ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಹಿಡಿಂಬವಧ ಪರ್ವ
ಅಧ್ಯಾಯ 144
ಸಾರ
ಪಾಂಡವರು ತಾಪಸಿ ವೇಷಗಳನ್ನು ಧರಿಸಿ ಅಲೆದಾಡುತ್ತಿರುವಾಗ ವ್ಯಾಸನನ್ನು ಭೇಟಿಯಾದುದು (1-6). ಅವರನ್ನು ಏಕಚಕ್ರನಗರದಲ್ಲಿ ಬ್ರಾಹ್ಮಣನೋರ್ವನ ಮನೆಯಲ್ಲಿರಿಸಿ ವ್ಯಾಸನು ಮರಳಿದುದು (7-20).
01144001 ವೈಶಂಪಾಯನ ಉವಾಚ।
01144001a ತೇ ವನೇನ ವನಂ ವೀರಾ ಘ್ನಂತೋ ಮೃಗಗಣಾನ್ಬಹೂನ್।
01144001c ಅಪಕ್ರಮ್ಯ ಯಯೂ ರಾಜಂಸ್ತ್ವರಮಾಣಾ ಮಹಾರಥಾಃ।।
ವೈಶಂಪಾಯನನು ಹೇಳಿದನು: “ರಾಜನ್! ಆ ಮಹಾರಥಿ ವೀರರು ಬಹಳಷ್ಟು ಮೃಗಗಣಗಳನ್ನು ಸಂಹರಿಸುತ್ತಾ ವನದಿಂದ ವನಕ್ಕೆ ಅತಿವೇಗದಲ್ಲಿ ಪ್ರಯಾಣ ಮಾಡಿದರು.
01144002a ಮತ್ಸ್ಯಾಂಸ್ತ್ರಿಗರ್ತಾನ್ಪಾಂಚಾಲಾನ್ಕೀಚಕಾನಂತರೇಣ ಚ।
01144002c ರಮಣೀಯಾನ್ವನೋದ್ದೇಶಾನ್ಪ್ರೇಕ್ಷಮಾಣಾಃ ಸರಾಂಸಿ ಚ।।
ಅವರು ಮತ್ಸ್ಯ, ತ್ರಿಗರ್ತ, ಪಾಂಚಾಲ, ಕೀಚಕ ದೇಶಗಳನ್ನು ಅತಿಕ್ರಮಿಸಿ ರಮಣೀಯ ಸರೋವರಗಳನ್ನೂ ಮನೋದ್ದೇಶಗಳನ್ನೂ ನೋಡಿದರು.
01144003a ಜಟಾಃ ಕೃತ್ವಾತ್ಮನಃ ಸರ್ವೇ ವಲ್ಕಲಾಜಿನವಾಸಸಃ।
01144003c ಸಹ ಕುಂತ್ಯಾ ಮಹಾತ್ಮಾನೋ ಬಿಭ್ರತಸ್ತಾಪಸಂ ವಪುಃ।।
ಕುಂತಿಯೂ ಸೇರಿ ಆ ಮಹಾತ್ಮರೆಲ್ಲರೂ ಜಟೆಯನ್ನು ಧರಿಸಿ ವಲ್ಕಲ ಜಿನ ವಸ್ತ್ರಗಳನ್ನು ಧರಿಸಿ, ತಾಪಸಿಗಳ ವೇಷವನ್ನು ತಾಳಿದರು.
01144004a ಕ್ವ ಚಿದ್ವಹಂತೋ ಜನನೀಂ ತ್ವರಮಾಣಾ ಮಹಾರಥಾಃ।
01144004c ಕ್ವ ಚಿಚ್ಚಂದೇನ ಗಚ್ಛಂತಸ್ತೇ ಜಗ್ಮುಃ ಪ್ರಸಭಂ ಪುನಃ।।
ಕೆಲವೊಮ್ಮೆ ಆ ಮಹಾರಥಿಗಳು ತಾಯಿಯನ್ನು ಎತ್ತಿಕೊಂಡು ಓಡುತ್ತಿದ್ದರು. ಕೆಲವೊಮ್ಮೆ ಅವಸರ ಮಾಡದೇ ಬಹಿರಂಗವಾಗಿ ಹೋಗುತ್ತಿದ್ದರು.
01144005a ಬ್ರಾಹ್ಮಂ ವೇದಮಧೀಯಾನಾ ವೇದಾಂಗಾನಿ ಚ ಸರ್ವಶಃ।
01144005c ನೀತಿಶಾಸ್ತ್ರಂ ಚ ಧರ್ಮಜ್ಞಾ ದದೃಶುಸ್ತೇ ಪಿತಾಮಹಂ।।
ಬ್ರಾಹ್ಮಣರ ಎಲ್ಲ ವೇದಗಳನ್ನೂ ವೇದಾಂಗಗಳನ್ನೂ, ನೀತಿ ಶಾಸ್ತ್ರವನ್ನೂ ಕಲಿತುಕೊಂಡಿದ್ದ ಆ ಧರ್ಮಜ್ಞರು ಅವರ ಪಿತಾಮಹನನ್ನು ಕಂಡರು.
01144006a ತೇಽಭಿವಾದ್ಯ ಮಹಾತ್ಮಾನಂ ಕೃಷ್ಣದ್ವೈಪಾಯನಂ ತದಾ।
01144006c ತಸ್ಥುಃ ಪ್ರಾಂಜಲಯಃ ಸರ್ವೇ ಸಹ ಮಾತ್ರಾ ಪರಂತಪಾಃ।।
ಆಗ ಆ ಪರಂತಪರು ತಮ್ಮ ತಾಯಿಯ ಸಹಿತ ಮಹಾತ್ಮ ಕೃಷ್ಣದ್ವೈಪಾಯನನನ್ನು ಅಭಿವಂದಿಸಿ, ಅಂಜಲೀ ಬದ್ಧರಾಗಿ ನಿಂತುಕೊಂಡರು.
01144007 ವ್ಯಾಸ ಉವಾಚ।
01144007a ಮಯೇದಂ ಮನಸಾ ಪೂರ್ವಂ ವಿದಿತಂ ಭರತರ್ಷಭಾಃ।
01144007c ಯಥಾ ಸ್ಥಿತೈರಧರ್ಮೇಣ ಧಾರ್ತರಾಷ್ಟ್ರೈರ್ವಿವಾಸಿತಾಃ।।
ವ್ಯಾಸನು ಹೇಳಿದನು: “ಭರತರ್ಷಭರೇ! ಅಧರ್ಮ ನಿರತ ಧಾರ್ತರಾಷ್ಟ್ರರಿಂದ ನೀವು ವಿವಾಸಿತರಾಗುತ್ತೀರಿ ಎನ್ನುವುದನ್ನು ಪೂರ್ವದಲ್ಲಿಯೇ ನಾನು ನನ್ನ ಮನಸ್ಸಿನಲ್ಲಿ ತಿಳಿದುಕೊಂಡಿದ್ದೆ.
01144008a ತದ್ವಿದಿತ್ವಾಸ್ಮಿ ಸಂಪ್ರಾಪ್ತಶ್ಚಿಕೀರ್ಷುಃ ಪರಮಂ ಹಿತಂ।
01144008c ನ ವಿಷಾದೋಽತ್ರ ಕರ್ತವ್ಯಃ ಸರ್ವಮೇತತ್ಸುಖಾಯ ವಃ।।
ಅದನ್ನು ತಿಳಿದ ನಾನು ನಿಮಗೆ ಪರಮ ಹಿತವನ್ನು ಮಾಡುವ ಬಯಕೆಯಿಂದ ನಿಮ್ಮಲ್ಲಿಗೆ ಬಂದಿದ್ದೇನೆ. ಇದರ ಕುರಿತು ವಿಷಾದಿಸಬೇಡಿ. ಸರ್ವವೂ ಸುಖವನ್ನೇ ತರುತ್ತದೆ.
01144009a ಸಮಾಸ್ತೇ ಚೈವ ಮೇ ಸರ್ವೇ ಯೂಯಂ ಚೈವ ನ ಸಂಶಯಃ।
01144009c ದೀನತೋ ಬಾಲತಶ್ಚೈವ ಸ್ನೇಹಂ ಕುರ್ವಂತಿ ಬಾಂಧವಾಃ।।
ನೀವು ಮತ್ತು ಅವರು ಎಲ್ಲರೂ ನನಗೆ ಸಮಾನರೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಬಾಂಧವರು ದೀನ ಮತ್ತು ಬಾಲಿಶರಲ್ಲಿ ಸ್ನೇಹವನ್ನು ಮಾಡುತ್ತಾರೆ.
01144010a ತಸ್ಮಾದಭ್ಯಧಿಕಃ ಸ್ನೇಹೋ ಯುಷ್ಮಾಸು ಮಮ ಸಾಂಪ್ರತಂ।
01144010c ಸ್ನೇಹಪೂರ್ವಂ ಚಿಕೀರ್ಷಾಮಿ ಹಿತಂ ವಸ್ತನ್ನಿಬೋಧತ।।
ಆದುದರಿಂದ ನನಗೆ ನಿಮ್ಮಮೇಲೆ ಹೆಚ್ಚಿನ ಸ್ನೇಹವಿದೆ. ಸ್ನೇಹಪೂರ್ವಕವಾಗಿ ನಿಮಗೆ ಸಹಾಯವನ್ನು ನೀಡಲು ಬಯಸುತ್ತೇನೆ.
01144011a ಇದಂ ನಗರಮಭ್ಯಾಶೇ ರಮಣೀಯಂ ನಿರಾಮಯಂ।
01144011c ವಸತೇಹ ಪ್ರತಿಚ್ಛನ್ನಾ ಮಮಾಗಮನಕಾಂಕ್ಷಿಣಃ।।
ಇಲ್ಲಿಯೇ ಹತ್ತಿರದಲ್ಲಿ ರಮಣೀಯವೂ ನಿರಾಮಯವೂ ಆದ ನಗರವೊಂದಿದೆ. ವೇಷಮರೆಸಿಕೊಂಡು ಅಲ್ಲಿಯೇ ವಾಸಿಸಿರಿ ಮತ್ತು ನಾನು ಮರಳಿ ಬರುವುದನ್ನು ಪ್ರತೀಕ್ಷಿಸುತ್ತಿರಿ.””
01144012 ವೈಶಂಪಾಯನ ಉವಾಚ।
01144012a ಏವಂ ಸ ತಾನ್ಸಮಾಶ್ವಾಸ್ಯ ವ್ಯಾಸಃ ಪಾರ್ಥಾನರಿಂದಮಾನ್।
01144012c ಏಕಚಕ್ರಾಮಭಿಗತಃ ಕುಂತೀಮಾಶ್ವಾಸಯತ್ಪ್ರಭುಃ।।
ವೈಶಂಪಾಯನನು ಹೇಳಿದನು: “ಅರಿಂದಮ ಪಾರ್ಥರಿಗೆ ಈ ರೀತಿ ಸಮಾಶ್ವಾಸನೆಯನ್ನು ನೀಡಿದ ಪ್ರಭು ವ್ಯಾಸನು ಅವರೊಂದಿಗೆ ಏಕಚಕ್ರ ನಗರಕ್ಕೆ ಬಂದು ಕುಂತಿಗೆ ಆಶ್ವಾಸನೆಯನ್ನಿತ್ತನು:
01144013a ಜೀವಪುತ್ರಿ ಸುತಸ್ತೇಽಯಂ ಧರ್ಮಪುತ್ರೋ ಯುಧಿಷ್ಠಿರಃ।
01144013c ಪೃಥಿವ್ಯಾಂ ಪಾರ್ಥಿವಾನ್ಸರ್ವಾನ್ಪ್ರಶಾಸಿಷ್ಯತಿ ಧರ್ಮರಾಟ್।।
“ಪುತ್ರಿ! ಜೀವಿಸು. ನಿನ್ನ ಈ ಮಗ ಧರ್ಮಪುತ್ರ ಯುಧಿಷ್ಠಿರನು ಧರ್ಮರಾಜನಾಗಿ ಪೃಥ್ವಿಯ ಸರ್ವ ಪಾರ್ಥಿವರನ್ನೂ ಆಳುತ್ತಾನೆ.
01144014a ಧರ್ಮೇಣ ಜಿತ್ವಾ ಪೃಥಿವೀಮಖಿಲಾಂ ಧರ್ಮವಿದ್ವಶೀ।
01144014c ಭೀಮಸೇನಾರ್ಜುನಬಲಾದ್ಭೋಕ್ಷ್ಯತ್ಯಯಮಸಂಶಯಃ।।
ಈ ಧರ್ಮವಿದನು ಅಖಿಲ ಪೃಥ್ವಿಯನ್ನೂ ಭೀಮಸೇನ-ಅರ್ಜುನರ ಬಲದಿಂದ ಧರ್ಮಪೂರ್ವಕವಾಗಿ ಗೆದ್ದು ಭೋಗಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
01144015a ಪುತ್ರಾಸ್ತವ ಚ ಮಾದ್ರ್ಯಾಶ್ಚ ಸರ್ವ ಏವ ಮಹಾರಥಾಃ।
01144015c ಸ್ವರಾಷ್ಟ್ರೇ ವಿಹರಿಷ್ಯಂತಿ ಸುಖಂ ಸುಮನಸಸ್ತದಾ।।
ನಿನ್ನ ಮತ್ತು ಮಾದ್ರಿಯ ಈ ಮಕ್ಕಳು ಎಲ್ಲರೂ ಮಹಾರಥಿಗಳು ಮತ್ತು ಅವರು ಸ್ವರಾಷ್ಟ್ರದಲ್ಲಿ ಸುಖವಾಗಿ ಸುಮನಸ್ಕರಾಗಿ ವಿಹರಿಸುತ್ತಾರೆ.
01144016a ಯಕ್ಷ್ಯಂತಿ ಚ ನರವ್ಯಾಘ್ರಾ ವಿಜಿತ್ಯ ಪೃಥಿವೀಮಿಮಾಂ।
01144016c ರಾಜಸೂಯಾಶ್ವಮೇಧಾದ್ಯೈಃ ಕ್ರತುಭಿರ್ಭೂರಿದಕ್ಷಿಣೈಃ।।
ಈ ಪೃಥ್ವಿಯನ್ನು ಜಯಿಸಿ ನರವ್ಯಾಘ್ರರು ಅಧಿಕ ಭೂರಿದಕ್ಷಿಣೆಗಳನ್ನೊಡಗೂಡಿದ ರಾಜಸೂಯ, ಅಶ್ವಮೇಧ ಮೊದಲಾದ ಕ್ರತುಗಳನ್ನು ಯಾಜಿಸಿತ್ತಾರೆ.
01144017a ಅನುಗೃಹ್ಯ ಸುಹೃದ್ವರ್ಗಂ ಧನೇನ ಚ ಸುಖೇನ ಚ।
01144017c ಪಿತೃಪೈತಾಮಹಂ ರಾಜ್ಯಮಿಹ ಭೋಕ್ಷ್ಯಂತಿ ತೇ ಸುತಾಃ।।
ನಿನ್ನ ಮಕ್ಕಳು ಧನ ಮತ್ತು ಸುಖದಿಂದ ತಮ್ಮ ಸುಹೃದಯರನ್ನು ಅನುಗ್ರಹಿಸುತ್ತಾ ಪಿತೃಪಿತಾಮಹರ ಈ ರಾಜ್ಯವನ್ನು ಭೋಗಿಸುತ್ತಾರೆ.”
01144018a ಏವಮುಕ್ತ್ವಾ ನಿವೇಶ್ಯೈನಾನ್ಬ್ರಾಹ್ಮಣಸ್ಯ ನಿವೇಶನೇ।
01144018c ಅಬ್ರವೀತ್ಪಾರ್ಥಿವಶ್ರೇಷ್ಠಂ ಋಷಿರ್ದ್ವೈಪಾಯನಸ್ತದಾ।।
ಹೀಗೆ ಹೇಳಿ ಋಷಿ ದ್ವೈಪಾಯನನು ಅವರನ್ನು ಬ್ರಾಹ್ಮಣನೋರ್ವನ ಮನೆಗೆ ಕರೆದು ತಂದು ಪಾರ್ಥಿವಶ್ರೇಷ್ಠನಿಗೆ ಹೇಳಿದನು:
01144019a ಇಹ ಮಾಂ ಸಂಪ್ರತೀಕ್ಷಧ್ವಮಾಗಮಿಷ್ಯಾಮ್ಯಹಂ ಪುನಃ।
01144019c ದೇಶಕಾಲೌ ವಿದಿತ್ವೈವ ವೇತ್ಸ್ಯಧ್ವಂ ಪರಮಾಂ ಮುದಂ।।
“ಪುನಃ ನಾನು ಬರುವುದನ್ನು ಪ್ರತೀಕ್ಷಿಸು. ದೇಶಕಾಲಗಳ ಕುರಿತು ತಿಳಿದನಂತರ ನೀವು ಪರಮ ಸಂತೋಷವನ್ನು ಹೊಂದುತ್ತೀರಿ.”
01144020a ಸ ತೈಃ ಪ್ರಾಂಜಲಿಭಿಃ ಸರ್ವೈಸ್ತಥೇತ್ಯುಕ್ತೋ ನರಾಧಿಪ।
01144020c ಜಗಾಮ ಭಗವಾನ್ವ್ಯಾಸೋ ಯಥಾಕಾಮಮೃಷಿಃ ಪ್ರಭುಃ।।
ನರಾಧಿಪ! ಹಾಗೆಯೇ ಆಗಲೆಂದು ಪ್ರಾಂಜಲೀಬದ್ಧರಾಗಿ ಅವರು ವಚನವನ್ನಿತ್ತ ನಂತರ ಋಷಿ ಭಗವಾನ್ ವ್ಯಾಸಪ್ರಭುವು ತನಗಿಷ್ಟವಾದಲ್ಲಿಗೆ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಏಕಚಕ್ರಪ್ರವೇಶೇ ವ್ಯಾಸದರ್ಶನೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಏಕಚಕ್ರಪ್ರವೇಶದಲ್ಲಿ ವ್ಯಾಸದರ್ಶನ ಎನ್ನುವ ನೂರಾನಲ್ವತ್ತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-9/100, ಅಧ್ಯಾಯಗಳು-144/1995, ಶ್ಲೋಕಗಳು-5016/73784.