ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅರಣ್ಯಕ ಪರ್ವ
ಅಧ್ಯಾಯ 4
ಸಾರ
ಸೂರ್ಯನು ಪ್ರತ್ಯಕ್ಷನಾಗಿ ಯುಧಿಷ್ಠಿರನಿಗೆ ಅಕ್ಷಯಪಾತ್ರೆಯನ್ನು ದಯಪಾಲಿಸಿದುದು (1-3). ಅದರಿಂದ ಯುಧಿಷ್ಠಿರನು ತನ್ನನ್ನು ಅನುಸರಿಸಿಬಂದ ಬ್ರಾಹ್ಮಣರನ್ನು ಪೋಷಿಸಿದ್ದುದು (4-8). ಪಾಂಡವರ ಕಾಮ್ಯಕವನಪ್ರವೇಶ (9-10).
03004001 1ವೈಶಂಪಾಯನ ಉವಾಚ।
03004001a ತತೋ ದಿವಾಕರಃ ಪ್ರೀತೋ ದರ್ಶಯಾಮಾಸ ಪಾಂಡವಂ।
03004001c ದೀಪ್ಯಮಾನಃ ಸ್ವವಪುಷಾ ಜ್ವಲನ್ನಿವ ಹುತಾಶನಃ।।
ವೈಶಂಪಾಯನನು ಹೇಳಿದನು: “ಆಗ ದಿವಾಕರನು ಪ್ರೀತನಾಗಿ ಪಾಂಡವನಿಗೆ ಹುತಾಶನನಂತೆ ಉರಿದು ಬೆಳಗುತ್ತಿರುವ ತನ್ನ ಸ್ವರೂಪವನ್ನು ಪಾಂಡವನಿಗೆ ತೋರಿಸಿದನು.
03004002a ಯತ್ತೇಽಭಿಲಷಿತಂ ರಾಜನ್ಸರ್ವಮೇತದವಾಪ್ಸ್ಯಸಿ।
03004002c ಅಹಮನ್ನಂ ಪ್ರದಾಸ್ಯಾಮಿ ಸಪ್ತ ಪಂಚ ಚ ತೇ ಸಮಾಃ।।
03004003a ಫಲಮೂಲಾಮಿಷಂ ಶಾಕಂ ಸಂಸ್ಕೃತಂ ಯನ್ಮಹಾನಸೇ।
03004003c ಚತುರ್ವಿಧಂ ತದನ್ನಾದ್ಯಮಕ್ಷಯ್ಯಂ ತೇ ಭವಿಷ್ಯತಿ।
03004003e ಧನಂ ಚ ವಿವಿಧಂ ತುಭ್ಯಮಿತ್ಯುಕ್ತ್ವಾಂತರಧೀಯತ2।।
“ರಾಜನ್! ನೀನು ಬಯಸಿದುದೆಲ್ಲವನ್ನೂ ಪಡೆಯುತ್ತೀಯೆ. ಹನ್ನೆರಡು ವರ್ಷಗಳು ನಾನು ನಿನಗೆ ಆಹಾರವನ್ನು ನೀಡುತ್ತೇನೆ. ನಿನ್ನ ಅಡುಗೆಮನೆಯಲ್ಲಿ ಫಲ, ಗಡ್ಡೆಗೆಣಸುಗಳು, ತರಕಾರಿ ಮತ್ತು ಪದಾರ್ಥ ಈ ನಾಲ್ಕೂ3 ತರಹದ ಅನ್ನವೂ ಅಕ್ಷಯವಾಗುತ್ತವೆ. ವಿವಿಧ ಸಂಪತ್ತೂ ನಿನ್ನದಾಗುತ್ತವೆ!” ಎಂದು ಹೇಳಿ ಅಂತರ್ಧಾನನಾದನು.
03004004a ಲಬ್ಧ್ವಾ ವರಂ ತು ಕೌಂತೇಯೋ ಜಲಾದುತ್ತೀರ್ಯ ಧರ್ಮವಿತ್।
03004004c ಜಗ್ರಾಹ ಪಾದೌ ಧೌಮ್ಯಸ್ಯ ಭ್ರಾತೄಂಶ್ಚಾಸ್ವಜತಾಚ್ಯುತಃ।।
ಧರ್ಮವಿದು ಅಚ್ಯುತ ಕೌಂತೇಯನು ಆ ವರವನ್ನು ಪಡೆದು ನೀರಿನಿಂದ ಮೇಲೆದ್ದು ಧೌಮ್ಯನ ಪಾದಗಳನ್ನು ಹಿಡಿದನು ಮತ್ತು ಸಹೋದರರನ್ನು ಬಿಗಿದಪ್ಪಿದನು.
03004005a ದ್ರೌಪದ್ಯಾ ಸಹ ಸಂಗಮ್ಯ ಪಶ್ಯಮಾನೋಽಭ್ಯಯಾತ್ಪ್ರಭುಃ।
03004005c ಮಹಾನಸೇ ತದಾನ್ನಂ ತು ಸಾಧಯಾಮಾಸ ಪಾಂಡವಃ।।
ದ್ರೌಪದಿಯೊಡನೆ ಅವಳು ನೋಡುತ್ತಿದ್ದಂತೆಯೇ ಪ್ರಭು ಪಾಂಡವನು ಅಡುಗೆಮನೆಯಲ್ಲಿ ಅಡುಗೆಯನ್ನು ತಯಾರಿಸಿದನು.
03004006a ಸಂಸ್ಕೃತಂ ಪ್ರಸವಂ ಯಾತಿ ವನ್ಯಮನ್ನಂ ಚತುರ್ವಿಧಂ।
03004006c ಅಕ್ಷಯ್ಯಂ ವರ್ಧತೇ ಚಾನ್ನಂ ತೇನ ಭೋಜಯತೇ ದ್ವಿಜಾನ್।।
ವನಪದಾರ್ಥಗಳಿಂದ ತಯಾರಾದ ನಾಲ್ಕೂ ವಿಧದ ಅಡುಗೆಯು ಅಕ್ಷಯವಾಯಿತು ಮತ್ತು ಆ ಆಹಾರದಿಂದ ದ್ವಿಜರಿಗೆಲ್ಲಾ ಭೋಜನವನ್ನಿತ್ತನು.
03004007a ಭುಕ್ತವತ್ಸು ಚ ವಿಪ್ರೇಷು ಭೋಜಯಿತ್ವಾನುಜಾನಪಿ।
03004007c ಶೇಷಂ ವಿಘಸಸಂಜ್ಞಂ ತು ಪಶ್ಚಾದ್ಭುಂಕ್ತೇ ಯುಧಿಷ್ಠಿರಃ।
03004007e ಯುಧಿಷ್ಠಿರಂ ಭೋಜಯಿತ್ವಾ ಶೇಷಮಶ್ನಾತಿ ಪಾರ್ಷತೀ4।।
ವಿಪ್ರರಿಗೆ ಭೋಜನವನ್ನಿತ್ತು ತನ್ನ ಅನುಜರಿಗೂ ಉಣ್ಣಿಸಿ ನಂತರ ಉಳಿದ ವಿಘಸವನ್ನು ಯುಧಿಷ್ಠಿರನು ಸೇವಿಸಿದನು. ಯುಧಿಷ್ಠಿರನಿಗೆ ನೀಡಿ ಉಳಿದುದನ್ನು ಪಾರ್ಷತಿಯು ಉಂಡಳು.
03004008a ಏವಂ ದಿವಾಕರಾತ್ಪ್ರಾಪ್ಯ ದಿವಾಕರಸಮದ್ಯುತಿಃ।
03004008c ಕಾಮಾನ್ಮನೋಽಭಿಲಷಿತಾನ್ಬ್ರಾಹ್ಮಣೇಭ್ಯೋ ದದೌ ಪ್ರಭುಃ।।
ಈ ರೀತಿ ದಿವಾಕರಸಮದ್ಯುತಿ ಪ್ರಭುವು ದಿವಾಕರನಿಂದ ಮನೋಭಿಲಾಷೆ ಕಾಮಗಳನ್ನು ಪಡೆದು ಬ್ರಾಹ್ಮಣರಿಗೆ ನೀಡಿದನು.
03004009a ಪುರೋಹಿತಪುರೋಗಾಶ್ಚ ತಿಥಿನಕ್ಷತ್ರಪರ್ವಸು।
03004009c ಯಜ್ಞಿಯಾರ್ಥಾಃ ಪ್ರವರ್ತಂತೇ ವಿಧಿಮಂತ್ರಪ್ರಮಾಣತಃ।।
ಪುರೋಹಿತನ ನೇತೃತ್ವದಲ್ಲಿ ತಿಥಿ, ನಕ್ಷತ್ರ ಪರ್ವಗಳಲ್ಲಿ ವಿಧಿಮಂತ್ರಪ್ರಮಾಣದಂತೆ ಅವರು ಯಜ್ಞಾರ್ಥಿಗಳಾದರು.
03004010a ತತಃ ಕೃತಸ್ವಸ್ತ್ಯಯನಾ ಧೌಮ್ಯೇನ ಸಹ ಪಾಂಡವಾಃ।
03004010c ದ್ವಿಜಸಂಘೈಃ ಪರಿವೃತಾಃ ಪ್ರಯಯುಃ ಕಾಮ್ಯಕಂ ವನಂ।।
ಅನಂತರ ದ್ವಿಜರಿಂದ ಪರಿವೃತರಾಗಿ, ಧೌಮ್ಯನೊಂದಿಗೆ ಪಾಂಡವರು ಮಂಗಳಕರ ಪ್ರಯಾಣಮಾಡಿ ಕಾಮ್ಯಕವವನ್ನು ತಲುಪಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ಕಾಮ್ಯಕವನಪ್ರವೇಶೇ ಚತುರ್ಥೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ಕಾಮ್ಯಕವನಪ್ರವೇಶ ಎನ್ನುವ ನಾಲ್ಕನೆಯ ಅಧ್ಯಾಯವು.
-
ಗೋರಖಪುರಸಂಪುಟದಲ್ಲಿ ಯುಧಿಷ್ಠಿರನು ಸೂರ್ಯನನ್ನು ಪ್ರಾರ್ಥಿಸಿದ ೩೪ ಶ್ಲೋಕಗಳನ್ನು ಪುಣೆಯ ಸಂಪುಟದಲ್ಲಿ ತೆಗೆದುಹಾಕಿದ್ದಾರೆ. ಈ ಶ್ಲೋಕಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎
-
ಕುಂಭಕೋಣ ಮತ್ತು ನೀಲಕಂಠೀಯ ಸಂಪುಟಗಳಲ್ಲಿ ಈ ಶ್ಲೊಕಗಳ ಮಧ್ಯೆ ಸೂರ್ಯನು ಅಕ್ಷಯ ಪಾತ್ರೆಯನ್ನು ಕೊಡುವುದನ್ನು ಸೂಚಿಸುವ ಒಂದು ಶ್ಲೋಕವಿದೆ - ಗೃಹೀಷ್ವ ಪಿಠರಂ ತಾಮ್ರಂ ಮಯಾ ದತ್ತ ನರಾಧಿಪ! ಯಾವದ್ ವರ್ತ್ಸ್ಯತಿ ಪಾಂಚಾಲೀ ಪಾತ್ರೇಣಾನೇನ ಸುವ್ರತ।। - ಈ ತಾಮ್ರದ ಪಾತ್ರೆಯುಲ್ಲಿ ಪಾಂಚಾಲಿಯು ಅಡುಗೆ ಮಾಡಿ ಬಡಿಸಿ, ತಾನೂ ಉಂಡು, ಕವುಚಿ ಇಡುವವವರೆಗೆ ಮಾಡಿದುದೆಲ್ಲವೂ ಅಕ್ಷಯವಾಗುತ್ತದೆಯೆಂದು. ↩︎
-
ಮಾಂಸವು ಅಕ್ಷಯವಾಗುವುದೆನ್ನುವುದನ್ನು ಇಲ್ಲಿ ಹೇಳಿಲ್ಲ. ಆದುದರಿಂದ ಪಾಂಡವರು ಅವರ ವನವಾಸದ ಸಮಯದಲ್ಲಿ ಆಹಾರಕ್ಕಾಗಿ ಆಗಾಗ ಜಿಂಕೆಗಳನ್ನು ಬೇಟೆಯಾಡುತ್ತಿದ್ದರು. ↩︎
-
ಕುಂಭಕೋಣ ಸಂಪುಟದಲ್ಲಿ ಈ ಶ್ಲೋಕದ ನಂತರ ದ್ರೌಪದಿಯು ಊಟಮಾಡಿದ ಮೇಲೆ ಆಹಾರವು ಕ್ಷಯವಾಗುತ್ತದೆ ಎಂದು ಸೂಚಿಸುವ ಈ ಶ್ಲೋಕಾರ್ಧವಿದೆ - ದ್ರೌಪದ್ಯಾಂ ಭುಜ್ಯಮಾನಾಯಾಂ ತದನ್ನಂ ಕ್ಷಯಮೇತಿ ಚ। ↩︎