168 ಸೌದಾಮಸುತೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 168

ಸಾರ

ವಸಿಷ್ಠನು ಕಲ್ಮಾಷಪಾದನನ್ನು ರಾಕ್ಷಸನಿಂದ ಬಿಡುಗಡೆಗೊಳಿಸಿದುದು (1-6). ತನ್ನ ಪತ್ನಿಯಲ್ಲಿ ಸಂತಾನವನ್ನು ನೀಡಬೇಕೆಂದು ಕಲ್ಮಾಷಪಾದನು ಕೇಳಿಕೊಳ್ಳಲು ವಸಿಷ್ಠನು ಒಪ್ಪಿಕೊಂಡಿದುದು, ಅಶ್ಮಕನ ಜನನ (7-25).

01168001 ವಸಿಷ್ಠ ಉವಾಚ।
01168001a ಮಾ ಭೈಃ ಪುತ್ರಿ ನ ಭೇತವ್ಯಂ ರಕ್ಷಸಸ್ತೇ ಕಥಂ ಚನ।
01168001c ನೈತದ್ರಕ್ಷೋ ಭಯಂ ಯಸ್ಮಾತ್ಪಶ್ಯಸಿ ತ್ವಮುಪಸ್ಥಿತಂ।।

ವಸಿಷ್ಠನು ಹೇಳಿದನು: “ಪುತ್ರಿ! ಭಯಪಡಬೇಡ! ರಾಕ್ಷಸನಿಂದ ನಿನಗೆ ಯಾವುದೇ ರೀತಿಯ ಭಯವೂ ಇಲ್ಲ. ನೀನು ನೋಡುತ್ತಿರುವ ಭಯವನ್ನುಂಟುಮಾಡುವ ಇವನು ರಾಕ್ಷಸನಲ್ಲ.

01168002a ರಾಜಾ ಕಲ್ಮಾಷಪಾದೋಽಯಂ ವೀರ್ಯವಾನ್ಪ್ರಥಿತೋ ಭುವಿ।
01168002c ಸ ಏಷೋಽಸ್ಮಿನ್ವನೋದ್ದೇಶೇ ನಿವಸತ್ಯತಿಭೀಷಣಃ।।

ಅವನು ಭುವಿಯಲ್ಲಿಯೇ ಪ್ರಥಿತ ವೀರ್ಯವಾನ್ ರಾಜ ಕಲ್ಮಾಷಪಾದ. ಅವನು ಈ ವನ ಪ್ರದೇಶದಲ್ಲಿ ಭೀಷಣನಾಗಿ ವಾಸಿಸುತ್ತಿದ್ದಾನೆ.””

01168003 ಗಂಧರ್ವ ಉವಾಚ।
01168003a ತಮಾಪತಂತಂ ಸಂಪ್ರೇಕ್ಷ್ಯ ವಸಿಷ್ಠೋ ಭಗವಾನೃಷಿಃ।
01168003c ವಾರಯಾಮಾಸ ತೇಜಸ್ವೀ ಹುಂಕರೇಣೈವ ಭಾರತ।।

ಗಂಧರ್ವನು ಹೇಳಿದನು: “ಭಾರತ! ತನ್ನ ಮೇಲೆ ಬೀಳುತ್ತಿರುವ ಅವನನ್ನು ನೋಡಿದ ಭಗವಾನೃಷಿ ತೇಜಸ್ವಿ ವಸಿಷ್ಠನು ಹುಂಕಾರ ಮಾತ್ರದಿಂದಲೇ ಅವನನ್ನು ತಡೆಹಿಡಿದನು.

01168004a ಮಂತ್ರಪೂತೇನ ಚ ಪುನಃ ಸ ತಮಭ್ಯುಕ್ಷ್ಯ ವಾರಿಣಾ।
01168004c ಮೋಕ್ಷಯಾಮಾಸ ವೈ ಘೋರಾದ್ರಾಕ್ಷಸಾದ್ರಾಜಸತ್ತಮಂ।।

ಮಂತ್ರಗಳಿಂದ ಪುನೀತಗೊಂಡಿದ್ದ ನೀರನ್ನು ಅವನ ಮೇಲೆ ಚಿಮುಕಿಸಿ ಆ ರಾಜಸತ್ತಮನನ್ನು ಘೋರ ರಾಕ್ಷಸನಿಂದ ಬಿಡುಗಡೆಗೊಳಿಸಿದನು.

01168005a ಸ ಹಿ ದ್ವಾದಶ ವರ್ಷಾಣಿ ವಸಿಷ್ಠಸ್ಯೈವ ತೇಜಸಾ।
01168005c ಗ್ರಸ್ತ ಆಸೀದ್ಗೃಹೇಣೇವ ಪರ್ವಕಾಲೇ ದಿವಾಕರಃ।।

ಹನ್ನೆರಡು ವರ್ಷಗಳ ನಂತರ ಅವನು ಪರ್ವಕಾಲದಲ್ಲಿ ದಿವಾಕರನು ಗ್ರಹಣದಿಂದ ಹೇಗೋ ಹಾಗೆ ವಸಿಷ್ಠನ ತೇಜಸ್ಸಿನಿಂದ ಬಿಡುಗಡೆ ಹೊಂದಿದನು.

01168006a ರಕ್ಷಸಾ ವಿಪ್ರಮುಕ್ತೋಽಥ ಸ ನೃಪಸ್ತದ್ವನಂ ಮಹತ್।
01168006c ತೇಜಸಾ ರಂಜಯಾಮಾಸ ಸಂಧ್ಯಾಭ್ರಮಿವ ಭಾಸ್ಕರಃ।।

ರಾಕ್ಷಸನಿಂದ ವಿಮುಕ್ತ ಆ ನೃಪತಿಯು ತನ್ನ ತೇಜಸ್ಸಿನಿಂದ ಆ ಮಹಾ ವನವನ್ನು ಭಾಸ್ಕರನು ತನ್ನ ಸಂಧ್ಯಾಕಿರಣಗಳಿಂದ ಹೇಗೋ ಹಾಗೆ ಕೆಂಪಾಗಿಸಿದನು.

01168007a ಪ್ರತಿಲಭ್ಯ ತತಃ ಸಂಜ್ಞಾಮಭಿವಾದ್ಯ ಕೃತಾಂಜಲಿಃ।
01168007c ಉವಾಚ ನೃಪತಿಃ ಕಾಲೇ ವಸಿಷ್ಠಮೃಷಿಸತ್ತಮಂ।।

ಜ್ಞಾನವನ್ನು ಪುನಃ ಗಳಿಸಿದ ನೃಪತಿಯು ಅಂಜಲೀ ಬದ್ಧನಾಗಿ ಅಭಿವಂದಿಸಿ ಋಷಿಸತ್ತಮ ವಸಿಷ್ಠನಲ್ಲಿ ಹೇಳಿದನು:

01168008a ಸೌದಾಸೋಽಹಂ ಮಹಾಭಾಗ ಯಾಜ್ಯಸ್ತೇ ದ್ವಿಜಸತ್ತಮ।
01168008c ಅಸ್ಮಿನ್ಕಾಲೇ ಯದಿಷ್ಟಂ ತೇ ಬ್ರೂಹಿ ಕಿಂ ಕರವಾಣಿ ತೇ।।

“ಮಹಾಭಾಗ! ದ್ವಿಜಸತ್ತಮ! ನಾನು ಸೌದಾಸ. ನಿನ್ನ ಯಾಜಿ. ಈಗ ನಿಮಗಿಷ್ಟವಾದದನ್ನು ಹೇಳು. ನಾನು ಏನು ಮಾಡಬೇಕು ಎನ್ನುವುದನ್ನು ಹೇಳು.”

01168009 ವಸಿಷ್ಠ ಉವಾಚ।
01168009a ವೃತ್ತಮೇತದ್ಯಥಾಕಾಲಂ ಗಚ್ಛ ರಾಜ್ಯಂ ಪ್ರಶಾಧಿ ತತ್।
01168009c ಬ್ರಾಹ್ಮಣಾಂಶ್ಚ ಮನುಷ್ಯೇಂದ್ರ ಮಾವಮಂಸ್ಥಾಃ ಕದಾ ಚನ।।

ವಸಿಷ್ಠನು ಹೇಳಿದನು: “ಕಾಲವು ನಿಶ್ಚಯಿಸಿದ ಹಾಗೆ ನಡೆದು ಹೋಯಿತು. ಹೋಗು. ರಾಜ್ಯವನ್ನು ಆಳು. ಮನುಷ್ಯೇಂದ್ರ! ಎಂದೂ ಬ್ರಾಹ್ಮಣರನ್ನು ಅವಮಾನಗೊಳಿಸಬೇಡ.”

01168010 ರಾಜೋವಾಚ।
01168010a ನಾವಮಂಸ್ಯಾಮ್ಯಹಂ ಬ್ರಹ್ಮನ್ಕದಾ ಚಿದ್ಬ್ರಾಹ್ಮಣರ್ಷಭಾನ್।
01168010c ತ್ವನ್ನಿದೇಶೇ ಸ್ಥಿತಃ ಶಶ್ವತ್ಪುಜಯಿಷ್ಯಾಮ್ಯಹಂ ದ್ವಿಜಾನ್।।

ರಾಜನು ಹೇಳಿದನು: “ಬ್ರಾಹ್ಮಣ! ಬ್ರಾಹ್ಮಣರ್ಷಭರನ್ನು ಎಂದೂ ನಾನು ಅವಮಾನಿಸುವುದಿಲ್ಲ. ನಿನ್ನ ನಿದೇಶದಂತೆ ನಾನು ದ್ವಿಜರನ್ನು ಎಂದೂ ಪೂಜಿಸುತ್ತೇನೆ.

01168011a ಇಕ್ಷ್ವಾಕೂಣಾಂ ತು ಯೇನಾಹಮನೃಣಃ ಸ್ಯಾಂ ದ್ವಿಜೋತ್ತಮ।
01168011c ತತ್ತ್ವತ್ತಃ ಪ್ರಾಪ್ತುಮಿಚ್ಛಾಮಿ ವರಂ ವೇದವಿದಾಂ ವರ।।

ವೇದವಿದರಲ್ಲಿ ಶ್ರೇಷ್ಠನೇ! ದ್ವಿಜೋತ್ತಮ! ನಾನು ಇಕ್ಷ್ವಾಕು ಕುಲದ ಋಣವನ್ನು ತೀರಿಸಬಲ್ಲಂಥಹ ಒಂದು ವರವನ್ನು ನಿನ್ನಿಂದ ಪಡೆಯಲು ಬಯಸುತ್ತೇನೆ.

01168012a ಅಪತ್ಯಾಯೇಪ್ಸಿತಾಂ ಮಹ್ಯಂ ಮಹಿಷೀಂ ಗಂತುಮರ್ಹಸಿ।
01168012c ಶೀಲರೂಪಗುಣೋಪೇತಾಮಿಕ್ಷ್ವಾಕುಕುಲವೃದ್ಧಯೇ।।

ಇಕ್ಷ್ವಾಕುಕುಲದ ವೃದ್ಧಿಗೋಸ್ಕರ ಶೀಲರೂಪಗುಣೋಪೇತಳಾದ ನನ್ನ ಮಹಿಷಿಯಲ್ಲಿ ನೀನು ಮಕ್ಕಳನ್ನು ಪಡೆಯಬೇಕು.””

01168013 ಗಂಧರ್ವ ಉವಾಚ।
01168013a ದದಾನೀತ್ಯೇವ ತಂ ತತ್ರ ರಾಜಾನಂ ಪ್ರತ್ಯುವಾಚ ಹ।
01168013c ವಸಿಷ್ಠಃ ಪರಮೇಷ್ವಾಸಂ ಸತ್ಯಸಂಧೋ ದ್ವಿಜೋತ್ತಮಃ।।

ಗಂಧರ್ವನು ಹೇಳಿದನು: “ಆಗ ಪರಮೇಷ್ವಾಸ ಸತ್ಯಸಂಧ ದ್ವಿಜೋತ್ತಮ ವಸಿಷ್ಠನು “ನಾನು ನಿನಗೆ ಕೊಡುತ್ತೇನೆ!” ಎಂದು ರಾಜನಿಗೆ ಹೇಳಿದನು.

01168014a ತತಃ ಪ್ರತಿಯಯೌ ಕಾಲೇ ವಸಿಷ್ಠಸಹಿತೋಽನಘ।
01168014c ಖ್ಯಾತಂ ಪುರವರಂ ಲೋಕೇಷ್ವಯೋಧ್ಯಾಂ ಮನುಜೇಶ್ವರಃ।।

ಅನಘ! ನಂತರ ಆ ಮನುಜೇಶ್ವರನು ವಸಿಷ್ಠನ ಸಹಿತ ಲೋಕಗಳಲ್ಲಿಯೇ ಶ್ರೇಷ್ಠ ನಗರಿಯೆಂದು ಖ್ಯಾತ ಅಯೋಧ್ಯೆಗೆ ಹಿಂದಿರುಗಿದನು.

01168015a ತಂ ಪ್ರಜಾಃ ಪ್ರತಿಮೋದಂತ್ಯಃ ಸರ್ವಾಃ ಪ್ರತ್ಯುದ್ಯಯುಸ್ತದಾ।
01168015c ವಿಪಾಪ್ಮಾನಂ ಮಹಾತ್ಮಾನಂ ದಿವೌಕಸ ಇವೇಶ್ವರಂ।।

ದಿವೌಕಸರು ತಮ್ಮ ಈಶ್ವರನನ್ನು ಸ್ವಾಗತಿಸುವಂತೆ ಪ್ರಜೆಗಳೆಲ್ಲರೂ ಸಂತೋಷದಿಂದ ವಿಪತ್ತಿನಿಂದ ಮುಕ್ತ ಮಹಾತ್ಮನನ್ನು ಸ್ವಾಗತಿಸಿದರು.

01168016a ಅಚಿರಾತ್ಸ ಮನುಷ್ಯೇಂದ್ರೋ ನಗರೀಂ ಪುಣ್ಯಕರ್ಮಣಾಂ।
01168016c ವಿವೇಶ ಸಹಿತಸ್ತೇನ ವಸಿಷ್ಠೇನ ಮಹಾತ್ಮನಾ।।

ತಕ್ಷಣವೇ ಆ ಮುನುಷ್ಯೇಂದ್ರನು ಪುಣ್ಯಕರ್ಮಿಗಳ ನಗರಿಯನ್ನು ಮಹಾತ್ಮ ವಸಿಷ್ಠನ ಸಹಿತ ಪ್ರವೇಶಿಸಿದನು.

01168017a ದದೃಶುಸ್ತಂ ತತೋ ರಾಜನ್ನಯೋಧ್ಯಾವಾಸಿನೋ ಜನಾಃ।
01168017c ಪುಷ್ಯೇಣ ಸಹಿತಂ ಕಾಲೇ ದಿವಾಕರಮಿವೋದಿತಂ।।

ಅಯೋಧ್ಯಾವಾಸಿ ಜನರು ಪುಷ್ಯದ ಸಹಿತವಿರುವ ದಿವಾಕರನನ್ನು ನೋಡುವಂತೆ ರಾಜನನ್ನು ನೋಡಿ ಸಂತಸಗೊಂಡರು.

01168018a ಸ ಹಿ ತಾಂ ಪೂರಯಾಮಾಸ ಲಕ್ಷ್ಮ್ಯಾ ಲಕ್ಷ್ಮೀವತಾಂ ವರಃ।
01168018c ಅಯೋಧ್ಯಾಂ ವ್ಯೋಮ ಶೀತಾಂಶುಃ ಶರತ್ಕಾಲ ಇವೋದಿತಃ।।

ಲಕ್ಷ್ಮೀವಂತರಲ್ಲಿಯೇ ಶ್ರೇಷ್ಠ ಶ್ರೀಮಂತನು ಶರತ್ಕಾಲದ ಶೀತಾಂಶುವು ದಿಗಂತದಲ್ಲಿ ಉದಯವಾಗುತ್ತಿರುವಂತೆ ಅಯೋಧ್ಯೆಯಲ್ಲಿ ಕಾಣಿಸಿಕೊಂಡನು.

01168019a ಸಂಸಿಕ್ತಮೃಷ್ಟಪಂಥಾನಂ ಪತಾಕೋಚ್ಛ್ರಯಭೂಷಿತಂ।
01168019c ಮನಃ ಪ್ರಹ್ಲಾದಯಾಮಾಸಾ ತಸ್ಯ ತತ್ಪುರಮುತ್ತಮಂ।।

ತೊಳೆದು ಸಿದ್ಧಪಡಿಸಿದ್ದ ರಸ್ತೆಗಳು ಮತ್ತು ಪತಾಕೆಗಳಿಂದ ಭೂಷಿತ ಮೇಲ್ಮಹಡಿಗಳು ಮತ್ತು ಆ ಅನುತ್ತಮ ಪುರವನ್ನು ನೋಡಿ ರಾಜನ ಮನಸ್ಸೂ ಆಹ್ಲಾದಗೊಂಡಿತು.

01168020a ತುಷ್ಟಪುಷ್ಟಜನಾಕೀರ್ಣಾ ಸಾ ಪುರೀ ಕುರುನಂದನ।
01168020c ಅಶೋಭತ ತದಾ ತೇನ ಶಕ್ರೇಣೇವಾಮರಾವತೀ।।

ಕುರುನಂದನ! ತುಷ್ಟ ಪುಷ್ಟ ಜನರಿಂದ ತುಂಬಿದ್ದ ಆ ಪುರವು ಶಕ್ರನೊಂದಿಗೆ ಹೊಳೆಯುತ್ತಿರುವ ಅಮರಾವತಿಯಂತೆ ತೋರಿತು.

01168021a ತತಃ ಪ್ರವಿಷ್ಟೇ ರಾಜೇಂದ್ರೇ ತಸ್ಮಿನ್ರಾಜನಿ ತಾಂ ಪುರೀಂ।
01168021c ತಸ್ಯ ರಾಜ್ಞೋಽಜ್ಞಯಾ ದೇವೀ ವಸಿಷ್ಠಮುಪಚಕ್ರಮೇ।।

ರಾಜೇಂದ್ರ ರಾಜನು ಆ ಪುರಿಯನ್ನು ಪ್ರವೇಶಿಸಿದ ನಂತರ ಅವನ ಆಜ್ಞೆಯಂತೆ ರಾಣಿ ದೇವಿಯು ವಸಿಷ್ಠನ ಬಳಿಸಾರಿದಳು.

01168022a ಋತಾವಥ ಮಹರ್ಷಿಃ ಸ ಸಂಬಭೂವ ತಯಾ ಸಹ।
01168022c ದೇವ್ಯಾ ದಿವ್ಯೇನ ವಿಧಿನಾ ವಸಿಷ್ಠಃ ಶ್ರೇಷ್ಠಭಾಗೃಷಿಃ।।

ಋತುಕಾಲ ಬಂದಾಗ ಶ್ರೇಷ್ಠಭಾಗಿ ಋಷಿ ಮಹರ್ಷಿ ಮಸಿಷ್ಠನು ದೇವಿಯೊಡನೆ ದಿವ್ಯ ವಿಧಿಯಲ್ಲಿ ಕೂಡಿದನು.

01168023a ಅಥ ತಸ್ಯಾಂ ಸಮುತ್ಪನ್ನೇ ಗರ್ಭೇ ಸ ಮುನಿಸತ್ತಮಃ।
01168023c ರಾಜ್ಞಾಭಿವಾದಿತಸ್ತೇನ ಜಗಾಮ ಪುನರಾಶ್ರಮಂ।।

ಅವಳಲ್ಲಿ ಮುನಿಸತ್ತಮನ ಗರ್ಭವು ತಾಳಿದ ನಂತರ ರಾಜನಿಂದ ಬೀಳ್ಕೊಂಡು ಅವನು ಪುನಃ ಆಶ್ರಮಕ್ಕೆ ತೆರಳಿದನು.

01168024a ದೀರ್ಘಕಾಲಧೃತಂ ಗರ್ಭಂ ಸುಷಾವ ನ ತು ತಂ ಯದಾ।
01168024c ಸಾಥ ದೇವ್ಯಶ್ಮನಾ ಕುಕ್ಷಿಂ ನಿರ್ಬಿಭೇದ ತದಾ ಸ್ವಕಂ।।

ಅವಳು ಆ ಗರ್ಭವನ್ನು ದೀರ್ಘಕಾಲದವರೆಗೆ ಹೊತ್ತಳು. ನಂತರ ಅವಳು ಗರ್ಭವನ್ನು ಒಂದು ಕಲ್ಲಿನಿಂದ ಹೊಡೆದು ಸೀಳಿದಳು.

01168025a ದ್ವಾದಶೇಽಥ ತತೋ ವರ್ಷೇ ಸ ಜಜ್ಞೇ ಮನುಜರ್ಷಭ।
01168025c ಅಶ್ಮಕೋ ನಾಮ ರಾಜರ್ಷಿಃ ಪೋತನಂ ಯೋ ನ್ಯವೇಶಯತ್।।

ಮನುಜರ್ಷಭ! ಅದು ಹನ್ನೆರಡನೆಯ ವರ್ಷವಾಗಿತ್ತು. ಆಗ ಪೋತನದಲ್ಲಿ ವಾಸಿಸುತ್ತಿದ್ದ ಅಶ್ಮಕ ಎಂಬ ರಾಜರ್ಷಿಯು ಹುಟ್ಟಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಸೌದಾಮಸುತೋತ್ಪತ್ತೌ ಅಷ್ಟಶಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಸೌದಾಮಸುತೋತ್ಪತ್ತಿಯಲ್ಲಿ ನೂರಾಅರವತ್ತೆಂಟನೆಯ ಅಧ್ಯಾಯವು.