ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 84
ಸಾರ
ಯಯಾತಿಯು ತನ್ನ ಪರಿಚಯವನ್ನು, ವಿಧಿಯ ಮೆಲ್ಗೈಯನ್ನು ಹೇಳಿಕೊಳ್ಳುವುದು (1-11). ಅವನು ಅನುಭವಿಸಿದ ಲೋಕಗಳ ಕುರಿತು ಅಷ್ಟಕನ ಪ್ರಶ್ನೆಗೆ ಉತ್ತರಿಸಿದುದು (12-23).
01084001 ಯಯಾತಿರುವಾಚ।
01084001a ಅಹಂ ಯಯಾತಿರ್ನಹುಷಸ್ಯ ಪುತ್ರಃ ಪೂರೋಃ ಪಿತಾ ಸರ್ವಭೂತಾವಮಾನಾತ್।
01084001c ಪ್ರಭ್ರಂಶಿತಃ ಸುರಸಿದ್ಧರ್ಷಿಲೋಕಾತ್ ಪರಿಚ್ಯುತಃ ಪ್ರಪತಾಮ್ಯಲ್ಪಪುಣ್ಯಃ।।
ಯಯಾತಿಯು ಹೇಳಿದನು: “ನಾನು ಯಯಾತಿ. ನಹುಷನ ಪುತ್ರ ಮತ್ತು ಪೂರುವಿನ ಪಿತ. ಸರ್ವಭೂತಗಳನ್ನು ಅವಮಾನಿಸಿದುದರಿಂದ ಸುರ-ಸಿದ್ಧ-ಋಷಿಲೋಕಗಳಿಂದ ಹೊರಗೋಡಿಸಲ್ಪಟ್ಟು, ಪುಣ್ಯವು ಕಡಿಮೆಯಾಗಿ ಕಳಚಿ ಬಿದ್ದಿದ್ದೇನೆ.
01084002a ಅಹಂ ಹಿ ಪೂರ್ವೋ ವಯಸಾ ಭವದ್ಭ್ಯಃ ತೇನಾಭಿವಾದಂ ಭವತಾಂ ನ ಪ್ರಯುಂಜೇ।
01084002c ಯೋ ವಿದ್ಯಯಾ ತಪಸಾ ಜನ್ಮನಾ ವಾ ವೃದ್ಧಃ ಸ ಪೂಜ್ಯೋ ಭವತಿ ದ್ವಿಜಾನಾಂ।।
ವಯಸ್ಸಿನಲ್ಲಿ ನಾನು ನಿಮ್ಮೆಲ್ಲರಿಗಿಂತ ಹಿರಿಯವನಾದುದರಿಂದ ನಾನೇ ನಿಮ್ಮನ್ನು ಮೊದಲು ಅಭಿವಾದಿಸಲಿಲ್ಲ. ವಿದ್ಯೆಯಲ್ಲಿ, ತಪಸ್ಸಿನಲ್ಲಿ ಅಥವಾ ಜನ್ಮದಲ್ಲಿ ವೃದ್ದನಾದವನು ದ್ವಿಜರಿಗೆ ಪೂಜ್ಯನಾಗುತ್ತಾನೆ.”
01084003 ಅಷ್ಟಕ ಉವಾಚ।
01084003a ಅವಾದೀಶ್ಚೇದ್ವಯಸಾ ಯಃ ಸ ವೃದ್ಧ ಇತಿ ರಾಜನ್ನಾಭ್ಯವದಃ ಕಥಂ ಚಿತ್।
01084003c ಯೋ ವೈ ವಿದ್ವಾನ್ವಯಸಾ ಸನ್ಸ್ಮ ವೃದ್ಧಃ ಸ ಏವ ಪೂಜ್ಯೋ ಭವತಿ ದ್ವಿಜಾನಾಂ।।
ಅಷ್ಟಕನು ಹೇಳಿದನು: “ರಾಜನ್! ವಯಸ್ಸಿನಲ್ಲಿ ನಮಗಿಂತ ವೃದ್ಧನಾಗಿದ್ದುದರಿಂದ ನೀನು ನಮ್ಮನ್ನು ಮೊದಲು ಅಭಿವಾದಿಸಲಿಲ್ಲವೆಂದು ಹೇಳಿದೆಯಲ್ಲ! ವಿದ್ಯೆಯಲ್ಲಿ ವಯಸ್ಸಿನಲ್ಲಿ ವೃದ್ಧನಾದವನು ದ್ವಿಜರಿಗೆ ಪೂಜನೀಯನಾಗುತ್ತಾನೆ.”
01084004 ಯಯಾತಿರುವಾಚ।
01084004a ಪ್ರತಿಕೂಲಂ ಕರ್ಮಣಾಂಪಾಪಮಾಹುಃ ತದ್ವರ್ತತೇಽಪ್ರವಣೇ ಪಾಪಲೋಕ್ಯಂ।
01084004c ಸಂತೋಽಸತಾಂ ನಾನುವರ್ತಂತಿ ಚೈತದ್ಯಥಾ ಆತ್ಮೈಷಾಮನುಕೂಲವಾದೀ।।
ಯಯಾತಿಯು ಹೇಳಿದನು: “ಪಾಪವು ಕರ್ಮಗಳನ್ನು ನಾಶಪಡಿಸುತ್ತದೆ ಮತ್ತು ನಿಧಾನವಾಗಿ ಪಾಪಲೋಕಕ್ಕೆ ಒಯ್ಯುತ್ತದೆ ಎಂದು ಹೇಳುತ್ತಾರೆ. ಒಳ್ಳೆಯದು ಎಂದೂ ಕೆಟ್ಟದ್ದನ್ನು ಅನುಸರಿಸುವುದಿಲ್ಲ. ಅದರಿಂದ ಅವರ ಆತ್ಮಗಳು ಅದಕ್ಕೆ ಅನುಕೂಲವಾದುದನ್ನೇ ಹೇಳುತ್ತವೆ.
01084005a ಅಭೂದ್ಧನಂ ಮೇ ವಿಪುಲಂ ಮಹದ್ವೈ ವಿಚೇಷ್ಟಮಾನೋ ನಾಧಿಗಂತಾ ತದಸ್ಮಿ।
01084005c ಏವಂ ಪ್ರಧಾರ್ಯಾತ್ಮಹಿತೇ ನಿವಿಷ್ಟೋ ಯೋ ವರ್ತತೇ ಸ ವಿಜಾನಾತಿ ಜೀವನ್।।
ನನ್ನಲ್ಲಿದ್ದ ಧನವು ವಿಪುಲವೂ ಮಹತ್ತರವೂ ಆಗಿತ್ತು. ಪ್ರಯತ್ನಪಟ್ಟರೂ ಈಗ ಅದನ್ನು ಹಿಂದೆ ಪಡೆಯಲಾಗುತ್ತಿಲ್ಲ. ಹೀಗೆ ಆತ್ಮಹಿತದಲ್ಲಿ ನಿರತನಾಗಿ ಹಾಗೆಯೇ ನಡೆದುಕೊಳ್ಳುವವನು ಬದುಕಿರುವಾಗಲೇ ತಿಳಿದವನಾಗುತ್ತಾನೆ.
01084006a ನಾನಾಭಾವಾ ಬಹವೋ ಜೀವಲೋಕೇ ದೈವಾಧೀನಾ ನಷ್ಟಚೇಷ್ಟಾಧಿಕಾರಾಃ।
01084006c ತತ್ತತ್ಪ್ರಾಪ್ಯ ನ ವಿಹನ್ಯೇತ ಧೀರೋ ದಿಷ್ಟಂ ಬಲೀಯ ಇತಿ ಮತ್ವಾತ್ಮಬುದ್ಧ್ಯಾ।।
ಜೀವಲೋಕದಲ್ಲಿ ಬಹುಜೀವಿಗಳು ದೈವಾಧೀನರಾಗಿದ್ದು ಅಧಿಕಾರದಿಂದಿರುವರೆಂದು ನಷ್ಟವಾಗಿ ನಡೆದುಕೊಳ್ಳುತ್ತಾರೆ. ಏನನ್ನು ಪಡೆದರೂ ಧೀರನು ವಿಚಲಿತನಾಗುವುದಿಲ್ಲ. ವಿಧಿಯೇ ಬಲವಾದುದೆಂದು ಅತ್ಮಬುದ್ಧಿಯು ತಿಳಿದುಕೊಂಡಿರುತ್ತದೆ.
01084007a ಸುಖಂ ಹಿ ಜಂತುರ್ಯದಿ ವಾಪಿ ದುಃಖಂ ದೈವಾಧೀನಂ ವಿಂದತಿ ನಾತ್ಮಶಕ್ತ್ಯಾ।
01084007c ತಸ್ಮಾದ್ದಿಷ್ಟಂ ಬಲವನ್ಮನ್ಯಮಾನೋ ನ ಸಂಜ್ವರೇನ್ನಾಪಿ ಹೃಷ್ಯೇತ್ಕದಾ ಚಿತ್।।
ಜಂತುವು ಸುಖವನ್ನು ಪಡೆಯಲಿ ಅಥವಾ ದುಃಖವನ್ನು ಪಡೆಯಲಿ. ಅದು ದೈವಾಧೀನದಿಂದಲ್ಲದೇ ಆತ್ಮಶಕ್ತಿಯಿಂದಲ್ಲವೆಂಬುದನ್ನು ತಿಳಿದಿರುತ್ತಾರೆ. ಆದುದರಿಂದ ವಿಧಿಯೇ ಬಲವಾದುದೆಂದು ತಿಳಿದು ಅವರು ಎಂದೂ ದುಃಖಿಸುವುದಿಲ್ಲ ಅಥವಾ ಹರ್ಷಿಸುವುದಿಲ್ಲ.
01084008a ದುಃಖೇ ನ ತಪ್ಯೇನ್ನ ಸುಖೇನ ಹೃಷ್ಯೇತ್ ಸಮೇನ ವರ್ತೇತ ಸದೈವ ಧೀರಃ।
01084008c ದಿಷ್ಟಂ ಬಲೀಯ ಇತಿ ಮನ್ಯಮಾನೋ ನ ಸಂಜ್ವರೇನ್ನಾಪಿ ಹೃಷ್ಯೇತ್ಕದಾ ಚಿತ್।।
ದುಃಖದಲ್ಲಿ ತಪಿಸುವುದಿಲ್ಲ; ಸುಖದಲ್ಲಿ ಹರ್ಷಿಸುವುದಿಲ್ಲ; ಧೀರನು ಸದೈವ ಸಮನಾಗಿ ವರ್ತಿಸುತ್ತಾನೆ. ವಿಧಿಯೇ ಬಲವಾದುದೆಂದು ತಿಳಿದು ಅವನು ಎಂದೂ ದುಃಖಿಸುವುದಿಲ್ಲ ಅಥವಾ ಹರ್ಷಿಸುವುದಿಲ್ಲ.
01084009a ಭಯೇ ನ ಮುಹ್ಯಾಮ್ಯಷ್ಟಕಾಹಂ ಕದಾ ಚಿತ್ ಸಂತಾಪೋ ಮೇ ಮಾನಸೋ ನಾಸ್ತಿ ಕಶ್ಚಿತ್।
01084009c ಧಾತಾ ಯಥಾ ಮಾಂ ವಿದಧಾತಿ ಲೋಕೇ ಧ್ರುವಂ ತಥಾಹಂ ಭವಿತೇತಿ ಮತ್ವಾ।।
ಅಷ್ಟಕ! ಭಯವು ಎಂದೂ ನನ್ನನ್ನು ಮೋಹಿಸುವುದಿಲ್ಲ. ಸಂತಾಪವು ಎಂದೂ ನನ್ನ ಮನಸ್ಸಿನಲ್ಲಿರುವುದಿಲ್ಲ. ಧಾತನು ನನಗೆ ಲೋಕದಲ್ಲಿ ಹೇಗೆ ವಿಧಿಸಿದ್ದಾನೋ ಅದು ಖಂಡಿತವಾಗಿ ಹಾಗೆಯೇ ಆಗುತ್ತದೆ ಎಂದು ತಿಳಿದುಕೊಂಡಿದ್ದೇನೆ.
01084010a ಸಂಸ್ವೇದಜಾ ಅಂಡಜಾ ಉದ್ಭಿದಾಶ್ಚ ಸರೀಸೃಪಾಃ ಕೃಮಯೋಽಥಾಪ್ಸು ಮತ್ಸ್ಯಾಃ।
01084010c ತಥಾಶ್ಮಾನಸ್ತೃಣಕಾಷ್ಠಂ ಚ ಸರ್ವಂ ದಿಷ್ಟಕ್ಷಯೇ ಸ್ವಾಂ ಪ್ರಕೃತಿಂ ಭಜಂತೇ।।
ಬೆವರಿನಿಂದ ಹುಟ್ಟಿದವು, ಅಂಡದಲ್ಲಿ ಹುಟ್ಟಿದವು, ಸರೀಸೃಪಗಳು, ಕ್ರಿಮಿಗಳು, ನೀರಿನಲ್ಲಿರುವ ಮೀನುಗಳು, ಕಲ್ಲು, ತೃಣ-ಕಾಷ್ಠಗಳೆಲ್ಲವೂ ನೋಡುತ್ತಿರುವಂತೆಯೇ ಕ್ಷಯಹೊಂದಿ ತಮ್ಮ ತಮ್ಮ ಪ್ರಕೃತಿಗಳನ್ನು ಸೇರುತ್ತವೆ.
01084011a ಅನಿತ್ಯತಾಂ ಸುಖದುಃಖಸ್ಯ ಬುದ್ಧ್ವಾ ಕಸ್ಮಾತ್ಸಂತಾಪಮಷ್ಟಕಾಹಂ ಭಜೇಯಂ।
01084011c ಕಿಂ ಕುರ್ಯಾಂ ವೈ ಕಿಂ ಚ ಕೃತ್ವಾ ನ ತಪ್ಯೇ ತಸ್ಮಾತ್ಸಂತಾಪಂ ವರ್ಜಯಾಮ್ಯಪ್ರಮತ್ತಃ।।
ಸುಖದುಃಖಗಳು ಅನಿತ್ಯವೆಂದು ತಿಳಿದುಕೊಂಡಿದ್ದೇನೆ. ಆದುದರಿಂದ ಅಷ್ಟಕ! ಅವುಗಳು ನನ್ನಲ್ಲಿ ಹೇಗೆ ಸಂತಾಪವನ್ನುಂಟುಮಾಡುತ್ತವೆ? ಏನು ಮಾಡಬೇಕು, ಏನನ್ನು ಮಾಡಬಾರದು ಇವು ನನ್ನನ್ನು ಕಾಡುವುದಿಲ್ಲ. ಹೀಗೆ ಅಪ್ರಮತ್ತನಾಗಿದ್ದುಕೊಂಡು ಸಂತಾಪವನ್ನು ವರ್ಜಿಸಿದ್ದೇನೆ.”
01084012 ಅಷ್ಟಕ ಉವಾಚ।
01084012a ಯೇ ಯೇ ಲೋಕಾಃ ಪಾರ್ಥಿವೇಂದ್ರ ಪ್ರಧಾನಾಃ ತ್ವಯಾ ಭುಕ್ತಾ ಯಂ ಚ ಕಾಲಂ ಯಥಾ ಚ।
01084012c ತನ್ಮೇ ರಾಜನ್ಬ್ರೂಹಿ ಸರ್ವಂ ಯಥಾವತ್ ಕ್ಷೇತ್ರಜ್ಞವದ್ಭಾಷಸೇ ತ್ವಂ ಹಿ ಧರ್ಮಾನ್।।
ಅಷ್ಟಕನು ಹೇಳಿದನು: “ಪಾರ್ಥಿವೇಂದ್ರ! ನೀನು ಭೋಗಿಸಿದ ಯಾವ ಯಾವ ಪ್ರಧಾನ ಲೋಕಗಳಿವೆಯೋ ಅವುಗಳ ಕಾಲ ರೀತಿಗಳಿಗನುಗುಣವಾಗಿ ಎಲ್ಲವನ್ನೂ ಇದ್ದಹಾಗೆ ನಮಗೆ ಹೇಳು. ಏಕೆಂದರೆ ನೀನು ಧರ್ಮಗಳ ಕುರಿತು ಕ್ಷೇತ್ರವನ್ನು ಚೆನ್ನಾಗಿ ತಿಳಿದುಕೊಂಡವನಂತೆ ಮಾತನಾಡುತ್ತಿರುವೆ.”
01084013 ಯಯಾತಿರುವಾಚ।
01084013a ರಾಜಾಹಮಾಸಮಿಹ ಸಾರ್ವಭೌಮಃ ತತೋ ಲೋಕಾನ್ಮಹತೋ ಅಜಯಂ ವೈ।
01084013c ತತ್ರಾವಸಂ ವರ್ಷಸಹಸ್ರಮಾತ್ರಂ ತತೋ ಲೋಕಂ ಪರಮಸ್ಮ್ಯಭ್ಯುಪೇತಃ।।
ಯಯಾತಿಯು ಹೇಳಿದನು: “ನಾನು ಇಲ್ಲಿ ಸಾರ್ವಭೌಮ ರಾಜನಾಗಿದ್ದೆ. ಅನಂತರ ಮಹತ್ತರವಾದ ಅಜಯ ಲೋಕಗಳನ್ನು ಪಡೆದೆ. ಅವುಗಳಲ್ಲಿ ನಾನು ಒಂದೊಂದು ಸಾವಿರ ವರ್ಷಗಳು ನೆಲೆಸಿದನು. ಅನಂತರ ಅವುಗಳಿಗಿಂತಲೂ ಮೇಲಿನ ಲೋಕಗಳನ್ನು ಪಡೆದೆ.
01084014a ತತಃ ಪುರೀಂ ಪುರುಹೂತಸ್ಯ ರಮ್ಯಾಂ ಸಹಸ್ರದ್ವಾರಾಂ ಶತಯೋಜನಾಯತಾಂ।
01084014c ಅಧ್ಯಾವಸಂ ವರ್ಷಸಹಸ್ರಮಾತ್ರಂ ತತೋ ಲೋಕಂ ಪರಮಸ್ಮ್ಯಭ್ಯುಪೇತಃ।।
ಅನಂತರ ಸಹಸ್ರ ದ್ವಾರಗಳಿರುವ, ನೂರು ಯೋಜನ ವಿಸ್ತೀರ್ಣದ ಪುರುಹೂತನ ರಮ್ಯ ಪುರಿಯಲ್ಲಿ ಒಂದು ಸಾವಿರ ವರ್ಷಗಳು ವಾಸಿಸಿದೆ. ಅನಂತರ ಅದಕ್ಕೂ ಉನ್ನತ ಲೋಕಕ್ಕೆ ಹೋದೆ.
01084015a ತತೋ ದಿವ್ಯಮಜರಂ ಪ್ರಾಪ್ಯ ಲೋಕಂ ಪ್ರಜಾಪತೇರ್ಲೋಕಪತೇರ್ದುರಾಪಂ।
01084015c ತತ್ರಾವಸಂ ವರ್ಷಸಹಸ್ರಮಾತ್ರಂ ತತೋ ಲೋಕಂ ಪರಮಸ್ಮ್ಯಭ್ಯುಪೇತಃ।।
ಕೆಲವರೇ ಪಡೆಯಬಲ್ಲ, ದಿವ್ಯ ಅಜರ ಪ್ರಜಾಪತಿಯ ಲೋಕವನ್ನು ಪಡೆದೆ. ಅಲ್ಲಿ ಒಂದು ಸಾವಿರ ವರ್ಷವಿದ್ದು ನಂತರ ಅದಕ್ಕೂ ಮೇಲಿನ ಲೋಕಕ್ಕೆ ಹೋದೆ.
01084016a ದೇವಸ್ಯ ದೇವಸ್ಯ ನಿವೇಶನೇ ಚ ವಿಜಿತ್ಯ ಲೋಕಾನವಸಂ ಯಥೇಷ್ಟಂ।
01084016c ಸಂಪೂಜ್ಯಮಾನಸ್ತ್ರಿದಶೈಃ ಸಮಸ್ತೈಃ ತುಲ್ಯಪ್ರಭಾವದ್ಯುತಿರೀಶ್ವರಾಣಾಂ।।
ಆ ಲೋಕಗಳನ್ನು ಗೆದ್ದು ದೇವ ದೇವನ ನಿವೇಶನದಲ್ಲಿ ಯಥೇಷ್ಟವಾಗಿ ವಾಸಿಸಿದೆ. ಸಮಸ್ತ ತ್ರಿದಶರಿಂದ ಸಂಪೂಜಿತನಾಗಿ, ಆ ಈಶ್ವರರ ಪ್ರಭಾವ-ದ್ಯುತಿಗಳಲ್ಲಿ ಆ ಈಶ್ವರರ ಸಮನಾಗಿದ್ದೆ.
01084017a ತಥಾವಸಂ ನಂದನೇ ಕಾಮರೂಪೀ ಸಂವತ್ಸರಾಣಾಮಯುತಂ ಶತಾನಾಂ।
01084017c ಸಹಾಪ್ಸರೋಭಿರ್ವಿಹರನ್ಪುಣ್ಯಗಂಧಾನ್ ಪಶ್ಯನ್ನಗಾನ್ಪುಷ್ಪಿತಾಂಶ್ಚಾರುರೂಪಾನ್।।
ಹಾಗೆಯೇ ನಂದನದಲ್ಲಿ, ಬೇಕಾದ ರೂಪಗಳನ್ನು ತಳೆದು, ನೂರಾರು ಸಾವಿರಾರು ವರ್ಷಗಳು ಅಪ್ಸರೆಯರೊಡನೆ ಪುಣ್ಯ ಗಂಧಗಳನ್ನು ಸೇವಿಸುತ್ತಾ, ಅನುರೂಪ ಪುಷ್ಟಿಗಳನ್ನು ನೋಡುತ್ತಾ ಕಳೆದೆನು.
01084018a ತತ್ರಸ್ಥಂ ಮಾಂ ದೇವಸುಖೇಷು ಸಕ್ತಂ ಕಾಲೇಽತೀತೇ ಮಹತಿ ತತೋಽತಿಮಾತ್ರಂ।
01084018c ದೂತೋ ದೇವಾನಾಮಬ್ರವೀದುಗ್ರರೂಪೋ ಧ್ವಂಸೇತ್ಯುಚ್ಚೈಸ್ತ್ರಿಃ ಪ್ಲುತೇನ ಸ್ವರೇಣ।।
ಹೀಗೆ ದೇವಸುಖದಲ್ಲಿ ನಾನು ಸಕ್ತನಾಗಿರಲು ಮಹಾ ಕಾಲವು ಅತಿಮಾತ್ರದಲ್ಲಿ ಉರುಳಿತು. ಆಗ ಉಗ್ರರೂಪೀ ದೇವದೂತನು “ಬೀಳು” ಎಂದೂ ಮೂರುಬಾರಿ ದೀರ್ಘಸ್ವರದಲ್ಲಿ ಹೇಳಲು ಇವೆಲ್ಲವೂ ಧ್ವಂಸವಾದವು.
01084019a ಏತಾವನ್ಮೇ ವಿದಿತಂ ರಾಜಸಿಂಹ ತತೋ ಭ್ರಷ್ಟೋಽಹಂ ನಂದನಾತ್ಕ್ಷೀಣಪುಣ್ಯಃ।
01084019c ವಾಚೋಽಶ್ರೌಷಂ ಚಾಂತರಿಕ್ಷೇ ಸುರಾಣಾಂ ಅನುಕ್ರೋಶಾಚ್ಶೋಚತಾಂ ಮಾನವೇಂದ್ರ।।
ರಾಜಸಿಂಹ! ಇದಿಷ್ಟೇ ನನಗೆ ತಿಳಿದಿದೆ. ಆಗ ಕ್ಷೀಣಪುಣ್ಯನಾಗಿ ನಂದನದಿಂದ ಭ್ರಷ್ಟನಾಗಿ ಬಿದ್ದೆ. ಮಾನವೇಂದ್ರ! ಅಂತರಿಕ್ಷದಲ್ಲಿ ಸುರರು ಬೀಳುತ್ತಿರುವ ನನ್ನನ್ನು ನೋಡಿ ಅನುಕ್ರೋಶರಾಗಿ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿದೆ.
01084020a ಅಹೋ ಕಷ್ಟಂ ಕ್ಷೀಣಪುಣ್ಯೋ ಯಯಾತಿಃ ಪತತ್ಯಸೌ ಪುಣ್ಯಕೃತ್ಪುಣ್ಯಕೀರ್ತಿಃ।
01084020c ತಾನಬ್ರುವಂ ಪತಮಾನಸ್ತತೋಽಹಂ ಸತಾಂ ಮಧ್ಯೇ ನಿಪತೇಯಂ ಕಥಂ ನು।।
“ಅಯ್ಯೋ ಕಷ್ಟವೇ! ಕ್ಷೀಣಪುಣ್ಯನಾಗಿ ಈ ಪುಣ್ಯಕರ್ಮಿ, ಪುಣ್ಯಕೀರ್ತಿ ಯಯಾತಿಯು ಬೀಳುತ್ತಿದ್ದಾನಲ್ಲ!” ಬೀಳುತ್ತಿರುವ ನಾನು ಕೇಳಿಕೊಂಡೆ - “ಹೇಗಾದರೂ ಸತ್ಯವಂತರ ಮಧ್ಯೆ ಬೀಳುವಂತಾಗಲಿ!”
01084021a ತೈರಾಖ್ಯಾತಾ ಭವತಾಂ ಯಜ್ಞಭೂಮಿಃ ಸಮೀಕ್ಷ್ಯ ಚೈನಾಂ ತ್ವರಿತಮುಪಾಗತೋಽಸ್ಮಿ।
01084021c ಹವಿರ್ಗಂಧಂ ದೇಶಿಕಂ ಯಜ್ಞಭೂಮೇಃ ಧೂಮಾಪಾಂಗಂ ಪ್ರತಿಗೃಹ್ಯ ಪ್ರತೀತಃ।।
ಅವರು ನಿಮ್ಮ ಯಜ್ಞಭೂಮಿಯನ್ನು ತೋರಿಸಿದರು. ಅದನ್ನು ನೋಡಿ ತ್ವರಿತವಾಗಿ ಇಲ್ಲಿಗೆ ಬಂದೆ. ಯಜ್ಞಭೂಮಿಯ ಹವಿಸ್ಸಿನ ಗಂಧವನ್ನು ಮೂಸಿದೆ. ಹೊಗೆಯ ದಾರಿಯನ್ನೇ ಹಿಡಿದು ಬಂದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಚತುರಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತನಾಲ್ಕನೆಯ ಅಧ್ಯಾಯವು.