ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಅರ್ಜುನವನವಾಸ ಪರ್ವ
ಅಧ್ಯಾಯ 203
ಸಾರ
ದೇವ-ಋಷಿಗಣಗಳೆಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟಿದುದು (1-8). ಪಿತಾಮಹನ ಆದೇಶದಂತೆ ವಿಶ್ವಕರ್ಮನು ತಿಲೋತ್ತಮೆಯನ್ನು ಸೃಷ್ಟಿಸಿದುದು (9-17). ತಿಲೋತ್ತಮೆಯ ಸೌಂದರ್ಯವನ್ನು ನೋಡಲು ಶಿವನು ಚತುರ್ಮುಖನಾದುದು, ಇಂದ್ರನು ಸಹಸ್ರಾಕ್ಷನಾದುದು (18-30).
01203001 ನಾರದ ಉವಾಚ।
01203001a ತತೋ ದೇವರ್ಷಯಃ ಸರ್ವೇ ಸಿದ್ಧಾಶ್ಚ ಪರಮರ್ಷಯಃ।
01203001c ಜಗ್ಮುಸ್ತದಾ ಪರಾಮಾರ್ತಿಂ ದೃಷ್ಟ್ವಾ ತತ್ಕದನಂ ಮಹತ್।।
ನಾರದನು ಹೇಳಿದನು: “ಆಗ ದೇವರ್ಷಿಗಳು, ಸರ್ವ ಸಿದ್ಧರೂ, ಮತ್ತು ಪರಮರ್ಷಿಗಳೆಲ್ಲರೂ ಆ ಮಹಾ ಕದನವನ್ನು ನೋಡಿ ಬಹುದುಃಖಿತರಾದರು.
01203002a ತೇಽಭಿಜಗ್ಮುರ್ಜಿತಕ್ರೋಧಾ ಜಿತಾತ್ಮಾನೋ ಜಿತೇಂದ್ರಿಯಾಃ।
01203002c ಪಿತಾಮಹಸ್ಯ ಭವನಂ ಜಗತಃ ಕೃಪಯಾ ತದಾ।।
ಆ ಜಿತಕ್ರೋಧ, ಜಿತಾತ್ಮ, ಜಿತೇಂದ್ರಿಯರು ಜಗತ್ತಿನ ಮೇಲಿನ ಕೃಪೆಯಿಂದ ಭವನದ ಪಿತಾಮಹನಲ್ಲಿಗೆ ಹೋದರು.
01203003a ತತೋ ದದೃಶುರಾಸೀನಂ ಸಹ ದೇವೈಃ ಪಿತಾಮಹಂ।
01203003c ಸಿದ್ಧೈರ್ಬ್ರಹ್ಮರ್ಷಿಭಿಶ್ಚೈವ ಸಮಂತಾತ್ಪರಿವಾರಿತಂ।।
ಸಿದ್ಧ-ಬ್ರಹ್ಮರ್ಷಿಗಳಿಂದ ಪರಿವೃತರಾಗಿ ಅವರು ದೇವತೆಗಳೊಡನೆ ಕುಳಿತಿದ್ದ ಪಿತಾಮಹನನ್ನು ಕಂಡರು.
01203004a ತತ್ರ ದೇವೋ ಮಹಾದೇವಸ್ತತ್ರಾಗ್ನಿರ್ವಾಯುನಾ ಸಹ।
01203004c ಚಂದ್ರಾದಿತ್ಯೌ ಚ ಧರ್ಮಶ್ಚ ಪರಮೇಷ್ಠೀ ತಥಾ ಬುಧಃ।।
01203005a ವೈಖಾನಸಾ ವಾಲಖಿಲ್ಯಾ ವಾನಪ್ರಸ್ಥಾ ಮರೀಚಿಪಾಃ।
01203005c ಅಜಾಶ್ಚೈವಾವಿಮೂಢಾಶ್ಚ ತೇಜೋಗರ್ಭಾಸ್ತಪಸ್ವಿನಃ।
01203005e ಋಷಯಃ ಸರ್ವ ಏವೈತೇ ಪಿತಾಮಹಮುಪಾಸತೇ।।
ಅಲ್ಲಿ ದೇವ ಮಹಾದೇವ, ಅಗ್ನಿ-ವಾಯುಗಳ ಸಹಿತ ಚಂದ್ರಾದಿತ್ಯರು, ಧರ್ಮ, ಪರಮೇಷ್ಠಿ, ಬುಧ, ವೈಖಾನಸರು, ವಾಲಖಿಲ್ಯರು, ವಾನಪ್ರಸ್ಥರು, ಮರೀಚಿಗಳು, ಅಜರು, ಅವಿಮೂಢರು, ತೇಜೋಗರ್ಭ ತಪಸ್ವಿಗಳೂ, ಸರ್ವ ಋಷಿಗಳೂ ಪಿತಾಮಹನನ್ನು ಉಪಾಸಿಸುತ್ತಿದ್ದರು.
01203006a ತತೋಽಭಿಗಮ್ಯ ಸಹಿತಾಃ ಸರ್ವ ಏವ ಮಹರ್ಷಯಃ।
01203006c ಸುಂದೋಪಸುಂದಯೋಃ ಕರ್ಮ ಸರ್ವಮೇವ ಶಶಂಸಿರೇ।।
ಆಗ ಸರ್ವ ಮಹರ್ಷಿಗಳೂ ಒಟ್ಟಾಗಿ ಹೋಗಿ ಸುಂದೋಪಸುಂದರ ಸರ್ವ ಕರ್ಮಗಳನ್ನೂ ವರದಿಮಾಡಿದರು.
01203007a ಯಥಾಕೃತಂ ಯಥಾ ಚೈವ ಕೃತಂ ಯೇನ ಕ್ರಮೇಣ ಚ।
01203007c ನ್ಯವೇದಯಂಸ್ತತಃ ಸರ್ವಮಖಿಲೇನ ಪಿತಾಮಹೇ।।
ಯಾವ ಕ್ರಮದಲ್ಲಿ ಏನೆಲ್ಲ ಮಾಡಿದರೆನ್ನುವುದನ್ನು ಎಲ್ಲವನ್ನೂ ಪಿತಾಮಹನಿಗೆ ನಿವೇದಿಸಿದರು.
01203008a ತತೋ ದೇವಗಣಾಃ ಸರ್ವೇ ತೇ ಚೈವ ಪರಮರ್ಷಯಃ।
01203008c ತಮೇವಾರ್ಥಂ ಪುರಸ್ಕೃತ್ಯ ಪಿತಾಮಹಮಚೋದಯನ್।।
ಆಗ ದೇವಗಣ-ಪರಮ ಋಷಿ ಸರ್ವರೂ ಆ ವಿಷಯವನ್ನೇ ಮುಂದಿಟ್ಟುಕೊಂಡು ಪಿತಾಮಹನನ್ನು ಪ್ರೇರಿಸಿದರು.
01203009a ತತಃ ಪಿತಾಮಹಃ ಶ್ರುತ್ವಾ ಸರ್ವೇಷಾಂ ತದ್ವಚಸ್ತದಾ।
01203009c ಮುಹೂರ್ತಮಿವ ಸಂಚಿಂತ್ಯ ಕರ್ತವ್ಯಸ್ಯ ವಿನಿಶ್ಚಯಂ।।
ಅವರೆಲ್ಲರ ಆ ಮಾತುಗಳನ್ನು ಕೇಳಿದ ಪಿತಾಮಹನು ಒಂದು ಮುಹೂರ್ತ ಯೋಚಿಸಿ ಮುಂದಿನ ಕರ್ತವ್ಯದ ಕುರಿತು ನಿಶ್ಚಯಿಸಿದನು.
01203010a ತಯೋರ್ವಧಂ ಸಮುದ್ದಿಶ್ಯ ವಿಶ್ವಕರ್ಮಾಣಮಾಹ್ವಯತ್।
01203010c ದೃಷ್ಟ್ವಾ ಚ ವಿಶ್ವಕರ್ಮಾಣಂ ವ್ಯಾದಿದೇಶ ಪಿತಾಮಹಃ।
01203010e ಸೃಜ್ಯತಾಂ ಪ್ರಾರ್ಥನೀಯೇಹ ಪ್ರಮದೇತಿ ಮಹಾತಪಾಃ।।
ಅವರಿಬ್ಬರ ವಧೆಯನ್ನು ಕಲ್ಪಿಸಿ, ವಿಶ್ವಕರ್ಮನನ್ನು ಕರೆಯಿಸಿದನು. ವಿಶ್ವಕರ್ಮನನ್ನು ಕಂಡ ಪಿತಾಮಹನು: “ಮಹಾತಪಸ್ವಿಗಳೂ ಬೇಡುವಂಥಹ ಸುಂದರಿಯನ್ನು ಸೃಷ್ಟಿಸು!” ಎಂದು ಆದೇಶವನ್ನಿತ್ತನು.
01203011a ಪಿತಾಮಹಂ ನಮಸ್ಕೃತ್ಯ ತದ್ವಾಕ್ಯಮಭಿನಂದ್ಯ ಚ।
01203011c ನಿರ್ಮಮೇ ಯೋಷಿತಂ ದಿವ್ಯಾಂ ಚಿಂತಯಿತ್ವಾ ಪ್ರಯತ್ನತಃ।।
ಪಿತಾಮಹನನ್ನು ನಮಸ್ಕರಿಸಿ, ಅವನ ವಾಖ್ಯವನ್ನು ಅಭಿನಂದಿಸಿ ವಿಶ್ವಕರ್ಮನು ಪ್ರಯತ್ನಿಸಿ ಯೋಚಿಸಿ ಓರ್ವ ದಿವ್ಯ ಸ್ತ್ರೀಯನ್ನು ಸೃಷ್ಟಿಸಿದನು.
01203012a ತ್ರಿಷು ಲೋಕೇಷು ಯತ್ಕಿಂಚಿದ್ಭೂತಂ ಸ್ಥಾವರಜಂಗಮಂ।
01203012c ಸಮಾನಯದ್ದರ್ಶನೀಯಂ ತತ್ತದ್ಯತ್ನಾತ್ತತಸ್ತತಃ।।
ಮೂರು ಲೋಕಗಳಲ್ಲಿನ ಸ್ಥಾವರಜಂಗಮಗಳಲ್ಲಿ ಯಾವುದೇ ಸೌಂದರ್ಯವಿದ್ದರೂ ಅದನ್ನು ಅಲ್ಲಲ್ಲಿಂದ ತೆಗೆದುಕೊಂಡು ಒಟ್ಟುಗೂಡಿಸಿದನು15.
01203013a ಕೋಟಿಶಶ್ಚಾಪಿ ರತ್ನಾನಿ ತಸ್ಯಾ ಗಾತ್ರೇ ನ್ಯವೇಶಯತ್।
01203013c ತಾಂ ರತ್ನಸಂಘಾತಮಯೀಮಸೃಜದ್ದೇವರೂಪಿಣೀಂ।।
ಕೋಟಿಗಟ್ಟಲೆ ರತ್ನಗಳನ್ನು ಅವಳ ದೇಹದಲ್ಲಿ ಅಳವಡಿಸಿದನು. ಹೀಗೆ ಆ ರತ್ನಸಂಘಾತಮಯಿ ದೇವರೂಪಿಣಿಯನ್ನು ಸೃಷ್ಟಿಸಿದನು.
01203014a ಸಾ ಪ್ರಯತ್ನೇನ ಮಹತಾ ನಿರ್ಮಿತಾ ವಿಶ್ವಕರ್ಮಣಾ।
01203014c ತ್ರಿಷು ಲೋಕೇಷು ನಾರೀಣಾಂ ರೂಪೇಣಾಪ್ರತಿಮಾಭವತ್।।
ವಿಶ್ವಕರ್ಮನ ಮಹಾ ಪ್ರಯತ್ನದಿಂದ ನಿರ್ಮಿತಳಾದ ಅವಳು ರೂಪದಲ್ಲಿ ಮೂರು ಲೋಕದ ನಾರಿಯರನ್ನು ಮೀರಿಸಿದ್ದಳು.
01203015a ನ ತಸ್ಯಾಃ ಸೂಕ್ಷ್ಮಮಪ್ಯಸ್ತಿ ಯದ್ಗಾತ್ರೇ ರೂಪಸಂಪದಾ।
01203015c ನ ಯುಕ್ತಂ ಯತ್ರ ವಾ ದೃಷ್ಟಿರ್ನ ಸಜ್ಜತಿ ನಿರೀಕ್ಷತಾಂ।।
ಅವಳ ದೇಹದಲ್ಲಿ ರೂಪಸಂಪದವಾಗಿರದಿದ್ದ ಅಥವಾ ನೋಡುವವರ ದೃಷ್ಟಿಯು ಅಲ್ಲಿಯೇ ನಿಲ್ಲುವಂತೆ ಮಾಡದಿರುವ ಯಾವುದೊಂದು ಸೂಕ್ಷ್ಮಭಾಗವೂ ಇರಲಿಲ್ಲ.
01203016a ಸಾ ವಿಗ್ರಹವತೀವ ಶ್ರೀಃ ಕಾಂತರೂಪಾ ವಪುಷ್ಮತೀ।
01203016c ಜಹಾರ ಸರ್ವಭೂತಾನಾಂ ಚಕ್ಷೂಂಷಿ ಚ ಮನಾಂಸಿ ಚ।।
ವಿಗ್ರಹದಂದಿರುವ ಆ ಕಾಂತರೂಪಿಣಿ, ಮಪುಷ್ಮತೀ ಶ್ರೀಯು ಸರ್ವಭೂತಗಳ ಕಣ್ಮನಗಳನ್ನು ಸೆಳೆಯುತ್ತಿದ್ದಳು.
01203017a ತಿಲಂ ತಿಲಂ ಸಮಾನೀಯ ರತ್ನಾನಾಂ ಯದ್ವಿನಿರ್ಮಿತಾ।
01203017c ತಿಲೋತ್ತಮೇತ್ಯತಸ್ತಸ್ಯಾ ನಾಮ ಚಕ್ರೇ ಪಿತಾಮಹಃ16।।
ಸಣ್ಣ ಸಣ್ಣ ರತ್ನಗಳನ್ನು ಒಟ್ಟುಗೂಡಿಸಿ ರತ್ನಗಳಿಂದಲೇ ನಿರ್ಮಿತ ಅವಳಿಗೆ ಪಿತಾಮಹನು ತಿಲೋತ್ತಮೆಯೆಂಬ ಹೆಸರನ್ನಿಟ್ಟನು.
01203018 ಪಿತಾಮಹ ಉವಾಚ।
01203018a ಗಚ್ಛ ಸುಂದೋಪಸುಂದಾಭ್ಯಾಮಸುರಾಭ್ಯಾಂ ತಿಲೋತ್ತಮೇ।
01203018c ಪ್ರಾರ್ಥನೀಯೇನ ರೂಪೇಣ ಕುರು ಭದ್ರೇ ಪ್ರಲೋಭನಂ।।
ಪಿತಾಮಹನು ಹೇಳಿದನು: “ತಿಲೋತ್ತಮೇ! ಅಸುರ ಸುಂದೋಪಸುಂದರ ಬಳಿ ಹೋಗು. ಭದ್ರೇ! ನಿನ್ನ ಈ ಪ್ರಾರ್ಥನೀಯ ರೂಪದಿಂದ ಅವರನ್ನು ಪ್ರಲೋಭಿಸು.
01203019a ತ್ವತ್ಕೃತೇ ದರ್ಶನಾದೇವ ರೂಪಸಂಪತ್ಕೃತೇನ ವೈ।
01203019c ವಿರೋಧಃ ಸ್ಯಾದ್ಯಥಾ ತಾಭ್ಯಾಮನ್ಯೋನ್ಯೇನ ತಥಾ ಕುರು।।
ರೂಪಸಂಪತ್ತಿನ ನಿನ್ನನ್ನು ನೋಡಿದ ಕೂಡಲೇ ಅವರಲ್ಲಿ ಅನ್ಯೋನ್ಯ ವಿರೋಧವುಂಟಾಗುವಂತೆ ಮಾಡು.””
01203020 ನಾರದ ಉವಾಚ।
01203020a ಸಾ ತಥೇತಿ ಪ್ರತಿಜ್ಞಾಯ ನಮಸ್ಕೃತ್ಯ ಪಿತಾಮಹಂ।
01203020c ಚಕಾರ ಮಂಡಲಂ ತತ್ರ ವಿಬುಧಾನಾಂ ಪ್ರದಕ್ಷಿಣಂ।।
ನಾರದನು ಹೇಳಿದನು: “ಹಾಗೆಯೇ ಆಗಲೆಂದು ಪ್ರತಿಜ್ಞಾಪಿಸಿ ಅವಳು ಪಿತಾಮಹನನ್ನು ಸಮಸ್ಕರಿಸಿ ಅಲ್ಲಿದ್ದ ವಿಭುಧ ಮಂಡಲಕ್ಕೆ ಪ್ರದಕ್ಷಿಣೆ ಮಾಡಿದಳು.
01203021a ಪ್ರಾಙ್ಮುಖೋ ಭಗವಾನಾಸ್ತೇ ದಕ್ಷಿಣೇನ ಮಹೇಶ್ವರಃ।
01203021c ದೇವಾಶ್ಚೈವೋತ್ತರೇಣಾಸನ್ಸರ್ವತಸ್ತ್ವೃಷಯೋಽಭವನ್।।
ಭಗವಾನನು ಪೂರ್ವಾಭಿಮುಖನಾಗಿ ಕುಳಿತಿದ್ದನು. ದಕ್ಷಿಣದಲ್ಲಿ ಮಹೇಶ್ವರನಿದ್ದನು, ಉತ್ತರದಲ್ಲಿ ದೇವತೆಗಳು ಕುಳಿತಿದ್ದರು ಮತ್ತು ಋಷಿಗಳು ಸರ್ವತೋಮುಖ ಕುಳಿತಿದ್ದರು.
01203022a ಕುರ್ವಂತ್ಯಾ ತು ತಯಾ ತತ್ರ ಮಂಡಲಂ ತತ್ಪ್ರದಕ್ಷಿಣಂ।
01203022c ಇಂದ್ರಃ ಸ್ಥಾಣುಶ್ಚ ಭಗವಾನ್ಧೈರ್ಯೇಣ ಪ್ರತ್ಯವಸ್ಥಿತೌ।।
ಅವಳು ಆ ಮಂಡಲವನ್ನು ಪ್ರದಕ್ಷಿಣೆ ಮಾಡುತ್ತಿರಲು ಇಂದ್ರ ಮತ್ತು ಭಗವಾನ್ ಸ್ಥಾಣುವು ಅಲುಗಾಡದೆ ಸ್ಥಿರವಾಗಿ ಕುಳಿತಿದ್ದರು.
01203023a ದ್ರಷ್ಟುಕಾಮಸ್ಯ ಚಾತ್ಯರ್ಥಂ ಗತಾಯಾಃ ಪಾರ್ಶ್ವತಸ್ತದಾ।
01203023c ಅನ್ಯದಂಚಿತಪಕ್ಷ್ಮಾಂತಂ ದಕ್ಷಿಣಂ ನಿಃಸೃತಂ ಮುಖಂ।।
ಪಕ್ಕದಲ್ಲಿಯೇ ಹೋಗುತ್ತಿರುವ ಅವಳನ್ನು ನೋಡುವ ಆಸೆಯಿಂದ ಅವನ ದಕ್ಷಿಣಭಾಗದಲ್ಲಿ ಇನ್ನೊಂದು ಮುಖವು ಮೂಡಿತು.
01203024a ಪೃಷ್ಠತಃ ಪರಿವರ್ತಂತ್ಯಾಃ ಪಶ್ಚಿಮಂ ನಿಃಸೃತಂ ಮುಖಂ।
01203024c ಗತಾಯಾಶ್ಚೋತ್ತರಂ ಪಾರ್ಶ್ವಮುತ್ತರಂ ನಿಃಸೃತಂ ಮುಖಂ।।
ಅವಳು ಹಿಂದೆ ಹಾಯುವಾಗ ಅವನ ಪಶ್ಚಿಮ ಭಾಗದಲ್ಲಿ ಇನ್ನೊಂದು ಮುಖವು ಹೊರಮೂಡಿತು. ಅವಳು ಉತ್ತರದ ಕಡೆ ಬರಲು ಅಲ್ಲಿಯೂ ಒಂದು ಮುಖವು ಮೂಡಿತು17.
01203025a ಮಹೇಂದ್ರಸ್ಯಾಪಿ ನೇತ್ರಾಣಾಂ ಪಾರ್ಶ್ವತಃ ಪೃಷ್ಠತೋಽಗ್ರತಃ।
01203025c ರಕ್ತಾಂತಾನಾಂ ವಿಶಾಲಾನಾಂ ಸಹಸ್ರಂ ಸರ್ವತೋಽಭವತ್।।
ಮಹೇಂದ್ರನಿಗೆ ಕೂಡ ಪಕ್ಕದಲ್ಲಿ, ಹಿಂದೆ, ಮತ್ತು ಮುಂದೆ ಎಲ್ಲ ಕಡೆಯಲ್ಲಿ ಸಹಸ್ರಾರು ರಕ್ತಾಂತ ವಿಶಾಲ ಕಣ್ಣುಗಳು ಉದ್ಭವಿಸಿದವು.
01203026a ಏವಂ ಚತುರ್ಮುಖಃ ಸ್ಥಾಣುರ್ಮಹಾದೇವೋಽಭವತ್ಪುರಾ।
01203026c ತಥಾ ಸಹಸ್ರನೇತ್ರಶ್ಚ ಬಭೂವ ಬಲಸೂದನಃ।।
ಹೀಗೆ ಹಿಂದೆ ಮಹಾದೇವ ಸ್ಥಾಣುವು ಚತುರ್ಮುಖನಾದನು. ಹಾಗೆಯೇ ಬಲಸೂದನನು ಸಹಸ್ರನೇತ್ರನಾದನು18.
01203027a ತಥಾ ದೇವನಿಕಾಯಾನಾಮೃಷೀಣಾಂ ಚೈವ ಸರ್ವಶಃ।
01203027c ಮುಖಾನ್ಯಭಿಪ್ರವರ್ತಂತೇ ಯೇನ ಯಾತಿ ತಿಲೋತ್ತಮಾ।।
ಹಾಗೆ ತಿಲೋತ್ತಮೆಯು ಹೋದಕಡೆಗೆಲ್ಲಾ ದೇವ-ಋಷಿಗಳ ಮುಖಗಳು ತಿರುಗುತ್ತಿದ್ದವು.
01203028a ತಸ್ಯಾ ಗಾತ್ರೇ ನಿಪತಿತಾ ತೇಷಾಂ ದೃಷ್ಟಿರ್ಮಹಾತ್ಮನಾಂ।
01203028c ಸರ್ವೇಷಾಮೇವ ಭೂಯಿಷ್ಠಮೃತೇ ದೇವಂ ಪಿತಾಮಹಂ।।
ಅವಳ ದೇಹದ ಮೇಲೆ ಬಿದ್ದಿದ್ದ - ದೇವ ಪಿತಾಮಹನನ್ನು ಬಿಟ್ಟು - ಉಳಿದ ಎಲ್ಲ ಮಹಾತ್ಮರ ದೃಷ್ಟಿಗಳು ಅಲ್ಲಿಯೇ ನೆಟ್ಟುಹೋದವು.
01203029a ಗಚ್ಛಂತ್ಯಾಸ್ತು ತದಾ ದೇವಾಃ ಸರ್ವೇ ಚ ಪರಮರ್ಷಯಃ।
01203029c ಕೃತಮಿತ್ಯೇವ ತತ್ಕಾರ್ಯಂ ಮೇನಿರೇ ರೂಪಸಂಪದಾ।।
ಅವಳು ಹೋಗುತ್ತಿರುವಾಗ ಅಲ್ಲಿರುವ ಸರ್ವ ದೇವತೆಗಳೂ ಪರಮ ಋಷಿಗಳೂ “ಅವಳ ರೂಪಸಂಪತ್ತಿನಿಂದ ನಡೆಯ ಬೇಕಾದ ಕಾರ್ಯವು ಆಗಿಯೇ ಆಗುತ್ತದೆ!” ಎಂದು ಭಾವಿಸಿದರು.
01203030a ತಿಲೋತ್ತಮಾಯಾಂ ತು ತದಾ ಗತಾಯಾಂ ಲೋಕಭಾವನಃ।
01203030c ಸರ್ವಾನ್ವಿಸರ್ಜಯಾಮಾಸ ದೇವಾನೃಷಿಗಣಾಂಶ್ಚ ತಾನ್।।
ತಿಲೋತ್ತಮೆಯು ಹೊರಟು ಹೋದ ನಂತರ ಲೋಕ ಭಾವನನು ಸರ್ವ ದೇವ ಋಷಿಗಣಗಳನ್ನು ವಿಸರ್ಜಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ತ್ರ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ಮೂರನೆಯ ಅಧ್ಯಾಯವು.