ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 95
ಸಾರ
ಶಂತನು-ಸತ್ಯವತಿಯರಲ್ಲಿ ಚಿತ್ರಾಂಗದ-ವಿಚಿತ್ರವೀರ್ಯರ ಜನನ, ಶಂತನವಿನ ಮರಣ, ಚಿತ್ರಾಂಗದನ ಪಟ್ಟಾಭಿಷೇಕ (1-5). ತನ್ನದೇ ಹೆಸರಿನ ಗಂಧರ್ವನೊಡನೆ ಹೋರಾಡಿ ಚಿತ್ರಾಂಗದನ ಅಕಾಲ ಮರಣ (6-10). ಬಾಲಕ ವಿಚಿತ್ರವೀರ್ಯನಿಗೆ ಪಟ್ಟ (11-14).
01095001 ವೈಶಂಪಾಯನ ಉವಾಚ।
01095001a ತತೋ ವಿವಾಹೇ ನಿರ್ವೃತ್ತೇ ಸ ರಾಜಾ ಶಂತನುರ್ನೃಪಃ।
01095001c ತಾಂ ಕನ್ಯಾಂ ರೂಪಸಂಪನ್ನಾಂ ಸ್ವಗೃಹೇ ಸಂನ್ಯವೇಶಯತ್।।
ವೈಶಂಪಾಯನನು ಹೇಳಿದನು: “ವಿವಾಹಕಾರ್ಯಗಳು ಮುಗಿದ ನಂತರ ನೃಪ ಶಂತನು ರಾಜನು ಆ ರೂಪಸಂಪನ್ನ ಕನ್ಯೆಯೊಂದಿಗೆ ಕೂಡಿ ತನ್ನ ಮನೆಯಲ್ಲಿ ವಾಸಿಸತೊಡಗಿದನು.
01095002a ತತಃ ಶಾಂತನವೋ ಧೀಮಾನ್ಸತ್ಯವತ್ಯಾಮಜಾಯತ।
01095002c ವೀರಶ್ಚಿತ್ರಾಂಗದೋ ನಾಮ ವೀರ್ಯೇಣ ಮನುಜಾನತಿ।।
ಶಂತನುವಿಗೆ ಸತ್ಯವತಿಯು ವೀರತೆಯಲ್ಲಿ ಮನುಷ್ಯರೆಲ್ಲರನ್ನೂ ಮೀರಿದ ಚಿತ್ರಾಂಗದ ಎನ್ನುವ ಧೀಮಂತ ವೀರ ಪುತ್ರನಿಗೆ ಜನ್ಮವಿತ್ತಳು.
01095003a ಅಥಾಪರಂ ಮಹೇಷ್ವಾಸಂ ಸತ್ಯವತ್ಯಾಂ ಪುನಃ ಪ್ರಭುಃ।
01095003c ವಿಚಿತ್ರವೀರ್ಯಂ ರಾಜಾನಂ ಜನಯಾಮಾಸ ವೀರ್ಯವಾನ್।।
ನಂತರ ಪುನಃ ಆ ಮಹೇಷ್ವಾಸ ಪ್ರಭುವು ಸತ್ಯವತಿಯಲ್ಲಿ ವಿಚಿತ್ರವೀರ್ಯನೆನ್ನುವ ವೀರ್ಯವಂತ ರಾಜಪುತ್ರನನ್ನು ಪಡೆದನು.
01095004a ಅಪ್ರಾಪ್ತವತಿ ತಸ್ಮಿಂಶ್ಚ ಯೌವನಂ ಭರತರ್ಷಭ।
01095004c ಸ ರಾಜಾ ಶಂತನುರ್ಧೀಮಾನ್ಕಾಲಧರ್ಮಮುಪೇಯಿವಾನ್।।
ಭರತರ್ಷಭ! ಅವರು ಯೌವನವನ್ನು ಹೊಂದುವುದರೊಳಗೇ ಆ ಧೀಮಾನ್ ರಾಜ ಶಂತನುವು ಕಾಲಧರ್ಮಕ್ಕೊಳಗಾದನು.
01095005a ಸ್ವರ್ಗತೇ ಶಂತನೌ ಭೀಷ್ಮಶ್ಚಿತ್ರಾಂಗದಮರಿಂದಮಂ।
01095005c ಸ್ಥಾಪಯಾಮಾಸ ವೈ ರಾಜ್ಯೇ ಸತ್ಯವತ್ಯಾ ಮತೇ ಸ್ಥಿತಃ।।
ಶಂತನುವು ಸ್ವರ್ಗವಾಸಿಯಾದ ನಂತರ ಭೀಷ್ಮನು, ಸತ್ಯವತಿಯ ಇಚ್ಛೆಯಂತೆ, ಅರಿಂದಮ ಚಿತ್ರಾಂಗದನನ್ನು ರಾಜಸಿಂಹಾಸನದಲ್ಲಿ ಕೂರಿಸಿದನು.
01095006a ಸ ತು ಚಿತ್ರಾಂಗದಃ ಶೌರ್ಯಾತ್ಸರ್ವಾಂಶ್ಚಿಕ್ಷೇಪ ಪಾರ್ಥಿವಾನ್।
01095006c ಮನುಷ್ಯಂ ನ ಹಿ ಮೇನೇ ಸ ಕಂ ಚಿತ್ಸದೃಶಮಾತ್ಮನಃ।।
ಚಿತ್ರಾಂಗದನಾದರೂ ತನ್ನ ಶೌರ್ಯದಿಂದ ಪೃಥ್ವಿಯ ಸರ್ವ ಪಾರ್ಥಿವರನ್ನೂ ಮನುಷ್ಯರಲ್ಲಿ ತನ್ನ ಸದೃಶ ಯಾರೂ ಇಲ್ಲವೇನೋ ಎನ್ನುವಂತೆ ಗೆದ್ದನು.
01095007a ತಂ ಕ್ಷಿಪಂತಂ ಸುರಾಂಶ್ಚೈವ ಮನುಷ್ಯಾನಸುರಾಂಸ್ತಥಾ।
01095007c ಗಂಧರ್ವರಾಜೋ ಬಲವಾಂಸ್ತುಲ್ಯನಾಮಾಭ್ಯಯಾತ್ತದಾ।
01095007e ತೇನಾಸ್ಯ ಸುಮಹದ್ಯುದ್ಧಂ ಕುರುಕ್ಷೇತ್ರೇ ಬಭೂವ ಹ।।
01095008a ತಯೋರ್ಬಲವತೋಸ್ತತ್ರ ಗಂಧರ್ವಕುರುಮುಖ್ಯಯೋಃ।
01095008c ನದ್ಯಾಸ್ತೀರೇ ಹಿರಣ್ವತ್ಯಾಃ ಸಮಾಸ್ತಿಸ್ರೋಽಭವದ್ರಣಃ।।
ಈ ರೀತಿ ಅವನು ಎಲ್ಲ ಸುರರು, ಮನುಷ್ಯರು, ಅಸುರರೆಲ್ಲರನ್ನೂ ಗೆದ್ದಾಗ, ಅದೇ ಹೆಸರನ್ನು ಪಡೆದಿದ್ದ, ಬಲವಂತ ಗಂಧರ್ವರಾಜನು ಅವನನ್ನು ಎದುರಿಸಿದನು. ಅವರೀರ್ವರ ಮಧ್ಯೆ ಕುರುಕ್ಷೇತ್ರದಲ್ಲಿ ಮಹಾ ಯುದ್ಧವೇ ನಡೆಯಿತು. ಆ ಬಲವಂತ ಗಂಧರ್ವ-ಕುರುಮುಖ್ಯರ ನಡುವೆ ಹಿರಣ್ವತೀ ನದೀತೀರದಲ್ಲಿ ಮೂರು ವರ್ಷಗಳ ಕಾಲ ಯುದ್ಧ ನಡೆಯಿತು.
01095009a ತಸ್ಮಿನ್ವಿಮರ್ದೇ ತುಮುಲೇ ಶಸ್ತ್ರವೃಷ್ಟಿಸಮಾಕುಲೇ।
01095009c ಮಾಯಾಧಿಕೋಽವಧೀದ್ವೀರಂ ಗಂಧರ್ವಃ ಕುರುಸತ್ತಮಂ।।
ಒಂದೇ ಸಮನೆ ಶಸ್ತ್ರವೃಷ್ಟಿಯಾಗುತ್ತಿದ್ದ ಆ ಘೋರ ಯುದ್ಧದಲ್ಲಿ ಅಧಿಕ ಮಾಯೆಯ ವೀರ ಗಂಧರ್ವನು ಕುರುಸತ್ತಮನನ್ನು ವಧಿಸಿದನು.
01095010a ಚಿತ್ರಾಂಗದಂ ಕುರುಶ್ರೇಷ್ಠಂ ವಿಚಿತ್ರಶರಕಾರ್ಮುಕಂ।
01095010c ಅಂತಾಯ ಕೃತ್ವಾ ಗಂಧರ್ವೋ ದಿವಮಾಚಕ್ರಮೇ ತತಃ।।
ವಿಚಿತ್ರ ಶರಕಾರ್ಮುಕ ಕುರುಶ್ರೇಷ್ಠ ಚಿತ್ರಾಂಗದನನ್ನು ಕೊನೆಗೊಳಿಸಿ ಗಂಧರ್ವನು ದೇವಲೋಕವನ್ನು ಸೇರಿದನು.
01095011a ತಸ್ಮಿನ್ನೃಪತಿಶಾರ್ದೂಲೇ ನಿಹತೇ ಭೂರಿವರ್ಚಸಿ।
01095011c ಭೀಷ್ಮಃ ಶಾಂತನವೋ ರಾಜನ್ಪ್ರೇತಕಾರ್ಯಾಣ್ಯಕಾರಯತ್।।
ರಾಜನ್! ಆ ಭೂರಿವರ್ಚಸ ನೃಪತಿಶಾರ್ದೂಲನು ತೀರಿಕೊಂಡ ನಂತರ ಬೀಷ್ಮ ಶಾಂತನವನು ಅವನ ಪ್ರೇತಕಾರ್ಯಗಳನ್ನು ನೆರವೇರಿಸಿದನು.
01095012a ವಿಚಿತ್ರವೀರ್ಯಂ ಚ ತದಾ ಬಾಲಮಪ್ರಾಪ್ತಯೌವನಂ।
01095012c ಕುರುರಾಜ್ಯೇ ಮಹಾಬಾಹುರಭ್ಯಷಿಂಚದನಂತರಂ।।
ಆ ಮಹಾಬಾಹುವು ಇನ್ನೂ ಯೌವನವನ್ನು ಪಡೆಯದಿದ್ದ ಬಾಲಕ ವಿಚಿತ್ರವೀರ್ಯನನ್ನು ಕುರುರಾಜನನ್ನಾಗಿ ಅಭಿಷೇಕಿಸಿದನು.
01095013a ವಿಚಿತ್ರವೀರ್ಯಸ್ತು ತದಾ ಭೀಷ್ಮಸ್ಯ ವಚನೇ ಸ್ಥಿತಃ।
01095013c ಅನ್ವಶಾಸನ್ಮಹಾರಾಜ ಪಿತೃಪೈತಾಮಹಂ ಪದಂ।।
ಮಹಾರಾಜ! ವಿಚಿತ್ರವೀರ್ಯನಾದರೂ ಭೀಷ್ಮನ ವಚನವನ್ನು ಪರಿಪಾಲಿಸುತ್ತಾ ತನ್ನ ಪಿತ-ಪಿತಾಮಹರ ರಾಜ್ಯವನ್ನು ಆಳಿದನು.
01095014a ಸ ಧರ್ಮಶಾಸ್ತ್ರಕುಶಲೋ ಭೀಷ್ಮಂ ಶಾಂತನವಂ ನೃಪಃ।
01095014c ಪೂಜಯಾಮಾಸ ಧರ್ಮೇಣ ಸ ಚೈನಂ ಪ್ರತ್ಯಪಾಲಯತ್।।
ಆ ಧರ್ಮಶಾಸ್ತ್ರಕುಶಲ ನೃಪನು ಭೀಷ್ಮ ಶಾಂತನವನನ್ನು ಪೂಜಿಸುತ್ತಾ ಧರ್ಮದಿಂದ ರಾಜ್ಯವಾಳಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಚಿತ್ರಾಂಗದೋಪಾಖ್ಯಾನೇ ಪಂಚನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಚಿಂತ್ರಾಂಗದೋಪಾಖ್ಯಾನ ವಿಷಯಕ ತೊಂಭತ್ತೈದನೆಯ ಅಧ್ಯಾಯವು.