ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದಿಗ್ವಿಜಯ ಪರ್ವ
ಅಧ್ಯಾಯ 26
ಸಾರ
ಭೀಮಸೇನನು ಪೂರ್ವದಿಕ್ಕಿನ ರಾಜರನ್ನು ಗೆದ್ದುದು (1-10). ಶಿಶುಪಾಲನಿಂದ ಸತ್ಕೃತನಾದುದು (11-16).
02026001 ವೈಶಂಪಾಯನ ಉವಾಚ।
02026001a ಏತಸ್ಮಿನ್ನೇವ ಕಾಲೇ ತು ಭೀಮಸೇನೋಽಪಿ ವೀರ್ಯವಾನ್।
02026001c ಧರ್ಮರಾಜಮನುಜ್ಞಾಪ್ಯ ಯಯೌ ಪ್ರಾಚೀಂ ದಿಶಂ ಪ್ರತಿ।।
ವೈಶಂಪಾಯನನು ಹೇಳಿದನು: “ಇದೇ ಸಮಯದಲ್ಲಿ ವೀರ್ಯವಾನ್ ಭೀಮಸೇನನು ಧರ್ಮರಾಜನ ಅನುಮತಿಯನ್ನು ಪಡೆದು ಪೂರ್ವದಿಕ್ಕಿನ ಕಡೆ ಹೊರಟನು.
02026002a ಮಹತಾ ಬಲಚಕ್ರೇಣ ಪರರಾಷ್ಟ್ರಾವಮರ್ದಿನಾ।
02026002c ವೃತೋ ಭರತಶಾರ್ದೂಲೋ ದ್ವಿಷಚ್ಛೋಕವಿವರ್ಧನಃ।।
ಪರರಾಷ್ಟ್ರಗಳನ್ನು ಸದೆಬಡಿಯುವ ಮಹಾ ಬಲಚಕ್ರದಿಂದೊಡಗೂಡಿ ಶತ್ರುಗಳ ಶೋಕವನ್ನು ವೃದ್ಧಿಸುತ್ತಾ ಆ ಭರತಶಾರ್ದೂಲನು ಮುಂದುವರೆದನು.
02026003a ಸ ಗತ್ವಾ ರಾಜಶಾರ್ದೂಲಃ ಪಾಂಚಾಲಾನಾಂ ಪುರಂ ಮಹತ್।
02026003c ಪಾಂಚಾಲಾನ್ವಿವಿಧೋಪಾಯೈಃ ಸಾಂತ್ವಯಾಮಾಸ ಪಾಂಡವಃ।।
ಆ ರಾಜಶಾರ್ದೂಲ ಪಾಂಡವನು ಮೊದಲಿಗೆ ಪಾಂಚಾಲರ ಪುರಕ್ಕೆ ಹೋಗಿ ವಿವಿಧ ಉಪಾಯಗಳಿಂದ ಪಾಂಚಾಲರನ್ನು ಒಲಿಸಿದನು.
02026004a ತತಃ ಸ ಗಂಡಕೀಂ ಶೂರೋ ವಿದೇಹಾಂಶ್ಚ ನರರ್ಷಭಃ।
02026004c ವಿಜಿತ್ಯಾಲ್ಪೇನ ಕಾಲೇನ ದಶಾರ್ಣಾನಗಮತ್ಪ್ರಭುಃ।।
ನರರ್ಷಭ ಶೂರ ಪ್ರಭುವು ಕಂಡಕೀ ಮತ್ತು ವಿದೇಹರನ್ನು ಜಯಿಸಿ ಸ್ವಲ್ಪವೇ ಸಮಯದಲ್ಲಿ ದಶಾರ್ಣರ ಮೇಲೆ ಎರಗಿದನು.
02026005a ತತ್ರ ದಾಶಾರ್ಣಕೋ ರಾಜಾ ಸುಧರ್ಮಾ ಲೋಮಹರ್ಷಣಂ।
02026005c ಕೃತವಾನ್ಕರ್ಮ ಭೀಮೇನ ಮಹದ್ಯುದ್ಧಂ ನಿರಾಯುಧಂ।।
ಅಲ್ಲಿ ದಾಶಾರ್ಣಕ ರಾಜಾ ಸುಧರ್ಮನು ಭೀಮನೊಂದಿಗೆ ನಿರಾಯುಧ, ನವಿರೇಳಿಸುವ ಮಹಾಯುದ್ಧವನ್ನು ನಡೆಯಿಸಿದನು.
02026006a ಭೀಮಸೇನಸ್ತು ತದ್ದೃಷ್ಟ್ವಾ ತಸ್ಯ ಕರ್ಮ ಪರಂತಪಃ।
02026006c ಅಧಿಸೇನಾಪತಿಂ ಚಕ್ರೇ ಸುಧರ್ಮಾಣಂ ಮಹಾಬಲಂ।।
ಅವನ ಈ ಕಾರ್ಯವನ್ನು ನೋಡಿದ ಪರಂತಪ ಭೀಮಸೇನನು ಮಹಾಬಲ ಸುಧರ್ಮನನ್ನು ತನ್ನ ಸೇನಾಪತಿಯನ್ನಾಗಿ ನಿಯುಕ್ತಿಸಿದನು.
02026007a ತತಃ ಪ್ರಾಚೀಂ ದಿಶಂ ಭೀಮೋ ಯಯೌ ಭೀಮಪರಾಕ್ರಮಃ।
02026007c ಸೈನ್ಯೇನ ಮಹತಾ ರಾಜನ್ಕಂಪಯನ್ನಿವ ಮೇದಿನೀಂ।।
ರಾಜನ್! ಅನಂತರ ಭೀಮಪರಾಕ್ರಮಿ ಭೀಮನು ತನ್ನ ಮಹಾಸೈನ್ಯದಿಂದ ಮೇದಿನಿಯನ್ನು ನಡುಗಿಸುತ್ತಾ ಪೂರ್ವದಿಕ್ಕಿನಲ್ಲಿ ಹೊರಟನು.
02026008a ಸೋಽಶ್ವಮೇಧೇಶ್ವರಂ ರಾಜನ್ರೋಚಮಾನಂ ಸಹಾನುಜಂ।
02026008c ಜಿಗಾಯ ಸಮರೇ ವೀರೋ ಬಲೇನ ಬಲಿನಾಂ ವರಃ।।
ರಾಜನ್! ಆ ಬಲಿಗಳಲ್ಲಿ ಶ್ರೇಷ್ಠ ವೀರನು ಅಶ್ವಮೇಧೇಶ್ವರ ರೋಚಮಾನನನ್ನು ಅವನ ಅನುಜನೊಂದಿಗೆ ಸಮರದಲ್ಲಿ ಬಲದೊಂದಿಗೆ ಗೆದ್ದನು.
02026009a ಸ ತಂ ನಿರ್ಜಿತ್ಯ ಕೌಂತೇಯೋ ನಾತಿತೀವ್ರೇಣ ಕರ್ಮಣಾ।
02026009c ಪೂರ್ವದೇಶಂ ಮಹಾವೀರ್ಯೋ ವಿಜಿಗ್ಯೇ ಕುರುನಂದನಃ।।
ಅಷ್ಟೊಂದು ತೀವ್ರವಾಗಿಲ್ಲದ ಯುದ್ಧದಲ್ಲಿಯೇ ಅವನನ್ನು ಸೋಲಿಸಿ ಮಹಾವೀರ ಕುರುನಂದನ ಕೌಂತೇಯನು ಪೂರ್ವದೇಶವನ್ನು ಗೆದ್ದನು.
02026010a ತತೋ ದಕ್ಷಿಣಮಾಗಮ್ಯ ಪುಲಿಂದನಗರಂ ಮಹತ್।
02026010c ಸುಕುಮಾರಂ ವಶೇ ಚಕ್ರೇ ಸುಮಿತ್ರಂ ಚ ನರಾಧಿಪಂ।।
ಅನಂತರ ದಕ್ಷಿಣದಲ್ಲಿ ಮಹಾ ಪುನಿಂದ ನಗರಕ್ಕೆ ಸೇರಿ ಸುಕುಮಾರ ಮತ್ತು ನರಾಧಿಪ ಸುಮಿತ್ರನನ್ನು ಗೆದ್ದನು.
02026011a ತತಸ್ತು ಧರ್ಮರಾಜಸ್ಯ ಶಾಸನಾದ್ಭರತರ್ಷಭಃ।
02026011c ಶಿಶುಪಾಲಂ ಮಹಾವೀರ್ಯಮಭ್ಯಯಾಜ್ಜನಮೇಜಯ।।
ಜನಮೇಜಯ! ನಂತರ ಧರ್ಮರಾಜನ ಶಾಸನದಂತೆ ಭರತರ್ಷಭನು ಮಹಾವೀರ ಶಿಶುಪಾಲನಲ್ಲಿಗೆ ಹೋದನು.
02026012a ಚೇದಿರಾಜೋಽಪಿ ತಚ್ಛೃತ್ವಾ ಪಾಂಡವಸ್ಯ ಚಿಕೀರ್ಷಿತಂ।
02026012c ಉಪನಿಷ್ಕ್ರಮ್ಯ ನಗರಾತ್ಪ್ರತ್ಯಗೃಹ್ಣಾತ್ಪರಂತಪಃ।।
ಪಾಂಡವನ ಇಚ್ಛೆಯನ್ನು ಕೇಳಿದ ಚೇದಿರಾಜನು ನಗರದಿಂದ ಹೊರಬಂದು ಆ ಪರಂತಪನನ್ನು ಬರಮಾಡಿಕೊಂಡನು.
02026013a ತೌ ಸಮೇತ್ಯ ಮಹಾರಾಜ ಕುರುಚೇದಿವೃಷೌ ತದಾ।
02026013c ಉಭಯೋರಾತ್ಮಕುಲಯೋಃ ಕೌಶಲ್ಯಂ ಪರ್ಯಪೃಚ್ಛತಾಂ।।
ಮಹಾರಾಜ! ಕುರು ಮತ್ತು ಚೇದಿ ವೃಷಭರೀರ್ವರು ಭೇಟಿಯಾದಾಗ ತಮ್ಮ ಎರಡೂ ಕುಲಗಳ ಕುಶಲವನ್ನು ಪರಸ್ಪರರರಲ್ಲಿ ಕೇಳಿದರು.
02026014a ತತೋ ನಿವೇದ್ಯ ತದ್ರಾಷ್ಟ್ರಂ ಚೇದಿರಾಜೋ ವಿಶಾಂ ಪತೇ।
02026014c ಉವಾಚ ಭೀಮಂ ಪ್ರಹಸನ್ಕಿಮಿದಂ ಕುರುಷೇಽನಘ।।
ವಿಶಾಂಪತೇ! ಚೇದಿರಾಜನು ತನ್ನ ರಾಜ್ಯವನ್ನು ಅವನಿಗೆ ಸಮರ್ಪಿಸಿ ನಗುತ್ತಾ ಭೀಮನಿಗೆ ಕೇಳಿದನು: “ಅನಘ! ಇದೇನು ನೀನು ಮಾಡುತ್ತಿರುವೆ?”
02026015a ತಸ್ಯ ಭೀಮಸ್ತದಾಚಖ್ಯೌ ಧರ್ಮರಾಜಚಿಕೀರ್ಷಿತಂ।
02026015c ಸ ಚ ತತ್ಪ್ರತಿಗೃಹ್ಯೈವ ತಥಾ ಚಕ್ರೇ ನರಾಧಿಪಃ।।
ಆಗ ಭೀಮನು ಅವನಿಗೆ ಧರ್ಮರಾಜನ ಬಯಕೆಯ ಕುರಿತು ಹೇಳಿದನು. ಅದನ್ನು ಒಪ್ಪಿಕೊಂಡ ನರಾಧಿಪನು ಅದಕ್ಕೆ ತಕ್ಕುದಾಗಿ ನಡೆದುಕೊಂಡನು.
02026016a ತತೋ ಭೀಮಸ್ತತ್ರ ರಾಜನ್ನುಷಿತ್ವಾ ತ್ರಿದಶಾಃ ಕ್ಷಪಾಃ।
02026016c ಸತ್ಕೃತಃ ಶಿಶುಪಾಲೇನ ಯಯೌ ಸಬಲವಾಹನಃ।।
ರಾಜನ್! ಭೀಮನು ಅಲ್ಲಿ ಶಿಶುಪಾಲನಿಂದ ಸತ್ಕೃತನಾಗಿ ಸೇನೆ ವಾಹನಗಳೊಂದಿಗೆ ಮೂವತ್ತು ರಾತ್ರಿಗಳನ್ನು ಕಳೆದನು1.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಭೀಮದಿಗ್ವಿಜಯೇ ಷಡ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಭೀಮದಿಗ್ವಿಜಯ ಎನ್ನುವ ಇಪ್ಪತ್ತಾರನೆಯ ಅಧ್ಯಾಯವು.
-
ಜರಾಸಂಧನ ಅಳಿಯ ಮತ್ತು ಮಿತ್ರ ಚೇದಿರಾಜ ಶಿಶುಪಾಲನು ಜರಾಸಂಧನನ್ನು ವಧಿಸಿದ ಭೀಮಸೇನನೊಂದಿಗೆ ಇಷ್ಟೊಂದು ಪ್ರೀತಿಪೂರ್ವಕವಾಗಿ ನಡೆದುಕೊಂಡಿದ್ದುದು ಆಶ್ಚರ್ಯವೇ ಸರಿ! ↩︎