ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ವಿದುರಾಗಮನ ಪರ್ವ
ಅಧ್ಯಾಯ 195
ಸಾರ
ಪಾಂಡವರಿಗೆ ಅವರ ಪಿತ್ರಾರ್ಜಿತ ಭೂಮಿಯನ್ನು ಕೊಡಬೇಕೆಂದು ಭೀಷ್ಮನು ಹೇಳುವುದು (1-19).
01195001 ಭೀಷ್ಮ ಉವಾಚ।
01195001a ನ ರೋಚತೇ ವಿಗ್ರಹೋ ಮೇ ಪಾಂಡುಪುತ್ರೈಃ ಕಥಂ ಚನ।
01195001c ಯಥೈವ ಧೃತರಾಷ್ಟ್ರೋ ಮೇ ತಥಾ ಪಾಂಡುರಸಂಶಯಂ।।
ಭೀಷ್ಮನು ಹೇಳಿದನು: “ಪಾಂಡುಪುತ್ರರೊಂದಿಗೆ ಯುದ್ಧವು ನನಗೆ ಎಂದೂ ಇಷ್ಟವಾಗುವುದಿಲ್ಲ. ನನಗೆ ಧೃತರಾಷ್ಟ್ರನು ಹೇಗೋ ಹಾಗೆ ಪಾಂಡುವೂ ಅಗಿದ್ದನು ಎನ್ನುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲದಿರಲಿ.
01195002a ಗಾಂಧಾರ್ಯಾಶ್ಚ ಯಥಾ ಪುತ್ರಾಸ್ತಥಾ ಕುಂತೀಸುತಾ ಮತಾಃ।
01195002c ಯಥಾ ಚ ಮಮ ತೇ ರಕ್ಷ್ಯಾ ಧೃತರಾಷ್ಟ್ರ ತಥಾ ತವ।।
ಗಾಂಧಾರಿಯ ಪುತ್ರರ ಹಾಗೆ ನನಗೆ ಕುಂತೀಸುತರೂ ಹೌದು. ಅವರು ಹೇಗೆ ಧೃತರಾಷ್ಟ್ರನ ರಕ್ಷಣೆಯಲ್ಲಿದ್ದಾರೋ ಹಾಗೆ ನನ್ನ ರಕ್ಷಣೆಯಲ್ಲಿಯೂ ಇದ್ದಾರೆ.
01195003a ಯಥಾ ಚ ಮಮ ರಾಜ್ಞಶ್ಚ ತಥಾ ದುರ್ಯೋಧನಸ್ಯ ತೇ।
01195003c ತಥಾ ಕುರೂಣಾಂ ಸರ್ವೇಷಾಮನ್ಯೇಷಾಮಪಿ ಭಾರತ।।
ಭಾರತ! ಅವರು ನನಗೆ ಮತ್ತು ರಾಜನಿಗೆ ಹೇಗೋ ಹಾಗೆ ದುರ್ಯೋಧನನಿಗೂ ಮತ್ತು ಅನ್ಯ ಕುರುಗಳೆಲ್ಲರಿಗೂ ಹೌದು.
01195004a ಏವಂ ಗತೇ ವಿಗ್ರಹಂ ತೈರ್ನ ರೋಚಯೇ। ಸಂಧಾಯ ವೀರೈರ್ದೀಯತಾಮದ್ಯ ಭೂಮಿಃ।
01195004c ತೇಷಾಮಪೀದಂ ಪ್ರಪಿತಾಮಹಾನಾಂ। ರಾಜ್ಯಂ ಪಿತುಶ್ಚೈವ ಕುರೂತ್ತಮಾನಾಂ।।
ಹೀಗಿರುವಾಗ ನಾನು ಯುದ್ಧವನ್ನು ಬಯಸುವುದಿಲ್ಲ. ಆ ವೀರರೊಂದಿಗೆ ಸಂಧಿಮಾಡಿಕೊಂಡು ಅವರಿಗೆ ಭೂಮಿಯನ್ನು ಕೊಡಬೇಕು. ಪಿತ ಪ್ರಪಿತಾಮಹರ ಈ ರಾಜ್ಯವು ಆ ಕುರೂತ್ತಮರದ್ದೂ ಹೌದು.
01195005a ದುರ್ಯೋಧನ ಯಥಾ ರಾಜ್ಯಂ ತ್ವಮಿದಂ ತಾತ ಪಶ್ಯಸಿ।
01195005c ಮಮ ಪೈತೃಕಮಿತ್ಯೇವಂ ತೇಽಪಿ ಪಶ್ಯಂತಿ ಪಾಂಡವಾಃ।।
ತಾತ! ದುರ್ಯೋಧನ! ನೀನು ಹೇಗೆ ಈ ರಾಜ್ಯವನ್ನು ನಿನ್ನ ಪಿತ್ರಾರ್ಜಿತವೆಂದು ಕಾಣುತ್ತೀಯೋ ಹಾಗೆ ಪಾಂಡವರೂ ಕಾಣುತ್ತಾರೆ.
01195006a ಯದಿ ರಾಜ್ಯಂ ನ ತೇ ಪ್ರಾಪ್ತಾಃ ಪಾಂಡವೇಯಾಸ್ತಪಸ್ವಿನಃ।
01195006c ಕುತ ಏವ ತವಾಪೀದಂ ಭಾರತಸ್ಯ ಚ ಕಸ್ಯ ಚಿತ್।।
ತಪಸ್ವಿ ಪಾಂಡವರಿಗೆ ರಾಜ್ಯ ದೊರೆಯದಿದ್ದರೆ ಇದು ನಿಮಗಾಗಲೀ ಅಥವಾ ಬೇರೆ ಯಾವ ಭಾರತನಿಗಾಗಲೀ ಏಕೆ ದೊರೆಯಬೇಕು?
01195007a ಅಥ ಧರ್ಮೇಣ ರಾಜ್ಯಂ ತ್ವಂ ಪ್ರಾಪ್ತವಾನ್ಭರತರ್ಷಭ।
01195007c ತೇಽಪಿ ರಾಜ್ಯಮನುಪ್ರಾಪ್ತಾಃ ಪೂರ್ವಮೇವೇತಿ ಮೇ ಮತಿಃ।।
ಭರತರ್ಷಭ! ನೀನು ಈ ರಾಜ್ಯವನ್ನು ಧರ್ಮಪೂರ್ವಕ ಪಡೆದಿದ್ದರೆ ನಿನಗಿಂಥಲೂ ಮೊದಲೇ ಅವರು ರಾಜ್ಯವನ್ನು ಪಡೆದಿದ್ದರು ಎಂದು ನನ್ನ ಅಭಿಪ್ರಾಯ.
01195008a ಮಧುರೇಣೈವ ರಾಜ್ಯಸ್ಯ ತೇಷಾಮರ್ಧಂ ಪ್ರದೀಯತಾಂ।
01195008c ಏತದ್ಧಿ ಪುರುಷವ್ಯಾಘ್ರ ಹಿತಂ ಸರ್ವಜನಸ್ಯ ಚ।।
ಪುರುಷವ್ಯಾಘ್ರ! ಅರ್ಧ ರಾಜ್ಯವನ್ನು ಅವರಿಗೆ ಒಳ್ಳೆಯರೀತಿಯಲ್ಲಿ ನೀಡೋಣ. ಅದೇ ನಮ್ಮೆಲ್ಲರ ಹಿತದಲ್ಲಿದೆ.
01195009a ಅತೋಽನ್ಯಥಾ ಚೇತ್ಕ್ರಿಯತೇ ನ ಹಿತಂ ನೋ ಭವಿಷ್ಯತಿ।
01195009c ತವಾಪ್ಯಕೀರ್ತಿಃ ಸಕಲಾ ಭವಿಷ್ಯತಿ ನ ಸಂಶಯಃ।।
ಬೇರೆ ಏನು ಮಾಡಿದರೂ ಅದು ನಮಗೆ ಹಿತವಾಗುವುದಿಲ್ಲ. ಮತ್ತು ನಿನ್ನ ಮೇಲೆಯೇ ಸಕಲ ಅಪಕೀರ್ತಿಯೂ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
01195010a ಕೀರ್ತಿರಕ್ಷಣಮಾತಿಷ್ಠ ಕೀರ್ತಿರ್ಹಿ ಪರಮಂ ಬಲಂ।
01195010c ನಷ್ಟಕೀರ್ತೇರ್ಮನುಷ್ಯಸ್ಯ ಜೀವಿತಂ ಹ್ಯಫಲಂ ಸ್ಮೃತಂ।।
ಕೀರ್ತಿಯೇ ಪರಮ ಬಲವು. ಕೀರ್ತಿಯನ್ನು ರಕ್ಷಣೆಮಾಡಿಕೋ. ಕೀರ್ತಿಯನ್ನು ಕಳೆದುಕೊಂಡ ಮನುಷ್ಯನ ಜೀವನವೇ ನಿಷ್ಫಲವೆಂದು ಹೇಳುತ್ತಾರೆ.
01195011a ಯಾವತ್ಕೀರ್ತಿರ್ಮನುಷ್ಯಸ್ಯ ನ ಪ್ರಣಶ್ಯತಿ ಕೌರವ।
01195011c ತಾವಜ್ಜೀವತಿ ಗಾಂಧಾರೇ ನಷ್ಟಕೀರ್ತಿಸ್ತು ನಶ್ಯತಿ।।
ಕೌರವ ಗಾಂಧಾರೇ! ಮನುಷ್ಯನ ಕೀರ್ತಿಯು ಅವನ ಜೀವವಿರುವರೆಗೂ ನಶಿಸುವುದಿಲ್ಲ. ಆದರೆ ಕೀರ್ತಿಯನ್ನೇ ಕಳೆದುಕೊಂಡವನ ಜೀವನವೇ ನಶಿಸಿಹೋದಂತೆ.
01195012a ತಮಿಮಂ ಸಮುಪಾತಿಷ್ಠ ಧರ್ಮಂ ಕುರುಕುಲೋಚಿತಂ।
01195012c ಅನುರೂಪಂ ಮಹಾಬಾಹೋ ಪೂರ್ವೇಷಾಮಾತ್ಮನಃ ಕುರು।।
ಮಹಾಬಾಹೋ! ಈ ನಿನ್ನ ಕುರು ಪೂರ್ವಜರಿಗೆ ಅನುರೂಪ ಕುರುಕುಲೋಚಿತ ಧರ್ಮವನ್ನು ಪರಿಪಾಲಿಸು.
01195013a ದಿಷ್ಟ್ಯಾ ಧರಂತಿ ತೇ ವೀರಾ ದಿಷ್ಟ್ಯಾ ಜೀವತಿ ಸಾ ಪೃಥಾ।
01195013c ದಿಷ್ಟ್ಯಾ ಪುರೋಚನಃ ಪಾಪೋ ನಸಕಾಮೋಽತ್ಯಯಂ ಗತಃ।
ಆ ವೀರರೆಲ್ಲರೂ ಬದುಕಿದ್ದಾರೆ ಎನ್ನುವುದೇ ನಮ್ಮ ಅದೃಷ್ಟ. ಆ ಪೃಥೆಯು ಜೀವಂತವಿದ್ದಾಳೆ ಎನ್ನುವುದೇ ನಮ್ಮ ಅದೃಷ್ಟ. ಮತ್ತು ಅವನ ಉಪಾಯದಲ್ಲಿ ಸಫಲನಾಗದೇ ಪಾಪಿ ಪುರೋಚನನು ಸತ್ತುಹೋದ ಎನ್ನುವುದೇ ನಮ್ಮ ಅದೃಷ್ಟ.
01195014a ತದಾ ಪ್ರಭೃತಿ ಗಾಂಧಾರೇ ನ ಶಕ್ನೋಮ್ಯಭಿವೀಕ್ಷಿತುಂ।
01195014c ಲೋಕೇ ಪ್ರಾಣಭೃತಾಂ ಕಂ ಚಿಚ್ಛೃತ್ವಾ ಕುಂತೀಂ ತಥಾಗತಾಂ।
ಗಾಂಧಾರೇ! ಕುಂತಿಗೆ ನಡೆದುಹೋದದ್ದನ್ನು ಕೇಳಿದಂದಿನಿಂದ ನಾನು ಈ ಲೋಕದಲ್ಲಿ ಜೀವಿಸಿರುವ ಯಾರೊಬ್ಬರ ಮುಖವನ್ನು ನೋಡಲೂ ಶಕ್ಯನಾಗಿರಲಿಲ್ಲ.
01195015a ನ ಚಾಪಿ ದೋಷೇಣ ತಥಾ ಲೋಕೋ ವೈತಿ ಪುರೋಚನಂ।
01195015c ಯಥಾ ತ್ವಾಂ ಪುರುಷವ್ಯಾಘ್ರ ಲೋಕೋ ದೋಷೇಣ ಗಚ್ಛತಿ।।
01195016a ತದಿದಂ ಜೀವಿತಂ ತೇಷಾಂ ತವ ಕಲ್ಮಷನಾಶನಂ।
01195016c ಸಮ್ಮಂತವ್ಯಂ ಮಹಾರಾಜ ಪಾಂಡವಾನಾಂ ಚ ದರ್ಶನಂ।।
ಪುರುಷವ್ಯಾಘ್ರ! ಜನರು ನಿನ್ನನ್ನು ದೂಷಿಸುವಷ್ಟು ಪುರೋಚನನನ್ನು ದೂಷಿಸುವುದಿಲ್ಲ. ಅವರು ಜೀವಂತವಾಗಿದ್ದಾರೆ ಎನ್ನುವುದು ನಿನ್ನ ಮೇಲಿರುವ ಅಪವಾದವನ್ನು ತೆಗೆದುಹಾಕಿದೆ. ಮಹಾರಾಜ! ಪಾಂಡವರ ದರ್ಶನವು ಬಯಸುವಂಥಹುದೇ ಆಗಿದೆ.
01195017a ನ ಚಾಪಿ ತೇಷಾಂ ವೀರಾಣಾಂ ಜೀವತಾಂ ಕುರುನಂದನ।
01195017c ಪಿತ್ರ್ಯೋಽಂಶಃ ಶಕ್ಯ ಆದಾತುಮಪಿ ವಜ್ರಭೃತಾ ಸ್ವಯಂ।।
ಕುರುನಂದನ! ಈ ವೀರರು ಜೀವಂತವಿರುವಹಾಗೆ ಸ್ವಯಂ ವಜ್ರಭೃತನೂ ಕೂಡ ಅವರ ಪಿತ್ರ್ಯೋಂಶವನ್ನು ತೆಗೆದುಕೊಳ್ಳಲು ಶಕ್ಯನಿಲ್ಲ.
01195018a ತೇ ಹಿ ಸರ್ವೇ ಸ್ಥಿತಾ ಧರ್ಮೇ ಸರ್ವೇ ಚೈವೈಕಚೇತಸಃ।
01195018c ಅಧರ್ಮೇಣ ನಿರಸ್ತಾಶ್ಚ ತುಲ್ಯೇ ರಾಜ್ಯೇ ವಿಶೇಷತಃ।।
ಅವರೆಲ್ಲರೂ ಧರ್ಮದಲ್ಲಿ ನಿರತರಾಗಿದ್ದಾರೆ. ಎಲ್ಲರೂ ಒಂದೇ ಮನಸ್ಸುಳ್ಳವರಾಗಿದ್ದಾರೆ ಮತ್ತು ಅವರೂ ಕೂಡ ರಾಜ್ಯದ ಮೇಲೆ ಸಮನಾದ ಹಕ್ಕುಳ್ಳವರಾದರೂ ಅಧರ್ಮಪೂರ್ವಕ ಅವರು ಅದರಿಂದ ವಂಚಿತರಾಗಿದ್ದಾರೆ.
01195019a ಯದಿ ಧರ್ಮಸ್ತ್ವಯಾ ಕಾರ್ಯೋ ಯದಿ ಕಾರ್ಯಂ ಪ್ರಿಯಂ ಚ ಮೇ।
01195019c ಕ್ಷೇಮಂ ಚ ಯದಿ ಕರ್ತವ್ಯಂ ತೇಷಾಮರ್ಧಂ ಪ್ರದೀಯತಾಂ।।
ನನಗೆ ಪ್ರೀತಿಯುಕ್ತವಾದುದನ್ನು ಮಾಡಲು ಅಥವಾ ಧರ್ಮಯುಕ್ತ ಕ್ಷೇಮ ಕಾರ್ಯವನ್ನು ಮಾಡಲು ಬಯಸಿದರೆ, ಅವರಿಗೆ ಅರ್ಧರಾಜ್ಯವನ್ನು ಕೊಡಬೇಕು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ಭೀಷ್ಮವಾಕ್ಯೇ ಪಂಚನವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ಭೀಷ್ಮವಾಕ್ಯದಲ್ಲಿ ನೂರಾತೊಂಭತ್ತೈದನೆಯ ಅಧ್ಯಾಯವು.