ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಖಾಂಡವದಾಹ ಪರ್ವ
ಅಧ್ಯಾಯ 223
ಸಾರ
ವಿಹ್ವಲರಾದ ಜರಿತೆಯ ಮಕ್ಕಳು ಅಗ್ನಿಯನ್ನು ಸ್ತುತಿಸಿದುದು, ಅಗ್ನಿಯು ಅವರನ್ನು ರಕ್ಷಿಸಿದುದು (1-25).
01223001 ಜರಿತಾರಿರ್ವುವಾಚ।
01223001a ಪುರತಃ ಕೃಚ್ಛ್ರಕಾಲಸ್ಯ ಧೀಮಾಂಜಾಗರ್ತಿ ಪೂರುಷಃ।
01223001c ಸ ಕೃಚ್ಛ್ರಕಾಲಂ ಸಂಪ್ರಾಪ್ಯ ವ್ಯಥಾಂ ನೈವೈತಿ ಕರ್ಹಿ ಚಿತ್।।
ಜರಿತಾರಿಯು ಹೇಳಿದನು: “ಕಷ್ಟಕಾಲವು ಬರುವ ಮೊದಲೇ ಧೀಮಂತ ಪುರುಷನು ಎಚ್ಚೆತ್ತಿರುತ್ತಾನೆ. ಅವನು ಎಂದೂ ಕಷ್ಟಕಾಲ ಬಂದೊದಗಿದಾಗ ವ್ಯಥಿಸುವುದಿಲ್ಲ.
01223002a ಯಸ್ತು ಕೃಚ್ಛ್ರಮಸಂಪ್ರಾಪ್ತಂ ವಿಚೇತಾ ನಾವಬುಧ್ಯತೇ।
01223002c ಸ ಕೃಚ್ಛ್ರಕಾಲೇ ವ್ಯಥಿತೋ ನ ಪ್ರಜಾನಾತಿ ಕಿಂ ಚನ।।
ಕಷ್ಟಕಾಲ ಬಂದಾಗ ಎಚ್ಚೆತ್ತಿರದ ದಡ್ಡನು ಕಷ್ಟಕಾಲವು ಬಂದಾಗ ವ್ಯಥಿತನಾಗುತ್ತಾನೆ ಮತ್ತು ಅವನಿಗೆ ಏನೂ ತಿಳಿಯುವುದಿಲ್ಲ.”
01223003 ಸಾರಿಸೃಕ್ವ ಉವಾಚ।
01223003a ಧೀರಸ್ತ್ವಮಸಿ ಮೇಧಾವೀ ಪ್ರಾಣಕೃಚ್ಛ್ರಮಿದಂ ಚ ನಃ।
01223003c ಶೂರಃ ಪ್ರಾಜ್ಞೋ ಬಹೂನಾಂ ಹಿ ಭವತ್ಯೇಕೋ ನ ಸಂಶಯಃ।।
ಸಾರಿಸೃಕ್ವನು ಹೇಳಿದನು: “ನೀನು ಧೀರನೂ ಮೇಧಾವಿಯೂ ಆಗಿರುವೆ. ಈಗ ನಮ್ಮ ಪ್ರಾಣವೇ ಕಷ್ಟದಲ್ಲಿದೆ. ಬಹುಜನರಲ್ಲಿ ಒಬ್ಬನೇ ಶೂರ ಮತ್ತು ಪ್ರಾಜ್ಞ ಎನ್ನುವುದರಲ್ಲಿ ಸಂಶಯವಿಲ್ಲ.”
01223004 ಸ್ತಂಬಮಿತ್ರ ಉವಾಚ।
01223004a ಜ್ಯೇಷ್ಠಸ್ತ್ರಾತಾ ಭವತಿ ವೈ ಜ್ಯೇಷ್ಠೋ ಮುಂಚತಿ ಕೃಚ್ಛ್ರತಃ।
01223004c ಜ್ಯೇಷ್ಠಶ್ಚೇನ್ನ ಪ್ರಜಾನಾತಿ ಕನೀಯಾನ್ಕಿಂ ಕರಿಷ್ಯತಿ।।
ಸ್ತಂಬಮಿತ್ರನು ಹೇಳಿದನು: “ಹಿರಿಯವನು ಉಳಿಸುವವನಾಗುತ್ತಾನೆ. ಹಿರಿಯವನೇ ಕಷ್ಟದಿಂದ ಬಿಡುಗಡೆ ನೀಡುತ್ತಾನೆ. ಹಿರಿಯವನಿಗೆ ಏನುಮಾಡಬೇಕೆಂದು ತಿಳಿಯದಿದ್ದರೆ ಕಿರಿಯವಾದರೂ ಏನು ಮಾಡಿಯಾರು?”
01223005 ದ್ರೋಣ ಉವಾಚ।
01223005a ಹಿರಣ್ಯರೇತಾಸ್ತ್ವರಿತೋ ಜ್ವಲನ್ನಾಯಾತಿ ನಃ ಕ್ಷಯಂ।
01223005c ಸಪ್ತಜಿಹ್ವೋಽನಲಃ ಕ್ಷಾಮೋ ಲೇಲಿಹಾನೋಪಸರ್ಪತಿ।।
ದ್ರೋಣನು ಹೇಳಿದನು: “ಜ್ವಲಿಸುತ್ತಿರುವ ಹಿರಣ್ಯರೇತನು ನಮ್ಮ ಮನೆಯ ಹತ್ತಿರ ಬರುತ್ತಿದ್ದಾನೆ. ಅನಲನು ತನ್ನ ಏಳು ನಾಲಿಗೆಗಳಿಂದ ನೆಕ್ಕುತ್ತಾ ನಮ್ಮಲ್ಲಿಗೆ ಹರಿದು ಬರುತ್ತಿದ್ದಾನೆ.””
01223006 ವೈಶಂಪಾಯನ ಉವಾಚ।
01223006a ಏವಮುಕ್ತೋ ಭ್ರಾತೃಭಿಸ್ತು ಜರಿತಾರಿರ್ವಿಭಾವಸುಂ।
01223006c ತುಷ್ಟಾವ ಪ್ರಾಂಜಲಿರ್ಭೂತ್ವಾ ಯಥಾ ತಚ್ಛೃಣು ಪಾರ್ಥಿವ।।
ವೈಶಂಪಾಯನನು ಹೇಳಿದನು: “ಪಾರ್ಥಿವ! ಭ್ರಾತನ ಈ ಮಾತುಗಳನ್ನು ಕೇಳಿದ ಜರಿತಾರಿಯು ತನ್ನ ನೆತ್ತಿಯ ಮೇಲೆ ಕೈಗಳನ್ನು ಮುಗಿದು ವಿಭಾವಸುವನ್ನು ಸ್ತುತಿಸಿದ್ದುದನ್ನು ಕೇಳು.
01223007 ಜರಿತಾರಿರುವಾಚ।
01223007a ಆತ್ಮಾಸಿ ವಾಯೋಃ ಪವನಃ ಶರೀರಮುತ ವೀರುಧಾಂ।
01223007c ಯೋನಿರಾಪಶ್ಚ ತೇ ಶುಕ್ರ ಯೋನಿಸ್ತ್ವಮಸಿ ಚಾಂಭಸಃ।।
ಜರಿತಾರಿಯು ಹೇಳಿದನು: “ನೀನು ವಾಯುವಿನ ಆತ್ಮ! ಪವನ! ನೀನು ಔಷಧ ಮೂಲಿಕೆಗಳ ಶರೀರ. ನೀರು ನಿನ್ನ ಮೂಲ. ನೀನು ಶುಕ್ರನ ಮೂಲ. ಮತ್ತು ನೀನು ನೀರಿನ ಮೂಲವೂ ಹೌದು.
01223008a ಊರ್ಧ್ವಂ ಚಾಧಶ್ಚ ಗಚ್ಛಂತಿ ವಿಸರ್ಪಂತಿ ಚ ಪಾರ್ಶ್ವತಃ।
01223008c ಅರ್ಚಿಷಸ್ತೇ ಮಹಾವೀರ್ಯ ರಶ್ಮಯಃ ಸವಿತುರ್ಯಥಾ।।
ಮಹಾವೀರ! ಸೂರ್ಯನ ರಷ್ಮಿಗಳಂತೆ ನಿನ್ನ ಜ್ವಾಲೆಗಳು ಮೇಲೆ, ಕೆಳಗೆ, ಪಕ್ಕದಲ್ಲಿ ಹರಡುತ್ತವೆ.”
01223009 ಸಾರಿಸೃಕ್ವ ಉವಾಚ।
01223009a ಮಾತಾ ಪ್ರಪನ್ನಾ ಪಿತರಂ ನ ವಿದ್ಮಃ ಪಕ್ಷಾಶ್ಚ ನೋ ನ ಪ್ರಜಾತಾಬ್ಜಕೇತೋ।
01223009c ನ ನಸ್ತ್ರಾತಾ ವಿದ್ಯತೇಽಗ್ನೇ ತ್ವದನ್ಯಸ್ ತಸ್ಮಾದ್ಧಿ ನಃ ಪರಿರಕ್ಷೈಕವೀರ।।
ಸಾರಿಸೃಕ್ವನು ಹೇಳಿದನು: “ಮಾತೆಯು ತೊರೆದಿದ್ದಾಳೆ. ತಂದೆಯನ್ನು ತಿಳಿದಿಲ್ಲ. ಮೋಡಗಳಂತ ಹೊಗೆಯುಳ್ಳವನೇ! ನಮ್ಮ ರೆಕ್ಕೆಗಳು ಇನ್ನೂ ಬೆಳೆದಿಲ್ಲ. ಅಗ್ನಿ! ನಿನ್ನನ್ನು ಬಿಟ್ಟು ಬೇರೆ ಯಾವ ತ್ರಾತರನ್ನೂ ನಾವು ಬಲ್ಲೆವು. ಆದುದರಿಂದ ಏಕೈಕವೀರ! ನಮ್ಮನ್ನು ಪರಿರಕ್ಷಿಸು.
01223010a ಯದಗ್ನೇ ತೇ ಶಿವಂ ರೂಪಂ ಯೇ ಚ ತೇ ಸಪ್ತ ಹೇತಯಃ।
01223010c ತೇನ ನಃ ಪರಿರಕ್ಷಾದ್ಯ ಈಡಿತಃ ಶರಣೈಷಿಣಃ।
ಅಗ್ನಿ! ನಿನ್ನ ಶಿವರೂಪದಿಂದ ಮತ್ತು ನಿನ್ನ ಏಳು ಜ್ವಾಲೆಗಳಿಂದ ನಿನ್ನ ಶರಣುಬಂದಿರುವ ನಮ್ಮನ್ನು ಕಷ್ಟದಿಂದ ಪರಿರಕ್ಷಿಸು.
01223011a ತ್ವಮೇವೈಕಸ್ತಪಸೇ ಜಾತವೇದೋ ನಾನ್ಯಸ್ತಪ್ತಾ ವಿದ್ಯತೇ ಗೋಷು ದೇವ।
01223011c ಋಷೀನಸ್ಮಾನ್ಬಾಲಕಾನ್ಪಾಲಯಸ್ವ ಪರೇಣಾಸ್ಮಾನ್ಪ್ರೈಹಿ ವೈ ಹವ್ಯವಾಹ।
ನೀನೇ ಏಕೈಕ ತಪಸ್ವಿ. ಜಾತವೇದ! ದೇವ! ನಿನ್ನಷ್ಟು ಉರಿಯುಳ್ಳವರು ಲೋಕದಲ್ಲಿಯೇ ಬೇರೆ ಇಲ್ಲ. ಬಾಲಕ ಋಷಿಗಳಾದ ನಮ್ಮನ್ನು ಪಾಲಿಸು. ಹವ್ಯವಾಹ! ನಮ್ಮನ್ನು ದಾಟಿ ಹೋಗು.”
01223012 ಸ್ತಂಬಮಿತ್ರ ಉವಾಚ।
01223012a ಸರ್ವಮಗ್ನೇ ತ್ವಮೇವೈಕಸ್ತ್ವಯಿ ಸರ್ವಮಿದಂ ಜಗತ್।
01223012c ತ್ವಂ ಧಾರಯಸಿ ಭೂತಾನಿ ಭುವನಂ ತ್ವಂ ಬಿಭರ್ಷಿ ಚ।।
ಸ್ತಂಬಮಿತ್ರನು ಹೇಳಿದನು: “ಅಗ್ನಿ! ಸರ್ವವೂ ನೀನೇ! ಈ ಸರ್ವ ಜಗತ್ತೂ ನಿನ್ನಲ್ಲಿಯೇ ಇದೆ. ನಿನ್ನ ಮೇಲೆ ವಿಶ್ವವೇ ನಿಂತಿದೆ. ನೀನು ಇರುವ ಎಲ್ಲವುಗಳನ್ನೂ ಪೋಷಿಸುತ್ತೀಯೆ.
01223013a ತ್ವಮಗ್ನಿರ್ಹವ್ಯವಾಹಸ್ತ್ವಂ ತ್ವಮೇವ ಪರಮಂ ಹವಿಃ।
01223013c ಮನೀಷಿಣಸ್ತ್ವಾಂ ಯಜಂತೇ ಬಹುಧಾ ಚೈಕಧೈವ ಚ।।
ಅಗ್ನಿ! ನೀನು ಹವ್ಯವಾಹನ! ನೀನೇ ಪರಮ ಹವಿಸ್ಸು. ಮನುಷ್ಯರು ನಿನ್ನಲ್ಲಿ ಯಜಿಸುತ್ತಾರೆ.
01223014a ಸೃಷ್ಟ್ವಾ ಲೋಕಾಂಸ್ತ್ರೀನಿಮಾನ್ ಹವ್ಯವಾಹ ಪ್ರಾಪ್ತೇ ಕಾಲೇ ಪಚಸಿ ಪುನಃ ಸಮಿದ್ಧಃ।
01223014c ಸರ್ವಸ್ಯಾಸ್ಯ ಭುವನಸ್ಯ ಪ್ರಸೂತಿಸ್ ತ್ವಮೇವಾಗ್ನೇ ಭವಸಿ ಪುನಃ ಪ್ರತಿಷ್ಠಾ।।
ಹವ್ಯವಾಹನ! ಈ ಮೂರೂ ಲೋಕಗಳನ್ನು ರಚಿಸಿದವನೂ ನೀನೇ! ಕಾಲ ಬಂದಾಗ ಪುನಃ ಅವುಗಳನ್ನು ಸಮಿದ್ಧಗಳಂತೆ ಸುಡುತ್ತೀಯೆ. ಅಗ್ನಿ! ಈ ಸರ್ವ ಭುವನಗಳ ಪ್ರಸೂತಿಯು ನೀನೇ ಮತ್ತು ಪುನಃ ಅವು ನಿನ್ನಲ್ಲಿಗೇ ಹಿಂದಿರುಗುತ್ತವೆ.
01223015a ತ್ವಮನ್ನಂ ಪ್ರಾಣಿನಾಂ ಭುಕ್ತಮಂತರ್ಭೂತೋ ಜಗತ್ಪತೇ।
01223015c ನಿತ್ಯಂ ಪ್ರವೃದ್ಧಃ ಪಚಸಿ ತ್ವಯಿ ಸರ್ವಂ ಪ್ರತಿಷ್ಠಿತಂ।
ಜಗತ್ಪತೇ! ನೀನು ಪ್ರಾಣಿಗಳು ತಿಂದ ಆಹಾರವನ್ನು ಜೀರ್ಣಿಸುತ್ತೀಯೆ. ನಿತ್ಯವೂ ಪ್ರಬುದ್ಧನಾದ ನಿನ್ನ ಮೇಲೆ ಸರ್ವವೂ ಪ್ರತಿಷ್ಠಿತವಾಗಿದೆ.”
01223016 ದ್ರೋಣ ಉವಾಚ।
01223016a ಸೂರ್ಯೋ ಭೂತ್ವಾ ರಶ್ಮಿಭಿರ್ಜಾತವೇದೋ ಭೂಮೇರಂಭೋ ಭೂಮಿಜಾತಾನ್ರಸಾಂಶ್ಚ।
01223016c ವಿಶ್ವಾನಾದಾಯ ಪುನರುತ್ಸರ್ಗಕಾಲೇ ಸೃಷ್ಟ್ವಾ ವೃಷ್ಟ್ಯಾ ಭಾವಯಸೀಹ ಶುಕ್ರ।।
ದ್ರೋಣನು ಹೇಳಿದನು: “ಜಾತವೇದ! ಸೂರ್ಯನಾಗಿ ನೀನು ನಿನ್ನ ರಶ್ಮಿಗಳ ಮೂಲಕ ಭೂಮಿಯ ನೀರು ಮತ್ತು ರಸಗಳನ್ನು ಎಳೆದುಕೊಳ್ಳುತ್ತೀಯೆ. ಶುಕ್ರ! ಅವೆಲ್ಲವನ್ನೂ ಹೀರಿಕೊಂಡು ಪುನಃ ಉತ್ಸರ್ಗಕಾಲದಲ್ಲಿ ಮಳೆಯನ್ನಾಗಿ ಸೃಷ್ಟಿಸಿ ಸುರಿಸುತ್ತೀಯೆ!
01223017a ತ್ವತ್ತ ಏತಾಃ ಪುನಃ ಶುಕ್ರ ವೀರುಧೋ ಹರಿತಚ್ಛದಾಃ।
01223017c ಜಾಯಂತೇ ಪುಷ್ಕರಿಣ್ಯಶ್ಚ ಸಮುದ್ರಶ್ಚ ಮಹೋದಧಿಃ।।
ಶುಕ್ರ! ನಿನ್ನಿಂದ ಪುನಃ ಔಷಧ ಹಸಿರುಗಳು, ಪುಷ್ಕರಣಿಗಳು ಮತ್ತು ಮಹೋದಧಿ ಸಮುದ್ರಗಳು ಜೀವತಾಳುತ್ತವೆ
01223018a ಇದಂ ವೈ ಸದ್ಮ ತಿಗ್ಮಾಂಶೋ ವರುಣಸ್ಯ ಪರಾಯಣಂ।
01223018c ಶಿವಸ್ತ್ರಾತಾ ಭವಾಸ್ಮಾಕಂ ಮಾಸ್ಮಾನದ್ಯ ವಿನಾಶಯ।।
ತಿಗ್ಮಾಂಶು! ನಿನ್ನ ಈ ಪೀಠವು ವರುಣನ ಪರಾಯಣ! ನೀನು ಶಿವಸ್ರಾತ! ಆದುದರಿಂದ ನಮ್ಮನ್ನು ಇಂದು ವಿನಾಶಮಾಡಬೇಡ!
01223019a ಪಿಂಗಾಕ್ಷ ಲೋಹಿತಗ್ರೀವ ಕೃಷ್ಣವರ್ತ್ಮನ್ ಹುತಾಶನ।
01223019c ಪರೇಣ ಪ್ರೈಹಿ ಮುಂಚಾಸ್ಮಾನ್ಸಾಗರಸ್ಯ ಗೃಹಾನಿವ।।
ಪಿಂಗಾಕ್ಷ! ಲೋಹಿತಗ್ರೀವ! ಕೃಷ್ಣವರ್ತ್ಮನ್! ಹುತಾಶನ! ನಮ್ಮನ್ನು ದಾಟಿಹೋಗಿ ಸಾಗರಗೃಹವನ್ನು ಬಿಟ್ಟುಬಿಡುವಂತೆ ನಮ್ಮನ್ನು ಬಿಟ್ಟುಬಿಡು.””
01223020 ವೈಶಂಪಾಯನ ಉವಾಚ।
01223020a ಏವಮುಕ್ತೋ ಜಾತವೇದಾ ದ್ರೋಣೇನಾಕ್ಲಿಷ್ಟಕರ್ಮಣಾ।
01223020c ದ್ರೋಣಮಾಹ ಪ್ರತೀತಾತ್ಮಾ ಮಂದಪಾಲಪ್ರತಿಜ್ಞಯಾ।।
ವೈಶಂಪಾಯನನು ಹೇಳಿದನು: “ಅಕ್ಲಿಷ್ಟಕರ್ಮಿ ದ್ರೋಣನು ಈ ರೀತಿ ಜಾತವೇದನನ್ನು ಸ್ತುತಿಸಲಾಗಿ ಪ್ರೀತಾತ್ಮ ಅಗ್ನಿಯು ಮಂದಾಪಾಲನಿಗೆ ತಾನು ಮಾಡಿದ್ದ ಪ್ರತಿಜ್ಞೆಯಂತೆ ದ್ರೋಣನಿಗೆ ಹೇಳಿದನು:
01223021a ಋಷಿರ್ದ್ರೋಣಸ್ತ್ವಮಸಿ ವೈ ಬ್ರಹ್ಮೈತದ್ವ್ಯಾಹೃತಂ ತ್ವಯಾ।
01223021c ಈಪ್ಸಿತಂ ತೇ ಕರಿಷ್ಯಾಮಿ ನ ಚ ತೇ ವಿದ್ಯತೇ ಭಯಂ।।
“ದ್ರೋಣ! ನೀನು ಓರ್ವ ಋಷಿ. ನೀನು ಹೇಳಿದ್ದುದೇ ಬ್ರಹ್ಮ. ನಿನ್ನ ಈಪ್ಸಿತವನ್ನು ಪೂರೈಸುತ್ತೇನೆ, ನಿನ್ನಲ್ಲಿ ಯಾವುದೇ ಭಯವೂ ಇಲ್ಲದಿರಲಿ.
01223022a ಮಂದಪಾಲೇನ ಯೂಯಂ ಹಿ ಮಮ ಪೂರ್ವಂ ನಿವೇದಿತಾಃ।
01223022c ವರ್ಜಯೇಃ ಪುತ್ರಕಾನ್ಮಹ್ಯಂ ದಹನ್ದಾವಮಿತಿ ಸ್ಮ ಹ।।
ಇದರ ಹಿಂದೆಯೇ ಮಂದಪಾಲನು ನಿಮ್ಮೆಲ್ಲರ ಕುರಿತು ಹೇಳಿದ್ದನು. ವನವನ್ನು ದಹಿಸುವಾಗ ನನ್ನ ಪುತ್ರಕರನ್ನು ಬಿಟ್ಟುಬಿಡು ಎಂದು ಹೇಳಿದ್ದನು.
01223023a ಯಚ್ಚ ತದ್ವಚನಂ ತಸ್ಯ ತ್ವಯಾ ಯಚ್ಚೇಹ ಭಾಷಿತಂ।
01223023c ಉಭಯಂ ಮೇ ಗರೀಯಸ್ತದ್ಬ್ರೂಹಿ ಕಿಂ ಕರವಾಣಿ ತೇ।
01223023e ಭೃಶಂ ಪ್ರೀತೋಽಸ್ಮಿ ಭದ್ರಂ ತೇ ಬ್ರಹ್ಮನ್ಸ್ತೋತ್ರೇಣ ತೇ ವಿಭೋ।।
ಅವನ ಮಾತುಗಳು ಮತ್ತು ನೀನು ಈಗತಾನೆ ಹೇಳಿದ್ದುದು ಇವೆರಡೂ ನನಗೆ ಮಹತ್ವದ್ದು. ಆದುದರಿಂದ ಹೇಳು. ನಾನು ನಿನಗೆ ಏನು ಮಾಡಬೇಕು? ಬ್ರಹ್ಮನ್! ವಿಭೋ! ನಿನ್ನ ಈ ಸ್ತುತಿಯಿಂದ ನಾನು ಅತ್ಯಂತ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ.”
01223024 ದ್ರೋಣ ಉವಾಚ।
01223024a ಇಮೇ ಮಾರ್ಜಾರಕಾಃ ಶುಕ್ರ ನಿತ್ಯಮುದ್ವೇಜಯಂತಿ ನಃ।
01223024c ಏತಾನ್ಕುರುಷ್ವ ದಂಷ್ಟ್ರಾಸು ಹವ್ಯವಾಹ ಸಬಾಂಧವಾನ್।।
ದ್ರೋಣನು ಹೇಳಿದನು: “ಶುಕ್ರ! ಈ ಬೆಕ್ಕು ನಮ್ಮನ್ನು ನಿತ್ಯವೂ ಕಾಡಿಸುತ್ತಿದೆ. ಹವ್ಯವಾಹ! ಬಂಧುಗಳೊಂದಿಗೆ ಇದನ್ನು ಕಬಳಿಸು!””
01223025 ವೈಶಂಪಾಯನ ಉವಾಚ।
01223025a ತಥಾ ತತ್ಕೃತವಾನ್ವಹ್ನಿರಭ್ಯನುಜ್ಞಾಯ ಶಾಙೃಕಾನ್।
01223025c ದದಾಹ ಖಾಂಡವಂ ಚೈವ ಸಮಿದ್ಧೋ ಜನಮೇಜಯ।।
ವೈಶಂಪಾಯನನು ಹೇಳಿದನು: “ಜನಮೇಜಯ! ಹಾಗೆಯೇ ಮಾಡಿದ ವಹ್ನಿಯು ಸಾರಂಗಗಳನ್ನು ಕಳುಹಿಸಿಕೊಟ್ಟನು ಮತ್ತು ಖಾಂಡವವನ್ನು ಸಮಿತ್ತದಂತೆ ಸುಟ್ಟುಹಾಕಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಶಾಂಙೃಕೋಪಾಖ್ಯಾನೇ ತ್ರಯೋವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಶಾಂಙೃಕೋಪಾಖ್ಯಾನದಲ್ಲಿ ಇನ್ನೂರಾ ಇಪ್ಪತ್ತ್ಮೂರನೆಯ ಅಧ್ಯಾಯವು.