ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದಿಗ್ವಿಜಯ ಪರ್ವ
ಅಧ್ಯಾಯ 29
ಸಾರ
ನಕುಲನ ಪಶ್ಚಿಮ ದಿಗ್ವಿಜಯ (1-19).
02029001 ವೈಶಂಪಾಯನ ಉವಾಚ।
02029001a ನಕುಲಸ್ಯ ತು ವಕ್ಷ್ಯಾಮಿ ಕರ್ಮಾಣಿ ವಿಜಯಂ ತಥಾ।
02029001c ವಾಸುದೇವಜಿತಾಮಾಶಾಂ ಯಥಾಸೌ ವ್ಯಜಯತ್ಪ್ರಭುಃ।।
ವೈಶಂಪಾಯನನು ಹೇಳಿದನು: “ನಕುಲನ ವಿಜಯ ಕರ್ಮಗಳ ಕುರಿತು ಮತ್ತು ಆ ಪ್ರಭುವು ವಾಸುದೇವನು ಗೆದ್ದಿದ್ದ1 ಪ್ರದೇಶಗಳನ್ನು ಹೇಗೆ ಗೆದ್ದನೆನ್ನುವುದನ್ನು ಹೇಳುತ್ತೇನೆ.
02029002a ನಿರ್ಯಾಯ ಖಾಂಡವಪ್ರಸ್ಥಾತ್ಪ್ರತೀಚೀಮಭಿತೋ ದಿಶಂ।
02029002c ಉದ್ದಿಶ್ಯ ಮತಿಮಾನ್ಪ್ರಾಯಾನ್ಮಹತ್ಯಾ ಸೇನಯಾ ಸಹ।।
02029003a ಸಿಂಹನಾದೇನ ಮಹತಾ ಯೋಧಾನಾಂ ಗರ್ಜಿತೇನ ಚ।
02029003c ರಥನೇಮಿನಿನಾದೈಶ್ಚ ಕಂಪಯನ್ವಸುಧಾಮಿಮಾಂ।।
ಖಾಂಡವಪ್ರಸದಿಂದ ಹೊರಟು ಪಶ್ಚಿಮ ದಿಶಾಭಿಮುಖವಾಗಿ ಮಹಾ ಸೇನೆಯೊಂದಿಗೆ ಯೋಧರ ಮಹಾ ಸಿಂಹನಾದ ಗರ್ಜನೆಗಳು ಮತ್ತು ರಥವೇಗದ ನಿನಾದದಿಂದ ವಸುಧೆಯನ್ನೇ ಕಂಪಿಸುತ್ತಾ ಆ ಮತಿವಂತನು ಹೊರಟನು.
02029004a ತತೋ ಬಹುಧನಂ ರಮ್ಯಂ ಗವಾಶ್ವಧನಧಾನ್ಯವತ್।
02029004c ಕಾರ್ತ್ತಿಕೇಯಸ್ಯ ದಯಿತಂ ರೋಹೀತಕಮುಪಾದ್ರವತ್।।
ಮೊದಲು ಬಹುಧನಯುಕ್ತ ಗೋ, ಅಶ್ವ ಧನ ಧಾನ್ಯಯುಕ್ತ, ಕಾರ್ತಿಕೇಯನ ಅಚ್ಚುಮೆಚ್ಚಿನ ರೋಹೀತಕವನ್ನು ತಲುಪಿದನು.
02029005a ತತ್ರ ಯುದ್ಧಂ ಮಹದ್ವೃತ್ತಂ ಶೂರೈರ್ಮತ್ತಮಯೂರಕೈಃ।
02029005c ಮರುಭೂಮಿಂ ಚ ಕಾರ್ತ್ಸ್ನ್ಯೆನ ತಥೈವ ಬಹುಧಾನ್ಯಕಂ।।
02029006a ಶೈರೀಷಕಂ ಮಹೇಚ್ಛಂ ಚ ವಶೇ ಚಕ್ರೇ ಮಹಾದ್ಯುತಿಃ।
02029006c ಶಿಬೀಂಸ್ತ್ರಿಗರ್ತಾನಂಬಷ್ಠಾನ್ಮಾಲವಾನ್ಪಂಚಕರ್ಪಟಾನ್।।
02029007a ತಥಾ ಮಧ್ಯಮಿಕಾಯಾಂಶ್ಚ ವಾಟಧಾನಾನ್ದ್ವಿಜಾನಥ।
ಅಲ್ಲಿ ಶೂರ ಮತ್ತಮಯೂರಕರೊಂದಿಗೆ ನಡೆದ ಮಹಾ ಯುದ್ಧದಲ್ಲಿ ಮಹಾದ್ಯುತಿಯು ಮರುಭೂಮಿ ರಾಜ್ಯ ಮತ್ತು ಧನ್ಯಸಮೃದ್ಧ ಶೈರೀಷಕ - ಮಹೇಚ್ಛಗಳನ್ನು, ಶಿಬಿಗಳನ್ನು, ತ್ರಿಗರ್ತರನ್ನು, ಅಂಬಷ್ಠರನ್ನು, ಮಾಲವಾನರನ್ನು, ಪಂಚಕರ್ಪಟರನ್ನು, ಮಧ್ಯಮಿಕರನ್ನು ಮತ್ತು ವಾಟಧಾನ ಬ್ರಾಹ್ಮಣರನ್ನು ವಶಪಡೆಸಿಕೊಂಡನು.
02029007c ಪುನಶ್ಚ ಪರಿವೃತ್ಯಾಥ ಪುಷ್ಕರಾರಣ್ಯವಾಸಿನಃ।।
02029008a ಗಣಾನುತ್ಸವಸಂಕೇತಾನ್ವ್ಯಜಯತ್ಪುರುಷರ್ಷಭಃ।
02029008c ಸಿಂಧುಕೂಲಾಶ್ರಿತಾ ಯೇ ಚ ಗ್ರಾಮಣೇಯಾ ಮಹಾಬಲಾಃ।।
02029009a ಶೂದ್ರಾಭೀರಗಣಾಶ್ಚೈವ ಯೇ ಚಾಶ್ರಿತ್ಯ ಸರಸ್ವತೀಂ।
02029009c ವರ್ತಯಂತಿ ಚ ಯೇ ಮತ್ಸ್ಯೈರ್ಯೇ ಚ ಪರ್ವತವಾಸಿನಃ।।
02029010a ಕೃತ್ಸ್ನಂ ಪಂಚನದಂ ಚೈವ ತಥೈವಾಪರಪರ್ಯಟಂ।
02029010c ಉತ್ತರಜ್ಯೋತಿಕಂ ಚೈವ ತಥಾ ವೃಂದಾಟಕಂ ಪುರಂ।।
02029010e ದ್ವಾರಪಾಲಂ ಚ ತರಸಾ ವಶೇ ಚಕ್ರೇ ಮಹಾದ್ಯುತಿಃ।।
02029011a ರಮಠಾನ್ ಹಾರಹೂಣಾಂಶ್ಚ ಪ್ರತೀಚ್ಯಾಶ್ಚೈವ ಯೇ ನೃಪಾಃ।
02029011c ತಾನ್ಸರ್ವಾನ್ಸ ವಶೇ ಚಕ್ರೇ ಶಾಸನಾದೇವ ಪಾಂಡವಃ।।
ಅಲ್ಲಿಯೇ ಸುತ್ತುವರೆದು ಪುಷ್ಕರಾರಣ್ಯದಲ್ಲಿ ವಾಸಿಸುತ್ತಿದ್ದ ಉತ್ಸವಸಂಕೇತಕ ಗಣಗಳನ್ನು, ಸಿಂಧುನದೀತೀರದಲ್ಲಿ ವಾಸಿಸುತ್ತಿದ್ದ ವುಹಾಬಲಶಾಲಿ ಗ್ರಾಮಣೇಯರನ್ನು, ಸರಸ್ವತೀ ತೀರದಲ್ಲಿ ವಾಸಿಸುತ್ತಿದ್ದ, ಮೀನಿಂದಲೇ ಜೀವಿಸುತಿದ್ದ್ದ ಮತ್ತು ಪರ್ವತವಾಸಿ ಶೂದ್ರ ಮತ್ತು ಅಭೀರ ಗಣಗಳನ್ನೂ, ಐದು ನದಿ ಪ್ರದೇಶ2ವೆಲ್ಲವನ್ನೂ, ಪಶ್ಚಿಮ ಪರ್ಯಟವನ್ನು, ಉತ್ತರ ಜ್ಯೋತಿಕವನ್ನು, ವೃಂದಾಟಕ ಪುರವನ್ನು, ಮತ್ತು ದ್ವಾರಪಾಲ, ಪಶ್ಚಿಮದ ರಾಜರಾದ ರಮಟರು, ಹಾರಣರು ಮತ್ತು ಎಲ್ಲರನ್ನೂ ಮಹಾದ್ಯುತಿ ಪುರುಷರ್ಷಭ ಪಾಂಡವನು ಸೋಲಿಸಿ, ವಶಪಡಿಸಿಕೊಂಡು ಶಾಸನವನ್ನು ಸ್ಥಾಸಿದನು.
02029012a ತತ್ರಸ್ಥಃ ಪ್ರೇಷಯಾಮಾಸ ವಾಸುದೇವಾಯ ಚಾಭಿಭುಃ।
02029012c ಸ ಚಾಸ್ಯ ದಶಭೀ ರಾಜ್ಯೈಃ ಪ್ರತಿಜಗ್ರಾಹ ಶಾಸನಂ।।
ಅಲ್ಲಿ ಇರುವಾಗ ವಿಜಯಿಯು ವಾಸುದೇವನಿಗೆ3 ಸಂದೇಶವನ್ನು ಕಳುಹಿಸಲು ಅವನು ಅಲ್ಲಿಯ ಹತ್ತು ರಾಜ್ಯಗಳೊಡನೆ4 ಶಾಸನವನ್ನು ಸ್ವೀಕರಿಸಿದನು.
02029013a ತತಃ ಶಾಕಲಮಭ್ಯೇತ್ಯ ಮದ್ರಾಣಾಂ ಪುಟಭೇದನಂ।
02029013c ಮಾತುಲಂ ಪ್ರೀತಿಪೂರ್ವೇಣ ಶಲ್ಯಂ ಚಕ್ರೇ ವಶೇ ಬಲೀ।।
ಅನಂತರ ಮದ್ರದೇಶದ ರಾಜಧಾನಿ ಶಾಕಲವನ್ನು ಸೇರಿ ಅಲ್ಲಿ ಆ ಬಲಿಯು ಸೋದರಮಾವ ಶಲ್ಯನನ್ನು ಪ್ರೀತಿಪೂರ್ವಕವಾಗಿ ವಶಪಡಿಸಿಕೊಂಡನು.
02029014a ಸ ತಸ್ಮಿನ್ಸತ್ಕೃತೋ ರಾಜ್ಞಾ ಸತ್ಕಾರಾರ್ಹೋ ವಿಶಾಂ ಪತೇ।
02029014c ರತ್ನಾನಿ ಭೂರೀಣ್ಯಾದಾಯ ಸಂಪ್ರತಸ್ಥೇ ಯುಧಾಂ ಪತಿಃ।।
ವಿಶಾಂಪತೇ! ಆ ಸತ್ಕಾರಾರ್ಹ ಯುಧಾಂಪತಿಯು ರಾಜನಿಂದ ಸತ್ಕೃತನಾಗಿ ಬಹಳಷ್ಟು ರತ್ನಗಳನ್ನು ಪಡೆದು ಹೊರಟನು.
02029015a ತತಃ ಸಾಗರಕುಕ್ಷಿಸ್ಥಾನ್ಮ್ಲೇಚ್ಛಾನ್ಪರಮದಾರುಣಾನ್।
02029015c ಪಹ್ಲವಾನ್ಬರ್ಬರಾಂಶ್ಚೈವ ತಾನ್ಸರ್ವಾನನಯದ್ವಶಂ।।
ಅನಂತರ ಅವನು ಸಾಗರದ ದಂಡೆಯಲ್ಲಿದ್ದ ಪರಮದಾರುಣ ಮ್ಲೇಚ್ಛರನ್ನು, ಪಹ್ಲವರನ್ನು ಮತ್ತು ಬರ್ಬರರನ್ನು ಎಲ್ಲರನ್ನೂ ವಶಪಡಿಸಿಕೊಂಡನು.
02029016a ತತೋ ರತ್ನಾನ್ಯುಪಾದಾಯ ವಶೇ ಕೃತ್ವಾ ಚ ಪಾರ್ಥಿವಾನ್।
02029016c ನ್ಯವರ್ತತ ನರಶ್ರೇಷ್ಠೋ ನಕುಲಶ್ಚಿತ್ರಮಾರ್ಗವಿತ್।।
ಪಾರ್ಥಿವರನ್ನು ವಶಪಡಿಸಿಕೊಂಡು ರತ್ನಗಳನ್ನು ಗಳಿಸಿದ ನಂತರ ಚಿತ್ರಮಾರ್ಗವಿದು ನರಶ್ರೇಷ್ಠ ನಕುಲನು ಹಿಂದಿರುಗಿದನು.
02029017a ಕರಭಾಣಾಂ ಸಹಸ್ರಾಣಿ ಕೋಶಂ ತಸ್ಯ ಮಹಾತ್ಮನಃ।
02029017c ಊಹುರ್ದಶ ಮಹಾರಾಜ ಕೃಚ್ಛ್ರಾದಿವ ಮಹಾಧನಂ।।
ಮಹಾರಾಜ! ಆ ಮಹಾತ್ಮನು ಸಂಗ್ರಹಿಸಿದ್ದ ಮಹಾಧನವನ್ನು ಹತ್ತುಸಾವಿರ ಒಂಟೆಗಳು ಬಹಳ ಕಷ್ಟಪಟ್ಟು ಹೊತ್ತು ತಂದವು.
02029018a ಇಂದ್ರಪ್ರಸ್ಥಗತಂ ವೀರಮಭ್ಯೇತ್ಯ ಸ ಯುಧಿಷ್ಠಿರಂ।
02029018c ತತೋ ಮಾದ್ರೀಸುತಃ ಶ್ರೀಮಾನ್ಧನಂ ತಸ್ಮೈ ನ್ಯವೇದಯತ್।।
ಅನಂತರ ಶ್ರೀಮಾನ್ ಮಾದ್ರೀಸುತನು ಇಂದ್ರಪ್ರಸ್ಥಕ್ಕೆ ಹೋಗಿ ವೀರ ಯುಧಿಷ್ಠಿರನನ್ನು ಭೇಟಿಯಾಗಿ ಅವನಿಗೆ ಧನವನ್ನು ಅರ್ಪಿಸಿದನು.
02029019a ಏವಂ ಪ್ರತೀಚೀಂ ನಕುಲೋ ದಿಶಂ ವರುಣಪಾಲಿತಾಂ।
02029019c ವಿಜಿಗ್ಯೇ ವಾಸುದೇವೇನ ನಿರ್ಜಿತಾಂ ಭರತರ್ಷಭಃ।।
ಹೀಗೆ ಭರತರ್ಷಭ ನಕುಲನು ವಾಸುದೇವನಿಂದ ಗೆಲ್ಲಲ್ಪಟ್ಟಿದ್ದ ವರುಣನಿಂದ ಪಾಲಿತ ಪಶ್ಚಿಮ ದಿಕ್ಕನ್ನು ಗೆದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ನಕುಲಪ್ರಾತೀಚೀವಿಜಯೇ ಏಕೋನತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ನಕುಲಪ್ರಾತೀಚೀವಿಜಯ ಎನ್ನುವ ಇಪ್ಪತ್ತೊಂಭತ್ತನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-23/100, ಅಧ್ಯಾಯಗಳು-254/1995, ಶ್ಲೋಕಗಳು-8227/73840.