ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ವಿದುರಾಗಮನ ಪರ್ವ
ಅಧ್ಯಾಯ 196
ಸಾರ
ಪಾಂಡವರನ್ನು ಕರೆತರಿಸಿಕೊಂಡು ಅವರು ತಮ್ಮ ತಂದೆಯ ಸ್ಥಾನವನ್ನು ಸ್ವೀಕರಿಸುವಂತೆ ಮಾಡಬೇಕೆಂದು ದ್ರೋಣನು ಹೇಳುವುದು (1-12). ಕರ್ಣನು ಭೀಷ್ಮ ಮತ್ತು ದ್ರೋಣರ ಸಲಹೆಯನ್ನು ಟೀಕಿಸಿ ನಿಂದಿಸುವುದು (13-25). ಕರ್ಣನ ಟೀಕೆಗೆ ದ್ರೋಣನ ಪ್ರತಿಕ್ರಿಯೆ (26-28).
01196001 ದ್ರೋಣ ಉವಾಚ।
01196001a ಮಂತ್ರಾಯ ಸಮುಪಾನೀತೈರ್ಧೃತರಾಷ್ಟ್ರಹಿತೈರ್ನೃಪ।
01196001c ಧರ್ಮ್ಯಂ ಪಥ್ಯಂ ಯಶಸ್ಯಂ ಚ ವಾಚ್ಯಮಿತ್ಯನುಶುಶ್ರುಮಃ।।
ದ್ರೋಣನು ಹೇಳಿದನು: “ನೃಪ ಧೃತರಾಷ್ಟ್ರನು ಮಂತ್ರಾಲೋಚನೆಗೆಂದು ಧರ್ಮ ಮತ್ತು ಯಶಸ್ಸಿನ ಕುರಿತು ಮಾತನಾಡುವ ತನ್ನ ಹಿತೈಷಿಗಳನ್ನು ಸೇರಿಸಿದ್ದಾನೆಂದು ಕೇಳಿದ್ದೇವೆ.
01196002a ಮಮಾಪ್ಯೇಷಾ ಮತಿಸ್ತಾತ ಯಾ ಭೀಷ್ಮಸ್ಯ ಮಹಾತ್ಮನಃ।
01196002c ಸಂವಿಭಜ್ಯಾಸ್ತು ಕೌಂತೇಯಾ ಧರ್ಮ ಏಷ ಸನಾತನಃ।।
ನಾನೂ ಕೂಡ ಮಹಾತ್ಮ ಭೀಷ್ಮನ ಅಭಿಪ್ರಾಯಗಳನ್ನೇ ಹೊಂದಿದ್ದೇನೆ. ಕೌಂತೇಯರಿಗಾಗಿ ರಾಜ್ಯವನ್ನು ಸವಿಭಜನೆ ಮಾಡಬೇಕು. ಅದೇ ಸನಾತನ ಧರ್ಮ.
01196003a ಪ್ರೇಷ್ಯತಾಂ ದ್ರುಪದಾಯಾಶು ನರಃ ಕಶ್ಚಿತ್ಪ್ರಿಯಂವದಃ।
01196003c ಬಹುಲಂ ರತ್ನಮಾದಾಯ ತೇಷಾಮರ್ಥಾಯ ಭಾರತ।।
ಭಾರತ! ತಕ್ಷಣವೇ ದ್ರುಪದನಲ್ಲಿಗೆ ಯಾರಾದರೂ ಒಳ್ಳೆಯದನ್ನೇ ಮಾತನಾಡುವವನನ್ನು ಅವರಿಗಾಗಿ ಬಹು ರತ್ನಗಳೊಂದಿಗೆ ಕಳುಹಿಸಿಕೊಡು.
01196004a ಮಿಥಃ ಕೃತ್ಯಂ ಚ ತಸ್ಮೈ ಸ ಆದಾಯ ಬಹು ಗಚ್ಛತು।
01196004c ವೃದ್ಧಿಂ ಚ ಪರಮಾಂ ಬ್ರೂಯಾತ್ತತ್ಸಮ್ಯೋಗೋದ್ಭವಾಂ ತಥಾ।।
ಅವನು ಗೌರವಾರ್ಥವಾಗಿ ಬಹಳಷ್ಟು ಉಡುಗೊರೆಗಳನ್ನು ತೆಗೆದುಕೊಂಡು ಹೋಗಲಿ ಮತ್ತು ಅಲ್ಲಿ ಎರಡೂ ಕುಲಗಳ ಸಂಯೋಗದಿಂದ ಉಂಟಾದ ಪರಮ ಅಭಿವೃದ್ಧಿಯ ಕುರಿತು ಮಾತನಾಡಲಿ.
01196005a ಸಂಪ್ರೀಯಮಾಣಂ ತ್ವಾಂ ಬ್ರೂಯಾದ್ರಾಜನ್ದುರ್ಯೋಧನಂ ತಥಾ।
01196005c ಅಸಕೃದ್ದ್ರುಪದೇ ಚೈವ ಧೃಷ್ಟದ್ಯುಮ್ನೇ ಚ ಭಾರತ।।
ರಾಜನ್! ಭಾರತ! ನೀನು ಮತ್ತು ದುರ್ಯೋಧನ ಈರ್ವರೂ ಸಂತೋಷಗೊಂಡಿದ್ದೀರಿ ಎಂದು ಪುನಃ ಪುನಃ ಅವನು ದೃಪದ-ದೃಷ್ಟದ್ಯುಮ್ನರ ಎದಿರು ಹೇಳಲಿ.
01196006a ಉಚಿತತ್ವಂ ಪ್ರಿಯತ್ವಂ ಚ ಯೋಗಸ್ಯಾಪಿ ಚ ವರ್ಣಯೇತ್।
01196006c ಪುನಃ ಪುನಶ್ಚ ಕೌಂತೇಯಾನ್ಮಾದ್ರೀಪುತ್ರೌ ಚ ಸಾಂತ್ವಯನ್।।
ಅವನು ಪುನಃ ಪುನಃ ಕೌಂತೇಯರು ಮತ್ತು ಮಾದ್ರೀ ಪುತ್ರರನ್ನು ಸಂತವಿಸುತ್ತಾ ಈ ಸಂಯೋಗದ ಉಚಿತತ್ವ, ಪ್ರಿಯತ್ವ ಮತ್ತು ಯೋಗಗಳನ್ನೂ ವರ್ಣಿಸಲಿ.
01196007a ಹಿರಣ್ಮಯಾನಿ ಶುಭ್ರಾಣಿ ಬಹೂನ್ಯಾಭರಣಾನಿ ಚ।
01196007c ವಚನಾತ್ತವ ರಾಜೇಂದ್ರ ದ್ರೌಪದ್ಯಾಃ ಸಂಪ್ರಯಚ್ಛತು।
01196008a ತಥಾ ದ್ರುಪದಪುತ್ರಾಣಾಂ ಸರ್ವೇಷಾಂ ಭರತರ್ಷಭ।
01196008c ಪಾಂಡವಾನಾಂ ಚ ಸರ್ವೇಷಾಂ ಕುಂತ್ಯಾ ಯುಕ್ತಾನಿ ಯಾನಿ ಚ।।
ರಾಜೇಂದ್ರ! ನಿನ್ನ ವಚನದಂತೆ ಅವನು ದ್ರೌಪದಿಗೆ ಹಿರಣ್ಮಯ ಶುಭ್ರ ಬಹು ಆಭರಣಗಳನ್ನು ನೀಡಲಿ. ಭರತರ್ಷಭ! ಹಾಗೆಯೇ ದ್ರುಪದನ ಸರ್ವ ಪುತ್ರರಿಗೂ, ಸರ್ವ ಪಾಂಡವರಿಗೂ, ಮತ್ತು ಕುಂತಿಗೂ ಯುಕ್ತವಾದುದ್ದನ್ನು ನೀಡಲಿ.
01196009a ಏವಂ ಸಾಂತ್ವಸಮಾಯುಕ್ತಂ ದ್ರುಪದಂ ಪಾಂಡವೈಃ ಸಹ।
01196009c ಉಕ್ತ್ವಾಥಾನಂತರಂ ಬ್ರೂಯಾತ್ತೇಷಾಮಾಗಮನಂ ಪ್ರತಿ।।
ಈ ರೀತಿ ಪಾಂಡವರೊಡನೆ ದ್ರುಪದನು ಸಂತ್ವಸಮಾಯುಕ್ತನಾದ ನಂತರ ಅವರ ಹಿಂದಿರುಗುವುದರ ಕುರಿತು ಪ್ರಸ್ತಾವಿಸಬೇಕು.
01196010a ಅನುಜ್ಞಾತೇಷು ವೀರೇಷು ಬಲಂ ಗಚ್ಛತು ಶೋಭನಂ।
01196010c ದುಃಶಾಸನೋ ವಿಕರ್ಣಶ್ಚ ಪಾಂಡವಾನಾನಯಂತ್ವಿಹ।।
ಆ ವೀರರು ಅಲ್ಲಿಂದ ಹೊರಟ ನಂತರ ದುಃಶಾಸನ ಮತ್ತು ವಿಕರ್ಣರು ಶೋಭನೀಯ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಇಲ್ಲಿಗೆ ಕರೆತರಲಿ.
01196011a ತತಸ್ತೇ ಪಾರ್ಥಿವಶ್ರೇಷ್ಠ ಪೂಜ್ಯಮಾನಾಃ ಸದಾ ತ್ವಯಾ।
01196011c ಪ್ರಕೃತೀನಾಮನುಮತೇ ಪದೇ ಸ್ಥಾಸ್ಯಂತಿ ಪೈತೃಕೇ।।
ಪಾರ್ಥಿವ ಶ್ರೇಷ್ಠ! ಅದರ ನಂತರ ನಿನ್ನಿಂದ ಮತ್ತು ಪುರಜನರ ಸತ್ಕಾರದೊಂದಿಗೆ ಅವರು ತಮ್ಮ ತಂದೆಯ ಸ್ಥಾನವನ್ನು ಸ್ವೀಕರಿಸಲಿ.
01196012a ಏವಂ ತವ ಮಹಾರಾಜ ತೇಷು ಪುತ್ರೇಷು ಚೈವ ಹ।
01196012c ವೃತ್ತಮೌಪಯಿಕಂ ಮನ್ಯೇ ಭೀಷ್ಮೇಣ ಸಹ ಭಾರತ।।
ಮಹಾರಾಜ! ಇದೇ ನೀನು ನಿನ್ನ ಮತ್ತು ಅವನ ಪುತ್ರರೊಡನೆ ನಡೆದುಕೊಳ್ಳಬೇಕಾದ ರೀತಿ. ಭೀಷ್ಮನಿಗೂ ಇದರ ಸಮ್ಮತಿಯಿದೆ.”
01196013 ಕರ್ಣ ಉವಾಚ।
01196013a ಯೋಜಿತಾವರ್ಥಮಾನಾಭ್ಯಾಂ ಸರ್ವಕಾರ್ಯೇಷ್ವನಂತರೌ।
01196013c ನ ಮಂತ್ರಯೇತಾಂ ತ್ವಚ್ಛ್ರೇಯಃ ಕಿಮದ್ಭುತತರಂ ತತಃ।।
ಕರ್ಣನು ಹೇಳಿದನು: “ಸರ್ವಕಾರ್ಯಗಳ ನಂತರವೂ ಇವರೀರ್ವರು ಸಂಪತ್ತಿನಿಂದ ಗೌರವಿತರಾಗಿದ್ದಾರೆ. ಆದರೂ ನಿನ್ನ ಶ್ರೇಯಕ್ಕೆ ಸರಿಯಾದ ಸಲಹೆನೀಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಿನ ಅದ್ಭುತವೇನಿದೆ?
01196014a ದುಷ್ಟೇನ ಮನಸಾ ಯೋ ವೈ ಪ್ರಚ್ಛನ್ನೇನಾಂತರಾತ್ಮನಾ।
01196014c ಬ್ರೂಯಾನ್ನಿಃಶ್ರೇಯಸಂ ನಾಮ ಕಥಂ ಕುರ್ಯಾತ್ಸತಾಂ ಮತಂ।।
ದುಷ್ಟಮನಸ್ಸಿನಿಂದ, ತನ್ನ ನಿಜ ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಹೇಳಿದ್ದುದನ್ನು ಸತ್ಯವಂತರು ಹೇಗೆ ತಾನೆ ಶ್ರೇಯಸ್ಸೆಂದು ಸ್ವೀಕರಿಸಬಹುದು?
01196015a ನ ಮಿತ್ರಾಣ್ಯರ್ಥಕೃಚ್ಛ್ರೇಷು ಶ್ರೇಯಸೇ ವೇತರಾಯ ವಾ।
01196015c ವಿಧಿಪೂರ್ವಂ ಹಿ ಸರ್ವಸ್ಯ ದುಃಖಂ ವಾ ಯದಿ ವಾ ಸುಖಂ।।
ಕಷ್ಟಸಮಯದಲ್ಲಿ ಮಿತ್ರರು ಶ್ರೇಯಸ್ಸನ್ನು ತರಬಹುದು ಅಥವಾ ತರದೇ ಇರಬಹುದು. ದುಃಖ ಅಥವಾ ಸುಖ ಸರ್ವವೂ ವಿಧಿಯನ್ನವಲಂಬಿಸಿದೆ.
01196016a ಕೃತಪ್ರಜ್ಞೋಽಕೃತಪ್ರಜ್ಞೋ ಬಾಲೋ ವೃದ್ಧಶ್ಚ ಮಾನವಃ।
01196016c ಸಸಹಾಯೋಽಸಹಾಯಶ್ಚ ಸರ್ವಂ ಸರ್ವತ್ರ ವಿಂದತಿ।।
ಕೃತಪ್ರಜ್ಞನಾಗಿರಲಿ, ಅಕೃತಪ್ರಜ್ಞನಾಗಿರಲಿ, ಬಾಲಕನಾಗಿರಲಿ, ವೃದ್ಧನಾಗಿರಲಿ, ಸಸಹಾಯಕನಾಗಿರಲಿ, ಅಸಹಾಯಕನಾಗಿರಲಿ, ಎಲ್ಲ ಮಾನವರೂ ಎಲ್ಲಕಡೆಯೂ ಇದನ್ನು ತಿಳಿದುಕೊಂಡಿದ್ದಾರೆ.
01196017a ಶ್ರೂಯತೇ ಹಿ ಪುರಾ ಕಶ್ಚಿದಂಬುವೀಚ ಇತಿ ಶ್ರುತಃ।
01196017c ಆಸೀದ್ರಾಜಗೃಹೇ ರಾಜಾ ಮಾಗಧಾನಾಂ ಮಹೀಕ್ಷಿತಾಂ।।
ಹಿಂದೆ ಅಂಬುವೀಚ ಎಂದು ಖ್ಯಾತ ಮಗಧ ಮಹೀಕ್ಷಿತರ ರಾಜನು ರಾಜಗೃಹದಲ್ಲಿ ಇದ್ದನೆಂದು ಕೇಳಿದ್ದೇವೆ.
01196018a ಸ ಹೀನಃ ಕರಣೈಃ ಸರ್ವೈರುಚ್ಛ್ವಾಸಪರಮೋ ನೃಪಃ।
01196018c ಅಮಾತ್ಯಸಂಸ್ಥಃ ಕಾರ್ಯೇಷು ಸರ್ವೇಷ್ವೇವಾಭವತ್ತದಾ।।
ಆ ನೃಪನು ಅತ್ಯಂತ ಬಲಹೀನನಾಗಿದ್ದು ಕೇವಲ ಉಸಿರಾಡುತ್ತಿದ್ದನು. ತನ್ನ ಎಲ್ಲ ಕಾರ್ಯಗಳಲ್ಲಿಯೂ ಅಮಾತ್ಯನಮೇಲೆ ಅವಲಂಬಿಸಿದ್ದನು.
01196019a ತಸ್ಯಾಮಾತ್ಯೋ ಮಹಾಕರ್ಣಿರ್ಬಭೂವೈಕೇಶ್ವರಃ ಪುರಾ।
01196019c ಸ ಲಬ್ಧಬಲಮಾತ್ಮಾನಂ ಮನ್ಯಮಾನೋಽವಮನ್ಯತೇ।।
ಆ ಅಮಾತ್ಯ ಮಹಾಕರ್ಣಿಯು ತಾನೇ ಏಕೇಶ್ವರನಾದನು. ಆ ಅಮಾತ್ಯನು ಎಲ್ಲ ಅಧಿಕಾರಗಳನ್ನೂ ತೆಗೆದುಕೊಂಡು ರಾಜನನ್ನು ಕೀಳಾಗಿ ಕಾಣತೊಡಗಿದನು.
01196020a ಸ ರಾಜ್ಞ ಉಪಭೋಗ್ಯಾನಿ ಸ್ತ್ರಿಯೋ ರತ್ನಧನಾನಿ ಚ।
01196020c ಆದದೇ ಸರ್ವಶೋ ಮೂಢ ಐಶ್ವರ್ಯಂ ಚ ಸ್ವಯಂ ತದಾ।।
ಆ ಮೂಢನು ರಾಜನ ಸರ್ವವನ್ನೂ, ಸ್ತ್ರೀಯರು, ರತ್ನಧನಗಳನ್ನು, ಸಕಲ ಐಶ್ವರ್ಯವನ್ನು ತನ್ನದಾಗಿಸಿಕೊಂಡು ಸ್ವಯಂ ಭೋಗಿಸತೊಡಗಿದನು.
01196021a ತದಾದಾಯ ಚ ಲುಬ್ಧಸ್ಯ ಲಾಭಾಲ್ಲೋಭೋ ವ್ಯವರ್ಧತ।
01196021c ತಥಾ ಹಿ ಸರ್ವಮಾದಾಯ ರಾಜ್ಯಮಸ್ಯ ಜಿಹೀರ್ಷತಿ।।
ತೆಗೆದುಕೊಂಡಷ್ಟೂ ಅವನ ಲೋಭವು ಹೆಚ್ಚಾಯಿತು. ಎಲ್ಲವನ್ನೂ ತೆಗೆದುಕೊಂಡಿದ್ದ ಅವನು ರಾಜ್ಯವನ್ನೂ ತನ್ನದಾಗಿಸಿಕೊಳ್ಳಲು ಬಯಸಿದನು.
01196022a ಹೀನಸ್ಯ ಕರಣೈಃ ಸರ್ವೈರುಚ್ಛ್ವಾಸಪರಮಸ್ಯ ಚ।
01196022c ಯತಮಾನೋಽಪಿ ತದ್ರಾಜ್ಯಂ ನ ಶಶಾಕೇತಿ ನಃ ಶ್ರುತಂ।।
ತನ್ನ ಎಲ್ಲ ಶಕ್ತಿಯನ್ನೂ ಕಳೆದುಕೊಂಡು ಕೇವಲ ಉಸಿರಾಡುತ್ತಿದ್ದ ಆ ರಾಜನಿಂದ ಅವನು ರಾಜ್ಯವನ್ನು ಪಡೆಯಲು ಶಕ್ತನಾಗಲಿಲ್ಲ ಎಂದು ಕೇಳಿದ್ದೇವೆ.
01196023a ಕಿಮನ್ಯದ್ವಿಹಿತಾನ್ನೂನಂ ತಸ್ಯ ಸಾ ಪುರುಷೇಂದ್ರತಾ।
01196023c ಯದಿ ತೇ ವಿಹಿತಂ ರಾಜ್ಯಂ ಭವಿಷ್ಯತಿ ವಿಶಾಂ ಪತೇ।।
01196024a ಮಿಷತಃ ಸರ್ವಲೋಕಸ್ಯ ಸ್ಥಾಸ್ಯತೇ ತ್ವಯಿ ತದ್ಧ್ರುವಂ।
01196024c ಅತೋಽನ್ಯಥಾ ಚೇದ್ವಿಹಿತಂ ಯತಮಾನೋ ನ ಲಪ್ಸ್ಯಸೇ।।
ಅವನ ರಾಜತ್ವವು ವಿಧಿವಿಹಿತವಾದುದಲ್ಲದೇ ಬೇರೆ ಏನಾಗಿತ್ತು? ವಿಶಾಂಪತೇ! ರಾಜ್ಯವು ನಿನ್ನದೆಂದೇ ವಿಧಿವಿಹಿತವಾಗಿದ್ದರೆ ಅದು ಸರ್ವಲೋಕದ ಎದಿರು ನಿನ್ನದಾಗಿಯೇ ಒಳಿಯುತ್ತದೆ ಎನ್ನುವುದು ಖಂಡಿತ. ಹಾಗಿರದಿದ್ದರೆ ನೀನು ಎಷ್ಟು ಪ್ರಯತ್ನಿಸಿದರೂ ಬಯಸಿದರೂ ಅದು ನಿನ್ನದಾಗಿರುವುದಿಲ್ಲ.
01196025a ಏವಂ ವಿದ್ವನ್ನುಪಾದತ್ಸ್ವ ಮಂತ್ರಿಣಾಂ ಸಾಧ್ವಸಾಧುತಾಂ।
01196025c ದುಷ್ಟಾನಾಂ ಚೈವ ಬೋದ್ಧವ್ಯಮದುಷ್ಟಾನಾಂ ಚ ಭಾಷಿತಂ।।
ಇದನ್ನು ತಿಳಿದು ನಿನ್ನ ಮಂತ್ರಿಗಳ ಸಲಹೆಯು ಎಷ್ಟರ ಮಟ್ಟಿಗೆ ಒಳ್ಳೆಯದು ಅಥವಾ ಒಳ್ಳೆಯದಲ್ಲ ಎನ್ನುವುದನ್ನು ತಿಳಿ.”
01196026 ದ್ರೋಣ ಉವಾಚ।
01196026a ವಿದ್ಮ ತೇ ಭಾವದೋಷೇಣ ಯದರ್ಥಮಿದಮುಚ್ಯತೇ।
01196026c ದುಷ್ಟಃ ಪಾಂಡವಹೇತೋಸ್ತ್ವಂ ದೋಷಂ ಖ್ಯಾಪಯಸೇ ಹಿ ನಃ।।
ದ್ರೋಣನು ಹೇಳಿದನು: “ನೀನು ಯಾವ ಭಾವದೋಷದಿಂದ ಮತ್ತು ಯಾವ ಅರ್ಥದಿಂದ ಮಾತನಾಡುತ್ತಿದ್ದೀಯೆ ಎಂದು ತಿಳಿದಿದೆ. ದುಷ್ಟನಾದ ನೀನು ಪಾಂಡವರ ಕುರಿತು ನಿನ್ನ ದ್ವೇಶವನ್ನು ಪ್ರತಿಪಾದಿಸುತ್ತಿದ್ದೀಯೆ.
01196027a ಹಿತಂ ತು ಪರಮಂ ಕರ್ಣ ಬ್ರವೀಮಿ ಕುರುವರ್ಧನಂ।
01196027c ಅಥ ತ್ವಂ ಮನ್ಯಸೇ ದುಷ್ಟಂ ಬ್ರೂಹಿ ಯತ್ಪರಮಂ ಹಿತಂ।।
ಕರ್ಣ! ಆದರೆ ನಾನು ಹೇಳಿದ್ದುದು ಕುರುವರ್ಧನಕ್ಕೇ ಪರಮ ಹಿತವಾಗಿದ್ದುದು. ಇದನ್ನು ನೀನು ದುಷ್ಟವಾದುದೆಂದು ತಿಳಿಯುವುದಾದರೆ ಪರಮ ಹಿತವಾದುದು ಏನೆಂಬುದನ್ನು ನೀನೇ ಹೇಳು.
01196028a ಅತೋಽನ್ಯಥಾ ಚೇತ್ಕ್ರಿಯತೇ ಯದ್ಬ್ರವೀಮಿ ಪರಂ ಹಿತಂ।
01196028c ಕುರವೋ ವಿನಶಿಷ್ಯಂತಿ ನಚಿರೇಣೇತಿ ಮೇ ಮತಿಃ।।
ನಾನು ಹೇಳಿದ್ದುದು ಪರಮ ಹಿತವಾದುದಲ್ಲ ಅದು ಬೇರೆಯದನ್ನೇ ಸಾಧಿಸುತ್ತದೆ ಎನ್ನುವುದಿದ್ದರೆ ಅಲ್ಪ ಸಮಯದಲ್ಲಿಯೇ ಕುರುಗಳ ವಿನಾಶವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ದ್ರೋಣವಾಕ್ಯೇ ಷಣ್ಣಾವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ದ್ರೋಣವಾಕ್ಯದಲ್ಲಿ ನೂರಾತೊಂಭತ್ತಾರನೆಯ ಅಧ್ಯಾಯವು.