ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಅರ್ಜುನವನವಾಸ ಪರ್ವ
ಅಧ್ಯಾಯ 209
ಸಾರ
ಅರ್ಜುನನು ಐವರು ಅಪ್ಸರೆಯರಿಗೂ ಶಾಪವಿಮೋಚನೆ ಮಾಡಿದುದು (1-23). ಅರ್ಜುನನು ಮಣಲೂರಪುರಕ್ಕೆ ಹೋಗಿ ಅಲ್ಲಿ ಪತ್ನಿ ಚಿತ್ರಾಂಗದೆ ಮತ್ತು ಮಗ ಬಭ್ರುವಾಹನನನ್ನು ಕಂಡು ತೀರ್ಥಯಾತ್ರೆಯನ್ನು ಮುಂದುವರೆಸಿದುದು (24).
01209001 ವರ್ಗೋವಾಚ।
01209001a ತತೋ ವಯಂ ಪ್ರವ್ಯಥಿತಾಃ ಸರ್ವಾ ಭರತಸತ್ತಮ।
01209001c ಆಯಾಮ ಶರಣಂ ವಿಪ್ರಂ ತಂ ತಪೋಧನಮಚ್ಯುತಂ।।
ವರ್ಗೆಯು ಹೇಳಿದಳು: “ಭರತಸತ್ತಮ! ವ್ಯಥಿತರಾದ ನಾವೆಲ್ಲರೂ ಆ ತಪೋಧನ, ಅಚ್ಯುತ ವಿಪ್ರನ ಶರಣು ಹೋದೆವು.
01209002a ರೂಪೇಣ ವಯಸಾ ಚೈವ ಕಂದರ್ಪೇಣ ಚ ದರ್ಪಿತಾಃ।
01209002c ಅಯುಕ್ತಂ ಕೃತವತ್ಯಃ ಸ್ಮ ಕ್ಷಂತುಮರ್ಹಸಿ ನೋ ದ್ವಿಜ।।
“ನಮ್ಮ ರೂಪ, ಯೌವನ, ಮತ್ತು ಕಂದರ್ಪನಿಂದ ದರ್ಪಿತರಾದ ನಾವು ಈ ಅಯುಕ್ತ ಕಾರ್ಯವನ್ನೆಸಗಿದ್ದೇವೆ. ದ್ವಿಜ! ನಮ್ಮನ್ನು ಕ್ಷಮಿಸಬೇಕು.
01209003a ಏಷ ಏವ ವಧೋಽಸ್ಮಾಕಂ ಸುಪರ್ಯಾಪ್ತಸ್ತಪೋಧನ।
01209003c ಯದ್ವಯಂ ಸಂಶಿತಾತ್ಮಾನಂ ಪ್ರಲೋಬ್ಧುಂ ತ್ವಾಮಿಹಾಗತಾಃ।।
ತಪೋಧನ! ನಮ್ಮ ಸಾವಿನ ಕಾಲಬಂದಿದೆಯೆಂದೇ ನಾವು ಸಂಶಿತಾತ್ಮ ನಿನ್ನನ್ನು ಪ್ರಲೋಭಿಸಿಸಲು ಬಂದಿರುವಂತಿದೆ.
01209004a ಅವಧ್ಯಾಸ್ತು ಸ್ತ್ರಿಯಃ ಸೃಷ್ಟಾ ಮನ್ಯಂತೇ ಧರ್ಮಚಿಂತಕಾಃ।
01209004c ತಸ್ಮಾದ್ಧರ್ಮೇಣ ಧರ್ಮಜ್ಞ ನಾಸ್ಮಾನ್ ಹಿಂಸಿತುಮರ್ಹಸಿ।।
ಆದರೆ ಧರ್ಮಚಿಂತಕರು ಸ್ತ್ರೀಯರನ್ನು ಕೊಲ್ಲಬಾರದೆಂದು ಹೇಳುತ್ತಾರೆ. ಆದುದರಿಂದ ಧರ್ಮಜ್ಞನಾದ ನೀನು ಧರ್ಮಪ್ರಕಾರವಾಗಿ ನಮ್ಮನ್ನು ಹಿಂಸಿಸಬಾರದು.
01209005a ಸರ್ವಭೂತೇಷು ಧರ್ಮಜ್ಞ ಮೈತ್ರೋ ಬ್ರಾಹ್ಮಣ ಉಚ್ಯತೇ।
01209005c ಸತ್ಯೋ ಭವತು ಕಲ್ಯಾಣ ಏಷ ವಾದೋ ಮನೀಷಿಣಾಂ।।
ಸರ್ವಭೂತಗಳ ಮಿತ್ರ ಧರ್ಮಜ್ಞನೇ ಬ್ರಾಹ್ಮಣನೆಂದು ಹೇಳುತ್ತಾರೆ. ಮನೀಷಿಗಳ ಈ ಕಲ್ಯಾಣಕರ ಮಾತನ್ನು ಸತ್ಯವನ್ನಾಗಿಸು.
01209006a ಶರಣಂ ಚ ಪ್ರಪನ್ನಾನಾಂ ಶಿಷ್ಟಾಃ ಕುರ್ವಂತಿ ಪಾಲನಂ।
01209006c ಶರಣಂ ತ್ವಾಂ ಪ್ರಪನ್ನಾಃ ಸ್ಮ ತಸ್ಮಾತ್ತ್ವಂ ಕ್ಷಂತುಮರ್ಹಸಿ।।
ಶಿಷ್ಟರು ಶರಣುಬಂದ ಪ್ರಪನ್ನರನ್ನು ಪಾಲಿಸುತ್ತಾರೆ. ನಾವು ನಿನ್ನ ಶರಣು ಬಂದ ಪ್ರಪನ್ನರು. ನೀನು ನಮ್ಮನ್ನು ಕ್ಷಮಿಸಬೇಕು.”
01209007a ಏವಮುಕ್ತಸ್ತು ಧರ್ಮಾತ್ಮಾ ಬ್ರಾಹ್ಮಣಃ ಶುಭಕರ್ಮಕೃತ್।
01209007c ಪ್ರಸಾದಂ ಕೃತವಾನ್ವೀರ ರವಿಸೋಮಸಮಪ್ರಭಃ।।
ವೀರ! ಈ ಮಾತುಗಳನ್ನು ಕೇಳಿದ ರವಿಸೋಮಸಮಪ್ರಭ ಶುಭಕರ್ಮಿ ಧರ್ಮಾತ್ಮ ಬ್ರಾಹ್ಮಣನು ಪ್ರಸನ್ನನಾದನು.
01209008 ಬ್ರಾಹ್ಮಣ ಉವಾಚ।
01209008a ಶತಂ ಸಹಸ್ರಂ ವಿಶ್ವಂ ಚ ಸರ್ವಮಕ್ಷಯವಾಚಕಂ।
01209008c ಪರಿಮಾಣಂ ಶತಂ ತ್ವೇತನ್ನೈತದಕ್ಷಯವಾಚಕಂ।।
ಬ್ರಾಹ್ಮಣನು ಹೇಳಿದನು: “ನೂರು, ಸಾವಿರ, ಎನ್ನುವ ಶಬ್ಧಗಳು ಯಾವಾಗಲೂ ಅಕ್ಷಯವಾಚಕಗಳು1. ಆದರೆ ನನ್ನ ಶತ ಪರಿಮಾಣವು ಅಕ್ಷಯವಾಚಕವಲ್ಲ.
01209009a ಯದಾ ಚ ವೋ ಗ್ರಾಹಭೂತಾ ಗೃಹ್ಣಂತೀಃ ಪುರುಷಾಂಜಲೇ।
01209009c ಉತ್ಕರ್ಷತಿ ಜಲಾತ್ಕಶ್ಚಿತ್ ಸ್ಥಲಂ ಪುರುಷಸತ್ತಮಃ।।
01209010a ತದಾ ಯೂಯಂ ಪುನಃ ಸರ್ವಾಃ ಸ್ವರೂಪಂ ಪ್ರತಿಪತ್ಸ್ಯಥ।
01209010c ಅನೃತಂ ನೋಕ್ತಪೂರ್ವಂ ಮೇ ಹಸತಾಪಿ ಕದಾ ಚನ।।
ಯಾವಾಗ ನೀವು ಮೊಸಳೆಗಳಾಗಿ ಪುರುಷರನ್ನು ನೀರಿಗೆ ಎಳೆಯುತ್ತೀರೋ ಆಗ ಪುರುಷಸತ್ತಮನೋರ್ವನು ನಿಮ್ಮನ್ನು ಜಲದಿಂದ ಮೇಲಕ್ಕೆ ಎಳೆದಾಗ ನೀವು ಎಲ್ಲವರೂ ಅದೇ ಸ್ಥಳದಲ್ಲಿ ಪುನಃ ಸ್ವರೂಪವನ್ನು ಹೊಂದುತ್ತೀರಿ. ಈ ಹಿಂದೆ ನಾನು ಎಂದೂ ಹಾಸ್ಯಕ್ಕಾಗಿಯೂ ಸುಳ್ಳನ್ನು ಹೇಳಿಲ್ಲ.
01209011a ತಾನಿ ಸರ್ವಾಣಿ ತೀರ್ಥಾನಿ ಇತಃ ಪ್ರಭೃತಿ ಚೈವ ಹ।
01209011c ನಾರೀತೀರ್ಥಾನಿ ನಾಮ್ನೇಹ ಖ್ಯಾತಿಂ ಯಾಸ್ಯಂತಿ ಸರ್ವಶಃ।
01209011e ಪುಣ್ಯಾನಿ ಚ ಭವಿಷ್ಯಂತಿ ಪಾವನಾನಿ ಮನೀಷಿಣಾಂ।।
ಇಂದಿನಿಂದ ಈ ಎಲ್ಲ ತೀರ್ಥಗಳೂ ನಾರೀ ತೀರ್ಥಗಳೆಂಬ ಹೆಸರಿನಿಂದ ಖ್ಯಾತಿ ಹೊಂದುತ್ತವೆ. ಅವುಗಳು ಮನೀಷಿಗಳಿಗೆ ಪುಣ್ಯ ಮತ್ತು ಪಾವನಗಳೆನಿಸುತ್ತವೆ.””
01209012 ವರ್ಗೋವಾಚ।
01209012a ತತೋಽಭಿವಾದ್ಯ ತಂ ವಿಪ್ರಂ ಕೃತ್ವಾ ಚೈವ ಪ್ರದಕ್ಷಿಣಂ।
01209012c ಅಚಿಂತಯಾಮೋಪಸೃತ್ಯ ತಸ್ಮಾದ್ದೇಶಾತ್ಸುದುಃಖಿತಾಃ।।
01209013a ಕ್ವ ನು ನಾಮ ವಯಂ ಸರ್ವಾಃ ಕಾಲೇನಾಲ್ಪೇನ ತಂ ನರಂ।
01209013c ಸಮಾಗಚ್ಛೇಮ ಯೋ ನಸ್ತದ್ರೂಪಮಾಪಾದಯೇತ್ಪುನಃ।।
ವರ್ಗೆಯು ಹೇಳಿದಳು: “ನಂತರ ನಾವು ಆ ವಿಪ್ರನ ಪ್ರದಕ್ಷಿಣೆ ಮಾಡಿ, ಅಭಿವಂದಿಸಿ ಅವನಿಂದ ಬೀಳ್ಕೊಂಡು, ದುಃಖಿತರಾಗಿ “ನಮ್ಮ ಸ್ವದ್ರೂಪವನ್ನು ಪುನಃ ನೀಡುವ ಆ ನರನು ಯಾರು? ಅವನ ಹೆಸರೇನು? ಅವನು ಯಾವಾಗ ಬರುತ್ತಾನೆ?” ಎಂದು ಚಿಂತಿಸಿದೆವು.
01209014a ತಾ ವಯಂ ಚಿಂತಯಿತ್ವೈವಂ ಮುಹೂರ್ತಾದಿವ ಭಾರತ।
01209014c ದೃಷ್ಟವತ್ಯೋ ಮಹಾಭಾಗಂ ದೇವರ್ಷಿಮುತ ನಾರದಂ।।
ಭಾರತ! ನಾವು ಹೀಗೆ ಚಿಂತಿಸುತ್ತಿರುವಾಗ ತಕ್ಷಣವೇ ಮಹಾಭಾಗ ದೇವರ್ಷಿ ನಾರದನನ್ನು ಕಂಡೆವು.
01209015a ಸರ್ವಾ ಹೃಷ್ಟಾಃ ಸ್ಮ ತಂ ದೃಷ್ಟ್ವಾ ದೇವರ್ಷಿಮಮಿತದ್ಯುತಿಂ।
01209015c ಅಭಿವಾದ್ಯ ಚ ತಂ ಪಾರ್ಥ ಸ್ಥಿತಾಃ ಸ್ಮ ವ್ಯಥಿತಾನನಾಃ।।
ಪಾರ್ಥ! ಆ ದೇವರ್ಷಿ ಅಮಿತದ್ಯುತಿಯನ್ನು ಕಂಡು ನಾವೆಲ್ಲರೂ ಹೃಷ್ಟರಾಗಿ ಅವನನ್ನು ಅಭಿನಂದಿಸಿ ವ್ಯಥಿತ ಮುಖಿಗಳಾಗಿ ನಿಂತೆವು.
01209016a ಸ ನೋಽಪೃಚ್ಛದ್ದುಃಖಮೂಲಮುಕ್ತವತ್ಯೋ ವಯಂ ಚ ತತ್।
01209016c ಶ್ರುತ್ವಾ ತಚ್ಚ ಯಥಾವೃತ್ತಮಿದಂ ವಚನಮಬ್ರವೀತ್।।
ಅವನು ನಮ್ಮ ದುಃಖದ ಮೂಲವನ್ನು ಕೇಳಿದನು ಮತ್ತು ನಾವು ಅವನಿಗೆ ಎಲ್ಲವನ್ನೂ ಹೇಳಿದೆವು. ಅದನ್ನು ಕೇಳಿದ ಅವನು ನಮಗೆ ಈ ಮಾತುಗಳನ್ನು ಹೇಳಿದನು:
01209017a ದಕ್ಷಿಣೇ ಸಾಗರಾನೂಪೇ ಪಂಚ ತೀರ್ಥಾನಿ ಸಂತಿ ವೈ।
01209017c ಪುಣ್ಯಾನಿ ರಮಣೀಯಾನಿ ತಾನಿ ಗಚ್ಛತ ಮಾಚಿರಂ।।
“ದಕ್ಷಿಣ ಸಾಗರ ತಟದಲ್ಲಿ ಐದು ತೀರ್ಥಗಳಿವೆ. ತಡಮಾಡದೇ ಆ ಪುಣ್ಯ ರಮಣೀಯ ಸ್ಥಳಕ್ಕೆ ಹೋಗಿರಿ.
01209018a ತತ್ರಾಶು ಪುರುಷವ್ಯಾಘ್ರಃ ಪಾಂಡವೋ ವೋ ಧನಂಜಯಃ।
01209018c ಮೋಕ್ಷಯಿಷ್ಯತಿ ಶುದ್ಧಾತ್ಮಾ ದುಃಖಾದಸ್ಮಾನ್ನ ಸಂಶಯಃ।।
ಅಲ್ಲಿಗೆ ಪುರುಷವ್ಯಾಘ್ರ ಪಾಂಡವ ಧನಂಜಯನು ಬರುತ್ತಾನೆ ಮತ್ತು ಆ ಶುದ್ಧಾತ್ಮನು ನಿಸ್ಸಂಶಯವಾಗಿಯೂ ನಿಮ್ಮನ್ನು ನಿಮ್ಮ ಕಷ್ಟದಿಂದ ಬಿಡುಗಡೆ ಮಾಡುತ್ತಾನೆ.”
01209019a ತಸ್ಯ ಸರ್ವಾ ವಯಂ ವೀರ ಶ್ರುತ್ವಾ ವಾಕ್ಯಮಿಹಾಗತಾಃ।
01209019c ತದಿದಂ ಸತ್ಯಮೇವಾದ್ಯ ಮೋಕ್ಷಿತಾಹಂ ತ್ವಯಾನಘ।।
ಅನಘ! ವೀರ! ಅವನ ಮಾತುಗಳನ್ನು ಕೇಳಿ ನಾವೆಲ್ಲರೂ ಇಲ್ಲಿಗೆ ಬಂದೆವು. ನಿನ್ನಿಂದ ನಾನು ಬಿಡುಗಡೆಹೊಂದಿದೆ ಎನ್ನುವುದು ಸತ್ಯ.
01209020a ಏತಾಸ್ತು ಮಮ ವೈ ಸಖ್ಯಶ್ಚತಸ್ರೋಽನ್ಯಾ ಜಲೇ ಸ್ಥಿತಾಃ।
01209020c ಕುರು ಕರ್ಮ ಶುಭಂ ವೀರ ಏತಾಃ ಸರ್ವಾ ವಿಮೋಕ್ಷಯ।।
ಆದರೆ ನನ್ನ ಅನ್ಯ ಸಖಿಯರು ಇನ್ನೂ ಜಲದಲ್ಲಿ ಇದ್ದಾರೆ. ವೀರ! ಈ ಎಲ್ಲರನ್ನೂ ಬಿಡುಗಡೆಗೊಳಿಸುವ ಶುಭ ಕರ್ಮವನ್ನು ಮಾಡು!””
01209021 ವೈಶಂಪಾಯನ ಉವಾಚ।
01209021a ತತಸ್ತಾಃ ಪಾಂಡವಶ್ರೇಷ್ಠಃ ಸರ್ವಾ ಏವ ವಿಶಾಂ ಪತೇ।
01209021c ತಸ್ಮಾಚ್ಚಾಪಾದದೀನಾತ್ಮಾ ಮೋಕ್ಷಯಾಮಾಸ ವೀರ್ಯವಾನ್।।
ವೈಶಂಪಾಯನನು ಹೇಳಿದನು: “ವಿಶಾಂಪತೇ! ನಂತರ ವೀರ್ಯವಾನ್ ಪಾಂಡವಶ್ರೇಷ್ಠನು ಆಪತ್ತಿನಲ್ಲಿದ್ದ ಆ ಎಲ್ಲ ದೀನಾತ್ಮರನ್ನೂ ಬಿಡುಗಡೆಗೊಳಿಸಿದನು
01209022a ಉತ್ಥಾಯ ಚ ಜಲಾತ್ತಸ್ಮಾತ್ಪ್ರತಿಲಭ್ಯ ವಪುಃ ಸ್ವಕಂ।
01209022c ತಾಸ್ತದಾಪ್ಸರಸೋ ರಾಜನ್ನದೃಶ್ಯಂತ ಯಥಾ ಪುರಾ।।
ರಾಜನ್! ಅಪ್ಸರೆಯರು ನೀರಿನಿಂದ ಮೇಲೆದ್ದು ತಮ್ಮ ರೂಪವನ್ನು ಪಡೆದರು ಮತ್ತು ಹಿಂದಿನಂತೆಯೇ ಕಾಣತೊಡಗಿದರು.
01209023a ತೀರ್ಥಾನಿ ಶೋಧಯಿತ್ವಾ ತು ತಥಾನುಜ್ಞಾಯ ತಾಃ ಪ್ರಭುಃ।
01209023c ಚಿತ್ರಾಂಗದಾಂ ಪುನರ್ದ್ರಷ್ಟುಂ ಮಣಲೂರಪುರಂ ಯಯೌ।।
ಆ ತೀರ್ಥಗಳನ್ನು ಶುದ್ಧಗೊಳಿಸಿ ಅನುಜ್ಞೆಯನ್ನು ಪಡೆದು ಪ್ರಭುವು ಚಿತ್ರಾಂಗದೆಯನ್ನು ನೋಡಲು ಮಣಲೂರಪುರಕ್ಕೆ ಪುನಃ ಹೋದನು.
01209024a ತಸ್ಯಾಮಜನಯತ್ಪುತ್ರಂ ರಾಜಾನಂ ಬಭ್ರುವಾಹನಂ।
01209024c ತಂ ದೃಷ್ಟ್ವಾ ಪಾಂಡವೋ ರಾಜನ್ಗೋಕರ್ಣಮಭಿತೋಽಗಮತ್।।
ರಾಜನ್! ಅವಳಲ್ಲಿ ರಾಜ ಬಭ್ರುವಾಹನನು ಪುತ್ರನಾಗಿ ಜನಿಸಿದ್ದನು. ಅವನನ್ನು ನೋಡಿ ಪಾಂಡವನು ಗೋಕರ್ಣಕ್ಕೆ ಹೋದನು2.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ತೀರ್ಥಗ್ರಾಹವಿಮೋಚನೇ ನವಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ತೀರ್ಥಗ್ರಾಹವಿಮೋಚನ ಎನ್ನುವ ಇನ್ನೂರಾಒಂಭತ್ತನೆಯ ಅಧ್ಯಾಯವು.
-
ಸಾಧಾರಣವಾಗಿ ನೂರೆಂದರೆ ಎಷ್ಟು ನೂರು ಬೇಕಾದರೂ ಆಗಬಹುದು. ↩︎
-
ಮುಂದೆ ಅಶ್ವಮೇಧಿಕ ಪರ್ವದಲ್ಲಿ ಅರ್ಜುನನು ಚಿತ್ರಾಂಗದೆಯಲ್ಲಿ ಹುಟ್ಟಿದ ಬಭ್ರುವಾಹನನನ್ನು ಗುರಿತಿಸುವುದೇ ಇಲ್ಲ. ಮಗನನ್ನು ನೋಡಲು ಹೋಗಿದ್ದನೆಂದರೆ ಅವನಿಗೆ ಸ್ವಲ್ಪವಾದರೂ ನೆನಪಿರಬೇಕಾಗಿತ್ತು! ಕನ್ನಡ ಭಾರತ ದರ್ಶನದ ಸಂಪುಟದಲ್ಲಿ ಪಾರ್ಥನು ಚಿತ್ರವಾಹನನಿಗೆ ಹೇಳಿದ ಈ ಶ್ಲೋಕವಿದೆ: ಚಿತ್ರಾಂಗದಾಯಾಃ ಶುಲ್ಕಂ ತ್ವಂ ಗೃಹಾಣ ಬಭ್ರುವಾಹನಂ। ಅನೇನ ಚ ಭವಿಷ್ಯಾಮಿ ಋಣಾನ್ಮುಕ್ತೋ ನರಾಧಿಪ।। ಅರ್ಥಾತ್ - “ನರಾಧಿಪನೇ! ಚಿತ್ರಾಂಗದೆಗಾಗಿ ನಾನು ಕೊಡಬೇಕಾಗಿದ್ದ ಕನ್ಯಾಶುಲ್ಕರೂಪವಾಗಿ ಈ ಬಭ್ರುವಾಹನನನ್ನು ಸ್ವೀಕರಿಸು. ಇದರಿಂದ ನಾನು ಋಣಮುಕ್ತನಾಗುತ್ತೇನೆ.” ಈ ಸಂಪುಟದಲ್ಲಿ ಅರ್ಜುನನು ಚಿತ್ರಾಂಗದೆಗೆ ಇಂದಪ್ರಸ್ಥಕ್ಕೆ ಕರೆಯಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡುವ ವಿಷಯವೂ ಇದೆ. ↩︎