027 ಭೀಮಪ್ರಾಚೀದಿಗ್ವಿಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದಿಗ್ವಿಜಯ ಪರ್ವ

ಅಧ್ಯಾಯ 27

ಸಾರ

ಭೀಮಸೇನನು ಪೂರ್ವದಿಕ್ಕಿನ ರಾಜರನ್ನು ಗೆದ್ದು ಮರಳಿದುದು (1-28).

02027001 ವೈಶಂಪಾಯನ ಉವಾಚ।
02027001a ತತಃ ಕುಮಾರವಿಷಯೇ ಶ್ರೇಣಿಮಂತಮಥಾಜಯತ್।
02027001c ಕೋಸಲಾಧಿಪತಿಂ ಚೈವ ಬೃಹದ್ಬಲಮರಿಂದಮಃ।।

ವೈಶಂಪಾಯನನು ಹೇಳಿದನು: “ಅನಂತರ ಆ ಅರಿಂದಮನು ಕುಮಾರ ದೇಶದ ಶ್ರೇಣಿಮಂತ ಮತ್ತು ಕೋಸಲಾಧಿಪತಿ ಬೃಹದ್ಬಲನನ್ನು ಗೆದ್ದನು.

02027002a ಅಯೋಧ್ಯಾಯಾಂ ತು ಧರ್ಮಜ್ಞಂ ದೀರ್ಘಪ್ರಜ್ಞಂ ಮಹಾಬಲಂ।
02027002c ಅಜಯತ್ಪಾಂಡವಶ್ರೇಷ್ಠೋ ನಾತಿತೀವ್ರೇಣ ಕರ್ಮಣಾ।।

ಪಾಂಡವಶ್ರೇಷ್ಠನು ಅಷ್ಟೇನೂ ಕಷ್ಟವಿಲ್ಲದೇ ಅಯೋಧ್ಯೆಯ ಧರ್ಮಜ್ಞ ಮಹಾಬಲಿ ದೀರ್ಘಪ್ರಜ್ಞನನ್ನು ಗೆದ್ದನು.

02027003a ತತೋ ಗೋಪಾಲಕಚ್ಛಂ ಚ ಸೋತ್ತಮಾನಪಿ ಚೋತ್ತರಾನ್।
02027003c ಮಲ್ಲಾನಾಮಧಿಪಂ ಚೈವ ಪಾರ್ಥಿವಂ ವ್ಯಜಯತ್ಪ್ರಭುಃ।।

ಅನಂತರ ಪ್ರಭುವು ಗೋಪಾಲಕಚ್ಛ, ಉತ್ತರ ಸೋತ್ತಮರನ್ನು ಮತ್ತು ಮಲ್ಲರ ಅಧಿಪತಿ ಪಾರ್ಥಿವನನ್ನು ಜಯಿಸಿದನು.

02027004a ತತೋ ಹಿಮವತಃ ಪಾರ್ಶ್ವೇ ಸಮಭ್ಯೇತ್ಯ ಜರದ್ಗವಂ।
02027004c ಸರ್ವಮಲ್ಪೇನ ಕಾಲೇನ ದೇಶಂ ಚಕ್ರೇ ವಶೇ ಬಲೀ।।

ಹಿಮಾಲಯದ ತಪ್ಪಲಿನಲ್ಲಿ ಜರದ್ಗವನನ್ನು ಎದುರಿಸಿ ಸ್ವಲ್ಪವೇ ಸಮಯದಲ್ಲಿ ಇಡೀ ದೇಶವನ್ನು ಬಲವಂತವಾಗಿ ತನ್ನ ವಶಪಡಿಸಿಕೊಂಡನು.

02027005a ಏವಂ ಬಹುವಿಧಾನ್ದೇಶಾನ್ವಿಜಿತ್ಯ ಪುರುಷರ್ಷಭಃ।
02027005c ಉನ್ನಾಟಮಭಿತೋ ಜಿಗ್ಯೇ ಕುಕ್ಷಿಮಂತಂ ಚ ಪರ್ವತಂ।।
02027005e ಪಾಂಡವಃ ಸುಮಹಾವೀರ್ಯೋ ಬಲೇನ ಬಲಿನಾಂ ವರಃ।।

ಈ ರೀತಿ ಹಲವಾರು ದೇಶಗಳನ್ನು ಗೆದ್ದು ಆ ಪುರುಷರ್ಷಭ, ಬಲಶಾಲಿಗಳಲ್ಲಿ ಶ್ರೇಷ್ಠ ಪಾಂಡವನು ಉನ್ನಾಟವನ್ನು ಗೆದ್ದು ಪರ್ವತ ಕುಕ್ಷಿಮಂತವನ್ನು ಬಲವಂತವಾಗಿ ತನ್ನ ವಶದಲ್ಲಿ ತೆಗೆದುಕೊಂಡನು.

02027006a ಸ ಕಾಶಿರಾಜಂ ಸಮರೇ ಸುಬಂಧುಮನಿವರ್ತಿನಂ।
02027006c ವಶೇ ಚಕ್ರೇ ಮಹಾಬಾಹುರ್ಭೀಮೋ ಭೀಮಪರಾಕ್ರಮಃ।।

ಆ ಮಹಾಬಾಹು ಭೀಮಪರಾಕ್ರಮಿ ಭೀಮನು ಸಮರದಲ್ಲಿ ಕಾಶಿರಾಜನನ್ನು ಮತ್ತು ಹಿಂದೇಟನ್ನು ಹಾಕದೇ ಇದ್ದ ಸುಬಂಧುವನ್ನು ವಶಪಡಿಸಿಕೊಂಡನು.

02027007a ತತಃ ಸುಪಾರ್ಶ್ವಮಭಿತಸ್ತಥಾ ರಾಜಪತಿಂ ಕ್ರಥಂ।
02027007c ಯುಧ್ಯಮಾನಂ ಬಲಾತ್ಸಂಖ್ಯೇ ವಿಜಿಗ್ಯೇ ಪಾಂಡವರ್ಷಭಃ।।

ಅನಂತರ ಪಾಂಡವರ್ಷಭನು ಬಲದಿಂದ ಯುದ್ಧ ಮಾಡಿ ಕ್ರಥದಲ್ಲಿದ್ದ ರಾಜಪತಿ ಸುಪಾರ್ಶ್ವನನ್ನು ಸೋಲಿಸಿದನು.

02027008a ತತೋ ಮತ್ಸ್ಯಾನ್ಮಹಾತೇಜಾ ಮಲಯಾಂಶ್ಚ ಮಹಾಬಲಾನ್।
02027008c ಅನವದ್ಯಾನ್ಗಯಾಂಶ್ಚೈವ ಪಶುಭೂಮಿಂ ಚ ಸರ್ವಶಃ।।

ಅನಂತರ ಮಹಾತೇಜಸ್ವಿ ಮತ್ಸ್ಯರನ್ನು, ಮಹಾಬಲಶಾಲಿ ಮಲಯರನ್ನು, ವಧಿಸಲಸಾದ್ಯ ಗಯರನ್ನು ಮತ್ತು ಪಶುಭೂಮಿ ಸರ್ವವನ್ನೂ ಸೋಲಿಸಿದನು.

02027009a ನಿವೃತ್ಯ ಚ ಮಹಾಬಾಹುರ್ಮದರ್ವೀಕಂ ಮಹೀಧರಂ।
02027009c ಸೋಪದೇಶಂ ವಿನಿರ್ಜಿತ್ಯ ಪ್ರಯಯಾವುತ್ತರಾಮುಖಃ।।
02027009e ವತ್ಸಭೂಮಿಂ ಚ ಕೌಂತೇಯೋ ವಿಜಿಗ್ಯೇ ಬಲವಾನ್ಬಲಾತ್।।
02027010a ಭರ್ಗಾಣಾಮಧಿಪಂ ಚೈವ ನಿಷಾದಾಧಿಪತಿಂ ತಥಾ।
02027010c ವಿಜಿಗ್ಯೇ ಭೂಮಿಪಾಲಾಂಶ್ಚ ಮಣಿಮತ್ಪ್ರಮುಖಾನ್ಬಹೂನ್।।

ಮಹಾಬಾಹುವು ಹಿಂದಿರುಗಿ ಉತ್ತರಾಭಿಮುಖವಾಗಿ ಹೊರಟು ಮದರ್ವೀಕ ಪರ್ವತ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಗೆದ್ದನು. ಬಲಶಾಲಿ ಕೌಂತೇಯನು ಬಲವನ್ನು ಪ್ರಯೋಗಿಸಿ ವತ್ಸಭೂಮಿಯನ್ನು ಸೋಲಿಸಿ, ಭರ್ಗರ ಅಧಿಪ, ನಿಷಾದಧಿಪತಿ ಮತ್ತು ಮಣಿಮತನೇ ಮೊದಲಾದ ಹಲವಾರು ಭೂಮಿಪಾಲರನ್ನು ಗೆದ್ದನು.

02027011a ತತೋ ದಕ್ಷಿಣಮಲ್ಲಾಂಶ್ಚ ಭೋಗವಂತಂ ಚ ಪಾಂಡವಃ।
02027011c ತರಸೈವಾಜಯದ್ಭೀಮೋ ನಾತಿತೀವ್ರೇಣ ಕರ್ಮಣಾ।।

ಅನಂತರ ಪಾಂಡವ ಭೀಮನು ದಕ್ಷಿಣ ಮಲ್ಲರನ್ನೂ ಭೋಗವಂತನನ್ನೂ ಏನೂ ಕಷ್ಟವಿಲ್ಲದೇ ಗೆದ್ದನು.

02027012a ಶರ್ಮಕಾನ್ವರ್ಮಕಾಂಶ್ಚೈವ ಸಾಂತ್ವೇನೈವಾಜಯತ್ಪ್ರಭುಃ।
02027012c ವೈದೇಹಕಂ ಚ ರಾಜಾನಂ ಜನಕಂ ಜಗತೀಪತಿಂ।।
02027012e ವಿಜಿಗ್ಯೇ ಪುರುಷವ್ಯಾಘ್ರೋ ನಾತಿತೀವ್ರೇಣ ಕರ್ಮಣಾ।।

ಪುರುಷವ್ಯಾಘ್ರ ಪ್ರಭುವು ಶರ್ಮಕರನ್ನು ಮತ್ತು ವರ್ಮಕರನ್ನು ಸಾಂತ್ವನದಿಂದ ಗೆದ್ದು ವೈದೇಹಕ ರಾಜ ಜಗತೀಪತಿ ಜನಕ1ನನ್ನು ಸುಲಭವಾಗಿ ಗೆದ್ದನು.

02027013a ವೈದೇಹಸ್ಥಸ್ತು ಕೌಂತೇಯ ಇಂದ್ರಪರ್ವತಮಂತಿಕಾತ್।
02027013c ಕಿರಾತಾನಾಮಧಿಪತೀನ್ವ್ಯಜಯತ್ಸಪ್ತ ಪಾಂಡವಃ।।

ವಿದೇಹದಲ್ಲಿಯೇ ಇದ್ದುಕೊಂಡು ಕೌಂತೇಯ ಪಾಂಡವನು ಇಂದ್ರಪರ್ವತದ ಕೊನೆಯಲ್ಲಿದ್ದ ಕಿರಾತರ ಏಳು ಅಧಿಪತಿಗಳನ್ನು ಗೆದ್ದನು.

02027014a ತತಃ ಸುಹ್ಮಾನ್ಪ್ರಾಚ್ಯಸುಹ್ಮಾನ್ಸಮಕ್ಷಾಂಶ್ಚೈವ ವೀರ್ಯವಾನ್।
02027014c ವಿಜಿತ್ಯ ಯುಧಿ ಕೌಂತೇಯೋ ಮಾಗಧಾನುಪಯಾದ್ಬಲೀ।।

ಅನಂತರ ವೀರ್ಯವಾನ್ ಬಲಿ ಕೌಂತೇಯನು ಅವರು ನೋಡುತ್ತಿದ್ದಂತೆಯೇ ಸುಂಹರನ್ನು, ಪೂರ್ವ ಸುಂಹರನ್ನು ಯದ್ಧದಲ್ಲಿ ಸೋಲಿಸಿ, ಮಾಗಧ ದೇಶವನ್ನು ಆಕ್ರಮಣ ಮಾಡಿದನು.

02027015a ದಂಡಂ ಚ ದಂಡಧಾರಂ ಚ ವಿಜಿತ್ಯ ಪೃಥಿವೀಪತೀನ್।
02027015c ತೈರೇವ ಸಹಿತಃ ಸರ್ವೈರ್ಗಿರಿವ್ರಜಮುಪಾದ್ರವತ್।।

ಪೃಥಿವೀಪತಿ ದಂಡ ಮತ್ತು ದಂಡಧಾರರನ್ನು ಗೆದ್ದು ಅವರೆಲ್ಲರೊಡನೆ ಗಿರಿವ್ರಜವದ ಮೇಲೆ ಧಾಳಿಯಿಟ್ಟನು.

02027016a ಜಾರಾಸಂಧಿಂ ಸಾಂತ್ವಯಿತ್ವಾ ಕರೇ ಚ ವಿನಿವೇಶ್ಯ ಹ।
02027016c ತೈರೇವ ಸಹಿತೋ ರಾಜನ್ಕರ್ಣಮಭ್ಯದ್ರವದ್ಬಲೀ।।

ರಾಜನ್! ಜಾರಾಸಂಧಿಯನ್ನು ಸಂತವಿಸಿ ಅವನನ್ನು ಕರಕೊಡುವವನ್ನಾಗಿ ಮಾಡಿ, ಅವರೆಲ್ಲರನ್ನೂ ಸೇರಿ ವೇಗದಿಂದ ಬಲಿ ಕರ್ಣನ ಮೇಲೆ ಆಕ್ರಮಣ ಮಾಡಿದನು.

02027017a ಸ ಕಂಪಯನ್ನಿವ ಮಹೀಂ ಬಲೇನ ಚತುರಂಗಿಣಾ।
02027017c ಯುಯುಧೇ ಪಾಂಡವಶ್ರೇಷ್ಠಃ ಕರ್ಣೇನಾಮಿತ್ರಘಾತಿನಾ।।

ಚತುರಂಗ ಬಲದಿಂದ ಮಹಿಯನ್ನು ಕಂಪಿಸುತ್ತಾ ಪಾಂಡವಶ್ರೇಷ್ಠನು ಅಮಿತ್ರಘಾತಿ ಕರ್ಣನೊಡನೆ ಯುದ್ಧ ಮಾಡಿದನು.

02027018a ಸ ಕರ್ಣಂ ಯುಧಿ ನಿರ್ಜಿತ್ಯ ವಶೇ ಕೃತ್ವಾ ಚ ಭಾರತ।
02027018c ತತೋ ವಿಜಿಗ್ಯೇ ಬಲವಾನ್ರಾಜ್ಞಃ ಪರ್ವತವಾಸಿನಃ।।

ಭಾರತ! ಯುದ್ಧದಲ್ಲಿ ಕರ್ಣನನ್ನು ಸೋಲಿಸಿ ವಶಪಡಿಸಿಕೊಡು ಅವನು ಪರ್ವತವಾಸಿಗಳಾದ ಬಲವಾನ್ ರಾಜರನ್ನು ಗೆದ್ದನು.

02027019a ಅಥ ಮೋದಾಗಿರಿಂ ಚೈವ ರಾಜಾನಂ ಬಲವತ್ತರಂ।
02027019c ಪಾಂಡವೋ ಬಾಹುವೀರ್ಯೇಣ ನಿಜಘಾನ ಮಹಾಮೃಧೇ।।

ಅನಂತರ ಪಾಂಡವನು ಮಹಾ ಮುಷ್ಠಿಯುದ್ಧದಲ್ಲಿ ಬಲವತ್ತರ ಮೋದಗಿರಿಯನ್ನು ಬಾಹುವೀರ್ಯದಿಂದ ಸೋಲಿಸಿದನು.

02027020a ತತಃ ಪೌಂಡ್ರಾಧಿಪಂ ವೀರಂ ವಾಸುದೇವಂ ಮಹಾಬಲಂ।
02027020c ಕೌಶಿಕೀಕಚ್ಛನಿಲಯಂ ರಾಜಾನಂ ಚ ಮಹೌಜಸಂ।।
02027021a ಉಭೌ ಬಲವೃತೌ ವೀರಾವುಭೌ ತೀವ್ರಪರಾಕ್ರಮೌ।
02027021c ನಿರ್ಜಿತ್ಯಾಜೌ ಮಹಾರಾಜ ವಂಗರಾಜಮುಪಾದ್ರವತ್।।

ಮಹಾರಾಜ! ಬಲವೃತರೂ ವೀರರೂ ತೀವ್ರಪರಾಕ್ರಮಿಗಳು ಆದ ಪೌಂಡ್ರಾಧಿಪ ವೀರ ಮಹಾಬಲಿ ವಾಸುದೇವ ಮತ್ತು ಕೌಶಿಕೀ ತೀರದಲ್ಲಿ ವಾಸಿಸುತ್ತಿದ್ದ ಮಹೌಜಸ ರಾಜರನ್ನು ಸೋಲಿಸಿ ವಂಗರಾಜದ ಮೇಲೆ ಧಾಳಿಯಿಟ್ಟನು.

02027022a ಸಮುದ್ರಸೇನಂ ನಿರ್ಜಿತ್ಯ ಚಂದ್ರಸೇನಂ ಚ ಪಾರ್ಥಿವಂ।
02027022c ತಾಮ್ರಲಿಪ್ತಂ ಚ ರಾಜಾನಂ ಕಾಚಂ ವಂಗಾಧಿಪಂ ತಥಾ।।
02027023a ಸುಹ್ಮಾನಾಮಧಿಪಂ ಚೈವ ಯೇ ಚ ಸಾಗರವಾಸಿನಃ।
02027023c ಸರ್ವಾನ್ಮ್ಲೇಚ್ಛಗಣಾಂಶ್ಚೈವ ವಿಜಿಗ್ಯೇ ಭರತರ್ಷಭಃ।।

ಪಾರ್ಥಿವ ಸಮುದ್ರಸೇನ ಮತ್ತು ಚಂದ್ರಸೇನರನ್ನು ಸೋಲಿಸಿ ತಾಮ್ರಲಿಪ್ತದ ರಾಜ, ಕಾಚ ಮತ್ತು ವಂಗಾಧಿಪರು, ಸುಹ್ಮಾನರ ಅಧಿಪ ಮತ್ತು ಸಾಗರವಾಸಿ ಸರ್ವ ಮ್ಲೇಚ್ಛಗಣಗಳನ್ನು ಆ ಭರತರ್ಷಭನು ಗೆದ್ದನು.

02027024a ಏವಂ ಬಹುವಿಧಾನ್ದೇಶಾನ್ವಿಜಿತ್ಯ ಪವನಾತ್ಮಜಃ।
02027024c ವಸು ತೇಭ್ಯ ಉಪಾದಾಯ ಲೌಹಿತ್ಯಮಗಮದ್ಬಲೀ।।

ಈ ರೀತಿ ಬಹುವಿಧದ ದೇಶಗಳನ್ನು ಗೆದ್ದು ಅವರಿಂದ ಸಂಪತ್ತನ್ನು ಪಡೆದು ಬಲಿ ಪವನಾತ್ಮಜನು ಲೌಹಿತ್ಯಕ್ಕೆ ಬಂದನು.

02027025a ಸ ಸರ್ವಾನ್ಮ್ಲೇಚ್ಛನೃಪತೀನ್ಸಾಗರದ್ವೀಪವಾಸಿನಃ।
02027025c ಕರಮಾಹಾರಯಾಮಾಸ ರತ್ನಾನಿ ವಿವಿಧಾನಿ ಚ।।
02027026a ಚಂದನಾಗುರುವಸ್ತ್ರಾಣಿ ಮಣಿಮುಕ್ತಮನುತ್ತಮಂ।
02027026c ಕಾಂಚನಂ ರಜತಂ ವಜ್ರಂ ವಿದ್ರುಮಂ ಚ ಮಹಾಧನಂ।।

ಸಾಗರದ್ವೀಪವಾಸಿಗಳಾದ ಸರ್ವ ಮ್ಲೇಚ್ಛ ನೃಪತಿಗಳಿಂದ ವಿವಿಧ ರತ್ನಗಳನ್ನೂ, ಚಂದನ, ಅಗುರು, ವಸ್ತ್ರ, ಮಣಿ, ಅನುತ್ತಮ ಮುಕ್ತ, ಕಾಂಚನ, ರಜತ, ವಜ್ರ, ವಿದ್ರುಮ ಮತ್ತು ಮಹಾಧನವನ್ನು ಕಪ್ಪ ಕಾಣಿಕೆಗಳನ್ನಾಗಿ ಪಡೆದನು.

02027027a ಸ ಕೋಟಿಶತಸಂಖ್ಯೇನ ಧನೇನ ಮಹತಾ ತದಾ।
02027027c ಅಭ್ಯವರ್ಷದಮೇಯಾತ್ಮಾ ಧನವರ್ಷೇಣ ಪಾಂಡವಂ।।

ಕೋಟಿ ಶತ ಸಂಖ್ಯೆಗಳಲ್ಲಿ ಮಹಾ ಘನ ಧನವನ್ನು ಅಮೇಯಾತ್ಮ ಪಾಂಡವನ ಮೇಲೆ ಮಳೆಯಂತೆ ಸುರಿಸಿದನು.

02027028a ಇಂದ್ರಪ್ರಸ್ಥಮಥಾಗಮ್ಯ ಭೀಮೋ ಭೀಮಪರಾಕ್ರಮಃ।
02027028c ನಿವೇದಯಾಮಾಸ ತದಾ ಧರ್ಮರಾಜಾಯ ತದ್ಧನಂ।।

ಇಂದ್ರಪ್ರಸ್ಥಕ್ಕೆ ಹಿಂದಿರಗಿದ ಭೀಮಪರಾಕ್ರಮಿ ಭೀಮನು ಆ ಧನವನ್ನು ಧರ್ಮರಾಜನಿಗೆ ನಿವೇದಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಭೀಮಪ್ರಾಚೀದಿಗ್ವಿಜಯೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಭೀಮಪ್ರಾಚೀದಿಗ್ವಿಜಯ ಎನ್ನುವ ಇಪ್ಪತ್ತೇಳನೆಯ ಅಧ್ಯಾಯವು.


  1. ಿದೇಹದ ರಾಜ ಜನಕನೆಂದರೆ ಸೀತಾದೇವಿಯ ತಂದೆಯೇ? ಅಥವಾ ಆ ಜನಕನ ವಂಶದವರೇ? ↩︎