ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 133
ಸಾರ
ಅನುಸರಿಸಿ ಬಂದ ಪೌರಜನರನ್ನು ಯುಧಿಷ್ಠಿರನು ಹಿಂದೆ ಕಳುಹಿಸಿದುದು (1-17). ಪಾಂಡವರು ಹೊರಡುವಾಗ ವಿದುರನು ಮ್ಲೇಚ್ಛ ಭಾಷೆಯಲ್ಲಿ ಯುಧಿಷ್ಠಿರನಿಗೆ ಒಗಟಿನ ರೂಪದಲ್ಲಿ ದುರ್ಯೋಧನನ ಶಲ್ಯಂತ್ರದ ಕುರಿತು ಎಚ್ಚರಿಸಿದುದು (18-30).
01133001 ವೈಶಂಪಾಯನ ಉವಾಚ।
01133001a ಪಾಂಡವಾಸ್ತು ರಥಾನ್ಯುಕ್ತ್ವಾ ಸದಶ್ವೈರನಿಲೋಪಮೈಃ।
01133001c ಆರೋಹಮಾಣಾ ಭೀಷ್ಮಸ್ಯ ಪಾದೌ ಜಗೃಹುರಾರ್ತವತ್।।
01133002a ರಾಜ್ಞಶ್ಚ ಧೃತರಾಷ್ಟ್ರಸ್ಯ ದ್ರೋಣಸ್ಯ ಚ ಮಹಾತ್ಮನಃ।
01133002c ಅನ್ಯೇಷಾಂ ಚೈವ ವೃದ್ಧಾನಾಂ ವಿದುರಸ್ಯ ಕೃಪಸ್ಯ ಚ।।
ವೈಶಂಪಾಯನನು ಹೇಳಿದನು: “ಅನಿಲೋಪಮ ಉತ್ತಮ ಅಶ್ವಗಳನ್ನು ಕಟ್ಟಿದ್ದ ರಥಗಳನ್ನು ಏರುವಾಗ ಆರ್ತ ಪಾಂಡವರು ಭೀಷ್ಮ, ರಾಜ ಧೃತರಾಷ್ಟ್ರ, ಮಹಾತ್ಮ ದ್ರೋಣ, ವಿದುರ, ಕೃಪ ಮತ್ತು ಅನ್ಯ ವೃದ್ಧರ ಪಾದಗಳಿಗೆರಗಿದರು.
01133003a ಏವಂ ಸರ್ವಾನ್ಕುರೂನ್ವೃದ್ಧಾನಭಿವಾದ್ಯ ಯತವ್ರತಾಃ।
01133003c ಸಮಾಲಿಂಗ್ಯ ಸಮಾನಾಂಶ್ಚ ಬಾಲೈಶ್ಚಾಪ್ಯಭಿವಾದಿತಾಃ।।
ಹೀಗೆ ಎಲ್ಲ ಕುರುವೃದ್ಧರಿಗೂ ಅಭಿವಂದಿಸಿ ಯತವ್ರತರು ಸಮಾನರನ್ನು ಆಲಿಂಗಿಸಿದರು ಮತ್ತು ಕಿರಿಯರಿಂದ ಅಭಿವಂದಿಸಲ್ಪಟ್ಟರು.
01133004a ಸರ್ವಾ ಮಾತೄಸ್ತಥಾಪೃಷ್ಟ್ವಾ ಕೃತ್ವಾ ಚೈವ ಪ್ರದಕ್ಷಿಣಂ।
01133004c ಸರ್ವಾಃ ಪ್ರಕೃತಯಶ್ಚೈವ ಪ್ರಯಯುರ್ವಾರಣಾವತಂ।।
ಎಲ್ಲ ತಾಯಂದಿರಿಗೂ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಎಲ್ಲ ಪ್ರಜೆಗಳಿಂದ ಬೀಳ್ಕೊಂಡು ವಾರಣಾವತಕ್ಕೆ ಹೊರಟರು.
01133005a ವಿದುರಶ್ಚ ಮಹಾಪ್ರಾಜ್ಞಸ್ತಥಾನ್ಯೇ ಕುರುಪುಂಗವಾಃ।
01133005c ಪೌರಾಶ್ಚ ಪುರುಷವ್ಯಾಘ್ರಾನನ್ವಯುಃ ಶೋಕಕರ್ಶಿತಾಃ।।
ಮಹಾಪ್ರಾಜ್ಞ ವಿದುರ, ಅನ್ಯ ಕುರುಪುಂಗವರು ಮತ್ತು ಶೋಕಾರ್ತ ಪೌರರು ಆ ಪುರುಷವ್ಯಾಘ್ರರನ್ನು ಹಿಂಬಾಲಿಸಿದರು.
01133006a ತತ್ರ ಕೇಚ್ಚಿದ್ಬ್ರುವಂತಿ ಸ್ಮ ಬ್ರಾಹ್ಮಣಾ ನಿರ್ಭಯಾಸ್ತದಾ।
01133006c ಶೋಚಮಾನಾಃ ಪಾಂಡುಪುತ್ರಾನತೀವ ಭರತರ್ಷಭ।।
ಭರತರ್ಷಭ! ಅಲ್ಲಿಯೇ ಇದ್ದ ಕೆಲ ನಿರ್ಭಯ ಬ್ರಾಹ್ಮಣರು ಪಾಂಡುಪುತ್ರರಿಗಾಗಿ ಅತೀವ ದುಃಖಿತರಾಗಿ ಹೇಳಿಕೊಳ್ಳುತ್ತಿದ್ದರು:
01133007a ವಿಷಮಂ ಪಶ್ಯತೇ ರಾಜಾ ಸರ್ವಥಾ ತಮಸಾವೃತಃ।
01133007c ಧೃತರಾಷ್ಟ್ರಃ ಸುದುರ್ಬುದ್ಧಿರ್ನ ಚ ಧರ್ಮಂ ಪ್ರಪಶ್ಯತಿ।।
“ವಿಷಮ ರಾಜ ಧೃತರಾಷ್ಟ್ರನು ಎಲ್ಲೆಡೆಯಲ್ಲಿಯೂ ಕತ್ತಲೆಯನ್ನೇ ಕಾಣುತ್ತಿದ್ದಾನೆ. ದುರ್ಭುದ್ಧಿಯು ಧರ್ಮವನ್ನೇ ನೋಡುವುದಿಲ್ಲ.
01133008a ನ ಹಿ ಪಾಪಮಪಾಪಾತ್ಮಾ ರೋಚಯಿಷ್ಯತಿ ಪಾಂಡವಃ।
01133008c ಭೀಮೋ ವಾ ಬಲಿನಾಂ ಶ್ರೇಷ್ಠಃ ಕೌಂತೇಯೋ ವಾ ಧನಂಜಯಃ।
01133008e ಕುತ ಏವ ಮಹಾಪ್ರಾಜ್ಞೌ ಮಾದ್ರೀಪುತ್ರೌ ಕರಿಷ್ಯತಃ।।
ಅಪಾಪಾತ್ಮ ಪಾಂಡವನು ಪಾಪಗೈಯುವವನೇ ಅಲ್ಲ; ಬಲಿಗಳಲ್ಲಿ ಶ್ರೇಷ್ಠ ಭೀಮನಾಗಲೀ, ಕೌಂತೇಯ ಧನಂಜಯನಾಗಲೀ, ಮಹಾಪ್ರಾಜ್ಞ ಮಾದ್ರೀಪುತ್ರರಾಗಲೀ ಪಾಪವನ್ನೆಂದೂ ಎಸಗುವುದಿಲ್ಲ.
01133009a ತದ್ರಾಜ್ಯಂ ಪಿತೃತಃ ಪ್ರಾಪ್ತಂ ಧೃತರಾಷ್ಟ್ರೋ ನ ಮೃಷ್ಯತೇ।
01133009c ಅಧರ್ಮಮಖಿಲಂ ಕಿಂ ನು ಭೀಷ್ಮೋಽಯಮನುಮನ್ಯತೇ।
01133009e ವಿವಾಸ್ಯಮಾನಾನಸ್ಥಾನೇ ಕೌಂತೇಯಾನ್ಭರತರ್ಷಭಾನ್।।
ಅವರು ಪಿತೃವಿನಿಂದ ರಾಜ್ಯವನ್ನು ಪಡೆದಿದ್ದುದು ಧೃತರಾಷ್ಟ್ರನಿಗೆ ಸಹಿಸಲಿಕ್ಕಾಗಲಿಲ್ಲ. ಭರತರ್ಷಭ ಕೌಂತೇಯರನ್ನು ಏನೂ ಕಾರಣವಿಲ್ಲದೇ ಹೊರಗಟ್ಟುವ ಈ ಅತಿದೊಡ್ಡ ಅಧರ್ಮಕ್ಕೆ ಭೀಷ್ಮನಾದರೂ ಹೇಗೆ ಅನುಮತಿಯನ್ನಿತ್ತ?
01133010a ಪಿತೇವ ಹಿ ನೃಪೋಽಸ್ಮಾಕಮಭೂಚ್ಛಾಂತನವಃ ಪುರಾ।
01133010c ವಿಚಿತ್ರವೀರ್ಯೋ ರಾಜರ್ಷಿಃ ಪಾಂಡುಶ್ಚ ಕುರುನಂದನಃ।।
ಹಿಂದೆ ಶಾಂತನವ ವಿಚಿತ್ರವೀರ್ಯ ಮತ್ತು ಕುರುನಂದನ ಪಾಂಡು ಇಬ್ಬರೂ ನಮ್ಮ ತಂದೆಗಳಂತಿದ್ದರು.
01133011a ಸ ತಸ್ಮಿನ್ಪುರುಷವ್ಯಾಘ್ರೇ ದಿಷ್ಟಭಾವಂ ಗತೇ ಸತಿ।
01133011c ರಾಜಪುತ್ರಾನಿಮಾನ್ಬಾಲಾನ್ಧೃತರಾಷ್ಟ್ರೋ ನ ಮೃಷ್ಯತೇ।।
ಆ ಪುರುಷವ್ಯಾಘ್ರನು ದೈವಾಧೀನನಾದ ನಂತರ ಬಾಲಕರಾದ ಈ ರಾಜಪುತ್ರರನ್ನು ಧೃತರಾಷ್ಟ್ರನಿಗೆ ಸಹಿಸಲಾಗುತ್ತಿಲ್ಲ.
01133012a ವಯಮೇತದಮೃಷ್ಯಂತಃ ಸರ್ವ ಏವ ಪುರೋತ್ತಮಾತ್।
01133012c ಗೃಹಾನ್ವಿಹಾಯ ಗಚ್ಛಾಮೋ ಯತ್ರ ಯಾತಿ ಯುಧಿಷ್ಠಿರಃ।।
ನಮಗೆ ಕೂಡ ಅವನನ್ನು ಸಹಿಸಲಾಗುತ್ತಿಲ್ಲ. ನಾವೆಲ್ಲರೂ ಈ ಉತ್ತಮ ನಗರಿ- ಮನೆಗಳನ್ನು ತೊರೆದು ಯುಧಿಷ್ಠಿರನು ಹೋಗುವಲ್ಲಿಗೆ ಹೋಗೋಣ.”
01133013a ತಾಂಸ್ತಥಾವಾದಿನಃ ಪೌರಾನ್ದುಃಖಿತಾನ್ದುಃಖಕರ್ಶಿತಃ।
01133013c ಉವಾಚ ಪರಮಪ್ರೀತೋ ಧರ್ಮರಾಜೋ ಯುಧಿಷ್ಠಿರಃ।।
ದುಃಖಿತ ಪೌರರು ಈ ರೀತಿ ಮಾತನಾಡಿಕೊಳ್ಳುತ್ತಿರುವಾಗ ದುಃಖಕರ್ಶಿತ ಧರ್ಮರಾಜ ಯುಧಿಷ್ಠಿರನು ಪರಮಪ್ರೀತನಾಗಿ ಹೇಳಿದನು:
01133014a ಪಿತಾ ಮಾನ್ಯೋ ಗುರುಃ ಶ್ರೇಷ್ಠೋ ಯದಾಹ ಪೃಥಿವೀಪತಿಃ।
01133014c ಅಶಂಕಮಾನೈಸ್ತತ್ಕಾರ್ಯಮಸ್ಮಾಭಿರಿತಿ ನೋ ವ್ರತಂ।।
“ಗುರುವಿನಂತೆ ಶ್ರೇಷ್ಠ ಪೃಥ್ವೀಪತಿಯನ್ನು ತಂದೆಯಂತೆ ಮನ್ನಿಸಬೇಕು. ಅವನು ನನಗೆ ಏನನ್ನು ಹೇಳುತ್ತಾನೋ ಅದನ್ನು ಸ್ವಲ್ಪವೂ ಶಂಕಿಸದೇ ಮಾಡುತ್ತೇವೆ ಎನ್ನುವುದು ನಮ್ಮ ವ್ರತ.
01133015a ಭವಂತಃ ಸುಹೃದೋಽಸ್ಮಾಕಮಸ್ಮಾನ್ಕೃತ್ವಾ ಪ್ರದಕ್ಷಿಣಂ।
01133015c ಆಶೀರ್ಭಿರಭಿನಂದ್ಯಾಸ್ಮಾನ್ನಿವರ್ತಧ್ವಂ ಯಥಾಗೃಹಂ।।
ನೀವು ನಮ್ಮ ಸುಹೃದಯರು. ನಮಗೆ ಪ್ರದಕ್ಷಿಣೆ ಮಾಡಿ ಆಶೀರ್ವದಿಸಿ ನಮ್ಮನ್ನು ಅಭಿನಂದಿಸಿ ನಿಮ್ಮ ನಿಮ್ಮ ಮನೆಗಳಿಗೆ ತೆರಳಿ.
01133016a ಯದಾ ತು ಕಾರ್ಯಮಸ್ಮಾಕಂ ಭವದ್ಭಿರುಪಪತ್ಸ್ಯತೇ।
01133016c ತದಾ ಕರಿಷ್ಯಥ ಮಮ ಪ್ರಿಯಾಣಿ ಚ ಹಿತಾನಿ ಚ।।
ನಿಮ್ಮಿಂದ ನಮಗೆ ಯಾವಾಗಲಾದರೂ ಕಾರ್ಯವಾಗಬೇಕೆಂದಾಗ ನನಗೆ ಪ್ರಿಯ ಮತ್ತು ಹಿತಕರವಾದವುಗಳನ್ನು ಮಾಡುವಿರಂತೆ.”
01133017a ತೇ ತಥೇತಿ ಪ್ರತಿಜ್ಞಾಯ ಕೃತ್ವಾ ಚೈತಾನ್ಪ್ರದಕ್ಷಿಣಂ।
01133017c ಆಶೀರ್ಭಿರಭಿನಂದ್ಯೈನಾಂಜಗ್ಮುರ್ನಗರಮೇವ ಹಿ।।
ಅವರು ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಅವರಿಗೆ ಪ್ರದಕ್ಷಿಣೆ ಮಾಡಿ ಆಶೀರ್ವದಿಸಿ-ಅಭಿನಂದಿಸಿ ನಗರಕ್ಕೆ ಹಿಂದಿರುಗಿದರು.
01133018a ಪೌರೇಷು ತು ನಿವೃತ್ತೇಷು ವಿದುರಃ ಸರ್ವಧರ್ಮವಿತ್।
01133018c ಬೋಧಯನ್ಪಾಂಡವಶ್ರೇಷ್ಠಮಿದಂ ವಚನಮಬ್ರವೀತ್।
01133018e ಪ್ರಾಜ್ಞಃ ಪ್ರಾಜ್ಞಂ ಪ್ರಲಾಪಜ್ಞಃ ಸಮ್ಯಗ್ಧರ್ಮಾರ್ಥದರ್ಶಿವಾನ್।।
ಪೌರರು ಹಿಂದಿರುಗಿದ ನಂತರ ಸರ್ವ ಧರ್ಮವಿದು ವಿದುರನು ಪಾಂಡವಶ್ರೇಷ್ಠನಿಗೆ ಬೋಧಿಸುತ್ತಾ ಪ್ರಾಜ್ಞನು ಧರ್ಮಾರ್ಥದರ್ಶಿ ಒಗಟುಗಳನ್ನು ಅರಿಯಬಲ್ಲ ಪ್ರಾಜ್ಞನಿಗೆ ಹೇಳುವಂತೆ ಈ ಮಾತುಗಳನ್ನಾಡಿದನು:
01133019a ವಿಜ್ಞಾಯೇದಂ ತಥಾ ಕುರ್ಯಾದಾಪದಂ ನಿಸ್ತರೇದ್ಯಥಾ।
01133019c ಅಲೋಹಂ ನಿಶಿತಂ ಶಸ್ತ್ರಂ ಶರೀರಪರಿಕರ್ತನಂ।
01133019e ಯೋ ವೇತ್ತಿ ನ ತಮಾಘ್ನಂತಿ ಪ್ರತಿಘಾತವಿದಂ ದ್ವಿಷಃ।।
“ತಿಳಿದಿರುವವನು ಆಪತ್ತನ್ನು ಗೆಲ್ಲಲು ಪ್ರಯತ್ನಿಸುತ್ತಾನೆ. ಲೋಹವಲ್ಲದ ಆದರೂ ಮೊನಚಾದ ಶಸ್ತ್ರವೊಂದು ಶರೀರವನ್ನು ಆವರಿಸಿದೆ. ಇದನ್ನು ತಿಳಿದವನನ್ನು ಯಾವ ಆಯುಧವೂ ಕೊಲ್ಲುವುದಿಲ್ಲ ಆದರೆ ಶತ್ರುವನ್ನು ಎದುರಿಸುತ್ತದೆ.
01133020a ಕಕ್ಷಘ್ನಃ ಶಿಶಿರಘ್ನಶ್ಚ ಮಹಾಕಕ್ಷೇ ಬಿಲೌಕಸಃ।
01133020c ನ ದಹೇದಿತಿ ಚಾತ್ಮಾನಂ ಯೋ ರಕ್ಷತಿ ಸ ಜೀವತಿ।।
ಕಕ್ಷಗಳನ್ನು ಮತ್ತು ಛಳಿಯನ್ನು ಕೊಲ್ಲುವಂತಹ ಆಯುಧವು ವಿಶಾಲ ಬಿಲದಲ್ಲಿರುವುದನ್ನು ಕೊಲ್ಲುವುದಿಲ್ಲ ಎಂದು ತಿಳಿದವನು ತನ್ನನ್ನು ತಾನೇ ರಕ್ಷಿಸಿಕೊಂಡು ಜೀವಿಸುತ್ತಾನೆ.
01133021a ನಾಚಕ್ಷುರ್ವೇತ್ತಿ ಪಂಥಾನಂ ನಾಚಕ್ಷುರ್ವಿಂದತೇ ದಿಶಃ।
01133021c ನಾಧೃತಿರ್ಭೂತಿಮಾಪ್ನೋತಿ ಬುಧ್ಯಸ್ವೈವಂ ಪ್ರಬೋಧಿತಃ।।
ಕುರುಡನಿಗೆ ದಾರಿ ಕಾಣುವುದಿಲ್ಲ, ಕುರುಡನಿಗೆ ದಿಕ್ಕೇ ಕಾಣುವುದಿಲ್ಲ ಮತ್ತು ತನ್ನ ರಕ್ಷಣೆಯನ್ನು ಮಾಡಿಕೊಳ್ಳದಿರುವವನು ಶ್ರೇಯಸ್ಸನ್ನು ಹೊಂದಲಾರ. ಇದನ್ನು ತಿಳಿದು ಜಾಗರೂಕನಾಗಿರು.
01133022a ಅನಾಪ್ತೈರ್ದತ್ತಮಾದತ್ತೇ ನರಃ ಶಸ್ತ್ರಮಲೋಹಜಂ।
01133022c ಶ್ವಾವಿಚ್ಶರಣಮಾಸಾದ್ಯ ಪ್ರಮುಚ್ಯೇತ ಹುತಾಶನಾತ್।।
ನರನು ಆಪ್ತರಲ್ಲದವರಿಂದ ಕೊಡಲ್ಪಟ್ಟ ಲೋಹವಲ್ಲದ ಈ ಶಸ್ತ್ರವನ್ನು ತೆಗೆದುಕೊಂಡು ಮುಳ್ಳುಹಂದಿಯ ಆಸರೆಯನ್ನು ಪಡೆದು ಬೆಂಕಿಯಿಂದ ಬಿಡುಗಡೆ ಹೊಂದುತ್ತಾನೆ.
01133023a ಚರನ್ಮಾರ್ಗಾನ್ವಿಜಾನಾತಿ ನಕ್ಷತ್ರೈರ್ವಿಂದತೇ ದಿಶಃ।
01133023c ಆತ್ಮನಾ ಚಾತ್ಮನಃ ಪಂಚ ಪೀಡಯನ್ನಾನುಪೀಡ್ಯತೇ।।
ನಡೆಯುತ್ತಿರುವ ಮಾರ್ಗಗಳನ್ನು ಮತ್ತು ದಿಕ್ಕುಗಳನ್ನು ನಕ್ಷತ್ರಗಳ ಮೂಲಕ ತಿಳಿದುಕೊಳ್ಳುತ್ತಾನೆ; ತಾನೇ ತನ್ನ ಪಂಚ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುಳುಗಿಹೋಗುವುದರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ.”
01133024a ಅನುಶಿಷ್ಟ್ವಾನುಗತ್ವಾ ಚ ಕೃತ್ವಾ ಚೈನಾನ್ಪ್ರದಕ್ಷಿಣಂ।
01133024c ಪಾಂಡವಾನಭ್ಯನುಜ್ಞಾಯ ವಿದುರಃ ಪ್ರಯಯೌ ಗೃಹಾನ್।।
ಅವರನ್ನು ಅನುಸರಿಸಿ ಹೋಗುತ್ತಿರುವಾಗ ಈ ಸೂಚನೆಗಳನ್ನಿತ್ತ ವಿದುರನು ಪಾಂಡವರಿಗೆ ಪ್ರದಕ್ಷಿಣೆಮಾಡಿ ಅವರನ್ನು ಬೀಳ್ಕೊಟ್ಟು ತನ್ನ ಮನೆಗೆ ಹಿಂದಿರುಗಿದನು.
01133025a ನಿವೃತ್ತೇ ವಿದುರೇ ಚೈವ ಭೀಷ್ಮೇ ಪೌರಜನೇ ತಥಾ।
01133025c ಅಜಾತಶತ್ರುಮಾಮಂತ್ರ್ಯ ಕುಂತೀ ವಚನಮಬ್ರವೀತ್।।
ವಿದುರ, ಭೀಷ್ಮ, ಮತ್ತು ಪೌರಜನರು ಹಿಂದಿರುಗಿದ ನಂತರ ಕುಂತಿಯು ಅಜಾತಶತ್ರುವನ್ನು ಕರೆದು ಕೇಳಿದಳು:
01133026a ಕ್ಷತ್ತಾ ಯದಬ್ರವೀದ್ವಾಕ್ಯಂ ಜನಮಧ್ಯೇಽಬ್ರುವನ್ನಿವ।
01133026c ತ್ವಯಾ ಚ ತತ್ತಥೇತ್ಯುಕ್ತೋ ಜಾನೀಮೋ ನ ಚ ತದ್ವಯಂ।।
“ಜನರ ಮಧ್ಯದಲ್ಲಿ ಕ್ಷತ್ತನು ಏನು ಹೇಳಿದನು? ನೀನು ಅದಕ್ಕೆ ಹಾಗೆಯೇ ಆಗಲಿ ಎಂದೆ. ನಮಗೆ ಇದು ಅರ್ಥವಾಗಲಿಲ್ಲ!
01133027a ಯದಿ ತಚ್ಛಕ್ಯಮಸ್ಮಾಭಿಃ ಶ್ರೋತುಂ ನ ಚ ಸದೋಷವತ್।
01133027c ಶ್ರೋತುಮಿಚ್ಛಾಮಿ ತತ್ಸರ್ವಂ ಸಂವಾದಂ ತವ ತಸ್ಯ ಚ।।
ನಾವೆಲ್ಲರೂ ಅದನ್ನು ಕೇಳಬಹುದಂಥದ್ದಾಗಿದ್ದರೆ, ಕೆಟ್ಟ ವಿಷಯವಲ್ಲದಿದ್ದರೆ ನಿನ್ನ ಮತ್ತು ಅವನ ಸಂವಾದವೆಲ್ಲವನ್ನು ತಿಳಿಯಲು ಬಯಸುತ್ತೇನೆ.”
01133028 ಯುಧಿಷ್ಠಿರ ಉವಾಚ।
01133028a ವಿಷಾದಗ್ನೇಶ್ಚ ಬೋದ್ಧವ್ಯಮಿತಿ ಮಾಂ ವಿದುರೋಽಬ್ರವೀತ್।
01133028c ಪಂಥಾಶ್ಚ ವೋ ನಾವಿದಿತಃ ಕಶ್ಚಿತ್ಸ್ಯಾದಿತಿ ಚಾಬ್ರವೀತ್।।
ಯುಧಿಷ್ಠಿರನು ಹೇಳಿದನು: “ವಿದುರನು ನನಗೆ ವಿಷ ಮತ್ತು ಅಗ್ನಿಗಳ ಕುರಿತು ಜಾಗರೂಕನಾಗಿರಲು ಹೇಳಿದನು. ದಾರಿಗಳ್ಯಾವುವೂ ನನಗೆ ತಿಳಿಯದೆ ಇರಬಾರದೆಂದೂ ಹೇಳಿದನು.
01133029a ಜಿತೇಂದ್ರಿಯಶ್ಚ ವಸುಧಾಂ ಪ್ರಾಪ್ಸ್ಯಸೀತಿ ಚ ಮಾಬ್ರವೀತ್।
01133029c ವಿಜ್ಞಾತಮಿತಿ ತತ್ಸರ್ವಮಿತ್ಯುಕ್ತೋ ವಿದುರೋ ಮಯಾ।।
ಜಿತೇಂದ್ರಿಯನಾಗಿದ್ದು ವಸುಧೆಯನ್ನು ಪ್ರಾಪ್ತಗೊಳಿಸಿಕೊಳ್ಳಬಹುದು ಎಂದೂ ಹೇಳಿದನು. ಅವೆಲ್ಲವೂ ಅರ್ಥವಾಯಿತೆಂದು ನಾನು ವಿದುರನಿಗೆ ಉತ್ತರವಿತ್ತೆ.””
01133030 ವೈಶಂಪಾಯನ ಉವಾಚ।
01133030a ಅಷ್ಟಮೇಽಹನಿ ರೋಹಿಣ್ಯಾಂ ಪ್ರಯಾತಾಃ ಫಲ್ಗುನಸ್ಯ ತೇ।
01133030c ವಾರಣಾವತಮಾಸಾದ್ಯ ದದೃಶುರ್ನಾಗರಂ ಜನಂ।।
ವೈಶಂಪಾಯನನು ಹೇಳಿದನು: “ಫಲ್ಗುಣದ ಎಂಟನೇ ದಿನ ರೋಹಿಣೀ ನಕ್ಷತ್ರದಲ್ಲಿ ಅವರು ವಾರಣಾವತವನ್ನು ಸೇರಿ ನಗರ ಮತ್ತು ಜನರನ್ನು ನೋಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ವಾರಣಾವತಗಮನೇ ತ್ರಯಸ್ತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ವಾರಣಾವತಗಮನ ಎನ್ನುವ ನೂರಾಮೂವತ್ತ್ಮೂರನೆಯ ಅಧ್ಯಾಯವು.