ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 172
ಸಾರ
ಪರಾಶರನು ರಾಕ್ಷಸರನ್ನು ನಾಶಪಡಿಸುವ ರಾಕ್ಷಸಸತ್ರವನ್ನು ಕೈಗೊಂಡಿದುದು (1-8). ಋಷಿ ಪುಲಸ್ತ್ಯನು ಆ ಕ್ರತುವಿಗೆ ಬಂದು ಸತ್ರವನ್ನು ನಿಲ್ಲಿಸಿದುದು, ಅಗ್ನಿಯನ್ನು ವಿಸರ್ಜಿಸಿದುದು (9-17).
01172001 ಗಂಧರ್ವ ಉವಾಚ।
01172001a ಏವಮುಕ್ತಃ ಸ ವಿಪ್ರರ್ಷಿರ್ವಸಿಷ್ಠೇನ ಮಹಾತ್ಮನಾ।
01172001c ನ್ಯಯಚ್ಛದಾತ್ಮನಃ ಕೋಪಂ ಸರ್ವಲೋಕಪರಾಭವಾತ್।।
ಗಂಧರ್ವನು ಹೇಳಿದನು: “ಮಹಾತ್ಮ ವಸಿಷ್ಠನಿಂದ ಇದನ್ನು ಕೇಳಿದ ಆ ವಿಪ್ರರ್ಷಿಯು ಸರ್ವಲೋಕವನ್ನೂ ಪರಾಭವಗೊಳಿಸುವ ತನ್ನ ಕೋಪವನ್ನು ತಡೆಹಿಡಿದಿಟ್ಟುಕೊಂಡನು.
01172002a ಈಜೇ ಚ ಸ ಮಹಾತೇಜಾಃ ಸರ್ವವೇದವಿದಾಂ ವರಃ।
01172002c ಋಷೀ ರಾಕ್ಷಸಸತ್ರೇಣ ಶಾಕ್ತೇಯೋಽಥ ಪರಾಶರಃ।।
ಆ ಮಹಾತೇಜಸ್ವಿ, ಸರ್ವವೇದವಿದರಲ್ಲಿ ಶ್ರೇಷ್ಠ ಶಾಕ್ತೇಯ ಪರಾಶರ ಋಷಿಯು ರಾಕ್ಷಸಸತ್ರವನ್ನು ನಡೆಸಿದನು.
01172003a ತತೋ ವೃದ್ಧಾಂಶ್ಚ ಬಾಲಾಂಶ್ಚ ರಾಕ್ಷಸಾನ್ಸ ಮಹಾಮುನಿಃ।
01172003c ದದಾಹ ವಿತತೇ ಯಜ್ಞೇ ಶಕ್ತೇರ್ವಧಮನುಸ್ಮರನ್।।
ಶಕ್ತಿಯ ವಧೆಯ ನೆನಪಿನಲ್ಲಿ ಮಹಾಮುನಿಯು ಆ ಯಜ್ಞದಲ್ಲಿ ವೃದ್ಧ, ಬಾಲಕ ರಾಕ್ಷಸರನ್ನು ಸುಟ್ಟುಹಾಕಿದನು.
01172004a ನ ಹಿ ತಂ ವಾರಯಾಮಾಸ ವಸಿಷ್ಠೋ ರಕ್ಷಸಾಂ ವಧಾತ್।
01172004c ದ್ವಿತೀಯಾಮಸ್ಯ ಮಾ ಭಾಂಕ್ಷಂ ಪ್ರತಿಜ್ಞಾಮಿತಿ ನಿಶ್ಚಯಾತ್।।
ಅವನ ಎರಡನೆಯ ಪ್ರತಿಜ್ಞೆಯನ್ನು ಭಂಗಗೊಳಿಸಬಾರದೆಂದು ನಿಶ್ಚಯಿಸಿ ವಸಿಷ್ಠನೂ ಕೂಡ ಆ ರಾಕ್ಷಸರ ವಧೆಯನ್ನು ನಿಲ್ಲಿಸಲಿಲ್ಲ.
01172005a ತ್ರಯಾಣಾಂ ಪಾವಕಾನಾಂ ಸ ಸತ್ರೇ ತಸ್ಮಿನ್ಮಹಾಮುನಿಃ।
01172005c ಆಸೀತ್ಪುರಸ್ತಾದ್ದೀಪ್ತಾನಾಂ ಚತುರ್ಥ ಇವ ಪಾವಕಃ।।
ಆ ಸತ್ರದಲ್ಲಿ ಮೂರು ಪಾವಕಗಳ ಜೊತೆ ಕುಳಿತಿದ್ದ ಆ ಮಹಾಮುನಿಯು ನಾಲ್ಕನೆಯ ಪಾವಕನೋ ಎನ್ನುವಂತೆ ಬೆಳಗುತ್ತಿದ್ದನು.
01172006a ತೇನ ಯಜ್ಞೇನ ಶುಭ್ರೇಣ ಹೂಯಮಾನೇನ ಯುಕ್ತಿತಃ।
01172006c ತದ್ವಿದೀಪಿತಮಾಕಾಶಂ ಸೂರ್ಯೇಣೇವ ಘನಾತ್ಯಯೇ।।
ಆ ಶುಭ್ರ ಯಜ್ಞದಲ್ಲಿ ಶಾಸ್ತ್ರೋಕ್ತವಾಗಿ ಹಾಕಿದ ಹವಿಸ್ಸುಗಳಿಂದ ಬೆಂಕಿಯು ಮಳೆಗಾಲದ ಅಂತ್ಯದಲ್ಲಿ ಆಕಾಶದಲ್ಲಿ ಸೂರ್ಯನು ಹೇಗೋ ಹಾಗೆ ಪ್ರಜ್ವಲಿಸುತ್ತಿತ್ತು.
01172007a ತಂ ವಸಿಷ್ಠಾದಯಃ ಸರ್ವೇ ಮುನಯಸ್ತತ್ರ ಮೇನಿರೇ।
01172007c ತೇಜಸಾ ದಿವಿ ದೀಪ್ಯಂತಂ ದ್ವಿತೀಯಮಿವ ಭಾಸ್ಕರಂ।।
ವಸಿಷ್ಠರೇ ಮೊದಲಾದ ಎಲ್ಲ ಮುನಿಗಳೂ ಅವನು ತೇಜಸ್ಸಿನಿಂದ ದಿವಿಯಲ್ಲಿ ದೇದೀಪ್ಯಮಾನನಾದ ಎರಡನೆಯ ಭಾಸ್ಕರನೆಂದು ಅಭಿಪ್ರಾಯಪಟ್ಟರು.
01172008a ತತಃ ಪರಮದುಷ್ಪ್ರಾಪಮನ್ಯೈರೃಷಿರುದಾರಧೀಃ।
01172008c ಸಮಾಪಿಪಯಿಷುಃ ಸತ್ರಂ ತಮತ್ರಿಃ ಸಮುಪಾಗಮತ್।।
ಅನ್ಯರಿಂದ ಪರಮ ದುರ್ಲಭ ಆ ಸತ್ರದ ಬಳಿಗೆ ಉದಾರ ಮನಸ್ಕ ಅತ್ರಿಯು ಬಂದು ಅದನ್ನು ನಿಲ್ಲಿಸಲು ಪ್ರಯತ್ನಿಸಿದನು.
01172009a ತಥಾ ಪುಲಸ್ತ್ಯಃ ಪುಲಹಃ ಕ್ರತುಶ್ಚೈವ ಮಹಾಕ್ರತುಂ।
01172009c ಉಪಾಜಗ್ಮುರಮಿತ್ರಘ್ನ ರಕ್ಷಸಾಂ ಜೀವಿತೇಪ್ಸಯಾ।।
ಅಮಿತ್ರಘ್ನ! ಅದೇ ರೀತಿ ರಾಕ್ಷಸರು ಜೀವಂತವಿರಬೇಕೆಂದು ಬಯಸಿದ ಪುಲಸ್ತ್ಯ, ಪುಲಹ ಮತ್ತು ಕ್ರತು ಆ ಮಹಾಕ್ರತುವಿಗೆ ಬಂದರು.
01172010a ಪುಲಸ್ತ್ಯಸ್ತು ವಧಾತ್ತೇಷಾಂ ರಕ್ಷಸಾಂ ಭರತರ್ಷಭ।
01172010c ಉವಾಚೇದಂ ವಚಃ ಪಾರ್ಥ ಪರಾಶರಮರಿಂದಮಂ।।
ಭರತರ್ಷಭ! ಪಾರ್ಥ! ಆ ರಾಕ್ಷಸರ ವಧೆಯ ಕುರಿತು ಅರಿಂದಮ ಪರಾಶರನಲ್ಲಿ ಪುಲಸ್ತ್ಯನು ಈ ಮಾತುಗಳನ್ನಾಡಿದನು:
01172011a ಕಚ್ಚಿತ್ತಾತಾಪವಿಘ್ನಂ ತೇ ಕಚ್ಚಿನ್ನಂದಸಿ ಪುತ್ರಕ।
01172011c ಅಜಾನತಾಮದೋಷಾಣಾಂ ಸರ್ವೇಷಾಂ ರಕ್ಷಸಾಂ ವಧಾತ್।
“ಪುತ್ರಕ! ನಿನ್ನನ್ನು ಯಾವುದೂ ತಡೆಹಿಡಿಯುವುದಿಲ್ಲವೇ? ಅಜಾನತ ಅದೋಷಣ ಸರ್ವ ರಾಕ್ಷಸರ ವಧೆಗೈಯುವುದರಲ್ಲಿ ನಿನಗೆ ಯಾವರೀತಿಯ ಆನಂದವು ದೊರೆಯುತ್ತದೆ?
01172012a ಪ್ರಜೋಚ್ಛೇದಮಿಮಂ ಮಹ್ಯಂ ಸರ್ವಂ ಸೋಮಪಸತ್ತಮ।
01172012c ಅಧರ್ಮಿಷ್ಠಂ ವರಿಷ್ಠಃ ಸನ್ಕುರುಷೇ ತ್ವಂ ಪರಾಶರ।
ಪರಾಶರ! ಸೋಮಪಸತ್ತಮ! ನನ್ನ ಕುಲದ ಸರ್ವರನ್ನೂ ಕೊಲ್ಲುವುದರಿಂದ ನೀನು ಅತಿ ದೊಡ್ಡ ಅಧರ್ಮವನ್ನು ಎಸಗುತ್ತಿರುವೆ.
01172012e ರಾಜಾ ಕಲ್ಮಾಷಪಾದಶ್ಚ ದಿವಮಾರೋಢುಮಿಚ್ಛತಿ।।
01172013a ಯೇ ಚ ಶಕ್ತ್ಯವರಾಃ ಪುತ್ರಾ ವಸಿಷ್ಠಸ್ಯ ಮಹಾಮುನೇಃ।
01172013c ತೇ ಚ ಸರ್ವೇ ಮುದಾ ಯುಕ್ತಾ ಮೋದಂತೇ ಸಹಿತಾಃ ಸುರೈಃ।
01172013e ಸರ್ವಮೇತದ್ವಸಿಷ್ಠಸ್ಯ ವಿದಿತಂ ವೈ ಮಹಾಮುನೇ।।
01172014a ರಕ್ಷಸಾಂ ಚ ಸಮುಚ್ಛೇದ ಏಷ ತಾತ ತಪಸ್ವಿನಾಂ।
01172014c ನಿಮಿತ್ತಭೂತಸ್ತ್ವಂ ಚಾತ್ರ ಕ್ರತೌ ವಾಸಿಷ್ಠನಂದನ।
01172014e ಸ ಸತ್ರಂ ಮುಂಚ ಭದ್ರಂ ತೇ ಸಮಾಪ್ತಮಿದಮಸ್ತು ತೇ।।
ರಾಜ ಕಲ್ಮಾಷಪಾದನು ಸ್ವರ್ಗವನ್ನು ಸೇರುತ್ತಾನೆ. ಮಹಾಮುನಿ ವಸಿಷ್ಠನ ಪುತ್ರರು ಶಕ್ತಿ ಮತ್ತು ಇತರ ಸರ್ವರೂ ಸಂತೋಷದಿಂದ ಸುರರ ಸಹಿತ ವಿನೋದದಿಂದಿದ್ದಾರೆ. ಮಹಾಮುನಿ! ಮಗು! ಇದೆಲ್ಲವೂ ಮತ್ತು ಕಾಡಿಸುವ ರಾಕ್ಷಸರ ಸಮುಚ್ಛೇದವೂ ವಸಿಷ್ಠನಿಗೆ ತಿಳಿದಿದ್ದುದೇ ಆಗಿದೆ. ವಸಿಷ್ಠ ನಂದನ! ನೀನು ಈ ಕ್ರತುವಿನ ನಿಮಿತ್ತನಾಗಿದ್ದೀಯೆ. ಈ ಸತ್ರವನ್ನು ಮುಗಿಸು. ನಿನಗೆ ಮಂಗಳವಾಗಲಿ. ನಿನ್ನಿಂದಲೇ ಇದು ಸಮಾಪ್ತಿಯಾಗಲಿ.”
01172015a ಏವಮುಕ್ತಃ ಪುಲಸ್ತ್ಯೇನ ವಸಿಷ್ಠೇನ ಚ ಧೀಮತಾ।
01172015c ತದಾ ಸಮಾಪಯಾಮಾಸ ಸತ್ರಂ ಶಾಕ್ತಿಃ ಪರಾಶರಃ।।
ಪುಲಸ್ತ್ಯ ಮತ್ತು ವಸಿಷ್ಠರಿಂದ ಇದನ್ನು ಕೇಳಿದ ಧೀಮಂತ ಶಾಕ್ತಿ ಪರಾಶರನು ಆ ಸತ್ರವನ್ನು ಅಲ್ಲಿಯೇ ನಿಲ್ಲಿಸಿದನು.
01172016a ಸರ್ವರಾಕ್ಷಸಸತ್ರಾಯ ಸಂಭೃತಂ ಪಾವಕಂ ಮುನಿಃ।
01172016c ಉತ್ತರೇ ಹಿಮವತ್ಪಾರ್ಶ್ವೇ ಉತ್ಸಸರ್ಜ ಮಹಾವನೇ।।
ಸರ್ವ ರಾಕ್ಷಸಸತ್ರಕ್ಕಾಗಿ ಸಂಭೃತಗೊಂಡ ಪಾವಕನನ್ನು ಮುನಿಯು ಹಿಮವತ್ ಪರ್ವತದ ಉತ್ತರ ಭಾಗದಲ್ಲಿರುವ ಮಹಾವನದಲ್ಲಿ ವಿಸರ್ಜಿಸಿದನು.
01172017a ಸ ತತ್ರಾದ್ಯಾಪಿ ರಕ್ಷಾಂಸಿ ವೃಕ್ಷಾನಶ್ಮಾನ ಏವ ಚ।
01172017c ಭಕ್ಷಯನ್ದೃಶ್ಯತೇ ವಹ್ನಿಃ ಸದಾ ಪರ್ವಣಿ ಪರ್ವಣಿ।।
ರಾಕ್ಷಸರನ್ನು, ವೃಕ್ಷಗಳನ್ನು ಮತ್ತು ಶಿಲೆಬಂಡೆಗಳನ್ನು ಭಕ್ಷಿಸುತ್ತಿರುವ ಆ ವಹ್ನಿಯು ಈಗಲೂ ಕೂಡ ಪರ್ವ ಪರ್ವಗಳಲ್ಲಿ ಕಾಣಿಸಿಕೊಳ್ಳುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಔರ್ವೋಪಾಖ್ಯಾನೇ ದ್ವಿಸಪ್ತತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಔರ್ವೋಪಾಖ್ಯಾನದಲ್ಲಿ ನೂರಾಎಪ್ಪತ್ತೆರಡನೆಯ ಅಧ್ಯಾಯವು.