ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸ್ವಯಂವರ ಪರ್ವ
ಅಧ್ಯಾಯ 175
ಸಾರ
ಬ್ರಾಹ್ಮಣರೊಂದಿಗೆ ದ್ರೌಪದೀ ಸ್ವಯಂವರದ ಕುರಿತು ಮಾತನಾಡಿಕೊಳ್ಳುತ್ತಾ ಬ್ರಾಹ್ಮಣ ವೇಶದಲ್ಲಿದ್ದ ಪಾಂಡವರು ಪಾಂಚಾಲ ನಗರಿಗೆ ಪ್ರಯಾಣಿಸಿದ್ದುದು (1-20).
01175001 ವೈಶಂಪಾಯನ ಉವಾಚ।
01175001a ತತಸ್ತೇ ನರಶಾರ್ದೂಲಾ ಭ್ರಾತರಃ ಪಂಚ ಪಾಂಡವಾಃ।
01175001c ಪ್ರಯಯುರ್ದ್ರೌಪದೀಂ ದ್ರಷ್ಟುಂ ತಂ ಚ ದೇವಮಹೋತ್ಸವಂ।।
ವೈಶಂಪಾಯನನು ಹೇಳಿದನು: “ಆ ನರ ಶಾರ್ದೂಲ ಐವರು ಪಾಂಡವ ಸೋದರರೂ ದ್ರೌಪದಿಯನ್ನು ಮತ್ತು ಆ ದೇವಮಹೋತ್ಸವವನ್ನು ನೋಡಲು ಪ್ರಯಾಣಿಸಿದರು.
01175002a ತೇ ಪ್ರಯಾತಾ ನರವ್ಯಾಘ್ರಾ ಮಾತ್ರಾ ಸಹ ಪರಂತಪಾಃ।
01175002c ಬ್ರಾಹ್ಮಣಾನ್ದದೃಶುರ್ಮಾರ್ಗೇ ಗಚ್ಛತಃ ಸಗಣಾನ್ಬಹೂನ್।।
ಪರಂತಪ ನರವ್ಯಾಘ್ರರು ತಮ್ಮ ತಾಯಿಯ ಜೊತೆಗೂಡಿ ಹೋಗುತ್ತಿರುವಾಗ ಅದೇ ದಾರಿಯಲ್ಲಿ ಗುಂಪು-ಗುಂಪಾಗಿ ಪ್ರಯಾಣಿಸುತ್ತಿರುವ ಹಲವಾರು ಬ್ರಾಹ್ಮಣರನ್ನು ಕಂಡರು.
01175003a ತಾನೂಚುರ್ಬ್ರಾಹ್ಮಣಾ ರಾಜನ್ಪಾಂಡವಾನ್ಬ್ರಹ್ಮಚಾರಿಣಃ।
01175003c ಕ್ವ ಭವಂತೋ ಗಮಿಷ್ಯಂತಿ ಕುತೋ ವಾಗಚ್ಛತೇತಿ ಹ।।
ರಾಜ! ಬ್ರಹ್ಮಚಾರಿ ರೂಪದಲ್ಲಿ ಪ್ರಯಾಣಿಸುತ್ತಿರುವ ಪಾಂಡವರಿಗೆ ಆ ಬ್ರಾಹ್ಮಣರು ಕೇಳಿದರು: “ನೀವು ಎಲ್ಲಿಗೆ ಪ್ರಯಾಣ ಮಾಡುತ್ತಿರುವಿರಿ ಮತ್ತು ಎಲ್ಲಿಂದ ಬಂದಿರಿ?”
01175004 ಯುಧಿಷ್ಠಿರ ಉವಾಚ।
01175004a ಆಗತಾನೇಕಚಕ್ರಾಯಾಃ ಸೋದರ್ಯಾನ್ದೇವದರ್ಶಿನಃ।
01175004c ಭವಂತೋ ಹಿ ವಿಜಾನಂತು ಸಹಿತಾನ್ಮಾತೃಚಾರಿಣಃ।।
ಯುಧಿಷ್ಠಿರನು ಹೇಳಿದನು: “ದೇವದರ್ಶಿಗಳೇ! ನಾವು ಸಹೋದರರೆಂದು ತಿಳಿಯಿರಿ. ನಾವು ಏಕಚಕ್ರದಿಂದ ಬರುತ್ತಿದ್ದೇವೆ ಮತ್ತು ನಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದೇವೆ.”
01175005 ಬ್ರಾಹ್ಮಣಾ ಊಚುಃ।
01175005a ಗಚ್ಛತಾದ್ಯೈವ ಪಾಂಚಾಲಾನ್ದ್ರುಪದಸ್ಯ ನಿವೇಶನಂ।
01175005c ಸ್ವಯಂವರೋ ಮಹಾಂಸ್ತತ್ರ ಭವಿತಾ ಸುಮಹಾಧನಃ।।
ಬ್ರಾಹ್ಮಣರು ಹೇಳಿದರು: “ಹಾಗಿದ್ದರೆ ನೀವು ಪಾಂಚಾಲ ದ್ರುಪದನ ನಗರಿಗೆ ಹೋಗಬೇಕು. ಅಲ್ಲಿ ಒಂದು ತುಂಬಾ ಧನಯುಕ್ತ ದೊಡ್ಡ ಸ್ವಯಂವರವು ಜರುಗಲಿದೆ.
01175006a ಏಕಸಾರ್ಥಂ ಪ್ರಯಾತಾಃ ಸ್ಮೋ ವಯಮಪ್ಯತ್ರ ಗಾಮಿನಃ।
01175006c ತತ್ರ ಹ್ಯದ್ಭುತಸಂಕಾಶೋ ಭವಿತಾ ಸುಮಹೋತ್ಸವಃ।।
ನಾವೆಲ್ಲರೂ ಒಟ್ಟಿಗೆ ಒಂದೇ ದೊಡ್ಡ ಗುಂಪಿನಲ್ಲಿ ಅಲ್ಲಿಗೇ ಹೋಗುತ್ತಿರುವೆವು. ಅಲ್ಲಿ ಅದ್ಭುತ ಮತ್ತು ಸುಮನೋಹರ ಉತ್ಸವವು ನಡೆಯಲಿದೆ.
01175007a ಯಜ್ಞಸೇನಸ್ಯ ದುಹಿತಾ ದ್ರುಪದಸ್ಯ ಮಹಾತ್ಮನಃ।
01175007c ವೇದೀಮಧ್ಯಾತ್ಸಮುತ್ಪನ್ನಾ ಪದ್ಮಪತ್ರನಿಭೇಕ್ಷಣಾ।।
ಮಹಾತ್ಮ ಯಜ್ಞಸೇನ ದ್ರುಪದನ ಮಗಳು ಪದ್ಮಪತ್ರಲೋಚನೆಯು ಯಜ್ಞಕುಂಡದ ಮಧ್ಯದಿಂದ ಜನಿಸಿದವಳು.
01175008a ದರ್ಶನೀಯಾನವದ್ಯಾಂಗೀ ಸುಕುಮಾರೀ ಮನಸ್ವಿನೀ।
01175008c ಧೃಷ್ಟದ್ಯುಮ್ನಸ್ಯ ಭಗಿನೀ ದ್ರೋಣಶತ್ರೋಃ ಪ್ರತಾಪಿನಃ।।
01175009a ಯೋ ಜಾತಃ ಕವಚೀ ಖಡ್ಗೀ ಸಶರಃ ಸಶರಾಸನಃ।
01175009c ಸುಸಮಿದ್ಧೇ ಮಹಾಬಾಹುಃ ಪಾವಕೇ ಪಾವಕಪ್ರಭಃ।।
ಅನವದ್ಯಾಂಗಿಯೂ, ದರ್ಶನೀಯಳೂ, ಸುಕುಮಾರಿಯೂ, ಮನಸ್ವಿನಿಯೂ ಆದ ಅವಳು ಖಡ್ಗ ಮತ್ತು ಧನುರ್ಬಾಣಗಳ ಸಹಿತ, ಕವಚಧರಿಸಿ ದ್ರೋಣಶತ್ರುವಾಗಿ ಅಗ್ನಿಯಲ್ಲಿ ಜನಿಸಿದ ಅಗ್ನಿಪ್ರಕಾಶಮಾನ, ಮಹಾಬಾಹು ಪ್ರತಾಪಿ ಧೃಷ್ಟದ್ಯುಮ್ನನ ತಂಗಿ.
01175010a ಸ್ವಸಾ ತಸ್ಯಾನವದ್ಯಾಂಗೀ ದ್ರೌಪದೀ ತನುಮಧ್ಯಮಾ।
01175010c ನೀಲೋತ್ಪಲಸಮೋ ಗಂಧೋ ಯಸ್ಯಾಃ ಕ್ರೋಶಾತ್ಪ್ರವಾಯತಿ।।
01175011a ತಾಂ ಯಜ್ಞಸೇನಸ್ಯ ಸುತಾಂ ಸ್ವಯಂವರಕೃತಕ್ಷಣಾಂ।
01175011c ಗಚ್ಛಾಮಹೇ ವಯಂ ದ್ರಷ್ಟುಂ ತಂ ಚ ದೇವಮಹೋತ್ಸವಂ।।
ಅವನ ತಂಗಿ ಅನವದ್ಯಾಂಗಿ, ಕೃಶಮದ್ಯಮೆ, ನೀಲಕಮಲದಂತೆ ತನ್ನ ಸುಗಂಧವನ್ನು ಕೋಶ ದೂರದವರೆಗೂ ಪ್ರಸರಿಸುವ, ಯಜ್ಞಸೇನನ ಮಗಳು ದ್ರೌಪದಿಯು ತನ್ನ ಸ್ವಯಂವರವನ್ನು ಇಟ್ಟುಕೊಂಡಿದ್ದಾಳೆ. ಅವಳನ್ನು ಮತ್ತು ಆ ದೇವಮಹೋತ್ಸವವನ್ನು ನೋಡಲು ನಾವೆಲ್ಲರೂ ಹೋಗುತ್ತಿದ್ದೇವೆ.
01175012a ರಾಜಾನೋ ರಾಜಪುತ್ರಾಶ್ಚ ಯಜ್ವಾನೋ ಭೂರಿದಕ್ಷಿಣಾಃ।
01175012c ಸ್ವಾಧ್ಯಾಯವಂತಃ ಶುಚಯೋ ಮಹಾತ್ಮಾನೋ ಯತವ್ರತಾಃ।।
01175013a ತರುಣಾ ದರ್ಶನೀಯಾಶ್ಚ ನಾನಾದೇಶಸಮಾಗತಾಃ।
01175013c ಮಹಾರಥಾಃ ಕೃತಾಸ್ತ್ರಾಶ್ಚ ಸಮುಪೈಷ್ಯಂತಿ ಭೂಮಿಪಾಃ।।
ತಮ್ಮ ಪುರೋಹಿತರಿಗೆ ಶ್ರೀಮಂತ ದಕ್ಷಿಣೆಗಳನ್ನು ಕೊಡುವ ಯಜ್ವಾನ, ಸ್ವಾಧ್ಯಾಯವಂತ, ಶುಚಿರ್ಭೂತ, ಮಹಾತ್ಮ, ವ್ರತನಿರತ, ತರುಣ ದರ್ಶನೀಯ, ನಾನಾ ದೇಶಗಳಿಂದ ಆಗಮಿಸುವ, ಅಸ್ತ್ರಕೋವಿದ, ಮಹಾರಥಿ ಭೂಮಿಪ ರಾಜರು ಮತ್ತು ರಾಜಪುತ್ರರೆಲ್ಲರೂ ಅಲ್ಲಿಗೆ ಆಗಮಿಸಲಿದ್ದಾರೆ.
01175014a ತೇ ತತ್ರ ವಿವಿಧಾನ್ದಾಯಾನ್ವಿಜಯಾರ್ಥಂ ನರೇಶ್ವರಾಃ।
01175014c ಪ್ರದಾಸ್ಯಂತಿ ಧನಂ ಗಾಶ್ಚ ಭಕ್ಷ್ಯಂ ಭೋಜ್ಯಂ ಚ ಸರ್ವಶಃ।।
ಅಲ್ಲಿರುವ ಎಲ್ಲ ನರೇಶ್ವರರೂ ವಿಜಯಪಾಲನೆಗಾಗಿ ವಿವಿಧರೀತಿಯ ದಾನಗಳನ್ನು - ಧನ, ಗೋವು, ಭಕ್ಷ್ಯ ಭೋಜ್ಯ –ಮುಂತಾದವುಗಳನ್ನು ನೀಡಲಿದ್ದಾರೆ.
01175015a ಪ್ರತಿಗೃಹ್ಯ ಚ ತತ್ಸರ್ವಂ ದೃಷ್ಟ್ವಾ ಚೈವ ಸ್ವಯಂವರಂ।
01175015c ಅನುಭೂಯೋತ್ಸವಂ ಚೈವ ಗಮಿಷ್ಯಾಮೋ ಯಥೇಪ್ಸಿತಂ।।
ಅವೆಲ್ಲವನ್ನೂ ಸ್ವೀಕರಿಸಿ, ಸ್ವಯಂವರವನ್ನು ನೋಡಿ, ಉತ್ಸವವನ್ನು ಆನಂದಿಸಿ, ಮುಂದೆ ನಾವು ನಮಗೆ ಇಷ್ಟವಿದ್ದಲ್ಲಿಗೆ ಪ್ರಯಾಣ ಮಾಡುವೆವು.
01175016a ನಟಾ ವೈತಾಲಿಕಾಶ್ಚೈವ ನರ್ತಕಾಃ ಸೂತಮಾಗಧಾಃ।
01175016c ನಿಯೋಧಕಾಶ್ಚ ದೇಶೇಭ್ಯಃ ಸಮೇಷ್ಯಂತಿ ಮಹಾಬಲಾಃ।।
ಬೇರೆ ಬೇರೆ ದೇಶಗಳಿಂದ ನಟರು, ವೈತಾಲಿಕರು (ವಾದ್ಯಗಾರರು), ನರ್ತಕರು, ಸೂತ-ಮಾಗಧರು, ಮಹಾಬಲ ಮಲ್ಲಯುದ್ಧ ಜಟ್ಟಿಗಳೂ ಬರಲಿದ್ದಾರೆ.
01175017a ಏವಂ ಕೌತೂಹಲಂ ಕೃತ್ವಾ ದೃಷ್ಟ್ವಾ ಚ ಪ್ರತಿಗೃಹ್ಯ ಚ।
01175017c ಸಹಾಸ್ಮಾಭಿರ್ಮಹಾತ್ಮಾನಃ ಪುನಃ ಪ್ರತಿನಿವರ್ತ್ಸ್ಯಥ।।
ಇಂತಹ ಕೌತೂಹಲವನ್ನು ನೋಡಿ, ಪ್ರತಿಗ್ರಹಣ ಮಾಡಿ, ಪುನಹ ನಮ್ಮ ಜೊತೆಗೇ ಮಹಾತ್ಮರಾದ ನೀವು ಹಿಂದಿರುಗಬಹುದು.
01175018a ದರ್ಶನೀಯಾಂಶ್ಚ ವಃ ಸರ್ವಾನ್ದೇವರೂಪಾನವಸ್ಥಿತಾನ್।
01175018c ಸಮೀಕ್ಷ್ಯ ಕೃಷ್ಣಾ ವರಯೇತ್ಸಂಗತ್ಯಾನ್ಯತಮಂ ವರಂ।।
ದೇವರೂಪಿ ನಿಮ್ಮ ನಿಲುವನ್ನು ನೋಡಿ ಕೃಷ್ಣೆಯು ನಿಮ್ಮಲ್ಲೇ ಒಬ್ಬನನ್ನು ವರನನ್ನಾಗಿ ಆರಿಸಲೂ ಬಹುದು!
01175019a ಅಯಂ ಭ್ರಾತಾ ತವ ಶ್ರೀಮಾನ್ದರ್ಶನೀಯೋ ಮಹಾಭುಜಃ।
01175019c ನಿಯುಧ್ಯಮಾನೋ ವಿಜಯೇತ್ಸಂಗತ್ಯಾ ದ್ರವಿಣಂ ಬಹು।।
ದರ್ಶನೀಯ ಮಹಾಭುಜ ಈ ನಿನ್ನ ಶ್ರೀಮಾನ್ ತಮ್ಮನು ಮಲ್ಲಯುದ್ಧದ ಆಟದಲ್ಲಿ ಗೆದ್ದು ಬಹಳಷ್ಟು ಹಣವನ್ನೂ ಗಳಿಸಬಹುದು!”
01175020 ಯುಧಿಷ್ಠಿರ ಉವಾಚ।
01175020a ಪರಮಂ ಭೋ ಗಮಿಷ್ಯಾಮೋ ದ್ರಷ್ಟುಂ ದೇವಮಹೋತ್ಸವಂ।
01175020c ಭವದ್ಭಿಃ ಸಹಿತಾಃ ಸರ್ವೇ ಕನ್ಯಾಯಾಸ್ತಂ ಸ್ವಯಂವರಂ।।
ಯುಧಿಷ್ಠಿರನು ಹೇಳಿದನು: “ಅತ್ಯುತ್ತಮ ದೇವಮಹೋತ್ಸವದಂತಿರುವ ಆ ಕನ್ಯೆಯ ಸ್ವಯಂವರವನ್ನು ನೋಡಲು ನಾವೆಲ್ಲರೂ ನಿಮ್ಮೊಡನೆ ಪ್ರಯಾಣಿಸುತ್ತೇವೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಪಾಂಡವಾಗಮನೇ ಪಂಚಸಪ್ತತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಪಾಂಡವಾಗಮನದಲ್ಲಿ ನೂರಾಎಪ್ಪತ್ತೈದನೆಯ ಅಧ್ಯಾಯವು.