ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 164
ಸಾರ
ಋಷಿ ವಸಿಷ್ಠನ ಕುರಿತು ಕೇಳಲು, ಗಂಧರ್ವನು ಅರ್ಜುನನಿಗೆ ಅವನ ಸಾಧನೆಗಳನ್ನು ವರ್ಣಿಸಿದುದು (1-14).
01164001 ವೈಶಂಪಾಯನ ಉವಾಚ।
01164001a ಸ ಗಂಧರ್ವವಚಃ ಶ್ರುತ್ವಾ ತತ್ತದಾ ಭರತರ್ಷಭ।
01164001c ಅರ್ಜುನಃ ಪರಯಾ ಪ್ರೀತ್ಯಾ ಪೂರ್ಣಚಂದ್ರ ಇವಾಬಭೌ।।
ವೈಶಂಪಾಯನನು ಹೇಳಿದನು: “ಗಂಧರ್ವನ ಈ ಮಾತುಗಳನ್ನು ಕೇಳಿದ ಭರತರ್ಷಭ ಅರ್ಜುನನು ಪರಮ ಸಂತುಷ್ಟನಾಗಿ ಪೂರ್ಣ ಚಂದ್ರನಂತೆ ಕಾಂತಿಯುಕ್ತನಾದನು.
01164002a ಉವಾಚ ಚ ಮಹೇಷ್ವಾಸೋ ಗಂಧರ್ವಂ ಕುರುಸತ್ತಮಃ।
01164002c ಜಾತಕೌತೂಹಲೋಽತೀವ ವಸಿಷ್ಠಸ್ಯ ತಪೋಬಲಾತ್।।
ವಸಿಷ್ಠನ ಅತೀವ ತಪೋಬಲದ ಕುರಿತು ಕುತೂಹಲ ಹುಟ್ಟಿದ ಕುರುಸತ್ತಮನು ಮಹೇಷ್ವಾಸ ಗಂಧರ್ವನಲ್ಲಿ ಕೇಳಿಕೊಂಡನು:
01164003a ವಸಿಷ್ಠ ಇತಿ ಯಸ್ಯೈತದೃಷೇರ್ನಾಮ ತ್ವಯೇರಿತಂ।
01164003c ಏತದಿಚ್ಛಾಮ್ಯಹಂ ಶ್ರೋತುಂ ಯಥಾವತ್ತದ್ವದಸ್ವ ಮೇ।।
“ವಸಿಷ್ಠ ಎಂಬ ಹೆಸರಿನ ಋಷಿಯ ಕುರಿತು ಹೇಳಿದೆಯಲ್ಲ ಅವನ ಕುರಿತು ಕೇಳಲು ಬಯಸುತ್ತೇನೆ. ಯಥಾವತ್ತಾಗಿ ನನಗೆ ಹೇಳು.
01164004a ಯ ಏಷ ಗಂಧರ್ವಪತೇ ಪೂರ್ವೇಷಾಂ ನಃ ಪುರೋಹಿತಃ।
01164004c ಆಸೀದೇತನ್ಮಮಾಚಕ್ಷ್ವ ಕ ಏಷ ಭಗವಾನೃಷಿಃ।।
ಗಂಧರ್ವಪತೇ! ನನ್ನ ಪೂರ್ವಜರ ಪುರೋಹಿತನಾಗಿದ್ದ ಭಗವಾನೃಷಿಯ ಕುರಿತು ನನಗೆ ಹೇಳು.”
01164005 ಗಂಧರ್ವ ಉವಾಚ।
01164005a ತಪಸಾ ನಿರ್ಜಿತೌ ಶಶ್ವದಜೇಯಾವಮರೈರಪಿ।
01164005c ಕಾಮಕ್ರೋಧಾವುಭೌ ಯಸ್ಯ ಚರಣೌ ಸಂವವಾಹತುಃ।।
ಗಂಧರ್ವನು ಹೇಳಿದನು: “ಅಮರರಿಂದಲೂ ಜಯಿಸಲಾಧ್ಯ ಕಾಮ ಕ್ರೋಧಗಳನ್ನು ತಪಸ್ಸಿನಿಂದ ಜಯಿಸಿ ಅವು ತನ್ನ ಚರಣಗಳನ್ನು ಒತ್ತುವಂತೆ ಮಾಡಿದವನೇ ಅವನು.
01164006a ಯಸ್ತು ನೋಚ್ಛೇದನಂ ಚಕ್ರೇ ಕುಶಿಕಾನಾಮುದಾರಧೀಃ।
01164006c ವಿಶ್ವಾಮಿತ್ರಾಪರಾಧೇನ ಧಾರಯನ್ಮನ್ಯುಮುತ್ತಮಂ।।
ವಿಶ್ವಾಮಿತ್ರನ ಅಪರಾಧದಿಂದ ಉಂಟಾದ ಅತ್ಯಂತ ಕೋಪವನ್ನು ಸಹಿಸಿಕೊಂಡು ಕುಶಿಕರನನ್ನು ನಾಶಪಡಿಸದೇ ಇದ್ದವನು ಅವನು.
01164007a ಪುತ್ರವ್ಯಸನಸಂತಪ್ತಃ ಶಕ್ತಿಮಾನಪಿ ಯಃ ಪ್ರಭುಃ।
01164007c ವಿಶ್ವಾಮಿತ್ರವಿನಾಶಾಯ ನ ಮೇನೇ ಕರ್ಮ ದಾರುಣಂ।।
ಪುತ್ರವ್ಯಸನ ಸಂತಪ್ತನಾದಾಗ ಶಕ್ತಿವಂತನಾಗಿದ್ದರೂ ವಿಶ್ವಾಮಿತ್ರನ ವಿನಾಶಕ್ಕಾಗಿ ಯಾವುದೇ ದಾರುಣ ಕೃತ್ಯವನ್ನೂ ಮಾಡದ ಪ್ರಭುವು ಅವನು.
01164008a ಮೃತಾಂಶ್ಚ ಪುನರಾಹರ್ತುಂ ಯಃ ಸ ಪುತ್ರಾನ್ಯಮಕ್ಷಯಾತ್।
01164008c ಕೃತಾಂತಂ ನಾತಿಚಕ್ರಾಮ ವೇಲಾಮಿವ ಮಹೋದಧಿಃ।।
ಸಾಗರವು ಹೇಗೆ ಒಂದು ಗಡಿಯನ್ನು ದಾಟಿ ಮುಂದೆ ಬರುವುದಿಲ್ಲವೋ ಹಾಗೆ ಅವನು ಯಮಕ್ಷಯದಿಂದ ಮೃತರಾದ ತನ್ನ ಪುತ್ರರನ್ನು ಪುನಃ ಕರೆಯಿಸಿಕೊಳ್ಳಲಿಲ್ಲ.
01164009a ಯಂ ಪ್ರಾಪ್ಯ ವಿಜಿತಾತ್ಮಾನಂ ಮಹಾತ್ಮಾನಂ ನರಾಧಿಪಾಃ।
01164009c ಇಕ್ಷ್ವಾಕವೋ ಮಹೀಪಾಲಾ ಲೇಭಿರೇ ಪೃಥಿವೀಮಿಮಾಂ।।
ಈ ವಿಜಿತಾತ್ಮ ಮಹಾತ್ಮನನ್ನು ಪಡೆದ ಇಕ್ಷ್ವಾಕು ವಂಶದ ನರಾಧಿಪರು ಇಡೀ ಪೃಥ್ವಿಯನ್ನೇ ಪಡೆದು ಮಹೀಪಾಲರಾದರು.
01164010a ಪುರೋಹಿತವರಂ ಪ್ರಾಪ್ಯ ವಸಿಷ್ಠಮೃಷಿಸತ್ತಮಂ।
01164010c ಈಜಿರೇ ಕ್ರತುಭಿಶ್ಚಾಪಿ ನೃಪಾಸ್ತೇ ಕುರುನಂದನ।।
ಕುರುನಂದನ! ಋಷಿಸತ್ತಮ ವಸಿಷ್ಠನನ್ನು ಶ್ರೇಷ್ಠ ಪುರೋಹಿತನನ್ನಾಗಿ ಪಡೆದ ಆ ನೃಪರು ಹಲವಾರು ಕ್ರತುಗಳನ್ನು ಯಾಜಿಸಿದರು.
01164011a ಸ ಹಿ ತಾನ್ಯಾಜಯಾಮಾಸ ಸರ್ವಾನ್ನೃಪತಿಸತ್ತಮಾನ್।
01164011c ಬ್ರಹ್ಮರ್ಷಿಃ ಪಾಂಡವಶ್ರೇಷ್ಠ ಬೃಹಸ್ಪತಿರಿವಾಮರಾನ್।।
ಪಾಂಡವಶ್ರೇಷ್ಠ! ಅಮರರಿಗೆ ಬೃಹಸ್ಪತಿಯು ಹೇಗೋ ಹಾಗೆ ಆ ಎಲ್ಲ ನೃಪಸತ್ತಮರಿಗೆ ಈ ಬ್ರಹ್ಮರ್ಷಿಯು ಯಜ್ಞಯಾಗಾದಿಗಳನ್ನು ಮಾಡಿಸಿಕೊಟ್ಟನು.
01164012a ತಸ್ಮಾದ್ಧರ್ಮಪ್ರಧಾನಾತ್ಮಾ ವೇದಧರ್ಮವಿದೀಪ್ಸಿತಃ।
01164012c ಬ್ರಾಹ್ಮಣೋ ಗುಣವಾನ್ಕಶ್ಚಿತ್ಪುರೋಧಾಃ ಪ್ರವಿಮೃಶ್ಯತಾಂ।।
ಆದುದರಿಂದ ಧರ್ಮಪ್ರಧಾನಾತ್ಮ ವೇದಧರ್ಮವಿದೀಪ್ಸಿತ ಗುಣವಂತ ಬ್ರಾಹ್ಮಣ ಯಾರನ್ನಾದರೂ ನಿನ್ನ ಪುರೋಹಿತನನ್ನಾಗಿ ಮಾಡಿಕೊಳ್ಳಲು ಹುಡುಕು.
01164013a ಕ್ಷತ್ರಿಯೇಣ ಹಿ ಜಾತೇನ ಪೃಥಿವೀಂ ಜೇತುಮಿಚ್ಛತಾ।
01164013c ಪೂರ್ವಂ ಪುರೋಹಿತಃ ಕಾರ್ಯಃ ಪಾರ್ಥ ರಾಜ್ಯಾಭಿವೃದ್ಧಯೇ।।
ಪಾರ್ಥ! ಕ್ಷತ್ರಿಯನಾಗಿ ಹುಟ್ಟಿದವನು, ಪೃಥ್ವಿಯನ್ನು ಜಯಿಸುವ ಇಚ್ಛೆಯುಳ್ಳವನು ರಾಜ್ಯಾಭಿವೃದ್ಧಿಗಾಗಿ ಮೊದಲು ಪುರೋಹಿತನನ್ನು ಪಡೆಯುವ ಕಾರ್ಯವನ್ನು ಮಾಡಬೇಕು.
01164014a ಮಹೀಂ ಜಿಗೀಷತಾ ರಾಜ್ಞಾ ಬ್ರಹ್ಮ ಕಾರ್ಯಂ ಪುರಃಸರಂ।
01164014c ತಸ್ಮಾತ್ಪುರೋಹಿತಃ ಕಶ್ಚಿದ್ಗುಣವಾನಸ್ತು ವೋ ದ್ವಿಜಃ।।
ಮಹಿಯನ್ನು ಜಯಿಸಲಿಚ್ಛಿಸುವ ರಾಜನು ತನ್ನ ಪುರಸ್ಸರದಲ್ಲಿ ಬ್ರಹ್ಮಕಾರ್ಯವನ್ನು ಮಾಡಬೇಕು. ಆದುದರಿಂದ ಗುಣವಂತ ದ್ವಿಜ ಯಾರಾದರೂ ನಿಮ್ಮ ಪುರೋಹಿತನಾಗಲಿ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಪುರೋಹಿತಕರಣಕಥನೇ ಚತುಃಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಪುರೋಹಿತಕರಣಕಥನದಲ್ಲಿ ನೂರಾಅರವತ್ತ್ನಾಲ್ಕನೆಯ ಅಧ್ಯಾಯವು.