153 ದ್ರೌಪದೀಸಂಭವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 153

ಸಾರ

ಏಕಚಕ್ರನಗರಕ್ಕೆ ಬಂದಿದ್ದ ಬ್ರಾಹ್ಮಣನೋರ್ವನು ವಿಚಿತ್ರ ಕಥೆಗಳನ್ನು ಹೇಳುತ್ತಾ ದ್ರೌಪದಿ-ಧೃಷ್ಟದ್ಯುಮ್ನರ ಜನನದ ಕಥೆಯನ್ನು ಪ್ರಾರಂಭಿಸುವುದು (1-12).

01153001 ಜನಮೇಜಯ ಉವಾಚ।
01153001a ತೇ ತಥಾ ಪುರುಷವ್ಯಾಘ್ರಾ ನಿಹತ್ಯ ಬಕರಾಕ್ಷಸಂ।
01153001c ಅತ ಊರ್ಧ್ವಂ ತತೋ ಬ್ರಹ್ಮನ್ಕಿಮಕುರ್ವತ ಪಾಂಡವಾಃ।।

ಜನಮೇಜಯನು ಹೇಳಿದನು: “ಬ್ರಹ್ಮನ್! ಆ ಪುರುಷವ್ಯಾಘ್ರ ಪಾಂಡವರು ಬಕ ರಾಕ್ಷಸನನ್ನು ಕೊಂದ ನಂತರ ಏನು ಮಾಡಿದರು?”

01153002 ವೈಶಂಪಾಯನ ಉವಾಚ।
01153002a ತತ್ರೈವ ನ್ಯವಸನ್ರಾಜನ್ನಿಹತ್ಯ ಬಕರಾಕ್ಷಸಂ।
01153002c ಅಧೀಯಾನಾಃ ಪರಂ ಬ್ರಹ್ಮ ಬ್ರಾಹ್ಮಣಸ್ಯ ನಿವೇಶನೇ।।

ವೈಶಂಪಾಯನನು ಹೇಳಿದನು: “ರಾಜನ್! ಬಕರಾಕ್ಷಸನನ್ನು ಕೊಂದ ಬಳಿಕ ಅವರು ಆ ಬ್ರಾಹ್ಮಣನ ಮನೆಯಲ್ಲಿಯೇ ಶ್ರೇಷ್ಠ ಬ್ರಹ್ಮಾಧ್ಯಯನ ನಿರತರಾಗಿ ವಾಸಿಸುತ್ತಿದ್ದರು.

01153003a ತತಃ ಕತಿಪಯಾಹಸ್ಯ ಬ್ರಾಹ್ಮಣಃ ಸಂಶಿತವ್ರತಃ।
01153003c ಪ್ರತಿಶ್ರಯಾರ್ಥಂ ತದ್ವೇಶ್ಮ ಬ್ರಾಹ್ಮಣಸ್ಯಾಜಗಾಮ ಹ।।

ಕೆಲವು ದಿನಗಳ ನಂತರ ಸಂಶಿತವ್ರತ ಬ್ರಾಹ್ಮಣನೋರ್ವನು ಆಶ್ರಯ ಹುಡುಕಿಕೊಂಡು ಆ ಬ್ರಾಹ್ಮಣನ ಮನೆಗೆ ಬಂದನು.

01153004a ಸ ಸಮ್ಯಕ್ಪೂಜಯಿತ್ವಾ ತಂ ವಿದ್ವಾನ್ವಿಪ್ರರ್ಷಭಸ್ತದಾ।
01153004c ದದೌ ಪ್ರತಿಶ್ರಯಂ ತಸ್ಮೈ ಸದಾ ಸರ್ವಾತಿಥಿವ್ರತೀ।।

ಸದಾ ಸರ್ವ ಅತಿಥಿವ್ರತ ಆ ವಿದ್ವಾನ್ ವಿಪ್ರರ್ಷಭನು ಅವನನ್ನು ಆಹ್ವಾನಿಸಿ ಚೆನ್ನಾಗಿ ಸತ್ಕರಿಸಿ ಆಶ್ರಯವನ್ನಿತ್ತನು.

01153005a ತತಸ್ತೇ ಪಾಂಡವಾಃ ಸರ್ವೇ ಸಹ ಕುಂತ್ಯಾ ನರರ್ಷಭಾಃ।
01153005c ಉಪಾಸಾಂ ಚಕ್ರಿರೇ ವಿಪ್ರಂ ಕಥಯಾನಂ ಕಥಾಸ್ತದಾ।।

ಆಗ ಕುಂತಿಯ ಸಹಿತ ನರರ್ಷಭ ಸರ್ವ ಪಾಂಡವರೂ ಕಥೆಗಳನ್ನು ಹೇಳುವುದರಲ್ಲಿ ಕುಶಲನಾಗಿದ್ದ ಆ ವಿಪ್ರನನ್ನು ಸುತ್ತುವರೆದರು.

01153006a ಕಥಯಾಮಾಸ ದೇಶಾನ್ಸ ತೀರ್ಥಾನಿ ವಿವಿಧಾನಿ ಚ।
01153006c ರಾಜ್ಞಾಂ ಚ ವಿವಿಧಾಶ್ಚರ್ಯಾಃ ಪುರಾಣಿ ವಿವಿಧಾನಿ ಚ।।

ಅವನು ಅವರಿಗೆ ವಿವಿಧ ದೇಶ-ತೀರ್ಥ, ವಿವಿಧ ರಾಜರ, ಮತ್ತು ವಿವಿಧ ಪುರಗಳ ಆಶ್ಚರ್ಯಕರ ಕಥೆಗಳನ್ನು ಹೇಳಿದನು.

01153007a ಸ ತತ್ರಾಕಥಯದ್ವಿಪ್ರಃ ಕಥಾಂತೇ ಜನಮೇಜಯ।
01153007c ಪಾಂಚಾಲೇಷ್ವದ್ಭುತಾಕಾರಮ್ಯಾಜ್ಞಸೇನ್ಯಾಃ ಸ್ವಯಂವರಂ।।
01153008a ಧೃಷ್ಟದ್ಯುಮ್ನಸ್ಯ ಚೋತ್ಪತ್ತಿಮುತ್ಪತ್ತಿಂ ಚ ಶಿಖಂಡಿನಃ।
01153008c ಅಯೋನಿಜತ್ವಂ ಕೃಷ್ಣಾಯಾ ದ್ರುಪದಸ್ಯ ಮಹಾಮಖೇ।।

ಜನಮೇಜಯ! ಆ ವಿಪ್ರನು ಕಥೆಗಳ ಅಂತ್ಯದಲ್ಲಿ ಪಾಂಚಾಲದೇಶದಲ್ಲಿ ನಡೆಯುವ ಯಾಜ್ಞಸೇನಿಯ ಅದ್ಭುತ ಸ್ವಯಂವರ, ಧೃಷ್ಟಧ್ಯುಮ್ನನ ಉತ್ಪತ್ತಿ, ಶಿಖಂಡಿಯ ಉತ್ಪತ್ತಿ, ದೃಪದನ ಮಹಾಮಖದಲ್ಲಿ ಅಯೋನಿಜೆ ಕೃಷ್ಣೆಯ ಜನನ - ಇವುಗಳ ಕುರಿತು ಹೇಳಿದನು.

01153009a ತದದ್ಭುತತಮಂ ಶ್ರುತ್ವಾ ಲೋಕೇ ತಸ್ಯ ಮಹಾತ್ಮನಃ।
01153009c ವಿಸ್ತರೇಣೈವ ಪಪ್ರಚ್ಛುಃ ಕಥಾಂ ತಾಂ ಪುರುಷರ್ಷಭಾಃ।।

ಲೋಕದಲ್ಲಿ ನಡೆದಿದ್ದ ಆ ಅದ್ಭುತ ಘಟನೆಗಳನ್ನು ಕೇಳಿದ ಆ ಪುರುಷರ್ಷಭರು ಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಮಹಾತ್ಮನಿಗೆ ಕೇಳಿಕೊಂಡರು.

01153010a ಕಥಂ ದ್ರುಪದಪುತ್ರಸ್ಯ ಧೃಷ್ಟದ್ಯುಮ್ನಸ್ಯ ಪಾವಕಾತ್।
01153010c ವೇದಿಮಧ್ಯಾಚ್ಚ ಕೃಷ್ಣಾಯಾಃ ಸಂಭವಃ ಕಥಮದ್ಭುತಃ।।

“ವೇದಿಮಧ್ಯದ ಪಾವಕನಿಂದ ದ್ರುಪದಪುತ್ರ ಧೃಷ್ಟಧ್ಯುಮ್ನನ ಮತ್ತು ಕೃಷ್ಣೆಯ ಅದ್ಭುತ ಜನ್ಮವು ಹೇಗೆ ಆಯಿತು?

01153011a ಕಥಂ ದ್ರೋಣಾನ್ಮಹೇಷ್ವಾಸಾತ್ಸರ್ವಾಣ್ಯಸ್ತ್ರಾಣ್ಯಶಿಕ್ಷತ।
01153011c ಕಥಂ ಪ್ರಿಯಸಖಾಯೌ ತೌ ಭಿನ್ನೌ ಕಸ್ಯ ಕೃತೇನ ಚ।।

ಹೇಗೆ ಆ ಮಹೇಷ್ವಾಸನು ದ್ರೋಣನಿಂದ ಸರ್ವ ಅಣ್ಯಸ್ತ್ರಗಳನ್ನು ಕಲಿತುಕೊಂಡನು? ಮತ್ತು ಪ್ರಿಯಸಖರಾಗಿದ್ದ ಅವರೀರ್ವರಲ್ಲಿ ಭಿನ್ನತ್ವವು ಹೇಗೆ ಉಂಟಾಯಿತು?”

01153012a ಏವಂ ತೈಶ್ಚೋದಿತೋ ರಾಜನ್ಸ ವಿಪ್ರಃ ಪುರುಷರ್ಷಭೈಃ।
01153012c ಕಥಯಾಮಾಸ ತತ್ಸರ್ವಂ ದ್ರೌಪದೀಸಂಭವಂ ತದಾ।।

ರಾಜನ್! ಈ ರೀತಿ ಪುರುಷರ್ಷಭರು ಒತ್ತಾಯಿಸಲಾಗಿ ಆ ವಿಪ್ರನು ದ್ರೌಪದಿಯ ಹುಟ್ಟಿನ ಕಥೆಯನ್ನು ಸಂಪೂರ್ಣವಾಗಿ ಹೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಸಂಭವೇ ತ್ರಿಪಂಚಾಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಸಂಭವದಲ್ಲಿ ನೂರಾಐವತ್ತ್ಮೂರನೆಯ ಅಧ್ಯಾಯವು.