090 ಪುರುವಂಶಾನುಕೀರ್ತನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 90

ಸಾರ

ಜನಮೇಜಯನು ತನ್ನ ಸಂಪೂರ್ಣ ವಂಶಾವಳಿಯನ್ನು ವರ್ಣಿಸಲು ವೈಶಂಪಾಯನನಲ್ಲಿ ಕೇಳಿಕೊಳ್ಳುವುದು (1-5). ದಕ್ಷನಿಂದ ಪೂರುವಿನವರೆಗಿನ ವಂಶಾವಳಿ (6-10). ಪೂರುವಿನಿಂದ ಭರತನವರೆಗಿನ ವಂಶಾವಳಿ (11-29). ಭರತನಿಂದ ಕುರುವಿನವರೆಗಿನ ವಂಶಾವಳಿ (30-40). ಕುರುವಿನಿಂದ ಶಂತನುವಿನವರೆಗಿನ ವಂಶಾವಳಿ (41-50). ಶಂತನುವಿನಿಂದ ಜನಮೇಜಯನ ಮಗ ಅಶ್ವಮೇಧದತ್ತನವರೆಗಿನ ವಂಶಾವಳಿ (51-96).

01090001 ಜನಮೇಜಯ ಉವಾಚ।
01090001a ಶ್ರುತಸ್ತ್ವತ್ತೋ ಮಯಾ ವಿಪ್ರ ಪೂರ್ವೇಷಾಂ ಸಂಭವೋ ಮಹಾನ್।
01090001c ಉದಾರಾಶ್ಚಾಪಿ ವಂಶೇಽಸ್ಮಿನ್ರಾಜಾನೋ ಮೇ ಪರಿಶ್ರುತಾಃ।।

ಜನಮೇಜಯನು ಹೇಳಿದನು: “ವಿಪ್ರ! ನನ್ನ ಪೂರ್ವಜರ ಮಹಾ ಮೂಲ ಮತ್ತು ಈ ವಂಶದಲ್ಲಿ ಆದ ಉದಾರ ರಾಜರ ಕುರಿತು ನಿನ್ನಿಂದ ಕೇಳಿದೆನು.

01090002a ಕಿಂ ತು ಲಘ್ವರ್ಥಸಂಯುಕ್ತಂ ಪ್ರಿಯಾಖ್ಯಾನಂ ನ ಮಾಮತಿ।
01090002c ಪ್ರೀಣಾತ್ಯತೋ ಭವಾನ್ಭೂಯೋ ವಿಸ್ತರೇಣ ಬ್ರವೀತು ಮೇ।।
01090003a ಏತಾಮೇವ ಕಥಾಂ ದಿವ್ಯಾಮಾ ಪ್ರಜಾಪತಿತೋ ಮನೋಃ।
01090003c ತೇಷಾಮಾಜನನಂ ಪುಣ್ಯಂ ಕಸ್ಯ ನ ಪ್ರೀತಿಮಾವಹೇತ್।।
01090004a ಸದ್ಧರ್ಮಗುಣಮಾಹಾತ್ಮ್ಯೈರಭಿವರ್ಧಿತಮುತ್ತಮಂ।

ಆದರೆ ನನಗೆ ಪ್ರಿಯವಾದ ಈ ಆಖ್ಯಾನವನ್ನು ಸಂಕ್ಷಿಪ್ತವಾಗಿಯೇ ಹೇಳಿದ್ದೀಯೆ. ಆದುದರಿಂದ ನೀನು ವಿಸ್ತಾರವಾಗಿ ಅದೇ ದಿವ್ಯ ಕಥೆಯನ್ನು ಪ್ರಜಾಪತಿ ಮನುವಿನಿಂದ ಪ್ರಾರಂಭಿಸಿ ಹೇಳಬೇಕೆಂದು ಬಯಸುತ್ತೇನೆ. ಆ ಸದ್ಧರ್ಮ ಗುಣ ಮಹಾತ್ಮ, ಉತ್ತಮ ಅಭಿವೃದ್ಧಿ ಮತ್ತು ಅವರ ಪುಣ್ಯ ವಂಶಾವಳಿಯನ್ನು ಕೇಳಲು ಯಾರಿಗೆ ತಾನೆ ಇಷ್ಟವಾಗುವುದಿಲ್ಲ?

01090004c ವಿಷ್ಟಭ್ಯ ಲೋಕಾಂಸ್ತ್ರೀನೇಷಾಂ ಯಶಃ ಸ್ಫೀತಮವಸ್ಥಿತಂ।।
01090005a ಗುಣಪ್ರಭಾವವೀರ್ಯೌಜಃಸತ್ತ್ವೋತ್ಸಾಹವತಾಮಹಂ।
01090005c ನ ತೃಪ್ಯಾಮಿ ಕಥಾಂ ಶೃಣ್ವನ್ನಮೃತಾಸ್ವಾದಸಮ್ಮಿತಾಂ।।

ಗುಣಪ್ರಭಾವವೀರ್ಯಜ, ಸತ್ವೋತ್ಸಾಹವಂತ, ಮೂರೂ ಲೋಕಗಳಲ್ಲಿ ಯಶಸ್ವಿಗಳಾದ, ಅವರ ಅಮೃತಸ್ವಾದಸಮ್ಮಿತವಾದ ಕಥೆಯನ್ನು ಎಷ್ಟು ಕೇಳಿದರೂ ನನಗೆ ತೃಪ್ತಿಯಾಯಿತೆಂದೆನಿಸುವುದಿಲ್ಲ.”

01090006 ವೈಶಂಪಾಯನ ಉವಾಚ।
01090006a ಶೃಣು ರಾಜನ್ಪುರಾ ಸಮ್ಯಙ್ಮಯಾ ದ್ವೈಪಾಯನಾಚ್ಶ್ರುತಂ।
01090006c ಪ್ರೋಚ್ಯಮಾನಮಿದಂ ಕೃತ್ಸ್ನಂ ಸ್ವವಂಶಜನನಂ ಶುಭಂ।।

ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ದ್ವೈಪಾಯನನಿಂದ ನಾನು ಕೇಳಿದ ನಿನ್ನ ಸಂಪೂರ್ಣ ಶುಭ ವಂಶಾವಳಿಯನ್ನು ಹೇಳುತ್ತೇನೆ. ಕೇಳು.

01090007A ದಕ್ಷಸ್ಯಾದಿತಿಃ।
01090007B ಅದಿತೇರ್ವಿವಸ್ವಾನ್।
01090007C ವಿವಸ್ವತೋ ಮನುಃ।
01090007D ಮನೋರಿಲಾ।
01090007E ಇಲಾಯಾಃ ಪುರೂರವಾಃ।
01090007F ಪುರೂರವಸ ಆಯುಃ।
01090007G ಆಯುಷೋ ನಹುಷಃ।
01090007H ನಹುಷಸ್ಯ ಯಯಾತಿಃ।।
01090008A ಯಯಾತೇರ್ದ್ವೇ ಭಾರ್ಯೇ ಬಭೂವತುಃ।
01090008B ಉಶನಸೋ ದುಹಿತಾ ದೇವಯಾನೀ ವೃಷಪರ್ವಣಶ್ಚ ದುಹಿತಾ ಶರ್ಮಿಷ್ಠಾ ನಾಮ।
01090008C ಅತ್ರಾನುವಂಶೋ ಭವತಿ।।
01090009a ಯದುಂ ಚ ತುರ್ವಸುಂ ಚೈವ ದೇವಯಾನೀ ವ್ಯಜಾಯತ।
01090009c ದ್ರುಹ್ಯುಂ ಚಾನುಂ ಚ ಪೂರುಂ ಚ ಶರ್ಮಿಷ್ಠಾ ವಾರ್ಷಪರ್ವಣೀ।।
01090010A ತತ್ರ ಯದೋರ್ಯಾದವಾಃ।
01090010B ಪೂರೋಃ ಪೌರವಾಃ।।

ದಕ್ಷನಿಂದ ಅದಿತಿ. ಅದಿತಿಯಿಂದ ವಿವಸ್ವತ. ವಿವಸ್ವತನಿಂದ ಮನು. ಮನುವಿನಿಂದ ಇಲ. ಇಲನಿಂದ ಪುರೂರವ. ಪುರೂರವನಿಂದ ಆಯುಸ್. ಆಯುಸನಿಂದ ನಹುಷ. ನಹುಷನಿಂದ ಯಯಾತಿ. ಯಯಾತಿಗೆ ಈರ್ವರು ಪತ್ನಿಯರು. ಉಶನಸನ ಪುತ್ರಿ ದೇವಯಾನಿ ಮತ್ತು ವೃಷಪರ್ವನ ಮಗಳು ಶರ್ಮಿಷ್ಠೆ. ಇಲ್ಲಿ ಒಂದು ಶ್ಲೋಕವಿದೆ. ಯದು ಮತ್ತು ತುರ್ವಸು ದೇವಯಾನಿಯಲ್ಲಿ ಮತ್ತು ದ್ರುಹ್ಯು, ಅನು ಮತ್ತು ಪೂರು ವಾರ್ಷಪರ್ವಣೀ ಶರ್ಮಿಷ್ಠೆಯಲ್ಲಿ ಜನಿಸಿದರು. ಯದುವಿನಿಂದ ಯಾದವರಾದರು. ಪೂರುವಿಂದ ಪೌರವರಾದರು.

01090011A ಪೂರೋರ್ಭಾರ್ಯಾ ಕೌಸಲ್ಯಾ ನಾಮ।
01090011B ತಸ್ಯಾಮಸ್ಯ ಜಜ್ಞೇ ಜನಮೇಜಯೋ ನಾಮ।
01090011C ಯಸ್ತ್ರೀನಶ್ವಮೇಧಾನಾಜಹಾರ।
01090011D ವಿಶ್ವಜಿತಾ ಚೇಷ್ಟ್ವಾ ವನಂ ಪ್ರವಿವೇಶ।।
01090012A ಜನಮೇಜಯಃ ಖಲ್ವನಂತಾಂ ನಾಮೋಪಯೇಮೇ ಮಾಧವೀಂ।
01090012B ತಸ್ಯಾಮಸ್ಯ ಜಜ್ಞೇ ಪ್ರಾಚಿನ್ವಾನ್।
01090012C ಯಃ ಪ್ರಾಚೀಂ ದಿಶಂ ಜಿಗಾಯ ಯಾವತ್ಸೂರ್ಯೋದಯಾತ್।
01090012D ತತಸ್ತಸ್ಯ ಪ್ರಾಚಿನ್ವತ್ವಂ।।

ಪೂರುವಿನ ಪತ್ನಿ ಕೌಸಲ್ಯಾ. ಅವಳಲ್ಲಿ ಅವನು ಜನಮೇಜಯನನ್ನು ಪಡೆದನು. ಅವನು ಮೂರು ಅಶ್ವಮೇಧ ಯಜ್ಞಗಳನ್ನು ಮಾಡಿದನು. ವಿಶ್ವಜಿತ್ ಯಜ್ಞವನ್ನು ಮಾಡಿ ಅವನು ವನವನ್ನು ಪ್ರವೇಶಿಸಿದನು. ಜನಮೇಜಯನು ಮಾಧವೀ ಅನಂತಾ ಎನ್ನುವವಳನ್ನು ಮದುವೆಯಾದನು. ಅವರಲ್ಲಿ ಪ್ರಾಚಿನ್ವತನು ಜನಿಸಿದನು. ಅವನು ಸೂರ್ಯೋದಯವಾಗುವ ವರೆಗೆ ಪೂರ್ವದಿಶೆಯನ್ನು ಗೆದ್ದನು. ಆದುದರಿಂದ ಅವನ ಹೆಸರು ಪ್ರಾಚಿನ್ವತ.

01090013A ಪ್ರಾಚಿನ್ವಾನ್ಖಲ್ವಶ್ಮಕೀಮುಪಯೇಮೇ।
01090013B ತಸ್ಯಾಮಸ್ಯ ಜಜ್ಞೇ ಸಂಯಾತಿಃ।।
01090014A ಸಂಯಾತಿಃ ಖಲು ದೃಷದ್ವತೋ ದುಹಿತರಂ ವರಾಂಗೀಂ ನಾಮೋಪಯೇಮೇ।
01090014B ತಸ್ಯಾಮಸ್ಯ ಜಜ್ಞೇ ಅಹಂಪಾತಿಃ।।
01090015A ಅಹಂಪಾತಿಸ್ತು ಖಲು ಕೃತವೀರ್ಯದುಹಿತರಮುಪಯೇಮೇ ಭಾನುಮತೀಂ ನಾಮ।
01090015B ತಸ್ಯಾಮಸ್ಯ ಜಜ್ಞೇ ಸಾರ್ವಭೌಮಃ।।
01090016A ಸಾರ್ವಭೌಮಃ ಖಲು ಜಿತ್ವಾಜಹಾರ ಕೈಕೇಯೀಂ ಸುನಂದಾಂ ನಾಮ।
01090016B ತಸ್ಯಾಮಸ್ಯ ಜಜ್ಞೇ ಜಯತ್ಸೇನಃ।।
01090017A ಜಯತ್ಸೇನಃ ಖಲು ವೈದರ್ಭೀಮುಪಯೇಮೇ ಸುಷುವಾಂ ನಾಮ।
01090017B ತಸ್ಯಾಮಸ್ಯ ಜಜ್ಞೇ ಅರಾಚೀನಃ।।
01090018A ಅರಾಚೀನೋಽಪಿ ವೈದರ್ಭೀಮೇವಾಪರಾಮುಪಯೇಮೇ ಮರ್ಯಾದಾಂ ನಾಮ।
01090018B ತಸ್ಯಾಮಸ್ಯ ಜಜ್ಞೇ ಮಹಾಭೌಮಃ।।
01090019A ಮಹಾಭೌಮಃ ಖಲು ಪ್ರಾಸೇನಜಿತೀಮುಪಯೇಮೇ ಸುಯಜ್ಞಾಂ ನಾಮ।
01090019B ತಸ್ಯಾಮಸ್ಯ ಜಜ್ಞೇ ಅಯುತನಾಯೀ।
01090019C ಯಃ ಪುರುಷಮೇಧಾನಾಮಯುತಮಾನಯತ್।
01090019lD ತದಸ್ಯಾಯುತನಾಯಿತ್ವಂ।।

ಪ್ರಾಚಿನ್ವತನು ಅಶ್ಮಕಿಯನ್ನು ವಿವಾಹವಾದನು. ಅವಳಲ್ಲಿ ಸಂಯಾತಿಯು ಜನಿಸಿದನು. ಸಂಯಾತಿಯು ದೃಶದ್ವತನ ಮಗಳು ವರಾಂಗೀ ಎನ್ನುವವಳನ್ನು ವಿವಾಹವಾದನು. ಅವರಲ್ಲಿ ಅಹಂಪತಿಯು ಜನಿಸಿದನು. ಅಹಂಪತಿಯು ಕೃತವೀರ್ಯನ ಮಗಳು ಭಾನುಮತಿಯನ್ನು ವಿವಾಹವಾದನು. ಅವಳಲ್ಲಿ ಸಾರ್ವಭೌಮನು ಜನಿಸಿದನು. ಸಾರ್ವಭೌಮನು ಕೈಕೇಯೀ ಸುನಂದಾ ಎನ್ನುವವಳನ್ನು ಗೆದ್ದು ಅಪಹರಿಸಿ ಮದುವೆಯಾದನು. ಅವರಲ್ಲಿ ಜಯತ್ಸೇನನು ಜನಿಸಿದನು. ಜಯತ್ಸೇನನು ವಿದರ್ಭದ ಸುಶ್ರವಳನ್ನು ವಿವಾಹವಾದನು. ಅವಳಲ್ಲಿ ಅರ್ಚಿನನು ಜನಿಸಿದನು. ಅರ್ಚಿನನು ವಿದರ್ಭದ ಇನ್ನೊಬ್ಬ ಸ್ತ್ರೀ ಮರ್ಯಾದಳನ್ನು ವಿವಾಹವಾದನು. ಅವರಲ್ಲಿ ಮಹಾಭೌಮನು ಜನಿಸಿದನು. ಮಹಾಭೌಮನು ಪ್ರಸೇನಜಿತನ ಮಗಳು ಸುಜ್ಞಳನ್ನು ಮದುವೆಯಾದನು. ಅವಳಲ್ಲಿ ಅಯುತನಾಯಿಯು ಜನಿಸಿದನು. ಅವನು ಅಯುತ ಮನುಷ್ಯಮೇಧ ಯಾಗವನ್ನು ನಡೆಸಿದನು. ಆದುದರಿಂದ ಅವನ ಹೆಸರು ಅಯುತನಾಯಿಯೆಂದಾಯಿತು.

01090020A ಅಯುತನಾಯೀ ಖಲು ಪೃಥುಶ್ರವಸೋ ದುಹಿತರಮುಪಯೇಮೇ ಭಾಸಾಂ ನಾಮ।
01090020B ತಸ್ಯಾಮಸ್ಯ ಜಜ್ಞೇ ಅಕ್ರೋಧನಃ।।
01090021A ಅಕ್ರೋಧನಃ ಖಲು ಕಾಲಿಂಗೀಂ ಕರಂಡುಂ ನಾಮೋಪಯೇಮೇ।
01090021B ತಸ್ಯಾಮಸ್ಯ ಜಜ್ಞೇ ದೇವಾತಿಥಿಃ।।
01090022A ದೇವಾತಿಥಿಃ ಖಲು ವೈದೇಹೀಮುಪಯೇಮೇ ಮರ್ಯಾದಾಂ ನಾಮ।
01090022B ತಸ್ಯಾಮಸ್ಯ ಜಜ್ಞೇ ಋಚಃ।।
01090023A ಋಚಃ ಖಲ್ವಾಂಗೇಯೀಮುಪಯೇಮೇ ಸುದೇವಾಂ ನಾಮ।
01090023B ತಸ್ಯಾಂ ಪುತ್ರಮಜನಯದೃಕ್ಷಂ।।
01090024A ಋಕ್ಷಃ ಖಲು ತಕ್ಷಕದುಹಿತರಮುಪಯೇಮೇ ಜ್ವಾಲಾಂ ನಾಮ।
01090024B ತಸ್ಯಾಂ ಪುತ್ರಂ ಮತಿನಾರಂ ನಾಮೋತ್ಪಾದಯಾಮಾಸ।।
01090025A ಮತಿನಾರಃ ಖಲು ಸರಸ್ವತ್ಯಾಂ ದ್ವಾದಶವಾರ್ಷಿಕಂ ಸತ್ರಮಾಜಹಾರ।।
01090026A ನಿವೃತ್ತೇ ಚ ಸತ್ರೇ ಸರಸ್ವತ್ಯಭಿಗಮ್ಯ ತಂ ಭರ್ತಾರಂ ವರಯಾಮಾಸ।
01090026B ತಸ್ಯಾಂ ಪುತ್ರಮಜನಯತ್ತಂಸುಂ ನಾಮ।।

ಅಯುತನಾಯಿಯು ಪೃತುಶ್ರವನ ಮಗಳು ಭಾಸಳನ್ನು ವಿವಾಹವಾದನು. ಅವಳಲ್ಲಿ ಅಕ್ರೋಧನನು ಜನಿಸಿದನು. ಅಕ್ರೋಧನನು ಕಳಿಂಗದ ಕರಂದುವನ್ನು ಮದುವೆಯಾಗಿ ಅವಳಲ್ಲಿ ದೇವತಿಥಿಯನ್ನು ಪಡೆದನು. ದೇವತಿಥಿಯು ವಿದೇಹದ ಮರ್ಯಾದಳನ್ನು ಮದುವೆಯಾದನು, ಮತ್ತು ಅವಳಲ್ಲಿ ಋಚನು ಜನಿಸಿದನು. ಋಚನು ಅಂಗದೇಶದ ಸುದೇವಳನ್ನು ವಿವಾಹವಾದನು. ಅವಳಲ್ಲಿ ಋಕ್ಷನು ಜನಿಸಿದನು. ಋಕ್ಷನು ತಕ್ಷಕನ ಮಗಳು ಜ್ವಾಲಾಳನ್ನು ಮದುವೆಯಾಗಿ, ಅವಳಲ್ಲಿ ಮತಿನಾರ ಎನ್ನುವವನ ತಂದೆಯಾದನು. ಸರಸ್ವತೀ ತೀರದಲ್ಲಿ ಮತಿನಾರನು ಹನ್ನೆರಡು ವರ್ಷಗಳ ದೀರ್ಘ ಸತ್ರವನ್ನು ನಡೆಸಿದನು. ಸತ್ರವು ಮುಗಿದಾಗ, ಸರಸ್ವತಿಯು ಬಂದು ಅವನನ್ನು ತನ್ನ ಪತಿಯನ್ನಾಗಿ ವರಿಸಿದಳು. ಅವಳಲ್ಲಿ ತಂಸುವು ಜನಿಸಿದನು.

01090027A ಅತ್ರಾನುವಂಶೋ ಭವತಿ।।
01090028a ತಂಸುಂ ಸರಸ್ವತೀ ಪುತ್ರಂ ಮತಿನಾರಾದಜೀಜನತ್।
01090028c ಇಲಿನಂ ಜನಯಾಮಾಸ ಕಾಲಿಂದ್ಯಾಂ ತಂಸುರಾತ್ಮಜಂ।।

ಇಲ್ಲಿ ಮತ್ತೆ ಅನುವಂಶವಾಯಿತು. ಮತಿನಾರನಿಂದ ಸರಸ್ವತಿಯಲ್ಲಿ ತಂಸುವು ಜನಿಸಿದನು. ತಂಸುವು ಕಾಲಿಂದಿಯಲ್ಲಿ ಇಲಿನನೆನ್ನುವ ಪುತ್ರನನ್ನು ಪಡೆದನು.

01090029A ಇಲಿನಸ್ತು ರಥಂತರ್ಯಾಂ ದುಃಷಂತಾದ್ಯಾನ್ಪಂಚ ಪುತ್ರಾನಜನಯತ್।।
01090030A ದುಃಷಂತಃ ಖಲು ವಿಶ್ವಾಮಿತ್ರದುಹಿತರಂ ಶಕುಂತಲಾಂ ನಾಮೋಪಯೇಮೇ।
01090030B ತಸ್ಯಾಮಸ್ಯ ಜಜ್ಞೇ ಭರತಃ।

ಇಲಿನನು ರಥಂತರಿಯಲ್ಲಿ ದುಃಷಂತನೇ ಮೊದಲಾದ ಐವರು ಪುತ್ರರನ್ನು ಪಡೆದನು. ದುಃಷಂತನು ವಿಶ್ವಾಮಿತ್ರನ ಮಗಳು ಶಕುಂತಲೆಯನ್ನು ವಿವಾಹವಾದನು. ಅವರಲ್ಲಿ ಭರತನು ಹುಟ್ಟಿದನು.

01090030C ತತ್ರ ಶ್ಲೋಕೌ ಭವತಃ।।
01090031a ಮಾತಾ ಭಸ್ತ್ರಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ।
01090031c ಭರಸ್ವ ಪುತ್ರಂ ದುಃಷಂತ ಮಾವಮಂಸ್ಥಾಃ ಶಕುಂತಲಾಂ।।
01090032a ರೇತೋಧಾಃ ಪುತ್ರ ಉನ್ನಯತಿ ನರದೇವ ಯಮಕ್ಷಯಾತ್।
01090032c ತ್ವಂ ಚಾಸ್ಯ ಧಾತಾ ಗರ್ಭಸ್ಯ ಸತ್ಯಮಾಹ ಶಕುಂತಲಾ।।
01090033A ತತೋಽಸ್ಯ ಭರತತ್ವಂ।।

ಇದರ ಕುರಿತು ಒಂದು ಶ್ಲೋಕವಿದೆ. “ತಾಯಿಯು ತಂದೆಯ ಜನನಿ. ಮಗನು ಯಾರಿಂದ ಜನಿಸಿದನೋ ಅವನೇ ತಂದೆ. ದುಃಷಂತ! ನಿನ್ನ ಪುತ್ರನನ್ನು ಸ್ವೀಕರಿಸಿ ಪರಿಪಾಲಿಸು. ಶಕುಂತಲೆಯನ್ನು ತಿರಸ್ಕರಿಸಬೇಡ. ನರದೇವ! ರೇತುವಿನಿಂದ ಉತ್ಪನ್ನ ಪುತ್ರನು ಯಮಕ್ಷಯದಿಂದ ಉದ್ಧರಿಸುತ್ತಾನೆ. ಈ ಗರ್ಭವನ್ನು ಇತ್ತವನು ನೀನೇ. ಶಕುಂತಲೆಯು ಸತ್ಯವನ್ನೇ ನುಡಿದಿದ್ದಾಳೆ.” ಆದುದರಿಂದ ಅವನ ಹೆಸರು ಭರತನೆಂದಾಯಿತು.

01090034A ಭರತಃ ಖಲು ಕಾಶೇಯೀಮುಪಯೇಮೇ ಸಾರ್ವಸೇನೀಂ ಸುನಂದಾಂ ನಾಮ।
01090034B ತಸ್ಯಾಮಸ್ಯ ಜಜ್ಞೇ ಭುಮನ್ಯುಃ।।
01090035A ಭುಮನ್ಯುಃ ಖಲು ದಾಶಾರ್ಹೀಮುಪಯೇಮೇ ಜಯಾಂ ನಾಮ।
01090035B ತಸ್ಯಾಮಸ್ಯ ಜಜ್ಞೇ ಸುಹೋತ್ರಃ।।
01090036A ಸುಹೋತ್ರಃ ಖಲ್ವಿಕ್ಷ್ವಾಕುಕನ್ಯಾಮುಪಯೇಮೇ ಸುವರ್ಣಾಂ ನಾಮ।
01090036B ತಸ್ಯಾಮಸ್ಯ ಜಜ್ಞೇ ಹಸ್ತೀ।
01090036C ಯ ಇದಂ ಹಾಸ್ತಿನಪುರಂ ಮಾಪಯಾಮಾಸ।
01090036d ಏತದಸ್ಯ ಹಾಸ್ತಿನಪುರತ್ವಂ।।

ಭರತನು ಕಾಶಿಯ ಸಾರ್ವಸೇನನ ಮಗಳು ಸುನಂದಳನ್ನು ವಿವಾಹವಾದನು. ಅವಳಲ್ಲಿ ಭುಮನ್ಯುವು ಜನಿಸಿದನು. ಭುಮನ್ಯುವು ದಾಶಾರ್ಹರ ಜಯಾ ಎನ್ನುವವಳನ್ನು ಮದುವೆಯಾದನು. ಅವಳಲ್ಲಿ ಸುಹೋತ್ರನು ಜನಿಸಿದನು. ಸುಹೋತ್ರನು ಇಕ್ಷ್ವಾಕುವಂಶದ ಸುವರ್ಣಾ ಎನ್ನುವವಳನ್ನು ವಿವಾಹವಾದನು. ಅವಳಲ್ಲಿ ಹಸ್ತಿಯು ಜನಿಸಿದನು. ಅವನೇ ಈ ಹಸ್ತಿನಾಪುರವನ್ನು ಕಟ್ಟಿದನು. ಅವನಿಂದಲೇ ಇದು ಹಸ್ತಿನಾಪುರವೆನಿಸಿಕೊಂಡಿತು.

01090037A ಹಸ್ತೀ ಖಲು ತ್ರೈಗರ್ತೀಮುಪಯೇಮೇ ಯಶೋಧರಾಂ ನಾಮ।
01090037B ತಸ್ಯಾಮಸ್ಯ ಜಜ್ಞೇ ವಿಕುಂತನಃ।।
01090038A ವಿಕುಂತನಃ ಖಲು ದಾಶಾರ್ಹೀಮುಪಯೇಮೇ ಸುದೇವಾಂ ನಾಮ।
01090038B ತಸ್ಯಾಮಸ್ಯ ಜಜ್ಞೇಽಜಮೀಢಃ।।
01090039A ಅಜಮೀಢಸ್ಯ ಚತುರ್ವಿಂಶಂ ಪುತ್ರಶತಂ ಬಭೂವ ಕೈಕೇಯ್ಯಾಂ ನಾಗಾಯಾಂ ಗಾಂಧಾರ್ಯಾಂ ವಿಮಲಾಯಾಂ ಋಕ್ಷಾಯಾಂ ಚೇತಿ।
01090039B ಪೃಥಕ್ ಪೃಥಗ್ ವಂಶಕರಾ ನೃಪತಯಃ।
01090039C ತತ್ರ ವಂಶಕರಃ ಸಂವರಣಃ।।

ಹಸ್ತಿಯು ತ್ರಿಗರ್ತೀ ಯಶೋಧರೆಯನ್ನು ವಿವಾಹವಾದನು. ಅವಳಲ್ಲಿ ವಿಕುಂಠನನು ಜನಿಸಿದನು. ವಿಕುಂಠನನು ದಾಶಾರ್ಹಿ ಸುದೇವಳನ್ನು ಮದುವೆಯಾದನು. ಅವಳಲ್ಲಿ ಅಜಮೀಢನು ಜನಿಸಿದನು. ಅಜಮೀಢನು ೨೪ ಸಾವಿರ ಪುತ್ರರನ್ನು ಕೈಕೇಯಿ, ನಾಗ, ಗಂಧರ್ವಿ, ವಿಮಲಾ ಮತ್ತು ಋಕ್ಷರಿಂದ ಪಡೆದನು. ಅವರಲ್ಲಿ ಪ್ರತಿಯೊಬ್ಬರೂ ರಾಜರಾದರು. ಅವರಲ್ಲಿ ಸಂವರಣನು ವಂಶವನ್ನು ಮುಂದುವರೆಸಿದನು.

01090040A ಸಂವರಣಃ ಖಲು ವೈವಸ್ವತೀಂ ತಪತೀಂ ನಾಮೋಪಯೇಮೇ।
01090040B ತಸ್ಯಾಮಸ್ಯ ಜಜ್ಞೇ ಕುರುಃ।।
01090041A ಕುರುಃ ಖಲು ದಾಶಾರ್ಹೀಮುಪಯೇಮೇ ಶುಭಾಂಗೀಂ ನಾಮ।
01090041B ತಸ್ಯಾಮಸ್ಯ ಜಜ್ಞೇ ವಿಡೂರಥಃ।।
01090042A ವಿಡೂರಥಸ್ತು ಮಾಗಧೀಮುಪಯೇಮೇ ಸಂಪ್ರಿಯಾಂ ನಾಮ।
01090042B ತಸ್ಯಾಮಸ್ಯ ಜಜ್ಞೇಽರುಗ್ವಾನ್ನಾಮ।।
01090043A ಅರುಗ್ವಾನ್ಖಲು ಮಾಗಧೀಮುಪಯೇಮೇಽಮೃತಾಂ ನಾಮ।
01090043B ತಸ್ಯಾಮಸ್ಯ ಜಜ್ಞೇ ಪರಿಕ್ಷಿತ್।।
01090044A ಪರಿಕ್ಷಿತ್ಖಲು ಬಾಹುದಾಮುಪಯೇಮೇ ಸುಯಶಾಂ ನಾಮ।
01090044B ತಸ್ಯಾಮಸ್ಯ ಜಜ್ಞೇ ಭೀಮಸೇನಃ।।
01090045A ಭೀಮಸೇನಃ ಖಲು ಕೈಕೇಯೀಮುಪಯೇಮೇ ಸುಕುಮಾರೀಂ ನಾಮ।
01090045B ತಸ್ಯಾಮಸ್ಯ ಜಜ್ಞೇ ಪರ್ಯಶ್ರವಾಃ।
01090045C ಯಮಾಹುಃ ಪ್ರತೀಪಂ ನಾಮ।।
01090046A ಪ್ರತೀಪಃ ಖಲು ಶೈಬ್ಯಾಮುಪಯೇಮೇ ಸುನಂದಾಂ ನಾಮ।
01090046B ತಸ್ಯಾಂ ಪುತ್ರಾನುತ್ಪಾದಯಾಮಾಸ ದೇವಾಪಿಂ ಶಂತನುಂ ಬಾಹ್ಲೀಕಂ ಚೇತಿ।।
01090047A ದೇವಾಪಿಃ ಖಲು ಬಾಲ ಏವಾರಣ್ಯಂ ಪ್ರವಿವೇಶ।
01090047B ಶಂತನುಸ್ತು ಮಹೀಪಾಲೋಽಭವತ್।
01090047C ಅತ್ರಾನುವಂಶೋ ಭವತಿ।।

ಸಂವರಣನು ವಿವಸ್ವತನ ಮಗಳು ತಪತಿಯನ್ನು ವಿವಾಹವಾದನು. ಅವಳಲ್ಲಿ ಕುರುವು ಜನಿಸಿದನು. ಕುರುವು ದಾಶಾರ್ಹಿ ಶುಭಾಂಗಿಯನ್ನು ಮದುವೆಯಾದನು. ಅವಳಲ್ಲಿ ವಿದುರಥನನ್ನು ಪಡೆದನು. ವಿದುರಥನು ಮಾಧವಿ ಸಂಪ್ರಿಯಳನ್ನು ಮದುವೆಯಾಗಿ ಅವಳಲ್ಲಿ ಅರುಗ್ವತನನ್ನು ಪಡೆದನು. ಅರುಗ್ವತನು ಮಗಧ ದೇಶದ ಅಮೃತಾಳನ್ನು ವಿವಾಹವಾದನು. ಅವಳಲ್ಲಿ ಭೀಮಸೇನನು ಜನಿಸಿದನು. ಭೀಮಸೇನನು ಕೇಕಯದ ಸುಕುಮಾರಿಯನ್ನು ಮದುವೆಯಾಗಿ ಅವಳಲ್ಲಿ ಪರ್ಯಶ್ರವಸನನ್ನು ಪಡೆದನು. ಅವನನ್ನು ಪ್ರತೀಪ ಎಂದೂ ಕರೆಯುತ್ತಾರೆ. ಪ್ರತೀಪನು ಶಿಬಿ ದೇಶದ ಸುನಂದಳನ್ನು ವಿವಾಹವಾದನು. ಅವಳಲ್ಲಿ ದೇವಾಪಿ, ಶಂತನು ಮತ್ತು ಬಾಹ್ಲೀಕರನ್ನು ಪಡೆದನು. ದೇವಾಪಿಯು ಬಾಲ್ಯದಲ್ಲಿಯೇ ಅರಣ್ಯವನ್ನು ಸೇರಿದನು. ಶಂತನುವು ರಾಜನಾದನು.

01090048a ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಸ ಸುಖಮಶ್ನುತೇ।
01090048c ಪುನರ್ಯುವಾ ಚ ಭವತಿ ತಸ್ಮಾತ್ತಂ ಶಂತನುಂ ವಿದುಃ।।
01090049A ತದಸ್ಯ ಶಂತನುತ್ವಂ।।

ಇದಕ್ಕೆ ಒಂದು ಶ್ಲೋಕವಿದೆ: “ಅವನು ತನ್ನ ಕೈಯಿಂದ ಮುಟ್ಟಿದ ಪ್ರತಿಯೊಬ್ಬ ವೃದ್ಧನೂ ಸುಖವನ್ನು ಅನುಭವಿಸಿದನು ಮತ್ತು ಪುನಃ ಯುವಕನಾದನು. ಆದುದರಿಂದ ಅವನನ್ನು ಶಂತನು ಎಂದು ಕರೆದರು.”

01090050A ಶಂತನುಃ ಖಲು ಗಂಗಾಂ ಭಾಗೀರಥೀಮುಪಯೇಮೇ।
01090050B ತಸ್ಯಾಮಸ್ಯ ಜಜ್ಞೇ ದೇವವ್ರತಃ।
01090050C ಯಮಾಹುಭೀಷ್ಮ ಇತಿ।।
01090051A ಭೀಷ್ಮಃ ಖಲು ಪಿತುಃ ಪ್ರಿಯಚಿಕೀರ್ಷಯಾ ಸತ್ಯವತೀಮುದವಹನ್ಮಾತರಂ।
01090051B ಯಾಮಾಹುರ್ಗಂಧಕಾಲೀತಿ।।
01090052A ತಸ್ಯಾಂ ಕಾನೀನೋ ಗರ್ಭಃ ಪರಾಶರಾದ್ದ್ವೈಪಾಯನಃ।
01090052B ತಸ್ಯಾಮೇವ ಶಂತನೋರ್ದ್ವೌ ಪುತ್ರೌ ಬಭೂವತುಃ।
01090052C ಚಿತ್ರಾಂಗದೋ ವಿಚಿತ್ರವೀರ್ಯಶ್ಚ।।

ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ದನ್ನು ಮಾಡಲೋಸುಗ ಭೀಷ್ಮನು ತಾಯಿ ಸತ್ಯವತಿಯನ್ನು ಕರೆತಂದು ಅವನಿಗೆ ಮದುವೆಮಾಡಿಸಿದನು. ಅವಳನ್ನು ಗಂಧಕಾಲೀ ಎಂದೂ ಕರೆಯುತ್ತಿದ್ದರು. ಅವಳು ಕನ್ಯೆಯಾಗಿರುವಾಗಲೇ ಪರಾಶರನಿಂದ ದ್ವೈಪಾಯನನಿಗೆ ಜನ್ಮವಿತ್ತಿದ್ದಳು. ಅವಳು ಶಂತನುವಿನಿಂದ ಈರ್ವರು ಪುತ್ರರನ್ನು ಪಡೆದಳು: ಚಿತ್ರಾಂಗದ ಮತ್ತು ವಿಚಿತ್ರವೀರ್ಯ.

01090053A ತಯೋರಪ್ರಾಪ್ತಯೌವನ ಏವ ಚಿತ್ರಾಂಗದೋ ಗಂಧರ್ವೇಣ ಹತಃ।
01090053B ವಿಚಿತ್ರವೀರ್ಯಸ್ತು ರಾಜಾ ಸಮಭವತ್।।
01090054A ವಿಚಿತ್ರವೀರ್ಯಃ ಖಲು ಕೌಸಲ್ಯಾತ್ಮಜೇಽಂಬಿಕಾಂಬಾಲಿಕೇ ಕಾಶಿರಾಜದುಹಿತರಾವುಪಯೇಮೇ।।
01090055A ವಿಚಿತ್ರವೀರ್ಯಸ್ತ್ವನಪತ್ಯ ಏವ ವಿದೇಹತ್ವಂ ಪ್ರಾಪ್ತಃ।।
01090056A ತತಃ ಸತ್ಯವತೀ ಚಿಂತಯಾಮಾಸ।
01090056B ದೌಃಷಂತೋ ವಂಶ ಉಚ್ಛಿದ್ಯತೇ ಇತಿ।।
01090057A ಸಾ ದ್ವೈಪಾಯನಮೃಷಿಂ ಚಿಂತಯಾಮಾಸ।।
01090058A ಸ ತಸ್ಯಾಃ ಪುರತಃ ಸ್ಥಿತಃ ಕಿಂ ಕರವಾಣೀತಿ।।
01090059A ಸಾ ತಮುವಾಚ।
01090059B ಭ್ರಾತಾ ತವಾನಪತ್ಯ ಏವ ಸ್ವರ್ಯಾತೋ ವಿಚಿತ್ರವೀರ್ಯಃ।
01090059C ಸಾಧ್ವಪತ್ಯಂ ತಸ್ಯೋತ್ಪಾದಯೇತಿ।।
01090060A ಸ ಪರಮಿತ್ಯುಕ್ತ್ವಾ ತ್ರೀನ್ಪುತ್ರಾನುತ್ಪಾದಯಾಮಾಸ ಧೃತರಾಷ್ಟ್ರಂ ಪಾಂಡುಂ ವಿದುರಂ ಚೇತಿ।।

ಅವರಲ್ಲಿ ಚಿತ್ರಾಂಗದನು ಯೌವನ ಪ್ರಾಪ್ತಿಯಾಗುವುದರೊಳಗೇ ಗಂಧರ್ವನೋರ್ವನಿಂದ ಹತನಾದನು. ನಂತರ ವಿಚಿತ್ರವೀರ್ಯನು ರಾಜನಾದನು. ವಿಚಿತ್ರವೀರ್ಯನು ಕಾಶಿರಾಜ ಮತ್ತು ಅವನ ಪತ್ನಿ ಕೌಶಲ್ಯಳ ಪುತ್ರಿಯರೀರ್ವರನ್ನು ವಿವಾಹವಾದನು: ಅಂಬಿಕಾ ಮತ್ತು ಅಂಬಾಲಿಕಾ. ವಿಚಿತ್ರವೀರ್ಯನು ಮಕ್ಕಳಿಲ್ಲದೆಯೇ ತೀರಿಕೊಂಡನು. ದೌಃಷಂತನ ಈ ವಂಶಾವಳಿಯು ನಿಂತುಹೋಗುತ್ತದೆಯೋ ಎಂದು ಸತ್ಯವತಿಯು ಚಿಂತಿಸತೊಡಗಿದಳು. ಅವಳು ಋಷಿ ದ್ವೈಪಾಯನನನ್ನು ನೆನಪಿಸಿಕೊಂಡಳು. ಅವನು ಅವಳ ಎದಿರು ಬಂದು “ಏನು ಮಾಡಲಿ?” ಎಂದನು. “ನಿನ್ನ ತಮ್ಮ ವಿಚಿತ್ರವೀರ್ಯನು ಮಕ್ಕಳಿಲ್ಲದೆಯೇ ತೀರಿಕೊಂಡಿದ್ದಾನೆ. ಅವನ ಪತ್ನಿಯರಲ್ಲಿ ಅವನ ಮಕ್ಕಳ ತಂದೆಯಾಗು!”. “ಹಾಗೆಯೇ ಆಗಲಿ!” ಎಂದು ಅವನು ಮೂವರು ಮಕ್ಕಳ ತಂದೆಯಾದನು: ಧೃತರಾಷ್ಟ್ರ, ಪಾಂಡು ಮತ್ತು ವಿದುರ.

01090061A ತತ್ರ ಧೃತರಾಷ್ಟ್ರಸ್ಯ ರಾಜ್ಞಃ ಪುತ್ರಶತಂ ಬಭೂವ ಗಾಂಧಾರ್ಯಾಂ ವರದಾನಾದ್ದ್ವೈಪಾಯನಸ್ಯ।।
01090062A ತೇಷಾಂ ಧೃತರಾಷ್ಟ್ರಸ್ಯ ಪುತ್ರಾಣಾಂ ಚತ್ವಾರಃ ಪ್ರಧಾನಾ ಭೂವುರ್ದುರ್ಯೋಧನೋ ದುಃಶಾಸನೋ ವಿಕರ್ಣಶ್ಚಿತ್ರಸೇನ ಇತಿ।।
01090063A ಪಾಂಡೋಸ್ತು ದ್ವೇ ಭಾರ್ಯೇ ಬಭೂವತುಃ ಕುಂತೀ ಮಾದ್ರೀ ಚೇತ್ಯುಭೇ ಸ್ತ್ರೀರತ್ನೇ।।

ಅವರಲ್ಲಿ ಧೃತರಾಷ್ಟ್ರನು ದ್ವೈಪಾಯನನ ವರದಾನದಿಂದ ಗಾಂಧಾರಿಯಲ್ಲಿ ನೂರು ಪುತ್ರರನ್ನು ಪಡೆದನು. ಧೃತರಾಷ್ಟ್ರನ ಆ ಪುತ್ರರಲ್ಲಿ ನಾಲ್ವರು ಪ್ರಧಾನರಾಗಿದ್ದರು: ದುರ್ಯೋಧನ, ದುಃಶಾಶನ, ವಿಕರ್ಣ ಮತ್ತು ಚಿತ್ರಸೇನ. ಪಾಡುವಿಗೆ ಇಬ್ಬರು ಪತ್ನಿಯರಿದ್ದರು: ಸ್ತ್ರೀ ರತ್ನರಾದ ಕುಂತೀ ಮತ್ತು ಮಾದ್ರೀ.

01090064A ಅಥ ಪಾಂಡುರ್ಮೃಗಯಾಂ ಚರನ್ಮೈಥುನಗತಂ ಋಷಿಮಪಶ್ಯನ್ಮೃಗ್ಯಾಂ ವರ್ತಮಾನಂ।
01090064B ತಥೈವಾಪ್ಲುತಮನಾಸಾದಿತಕಾಮರಸಮತೃಪ್ತಂ ಬಾಣೇನಾಭಿಜಘಾನ।।
01090065A ಸ ಬಾಣವಿದ್ಧ ಉವಾಚ ಪಾಂಡುಂ।
01090065B ಚರತಾ ಧರ್ಮಮಿಮಂ ಯೇನ ತ್ವಯಾಭಿಜ್ಞೇನ ಕಾಮರಸಸ್ಯಾಹಮನವಾಪ್ತಕಾಮರಸೋಽಭಿಹತಸ್ತಸ್ಮಾತ್ತ್ವಮ ಪ್ಯೇತಾಮವಸ್ಥಾಮಾಸಾದ್ಯಾನವಾಪ್ತಕಾಮರಸಃ ಪಂಚತ್ವಮಾಪ್ಸ್ಯಸಿ ಕ್ಷಿಪ್ರಮೇವೇತಿ।।

ಒಮ್ಮೆ ಪಾಂಡುವು ಮೃಗಬೇಟೆಗೆಂದು ಹೋದಾಗ ಅಲ್ಲಿ ಜಿಂಕೆಗಳ ರೂಪದಲ್ಲಿ ಸಂಭೋಗಮಾಡುತ್ತಿದ್ದ ಋಷಿಗಳನ್ನು ಕಂಡನು. ಗಂಡು ಜಿಂಕೆಯು ಹೆಣ್ಣು ಜಿಂಕೆಯ ಮೇಲೆ ಹಾರಿ ತನ್ನ ಕಾಮ ಸುಖವನ್ನು ತೀರಿಸಿಕೊಳ್ಳುತ್ತಿರುವಾಗಲೇ ಅವನು ಬಾಣವನ್ನು ಬಿಟ್ಟನು. ಬಾಣದಿಂದ ಗಾಯಗೊಂಡ ಅವನು ಪಾಂಡುವಿಗೆ ಹೇಳಿದನು: “ಧರ್ಮದಲ್ಲಿ ನಡೆಯುತ್ತಿದ್ದ ಕಾಮರಸವನ್ನು ಅರಿತಿದ್ದವನಾದ ನೀನು ನಾನು ಕಾಮರಸವನ್ನು ಹೊಂದಿ ತೃಪ್ತನಾಗುವುದರೊಳಗೇ ನನ್ನನ್ನು ಹೊಡೆದ ಕಾರಣ ನೀನೂ ಕೂಡ ನನ್ನ ಪರಿಸ್ಠಿತಿಯಲ್ಲಿರುವಾಗ ತಕ್ಷಣವೇ ಕಾಮರಸವನ್ನು ಹೊಂದುವುದರೊಳಗೇ ಪಂಚಭೂತಗಳ ವಶನಾಗುತ್ತೀಯೆ!”

01090066A ಸ ವಿವರ್ಣರೂಪಃ ಪಾಂಡುಃ ಶಾಪಂ ಪರಿಹರಮಾಣೋ ನೋಪಾಸರ್ಪತ ಭಾರ್ಯೇ।।
01090067A ವಾಕ್ಯಂ ಚೋವಾಚ।
01090067B ಸ್ವಚಾಪಲ್ಯಾದಿದಂ ಪ್ರಾಪ್ತವಾನಹಂ।
01090067C ಶೃಣೋಮಿ ಚ ನಾನಪತ್ಯಸ್ಯ ಲೋಕಾ ಸಂತೀತಿ।।

ವಿವರ್ಣರೂಪಿ ಪಾಂಡುವು ಶಾಪ ಪರಿಹಾರಾರ್ಥವಾಗಿ ತನ್ನ ಪತ್ನಿಯರನ್ನು ಕೂಡಲಿಲ್ಲ. ಅವನು ಹೇಳಿದನು: “ನನ್ನ ಚಾಪಲ್ಯದಿಂದಲೇ ಇದನ್ನು ಪಡೆದಿದ್ದೇನೆ. ಮತ್ತು ಮಕ್ಕಳಿಲ್ಲದವನಿಗೆ ಯಾವ ಲೋಕವೂ ದೊರೆಯುವುದಿಲ್ಲ ಎಂದು ಕೇಳಿದ್ದೇನೆ.

01090068A ಸಾ ತ್ವಂ ಮದರ್ಥೇ ಪುತ್ರಾನುತ್ಪಾದಯೇತಿ ಕುಂತೀಮುವಾಚ।।
01090069A ಸಾ ತತ್ರ ಪುತ್ರಾನುತ್ಪಾದಯಾಮಾಸ ಧರ್ಮಾದ್ಯುದಿಷ್ಠಿರಂ ಮಾರುತಾದ್ ಭೀಮಸೇನಂ ಶಕ್ರಾದರ್ಜುನಮಿತಿ।।
01090070A ಸ ತಾಂ ಹೃಷ್ಟರೂಪಃ ಪಾಂಡುರುವಾಚ।
01090070B ಇಯಂ ತೇ ಸಪತ್ನ್ಯನಪತ್ಯಾ।
01090070C ಸಾಧ್ವಸ್ಯಾಮಪತ್ಯಮುತ್ಪಾದ್ಯತಾಮಿತಿ।।
01090071A ಸ ಏವಮಸ್ತ್ವಿತ್ಯುಕ್ತಃ ಕುಂತ್ಯಾ।।
01090072A ತತೋ ಮಾದ್ರ್ಯಾಮಶ್ವಿಭ್ಯಾಂ ನಕುಲಸಹದೇವಾವುತ್ಪಾದಿತೌ।।

ನನಗೋಸ್ಕರ ಮಕ್ಕಳನ್ನು ಪಡೆ!””ಎಂದು ಅವನು ಕುಂತಿಗೆ ಹೇಳಿದನು. ಆಗ ಅವಳು ಅಲ್ಲಿ ಪುತ್ರರನ್ನು ಪಡೆದಳು: ಧರ್ಮನಿಂದ ಯುಧಿಷ್ಠಿರ, ವಾಯುವಿನಿಂದ ಭೀಮಸೇನ, ಮತ್ತು ಶಕ್ರನಿಂದ ಅರ್ಜುನ. ಸಂತೋಷಗೊಂಡ ಪಾಂಡುವು ಹೇಳಿದನು: “ನಿನ್ನ ಸಪತ್ನಿಗೆ ಮಕ್ಕಳಿಲ್ಲ. ಆ ಸಾಧ್ವಿಯಲ್ಲಿಯೂ ಮಕ್ಕಳಾಗಲಿ!” “ಹಾಗೆಯೇ ಆಗಲಿ!” ಎಂದು ಕುಂತಿಯು ಹೇಳಿದಳು. ನಂತರ ಮಾದ್ರಿಯಲ್ಲಿ ಅಶ್ವಿನಿಯರಿಂದ ನಕುಲ-ಸಹದೇವರು ಹುಟ್ಟಿದರು.

01090073A ಮಾದ್ರೀಂ ಖಲ್ವಲಂಕೃತಾಂ ದೃಷ್ಟ್ವಾ ಪಾಂಡುರ್ಭಾವಂ ಚಕ್ರೇ।।
01090074A ಸ ತಾಂ ಸ್ಪೃಷ್ಟ್ವೈವ ವಿದೇಹತ್ವಂ ಪ್ರಾಪ್ತಃ।।
01090075A ತತ್ರೈನಂ ಚಿತಾಸ್ಥಂ ಮಾದ್ರೀ ಸಮನ್ವಾರುರೋಹ।।
01090076A ಉವಾಚ ಕುಂತೀಂ।
01090076B ಯಮಯೋರಾರ್ಯಯಾಪ್ರಮತ್ತಯಾ ಭವಿತವ್ಯಮಿತಿ।।

ಒಳ್ಳೆ ಅಲಂಕೃತಳಾದ ಮಾದ್ರಿಯನ್ನು ನೋಡಿದ ಪಾಂಡುವು ಭಾವುಕನಾಗಿ ಅವಳನ್ನು ಮುಟ್ಟುತ್ತಿದ್ದಂತೆಯೇ ವಿದೇಹತ್ವವನ್ನು ಹೊಂದಿದನು. ಮಾದ್ರಿಯು ಅವನ ಚಿತೆಯನ್ನೇರಿದಳು. ಅವಳು ಕುಂತಿಗೆ ಹೇಳಿದಳು: “ಆರ್ಯೆಯಾದ ನೀನು ಈ ಅವಳಿ ಮಕ್ಕಳನ್ನು ಸರಿಯಾಗಿ ನೋಡಿಕೋ!”

01090077A ತತಸ್ತೇ ಪಂಚ ಪಾಂಡವಾಃ ಕುಂತ್ಯಾ ಸಹಿತಾ ಹಾಸ್ತಿನಪುರಮಾನೀಯ ತಾಪಸೈರ್ಭೀಷ್ಮಸ್ಯ ವಿದುರಸ್ಯ ಚ ನಿವೇದಿತಾಃ।।
01090078A ತತ್ರಾಪಿ ಜತುಗೃಹೇ ದಗ್ಧುಂ ಸಮಾರಬ್ಧಾ ನ ಶಕಿತಾ ದುರಮಂತ್ರಿತೇನ।।
01090079A ತತಶ್ಚ ಹಿಡಿಂಬಮಂತರಾ ಹತ್ವಾ ಏಕಚಕ್ರಾಂ ಗತಾಃ।।

ನಂತರ ತಾಪಸಿಗಳು ಕುಂತಿಯ ಸಹಿತ ಪಂಚಪಾಂಡವರನ್ನು ಹಸ್ತಿನಾಪುರಕ್ಕೆ ಕರೆತಂದು ಭೀಷ್ಮ ಮತ್ತು ವಿದುರರಿಗೆ ಒಪ್ಪಿಸಿದರು. ಅವರು ಅರಗಿನಮನೆಯಲ್ಲಿ ಸುಟ್ಟು ಹೋಗುತ್ತಾರೆಂದಿದ್ದಾಗ ವಿದುರನ ಸೂಚನೆಯಿಂದ ಹಾಗೆ ಆಗಲಿಲ್ಲ. ನಂತರ ಹಿಡಿಂಬನನ್ನು ಸಂಹರಿಸಿ ಏಕಚಕ್ರಕ್ಕೆ ಹೋದರು.

01090080A ತಸ್ಯಾಮಪ್ಯೇಕಚಕ್ರಾಯಾಂ ಬಕಂ ನಾಮ ರಾಕ್ಷಸಂ ಹತ್ವಾ ಪಾಂಚಾಲನಗರಮಭಿಗತಾಃ।।
01090081A ತಸ್ಮಾದ್ದ್ರೌಪದೀಂ ಭಾರ್ಯಾಮವಿಂದನ್ಸ್ವವಿಷಯಂ ಚಾಜಗ್ಮುಃ ಕುಶಲಿನಃ।।

ಏಕಚಕ್ರದಲ್ಲಿ ಬಕ ಎನ್ನುವ ರಾಕ್ಷಸನನ್ನು ಕೊಂದು ಅಲ್ಲಿಂದ ಪಾಂಚಾಲನಗರಿಗೆ ಬಂದರು. ಅಲ್ಲಿ ದ್ರೌಪದಿಯನ್ನು ಭಾರ್ಯೆಯನ್ನಾಗಿ ಗೆದ್ದು ಕುಶಲರಾಗಿ ತಮ್ಮ ನಗರಿಗೆ ಹಿಂದಿರುಗಿದರು.

01090082A ಪುತ್ರಾಂಶ್ಚೋತ್ಪಾದಯಾಮಾಸುಃ।
01090082B ಪ್ರತಿವಿಂಧ್ಯಂ ಯುದಿಷ್ಠಿರಃ।
01090082C ಸುತಸೋಮಂ ವೃಕೋದರಃ।
01090082d ಶ್ರುತಕೀರ್ತಿಮರ್ಜುನಃ।
01090082E ಶತಾನೀಕಂ ನಕುಲಃ।
01090082F ಶ್ರುತಕರ್ಮಾಣಂ ಸಹದೇವ ಇತಿ।।

ಅವಳಲ್ಲಿ ಪುತ್ರರಾದರು: ಯುಧಿಷ್ಠಿರನಿಂದ ಪ್ರತಿವಿಂಧ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನೀಕ, ಮತ್ತು ಸಹದೇವನಿಂದ ಶ್ರುತಕರ್ಮ.

01090083A ಯುಧಿಷ್ಠಿರಸ್ತು ಗೋವಾಸನಸ್ಯ ಶೈಬ್ಯಸ್ಯ ದೇವಿಕಾಂ ನಾಮ ಕನ್ಯಾಂ ಸ್ವಯಂವರೇ ಲೇಭೇ।
01090083B ತಸ್ಯಾಂ ಪುತ್ರಂ ಜನಯಾಮಾಸ ಯೌಧೇಯಂ ನಾಮ।।

ಯುಧಿಷ್ಠಿರನು ಶೈಬ್ಯ ಗೋವಾಸನನ ದೇವಕಿ ಎಂಬ ಹೆಸರಿನ ಕನ್ಯೆಯನ್ನು ಸ್ವಯಂವರದಲ್ಲಿ ಗೆದ್ದನು. ಅವಳಲ್ಲಿ ಯೌಧೇಯ ಎಂಬ ಹೆಸರಿನ ಪುತ್ರನನ್ನು ಪಡೆದನು.

01090084A ಭೀಮಸೇನೋಽಪಿ ಕಾಶ್ಯಾಂ ಬಲಧರಾಂ ನಾಮೋಪಯೇಮೇ ವೀರ್ಯಶುಲ್ಕಾಂ।
01090084B ತಸ್ಯಾಂ ಪುತ್ರಂ ಸರ್ವಗಂ ನಾಮೋತ್ಪಾದಯಾಮಾಸ।।

ಭೀಮಸೇನನು ಕಾಶಿಯ ಬಲಧರಾ ಎಂಬ ಹೆಸರಿನವಳನ್ನು ವೀರ್ಯಶುಲ್ಕವಾಗಿ ಪಡೆದು ಮದುವೆಯಾದನು. ಅವಳಲ್ಲಿ ಸರ್ವಗ ಎಂಬ ಹೆಸರಿನ ಪುತ್ರನನ್ನು ಪಡೆದನು.

01090085A ಅರ್ಜುನಃ ಖಲು ದ್ವಾರವತೀಂ ಗತ್ವಾ ಭಗಿನೀಂ ವಾಸುದೇವಸ್ಯ ಸುಭದ್ರಾಂ ನಾಮ ಭಾರ್ಯಾಮುದವಹತ್।
01090085B ತಸ್ಯಾಂ ಪುತ್ರಮಭಿಮನ್ಯುಂ ನಾಮ ಜನಯಾಮಾಸ।।

ಅರ್ಜುನನು ದ್ವಾರವತಿಗೆ ಹೋಗಿ ವಾಸುದೇವನ ಭಗಿನಿ ಸುಭದ್ರೆಯನ್ನು ವಿವಾಹವಾದನು. ಅವಳಲ್ಲಿ ಅಭಿಮನ್ಯು ಎನ್ನುವ ಪುತ್ರನನ್ನು ಪಡೆದನು.

01090086A ನಕುಲಸ್ತು ಚೈದ್ಯಾಂ ಕರೇಣುವತೀಂ ನಾಮ ಭಾರ್ಯಾಮುದವಹತ್।
01090086B ತಸ್ಯಾಂ ಪುತ್ರಂ ನಿರಮಿತ್ರಂ ನಾಮಾಜನಯತ್।।

ನಕುಲನು ಚೈದ್ಯದೇಶದ ಕರೇಣುವತಿ ಎನ್ನುವವಳನ್ನು ಮದುವೆಯಾದನು. ಅವಳಲ್ಲಿ ನಿರಮಿತ್ರ ಎನ್ನುವ ಮಗನನ್ನು ಪಡೆದನು.

01090087A ಸಹದೇವೋಽಪಿ ಮಾದ್ರೀಮೇವ ಸ್ವಯಂವರೇ ವಿಜಯಾಂ ನಾಮೋಪಯೇಮೇ।
01090087B ತಸ್ಯಾಂ ಪುತ್ರಮಜನಯತ್ಸುಹೋತ್ರಂ ನಾಮ।।

ಸಹದೇವನು ಮಾದ್ರಿ ವಿಜಯಳನ್ನು ಸ್ವಯಂವರದಲ್ಲಿ ಗೆದ್ದು ಮದುವೆಯಾದನು. ಅವಳಲ್ಲಿ ಸುಹೋತ್ರ ಎನ್ನುವ ಪುತ್ರನನ್ನು ಪಡೆದನು.

01090088A ಭೀಮಸೇನಸ್ತು ಪೂರ್ವಮೇವ ಹಿಡಿಂಬಾಯಾಂ ರಾಕ್ಷಸ್ಯಾಂ ಘಟೋತ್ಕಚಂ ನಾಮ ಪುತ್ರಂ ಜನಯಾಮಾಸ।।
01090089A ಇತ್ಯೇತೇ ಏಕಾದಶ ಪಾಂಡವಾನಾಂ ಪುತ್ರಾಃ।।

ಭಿಮಸೇನನು ಮೊದಲೇ ರಾಕ್ಷಸಿ ಹಿಡಿಂಬಿಯಲ್ಲಿ ಘಟೋತ್ಕಚ ಎಂಬ ಪುತ್ರನನ್ನು ಪಡೆದಿದ್ದನು. ಇವರೆಲ್ಲರೂ ಪಾಂಡವರ ಹನ್ನೊಂದು ಪುತ್ರರು.

01090090A ವಿರಾಟಸ್ಯ ದುಹಿತರಮುತ್ತರಾಂ ನಾಮಾಭಿಮನ್ಯುರುಪಯೇಮೇ।
01090090B ತಸ್ಯಾಮಸ್ಯ ಪರಾಸುರ್ಗರ್ಭೋಽಜಾಯತ।।
01090091A ತಮುತ್ಸಂಗೇನ ಪ್ರತಿಜಗ್ರಾಹ ಪೃಥಾ ನಿಯೋಗಾತ್ ಪುರುಷೋತ್ತಮಸ್ಯ ವಾಸುದೇವಸ್ಯ।
01090091B ಷಾಣ್ಮಾಸಿಕಂ ಗರ್ಭಮಹಮೇನಂ ಜೀವಯಿಷ್ಯಾಮೀತಿ।।
01090092A ಸಂಜೀವಯಿತ್ವಾ ಚೈನಮುವಾಚ।
01090092B ಪರಿಕ್ಷೀಣೇ ಕುಲೇ ಜಾತೋ ಭವತ್ವಯಂ ಪರಿಕ್ಷಿನ್ನಾಮೇತಿ।।

ಅಭಿಮನ್ಯುವು ವಿರಾಟನ ಮಗಳು ಉತ್ತರೆಯನ್ನು ವಿವಾಹವಾದನು. ಅವಳಲ್ಲಿ ಅವನು ಸತ್ತಿದ್ದ ಮಗನನ್ನು ಪಡೆದನು. ಪುರುಷೋತ್ತಮ ವಾಸುದೇವನು “ಈ ಆರುತಿಂಗಳ ಗರ್ಭವನ್ನು ನಾನು ಬದುಕಿಸುತ್ತೇನೆ ಪೃಥಾಳು ಅವನನ್ನು ತನ್ನ ಬಾಹುಗಳಲ್ಲಿ ತೆಗೆದುಕೊಳ್ಳಲಿ!” ಎಂದು ಹೇಳಿದನು. ಅವನನ್ನು ಬದುಕಿಸಿ ಹೇಳಿದನು: “ಪರಿಕ್ಷೀಣವಾಗುತ್ತಿದ್ದ ಕುಲದಲ್ಲಿ ಹುಟ್ಟಿದುದರಿಂದ ಇವನು ಪರಿಕ್ಷಿತನೆಂದಾಗಲಿ!””ಎಂದನು.

01090093A ಪರಿಕ್ಷಿತ್ತು ಖಲು ಮಾದ್ರವತೀಂ ನಾಮೋಪಯೇಮೇ।
01090093B ತಸ್ಯಾಮಸ್ಯ ಜನಮೇಜಯಃ।।
01090094A ಜನಮೇಜಯಾತ್ತು ವಪುಷ್ಟಮಾಯಾಂ ದ್ವೌ ಪುತ್ರೌ ಶತಾನೀಕಃ ಶಂಕುಶ್ಚ।।
01090095A ಶತಾನೀಕಸ್ತು ಖಲು ವೈದೇಹೀಮುಪಯೇಮೇ।
01090095B ತಸ್ಯಾಮಸ್ಯ ಜಜ್ಞೇ ಪುತ್ರೋಽಶ್ವಮೇಧದತ್ತಃ।।

ಪರಿಕ್ಷಿತನು ಮಾದ್ರವತಿ ಎನ್ನುವವಳನ್ನು ವಿವಾಹವಾದನು. ಅವಳಲ್ಲಿ ಜನಮೇಜಯನನ್ನು ಪಡೆದನು. ಜನಮೇಜಯನಿಗೆ ವಪುಷ್ಟಮೆಯಲ್ಲಿ ಈರ್ವರು ಪುತ್ರರು ಜನಿಸಿದರು: ಶತಾನೀಕ ಮತ್ತು ಶಂಕು. ಶತಾನೀಕನು ವೈದೇಹಿಯನ್ನು ಮದುವೆಯಾದನು. ಅವಳಲ್ಲಿ ಪುತ್ರ ಅಶ್ವಮೇಧದತ್ತನು ಜನಿಸಿದನು.

01090096a ಇತ್ಯೇಷ ಪೂರೋರ್ವಂಶಸ್ತು ಪಾಂಡವಾನಾಂ ಚ ಕೀರ್ತಿತಃ।
01090096c ಪೂರೋರ್ವಂಶಮಿಮಂ ಶ್ರುತ್ವಾ ಸರ್ವಪಾಪೈಃ ಪ್ರಮುಚ್ಯತೇ।।

ಈ ರೀತಿ ಪುರುವಂಶ ಮತ್ತು ಪಾಂಡವ ವಂಶಗಳ ಕೀರ್ತನೆಯಿದೆ. ಈ ಪುರುವಂಶಾವಳಿಯನ್ನು ಕೇಳಿದವರು ಸರ್ವಪಾಪಗಳಿಂದಲೂ ವಿಮುಕ್ತರಾಗುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪುರೂವಂಶಾನುಕೀರ್ತನೇ ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪುರುವಂಶಾನುಕೀರ್ತನದಲ್ಲಿ ತೊಂಭತ್ತನೆಯ ಅಧ್ಯಾಯವು.