ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಅರ್ಜುನವನವಾಸ ಪರ್ವ
ಅಧ್ಯಾಯ 204
ಸಾರ
ತಿಲೋತ್ತಮೆಯು ಸುಂದೋಪಸುಂದರಿರುವಲ್ಲಿಗೆ ಬಂದುದು (1-10). ಅವಳನ್ನು ಪಡೆಯಲೋಸುಗ ಸಹೋದರ ಅಸುರರು ಪರಸ್ಪರರನ್ನು ಹೊಡೆದು ತೀರಿಕೊಂಡಿದುದು (11-20). ತಿಲೋತ್ತಮೆಗೆ ಬ್ರಹ್ಮನಿಂದ ವರ, ಸುಂದೋಪಸುಂದರ ಕಥೆಯ ಸಮಾಪ್ತಿ (21-26). ಪಾಂಡವರು ಅನ್ಯೋನ್ಯರಲ್ಲಿ ದ್ರೌಪದಿಯ ಕುರಿತಾಗಿ ಒಪ್ಪಂದ ಮಾಡಿಕೊಂಡಿದುದು (27-30).
01204001 ನಾರದ ಉವಾಚ।
01204001a ಜಿತ್ವಾ ತು ಪೃಥಿವೀಂ ದೈತ್ಯೌ ನಿಃಸಪತ್ನೌ ಗತವ್ಯಥೌ।
01204001c ಕೃತ್ವಾ ತ್ರೈಲೋಕ್ಯಮವ್ಯಗ್ರಂ ಕೃತಕೃತ್ಯೌ ಬಭೂವತುಃ।।
ನಾರದನು ಹೇಳಿದನು: “ಆ ದೈತ್ಯರೀರ್ವರು ಪೃಥ್ವಿಯನ್ನು ಜಯಿಸಿ, ಎದುರಾಳಿಗಳಿಲ್ಲದೇ, ನಿಶ್ಚಿಂತರಾಗಿ, ಮೂರೂ ಲೋಕಗಳನ್ನೂ ತಮ್ಮದಾಗಿಸಿಕೊಂಡು ಕೃತಕೃತ್ಯರಾಗಿದ್ದರು.
01204002a ದೇವಗಂಧರ್ವಯಕ್ಷಾಣಾಂ ನಾಗಪಾರ್ಥಿವರಕ್ಷಸಾಂ।
01204002c ಆದಾಯ ಸರ್ವರತ್ನಾನಿ ಪರಾಂ ತುಷ್ಟಿಮುಪಾಗತೌ।
ದೇವ-ಗಂಧರ್ವ-ಯಕ್ಷ-ನಾಗ-ಪಾರ್ಥಿವ-ರಾಕ್ಷಸರ ಸರ್ವ ರತ್ನಗಳನ್ನೂ ಪಡೆದು ಪರಾತುಷ್ಟರಾಗಿದ್ದರು.
01204003a ಯದಾ ನ ಪ್ರತಿಷೇದ್ಧಾರಸ್ತಯೋಃ ಸಂತೀಹ ಕೇ ಚನ।
01204003c ನಿರುದ್ಯೋಗೌ ತದಾ ಭೂತ್ವಾ ವಿಜಹ್ರಾತೇಽಮರಾವಿವ।।
01204004a ಸ್ತ್ರೀಭಿರ್ಮಾಲ್ಯೈಶ್ಚ ಗಂಧೈಶ್ಚ ಭಕ್ಷೈರ್ಭೋಜ್ಯೈಶ್ಚ ಪುಷ್ಕಲೈಃ।
01204004c ಪಾನೈಶ್ಚ ವಿವಿಧೈರ್ಹೃದ್ಯೈಃ ಪರಾಂ ಪ್ರೀತಿಮವಾಪತುಃ।।
ಪ್ರತಿಸ್ಪರ್ಧಿಗಳು ಯಾರೂ ಎಲ್ಲಿಯೂ ಉಳಿಯದೇ ಇಲ್ಲವಾದುದರಿಂದ ನಿರುದ್ಯೋಗಿಗಳಾದ ಅಮರರಂತೆ ಅವರು ಪುಷ್ಕಲ ಸ್ತ್ರೀಯರು, ಮಾಲೆಗಳು, ಗಂಧ, ಭಕ್ಷ-ಭೋಜ್ಯಗಳಿಂದ ವಿಹರಿಸತೊಡಗಿದರು.
01204005a ಅಂತಃಪುರೇ ವನೋದ್ಯಾನೇ ಪರ್ವತೋಪವನೇಷು ಚ।
01204005c ಯಥೇಪ್ಸಿತೇಷು ದೇಶೇಷು ವಿಜಹ್ರಾತೇಽಮರಾವಿವ।।
ಅಮರರಂತೆ ಅವರು ಅಂತಃಪುರದಲ್ಲಿ, ವನೋದ್ಯಾನಗಳಲ್ಲಿ, ಪರ್ವತ ಉಪವನಗಳಲ್ಲಿ ಮತ್ತು ಮನಬಂದ ಪ್ರದೇಶಗಳಲ್ಲಿ ವಿಹರಿಸಿದರು.
01204006a ತತಃ ಕದಾ ಚಿದ್ವಿಂಧ್ಯಸ್ಯ ಪೃಷ್ಠೇ ಸಮಶಿಲಾತಲೇ।
01204006c ಪುಷ್ಪಿತಾಗ್ರೇಷು ಶಾಲೇಷು ವಿಹಾರಮಭಿಜಗ್ಮತುಃ।।
ಒಮ್ಮೆ ಅವರು ವಿಂಧ್ಯದ ಹಿಂಭಾಗದಲ್ಲಿ ಸಮಶಿಲಾತಲದಲ್ಲಿ ಹೂಬಿಟ್ಟ ಎತ್ತರ ಶಾಲವೃಕ್ಷಗಳ ಮಧ್ಯೆ ವಿಹರಿಸುತ್ತಿದ್ದರು.
01204007a ದಿವ್ಯೇಷು ಸರ್ವಕಾಮೇಷು ಸಮಾನೀತೇಷು ತತ್ರ ತೌ।
01204007c ವರಾಸನೇಷು ಸಂಹೃಷ್ಟೌ ಸಹ ಸ್ತ್ರೀಭಿರ್ನಿಷೇದತುಃ।।
ಸರ್ವಕಾಮಗಳನ್ನೂ ಪೂರೈಸಬಲ್ಲ ವಸ್ತುಗಳನ್ನು ಅಲ್ಲಿಗೆ ಕೊಂಡೊಯ್ದಿದ್ದರು. ಸ್ತ್ರೀಯರೊಂದಿಗೆ ಅವರೀರ್ವರು ಸಂಹೃಷ್ಟರಾಗಿ ಶ್ರೇಷ್ಠ ಆಸನಗಳಲ್ಲಿ ಒರಗಿ ಕುಳಿತುಕೊಂಡಿದ್ದರು.
01204008a ತತೋ ವಾದಿತ್ರನೃತ್ತಾಭ್ಯಾಮುಪಾತಿಷ್ಠಂತ ತೌ ಸ್ತ್ರಿಯಃ।
01204008c ಗೀತೈಶ್ಚ ಸ್ತುತಿಸಮ್ಯುಕ್ತೈಃ ಪ್ರೀತ್ಯರ್ಥಮುಪಜಗ್ಮಿರೇ।।
ಅಲ್ಲಿ ಅವರನ್ನು ಸಂತೋಷಗೊಳಿಸಲು ಸ್ತ್ರೀಯರು ವಾದ್ಯ ನುಡಿಸುತ್ತಾ, ನೃತ್ಯ ಮಾಡುತ್ತಾ, ಸ್ತುತಿಸಂಯುಕ್ತ ಗೀತೆಗಳನ್ನು ಹಾಡುತ್ತಾ ನಿಂತಿದ್ದರು.
01204009a ತತಸ್ತಿಲೋತ್ತಮಾ ತತ್ರ ವನೇ ಪುಷ್ಪಾಣಿ ಚಿನ್ವತೀ।
01204009c ವೇಷಮಾಕ್ಷಿಪ್ತಮಾಧಾಯ ರಕ್ತೇನೈಕೇನ ವಾಸಸಾ।।
ಆಗ ಆ ವನದಲ್ಲಿ ತಿಲೋತ್ತಮೆಯು, ಕಾಮವನ್ನು ಹೆಚ್ಚಿಸುವ ಒಂದೇ ಒಂದು ಕೆಂಪು ವಸ್ತ್ರವನ್ನುಟ್ಟು, ಹೂಗಳನ್ನು ಕೊಯ್ಯುತ್ತಾ ಕಾಣಿಸಿಕೊಂಡಳು.
01204010a ನದೀತೀರೇಷು ಜಾತಾನ್ಸಾ ಕರ್ಣಿಕಾರಾನ್ವಿಚಿನ್ವತೀ।
01204010c ಶನೈರ್ಜಗಾಮ ತಂ ದೇಶಂ ಯತ್ರಾಸ್ತಾಂ ತೌ ಮಹಾಸುರೌ।।
ನದೀತೀರದಲ್ಲಿ ಹುಟ್ಟಿದ್ದ ಕರ್ಣಿಕಾರಗಳನ್ನು ಕೊಯ್ಯುತ್ತಾ ಅವಳು ನಿಧಾನವಾಗಿ ಆ ಮಹಾಸುರರು ಇದ್ದ ಸ್ಥಳಕ್ಕೆ ಬಂದಳು.
01204011a ತೌ ತು ಪೀತ್ವಾ ವರಂ ಪಾನಂ ಮದರಕ್ತಾಂತಲೋಚನೌ।
01204011c ದೃಷ್ಟ್ವೈವ ತಾಂ ವರಾರೋಹಾಂ ವ್ಯಥಿತೌ ಸಂಬಭೂವತುಃ।।
ಶ್ರೇಷ್ಠ ಮದಿರವನ್ನು ಕುಡಿದ ಮದೋನ್ಮತ್ತ ರಕ್ತಾಂತಲೋಚನರು ಆ ವರಾರೋಹೆಯನ್ನು ಕಂಡೊಡನೆಯೇ ವ್ಯಥಿತರಾದರು.
01204012a ತಾವುತ್ಪತ್ಯಾಸನಂ ಹಿತ್ವಾ ಜಗ್ಮತುರ್ಯತ್ರ ಸಾ ಸ್ಥಿತಾ।
01204012c ಉಭೌ ಚ ಕಾಮಸಮ್ಮತ್ತಾವುಭೌ ಪ್ರಾರ್ಥಯತಶ್ಚ ತಾಂ।।
ಕಾಮಸಮನ್ವಿತ ಅವರಿಬ್ಬರೂ ತಮ್ಮ ಆಸನಗಳಿಂದ ಜಿಗಿದೆದ್ದು ಅವಳಿದ್ದ ಕಡೆ ಹೋಗಿ ಅವಳನ್ನು ಯಾಚಿಸಿದರು.
01204013a ದಕ್ಷಿಣೇ ತಾಂ ಕರೇ ಸುಭ್ರೂಂ ಸುಂದೋ ಜಗ್ರಾಹ ಪಾಣಿನಾ।
01204013c ಉಪಸುಂದೋಽಪಿ ಜಗ್ರಾಹ ವಾಮೇ ಪಾಣೌ ತಿಲೋತ್ತಮಾಂ।।
ಸುಂದನು ಆ ಸುಭ್ರುವಿನ ಎಡಗೈಯನ್ನು ಹಿಡಿದನು ಮತ್ತು ಉಪಸುಂದನು ತಿಲೋತ್ತಮೆಯ ಬಲ ಕೈಯನ್ನು ಹಿಡಿದನು.
01204014a ವರಪ್ರದಾನಮತ್ತೌ ತಾವೌರಸೇನ ಬಲೇನ ಚ।
01204014c ಧನರತ್ನಮದಾಭ್ಯಾಂ ಚ ಸುರಾಪಾನಮದೇನ ಚ।।
01204015a ಸರ್ವೈರೇತೈರ್ಮದೈರ್ಮತ್ತಾವನ್ಯೋನ್ಯಂ ಭ್ರುಕುಟೀಕೃತೌ।
01204015 ತೌ ಕಟಾಕ್ಷೇಣ ದೈತ್ಯೇಂದ್ರಾವಾಕರ್ಷತಿ ಮುಹುರ್ಮುಹುಃ।।
01204015 ದಕ್ಷಿಣೇನ ಕಟಾಕ್ಷೇಣ ಸುಂದಂ ಜಗ್ರಾಹ ಕಾಮಿನೀ।
01204015 ವಾಮೇನೈವ ಕಟಾಕ್ಷೇಣ ಉಪಸುಂದಂ ಜಿಘೃಕ್ಷತೀ।।
01204015 ಗಂದಾಭರಣರೂಪೈಸ್ತೌ ವ್ಯಾಮೋಹಂ ಜಗ್ಮತುಸ್ತದಾ।
01204015c ಮದಕಾಮಸಮಾವಿಷ್ಟೌ ಪರಸ್ಪರಮಥೋಚತುಃ।।
ವರಪ್ರದಾನಮತ್ತರಾದ, ದೇಹಬಲದಿಂದ ಹಿಗ್ಗಿದ್ದ, ಕೂಡಿಟ್ಟ ಧನರತ್ನಗಳಿಂದ, ಸುರಾಪಾನಮದದಿಂದ, ಹೀಗೆ ಎಲ್ಲ ರೀತಿಗಳಲ್ಲಿ ಹುಚ್ಚಾದ ಅವರು ಅನ್ಯೋನ್ಯರನ್ನು ದುರುಗುಟ್ಟಿ ನೋಡಿದರು. ಆ ಮದಕಾಮಸಮಾವಿಷ್ಟರು ಪರಸ್ಪರರಲ್ಲಿ ಕೂಗಾಡಿದರು.
01204016a ಮಮ ಭಾರ್ಯಾ ತವ ಗುರುರಿತಿ ಸುಂದೋಽಭ್ಯಭಾಷತ।
01204016c ಮಮ ಭಾರ್ಯಾ ತವ ವಧೂರುಪಸುಂದೋಽಭ್ಯಭಾಷತ।।
“ನನ್ನ ಹೆಂಡತಿ ನಿನಗೆ ಹಿರಿಯವಳು!” ಎಂದು ಸುಂದನು ಹೇಳಿದನು. “ನನ್ನ ಹೆಂಡತಿ ನಿನಗೆ ಸೊಸೆ!” ಎಂದು ಉಪಸುಂದನು ಹೇಳಿದನು.
01204017a ನೈಷಾ ತವ ಮಮೈಷೇತಿ ತತ್ರ ತೌ ಮನ್ಯುರಾವಿಶತ್।
01204017 ತಸ್ಯಾ ರೂಪೇಣ ಸಮ್ಮತ್ತೌ ವಿಗತಸ್ನೇಹಸೌಹೃದೌ।।
01204017c ತಸ್ಯಾ ಹೇತೋರ್ಗದೇ ಭೀಮೇ ತಾವುಭಾವಪ್ಯಗೃಹ್ಣತಾಂ।।
ಸಿಟ್ಟಿನಿಂದ ಆವೇಶಗೊಂಡ ಅವರು “ನಿನ್ನವಳಲ್ಲ! ನನ್ನವಳು!” ಎಂದು ಅವಳ ಸಲುವಾಗಿ ಭಯಂಕರ ಗದೆಗಳನ್ನು ಎತ್ತಿಕೊಂಡರು.
01204018a ತೌ ಪ್ರಗೃಹ್ಯ ಗದೇ ಭೀಮೇ ತಸ್ಯಾಃ ಕಾಮೇನ ಮೋಹಿತೌ।
01204018c ಅಹಂ ಪೂರ್ವಮಹಂ ಪೂರ್ವಮಿತ್ಯನ್ಯೋನ್ಯಂ ನಿಜಘ್ನತುಃ।।
ಅವರವರ ಭಯಂಕರ ಗದೆಗಳನ್ನು ಹಿಡಿದು ಕಾಮಮೋಹಿತರಾದ ಅವರು ನಾನು ಮೊದಲು ತಾನು ಮೊದಲು ಎನ್ನುತ್ತಾ ಅನ್ಯೋನ್ಯರನ್ನು ಹೊಡೆದರು.
01204019a ತೌ ಗದಾಭಿಹತೌ ಭೀಮೌ ಪೇತತುರ್ಧರಣೀತಲೇ।
01204019c ರುಧಿರೇಣಾವಲಿಪ್ತಾಂಗೌ ದ್ವಾವಿವಾರ್ಕೌ ನಭಶ್ಚ್ಯುತೌ।।
ಗದೆಗಳಿಂದ ಹೊಡೆಯಲ್ಪಟ್ಟ ಆ ಭಯಂಕರರು ರಕ್ತಲಿಪ್ತಾಂಗರಾಗಿ ಎರಡು ಸೂರ್ಯಗಳು ನಭದಿಂದ ಬೀಳುವಂತೆ ಭೂಮಿಯ ಮೇಲೆ ಬಿದ್ದರು.
01204020a ತತಸ್ತಾ ವಿದ್ರುತಾ ನಾರ್ಯಃ ಸ ಚ ದೈತ್ಯಗಣಸ್ತದಾ।
01204020c ಪಾತಾಲಮಗಮತ್ಸರ್ವೋ ವಿಷಾದಭಯಕಂಪಿತಃ।।
ಆಗ ಅಲ್ಲಿದ್ದ ನಾರಿಯರು ಮತ್ತು ದೈತ್ಯಗಣ ಎಲ್ಲವೂ ವಿಷಾದಭಯಕಂಪಿತರಾಗಿ ಪಾತಾಲವನ್ನು ಸೇರಿದರು.
01204021a ತತಃ ಪಿತಾಮಹಸ್ತತ್ರ ಸಹ ದೇವೈರ್ಮಹರ್ಷಿಭಿಃ।
01204021c ಆಜಗಾಮ ವಿಶುದ್ಧಾತ್ಮಾ ಪೂಜಯಿಷ್ಯಂಸ್ತಿಲೋತ್ತಮಾಂ।।
ಆಗ ದೇವಮಹರ್ಷಿಗಳನ್ನೊಡಗೊಂಡು ವಿಶುದ್ಧಾತ್ಮ ಪಿತಾಮಹನು ಅಲ್ಲಿಗೆ ಬಂದು ತಿಲೋತ್ತಮೆಯನ್ನು ಸತ್ಕರಿಸಿದನು.
01204022a ವರೇಣ ಚಂದಿತಾ ಸಾ ತು ಬ್ರಹ್ಮಣಾ ಪ್ರೀತಿಮೇವ ಹ।
01204022c ವರಯಾಮಾಸ ತತ್ರೈನಾಂ ಪ್ರೀತಃ ಪ್ರಾಹ ಪಿತಾಮಹಃ।।
ಬ್ರಹ್ಮನು “ವರವನ್ನು ಕೇಳು!” ಎನ್ನಲು ಅವಳು ಬ್ರಹ್ಮನಿಂದ ಪ್ರೀತಿಯನ್ನೇ ವರವನ್ನಾಗಿ ಕೇಳಿದಳು. ಅವಳಿಂದ ಪ್ರೀತನಾದ ಪಿತಾಮಹನು ಹೇಳಿದನು:
01204023a ಆದಿತ್ಯಚರಿತಾಽಲ್ಲೋಕಾನ್ವಿಚರಿಷ್ಯಸಿ ಭಾಮಿನಿ।
01204023c ತೇಜಸಾ ಚ ಸುದೃಷ್ಟಾಂ ತ್ವಾಂ ನ ಕರಿಷ್ಯತಿ ಕಶ್ಚನ।।
“ಭಾಮಿನಿ! ಆದಿತ್ಯರಿಂದೊಡಗೂಡಿ ಲೋಕಗಳನ್ನು ಸಂಚರಿಸುತ್ತೀಯೆ! ನಿನ್ನ ತೇಜಸ್ಸಿನಿಂದಾಗಿ ನಿನ್ನನ್ನು ಯಾರೂ ಎಂದೂ ತುಂಬಾ ಹೊತ್ತು ನೋಡಲು ಶಕ್ಯರಾಗುವುದಿಲ್ಲ!”
01204024a ಏವಂ ತಸ್ಯೈ ವರಂ ದತ್ತ್ವಾ ಸರ್ವಲೋಕಪಿತಾಮಹಃ।
01204024c ಇಂದ್ರೇ ತ್ರೈಲೋಕ್ಯಮಾಧಾಯ ಬ್ರಹ್ಮಲೋಕಂ ಗತಃ ಪ್ರಭುಃ।।
ಅವಳಿಗೆ ಈ ರೀತಿ ವರವನ್ನಿತ್ತು ಸರ್ವಲೋಕಪಿತಾಮಹ ಪ್ರಭುವು ಇಂದ್ರನಿಗೆ ತ್ರೈಲೋಕ್ಯವನ್ನಿತ್ತು ಬ್ರಹ್ಮಲೋಕಕ್ಕೆ ಹೋದನು.
01204025a ಏವಂ ತೌ ಸಹಿತೌ ಭೂತ್ವಾ ಸರ್ವಾರ್ಥೇಷ್ವೇಕನಿಶ್ಚಯೌ।
01204025c ತಿಲೋತ್ತಮಾರ್ಥೇ ಸಂಕ್ರುದ್ಧಾವನ್ಯೋನ್ಯಮಭಿಜಘ್ನತುಃ।।
ಈ ರೀತಿ ಎಲ್ಲ ವಿಷಯಗಳಲ್ಲಿಯೂ ಒಟ್ಟಿಗೇ ಒಂದೇ ನಿಶ್ಚಯಗಳನ್ನಿಟ್ಟುಕೊಂಡಿದ್ದ ಆ ದಾನವರು ತಿಲೋತ್ತಮೆಗಾಗಿ ಸಂಕೃದ್ಧರಾಗಿ ಅನ್ಯೋನ್ಯರನ್ನು ಸಂಹರಿಸಿದರು.
01204026a ತಸ್ಮಾದ್ಬ್ರವೀಮಿ ವಃ ಸ್ನೇಹಾತ್ಸರ್ವಾನ್ಭರತಸತ್ತಮಾನ್।
01204026c ಯಥಾ ವೋ ನಾತ್ರ ಭೇದಃ ಸ್ಯಾತ್ಸರ್ವೇಷಾಂ ದ್ರೌಪದೀಕೃತೇ।
01204026e ತಥಾ ಕುರುತ ಭದ್ರಂ ವೋ ಮಮ ಚೇತ್ಪ್ರಿಯಮಿಚ್ಛಥ।।
ಭರತಸತ್ತಮರೆಲ್ಲರ ಮೇಲಿರುವ ನನ್ನ ಪ್ರೀತಿಯ ಕಾರಣದಿಂದಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ದ್ರೌಪದಿಯ ಕಾರಣದಿಂದಾಗಿ ನಿಮ್ಮೆಲ್ಲರಲ್ಲಿ ಭೇದವುಂಟಾಗದಿರಲಿ! ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಹಾಗೆಯೇ ಮಾಡಿರಿ. ನಿಮಗೆ ಮಂಗಲವಾಗಲಿ!””
01204027 ವೈಶಂಪಾಯನ ಉವಾಚ।
01204027a ಏವಮುಕ್ತಾ ಮಹಾತ್ಮಾನೋ ನಾರದೇನ ಮಹರ್ಷಿಣಾ।
01204027c ಸಮಯಂ ಚಕ್ರಿರೇ ರಾಜಂಸ್ತೇಽನ್ಯೋನ್ಯೇನ ಸಮಾಗತಾಃ।
01204027e ಸಮಕ್ಷಂ ತಸ್ಯ ದೇವರ್ಷೇರ್ನಾರದಸ್ಯಾಮಿತೌಜಸಃ।।
ವೈಶಂಪಾಯನನು ಹೇಳಿದನು: “ರಾಜನ್! ಮಹಾತ್ಮ ನಾರದ ಮಹರ್ಷಿಯು ಈ ರೀತಿ ಹೇಳಲು ಅವರು ಒಂದಾಗಿ ಆ ದೇವರ್ಷಿ ಅಮಿತತೇಜಸ್ವಿ ನಾರದನ ಸಮಕ್ಷಮದಲ್ಲಿ ಅನ್ಯೋನ್ಯರಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.
01204028a ದ್ರೌಪದ್ಯಾ ನಃ ಸಹಾಸೀನಮನ್ಯೋಽನ್ಯಂ ಯೋಽಭಿದರ್ಶಯೇತ್।
01204028c ಸ ನೋ ದ್ವಾದಶ ವರ್ಷಾಣಿ ಬ್ರಹ್ಮಚಾರೀ ವನೇ ವಸೇತ್।।
“ದ್ರೌಪದಿಯೊಡನಿರುವವನನ್ನು ಅನ್ಯ ಯಾರೂ ನೋಡಿದರೆ ಅವನು ಬ್ರಹ್ಮಚಾರಿಯಾಗಿ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಬೇಕು!19”
01204029a ಕೃತೇ ತು ಸಮಯೇ ತಸ್ಮಿನ್ಪಾಂಡವೈರ್ಧರ್ಮಚಾರಿಭಿಃ।
01204029c ನಾರದೋಽಪ್ಯಗಮತ್ಪ್ರೀತ ಇಷ್ಟಂ ದೇಶಂ ಮಹಾಮುನಿಃ।।
ಧರ್ಮಚಾರಿ ಪಾಂಡವರಲ್ಲಿ ಈ ಒಪ್ಪಂದ ಆಗುವಹಾಗೆ ಮಾಡಿ ಪರಮ ಪ್ರೀತ ಮಹಾಮುನಿ ನಾರದನು ಇಷ್ಟ ದೇಶಕ್ಕೆ ತೆರಳಿದನು.
01204030a ಏವಂ ತೈಃ ಸಮಯಃ ಪೂರ್ವಂ ಕೃತೋ ನಾರದಚೋದಿತೈಃ।
01204030c ನ ಚಾಭಿದ್ಯಂತ ತೇ ಸಾರ್ವೇ ತದಾನ್ಯೋನ್ಯೇನ ಭಾರತ।।
ಭಾರತ! ಹೀಗೆ ನಾರದನಿಂದ ಪ್ರಚೋದಿತರಾದ ಅವರು ಮೊದಲೇ ಅನ್ಯೋನ್ಯ ಒಪ್ಪಂದವನ್ನು ಮಾಡಿಕೊಂಡು ಯಾವುದೇ ರೀತಿಯ ಭೇದಗಳಿಲ್ಲದೇ ವಾಸಿಸುತ್ತಿದ್ದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ಚತುರಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ನಾಲ್ಕನೆಯ ಅಧ್ಯಾಯವು.