162 ತಪತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 162

ಸಾರ

ಸಂವರಣನು ಸೂರ್ಯನ ಕುರಿತು ತಪಸ್ಸನ್ನಾಚರಿಸಿದ್ದುದು (1-11). ಅವನ ಪ್ರಾರ್ಥನೆಯಂತೆ ಋಷಿ ವಸಿಷ್ಠನು ಸೂರ್ಯನಲ್ಲಿಗೆ ತಪತಿಯನ್ನು ಸಂವರಣನಿಗಾಗಿ ಕೇಳಲು ಹೋದುದು (12-18).

01162001 ಗಂಧರ್ವ ಉವಾಚ।
01162001a ಏವಮುಕ್ತ್ವಾ ತತಸ್ತೂರ್ಣಂ ಜಗಾಮೋರ್ಧ್ವಮನಿಂದಿತಾ।
01162001c ಸ ತು ರಾಜಾ ಪುನರ್ಭೂಮೌ ತತ್ರೈವ ನಿಪಪಾತ ಹ।।

ಗಂಧರ್ವನು ಹೇಳಿದನು: “ಹೀಗೆ ಹೇಳಿದ ತಕ್ಷಣವೇ ಆ ಅನಿಂದಿತೆಯು ಮೇಲೆ ಹೋದಳು ಮತ್ತು ರಾಜನು ಪುನಃ ಅಲ್ಲಿಯೇ ಭೂಮಿಯ ಮೇಲೆ ಬಿದ್ದನು.

01162002a ಅಮಾತ್ಯಃ ಸಾನುಯಾತ್ರಸ್ತು ತಂ ದದರ್ಶ ಮಹಾವನೇ।
01162002c ಕ್ಷಿತೌ ನಿಪತಿತಂ ಕಾಲೇ ಶಕ್ರಧ್ವಜಮಿವೋಚ್ಛ್ರಿತಂ।।

ಅವನ ಅಮಾತ್ಯ ಮತ್ತು ಅನುಯಾಯಿಗಳು ಆ ಮಹಾವನದಲ್ಲಿ ಕಾಲದಲ್ಲಿ ಶಕ್ರಧ್ವಜವು ಬಿದ್ದಂತೆ ಭೂಮಿಯ ಮೇಲೆ ಮೂರ್ಛಿತನಾಗಿ ಬಿದ್ದಿದ್ದ ಅವನನ್ನು ಕಂಡರು.

01162003a ತಂ ಹಿ ದೃಷ್ಟ್ವಾ ಮಹೇಷ್ವಾಸಂ ನಿರಶ್ವಂ ಪತಿತಂ ಕ್ಷಿತೌ।
01162003c ಬಭೂವ ಸೋಽಸ್ಯ ಸಚಿವಃ ಸಂಪ್ರದೀಪ್ತ ಇವಾಗ್ನಿನಾ।।

ಬೆಳಗುತ್ತಿರುವ ಅಗ್ನಿಯಂತೆ ನಿರಶ್ವನಾಗಿ ಕ್ಷಿತಿಯಲ್ಲಿ ಬಿದ್ದಿರುವ ಮಹೇಷ್ವಾಸನನ್ನು ನೋಡಿದ ಅವನನ್ನು ಅವನ ಸಚಿವನು ನೋಡಿದನು.

01162004a ತ್ವರಯಾ ಚೋಪಸಂಗಮ್ಯ ಸ್ನೇಹಾದಾಗತಸಂಭ್ರಮಃ।
01162004c ತಂ ಸಮುತ್ಥಾಪಯಾಮಾಸ ನೃಪತಿಂ ಕಾಮಮೋಹಿತಂ।।
01162005a ಭೂತಲಾದ್ಭೂಮಿಪಾಲೇಶಂ ಪಿತೇವ ಪತಿತಂ ಸುತಂ।
01162005c ಪ್ರಜ್ಞಯಾ ವಯಸಾ ಚೈವ ವೃದ್ಧಃ ಕೀರ್ತ್ಯಾ ದಮೇನ ಚ।।

ತ್ವರೆಮಾಡಿ ಅವನ ಬಳಿ ಹೋಗಿ ಸ್ನೇಹಭಾವದಿಂದ ಸಂಭ್ರಮಗೊಂಡು ಪ್ರಜ್ಞೆ, ವಯಸ್ಸು, ಕೀರ್ತಿ ಮತ್ತು ದಮದಲ್ಲಿ ವೃದ್ಧನಾಗಿದ್ದ ಅವನು ಕಾಮಮೋಹಿತ ನೃಪತಿಯನ್ನು ಭೂಮಿಯ ಮೇಲೆ ಬಿದ್ದಿರುವ ಸುತನನ್ನು ತಂದೆಯು ಹೇಗೋ ಹಾಗೆ ಭೂಮಿಯಿಂದ ಮೇಲೆತ್ತಿದನು.

01162006a ಅಮಾತ್ಯಸ್ತಂ ಸಮುತ್ಥಾಪ್ಯ ಬಭೂವ ವಿಗತಜ್ವರಃ।
01162006c ಉವಾಚ ಚೈನಂ ಕಲ್ಯಾಣ್ಯಾ ವಾಚಾ ಮಧುರಯೋತ್ಥಿತಂ।
01162006e ಮಾ ಭೈರ್ಮನುಜಶಾರ್ದೂಲ ಭದ್ರಂ ಚಾಸ್ತು ತವಾನಘ।।

ಅವನನ್ನು ಮೇಲಕ್ಕೆತ್ತಿದ ಅಮಾತ್ಯನು ಉದ್ವೇಗವು ಹೊರಟುಹೋಗಿ ಎದ್ದುನಿಂತಿರುವ ಕಲ್ಯಾಣಕರನಿಗೆ ಈ ರೀತಿಯ ಮಧುರ ಮಾತುಗಳನ್ನಾಡಿದನು: “ಮನುಜಶಾರ್ದೂಲ! ಅನಘ! ಭಯಪಡಬೇಡ! ಎಲ್ಲವೂ ಮಂಗಳಕರವಾಗುತ್ತದೆ.”

01162007a ಕ್ಷುತ್ಪಿಪಾಸಾಪರಿಶ್ರಾಂತಂ ತರ್ಕಯಾಮಾಸ ತಂ ನೃಪಂ।
01162007c ಪತಿತಂ ಪಾತನಂ ಸಂಖ್ಯೇ ಶಾತ್ರವಾಣಾಂ ಮಹೀತಲೇ।।

ಹಲವಾರು ಶತ್ರುಗಳನ್ನು ರಣರಂಗದಲ್ಲಿ ಬೀಳಿಸುವ ನೃಪನು ಹಸಿವು ಬಾಯಾರಿಕೆಗಳಿಂದ ಬಳಲಿ ಮಹೀತಲದಲ್ಲಿ ಬಿದ್ದಿದ್ದಾನೆ ಎಂದು ಅವನು ಯೋಚಿಸಿದನು.

01162008a ವಾರಿಣಾಥ ಸುಶೀತೇನ ಶಿರಸ್ತಸ್ಯಾಭ್ಯಷೇಚಯತ್।
01162008c ಅಸ್ಪೃಶನ್ಮುಕುಟಂ ರಾಜ್ಞಃ ಪುಂಡರೀಕಸುಗಂಧಿನಾ।।

ರಾಜನ ಮುಕುಟವನ್ನು ಮುಟ್ಟದೆಯೇ ಅವನು ಪುಂಡರೀಕಸುಗಂಧಿತ ತಣ್ಣನೆಯ ನೀರನ್ನು ಅವನ ತಲೆಯ ಮೇಲೆ ಸಿಂಚಿಸಿದನು.

01162009a ತತಃ ಪ್ರತ್ಯಾಗತಪ್ರಾಣಸ್ತದ್ಬಲಂ ಬಲವಾನ್ನೃಪಃ।
01162009c ಸರ್ವಂ ವಿಸರ್ಜಯಾಮಾಸ ತಮೇಕಂ ಸಚಿವಂ ವಿನಾ।।

ಪುನಃ ಚೇತರಿಸಿಕೊಂಡ ಬಲವಾನ್ ನೃಪನು ತನ್ನ ಸಚಿವ ಮಾತ್ರನನ್ನು ಬಿಟ್ಟು ಉಳಿದ ಎಲ್ಲ ಬಲವನ್ನೂ ವಿಸರ್ಜಿಸಿದನು.

01162010a ತತಸ್ತಸ್ಯಾಜ್ಞಯಾ ರಾಜ್ಞೋ ವಿಪ್ರತಸ್ಥೇ ಮಹದ್ಬಲಂ।
01162010c ಸ ತು ರಾಜಾ ಗಿರಿಪ್ರಸ್ಥೇ ತಸ್ಮಿನ್ಪುನರುಪಾವಿಶತ್।।

ರಾಜನ ಆಜ್ಞೆಯಂತೆ ಆ ಮಹಾಬಲವು ಹೊರಟುಹೋದ ನಂತರ ರಾಜನು ಪುನಃ ಗಿರಿಪ್ರಸ್ಥದಲ್ಲಿ ಕುಳಿತುಕೊಂಡನು.

01162011a ತತಸ್ತಸ್ಮಿನ್ಗಿರಿವರೇ ಶುಚಿರ್ಭೂತ್ವಾ ಕೃತಾಂಜಲಿಃ।
01162011c ಆರಿರಾಧಯಿಷುಃ ಸೂರ್ಯಂ ತಸ್ಥಾವೂರ್ಧ್ವಭುಜಃ ಕ್ಷಿತೌ।।

ಆಗ ಆ ಗಿರಿವರದಲ್ಲಿ ಅವನು ಶುಚಿರ್ಭೂತನಾಗಿ ಅಂಜಲೀಬದ್ಧನಾಗಿ ಭುಜಗಳನ್ನು ಮೇಲಕ್ಕೆತ್ತಿ ಸೂರ್ಯನನ್ನು ಆರಾಧಿಸುತ್ತಾ ನಿಂತುಕೊಂಡನು.

01162012a ಜಗಾಮ ಮನಸಾ ಚೈವ ವಸಿಷ್ಠಂ ಋಷಿಸತ್ತಮಂ।
01162012c ಪುರೋಹಿತಮಮಿತ್ರಘ್ನಸ್ತದಾ ಸಂವರಣೋ ನೃಪಃ।।

ಆಗ ಆ ಅಮಿತ್ರಘ್ನ ನೃಪ ಸಂವರಣನು ತನ್ನ ಪುರೋಹಿತ ಋಷಿಸತ್ತಮ ವಸಿಷ್ಠನನ್ನು ಮನಸ್ಸಿನಲ್ಲಿಯೇ ನೆನೆಸಿಕೊಂಡನು.

01162013a ನಕ್ತಂದಿನಮಥೈಕಸ್ಥೇ ಸ್ಥಿತೇ ತಸ್ಮಿಂಜನಾಧಿಪೇ।
01162013c ಅಥಾಜಗಾಮ ವಿಪ್ರರ್ಷಿಸ್ತದಾ ದ್ವಾದಶಮೇಽಹನಿ।।

ಹನ್ನೆರಡು ದಿನಗಳ ಪರ್ಯಂತ ಆ ಜನಾಧಿಪನು ಅದೇ ಸ್ಥಳದಲ್ಲಿ ನಿಂತುಕೊಂಡಿದ್ದನು. ಹನ್ನೆರಡನೆಯ ದಿನ ಆ ವಿಪ್ರರ್ಷಿಯು ಅಲ್ಲಿಗೆ ಬಂದನು.

01162014a ಸ ವಿದಿತ್ವೈವ ನೃಪತಿಂ ತಪತ್ಯಾ ಹೃತಮಾನಸಂ।
01162014c ದಿವ್ಯೇನ ವಿಧಿನಾ ಜ್ಞಾತ್ವಾ ಭಾವಿತಾತ್ಮಾ ಮಹಾನೃಷಿಃ।।
01162015a ತಥಾ ತು ನಿಯತಾತ್ಮಾನಂ ಸ ತಂ ನೃಪತಿಸತ್ತಮಂ।
01162015c ಆಬಭಾಷೇ ಸ ಧರ್ಮಾತ್ಮಾ ತಸ್ಯೈವಾರ್ಥಚಿಕೀರ್ಷಯಾ।।

ನೃಪತಿಯು ತಪತಿಯಲ್ಲಿ ಮನಸ್ಸನ್ನು ಕಳೆದುಕೊಂಡಿದ್ದಾನೆ ಎಂದು ದಿವ್ಯ ವಿಧಿಯಿಂದ ಆ ಭಾವಿತಾತ್ಮ ಮಹಾನೃಷಿಯು ತಿಳಿದುಕೊಂಡನು. ಆಗ ಅವನಿಗೆ ಒಳ್ಳೆಯದನ್ನೇ ಮಾಡಬೇಕೆಂದು ಬಯಸಿದ ಆ ಧರ್ಮಾತ್ಮನು ನಿಯತಾತ್ಮ ನೃಪತಿಸತ್ತಮನಲ್ಲಿ ಮಾತನಾಡಿದನು.

01162016a ಸ ತಸ್ಯ ಮನುಜೇಂದ್ರಸ್ಯ ಪಶ್ಯತೋ ಭಗವಾನೃಷಿಃ।
01162016c ಊರ್ಧ್ವಮಾಚಕ್ರಮೇ ದ್ರಷ್ಟುಂ ಭಾಸ್ಕರಂ ಭಾಸ್ಕರದ್ಯುತಿಃ।।

ಆ ಮನುಜೇಂದ್ರನು ನೋಡುತ್ತಿದ್ದಂತೆಯೇ ಭಗವಾನೃಷಿಯು ಭಾಸ್ಕರದ್ಯುತಿ ಭಾಸ್ಕರನನ್ನು ನೋಡಲು ಮೇಲೆ ಹೋದನು.

01162017a ಸಹಸ್ರಾಂಶುಂ ತತೋ ವಿಪ್ರಃ ಕೃತಾಂಜಲಿರುಪಸ್ಥಿತಃ।
01162017c ವಸಿಷ್ಠೋಽಹಮಿತಿ ಪ್ರೀತ್ಯಾ ಸ ಚಾತ್ಮಾನಂ ನ್ಯವೇದಯತ್।।

ಆಗ ಸಹಸ್ರಾಂಶುವಲ್ಲಿ ಕೃತಾಂಜಲಿಯಾಗಿ ನಿಂತು ವಿಪ್ರನು “ನಾನು ವಸಿಷ್ಠ!” ಎಂದು ತನ್ನನ್ನು ತಾನೇ ನಿವೇದಿಸಿಕೊಂಡನು.

01162018a ತಮುವಾಚ ಮಹಾತೇಜಾ ವಿವಸ್ವಾನ್ಮುನಿಸತ್ತಮಂ।
01162018c ಮಹರ್ಷೇ ಸ್ವಾಗತಂ ತೇಽಸ್ತು ಕಥಯಸ್ವ ಯಥೇಚ್ಛಸಿ।।

ಆಗ ಮಹಾತೇಜಸ್ವಿ ವಿವಸ್ವತನು ಆ ಮುನಿಸತ್ತಮನಿಗೆ “ಮಹರ್ಷೇ! ನಿನಗೆ ಸ್ವಾಗತವು! ಏನನ್ನು ಇಚ್ಛಿಸಿ ಬಂದೆ ಹೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನೇ ದ್ವಿಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನದಲ್ಲಿ ನೂರಾಅರವತ್ತೆರಡನೆಯ ಅಧ್ಯಾಯವು.