ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಅರ್ಜುನವನವಾಸ ಪರ್ವ
ಅಧ್ಯಾಯ 202
ಸಾರ
ಸುಂದೋಪಸುಂದರು ತ್ರೈಲೋಕಗಳನ್ನೂ ಗೆದ್ದು, ತಪಸ್ಸು-ಅಗ್ನಿಕಾರ್ಯಗಳನ್ನು ನಿಲ್ಲಿಸಿದ್ದುದು (1-27).
01202001 ನಾರದ ಉವಾಚ।
01202001a ಉತ್ಸವೇ ವೃತ್ತಮಾತ್ರೇ ತು ತ್ರೈಲೋಕ್ಯಾಕಾಂಕ್ಷಿಣಾವುಭೌ।
01202001c ಮಂತ್ರಯಿತ್ವಾ ತತಃ ಸೇನಾಂ ತಾವಾಜ್ಞಾಪಯತಾಂ ತದಾ।।
ನಾರದನು ಹೇಳಿದನು: “ಉತ್ಸವಗಳು ನಡೆಯುತ್ತಿರುವಾಗ ತ್ರೈಲೋಕ್ಯದ ಆಕಾಂಕ್ಷಿಗಳಾದ ಆ ಈರ್ವರು ಸಮಾಲೋಚನೆ ನಡೆಸಿ ತಮ್ಮ ಸೇನೆಗೆ ಆಜ್ಞೆಯಿತ್ತರು.
01202002a ಸುಹೃದ್ಭಿರಭ್ಯನುಜ್ಞಾತೌ ದೈತ್ಯವೃದ್ಧೈಶ್ಚ ಮಂತ್ರಿಭಿಃ।
01202002c ಕೃತ್ವಾ ಪ್ರಾಸ್ಥಾನಿಕಂ ರಾತ್ರೌ ಮಘಾಸು ಯಯತುಸ್ತದಾ।।
01202003a ಗದಾಪಟ್ಟಿಶಧಾರಿಣ್ಯಾ ಶೂಲಮುದ್ಗರಹಸ್ತಯಾ।
01202003c ಪ್ರಸ್ಥಿತೌ ಸಹಧರ್ಮಿಣ್ಯಾ ಮಹತ್ಯಾ ದೈತ್ಯಸೇನಯಾ।
ಅವರ ಸುಹೃದಯರು, ದೈತ್ಯ ವೃದ್ಧರು ಮತ್ತು ಮಂತ್ರಿಗಳು ಅವರಿಗೆ ಅನುಜ್ಞೆಯನ್ನು ನೀಡಲು ಪ್ರಾಸ್ಥಾನಿಕವನ್ನು ಪೂರೈಸಿ ಮಘಾನಕ್ಷತ್ರದ ರಾತ್ರಿಯಲ್ಲಿ ಹೊರಟರು13. ಗದೆ, ಪಟ್ಟಿಶಗಳನ್ನು ಹಿಡಿದು ಶೂಲಮುದ್ಗರಗಳನ್ನೆತ್ತಿ ಸಹಧರ್ಮಿ14 ಮಹಾ ದೈತ್ಯಸೇನೆಯೊಂದಿಗೆ ನಡೆದರು.
01202004a ಮಂಗಲೈಃ ಸ್ತುತಿಭಿಶ್ಚಾಪಿ ವಿಜಯಪ್ರತಿಸಂಹಿತೈಃ।
01202004c ಚಾರಣೈಃ ಸ್ತೂಯಮಾನೌ ತು ಜಗ್ಮತುಃ ಪರಯಾ ಮುದಾ।।
ಚಾರಣರು ಮಂಗಲಸ್ತುತಿಗಳನ್ನು, ವಿಜಯಪ್ರತಿಸಂಹಿತಗಳನ್ನು ಸ್ತುತಿಸುತ್ತಿರಲು ಈರ್ವರೂ ಪರಮ ಸಂತೋಷದಿಂದ ಹೊರಟರು.
01202005a ತಾವಂತರಿಕ್ಷಮುತ್ಪತ್ಯ ದೈತ್ಯೌ ಕಾಮಗಮಾವುಭೌ।
01202005c ದೇವಾನಾಮೇವ ಭವನಂ ಜಗ್ಮತುರ್ಯುದ್ಧದುರ್ಮದೌ।।
ಯುದ್ಧದ ಮದದಲ್ಲಿದ್ದ ಕಾಮಗಾಮಿ ಆ ಇಬ್ಬರು ದೈತ್ಯರು ಅಂತರಿಕ್ಷವನ್ನೇರಿ ದೇವತೆಗಳ ಭವನಕ್ಕೆ ಧಾಳಿಯಿಟ್ಟರು.
01202006a ತಯೋರಾಗಮನಂ ಜ್ಞಾತ್ವಾ ವರದಾನಂ ಚ ತತ್ಪ್ರಭೋಃ।
01202006c ಹಿತ್ವಾ ತ್ರಿವಿಷ್ಟಪಂ ಜಗ್ಮುರ್ಬ್ರಹ್ಮಲೋಕಂ ತತಃ ಸುರಾಃ।।
ಅವರ ಆಗಮನವನ್ನು ಮತ್ತು ಪ್ರಭುವು ಅವರಿಗಿತ್ತ ವರವನ್ನು ತಿಳಿದಿದ್ದ ಸುರರು ಸ್ವರ್ಗವನ್ನು ಬಿಟ್ಟು ಬ್ರಹ್ಮಲೋಕವನ್ನು ಸೇರಿದರು.
01202007a ತಾವಿಂದ್ರಲೋಕಂ ನಿರ್ಜಿತ್ಯ ಯಕ್ಷರಕ್ಷೋಗಣಾಂಸ್ತಥಾ।
01202007c ಖೇಚರಾಣ್ಯಪಿ ಭೂತಾನಿ ಜಿಗ್ಯತುಸ್ತೀವ್ರವಿಕ್ರಮೌ।।
ಆ ತೀವ್ರವಿಕ್ರಮಿಗಳು ಇಂದ್ರಲೋಕವನ್ನು ಜಯಿಸಿ ಯಕ್ಷ-ರಕ್ಷಗಣಗಳನ್ನೂ ಖೇಚರಗಣಗಳನ್ನು ಭೂತಗಳನ್ನು ಜಯಿಸಿದರು.
01202008a ಅಂತರ್ಭೂಮಿಗತಾನ್ನಾಗಾಂಜಿತ್ವಾ ತೌ ಚ ಮಹಾಸುರೌ।
01202008c ಸಮುದ್ರವಾಸಿನಃ ಸರ್ವಾನ್ಮ್ಲೇಚ್ಛಜಾತೀನ್ವಿಜಿಗ್ಯತುಃ।।
ಅಂತರ್ಭೂಮಿಗೆ ಹೋಗಿ ನಾಗಗಳನ್ನು ಗೆದ್ದು ಆ ಮಹಾಸುರರು ಸರ್ವ ಸಮುದ್ರವಾಸಿಗಳನ್ನೂ ಮ್ಲೇಚ್ಛಜಾತಿಯವರನ್ನೂ ಗೆದ್ದರು.
01202009a ತತಃ ಸರ್ವಾಂ ಮಹೀಂ ಜೇತುಮಾರಬ್ಧಾವುಗ್ರಶಾಸನೌ।
01202009c ಸೈನಿಕಾಂಶ್ಚ ಸಮಾಹೂಯ ಸುತೀಕ್ಷ್ಣಾಂ ವಾಚಮೂಚತುಃ।।
ಆ ಇಬ್ಬರು ಉಗ್ರಶಾಸಕರು ಸರ್ವ ಮಹಿಯನ್ನೂ ಗೆಲ್ಲಲು ತೊಡಗಿ ಸೈನಿಕರನ್ನು ಒಟ್ಟುಗೂಡಿಸಿ ಈ ಸುತೀಕ್ಷ್ಣ ಮಾತುಗಳನ್ನಾಡಿದರು:
01202010a ರಾಜರ್ಷಯೋ ಮಹಾಯಜ್ಞೈರ್ಹವ್ಯಕವ್ಯೈರ್ದ್ವಿಜಾತಯಃ।
01202010c ತೇಜೋ ಬಲಂ ಚ ದೇವಾನಾಂ ವರ್ಧಯಂತಿ ಶ್ರಿಯಂ ತಥಾ।।
“ರಾಜರ್ಷಿಗಳು ಮತ್ತು ದ್ವಿಜರು ಮಹಾಯಜ್ಞ ಮತ್ತು ಹವ್ಯಕವ್ಯಗಳಿಂದ ದೇವತೆಗಳ ಬಲ ಮತ್ತು ಶ್ರಿಯನ್ನು ವೃದ್ಧಿಸುತ್ತಾರೆ.
01202011a ತೇಷಾಮೇವಂ ಪ್ರವೃದ್ಧಾನಾಂ ಸರ್ವೇಷಾಮಸುರದ್ವಿಷಾಂ।
01202011c ಸಂಭೂಯ ಸರ್ವೈರಸ್ಮಾಭಿಃ ಕಾರ್ಯಃ ಸರ್ವಾತ್ಮನಾ ವಧಃ।।
ಅಸುರರ ವೈರಿಗಳಾದ ದೇವತೆಗಳೆಲ್ಲರಿಗೆ ಇವರೇ ತೇಜೋಬಲವನ್ನು ಹೆಚ್ಚಿಸುತ್ತಿರುವುದರಿಂದ ಅವರೂ ನಮಗೆ ಶತ್ರುಗಳಾಗುತ್ತಾರೆ. ದೇವತೆಗಳ ತೇಜೋಬಲಗಳನ್ನು ನೀಡುವವರನ್ನು ತೀರಿಸಿಬಿಟ್ಟರೆ ದೇವತೆಗಳೂ ಶಕ್ತಿ ಹೀನರಾಗುವರು.”
01202012a ಏವಂ ಸರ್ವಾನ್ಸಮಾದಿಶ್ಯ ಪೂರ್ವತೀರೇ ಮಹೋದಧೇಃ।
01202012c ಕ್ರೂರಾಂ ಮತಿಂ ಸಮಾಸ್ಥಾಯ ಜಗ್ಮತುಃ ಸರ್ವತೋಮುಖಂ।।
ಈ ರೀತಿ ಮಹೋದಧಿಯ ಪೂರ್ವತೀರದಲ್ಲಿ ಸರ್ವರಿಗೂ ಆದೇಶವನ್ನಿತ್ತು ಕ್ರೂರಮತಿಯನ್ನು ತಳೆದ ಅವರು ಸರ್ವತೋಮುಖವಾಗಿ ಹೊರಟರು.
01202013a ಯಜ್ಞೈರ್ಯಜಂತೇ ಯೇ ಕೇ ಚಿದ್ಯಾಜಯಂತಿ ಚ ಯೇ ದ್ವಿಜಾಃ।
01202013c ತಾನ್ ಸರ್ವಾನ್ಪ್ರಸಭಂ ದೃಷ್ಟ್ವಾ ಬಲಿನೌ ಜಘ್ನತುಸ್ತದಾ।
ಆ ಬಲಿಗಳಿಬ್ಬರೂ ಯಾರು ಯಾರು ಯಜ್ಞಗಳನ್ನು ಮಾಡುತ್ತಿದ್ದರೋ ಮತ್ತು ಯಾವ ಯಾವ ದ್ವಿಜರು ಯಜ್ಞಗಳನ್ನು ಮಾಡಿಸುತ್ತಿದ್ದರೋ ಆ ಎಲ್ಲರನ್ನೂ ಹುಡುಕಿ ಬಲಾತ್ಕಾರವಾಗಿ ಸಂಹರಿಸಿದರು.
01202014a ಆಶ್ರಮೇಷ್ವಗ್ನಿಹೋತ್ರಾಣಿ ಋಷೀಣಾಂ ಭಾವಿತಾತ್ಮನಾಂ।
01202014c ಗೃಹೀತ್ವಾ ಪ್ರಕ್ಷಿಪಂತ್ಯಪ್ಸು ವಿಶ್ರಬ್ಧಾಃ ಸೈನಿಕಾಸ್ತಯೋಃ।।
ಅವರ ನಿರ್ಭೀತ ಸೈನಿಕರು ಆಶ್ರಮಗಳಲ್ಲಿ ಭಾವಿತಾತ್ಮ ಋಷಿಗಳ ಅಗ್ನಿಹೋತ್ರಗಳನ್ನು ತೆಗೆದು ನೀರಿನಲ್ಲಿ ಎಸೆದರು.
01202015a ತಪೋಧನೈಶ್ಚ ಯೇ ಶಾಪಾಃ ಕ್ರುದ್ಧೈರುಕ್ತಾ ಮಹಾತ್ಮಭಿಃ।
01202015c ನಾಕ್ರಾಮಂತಿ ತಯೋಸ್ತೇಽಪಿ ವರದಾನೇನ ಜೃಂಭತೋಃ।।
ಮಹಾತ್ಮ ತಪೋಧನರು ಕ್ರುದ್ಧರಾಗಿ ನೀಡಿದ ಶಾಪಗಳೂ ಕೂಡ ವರದಾನದಿಂದ ಮೆರೆಯುತ್ತಿದ್ದ ಅವರನ್ನು ಮುಟ್ಟಲಿಲ್ಲ.
01202016a ನಾಕ್ರಾಮಂತಿ ಯದಾ ಶಾಪಾ ಬಾಣಾ ಮುಕ್ತಾಃ ಶಿಲಾಸ್ವಿವ।
01202016c ನಿಯಮಾಂಸ್ತದಾ ಪರಿತ್ಯಜ್ಯ ವ್ಯದ್ರವಂತ ದ್ವಿಜಾತಯಃ।।
ಶಿಲೆಗಳ ಮೇಲೆ ಬಿಟ್ಟ ಬಾಣಗಳು ಹೇಗೋ ಹಾಗೆ ಶಾಪಗಳು ಅವರನ್ನು ಮುಟ್ಟದಿರಲು ದ್ವಿಜರು ತಮ್ಮ ತಮ್ಮ ವ್ರತ ನಿಯಮಗಳನ್ನು ಪರಿತ್ಯಜಿಸಿ ಓಡಿ ಹೋದರು.
01202017a ಪೃಥಿವ್ಯಾಂ ಯೇ ತಪಃಸಿದ್ಧಾ ದಾಂತಾಃ ಶಮಪರಾಯಣಾಃ।
01202017c ತಯೋರ್ಭಯಾದ್ದುದ್ರುವುಸ್ತೇ ವೈನತೇಯಾದಿವೋರಗಾಃ।।
ವೈನತೇಯನ ಭಯದಿಂದ ಉರಗಗಳು ಓಡುವಂತೆ ಅವರಿಬ್ಬರ ಭಯದಿಂದ ಪೃಥ್ವಿಯ ಎಲ್ಲ ತಪಃಸಿದ್ಧರೂ, ಜಿತೇಂದ್ರಿಯರೂ, ಶಮಪರಾಯಣರೂ ಓಡಿಹೋದರು.
01202018a ಮಥಿತೈರಾಶ್ರಮೈರ್ಭಗ್ನೈರ್ವಿಕೀರ್ಣಕಲಶಸ್ರುವೈಃ।
01202018c ಶೂನ್ಯಮಾಸೀಜ್ಜಗತ್ಸರ್ವಂ ಕಾಲೇನೇವ ಹತಂ ಯಥಾ।।
ಹಾಳುಬಿದ್ದಿದ್ದ ಆಶ್ರಮಗಳು ಮತ್ತು ಅಲ್ಲಲ್ಲಿ ಹರಡಿ ಬಿದ್ದಿದ್ದ ಕಲಶ-ಸಟ್ಟುಗಗಳಿಂದ ಜಗತ್ತೆಲ್ಲವೂ ಕಾಲನಿಂದ ಹತವಾದವೋ ಎಂಬಂತೆ ಬರಿದಾಗಿ ತೋರುತ್ತಿತ್ತು.
01202019a ರಾಜರ್ಷಿಭಿರದೃಶ್ಯದ್ಭಿರೃಷಿಭಿಶ್ಚ ಮಹಾಸುರೌ।
01202019c ಉಭೌ ವಿನಿಶ್ಚಯಂ ಕೃತ್ವಾ ವಿಕುರ್ವಾತೇ ವಧೈಷಿಣೌ।।
ರಾಜರ್ಷಿ ಮತ್ತು ಋಷಿಗಳು ಅದೃಶ್ಯರಾಗಲು ಅವರನ್ನು ವಧಿಸಲು ನಿಶ್ಚಯಿಸಿದ ಆ ಈರ್ವರು ಮಹಾಸುರರೂ ಬೇರೆ ಬೇರೆ ರೂಪಗಳನ್ನು ಧರಿಸಿದರು.
01202020a ಪ್ರಭಿನ್ನಕರಟೌ ಮತ್ತೌ ಭೂತ್ವಾ ಕುಂಜರರೂಪಿಣೌ।
01202020c ಸಂಲೀನಾನಪಿ ದುರ್ಗೇಷು ನಿನ್ಯತುರ್ಯಮಸಾದನಂ।।
ಮದಜಲ ಸೋರುತ್ತಿರುವ ಕುಂಭಸ್ಥಲದ ಮತ್ತಗಜಗಳ ರೂಪವನ್ನು ತಾಳಿ ದುರ್ಗಮ ಪದೇಶಗಳಲ್ಲಿ ಅಡಗಿಕೊಂಡಿದ್ದವರನ್ನು ಯಮಾಲಯಕ್ಕೆ ಕಳುಹಿಸಿದರು.
01202021a ಸಿಂಹೌ ಭೂತ್ವಾ ಪುನರ್ವ್ಯಾಘ್ರೌ ಪುನಶ್ಚಾಂತರ್ಹಿತಾವುಭೌ।
01202021c ತೈಸ್ತೈರುಪಾಯೈಸ್ತೌ ಕ್ರೂರಾವೃಷೀನ್ದೃಷ್ಟ್ವಾ ನಿಜಘ್ನತುಃ।।
ಸಿಂಹಗಳಾಗಿ, ಪುನಃ ವ್ಯಾಘ್ರಗಳಾಗಿ, ಪುನಃ ಅಂತರ್ಹಿತರಾಗಿ, ಹೀಗೆ ಅನೇಕ ಉಪಾಯಗಳಿಂದ ಆ ಕ್ರೂರರು ಋಷಿಗಳನ್ನು ಹುಡುಕಿ ಸಂಹರಿಸಿದರು.
01202022a ನಿವೃತ್ತಯಜ್ಞಸ್ವಾಧ್ಯಾಯಾ ಪ್ರಣಷ್ಟನೃಪತಿದ್ವಿಜಾ।
01202022c ಉತ್ಸನ್ನೋತ್ಸವಯಜ್ಞಾ ಚ ಬಭೂವ ವಸುಧಾ ತದಾ।।
ಆಗ ವಸುಧೆಯಲ್ಲಿ ಯಜ್ಞ-ಸ್ವಾಧ್ಯಾಯಗಳು ನಿಂತುಹೋದವು. ನೃಪತಿದ್ವಿಜರು ನಷ್ಟರಾದರು. ಯಜ್ಞ-ಉತ್ಸವಗಳು ನಿಂತುಹೋದವು.
01202023a ಹಾಹಾಭೂತಾ ಭಯಾರ್ತಾ ಚ ನಿವೃತ್ತವಿಪಣಾಪಣಾ।
01202023c ನಿವೃತ್ತದೇವಕಾರ್ಯಾ ಚ ಪುಣ್ಯೋದ್ವಾಹವಿವರ್ಜಿತಾ।।
ಭೂಮಿಯು ಭಯಪೀಡಿತವಾಗಿ ಹಾಹಾಕರಿಸಿತು. ಅಂಗಡಿ-ವ್ಯಾಪಾರಗಳು ನಿಂತುಹೋದವು. ದೇವತಾಕಾರ್ಯಗಳು ನಿಂತುಹೋದವು. ಪುಣ್ಯಕಾರ್ಯಗಳೂ ವಿವಾಹಗಳೂ ಇಲ್ಲವಾದವು.
01202024a ನಿವೃತ್ತಕೃಷಿಗೋರಕ್ಷಾ ವಿಧ್ವಸ್ತನಗರಾಶ್ರಮಾ।
01202024c ಅಸ್ಥಿಕಂಕಾಲಸಂಕೀರ್ಣಾ ಭೂರ್ಬಭೂವೋಗ್ರದರ್ಶನಾ।।
ಕೃಷಿ-ಗೋಪಾಲನೆಗಳು ನಿಂತುಹೋದವು. ನಗರ-ಆಶ್ರಮಗಳು ವಿಧ್ವಂಸವಾದವು. ಎಲುಬು ಮತ್ತು ಅಸ್ತಿಪಂಜರಗಳಿಂದ ತುಂಬಿಹೋದ ಭೂಮಿಯು ಭಯಂಕರವಾಗಿ ತೋರಿತು.
01202025a ನಿವೃತ್ತಪಿತೃಕಾರ್ಯಂ ಚ ನಿರ್ವಷಟ್ಕಾರಮಂಗಲಂ।
01202025c ಜಗತ್ಪ್ರತಿಭಯಾಕಾರಂ ದುಷ್ಪ್ರೇಕ್ಷ್ಯಮಭವತ್ತದಾ।।
ಪಿತೃಕಾರ್ಯಗಳು ನಿಂತುಹೋದವು. ಮಂಗಲ ವಷಟ್ಕಾರಗಳು ನಿಂತುಹೋದವು. ಜಗತ್ತು ನೋಡಲಿಕ್ಕಾಗದಷ್ಟು ಭಯಾಕಾರವಾಗಿ ತೋರುತ್ತಿತ್ತು.
01202026a ಚಂದ್ರಾದಿತ್ಯೌ ಗ್ರಹಾಸ್ತಾರಾ ನಕ್ಷತ್ರಾಣಿ ದಿವೌಕಸಃ।
01202026c ಜಗ್ಮುರ್ವಿಷಾದಂ ತತ್ಕರ್ಮ ದೃಷ್ಟ್ವಾ ಸುಂದೋಪಸುಂದಯೋಃ।।
ಸುಂದೋಪಸುಂದರ ಈ ಕೃತ್ಯಗಳಿಂದ ಚಂದ್ರಾದಿತ್ಯರು, ಗ್ರಹತಾರೆಗಳು, ನಕ್ಷತ್ರಗಳು ಮತ್ತು ದಿವೌಕಸರು ವಿಷಾದಿತರಾದರು.
01202027a ಏವಂ ಸರ್ವಾ ದಿಶೋ ದೈತ್ಯೌ ಜಿತ್ವಾ ಕ್ರೂರೇಣ ಕರ್ಮಣಾ।
01202027c ನಿಃಸಪತ್ನೌ ಕುರುಕ್ಷೇತ್ರೇ ನಿವೇಶಮಭಿಚಕ್ರತುಃ।।
ಈ ರೀತಿ ಕ್ರೂರಕರ್ಮಗಳಿಂದ ಸರ್ವದಿಶಗಳನ್ನು ಜಯಿಸಿ ಆ ದೈತ್ಯರು ಯಾವುದೇ ವಿರೋಧವಿಲ್ಲದೇ ಕುರುಕ್ಷೇತ್ರದಲ್ಲಿ ವಾಸಿಸತೊಡಗಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ದ್ವ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ಎರಡನೆಯ ಅಧ್ಯಾಯವು.