ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 161
ಸಾರ
ತನ್ನ ತಂದೆ ಸೂರ್ಯನು ಅವಳನ್ನು ಸಂವರಣನಿಗೆ ಕೊಡಲು ಒಪ್ಪಿದರೆ ಅಭ್ಯಂತರವಿಲ್ಲವೆಂದು ತಪತಿಯು ಹೇಳುವುದು (1-20).
01161001 ಗಂಧರ್ವ ಉವಾಚ।
01161001a ಅಥ ತಸ್ಯಾಮದೃಶ್ಯಾಯಾಂ ನೃಪತಿಃ ಕಾಮಮೋಹಿತಃ।
01161001c ಪಾತನಃ ಶತ್ರುಸಂಘಾನಾಂ ಪಪಾತ ಧರಣೀತಲೇ।।
ಗಂಧರ್ವನು ಹೇಳಿದನು: “ಅವಳು ಅದೃಶ್ಯಳಾದ ನಂತರ ಶತ್ರುಸಂಘಗಳನ್ನು ಕೆಳಗುರುಳಿಸಬಲ್ಲ ನೃಪತಿಯು ಕಾಮಮೋಹಿತನಾಗಿ ಧರಣೀತಲದಲ್ಲಿ ಬಿದ್ದನು.
01161002a ತಸ್ಮಿನ್ನಿಪತಿತೇ ಭೂಮಾವಥ ಸಾ ಚಾರುಹಾಸಿನೀ।
01161002c ಪುನಃ ಪೀನಾಯತಶ್ರೋಣೀ ದರ್ಶಯಾಮಾಸ ತಂ ನೃಪಂ।।
01161003a ಅಥಾಬಭಾಷೇ ಕಲ್ಯಾಣೀ ವಾಚಾ ಮಧುರಯಾ ನೃಪಂ।
01161003c ತಂ ಕುರೂಣಾಂ ಕುಲಕರಂ ಕಾಮಾಭಿಹತಚೇತಸಂ।।
ಅವನು ಆ ರೀತಿ ಭೂಮಿಯ ಮೇಲೆ ಬೀಳಲು ಆ ಚಾರುಹಾಸಿನೀ ಪೀನಾಯತಶ್ರೋಣಿಯು ಪುನಃ ನೃಪತಿಗೆ ಕಾಣಿಸಿಕೊಂಡಳು. ಆ ಕಲ್ಯಾಣಿಯು ತನ್ನ ಮಧುರ ಮಾತುಗಳಿಂದ ಕಾಮಾಭಿಹತಚೇತನ ಆ ಕುರುಕುಲಕರ ನೃಪತಿಯನ್ನುದ್ದೇಶಿಸಿ ಹೇಳಿದಳು.
01161004a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ನ ತ್ವಮರ್ಹಸ್ಯರಿಂದಮ।
01161004c ಮೋಹಂ ನೃಪತಿಶಾರ್ದೂಲ ಗಂತುಮಾವಿಷ್ಕೃತಃ ಕ್ಷಿತೌ।।
“ಎದ್ದೇಳು! ಅರಿಂದಮ! ನಿನಗೆ ಮಂಗಳವಾಗಲಿ! ನೃಪತಿಶಾರ್ದೂಲ! ಮೋಹ ಆವಿಷ್ಕೃತನಾಗಿ ಈ ರೀತಿ ಭೂಮಿಯ ಮೇಲೆ ಬೀಳುವುದು ನಿನಗೆ ಅರ್ಹವಾದುದಲ್ಲ.”
01161005a ಏವಮುಕ್ತೋಽಥ ನೃಪತಿರ್ವಾಚಾ ಮಧುರಯಾ ತದಾ।
01161005c ದದರ್ಶ ವಿಪುಲಶ್ರೋಣೀಂ ತಾಮೇವಾಭಿಮುಖೇ ಸ್ಥಿತಾಂ।।
ಈ ಮಧುರ ಮಾತುಗಳನ್ನು ಕೇಳಿದ ನೃಪತಿಯು ಮೇಲೆ ನೋಡಲು ತನ್ನ ಎದುರೇ ನಿಂತಿದ್ದ ಆ ವಿಪುಲಶ್ರೋಣಿಯನ್ನು ಕಂಡನು.
01161006a ಅಥ ತಾಮಸಿತಾಪಾಂಗೀಮಾಬಭಾಷೇ ನರಾಧಿಪಃ।
01161006c ಮನ್ಮಥಾಗ್ನಿಪರೀತಾತ್ಮಾ ಸಂದಿಗ್ಧಾಕ್ಷರಯಾ ಗಿರಾ।।
ಆಗ ಮನ್ಮಥಾಗ್ನಿ ಪರೀತಾತ್ಮ ಆ ನರಾಧಿಪನು ತಾಮಸಿತಾ ಅಪಾಂಗಿಗೆ ಸಂದಿಗ್ಧಾಕ್ಷರಗಳನ್ನೊಡಗೂಡಿದ ಮಾತಿನಿಂದ ಉತ್ತರಿಸಿದನು.
01161007a ಸಾಧು ಮಾಮಸಿತಾಪಾಂಗೇ ಕಾಮಾರ್ತಂ ಮತ್ತಕಾಶಿನಿ।
01161007c ಭಜಸ್ವ ಭಜಮಾನಂ ಮಾಂ ಪ್ರಾಣಾ ಹಿ ಪ್ರಜಹಂತಿ ಮಾಂ।।
“ಮತ್ತಕಾಶಿನೀ! ಅಸಿತಾಪಾಂಗೇ! ಕಾಮಾರ್ತನಾದ ನನ್ನನ್ನು ಪ್ರೀತಿಸು. ಬಯಸುತ್ತಿರುವ ನನ್ನನ್ನು ಬಯಸು. ನನ್ನ ಪ್ರಾಣವೇ ನನ್ನನ್ನು ತೊರೆಯುತ್ತಿದೆ.
01161008a ತ್ವದರ್ಥಂ ಹಿ ವಿಶಾಲಾಕ್ಷಿ ಮಾಮಯಂ ನಿಶಿತೈಃ ಶರೈಃ।
01161008c ಕಾಮಃ ಕಮಲಗರ್ಭಾಭೇ ಪ್ರತಿವಿಧ್ಯನ್ನ ಶಾಮ್ಯತಿ।।
01161009a ಗ್ರಸ್ತಮೇವಮನಾಕ್ರಂದೇ ಭದ್ರೇ ಕಾಮಮಹಾಹಿನಾ।
01161009c ಸಾ ತ್ವಂ ಪೀನಾಯತಶ್ರೋಣಿ ಪರ್ಯಾಪ್ನುಹಿ ಶುಭಾನನೇ।।
ವಿಶಾಲಾಕ್ಷಿ! ಕಮಲಗರ್ಭಾಭೇ! ಕಾಮದ ಈ ನಿಶಿತ ಶರಗಳು ನಿನ್ನಿಂದಾಗಿ ನನ್ನನ್ನು ಚುಚ್ಚುವುದನ್ನು ನಿಲ್ಲಿಸುತ್ತಲೇ ಇಲ್ಲ. ಭದ್ರೇ! ಕಾಮದ ವಿಷದಿಂದ ಗ್ರಸ್ತನಾಗಿದ್ದೇನೆ. ಪೀನಾಯತಶ್ರೋಣಿ! ಶುಭಾನನೇ! ನನ್ನನ್ನು ತೃಪ್ತಿಗೊಳಿಸು.
01161010a ತ್ವಯ್ಯಧೀನಾ ಹಿ ಮೇ ಪ್ರಾಣಾಃ ಕಿನ್ನರೋದ್ಗೀತಭಾಷಿಣಿ।
01161010c ಚಾರುಸರ್ವಾನವದ್ಯಾಂಗಿ ಪದ್ಮೇಂದುಸದೃಶಾನನೇ।।
ಚಾರು! ಸರ್ವಾನವದ್ಯಾಂಗೀ! ಪದ್ಮೇಂದುಸದೃಶಾನನೇ! ನನ್ನ ಈ ಪ್ರಾಣವು ಕಿನ್ನರರ ಗೀತಭಾಷಿಣಿ ನಿನ್ನ ಅಧೀನವಾಗಿದೆ.
01161011a ನ ಹ್ಯಹಂ ತ್ವದೃತೇ ಭೀರು ಶಕ್ಷ್ಯೇ ಜೀವಿತುಮಾತ್ಮನಾ।
01161011c ತಸ್ಮಾತ್ಕುರು ವಿಶಾಲಾಕ್ಷಿ ಮಯ್ಯನುಕ್ರೋಶಮಂಗನೇ।।
01161012a ಭಕ್ತಂ ಮಾಮಸಿತಾಪಾಂಗೇ ನ ಪರಿತ್ಯಕ್ತುಮರ್ಹಸಿ।
01161012c ತ್ವಂ ಹಿ ಮಾಂ ಪ್ರೀತಿಯೋಗೇನ ತ್ರಾತುಮರ್ಹಸಿ ಭಾಮಿನಿ।।
ಭೀರು! ನಿನ್ನ ಹೊರತಾಗಿ ನಾನು ನಾನೇ ಜೀವಿತವಿರಲು ಶಕ್ಯನಿಲ್ಲ. ಆದುದರಿಂದ ವಿಶಾಲಾಕ್ಷಿ! ಅಂಗನೇ! ನನ್ನ ಮೇಲೆ ಅನುಕ್ರೋಶವನ್ನು ತೋರು. ಅಸಿತಾಪಾಂಗೇ! ಭಕ್ತನಾದ ನನ್ನನ್ನು ತ್ಯಜಿಸಬೇಡ. ಭಾಮಿನೀ! ನೀನೇ ನನ್ನನ್ನು ಪ್ರೀತಿಯೋಗದಿಂದ ಉದ್ಧಾರ ಮಾಡಬಹುದು.
01161013a ಗಾಂಧರ್ವೇಣ ಚ ಮಾಂ ಭೀರು ವಿವಾಹೇನೈಹಿ ಸುಂದರಿ।
01161013c ವಿವಾಹಾನಾಂ ಹಿ ರಂಭೋರು ಗಾಂಧರ್ವಃ ಶ್ರೇಷ್ಠ ಉಚ್ಯತೇ।।
ಭೀರು! ಸುಂದರಿ! ಗಾಂಧರ್ವ ವಿವಾಹದಿಂದಲೇ ನನ್ನವಳಾಗು. ರಂಭೋರು! ವಿವಾಹಗಳಲ್ಲಿಯೇ ಗಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”
01161014 ತಪತ್ಯುವಾಚ।
01161014a ನಾಹಮೀಶಾತ್ಮನೋ ರಾಜನ್ಕನ್ಯಾ ಪಿತೃಮತೀ ಹ್ಯಹಂ।
01161014c ಮಯಿ ಚೇದಸ್ತಿ ತೇ ಪ್ರೀತಿರ್ಯಾಚಸ್ವ ಪಿತರಂ ಮಮ।।
ತಪತಿಯು ಹೇಳಿದಳು: “ರಾಜನ್! ನನ್ನ ಒಡತಿ ನಾನಲ್ಲ. ನನ್ನ ತಂದೆಯು ಇದ್ದಾನೆ. ನನ್ನಲ್ಲಿ ನಿನ್ನ ಪ್ರೀತಿಯಿದ್ದರೆ ನನ್ನ ತಂದೆಯಲ್ಲಿ ಕೇಳಿಕೋ.
01161015a ಯಥಾ ಹಿ ತೇ ಮಯಾ ಪ್ರಾಣಾಃ ಸಂಗೃಹೀತಾ ನರೇಶ್ವರ।
01161015c ದರ್ಶನಾದೇವ ಭೂಯಸ್ತ್ವಂ ತಥಾ ಪ್ರಾಣಾನ್ಮಮಾಹರಃ।।
ನರೇಶ್ವರ! ನಿನ್ನ ಪ್ರಾಣವು ಹೇಗೆ ನನ್ನಿಂದ ಬಂಧಿಸಲ್ಪಟ್ಟಿದೆಯೋ ಅದೇರೀತಿ ನಿನ್ನನ್ನು ನೋಡಿದ ಕ್ಷಣದಿಂದ ನನ್ನ ಪ್ರಾಣವನ್ನೂ ನೀನು ಅಪಹರಿಸಿದ್ದೀಯೆ.
01161016a ನ ಚಾಹಮೀಶಾ ದೇಹಸ್ಯ ತಸ್ಮಾನ್ನೃಪತಿಸತ್ತಮ।
01161016c ಸಮೀಪಂ ನೋಪಗಚ್ಛಾಮಿ ನ ಸ್ವತಂತ್ರಾ ಹಿ ಯೋಷಿತಃ।।
ನಾನು ನನ್ನ ಈ ದೇಹದ ಒಡತಿಯಲ್ಲ. ಆದುದರಿಂದ ನೃಪತಿಸತ್ತಮ! ನಿನ್ನ ಸಮೀಪ ಬರಲಾರೆನು. ಕನ್ಯೆಯು ಸ್ವತಂತ್ರಳಲ್ಲ.
01161017a ಕಾ ಹಿ ಸರ್ವೇಷು ಲೋಕೇಷು ವಿಶ್ರುತಾಭಿಜನಂ ನೃಪಂ।
01161017c ಕನ್ಯಾ ನಾಭಿಲಷೇನ್ನಾಥಂ ಭರ್ತಾರಂ ಭಕ್ತವತ್ಸಲಂ।।
ಆದರೆ ಯಾವ ಕನ್ಯೆಯು ತಾನೆ ಸರ್ವ ಲೋಕಗಳಲ್ಲಿಯೂ ವಿಶ್ರುತ ಕುಲದಲ್ಲಿ ಜನಿಸಿದ ನೃಪನನ್ನು ತನ್ನ ನಾಥ, ಭಕ್ತವತ್ಸಲ ಭರ್ತಾರನನ್ನಾಗಿ ಅಭಿಲಾಷಿಸುವುದಿಲ್ಲ?
01161018a ತಸ್ಮಾದೇವಂಗತೇ ಕಾಲೇ ಯಾಚಸ್ವ ಪಿತರಂ ಮಮ।
01161018c ಆದಿತ್ಯಂ ಪ್ರಣಿಪಾತೇನ ತಪಸಾ ನಿಯಮೇನ ಚ।।
ಆದುದರಿಂದ ಈಗ ಸಮಯ ಬಂದಿರುವುದರಿಂದ ನನ್ನ ತಂದೆ ಆದಿತ್ಯನಲ್ಲಿ ಪ್ರಣಿಪಾತ, ತಪಸ್ಸು ಮತ್ತು ನಿಯಮಗಳಿಂದ ಬೇಡಿಕೋ.
01161019a ಸ ಚೇತ್ಕಾಮಯತೇ ದಾತುಂ ತವ ಮಾಮರಿಮರ್ದನ।
01161019c ಭವಿಷ್ಯಾಮ್ಯಥ ತೇ ರಾಜನ್ಸತತಂ ವಶವರ್ತಿನೀ।।
ಅರಿಮರ್ದನ! ರಾಜನ್! ಒಂದು ವೇಳೆ ಅವನು ನನ್ನನ್ನು ನಿನಗೆ ಕೊಡಲು ಬಯಸಿದರೆ ಸತತವಾಗಿಯೂ ನಿನ್ನ ವಶವರ್ತಿನಿಯಾಗಿರುತ್ತೇನೆ.
01161020a ಅಹಂ ಹಿ ತಪತೀ ನಾಮ ಸಾವಿತ್ರ್ಯವರಜಾ ಸುತಾ।
01161020c ಅಸ್ಯ ಲೋಕಪ್ರದೀಪಸ್ಯ ಸವಿತುಃ ಕ್ಷತ್ರಿಯರ್ಷಭ।।
ಕ್ಷತ್ರಿಯರ್ಷಭ! ನಾನು ಈ ಲೋಕಪ್ರದೀಪ ಸವಿತುವಿನ ಮಗಳು, ಸಾವಿತ್ರಿಯ ತಂಗಿ. ನನ್ನ ಹೆಸರು ತಪತೀ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನೇ ಏಕಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.