರ! ನಾನು ಪರ್ವತಗಳಿಂದ ಮುಚ್ಚಲ್ಪಟ್ಟ ಒಂದು ಹುತ್ತದಂತೆ ಆದೆ.
03023012a ತತೋಽಹಂ ಪರ್ವತಚಿತಃ ಸಹಯಃ ಸಹಸಾರಥಿಃ।
03023012c ಅಪ್ರಖ್ಯಾತಿಮಿಯಾಂ ರಾಜನ್ಸಧ್ವಜಃ ಪರ್ವತೈಶ್ಚಿತಃ।।
ರಾಜನ್! ಸಾರಥಿಯೊಂದಿಗೆ ಮತ್ತು ಧ್ವಜದೊಂದಿಗೆ ನಾನು ಪರ್ವತಗಳ ಕೆಳಗಿ ಹುಗಿಯಲ್ಪಟ್ಟು ಸಂಪೂರ್ಣವಾಗಿ ಕಾಣದೇ ಹೋದೆ.
03023013a ತತೋ ವೃಷ್ಣಿಪ್ರವೀರಾ ಯೇ ಮಮಾಸನ್ಸೈನಿಕಾಸ್ತದಾ।
03023013c ತೇ ಭಯಾರ್ತಾ ದಿಶಃ ಸರ್ವಾಃ ಸಹಸಾ ವಿಪ್ರದುದ್ರುವುಃ।।
ನನ್ನೊಡನಿದ್ದ ವೃಷ್ಣಿ ಪ್ರವೀರ ಸೈನಿಕರೆಲ್ಲಾ ಆಗ ಭಯಾರ್ತರಾಗಿ ಎಲ್ಲ ದಿಕ್ಕುಗಳಲ್ಲಿ ಅವಸರದಿಂದ ಓಡಿಹೋಗ ತೊಡಗಿದರು.
03023014a ತತೋ ಹಾಹಾಕೃತಂ ಸರ್ವಮಭೂತ್ಕಿಲ ವಿಶಾಂ ಪತೇ।
03023014c ದ್ಯೌಶ್ಚ ಭೂಮಿಶ್ಚ ಖಂ ಚೈವಾದೃಶ್ಯಮಾನೇ ತಥಾ ಮಯಿ।।
ವಿಶಾಂಪತೇ! ನಾನು ಹಾಗೆ ಕಾಣದಂತಾಗಲು ಇಡೀ ಆಕಾಶ, ಭೂಮಿ, ದೇವಲೋಕ ಸರ್ವವೂ ಹಾಹಾಕಾರಮಾಡಿದವು.
03023015a ತತೋ ವಿಷಣ್ಣಮನಸೋ ಮಮ ರಾಜನ್ಸುಹೃಜ್ಜನಾಃ।
03023015c ರುರುದುಶ್ಚುಕ್ರುಶುಶ್ಚೈವ ದುಃಖಶೋಕಸಮನ್ವಿತಾಃ।।
ರಾಜನ್! ನನ್ನ ಸ್ನೇಹಿತರು ವಿಷಣ್ಣ ಮನಸ್ಕರಾಗಿ ದುಃಖಶೋಕಸಮನ್ವಿತರಾಗಿ ರೋದಿಸಿದರು ಮತ್ತು ಅತ್ತರು.
03023016a ದ್ವಿಷತಾಂ ಚ ಪ್ರಹರ್ಷೋಽಭೂದಾರ್ತಿಶ್ಚಾದ್ವಿಷತಾಮಪಿ।
03023016c ಏವಂ ವಿಜಿತವಾನ್ವೀರ ಪಶ್ಚಾದಶ್ರೌಷಮಚ್ಯುತ।।
ವೀರ! ಅಚ್ಯುತ! ವಿಜಯದ ನಂತರ ನಾನು ಕೇಳಿದೆ - ಆಗ ವೈರಿಗಳು ಹರ್ಷಿತರಾದರು ಮತ್ತು ಸ್ನೇಹಿತರು ದುಃಖಿತರಾದರು.
03023017a ತತೋಽಹಮಸ್ತ್ರಂ ದಯಿತಂ ಸರ್ವಪಾಷಾಣಭೇದನಂ।
03023017c ವಜ್ರಮುದ್ಯಮ್ಯ ತಾನ್ಸರ್ವಾನ್ಪರ್ವತಾನ್ಸಮಶಾತಯಂ।।
ಆಗ ನಾನು ಸರ್ವ ಪಾಷಾಣಗಳನ್ನೂ ಭೇದಿಸಬಲ್ಲ ವಜ್ರಾಸ್ತ್ರವನ್ನು ತೆಗೆದುಕೊಂಡು ಆ ಎಲ್ಲ ಪರ್ವತಗಳನ್ನೂ ಪುಡಿಪುಡಿಮಾಡಿದೆನು.
03023018a ತತಃ ಪರ್ವತಭಾರಾರ್ತಾ ಮಂದಪ್ರಾಣವಿಚೇಷ್ಟಿತಾಃ।
03023018c ಹಯಾ ಮಮ ಮಹಾರಾಜ ವೇಪಮಾನಾ ಇವಾಭವನ್।।
ಮಹಾರಾಜ! ಪರ್ವತಗಳ ಭಾರದಿಂದ ಕಷ್ಟಪಟ್ಟ ನನ್ನ ಕುದುರೆಗಳು ತಮ್ಮ ಉಸಿರು ಮತ್ತು ಚಲನೆಗಳನ್ನು ಕಳೆದುಕೊಂಡು ನಡುಗುತ್ತಿದ್ದವು.
03023019a ಮೇಘಜಾಲಮಿವಾಕಾಶೇ ವಿದಾರ್ಯಾಭ್ಯುದಿತಂ ರವಿಂ।
03023019c ದೃಷ್ಟ್ವಾ ಮಾಂ ಬಾಂಧವಾಃ ಸರ್ವೇ ಹರ್ಷಮಾಹಾರಯನ್ಪುನಃ।।
ಮೇಘಜಾಲಮುಕ್ತ ಆಕಾಶದಿಂದ ಮೇಲೇಳುವ ರವಿಯಂತೆ ಮೇಲೆದ್ದ ನನ್ನನ್ನು ನೋಡಿದ ಸರ್ವ ಬಾಂಧವರೂ ಪುನಃ ಹರ್ಷಿತರಾದರು.
03023020a ತತೋ ಮಾಮಬ್ರವೀತ್ಸೂತಃ ಪ್ರಾಂಜಲಿಃ ಪ್ರಣತೋ ನೃಪ।
03023020c ಸಾಧು ಸಂಪಶ್ಯ ವಾರ್ಷ್ಣೇಯ ಶಾಲ್ವಂ ಸೌಭಪತಿಂ ಸ್ಥಿತಂ।।
ನೃಪ! ಆಗ ಅಂಜಲೀಬದ್ಧನಾಗಿ ನಮಸ್ಕರಿಸಿ ಸೂತನು ನನಗೆ ಹೇಳಿದನು: “ವಾರ್ಷ್ಣೇಯ! ನಿಂತಿರುವ ಸೌಭಪತಿಯನ್ನು ಚೆನ್ನಾಗಿ ನೋಡು!
03023021a ಅಲಂ ಕೃಷ್ಣಾವಮನ್ಯೈನಂ ಸಾಧು ಯತ್ನಂ ಸಮಾಚರ।
03023021c ಮಾರ್ದವಂ ಸಖಿತಾಂ ಚೈವ ಶಾಲ್ವಾದದ್ಯ ವ್ಯಪಾಹರ।।
ಕೃಷ್ಣ! ಅಪಮಾನಗೊಳಿಸುವ ಇದನ್ನು ಸಾಕುಮಾಡು. ಇನ್ನೂ ಒಳ್ಳೆಯ ಪ್ರಯತ್ನವನ್ನು ಮಾಡು. ಶಾಲ್ವನ ಮೇಲಿದ್ದ ನಿನ್ನ ಸಖ್ಯಭಾವವನ್ನು ಅಥವಾ ಮೃದುತ್ವವನ್ನು ಹಿಂದೆ ತೆಗೆದುಕೋ!
03023022a ಜಹಿ ಶಾಲ್ವಂ ಮಹಾಬಾಹೋ ಮೈನಂ ಜೀವಯ ಕೇಶವ।
03023022c ಸರ್ವೈಃ ಪರಾಕ್ರಮೈರ್ವೀರ ವಧ್ಯಃ ಶತ್ರುರಮಿತ್ರಹನ್।।
ಮಹಾಬಾಹು ಕೇಶವ! ಶಾಲ್ವನನ್ನು ಜೀವಂತ ಬಿಡಬೇಡ! ವೀರ! ಅಮಿತ್ರಹನ್! ನಿನ್ನ ಎಲ್ಲ ಪರಾಕ್ರಮವನ್ನೂ ಬಳಸಿ ಈ ಶತ್ರುವನ್ನು ವಧಿಸು!
03023023a ನ ಶತ್ರುರವಮಂತವ್ಯೋ ದುರ್ಬಲೋಽಪಿ ಬಲೀಯಸಾ।
03023023c ಯೋಽಪಿ ಸ್ಯಾತ್ಪೀಠಗಃ ಕಸ್ಚಿತ್ಕಿಂ ಪುನಃ ಸಮರೇ ಸ್ಥಿತಃ।।
ಶತ್ರುವು ಎಷ್ಟೇ ದುರ್ಬಲನಾಗಿದ್ದರೂ, ಕಾಲಕೆಳಗಿನವನಾಗಿದ್ದರೂ, ಸಮರದಲ್ಲಿ ಎದುರಾದಾಗ ಬಲಶಾಲಿಯು ಅಪಮಾನಿಸ ಕೂಡದು.
03023024a ಸ ತ್ವಂ ಪುರುಷಶಾರ್ದೂಲ ಸರ್ವಯತ್ನೈರಿಮಂ ಪ್ರಭೋ।
03023024c ಜಹಿ ವೃಷ್ಣಿಕುಲಶ್ರೇಷ್ಠ ಮಾ ತ್ವಾಂ ಕಾಲೋಽತ್ಯಗಾತ್ಪುನಃ।।
ಪ್ರಭೋ! ಪುರುಷಶಾರ್ದೂಲ! ಸರ್ವ ಯತ್ನಗಳಿಂದ ನೀನು ಈ ಶತ್ರುವನ್ನು ಕೊಲ್ಲಬೇಕು. ವೃಷ್ಣಿಕುಲಶ್ರೇಷ್ಠ! ಪುನಃ ಸುಮ್ಮನೆ ಕಾಲವನ್ನು ಕಳೆಯಬೇಡ.
03023025a ನೈಷ ಮಾರ್ದವಸಾಧ್ಯೋ ವೈ ಮತೋ ನಾಪಿ ಸಖಾ ತವ।
03023025c ಯೇನ ತ್ವಂ ಯೋಧಿತೋ ವೀರ ದ್ವಾರಕಾ ಚಾವಮರ್ದಿತಾ।।
ಮೃದುತ್ವದಿಂದ ಅವನನ್ನು ಗೆಲ್ಲಲು ಸಾಧ್ಯವಿಲ್ಲ. ವೀರ! ದ್ವಾರಕೆಯನ್ನು ಅಸ್ತವ್ಯಸ್ತಗೊಳಿಸಿದ ನಿನ್ನೊಡನೆ ಯುದ್ಧ ಮಾಡುತ್ತಿರುವ ಅವನು ನಿನ್ನ ಸಖನಲ್ಲ ಎಂದು ನನ್ನ ಅಭಿಪ್ರಾಯ!”
03023026a ಏವಮಾದಿ ತು ಕೌಂತೇಯ ಶ್ರುತ್ವಾಹಂ ಸಾರಥೇರ್ವಚಃ।
03023026c ತತ್ತ್ವಮೇತದಿತಿ ಜ್ಞಾತ್ವಾ ಯುದ್ಧೇ ಮತಿಮಧಾರಯಂ।।
03023027a ವಧಾಯ ಶಾಲ್ವರಾಜಸ್ಯ ಸೌಭಸ್ಯ ಚ ನಿಪಾತನೇ।
03023027c ದಾರುಕಂ ಚಾಬ್ರುವಂ ವೀರ ಮುಹೂರ್ತಂ ಸ್ಥೀಯತಾಮಿತಿ।।
ಕೌಂತೇಯ! ಈ ರೀತಿಯ ಮಾತುಗಳನ್ನು ಸಾರಥಿಯಿಂದ ಕೇಳಿದ ನಾನು ಅವನು ಹೇಳಿದುದು ಸತ್ಯ ಎಂದು ತಿಳಿದು ಯುದ್ಧದಲ್ಲಿ ಶಾಲ್ವರಾಜನ ವಧೆ ಮತ್ತು ಸೌಭವನ್ನು ಉರುಳಿಸುವ ಕುರಿತು ಮನಸ್ಸನ್ನಿಟ್ಟೆನು. ವೀರ! “ಒಂದು ಕ್ಷಣ ನಿಲ್ಲು!” ಎಂದು ದಾರುಕನಿಗೆ ಹೇಳಿದೆನು.
03023028a ತತೋಽಪ್ರತಿಹತಂ ದಿವ್ಯಮಭೇದ್ಯಮತಿವೀರ್ಯವತ್।
03023028c ಆಗ್ನೇಯಮಸ್ತ್ರಂ ದಯಿತಂ ಸರ್ವಸಾಹಂ ಮಹಾಪ್ರಭಂ।।
03023029a ಯಕ್ಷಾಣಾಂ ರಾಕ್ಷಸಾನಾಂ ಚ ದಾನವಾನಾಂ ಚ ಸಂಯುಗೇ।
03023029c ರಾಜ್ಞಾಂ ಚ ಪ್ರತಿಲೋಮಾನಾಂ ಭಸ್ಮಾಂತಕರಣಂ ಮಹತ್।।
03023030a ಕ್ಷುರಾಂತಮಮಲಂ ಚಕ್ರಂ ಕಾಲಾಂತಕಯಮೋಪಮಂ।
03023030c ಅಭಿಮಂತ್ರ್ಯಾಹಮತುಲಂ ದ್ವಿಷತಾಂ ಚ ನಿಬರ್ಹಣಂ।।
ನಂತರ ನಾನು ಯಾರನ್ನೂ ಸಂಹರಿಸಬಲ್ಲ, ದಿವ್ಯ, ಅಭೇದ್ಯ, ಅತಿವೀರ್ಯವಂತ, ಮಹಾಪ್ರಭೆಯನ್ನುಳ್ಳ, ಸರ್ವಸಾಹ, ಯಕ್ಷ-ರಾಕ್ಷಸ-ದಾನವರನ್ನು, ಮತ್ತು ಅಧರ್ಮಿ ರಾಜರನ್ನು ಒಟ್ಟಿಗೇ ಭಸ್ಮಮಾಡಬಲ್ಲ, ತೀಕ್ಷ್ಣ ಕೊನೆಗಳನ್ನುಳ್ಳ, ಅಮಲ, ಕಾಲಾಂತಕ ಯಮನಂತಿದ್ದ, ಆಗ್ನೇಯಾಸ್ತ್ರ ಚಕ್ರವನ್ನು ಹಿಡಿದು, ಶತ್ರುಗಳನ್ನು ಸಂಹರಿಸಬಲ್ಲ, ಸರಿಸಾಟಿಯಿಲ್ಲದ ಅದನ್ನು ಅಭಿಮಂತ್ರಿಸಿದೆನು:
03023031a ಜಹಿ ಸೌಭಂ ಸ್ವವೀರ್ಯೇಣ ಯೇ ಚಾತ್ರ ರಿಪವೋ ಮಮ।
03023031c ಇತ್ಯುಕ್ತ್ವಾ ಭುಜವೀರ್ಯೇಣ ತಸ್ಮೈ ಪ್ರಾಹಿಣವಂ ರುಷಾ।।
“ನಿನ್ನ ವೀರತ್ವದಿಂದ ಸೌಭವನ್ನು ಮತ್ತು ಅದರಲ್ಲಿರುವ ನಾನಾ ಶತ್ರುಗಳನ್ನು ಕೊಲ್ಲು!” ಎಂದು ಹೇಳಿ ರೋಷಗೊಂಡು ನನ್ನ ಬಾಹುಬಲದಿಂದ ಅದನ್ನು ಪ್ರಯೋಗಿಸಿದೆನು.
03023032a ರೂಪಂ ಸುದರ್ಶನಸ್ಯಾಸೀದಾಕಾಶೇ ಪತತಸ್ತದಾ।
03023032c ದ್ವಿತೀಯಸ್ಯೇವ ಸೂರ್ಯಸ್ಯ ಯುಗಾಂತೇ ಪರಿವಿಷ್ಯತಃ।।
ಆಕಾಶದಲ್ಲಿ ಹಾರಿಹೋಗುತ್ತಿದ್ದ ಆ ಸುದರ್ಶನವು ಯುಗಾಂತದಲ್ಲಿ ಪ್ರಕಾಶಿತ ಎರಡನೇ ಸೂರ್ಯನೋ ಎನ್ನುವಂತೆ ತೋರುತ್ತಿತ್ತು.
03023033a ತತ್ಸಮಾಸಾದ್ಯ ನಗರಂ ಸೌಭಂ ವ್ಯಪಗತತ್ವಿಷಂ।
03023033c ಮಧ್ಯೇನ ಪಾಟಯಾಮಾಸ ಕ್ರಕಚೋ ದಾರ್ವಿವೋಚ್ಚ್ರಿತಂ।।
ಅದು ಸತ್ವವನ್ನು ಕಳೆದುಕೊಂಡ ಸೌಭನಗರವನ್ನು ತಲುಪಿ ಗರಗಸದಂತೆ ಅದನ್ನು ಮಧ್ಯದಲ್ಲಿ ಎರಡನ್ನಾಗಿ ಕತ್ತರಿಸಿತು.
03023034a ದ್ವಿಧಾ ಕೃತಂ ತತಃ ಸೌಭಂ ಸುದರ್ಶನಬಲಾದ್ಧತಂ।
03023034c ಮಹೇಶ್ವರಶರೋದ್ಧೂತಂ ಪಪಾತ ತ್ರಿಪುರಂ ಯಥಾ।।
ಸುದರ್ಶನದ ಬಲಕ್ಕೆ ಸಿಲುಕಿ ಎರಡಾಗಿ ತುಂಡಾದ ಆ ಸೌಭವು ಮಹೇಶ್ವರನ ಶರದಿಂದ ಒಡೆದು ಕೆಳಗೆ ಬಿದ್ದ ತ್ರಿಪುರ1ದಂತೆ ಕಂಡಿತು.
03023035a ತಸ್ಮಿನ್ನಿಪತಿತೇ ಸೌಭೇ ಚಕ್ರಮಾಗಾತ್ಕರಂ ಮಮ।
03023035c ಪುನಶ್ಚೋದ್ಧೂಯ ವೇಗೇನ ಶಾಲ್ವಾಯೇತ್ಯಹಮಬ್ರುವಂ।।
ಸೌಭವು ಕೆಳಗುರುಳಲು ಚಕ್ರವು ನನ್ನ ಕೈಗೆ ಬಂದು ಸೇರಿತು. ಪುನಃ ಅದನ್ನು ಪ್ರಯೋಗಿಸುತ್ತಾ “ವೇಗದಿಂದ ಶಾಲ್ವನನ್ನು ಕೊಲ್ಲು!” ಎಂದು ಹೇಳಿದೆನು.
03023036a ತತಃ ಶಾಲ್ವಂ ಗದಾಂ ಗುರ್ವೀಮಾವಿಧ್ಯಂತಂ ಮಹಾಹವೇ।
03023036c ದ್ವಿಧಾ ಚಕಾರ ಸಹಸಾ ಪ್ರಜಜ್ವಾಲ ಚ ತೇಜಸಾ।।
ಆ ಮಹಾಯುದ್ಧದಲ್ಲಿ ಶಾಲ್ವನು ಭಾರೀ ಗದೆಯನ್ನು ಪ್ರಹಾರಿಸಲು ಮುಂದೆಬರುತ್ತಿರುವಾಗ ಅದು ತಕ್ಷಣವೇ ಅವನನ್ನು ಎರಡಾಗಿ ಕತ್ತರಿಸಿ ತೇಜಸ್ಸಿನಿಂದ ಬೆಳಗಿತು.
03023037a ತಸ್ಮಿನ್ನಿಪತಿತೇ ವೀರೇ ದಾನವಾಸ್ತ್ರಸ್ತಚೇತಸಃ।
03023037c ಹಾಹಾಭೂತಾ ದಿಶೋ ಜಗ್ಮುರರ್ದಿತಾ ಮಮ ಸಾಯಕೈಃ।।
ಆ ವೀರನು ಕೆಳಗೆ ಬೀಳಲು ವೀರ ದಾನವರು ಅಸ್ತ್ರದಿಂದ ತತ್ತರಿಸಿ, ನನ್ನ ಬಾಣಗಳಿಂದ ಪೀಡಿತರಾಗಿ ಹಾಹಾಕಾರ ಮಾಡುತ್ತಾ ದಿಕ್ಕು ದಿಕ್ಕಿಗೆ ಚದುರಿದರು.
03023038a ತತೋಽಹಂ ಸಮವಸ್ಥಾಪ್ಯ ರಥಂ ಸೌಭಸಮೀಪತಃ।
03023038c ಶಂಖಂ ಪ್ರಧ್ಮಾಪ್ಯ ಹರ್ಷೇಣ ಸುಹೃದಃ ಪರ್ಯಹರ್ಷಯಂ।।
ಸೌಭದ ಬಳಿಯಲ್ಲಿ ನನ್ನ ರಥವನ್ನು ನಿಲ್ಲಿಸಿ, ಸಂತೋಷದಿಂದ ಶಂಖವನ್ನು ಊದಿ ನನ್ನ ಸ್ನೇಹಿತರಿಗೆ ಹರ್ಷವನ್ನುಂಟುಮಾಡಿದೆನು.
03023039a ತನ್ಮೇರುಶಿಖರಾಕಾರಂ ವಿಧ್ವಸ್ತಾಟ್ಟಾಲಗೋಪುರಂ।
03023039c ದಹ್ಯಮಾನಮಭಿಪ್ರೇಕ್ಷ್ಯ ಸ್ತ್ರಿಯಸ್ತಾಃ ಸಂಪ್ರದುದ್ರುವುಃ।।
ಮೇರುಶಿಖರದ ಆಕಾರದಲ್ಲಿದ್ದ ಮಹಾದ್ವಾರಗಳು ಮತ್ತು ಗೋಪುರಗಳಿಂದ ಕೂಡಿದ್ದ ಅದು ಉರಿಯುತ್ತಿರುವುದನ್ನು ನೋಡಿ ಸ್ತ್ರೀಯರು ಓಡಿ ಹೋದರು.
03023040a ಏವಂ ನಿಹತ್ಯ ಸಮರೇ ಶಾಲ್ವಂ ಸೌಭಂ ನಿಪಾತ್ಯ ಚ।
03023040c ಆನರ್ತಾನ್ಪುನರಾಗಮ್ಯ ಸುಹೃದಾಂ ಪ್ರೀತಿಮಾವಹಂ।।
ಈ ರೀತಿ ಸಮರದಲ್ಲಿ ಶಾಲ್ವನನ್ನು ಕೊಂದು ಸೌಭವನ್ನು ಕೆಳಗುರುಳಿಸಿ, ಆನರ್ತರ ಪುರಕ್ಕೆ ಹಿಂದುರಿಗಿ ಸುಹೃದಯರಿಗೆ ಸಂತೋಷವನ್ನು ತಂದೆನು.
03023041a ಏತಸ್ಮಾತ್ಕಾರಣಾದ್ರಾಜನ್ನಾಗಮಂ ನಾಗಸಾಹ್ವಯಂ।
03023041c ಯದ್ಯಗಾಂ ಪರವೀರಘ್ನ ನ ಹಿ ಜೀವೇತ್ಸುಯೋಧನಃ।।
ರಾಜನ್! ಪರವೀರಘ್ನ! ಈ ಕಾರಣದಿಂದಲೇ ನಾನು ನಾಗಸಾಹ್ವಯಕ್ಕೆ ಬರಲಿಕ್ಕಾಗಲಿಲ್ಲ. ಬಂದಿದ್ದರೆ ಸುಯೋಧನನು ಜೀವಿತವಿರುತ್ತಿರಲಿಲ್ಲ!””
03023042 ವೈಶಂಪಾಯನ ಉವಾಚ।
03023042a ಏವಮುಕ್ತ್ವಾ ಮಹಾಬಾಹುಃ ಕೌರವಂ ಪುರುಷೋತ್ತಮಃ।
03023042c ಆಮಂತ್ರ್ಯ ಪ್ರಯಯೌ ಧೀಮಾನ್ಪಾಂಡವಾನ್ಮಧುಸೂದನಃ।।
ವೈಶಂಪಾಯನನು ಹೇಳಿದನು: “ಕೌರವನಿಗೆ ಈ ರೀತಿ ಹೇಳಿದ ಮಹಾಬಾಹು ಪುರುಷೋತ್ತಮ ಮಧುಸೂದನನು ಧೀಮಂತ ಪಾಂಡವರಿಂದ ಬೀಳ್ಕೊಂಡು ಹೊರಟನು.
03023043a ಅಭಿವಾದ್ಯ ಮಹಾಬಾಹುರ್ಧರ್ಮರಾಜಂ ಯುಧಿಷ್ಠಿರಂ।
03023043c ರಾಜ್ಞಾ ಮೂರ್ಧನ್ಯುಪಾಘ್ರಾತೋ ಭೀಮೇನ ಚ ಮಹಾಭುಜಃ।।
03023044a ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕಾಂಚನಂ।
03023044c ಆರುರೋಹ ರಥಂ ಕೃಷ್ಣಃ ಪಾಂಡವೈರಭಿಪೂಜಿತಃ।।
ಆ ಮಹಾಬಾಹುವು ಧರ್ಮರಾಜ ಯುಧಿಷ್ಠಿರನನ್ನು ಅಭಿವಂದಿಸಿದನು. ರಾಜ ಮತ್ತು ಮಹಾಭುಜ ಭೀಮರು ಅವನ ನೆತ್ತಿಯನ್ನು ಆಘ್ರಾಣಿಸಿದರು. ಪಾಂಡವರಿಂದ ಅಭಿಪೂಜಿತ ಕೃಷ್ಣನು ಸುಭದ್ರೆ ಮತ್ತು ಅಭಿಮನ್ಯುವನ್ನು ಕಾಂಚನರಥದಲ್ಲಿ ಕುಳ್ಳಿರಿಸಿ ರಥವನ್ನೇರಿದನು.
03023045a ಸೈನ್ಯಸುಗ್ರೀವಯುಕ್ತೇನ ರಥೇನಾದಿತ್ಯವರ್ಚಸಾ।
03023045c ದ್ವಾರಕಾಂ ಪ್ರಯಯೌ ಕೃಷ್ಣಃ ಸಮಾಶ್ವಾಸ್ಯ ಯುಧಿಷ್ಠಿರಂ।।
ಯುಧಿಷ್ಠಿರನನ್ನು ಸಮಾಧಾನ ಪಡಿಸಿ, ಆದಿತ್ಯವರ್ಚಸ ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ರಥದಲ್ಲಿ ಕೃಷ್ಣನು ದ್ವಾರಕೆಗೆ ತೆರಳಿದನು.
03023046a ತತಃ ಪ್ರಯಾತೇ ದಾಶಾರ್ಹೇ ಧೃಷ್ಟದ್ಯುಮ್ನೋಽಪಿ ಪಾರ್ಷತಃ।
03023046c ದ್ರೌಪದೇಯಾನುಪಾದಾಯ ಪ್ರಯಯೌ ಸ್ವಪುರಂ ತದಾ।।
ದಾಶಾರ್ಹನು ಹೋದ ನಂತರ ಪಾರ್ಷತ ಧೃಷ್ಟದ್ಯುಮ್ನನೂ ಕೂಡ ದ್ರೌಪದೇಯರನ್ನು ಕರೆದುಕೊಂಡು ತನ್ನ ನಗರಕ್ಕೆ ತೆರಳಿದನು.
03023047a ಧೃಷ್ಟಕೇತುಃ ಸ್ವಸಾರಂ ಚ ಸಮಾದಾಯಾಥ ಚೇದಿರಾಟ್।
03023047c ಜಗಾಮ ಪಾಂಡವಾನ್ದೃಷ್ಟ್ವಾ ರಮ್ಯಾಂ ಶುಕ್ತಿಮತೀಂ ಪುರೀಂ।।
ಚೇದಿರಾಜ ಧೃಷ್ಟಕೇತುವು ಪಾಂಡವರನ್ನು ಕಂಡು ತನ್ನ ತಂಗಿ2ಯನ್ನು ಜೊತೆಯಲ್ಲಿ ಕರೆದುಕೊಂಡು ರಮ್ಯ ಶಕ್ತಿಮತೀ ಪುರಕ್ಕೆ ತೆರಳಿದನು.
03023048a ಕೇಕಯಾಶ್ಚಾಪ್ಯನುಜ್ಞಾತಾಃ ಕೌಂತೇಯೇನಾಮಿತೌಜಸಾ।
03023048c ಆಮಂತ್ರ್ಯ ಪಾಂಡವಾನ್ ಸರ್ವಾನ್ ಪ್ರಯಯುಸ್ತೇಽಪಿ ಭಾರತ।।
ಭಾರತ! ಅಮಿತೌಜಸ ಕೌಂತೇಯರಿಂದ ಬೀಳ್ಕೊಂಡು ಕೇಕಯನೂ ಕೂಡ ಪಾಂಡವರೆಲ್ಲರನ್ನೂ ಆಮಂತ್ರಿಸಿ ಹೊರಟನು.
03023049a ಬ್ರಾಹ್ಮಣಾಶ್ಚ ವಿಶಶ್ಚೈವ ತಥಾ ವಿಷಯವಾಸಿನಃ।
03023049c ವಿಸೃಜ್ಯಮಾನಾಃ ಸುಭೃಶಂ ನ ತ್ಯಜಂತಿ ಸ್ಮ ಪಾಂಡವಾನ್।।
ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು ಮತ್ತು ಸಾಮಾನ್ಯ ಜನರು, ಒಂದೇ ಸಮನೆ ಹೋಗಿ ಎಂದು ಹೇಳಿದರೂ ಪಾಂಡವರನ್ನು ಬಿಟ್ಟು ಹೋಗಲು ನಿರಾಕರಿಸಿದರು.
03023050a ಸಮವಾಯಃ ಸ ರಾಜೇಂದ್ರ ಸುಮಹಾದ್ಭುತದರ್ಶನಃ।
03023050c ಆಸೀನ್ಮಹಾತ್ಮನಾಂ ತೇಷಾಂ ಕಾಮ್ಯಕೇ ಭರತರ್ಷಭ।।
ರಾಜೇಂದ್ರ! ಭರತರ್ಷಭ! ಆ ಗುಂಪು ಕಾಮ್ಯಕ ವನದಲ್ಲಿ ಆ ಮಹಾತ್ಮರ ಜೊತೆಗೇ ಇದ್ದುದು ಒಂದು ಮಹಾ ಅದ್ಭುತವಾಗಿ ಕಾಣುತ್ತಿತ್ತು.
03023051a ಯುಧಿಷ್ಠಿರಸ್ತು ವಿಪ್ರಾಂಸ್ತಾನನುಮಾನ್ಯ ಮಹಾಮನಾಃ।
03023051c ಶಶಾಸ ಪುರುಷಾನ್ಕಾಲೇ ರಥಾನ್ಯೋಜಯತೇತಿ ಹ।।
ಆ ಮಹಾಮನ ವಿಪ್ರರನ್ನು ಗೌರವಿಸಿ ಯುಧಿಷ್ಠಿರನು ಸಕಾಲದಲ್ಲಿ ರಥಗಳನ್ನು ಕಟ್ಟಲು ಸೇವಕರಿಗೆ ಅಪ್ಪಣೆಯನ್ನಿತ್ತನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ತ್ರಯೋವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತ್ಮೂರನೆಯ ಅಧ್ಯಾಯವು.