085 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 85

ಸಾರ

ಅಷ್ಟಕ ಮತ್ತು ಯಯಾತಿಯರ ಸಂವಾದ (1-27)

01085001 ಅಷ್ಟಕ ಉವಾಚ।
01085001a ಯದಾವಸೋ ನಂದನೇ ಕಾಮರೂಪೀ ಸಂವತ್ಸರಾಣಾಮಯುತಂ ಶತಾನಾಂ।
01085001c ಕಿಂ ಕಾರಣಂ ಕಾರ್ತಯುಗಪ್ರಧಾನ ಹಿತ್ವಾ ತತ್ತ್ವಂ ವಸುಧಾಮನ್ವಪದ್ಯಃ।।

ಅಷ್ಟಕನು ಹೇಳಿದನು: “ಕೃತಯುಗಪ್ರಧಾನ! ಕಾಮರೂಪಿಯಾಗಿ ನಂದನವನದಲ್ಲಿ ಅನೇಕ ಲಕ್ಷವರ್ಷಗಳ ಕಾಲ ವಾಸಿಸುತ್ತಿದ್ದ ನೀನು ಯಾವ ಕಾರಣಕ್ಕಾಗಿ ಅಲ್ಲಿಂದ ತೊಗಲಿ ಭೂಮಿಯ ಮೇಲೆ ಬಿದ್ದೆ?”

01085002 ಯಯಾತಿರುವಾಚ।
01085002a ಜ್ಞಾತಿಃ ಸುಹೃತ್ಸ್ವಜನೋ ಯೋ ಯಥೇಹ ಕ್ಷೀಣೇ ವಿತ್ತೇ ತ್ಯಜ್ಯತೇ ಮಾನವೈರ್ಹಿ।
01085002c ತಥಾ ತತ್ರ ಕ್ಷೀಣಪುಣ್ಯಂ ಮನುಷ್ಯಂ ತ್ಯಜಂತಿ ಸದ್ಯಃ ಸೇಶ್ವರಾ ದೇವಸಂಘಾಃ।।

ಯಯಾತಿಯು ಹೇಳಿದನು: “ಮಾನವ ಲೋಕದಲ್ಲಿ ಐಶ್ವರ್ಯವನ್ನು ಕಳೆದುಕೊಂಡವನನ್ನು ಬಂಧುಗಳು ಮತ್ತು ಸ್ನೇಹಿತರು ಹೇಗೆ ತ್ಯಜಿಸುತ್ತಾರೋ ಹಾಗೆ ಪುಣ್ಯವನ್ನು ಕಳೆದುಕೊಂಡ ಮನುಷ್ಯನನ್ನು ಈಶ್ವರನೊಂದಿಗೆ ದೇವಸಂಘಗಳೂ ಕೂಡ ಪರಿತ್ಯಜಿಸುತ್ತಾರೆ.”

01085003 ಅಷ್ಟಕ ಉವಾಚ।
01085003a ಕಥಂ ತಸ್ಮಿನ್ ಕ್ಷೀಣಪುಣ್ಯಾ ಭವಂತಿ ಸಮ್ಮುಹ್ಯತೇ ಮೇಽತ್ರ ಮನೋಽತಿಮಾತ್ರಂ।
01085003c ಕಿಂವಿಶಿಷ್ಟಾಃ ಕಸ್ಯ ಧಾಮೋಪಯಾಂತಿ ತದ್ವೈ ಬ್ರೂಹಿ ಕ್ಷೇತ್ರವಿತ್ತ್ವಂ ಮತೋ ಮೇ।।

ಅಷ್ಟಕನು ಹೇಳಿದನು: “ಅಲ್ಲಿ ಮನುಷ್ಯನ ಪುಣ್ಯವು ಹೇಗೆ ಕ್ಷೀಣವಾಗುತ್ತದೆ? ಈ ವಿಷಯದಲ್ಲಿ ನನಗೆ ಅತಿದೊಡ್ಡ ಸಂಶಯವುಂಟಾಗಿದೆ. ವಿಶಿಷ್ಟರಾದವರು ಯಾವ ಕರ್ಮಗಳನ್ನು ಮಾಡಿ ಯಾವ ಲೋಕಗಳನ್ನು ಪಡೆಯುತ್ತಾರೆ? ಅದನ್ನು ಹೇಳು. ನೀನೊಬ್ಬ ಆತ್ಮಜ್ಞಾನಿಯೆಂದು ನನಗನ್ನಿಸುತ್ತದೆ.”

01085004 ಯಯಾತಿರುವಾಚ।
01085004a ಇಮಂ ಭೌಮಂ ನರಕಂ ತೇ ಪತಂತಿ ಲಾಲಪ್ಯಮಾನಾ ನರದೇವ ಸರ್ವೇ।
01085004c ತೇ ಕಂಕಗೋಮಾಯುಬಲಾಶನಾರ್ಥಂ ಕ್ಷೀಣಾ ವಿವೃದ್ಧಿಂ ಬಹುಧಾ ವ್ರಜಂತಿ।।

ಯಯಾತಿಯು ಹೇಳಿದನು: “ನರದೇವ! ನಾನು-ನನ್ನದು ಎಂದು ಕೊಚ್ಚಿಕೊಳ್ಳುವವರು ಎಲ್ಲರೂ ಭೌಮವೆಂಬ ಈ ನರಕದಲ್ಲಿ ಬೀಳುತ್ತಾರೆ. ಅವರು ರಣಹದ್ದು-ನರಿ-ಕಾಗೆಗಳಿಗೆ ಆಹಾರವಾಗಿ ಅನೇಕವಿಧದ ದೇಹಗಳನ್ನು ಧರಿಸುತ್ತಲೇ ಇರುತ್ತಾರೆ.

01085005a ತಸ್ಮಾದೇತದ್ವರ್ಜನೀಯಂ ನರೇಣ ದುಷ್ಟಂ ಲೋಕೇ ಗರ್ಹಣೀಯಂ ಚ ಕರ್ಮ।
01085005c ಆಖ್ಯಾತಂ ತೇ ಪಾರ್ಥಿವ ಸರ್ವಮೇತದ್ ಭೂಯಶ್ಚೇದಾನೀಂ ವದ ಕಿಂ ತೇ ವದಾಮಿ।।

ಆದುದರಿಂದ ನರರು ಲೋಕದಲ್ಲಿ ದುಷ್ಟ-ನಿಂದ್ಯಕರ್ಮಗಳನ್ನು ತ್ಯಜಿಸಬೇಕು. ಪಾರ್ಥಿವ! ಇದರ ಕುರಿತು ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನೂ ಹೇಳುವುದಿದ್ದರೆ ಕೇಳು. ಹೇಳುತ್ತೇನೆ.”

01085006 ಅಷ್ಟಕ ಉವಾಚ।
01085006a ಯದಾ ತು ತಾನ್ವಿತುದಂತೇ ವಯಾಂಸಿ ತಥಾ ಗೃಧ್ರಾಃ ಶಿತಿಕಂಠಾಃ ಪತಂಗಾಃ।
01085006c ಕಥಂ ಭವಂತಿ ಕಥಮಾಭವಂತಿ ನ ಭೌಮಮನ್ಯಂ ನರಕಂ ಶೃಣೋಮಿ।।

ಅಷ್ಟಕನು ಹೇಳಿದನು: “ಶರೀರವನ್ನು ರಣಹದ್ದುಗಳೂ, ನವಿಲುಗಳೂ ಮತ್ತು ಕ್ರಿಮಿಕೀಟಗಳೂ ತಿಂದನಂತರ ಅವನು ಎಲ್ಲಿರುತ್ತಾನೆ ಮತ್ತು ಹೇಗಿರುತ್ತಾನೆ? ಭೌಮವೆಂಬ ಬೇರೊಂದು ನರಕವನ್ನು ನಾನು ಕೇಳಿಲ್ಲ!”

01085007 ಯಯಾತಿರುವಾಚ।
01085007a ಊರ್ಧ್ವಂ ದೇಹಾತ್ಕರ್ಮಣೋ ಜೃಂಭಮಾಣಾದ್ ವ್ಯಕ್ತಂ ಪೃಥಿವ್ಯಾಮನುಸಂಚರಂತಿ।
01085007c ಇಮಂ ಭೌಮಂ ನರಕಂ ತೇ ಪತಂತಿ ನಾವೇಕ್ಷಂತೇ ವರ್ಷಪೂಗಾನನೇಕಾನ್।।

ಯಯಾತಿಯು ಹೇಳಿದನು: “ದೇಹವನ್ನು ತೊರೆದರೂ ಕರ್ಮಫಲಗಳಿಂದ ಅನುಲಿಪ್ತನಾದ ಜೀವನು ಭೂಮಿಯ ಮೇಲೆಯೇ ಸಂಚರಿಸುತ್ತಿರುತ್ತಾನೆ. ಈ ಭೌಮವೆಂಬ ನರಕದಲ್ಲಿ ಬಿದ್ದು ಅನೇಕಾನೇಕ ವರ್ಷಗಳಾದರೂ ಹಿಂದಿನ ಜನ್ಮಗಳ ಸ್ಮರಣೆಯಿಲ್ಲದೇ ಇರುತ್ತಾನೆ.

01085008a ಷಷ್ಟಿಂ ಸಹಸ್ರಾಣಿ ಪತಂತಿ ವ್ಯೋಮ್ನಿ ತಥಾ ಅಶೀತಿಂ ಪರಿವತ್ಸರಾಣಿ।
01085008c ತಾನ್ವೈ ತುದಂತಿ ಪ್ರಪತತಃ ಪ್ರಪಾತಂ ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ।।

ಅರವತ್ತು ಸಾವಿರ ಅಥವಾ ಎಂಭತ್ತು ಸಾವಿರ ವರ್ಷಗಳ ನಂತರ, ಪುಣ್ಯವು ಕ್ಷೀಣವಾದಾಗ ಅವರು ಆಕಾಶದಿಂದ ಕೆಳಗೆ ಅಂತ್ಯವೇ ಇಲ್ಲದ ತೀಕ್ಷ್ಣ ಹಲ್ಲುಗಳ ರಾಕ್ಷರರಿರುವ ಈ ಭೌಮನರಕದಲ್ಲಿ ಬೀಳುತ್ತಾರೆ.”

01085009 ಅಷ್ಟಕ ಉವಾಚ।
01085009a ಯದೇನಸಸ್ತೇ ಪತತಸ್ತುದಂತಿ ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ।
01085009c ಕಥಂ ಭವಂತಿ ಕಥಮಾಭವಂತಿ ಕಥಂಭೂತಾ ಗರ್ಭಭೂತಾ ಭವಂತಿ।।

ಅಷ್ಟಕನು ಹೇಳಿದನು: “ಯಾವಕಾರಣದಿಂದ ಅವರು ಭಯಂಕರ ಭೌಮರೆಂಬ ರಾಕ್ಷಸರ ತೀಕ್ಷ್ಣ ಕೋರೆದಾಡೆಗಳಿಗೆ ಬೀಳುತ್ತಾರೆ? ಜೀವವು ಹೇಗೆ ಇರುತ್ತದೆ ಮತ್ತು ಇಲ್ಲವಾಗುತ್ತದೆ? ಅದು ಹೇಗೆ ಉಂಟಾಗುತ್ತದೆ? ಅದು ಹೇಗೆ ಗರ್ಭವನ್ನು ಸೇರುತ್ತದೆ?”

01085010 ಯಯಾತಿರುವಾಚ।
01085010a ಅಸ್ರಂ ರೇತಃ ಪುಷ್ಪಫಲಾನುಪೃಕ್ತಂ ಅನ್ವೇತಿ ತದ್ವೈ ಪುರುಷೇಣ ಸೃಷ್ಟಂ।
01085010c ಸ ವೈ ತಸ್ಯಾ ರಜ ಆಪದ್ಯತೇ ವೈ ಸ ಗರ್ಭಭೂತಃ ಸಮುಪೈತಿ ತತ್ರ।।
01085011a ವನಸ್ಪತೀಂಶ್ಚೌಷಧೀಶ್ಚಾವಿಶಂತಿ ಅಪೋ ವಾಯುಂ ಪೃಥಿವೀಂ ಚಾಂತರಿಕ್ಷಂ।
01085011c ಚತುಷ್ಪದಂ ದ್ವಿಪದಂ ಚಾಪಿ ಸರ್ವಂ ಏವಂಭೂತಾ ಗರ್ಭಭೂತಾ ಭವಂತಿ।।

ಯಯಾತಿಯು ಹೇಳಿದನು:

01085012 ಅಷ್ಟಕ ಉವಾಚ।
01085012a ಅನ್ಯದ್ವಪುರ್ವಿದಧಾತೀಹ ಗರ್ಭ ಉತಾಹೋ ಸ್ವಿತ್ಸ್ವೇನ ಕಾಮೇನ ಯಾತಿ।
01085012c ಆಪದ್ಯಮಾನೋ ನರಯೋನಿಮೇತಾಂ ಆಚಕ್ಷ್ವ ಮೇ ಸಂಶಯಾತ್ಪ್ರಬ್ರವೀಮಿ।।
01085013a ಶರೀರದೇಹಾದಿಸಮುಚ್ಛ್ರಯಂ ಚ ಚಕ್ಷುಃಶ್ರೋತ್ರೇ ಲಭತೇ ಕೇನ ಸಂಜ್ಞಾಂ।
01085013c ಏತತ್ತತ್ತ್ವಂ ಸರ್ವಮಾಚಕ್ಷ್ವ ಪೃಷ್ಟಃ ಕ್ಷೇತ್ರಜ್ಞಂ ತ್ವಾಂ ತಾತ ಮನ್ಯಾಮ ಸರ್ವೇ।।
01085014 ಯಯಾತಿರುವಾಚ।
01085014a ವಾಯುಃ ಸಮುತ್ಕರ್ಷತಿ ಗರ್ಭಯೋನಿಂ ಋತೌ ರೇತಃ ಪುಷ್ಪರಸಾನುಪೃಕ್ತಂ।
01085014c ಸ ತತ್ರ ತನ್ಮಾತ್ರಕೃತಾಧಿಕಾರಃ ಕ್ರಮೇಣ ಸಂವರ್ಧಯತೀಹ ಗರ್ಭಂ।।
01085015a ಸ ಜಾಯಮಾನೋ ವಿಗೃಹೀತಗಾತ್ರಃ ಷಡ್ ಜ್ಞಾನನಿಷ್ಠಾಯತನೋ ಮನುಷ್ಯಃ।
01085015c ಸ ಶ್ರೋತ್ರಾಭ್ಯಾಂ ವೇದಯತೀಹ ಶಬ್ದಂ ಸರ್ವಂ ರೂಪಂ ಪಶ್ಯತಿ ಚಕ್ಷುಷಾ ಚ।।
01085016a ಘ್ರಾಣೇನ ಗಂಧಂ ಜಿಹ್ವಯಾಥೋ ರಸಂ ಚ ತ್ವಚಾ ಸ್ಪರ್ಶಂ ಮನಸಾ ವೇದ ಭಾವಂ।
01085016c ಇತ್ಯಷ್ಟಕೇಹೋಪಚಿತಿಂ ಚ ವಿದ್ಧಿ ಮಹಾತ್ಮನಃ ಪ್ರಾಣಭೃತಃ ಶರೀರೇ।।
01085017 ಅಷ್ಟಕ ಉವಾಚ।
01085017a ಯಃ ಸಂಸ್ಥಿತಃ ಪುರುಷೋ ದಹ್ಯತೇ ವಾ ನಿಖನ್ಯತೇ ವಾಪಿ ನಿಘೃಷ್ಯತೇ ವಾ।
01085017c ಅಭಾವಭೂತಃ ಸ ವಿನಾಶಮೇತ್ಯ ಕೇನಾತ್ಮಾನಂ ಚೇತಯತೇ ಪುರಸ್ತಾತ್।।
01085018 ಯಯಾತಿರುವಾಚ।
01085018a ಹಿತ್ವಾ ಸೋಽಸೂನ್ಸುಪ್ತವನ್ನಿಷ್ಟನಿತ್ವಾ ಪುರೋಧಾಯ ಸುಕೃತಂ ದುಷ್ಕೃತಂ ಚ।
01085018c ಅನ್ಯಾಂ ಯೋನಿಂ ಪವನಾಗ್ರಾನುಸಾರೀ ಹಿತ್ವಾ ದೇಹಂ ಭಜತೇ ರಾಜಸಿಂಹ।।
01085019a ಪುಣ್ಯಾಂ ಯೋನಿಂ ಪುಣ್ಯಕೃತೋ ವ್ರಜಂತಿ ಪಾಪಾಂ ಯೋನಿಂ ಪಾಪಕೃತೋ ವ್ರಜಂತಿ।
01085019c ಕೀಟಾಃ ಪತಂಗಾಶ್ಚ ಭವಂತಿ ಪಾಪಾ ನ ಮೇ ವಿವಕ್ಷಾಸ್ತಿ ಮಹಾನುಭಾವ।।
01085020a ಚತುಷ್ಪದಾ ದ್ವಿಪದಾಃ ಷಟ್ಪದಾಶ್ಚ ತಥಾಭೂತಾ ಗರ್ಭಭೂತಾ ಭವಂತಿ।
01085020c ಆಖ್ಯಾತಮೇತನ್ನಿಖಿಲೇನ ಸರ್ವಂ ಭೂಯಸ್ತು ಕಿಂ ಪೃಚ್ಛಸಿ ರಾಜಸಿಂಹ।।
01085021 ಅಷ್ಟಕ ಉವಾಚ।
01085021a ಕಿಂ ಸ್ವಿತ್ಕೃತ್ವಾ ಲಭತೇ ತಾತ ಲೋಕಾನ್ಮರ್ತ್ಯಃ ಶ್ರೇಷ್ಠಾಂಸ್ತಪಸಾ ವಿದ್ಯಯಾ ವಾ।
01085021c ತನ್ಮೇ ಪೃಷ್ಟಃ ಶಂಸ ಸರ್ವಂ ಯಥಾವತ್ ಶುಭಾಽಲ್ಲೋಕಾನ್ಯೇನ ಗಚ್ಛೇತ್ಕ್ರಮೇಣ।।
01085022 ಯಯಾತಿರುವಾಚ।
01085022a ತಪಶ್ಚ ದಾನಂ ಚ ಶಮೋ ದಮಶ್ಚ ಹ್ರೀರಾರ್ಜವಂ ಸರ್ವಭೂತಾನುಕಂಪಾ।
01085022c ನಶ್ಯಂತಿ ಮಾನೇನ ತಮೋಽಭಿಭೂತಾಃ ಪುಂಸಃ ಸದೈವೇತಿ ವದಂತಿ ಸಂತಃ।।
01085023a ಅಧೀಯಾನಃ ಪಂಡಿತಂ ಮನ್ಯಮಾನೋ ಯೋ ವಿದ್ಯಯಾ ಹಂತಿ ಯಶಃ ಪರೇಷಾಂ।
01085023c ತಸ್ಯಾಂತವಂತಶ್ಚ ಭವಂತಿ ಲೋಕಾ ನ ಚಾಸ್ಯ ತದ್ಬ್ರಹ್ಮ ಫಲಂ ದದಾತಿ।।
01085024a ಚತ್ವಾರಿ ಕರ್ಮಾಣ್ಯಭಯಂಕರಾಣಿ ಭಯಂ ಪ್ರಯಚ್ಛಂತ್ಯಯಥಾಕೃತಾನಿ।
01085024c ಮಾನಾಗ್ನಿಹೋತ್ರಮುತ ಮಾನಮೌನಂ ಮಾನೇನಾಧೀತಮುತ ಮಾನಯಜ್ಞಃ।।
01085025a ನ ಮಾನ್ಯಮಾನೋ ಮುದಮಾದದೀತ ನ ಸಂತಾಪಂ ಪ್ರಾಪ್ನುಯಾತ್ ಶಾವಮಾನಾತ್।
01085025c ಸಂತಃ ಸತಃ ಪೂಜಯಂತೀಹ ಲೋಕೇ ನಾಸಾಧವಃ ಸಾಧುಬುದ್ಧಿಂ ಲಭಂತೇ।।
01085026a ಇತಿ ದದ್ಯಾದಿತಿ ಯಜೇದಿತ್ಯಧೀಯೀತ ಮೇ ವ್ರತಂ।
01085026c ಇತ್ಯಸ್ಮಿನ್ನಭಯಾನ್ಯಾಹುಸ್ತಾನಿ ವರ್ಜ್ಯಾನಿ ನಿತ್ಯಶಃ।।
01085027a ಯೇನಾಶ್ರಯಂ ವೇದಯಂತೇ ಪುರಾಣಂ ಮನೀಷಿಣೋ ಮಾನಸಮಾನಭಕ್ತಂ।
01085027c ತನ್ನಿಃಶ್ರೇಯಸ್ತೈಜಸಂ ರೂಪಮೇತ್ಯ ಪರಾಂ ಶಾಂತಿಂ ಪ್ರಾಪ್ನುಯುಃ ಪ್ರೇತ್ಯ ಚೇಹ।।

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಪಂಚಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತೈದನೆಯ ಅಧ್ಯಾಯವು.