174 ಧೌಮ್ಯಪುರೋಹಿತಕರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸ್ವಯಂವರ ಪರ್ವ

ಅಧ್ಯಾಯ 174

ಸಾರ

ಅನುರೂಪ ಪುರೋಹಿತರ್ಯಾರಿದ್ದಾರೆ ಎಂದು ಕೇಳಲು ಚಿತ್ರರಥನು ದೇವಲನ ಕಿರಿಯ ತಮ್ಮ ಧೌಮ್ಯನ ಕುರಿತು ಹೇಳಿ, ಪಾಂಡವರನ್ನು ಬೀಳ್ಕೊಳ್ಳುವುದು (1-5). ಉತ್ಕೋಚಕ ತೀರ್ಥದಲ್ಲಿದ್ದ ಧೌಮ್ಯನನ್ನು ಪುರೋಹಿತನನ್ನಾಗಿಸಿಕೊಂಡು, ದ್ರೌಪದಿಯ ಸ್ವಯಂವರಕ್ಕೆ ಪಾಂಡವರು ಮುಂದುವರೆದುದು (6-12).

01174001 ಅರ್ಜುನ ಉವಾಚ।
01174001a ಅಸ್ಮಾಕಮನುರೂಪೋ ವೈ ಯಃ ಸ್ಯಾದ್ಗಂಧರ್ವ ವೇದವಿತ್।
01174001c ಪುರೋಹಿತಸ್ತಮಾಚಕ್ಷ್ವ ಸರ್ವಂ ಹಿ ವಿದಿತಂ ತವ।।

ಅರ್ಜುನನು ಹೇಳಿದನು: “ಗಂಧರ್ವ! ನಮ್ಮ ಅನುರೂಪ ಪುರೋಹಿತನಾಗಬಲ್ಲ ವೇದವಿದರು ಯಾರಾದರೂ ಇದ್ದಾರೆಯೇ? ನಿನಗೆ ಎಲ್ಲವೂ ತಿಳಿದಿದೆ.”

01174002 ಗಂಧರ್ವ ಉವಾಚ।
01174002a ಯವೀಯಾನ್ದೇವಲಸ್ಯೈಷ ವನೇ ಭ್ರಾತಾ ತಪಸ್ಯತಿ।
01174002c ಧೌಮ್ಯ ಉತ್ಕೋಚಕೇ ತೀರ್ಥೇ ತಂ ವೃಣುಧ್ವಂ ಯದೀಚ್ಛಥ।।

ಗಂಧರ್ವನು ಹೇಳಿದನು: “ದೇವಲನ ಕಿರಿಯ ತಮ್ಮನು ಉತ್ಕೋಚಕ ತೀರ್ಥದ ವನದಲ್ಲಿ ತಪಸ್ಸನ್ನಾಚರಿಸುತ್ತಿದ್ದಾನೆ. ನಿಮಗಿಷ್ಟವಾದರೆ ಅವನನ್ನು ಆರಿಸಿಕೊಳ್ಳಿ.””

01174003 ವೈಶಂಪಾಯನ ಉವಾಚ।
01174003a ತತೋಽರ್ಜುನೋಽಸ್ತ್ರಮಾಗ್ನೇಯಂ ಪ್ರದದೌ ತದ್ಯಥಾವಿಧಿ।
01174003c ಗಂಧರ್ವಾಯ ತದಾ ಪ್ರೀತೋ ವಚನಂ ಚೇದಮಬ್ರವೀತ್।।

ವೈಶಂಪಾಯನನು ಹೇಳಿದನು: “ನಂತರ ಅರ್ಜುನನು ಗಂಧರ್ವನಿಗೆ ಯಥಾವಿಧಿ ಆಗ್ನೇಯಾಸ್ತ್ರವನ್ನು ನೀಡಿ, ಪ್ರೀತಿಯಿಂದ ಹೇಳಿದನು:

01174004a ತ್ವಯ್ಯೇವ ತಾವತ್ತಿಷ್ಠಂತು ಹಯಾ ಗಂಧರ್ವಸತ್ತಮ।
01174004c ಕರ್ಮಕಾಲೇ ಗ್ರಹೀಷ್ಯಾಮಿ ಸ್ವಸ್ತಿ ತೇಽಸ್ತ್ವಿತಿ ಚಾಬ್ರವೀತ್।।

“ಗಂಧರ್ವಸತ್ತಮ! ಕುದುರೆಗಳನ್ನು ಸದ್ಯ ನಿನ್ನಲ್ಲಿಯೇ ಇಟ್ಟುಕೋ. ನಮಗೆ ಬೇಕಾದಾಗ ಅವುಗಳನ್ನು ತೆಗೆದುಕೊಳ್ಳುತ್ತೇವೆ. ನಿನಗೆ ಮಂಗಳವಾಗಲಿ!”

01174005a ತೇಽನ್ಯೋನ್ಯಮಭಿಸಂಪೂಜ್ಯ ಗಂಧರ್ವಃ ಪಾಂಡವಾಶ್ಚ ಹ।
01174005c ರಮ್ಯಾದ್ಭಾಗೀರಥೀಕಚ್ಛಾದ್ಯಥಾಕಾಮಂ ಪ್ರತಸ್ಥಿರೇ।।

ಗಂಧರ್ವ ಮತ್ತು ಪಾಂಡವರು ಅನ್ಯೋನ್ಯರಿಂದ ಬೀಳ್ಕೊಂಡು ರಮ್ಯ ಭಾಗೀರಥಿಯನ್ನು ದಾಟಿ ಮುಂದೆ ಹೊರಟರು.

01174006a ತತ ಉತ್ಕೋಚಕಂ ತೀರ್ಥಂ ಗತ್ವಾ ಧೌಮ್ಯಾಶ್ರಮಂ ತು ತೇ।
01174006c ತಂ ವವ್ರುಃ ಪಾಂಡವಾ ಧೌಮ್ಯಂ ಪೌರೋಹಿತ್ಯಾಯ ಭಾರತ।।

ಭಾರತ! ನಂತರ ಅವರು ಉತ್ಕೋಚಕ ತೀರ್ಥದಲ್ಲಿ ಧೌಮ್ಯಾಶ್ರಮಕ್ಕೆ ಹೋಗಿ ಧೌಮ್ಯನನ್ನು ತಮ್ಮ ಪುರೋಹಿತನನ್ನಾಗಿ ಆರಿಸಿಕೊಂಡರು.

01174007a ತಾನ್ಧೌಮ್ಯಃ ಪ್ರತಿಜಗ್ರಾಹ ಸರ್ವವೇದವಿದಾಂ ವರಃ।
01174007c ಪಾದ್ಯೇನ ಫಲಮೂಲೇನ ಪೌರೋಹಿತ್ಯೇನ ಚೈವ ಹ।।

ಸರ್ವವೇದವಿದರಲ್ಲಿ ಶ್ರೇಷ್ಠ ಧೌಮ್ಯನು ಅವರನ್ನು ಪಾದ್ಯ, ಫಲಮೂಲ ಮತ್ತು ಪೌರೋಹಿತ್ಯದಿಂದ ಸ್ವೀಕರಿಸಿದನು.

01174008a ತೇ ತದಾಶಂಸಿರೇ ಲಬ್ಧಾಂ ಶ್ರಿಯಂ ರಾಜ್ಯಂ ಚ ಪಾಂಡವಾಃ।
01174008c ತಂ ಬ್ರಾಹ್ಮಣಂ ಪುರಸ್ಕೃತ್ಯ ಪಾಂಚಾಲ್ಯಾಶ್ಚ ಸ್ವಯಂವರಂ।।

ಬ್ರಾಹ್ಮಣನನ್ನು ಮುಂದಿಟ್ಟುಕೊಂಡ ಪಾಂಡವರಿಗೆ ಈಗ ಸಂಪತ್ತು, ರಾಜ್ಯ ಮತ್ತು ಸ್ವಯಂವರವನ್ನು ಗೆಲ್ಲುವ ಭರವಸೆ ಉಂಟಾಯಿತು.

01174009a ಮಾತೃಷಷ್ಠಾಸ್ತು ತೇ ತೇನ ಗುರುಣಾ ಸಂಗತಾಸ್ತದಾ।
01174009c ನಾಥವಂತಮಿವಾತ್ಮಾನಂ ಮೇನಿರೇ ಭರತರ್ಷಭಾಃ।।

ಆರನೆಯವಳಾಗಿ ತಾಯಿಯನ್ನು ಹೊಂದಿದ್ದ ಆ ಭರತರ್ಷಭರು ಸಂಗಡ ಗುರುವಿರುವುದರಿಂದ ತಮ್ಮನ್ನು ತಾವೇ ನಾಥವಂತರೆಂದು ಭಾವಿಸಿದರು.

01174010a ಸ ಹಿ ವೇದಾರ್ಥತತ್ತ್ವಜ್ಞಸ್ತೇಷಾಂ ಗುರುರುದಾರಧೀಃ।
01174010c ತೇನ ಧರ್ಮವಿದಾ ಪಾರ್ಥಾ ಯಾಜ್ಯಾಃ ಸರ್ವವಿದಾ ಕೃತಾಃ।।

ಉದಾರಮನಸ್ಕ ಗುರುವು ವೇದಾರ್ಥತತ್ವಜ್ಞಾನಿಯಾಗಿದ್ದನು. ಅವನಿಂದಾಗಿಯೇ ಧರ್ಮವಿದ ಸರ್ವವಿದ ಪಾರ್ಥರು ಯಾಗಗಳನ್ನು ಮಾಡಿದರು.

01174011a ವೀರಾಂಸ್ತು ಸ ಹಿ ತಾನ್ಮೇನೇ ಪ್ರಾಪ್ತರಾಜ್ಯಾನ್ಸ್ವಧರ್ಮತಃ।
01174011c ಬುದ್ಧಿವೀರ್ಯಬಲೋತ್ಸಾಹೈರ್ಯುಕ್ತಾನ್ದೇವಾನಿವಾಪರಾನ್।।

ಅವನು ಬುದ್ಧಿವೀರ್ಯಬಲೋತ್ಸಾಹಗಳಿಂದ ಕೂಡಿದ್ದ ದೇವತೆಗಳಂತೆ ಆ ವೀರರು ಸ್ವಧರ್ಮದಿಂದಲೇ ರಾಜ್ಯವನ್ನು ಹೊಂದುತ್ತಾರೆ ಎಂದು ತಿಳಿದನು.

01174012a ಕೃತಸ್ವಸ್ತ್ಯಯನಾಸ್ತೇನ ತತಸ್ತೇ ಮನುಜಾಧಿಪಾಃ।
01174012c ಮೇನಿರೇ ಸಹಿತಾ ಗಂತುಂ ಪಾಂಚಾಲ್ಯಾಸ್ತಂ ಸ್ವಯಂವರಂ।।

ಅವರ ಮಾರ್ಗವು ಮಂಗಳಕರವಾಗಲಿ ಎಂದು ಹರಸಿದನು. ನಂತರ ಆ ಮನುಜಾಧಿಪರು ಒಟ್ಟಿಗೇ ಪಾಂಚಾಲಿಯ ಸ್ವಯಂವರಕ್ಕೆ ಹೋಗಲು ನಿರ್ಧರಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಧೌಮ್ಯಪುರೋಹಿತಕರಣೇ ಚತುಃಸಪ್ತತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಧೌಮ್ಯಪುರೋಹಿತಕರಣದಲ್ಲಿ ನೂರಾಎಪ್ಪತ್ತ್ನಾಲ್ಕನೆಯ ಅಧ್ಯಾಯವು.