ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 163
ಸಾರ
ಸಂವರಣ-ತಪತಿಯರ ವಿವಾಹ, ಹನ್ನೆರಡು ವರ್ಷಗಳು ಗಿರಿಯಲ್ಲಿ ವಿಹಾರ (1-13). ರಾಜನಿಲ್ಲದ ರಾಜ್ಯದಲ್ಲಿ ಬರಗಾಲ, ವಸಿಷ್ಠನು ತಪತಿಯೊಂದಿಗೆ ರಾಜನನ್ನು ಹಿಂದೆ ಕರೆದುಕೊಂಡು ಬಂದುದು (14-18). ಸಂವರಣನಲ್ಲಿ ಕುರುವಿನ ಜನನ (19-23).
01163001 ವಸಿಷ್ಠ ಉವಾಚ।
01163001a ಯೈಷಾ ತೇ ತಪತೀ ನಾಮ ಸಾವಿತ್ರ್ಯವರಜಾ ಸುತಾ।
01163001c ತಾಂ ತ್ವಾಂ ಸಂವರಣಸ್ಯಾರ್ಥೇ ವರಯಾಮಿ ವಿಭಾವಸೋ।।
ವಸಿಷ್ಠನು ಹೇಳಿದನು: “ವಿಭಾವಸೋ! ಸಂವರಣನಿಗಾಗಿ ತಪತೀ ಎಂಬ ಹೆಸರಿನ ನಿನ್ನ ಮಗಳು ಮತ್ತು ಸಾವಿತ್ರಿಯ ತಂಗಿಯನ್ನು ಕೇಳಿಕೊಂಡು ಬಂದಿದ್ದೇನೆ.
01163002a ಸ ಹಿ ರಾಜಾ ಬೃಹತ್ಕೀರ್ತಿರ್ಧರ್ಮಾರ್ಥವಿದುದಾರಧೀಃ।
01163002c ಯುಕ್ತಃ ಸಂವರಣೋ ಭರ್ತಾ ದುಹಿತುಸ್ತೇ ವಿಹಂಗಮ।।
ವಿಹಂಗಮ! ಉದಾರ ಮನಸ್ಕನಾದ, ಬೃಹತ್ಕೀರ್ತಿ, ಧರ್ಮ, ಮತ್ತು ಅರ್ಥವನ್ನು ಹೊಂದಿರುವ ರಾಜ ಸಂವರಣನು ನಿನ್ನ ಮಗಳಿಗೆ ಯೋಗ್ಯ ವರನಾಗುತ್ತಾನೆ.””
01163003 ಗಂಧರ್ವ ಉವಾಚ।
01163003a ಇತ್ಯುಕ್ತಃ ಸವಿತಾ ತೇನ ದದಾನೀತ್ಯೇವ ನಿಶ್ಚಿತಃ।
01163003c ಪ್ರತ್ಯಭಾಷತ ತಂ ವಿಪ್ರಂ ಪ್ರತಿನಂದ್ಯ ದಿವಾಕರಃ।।
ಗಂಧರ್ವನು ಹೇಳಿದನು: “ಅವಳನ್ನು ಅವನಿಗೇ ಕೊಡಬೇಕೆಂದು ಮೊದಲೇ ನಿಶ್ಚಯಿಸಿದ್ದ ಸವಿತು ದಿವಾಕರನು ಆ ವಿಪ್ರನನ್ನು ನಮಸ್ಕರಿಸಿ ಉತ್ತರಿಸಿದನು:
01163004a ವರಃ ಸಂವರಣೋ ರಾಜ್ಞಾಂ ತ್ವಮೃಷೀಣಾಂ ವರೋ ಮುನೇ।
01163004c ತಪತೀ ಯೋಷಿತಾಂ ಶ್ರೇಷ್ಠಾ ಕಿಮನ್ಯತ್ರಾಪವರ್ಜನಾತ್।।
“ನೀನು ಋಷಿಗಳಲ್ಲಿ ಶ್ರೇಷ್ಠನು ಹೇಗೋ ಹಾಗೆ ರಾಜರಲ್ಲಿ ಸಂವರಣನು ಶ್ರೇಷ್ಠ ಮತ್ತು ಕನ್ಯೆಯರಲ್ಲಿ ತಪತಿಯು ಶ್ರೇಷ್ಠೆ. ಹೀಗಿರುವಾಗ ಅವಳನ್ನು ಬೇರೆ ಎಲ್ಲಿ ಯಾಕೆ ಕೊಡಬೇಕು?”
01163005a ತತಃ ಸರ್ವಾನವದ್ಯಾಗ್ನೀಂ ತಪತೀಂ ತಪನಃ ಸ್ವಯಂ।
01163005c ದದೌ ಸಂವರಣಸ್ಯಾರ್ಥೇ ವಸಿಷ್ಠಾಯ ಮಹಾತ್ಮನೇ।
01163005e ಪ್ರತಿಜಗ್ರಾಹ ತಾಂ ಕನ್ಯಾಂ ಮಹರ್ಷಿಸ್ತಪತೀಂ ತದಾ।।
01163006a ವಸಿಷ್ಠೋಽಥ ವಿಸೃಷ್ಟಶ್ಚ ಪುನರೇವಾಜಗಾಮ ಹ।
01163006c ಯತ್ರ ವಿಖ್ಯತಕೀರ್ತಿಃ ಸ ಕುರೂಣಾಮೃಷಭೋಽಭವತ್।।
ಆಗ ಸ್ವಯಂ ತಪನನು ಸರ್ವಾನವದ್ಯಾಂಗಿ ತಪತಿಯನ್ನು ಸಂವರಣನಿಗಾಗಿ ಮಹಾತ್ಮ ವಸಿಷ್ಠನಿಗೆ ಕೊಟ್ಟನು. ಮಹರ್ಷಿಯು ಕನ್ಯೆ ತಪತಿಯನ್ನು ಸ್ವೀಕರಿಸಿದನು. ಅವನಿಂದ ಬೀಳ್ಕೊಂಡ ವಸಿಷ್ಠನು ಪುನಃ ವಿಖ್ಯಾತಕೀರ್ತಿ ಕುರುಗಳ ವೃಷಭನಿದ್ದಲ್ಲಿಗೆ ಬಂದನು.
01163007a ಸ ರಾಜಾ ಮನ್ಮಥಾವಿಷ್ಟಸ್ತದ್ಗತೇನಾಂತರಾತ್ಮನಾ।
01163007c ದೃಷ್ಟ್ವಾ ಚ ದೇವಕನ್ಯಾಂ ತಾಂ ತಪತೀಂ ಚಾರುಹಾಸಿನೀಂ।
01163007e ವಸಿಷ್ಠೇನ ಸಹಾಯಾಂತೀಂ ಸಂಹೃಷ್ಟೋಽಭ್ಯಧಿಕಂ ಬಭೌ।।
ಮನ್ಮಥಾವಿಷ್ಠನಾಗಿ ಅಂತರಾತ್ಮವನ್ನೇ ಅವಳೊಡನೆ ಕಳುಹಿಸಿಕೊಟ್ಟಿದ್ದ ರಾಜನು ವಸಿಷ್ಠನೊಡನೆ ಬಂದಿದ್ದ ಚಾರುಹಾಸಿನಿ ದೇವಕನ್ಯೆ ತಪತಿಯನ್ನು ನೋಡಿ ಅತ್ಯಧಿಕ ಹರ್ಷಗೊಂಡನು.
01163008a ಕೃಚ್ಛ್ರೇ ದ್ವಾದಶರಾತ್ರೇ ತು ತಸ್ಯ ರಾಜ್ಞಃ ಸಮಾಪಿತೇ।
01163008c ಆಜಗಾಮ ವಿಶುದ್ಧಾತ್ಮಾ ವಸಿಷ್ಠೋ ಭಗವಾನೃಷಿಃ।।
01163009a ತಪಸಾರಾಧ್ಯ ವರದಂ ದೇವಂ ಗೋಪತಿಮೀಶ್ವರಂ।
01163009c ಲೇಭೇ ಸಂವರಣೋ ಭಾರ್ಯಾಂ ವಸಿಷ್ಠಸ್ಯೈವ ತೇಜಸಾ।।
ರಾಜನು ದ್ವಾದಶ ರಾತ್ರಿಗಳ ಕೃಚ್ಛ್ರವನ್ನು ಪೂರೈಸುತ್ತಿದ್ದಂತೆಯೇ ವಿಶುದ್ಧಾತ್ಮ ಭಗವಾನೃಷಿ ವಸಿಷ್ಠನು ಬಂದನು. ವರದ, ದೇವ, ಗೋಪತಿ, ಈಶ್ವರನನ್ನು ತಪಸ್ಸಿನಿಂದ ಆರಾಧಿಸಿ ವಸಿಷ್ಠನ ತೇಜಸ್ಸಿನಿಂದ ಸಂವರಣನು ಭಾರ್ಯೆಯನ್ನು ಪಡೆದನು.
01163010a ತತಸ್ತಸ್ಮಿನ್ಗಿರಿಶ್ರೇಷ್ಠೇ ದೇವಗಂಧರ್ವಸೇವಿತೇ।
01163010c ಜಗ್ರಾಹ ವಿಧಿವತ್ಪಾಣಿಂ ತಪತ್ಯಾಃ ಸ ನರರ್ಷಭಃ।।
ಆಗ ದೇವಗಂಧರ್ವಸೇವಿತ ಆ ಶ್ರೇಷ್ಠ ಗಿರಿಯಲ್ಲಿಯೇ ಆ ನರರ್ಷಭನು ವಿಧಿವತ್ತಾಗಿ ತಪತಿಯ ಪಾಣಿಗ್ರಹಣ ಮಾಡಿದನು.
01163011a ವಸಿಷ್ಠೇನಾಭ್ಯನುಜ್ಞಾತಸ್ತಸ್ಮಿನ್ನೇವ ಧರಾಧರೇ।
01163011c ಸೋಽಕಾಮಯತ ರಾಜರ್ಷಿರ್ವಿಹರ್ತುಂ ಸಹ ಭಾರ್ಯಯಾ।।
01163012a ತತಃ ಪುರೇ ಚ ರಾಷ್ಟ್ರೇ ಚ ವಾಹನೇಷು ಬಲೇಷು ಚ।
01163012c ಆದಿದೇಶ ಮಹೀಪಾಲಸ್ತಮೇವ ಸಚಿವಂ ತದಾ।।
ವಸಿಷ್ಠನ ಅನುಜ್ಞೆಯನ್ನು ಪಡೆದು ಆ ರಾಜರ್ಷಿಯು ತನ್ನ ಭಾರ್ಯೆಯೊಂದಿಗೆ ಅದೇ ಧರಾಧರದಲ್ಲಿ ಕಾಮಿಸಿದನು. ಮಹೀಪಾಲನು ಅದೇ ಸಚಿವನನ್ನು ಪುರ, ರಾಷ್ಟ್ರ, ವಾಹನ ಮತ್ತು ಸೇನೆಗಳ ಮೇಲ್ವಿಚಾರಣೆಗೆ ನೇಮಿಸಿದನು.
01163013a ನೃಪತಿಂ ತ್ವಭ್ಯನುಜ್ಞಾಯ ವಸಿಷ್ಠೋಽಥಾಪಚಕ್ರಮೇ।
01163013c ಸೋಽಪಿ ರಾಜಾ ಗಿರೌ ತಸ್ಮಿನ್ವಿಜಹಾರಾಮರೋಪಮಃ।।
ನೃಪತಿಯಿಂದ ಬೀಳ್ಕೊಂಡ ವಸಿಷ್ಠನು ಹಿಂದಿರುಗಿದನು. ರಾಜನಾದರೋ ಆ ಗಿರಿಯಲ್ಲಿ ಅಮರನಂತೆ ವಿಹರಿಸಿದನು.
01163014a ತತೋ ದ್ವಾದಶ ವರ್ಷಾಣಿ ಕಾನನೇಷು ಜಲೇಷು ಚ।
01163014c ರೇಮೇ ತಸ್ಮಿನ್ಗಿರೌ ರಾಜಾ ತಯೈವ ಸಹ ಭಾರ್ಯಯಾ।।
ರಾಜನು ತನ್ನ ಪತ್ನಿಯೊಡನೆ ಹನ್ನೆರಡು ವರ್ಷಗಳು ಆ ಗಿರಿಯ ಕಾನನಗಳಲ್ಲಿ ಮತ್ತು ಜಲದಲ್ಲಿ ರಮಿಸಿದನು.
01163015a ತಸ್ಯ ರಾಜ್ಞಃ ಪುರೇ ತಸ್ಮಿನ್ಸಮಾ ದ್ವಾದಶ ಸರ್ವಶಃ।
01163015c ನ ವವರ್ಷ ಸಹಸ್ರಾಕ್ಷೋ ರಾಷ್ಟ್ರೇ ಚೈವಾಸ್ಯ ಸರ್ವಶಃ।।
ಆ ರಾಜನ ಪುರ ಮತ್ತು ರಾಷ್ಟ್ರದ ಎಲ್ಲೆಡೆಯಲ್ಲಿಯೂ ಹನ್ನೆರಡು ವರ್ಷಗಳ ಪರ್ಯಂತ ಸಹಸ್ರಾಕ್ಷನು ಮಳೆಯನ್ನು ಸುರಿಸಲಿಲ್ಲ1.
01163016a ತತ್ಕ್ಷುಧಾರ್ತೈರ್ನಿರಾನಂದೈಃ ಶವಭೂತೈಸ್ತದಾ ನರೈಃ।
01163016c ಅಭವತ್ಪ್ರೇತರಾಜಸ್ಯ ಪುರಂ ಪ್ರೇತೈರಿವಾವೃತಂ।।
ಬರಗಾಲ ಪೀಡಿತರಾಗಿ ಸುಖವನ್ನೇ ಕಾಣದ ನರರು ಶವಗಳಾಗಿ ಪ್ರೇತರಾಜನ ಪುರವನ್ನು ಮುತ್ತುವಂತೆ ಮುತ್ತಿಗೆ ಹಾಕಿದರು.
01163017a ತತಸ್ತತ್ತಾದೃಶಂ ದೃಷ್ಟ್ವಾ ಸ ಏವ ಭಗವಾನೃಷಿಃ।
01163017c ಅಭ್ಯಪದ್ಯತ ಧರ್ಮಾತ್ಮಾ ವಸಿಷ್ಠೋ ರಾಜಸತ್ತಮಂ।।
01163018a ತಂ ಚ ಪಾರ್ಥಿವಶಾರ್ದೂಲಮಾನಯಾಮಾಸ ತತ್ಪುರಂ।
01163018c ತಪತ್ಯಾ ಸಹಿತಂ ರಾಜನ್ನುಷಿತಂ ದ್ವಾದಶೀಃ ಸಮಾಃ।।
ಆ ದೃಶ್ಯವನ್ನು ನೋಡಿದ ಧರ್ಮಾತ್ಮ ಭಗವಾನೃಷಿ ವಸಿಷ್ಠನು ರಾಜಶರ್ದೂಲನಿದ್ದಲ್ಲಿಗೆ ಹೋಗಿ ಹನ್ನೆರಡು ವರ್ಷಗಳು ರಾಜ್ಯದಿಂದ ಹೊರಗೆ ವಾಸಿಸುತ್ತಿದ್ದ ಆ ಪಾರ್ಥಿವ ಶಾರ್ದೂಲನನ್ನು ತಪತಿಯ ಸಹಿತ ಪುರಕ್ಕೆ ಮರಳಿ ಕರೆತಂದನು.
01163019a ತತಃ ಪ್ರವೃಷ್ಟಸ್ತತ್ರಾಸೀದ್ಯಥಾಪೂರ್ವಂ ಸುರಾರಿಹಾ।
01163019c ತಸ್ಮಿನ್ನೃಪತಿಶಾರ್ದೂಲೇ ಪ್ರವಿಷ್ಟೇ ನಗರಂ ಪುನಃ।।
ಆ ನೃಪತಿಶಾರ್ದೂಲನು ಪುನಃ ನಗರವನ್ನು ಪ್ರವೇಶಿಸಿದ ನಂತರ ಸುರಾರಿಹನು ಅಲ್ಲಿ ಮೊದಲಿನಂತೆಯೇ ಮಳೆಯನ್ನು ಸುರಿಸಿದನು.
01163020a ತತಃ ಸರಾಷ್ಟ್ರಂ ಮುಮುದೇ ತತ್ಪುರಂ ಪರಯಾ ಮುದಾ।
01163020c ತೇನ ಪಾರ್ಥಿವಮುಖ್ಯೇನ ಭಾವಿತಂ ಭಾವಿತಾತ್ಮನಾ।।
ಭಾವಿತಾತ್ಮ ಪಾರ್ಥಿವ ಮುಖ್ಯನ ಮೂಲಕ ಅವರ ರಾಷ್ಟ್ರ ಮತ್ತು ಪುರವು ಪರಮ ಸಂತಸವನ್ನು ಹೊಂದಿತು.
01163021a ತತೋ ದ್ವಾದಶ ವರ್ಷಾಣಿ ಪುನರೀಜೇ ನರಾಧಿಪಃ।
01163021c ಪತ್ನ್ಯಾ ತಪತ್ಯಾ ಸಹಿತೋ ಯಥಾ ಶಕ್ರೋ ಮರುತ್ಪತಿಃ।।
ಪತ್ನಿ ತಪತಿಯ ಸಹಿತ ನರಾಧಿಪನು ಇನ್ನೂ ಹನ್ನೆರಡು ವರ್ಷಗಳು ಮರುತ್ಪತಿ ಶಕ್ರನ ಹಾಗೆ ಯಜ್ಞಗಳನ್ನು ನೆರವೇರಿಸಿದನು.
01163022a ಏವಮಾಸೀನ್ಮಹಾಭಾಗಾ ತಪತೀ ನಾಮ ಪೌರ್ವಿಕೀ।
01163022c ತವ ವೈವಸ್ವತೀ ಪಾರ್ಥ ತಾಪತ್ಯಸ್ತ್ವಂ ಯಯಾ ಮತಃ।।
ಪಾರ್ಥ! ಈ ರೀತಿ ತಪತಿ ಎಂಬ ಹೆಸರಿನ ಮಹಾಭಾಗೆಯು ನಿನ್ನ ಪೂರ್ವಜಳಾಗಿದ್ದಳು. ಆ ವೈವಸ್ವತಿಯಿಂದಾಗಿ ನೀನು ತಾಪತ್ಯ ಎಂದು ಕರೆಯಲ್ಪಡುತ್ತೀಯೆ.
01163023a ತಸ್ಯಾಂ ಸಂಜನಯಾಮಾಸ ಕುರುಂ ಸಂವರಣೋ ನೃಪಃ।
01163023c ತಪತ್ಯಾಂ ತಪತಾಂ ಶ್ರೇಷ್ಠ ತಾಪತ್ಯಸ್ತ್ವಂ ತತೋಽರ್ಜುನ।।
ನೃಪ ಸಂವರಣನು ಅವಳಲ್ಲಿ ಕುರುವನ್ನು ಪಡೆದನು. ಅರ್ಜುನ! ತಪತಿಯಿಂದಾಗಿ ತಾಪಸಿಗಳಲ್ಲಿ ಶ್ರೇಷ್ಠನಾದ ನೀನು ತಾಪತ್ಯನಾದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನಸಮಾಪ್ತೇ ದೈಪಂಚಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನಸಮಾಪ್ತಿಯಲ್ಲಿ ನೂರಾಅರವತ್ತ್ಮೂರನೆಯ ಅಧ್ಯಾಯವು.