ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆದಿವಂಶಾವತರಣ ಪರ್ವ
ಅಧ್ಯಾಯ 61
ಸಾರ
ಅಂಶಾವತರಣ (1-102).
01061001 ಜನಮೇಜಯ ಉವಾಚ।
01061001a ದೇವಾನಾಂ ದಾನವಾನಾಂ ಚ ಯಕ್ಷಾಣಾಮಥ ರಕ್ಷಸಾಂ।
01061001c ಅನ್ಯೇಷಾಂ ಚೈವ ಭೂತಾನಾಂ ಸರ್ವೇಷಾಂ ಭಗವನ್ನಹಂ।।
01061002a ಶ್ರೋತುಮಿಚ್ಛಾಮಿ ತತ್ತ್ವೇನ ಮಾನುಷೇಷು ಮಹಾತ್ಮನಾಂ।
01061002c ಜನ್ಮ ಕರ್ಮ ಚ ಭೂತಾನಾಮೇತೇಷಾಮನುಪೂರ್ವಶಃ।।
ಜನಮೇಜಯನು ಹೇಳಿದನು: “ಭಗವನ್! ದೇವ, ದಾನವ, ಯಕ್ಷ, ರಾಕ್ಷಸ ಮತ್ತು ಅನ್ಯ ಎಲ್ಲ ಮಹಾತ್ಮರ ತತ್ವಗಳಿಂದ ಮನುಷ್ಯರಲ್ಲಿ ಜನ್ಮ-ಕರ್ಮಗಳು ನಡೆದಿದ್ದುದರ ಕುರಿತು ಕೇಳ ಬಯಸುತ್ತೇನೆ.”
01061003 ವೈಶಂಪಾಯನ ಉವಾಚ।
01061003a ಮಾನುಷೇಷು ಮನುಷ್ಯೇಂದ್ರ ಸಂಭೂತಾ ಯೇ ದಿವೌಕಸಃ।
01061003c ಪ್ರಥಮಂ ದಾನವಾಂಶ್ಚೈವ ತಾಂಸ್ತೇ ವಕ್ಷ್ಯಾಮಿ ಸರ್ವಶಃ।।
ವೈಶಂಪಾಯನನು ಹೇಳಿದನು: “ಮನುಷ್ಯೇಂದ್ರ! ಮನುಷ್ಯರಲ್ಲಿ ಅವತರಿಸಿದ ದೇವತೆಗಳು ಮತ್ತು ದಾನವರ ಕುರಿತು ಎಲ್ಲವನ್ನೂ ಹೇಳುತ್ತೇನೆ. ಮೊದಲು ದಾನವರ ಕುರಿತು ಹೇಳುತ್ತೇನೆ.
01061004a ವಿಪ್ರಚಿತ್ತಿರಿತಿ ಖ್ಯಾತೋ ಯ ಆಸೀದ್ದಾನವರ್ಷಭಃ।
01061004c ಜರಾಸಂಧ ಇತಿ ಖ್ಯಾತಃ ಸ ಆಸೀನ್ಮನುಜರ್ಷಭಃ।।
ವಿಪ್ರಚಿತ್ತಿ ಎಂದು ಖ್ಯಾತನಾಗಿದ್ದ ದಾನವರ್ಷಭನು ಮನುಜರ್ಷಭ ಜರಾಸಂಧನೆಂದು ವಿಖ್ಯಾತನಾದನು.
01061005a ದಿತೇಃ ಪುತ್ರಸ್ತು ಯೋ ರಾಜನ್ ಹಿರಣ್ಯಕಶಿಪುಃ ಸ್ಮೃತಃ।
01061005c ಸ ಜಜ್ಞೇ ಮಾನುಷೇ ಲೋಕೇ ಶಿಶುಪಾಲೋ ನರರ್ಷಭಃ।।
ರಾಜನ್! ದಿತಿಯ ಪುತ್ರ ಹಿರಣ್ಯಕಶಿಪುವು ಮನುಷ್ಯಲೋಕದಲ್ಲಿ ನರರ್ಷಭ ಶಿಶುಪಾಲನಾಗಿ ಜನಿಸಿದನು.
01061006a ಸಂಹ್ರಾದ ಇತಿ ವಿಖ್ಯಾತಃ ಪ್ರಹ್ರಾದಸ್ಯಾನುಜಸ್ತು ಯಃ।
01061006c ಸ ಶಲ್ಯ ಇತಿ ವಿಖ್ಯಾತೋ ಜಜ್ಞೇ ಬಾಹ್ಲೀಕಪುಂಗವಃ।।
ಸಂಹ್ಲಾದನೆಂದು ವಿಖ್ಯಾತ ಪ್ರಹ್ಲಾದನ ಅನುಜನು ಬಾಹ್ಲೀಕಪುಂಗವ ಶಲ್ಯನಾಗಿ ಜನಿಸಿದನು.
01061007a ಅನುಹ್ರಾದಸ್ತು ತೇಜಸ್ವೀ ಯೋಽಭೂತ್ಖ್ಯಾತೋ ಜಘನ್ಯಜಃ।
01061007c ಧೃಷ್ಟಕೇತುರಿತಿ ಖ್ಯಾತಃ ಸ ಆಸೀನ್ಮನುಜೇಶ್ವರಃ।।
ಸಹೋದರರಲ್ಲಿ ಕಿರಿಯವ ತೇಜಸ್ವಿ ಅನುಹ್ಲಾದನು ಮನುಜೇಶ್ವರ ಧೃಷ್ಟಕೇತುವೆಂದು ಖ್ಯಾತನಾದನು.
01061008a ಯಸ್ತು ರಾಜನ್ ಶಿಬಿರ್ನಾಮ ದೈತೇಯಃ ಪರಿಕೀರ್ತಿತಃ।
01061008c ದ್ರುಮೈತ್ಯಭಿವಿಖ್ಯಾತಃ ಸ ಆಸೀದ್ಭುವಿ ಪಾರ್ಥಿವಃ।।
ರಾಜನ್! ಶಿಬಿ ಎಂಬ ಹೆಸರಿನಿಂದ ಕರೆಯಲ್ಪಟ್ಟ ದಿತಿಯ ಮಗನು ಭೂಮಿಯ ಮೇಲೆ ದ್ರುಮ ಎಂಬ ಪಾರ್ಥಿವನಾಗಿ ವಿಖ್ಯಾತನಾದನು.
01061009a ಬಾಷ್ಕಲೋ ನಾಮ ಯಸ್ತೇಷಾಮಾಸೀದಸುರಸತ್ತಮಃ।
01061009c ಭಗದತ್ತ ಇತಿ ಖ್ಯಾತಃ ಸ ಆಸೀನ್ಮನುಜೇಶ್ವರಃ।।
ಬಾಷ್ಕಲ ಎಂಬ ಹೆಸರಿನ ಅಸುರಸತ್ತಮನು ಭಗದತ್ತನೆಂಬ ಮನುಜೇಶ್ವರನಾಗಿ ಖ್ಯಾತಿ ಹೊಂದಿದನು.
01061010a ಅಯಃಶಿರಾ ಅಶ್ವಶಿರಾ ಅಯಃಶಂಕುಶ್ಚ ವೀರ್ಯವಾನ್।
01061010c ತಥಾ ಗಗನಮೂರ್ಧಾ ಚ ವೇಗವಾಂಶ್ಚಾತ್ರ ಪಂಚಮಃ।।
01061011a ಪಂಚೈತೇ ಜಜ್ಞಿರೇ ರಾಜನ್ವೀರ್ಯವಂತೋ ಮಹಾಸುರಾಃ।
01061011c ಕೇಕಯೇಷು ಮಹಾತ್ಮಾನಃ ಪಾರ್ಥಿವರ್ಷಭಸತ್ತಮಾಃ।।
ರಾಜನ್! ಅಯಃಶಿರ, ಅಶ್ವಶಿರ, ವೀರ್ಯವಾನ್ ಅಯಃಶಂಕು, ಗಗನಮೂರ್ಧಾ ಮತ್ತು ಐದನೆಯವನು ವೇಗವಾನ್ ಈ ಐವರು ವೀರ್ಯವಂತ ಮಹಾಸುರರು ಕೇಕಯರಲ್ಲಿ ಮಹಾತ್ಮ ಪಾರ್ಥಿವರ್ಷಭಸತ್ತಮರಾಗಿ ಜನಿಸಿದರು.
01061012a ಕೇತುಮಾನಿತಿ ವಿಖ್ಯಾತೋ ಯಸ್ತತೋಽನ್ಯಃ ಪ್ರತಾಪವಾನ್।
01061012c ಅಮಿತೌಜಾ ಇತಿ ಖ್ಯಾತಃ ಪೃಥಿವ್ಯಾಂ ಸೋಽಭವನ್ನೃಪಃ।।
ಇನ್ನೊಬ್ಬ ಪ್ರತಾಪವಾನ್ ಕೇತುಮಾನನೆಂದು ವಿಖ್ಯಾತ ಅಸುರನು ಪೃಥ್ವಿಯಲ್ಲಿ ಅಮಿತೌಜನೆಂಬ ರಾಜನಾಗಿ ಖ್ಯಾತನಾದನು.
01061013a ಸ್ವರ್ಭಾನುರಿತಿ ವಿಖ್ಯಾತಃ ಶ್ರೀಮಾನ್ಯಸ್ತು ಮಹಾಸುರಃ।
01061013c ಉಗ್ರಸೇನ ಇತಿ ಖ್ಯಾತ ಉಗ್ರಕರ್ಮಾ ನರಾಧಿಪಃ।।
ಶ್ರೀಮಾನ್ ಸ್ವರ್ಭಾನುವೆಂದು ವಿಖ್ಯಾತ ಮಹಾಸುರನು ಉಗ್ರಕರ್ಮಿ ಉಗ್ರಸೇನನೆಂಬ ನರಾಧಿಪನಾಗಿ ಖ್ಯಾತನಾದನು.
01061014a ಯಸ್ತ್ವಶ್ವ ಇತಿ ವಿಖ್ಯಾತಃ ಶ್ರೀಮಾನಾಸೀನ್ಮಹಾಸುರಃ।
01061014c ಅಶೋಕೋ ನಾಮ ರಾಜಾಸೀನ್ಮಹಾವೀರ್ಯಪರಾಕ್ರಮಃ।।
ಅಶ್ವ ಎಂದು ವಿಖ್ಯಾತ ಶ್ರೀಮಾನ್ ಮಹಾಸುರನು ಮಹಾ ವೀರ್ಯಪರಾಕ್ರಮಿ ಅಶೋಕ ಎಂಬ ಹೆಸರಿನ ರಾಜನಾದನು.
01061015a ತಸ್ಮಾದವರಜೋ ಯಸ್ತು ರಾಜನ್ನಶ್ವಪತಿಃ ಸ್ಮೃತಃ।
01061015c ದೈತೇಯಃ ಸೋಽಭವದ್ರಾಜಾ ಹಾರ್ದಿಕ್ಯೋ ಮನುಜರ್ಷಭಃ।।
ಆ ದೈತ್ಯನ ತಮ್ಮ ರಾಜ ಅಶ್ವಪತಿಯು ಮನುಜರ್ಷಭ ಹಾರ್ದಿಕ್ಯ ರಾಜನಾದನು.
01061016a ವೃಷಪರ್ವೇತಿ ವಿಖ್ಯಾತಃ ಶ್ರೀಮಾನ್ಯಸ್ತು ಮಹಾಸುರಃ।
01061016c ದೀರ್ಘಪ್ರಜ್ಞ ಇತಿ ಖ್ಯಾತಃ ಪೃಥಿವ್ಯಾಂ ಸೋಽಭವನ್ನೃಪಃ।।
ವೃಶಪರ್ವನೆಂದು ವಿಖ್ಯಾತ ಶ್ರೀಮಾನ್ ಮಹಾಸುರನು ಪೃಥ್ವಿಯಲ್ಲಿ ದೀರ್ಘಪ್ರಜ್ಞನೆಂಬ ರಾಜನಾಗಿ ಖ್ಯಾತಿಗೊಂಡನು.
01061017a ಅಜಕಸ್ತ್ವನುಜೋ ರಾಜನ್ಯ ಆಸೀದ್ವೃಷಪರ್ವಣಃ।
01061017c ಸ ಮಲ್ಲ ಇತಿ ವಿಖ್ಯಾತಃ ಪೃಥಿವ್ಯಾಮಭವನ್ನೃಪಃ।।
ರಾಜನ್! ವೃಷಪರ್ವನ ಅನುಜ ಅಜಕನು ಪೃಥ್ವಿಯಲ್ಲಿ ನೃಪ ಮಲ್ಲನಾಗಿ ವಿಖ್ಯಾತನಾದನು.
01061018a ಅಶ್ವಗ್ರೀವ ಇತಿ ಖ್ಯಾತಃ ಸತ್ತ್ವವಾನ್ಯೋ ಮಹಾಸುರಃ।
01061018c ರೋಚಮಾನ ಇತಿ ಖ್ಯಾತಃ ಪೃಥಿವ್ಯಾಂ ಸೋಽಭವನ್ನೃಪಃ।।
ಅಶ್ವಗ್ರೀವನೆಂದು ಖ್ಯಾತ ಸತ್ವವಾನ್ ಮಹಾಸುರನು ಪೃಥ್ವಿಯಲ್ಲಿ ನೃಪ ರೋಚಮಾನನಾಗಿ ಖ್ಯಾತಿ ಹೊಂದಿದನು.
01061019a ಸೂಕ್ಷ್ಮಸ್ತು ಮತಿಮಾನ್ರಾಜನ್ಕೀರ್ತಿಮಾನ್ಯಃ ಪ್ರಕೀರ್ತಿತಃ।
01061019c ಬೃಹಂತ ಇತಿ ವಿಖ್ಯಾತಃ ಕ್ಷಿತಾವಾಸೀತ್ಸ ಪಾರ್ಥಿವಃ।।
ರಾಜನ್! ಮತಿವಂತನೂ ಕೀರ್ತಿವಂತನೂ ಆದ ಸೂಕ್ಷ್ಮನು ಬೃಹಂತ ಎನ್ನುವ ಪಾರ್ಥಿವನಾಗಿ ವಿಖ್ಯಾತನಾದನು.
01061020a ತುಹುಂಡ ಇತಿ ವಿಖ್ಯಾತೋ ಯ ಆಸೀದಸುರೋತ್ತಮಃ।
01061020c ಸೇನಾಬಿಂದುರಿತಿ ಖ್ಯಾತಃ ಸ ಬಭೂವ ನರಾಧಿಪಃ।।
ತುಹುಂಡನೆಂದು ವಿಖ್ಯಾತ ಅಸುರೋತ್ತಮನು ನರಾಧಿಪ ಸೇನಾಬಿಂದುವೆಂದು ಖ್ಯಾತನಾದನು.
01061021a ಇಸೃಪಾ ನಾಮ ಯಸ್ತೇಷಾಮಸುರಾಣಾಂ ಬಲಾಧಿಕಃ।
01061021c ಪಾಪಜಿನ್ನಾಮ ರಾಜಾಸೀದ್ಭುವಿ ವಿಖ್ಯಾತವಿಕ್ರಮಃ।।
ಇಸೃಪಾ ಎಂಬ ಅಧಿಕ ಬಲಶಾಲಿ ಅಸುರನು ಭೂಮಿಯಲ್ಲಿ ಅತಿವಿಕ್ರಮ ಪಾಪಜಿ ಎಂಬ ಹೆಸರಿನ ರಾಜನಾಗಿ ವಿಖ್ಯಾತನಾದನು.
01061022a ಏಕಚಕ್ರ ಇತಿ ಖ್ಯಾತ ಆಸೀದ್ಯಸ್ತು ಮಹಾಸುರಃ।
01061022c ಪ್ರತಿವಿಂಧ್ಯ ಇತಿ ಖ್ಯಾತೋ ಬಭೂವ ಪ್ರಥಿತಃ ಕ್ಷಿತೌ।।
ಏಕಚಕ್ರ ಎಂದು ಖ್ಯಾತ ಮಹಾಸುರನು ಕ್ಷಿತಿಯಲ್ಲಿ ಪ್ರತಿವಿಂದ್ಯ ಎಂಬ ಹೆಸರಿನಲ್ಲಿ ಖ್ಯಾತನಾದನು.
01061023a ವಿರೂಪಾಕ್ಷಸ್ತು ದೈತೇಯಶ್ಚಿತ್ರಯೋಧೀ ಮಹಾಸುರಃ।
01061023c ಚಿತ್ರವರ್ಮೇತಿ ವಿಖ್ಯಾತಃ ಕ್ಷಿತಾವಾಸೀತ್ಸ ಪಾರ್ಥಿವಃ।।
ದೈತ್ಯ ಚಿತ್ರಯೋಧಿ ಮಹಾಸುರ ವಿರೂಪಾಕ್ಷನು ಭೂಮಿಯಲ್ಲಿ ಪಾರ್ಥಿವ ಚಿತ್ರವರ್ಮನೆಂದು ವಿಖ್ಯಾತನಾದನು.
01061024a ಹರಸ್ತ್ವರಿಹರೋ ವೀರ ಆಸೀದ್ಯೋ ದಾನವೋತ್ತಮಃ।
01061024c ಸುವಾಸ್ತುರಿತಿ ವಿಖ್ಯಾತಃ ಸ ಜಜ್ಞೇ ಮನುಜರ್ಷಭಃ।।
ಅರಿಹರನೂ ವೀರನೂ ದಾನವೋತ್ತಮನೂ ಆದ ಹರನು ಮನುಜರ್ಷಭ ಸುವಾಸ್ತುವಾಗಿ ಜನಿಸಿ ವಿಖ್ಯಾತನಾದನು.
01061025a ಅಹರಸ್ತು ಮಹಾತೇಜಾಃ ಶತ್ರುಪಕ್ಷಕ್ಷಯಂಕರಃ।
01061025c ಬಾಹ್ಲೀಕೋ ನಾಮ ರಾಜಾ ಸ ಬಭೂವ ಪ್ರಥಿತಃ ಕ್ಷಿತೌ।।
ಶತ್ರುಪಕ್ಷಕ್ಷಯಂಕರನೂ ಮಹಾತೇಜಸ್ವಿಯೂ ಆದ ಅಹರನು ಭೂಮಿಯಲ್ಲಿ ಬಾಹ್ಲೀಕ ಎಂಬ ಹೆಸರಿನ ರಾಜನಾದನು.
01061026a ನಿಚಂದ್ರಶ್ಚಂದ್ರವಕ್ತ್ರಶ್ಚ ಯ ಆಸೀದಸುರೋತ್ತಮಃ।
01061026c ಮುಂಜಕೇಶ ಇತಿ ಖ್ಯಾತಃ ಶ್ರೀಮಾನಾಸೀತ್ಸ ಪಾರ್ಥಿವಃ।।
ಅಸುರೋತ್ತಮ ಚಂದ್ರವಕ್ಷಸ ನಿಚಂದ್ರನು ಮುಂಜಕೇಶನೆಂಬ ಶ್ರೀಮಾನ ಪಾರ್ಥಿವನಾಗಿ ಖ್ಯಾತಿಹೊಂದಿದ್ದನು.
01061027a ನಿಕುಂಭಸ್ತ್ವಜಿತಃ ಸಂಖ್ಯೇ ಮಹಾಮತಿರಜಾಯತ।
01061027c ಭೂಮೌ ಭೂಮಿಪತಿಃ ಶ್ರೇಷ್ಠೋ ದೇವಾಧಿಪ ಇತಿ ಸ್ಮೃತಃ।।
ಯುದ್ಧದಲ್ಲಿ ಅಜೇಯನಾದ ನಿಕುಂಭನು ಭೂಮಿಯಲ್ಲಿ ಮಹಾಮತಿ, ಶ್ರೇಷ್ಠ ಭೂಮಿಪತಿ ದೇವಾಧಿಪನೆಂದು ಹುಟ್ಟಿ ವಿಶ್ರುತನಾದನು.
01061028a ಶರಭೋ ನಾಮ ಯಸ್ತೇಷಾಂ ದೈತೇಯಾನಾಂ ಮಹಾಸುರಃ।
01061028c ಪೌರವೋ ನಾಮ ರಾಜರ್ಷಿಃ ಸ ಬಭೂವ ನರೇಷ್ವಿಹ।।
ದೈತ್ಯರಲ್ಲಿ ಶರಭ ಎಂಬ ಹೆಸರಿನ ಮಹಾಸುರನು ನರರಲ್ಲಿ ಪೌರವ ಎಂಬ ಹೆಸರಿನ ರಾಜರ್ಷಿಯಾದನು.
01061029a ದ್ವಿತೀಯಃ ಶಲಭಸ್ತೇಷಾಮಸುರಾಣಾಂ ಬಭೂವ ಯಃ।
01061029c ಪ್ರಹ್ರಾದೋ ನಾಮ ಬಾಹ್ಲೀಕಃ ಸ ಬಭೂವ ನರಾಧಿಪಃ।।
ಅಸುರರಲ್ಲಿ ಎರಡನೆಯ ಶಲಭನು ಪ್ರಹ್ರಾದ ಎಂಬ ಹೆಸರಿನಲ್ಲಿ ಬಾಹ್ಲೀಕ ನರಾಧಿಪನಾದನು.
01061030a ಚಂದ್ರಸ್ತು ದಿತಿಜಶ್ರೇಷ್ಠೋ ಲೋಕೇ ತಾರಾಧಿಪೋಪಮಃ।
01061030c ಋಷಿಕೋ ನಾಮ ರಾಜರ್ಷಿರ್ಬಭೂವ ನೃಪಸತ್ತಮಃ।।
ಲೋಕಗಳಲ್ಲಿ ದಿತಿಜಶ್ರೇಷ್ಠ ತಾರಾಧಿಪನಂತಿದ್ದ ಚಂದ್ರನು ನೃಪಸತ್ತಮ ರಾಜರ್ಷಿ ಋಷಿಕ ಎಂಬ ಹೆಸರನ್ನು ಪಡೆದನು.
01061031a ಮೃತಪಾ ಇತಿ ವಿಖ್ಯಾತೋ ಯ ಆಸೀದಸುರೋತ್ತಮಃ।
01061031c ಪಶ್ಚಿಮಾನೂಪಕಂ ವಿದ್ಧಿ ತಂ ನೃಪಂ ನೃಪಸತ್ತಮ।।
ಮೃತಪ ಎಂದು ವಿಖ್ಯಾತ ಅಸುರೋತ್ತಮನು ನೃಪಸತ್ತಮ ನೃಪ ಪಶ್ಚಿಮಾನೂಪಕನೆಂದು ತಿಳಿ.
01061032a ಗವಿಷ್ಠಸ್ತು ಮಹಾತೇಜಾ ಯಃ ಪ್ರಖ್ಯಾತೋ ಮಹಾಸುರಃ।
01061032c ದ್ರುಮಸೇನ ಇತಿ ಖ್ಯಾತಃ ಪೃಥಿವ್ಯಾಂ ಸೋಽಭವನ್ನೃಪಃ।।
ಮಹಾಸುರರಲ್ಲಿ ಪ್ರಖ್ಯಾತ ಮಹಾತೇಜಸ್ವಿ ಗವಿಷ್ಠನು ಪೃಥ್ವಿಯಲ್ಲಿ ದ್ರುಮಸೇನನೆಂಬ ನೃಪನಾಗಿ ಖ್ಯಾತಿಹೊಂದಿದನು.
01061033a ಮಯೂರ ಇತಿ ವಿಖ್ಯಾತಃ ಶ್ರೀಮಾನ್ಯಸ್ತು ಮಹಾಸುರಃ।
01061033c ಸ ವಿಶ್ವ ಇತಿ ವಿಖ್ಯಾತೋ ಬಭೂವ ಪೃಥಿವೀಪತಿಃ।।
ಮಹಾಸುರರಲ್ಲಿ ವಿಖ್ಯಾತ ಶ್ರಿಮಾನ್ ಮಯೂರನು ಪೃಥ್ವಿವೀಪತಿ ವಿಶ್ವ ಎಂದು ವಿಖ್ಯಾತನಾದನು.
01061034a ಸುಪರ್ಣ ಇತಿ ವಿಖ್ಯಾತಸ್ತಸ್ಮಾದವರಜಸ್ತು ಯಃ।
01061034c ಕಾಲಕೀರ್ತಿರಿತಿ ಖ್ಯಾತಃ ಪೃಥಿವ್ಯಾಂ ಸೋಽಭವನ್ನೃಪಃ।।
ಸುಪರ್ಣನೆಂದು ವಿಖ್ಯಾತ ಅವನ ತಮ್ಮನು ಪೃಥ್ವಿಯಲ್ಲಿ ಕಾಲಕೀರ್ತಿ ಎಂಬ ರಾಜನಾಗಿ ಖ್ಯಾತನಾದನು.
01061035a ಚಂದ್ರಹಂತೇತಿ ಯಸ್ತೇಷಾಂ ಕೀರ್ತಿತಃ ಪ್ರವರೋಽಸುರಃ।
01061035c ಶುನಕೋ ನಾಮ ರಾಜರ್ಷಿಃ ಸ ಬಭೂವ ನರಾಧಿಪಃ।।
ಅಸುರಪ್ರವರರಲ್ಲಿ ಚಂದ್ರಹಂತನೆಂದು ಕೀರ್ತಿತನಾದವನು ಶುನಕ ಎಂಬ ಹೆಸರಿನ ನರಾಧಿಪ ರಾಜರ್ಷಿಯಾದನು.
01061036a ವಿನಾಶನಸ್ತು ಚಂದ್ರಸ್ಯ ಯ ಆಖ್ಯಾತೋ ಮಹಾಸುರಃ।
01061036c ಜಾನಕಿರ್ನಾಮ ರಾಜರ್ಷಿಃ ಸ ಬಭೂವ ನರಾಧಿಪಃ।।
ಚಂದ್ರವಿನಾಶನನೆಂದು ಖ್ಯಾತಿಹೊಂದಿದ್ದ ಮಹಾಸುರನು ಜಾನಕಿ ಎಂಬ ಹೆಸರಿನ ನರಾಧಿಪ ರಾಜರ್ಷಿಯಾದನು.
01061037a ದೀರ್ಘಜಿಹ್ವಸ್ತು ಕೌರವ್ಯ ಯ ಉಕ್ತೋ ದಾನವರ್ಷಭಃ।
01061037c ಕಾಶಿರಾಜ ಇತಿ ಖ್ಯಾತಃ ಪೃಥಿವ್ಯಾಂ ಪೃಥಿವೀಪತಿಃ।।
ಕೌರವ್ಯ! ದಾನವರ್ಷಭನೆಂದು ಕರೆಯಲ್ಪಟ್ಟ ದೀರ್ಘಜಿಹ್ವನು ಪೃಥ್ವಿಯಲ್ಲಿ ಪೃಥ್ವೀಪತಿ ಕಾಶಿರಾಜನೆಂದು ಖ್ಯಾತನಾದನು.
01061038a ಗ್ರಹಂ ತು ಸುಷುವೇ ಯಂ ತಂ ಸಿಂಹೀ ಚಂದ್ರಾರ್ಕಮರ್ದನಂ।
01061038c ಕ್ರಾಥ ಇತ್ಯಭಿವಿಖ್ಯಾತಃ ಸೋಽಭವನ್ಮನುಜಾಧಿಪಃ।।
ಸಿಂಹಿಕೆಯಲ್ಲಿ ಹುಟ್ಟಿ ಸೂರ್ಯಚಂದ್ರರ ಮರ್ದನಮಾಡಿದ ಗ್ರಹವು ಮನುಜಾಧಿಪ ಕ್ರಾಥ ಎಂದು ವಿಖ್ಯಾತನಾದನು.
01061039a ಅನಾಯುಷಸ್ತು ಪುತ್ರಾಣಾಂ ಚತುರ್ಣಾಂ ಪ್ರವರೋಽಸುರಃ।
01061039c ವಿಕ್ಷರೋ ನಾಮ ತೇಜಸ್ವೀ ವಸುಮಿತ್ರೋಽಭವನ್ನೃಪಃ।।
ಅನಾಯುವಿನ ನಾಲ್ವರು ಮಕ್ಕಳಲ್ಲಿ ಹಿರಿಯವನಾದ ವಸುಮಿತ್ರನು ವಿಕ್ಷರನೆಂಬ ಹೆಸರಿನ ತೇಜಸ್ವಿ ನೃಪನಾದನು.
01061040a ದ್ವಿತೀಯೋ ವಿಕ್ಷರಾದ್ಯಸ್ತು ನರಾಧಿಪ ಮಹಾಸುರಃ।
01061040c ಪಾಂಸುರಾಷ್ಟ್ರಾಧಿಪ ಇತಿ ವಿಶ್ರುತಃ ಸೋಽಭವನ್ನೃಪಃ।।
ನರಾಧಿಪ! ವಿಕ್ಷರ ಮಹಾಸುರನ ಎರಡನೆಯ ತಮ್ಮನು ನೃಪ ಪಾಂಸುರಾಷ್ಟ್ರಾಧಿಪನಾಗಿ ವಿಶೃತನಾದನು.
01061041a ಬಲವೀರ ಇತಿ ಖ್ಯಾತೋ ಯಸ್ತ್ವಾಸೀದಸುರೋತ್ತಮಃ।
01061041c ಪೌಂಡ್ರಮತ್ಸ್ಯಕ ಇತ್ಯೇವ ಸ ಬಭೂವ ನರಾಧಿಪಃ।।
ಬಲವೀರನೆಂದು ಖ್ಯಾತ ಅಸುರೋತ್ತಮನು ಪೌಂಡ್ರಮತ್ಸ್ಯಕನೆಂಬ ನರಾಧಿಪನಾದನು.
01061042a ವೃತ್ರ ಇತ್ಯಭಿವಿಖ್ಯಾತೋ ಯಸ್ತು ರಾಜನ್ಮಹಾಸುರಃ।
01061042c ಮಣಿಮಾನ್ನಾಮ ರಾಜರ್ಷಿಃ ಸ ಬಭೂವ ನರಾಧಿಪಃ।।
ರಾಜನ್! ವೃತ್ರ ಎಂದು ವಿಖ್ಯಾತ ಮಹಾಸುರನು ಮಣಿಮಾನ್ ಎಂಬ ಹೆಸರಿನ ರಾಜರ್ಷಿ ನರಾಧಿಪನಾದನು.
01061043a ಕ್ರೋಧಹಂತೇತಿ ಯಸ್ತಸ್ಯ ಬಭೂವಾವರಜೋಽಸುರಃ।
01061043c ದಂಡ ಇತ್ಯಭಿವಿಖ್ಯಾತಃ ಸ ಆಸೀನ್ನೃಪತಿಃ ಕ್ಷಿತೌ।।
ಅವನ ತಮ್ಮ ಕ್ರೋಧಹಂತನು ಭೂಮಿಯಲ್ಲಿ ನೃಪತಿ ದಂಡನೆಂದು ಅಭಿವಿಖ್ಯಾತನಾದನು.
01061044a ಕ್ರೋಧವರ್ಧನ ಇತ್ಯೇವ ಯಸ್ತ್ವನ್ಯಃ ಪರಿಕೀರ್ತಿತಃ।
01061044c ದಂಡಧಾರ ಇತಿ ಖ್ಯಾತಃ ಸೋಽಭವನ್ಮನುಜೇಶ್ವರಃ।।
ಕ್ರೋಧವರ್ಧನನೆನ್ನುವವನು ದಂಡಧಾರನೆಂಬ ಮನುಜೇಶ್ವರನಾಗಿ ಖ್ಯಾತನಾದನು.
01061045a ಕಾಲಕಾಯಾಸ್ತು ಯೇ ಪುತ್ರಾಸ್ತೇಷಾಮಷ್ಟೌ ನರಾಧಿಪಾಃ।
01061045c ಜಜ್ಞಿರೇ ರಾಜಶಾರ್ದೂಲ ಶಾರ್ದೂಲಸಮವಿಕ್ರಮಾಃ।।
ಕಾಲಕಾಯನ ಎಂಟು ಪುತ್ರರು ಶಾರ್ದೂಲಸಮವಿಕ್ರಮ ನರಾಧಿಪ ರಾಜಶಾರ್ದೂಲರಾಗಿ ಜನಿಸಿದರು.
01061046a ಮಗಧೇಷು ಜಯತ್ಸೇನಃ ಶ್ರೀಮಾನಾಸೀತ್ಸ ಪಾರ್ಥಿವಃ।
01061046c ಅಷ್ಟಾನಾಂ ಪ್ರವರಸ್ತೇಷಾಂ ಕಾಲೇಯಾನಾಂ ಮಹಾಸುರಃ।।
ಈ ಎಂಟು ಕಾಲಕೇಯ ಮಹಾಸುರರಲ್ಲಿ ಮೊದಲನೆಯವನು ಮಗಧದ ಶ್ರೀಮಾನ್ ರಾಜ ಜಯತ್ಸೇನನಾದನು.
01061047a ದ್ವಿತೀಯಸ್ತು ತತಸ್ತೇಷಾಂ ಶ್ರೀಮಾನ್ ಹರಿಹಯೋಪಮಃ।
01061047c ಅಪರಾಜಿತ ಇತ್ಯೇವ ಸ ಬಭೂವ ನರಾಧಿಪಃ।।
ಅವರಲ್ಲಿ ಎರಡನೆಯವನು ಶ್ರೀಮಾನ್ ಇಂದ್ರನ ಸಮ ನರಾಧಿಪ ಅಪರಾಜಿತನಾದನು.
01061048a ತೃತೀಯಸ್ತು ಮಹಾರಾಜ ಮಹಾಬಾಹುರ್ಮಹಾಸುರಃ।
01061048c ನಿಷಾದಾಧಿಪತಿರ್ಜಜ್ಞೇ ಭುವಿ ಭೀಮಪರಾಕ್ರಮಃ।।
ಮಹಾರಾಜ! ಮಹಾಬಾಹುವಾದ ಮೂರನೆಯ ಮಹಾಸುರನು ಭುವಿಯಲ್ಲಿ ಭೀಮಪರಾಕ್ರಮಿ ನಿಷಾದಾಧಿಪತಿಯಾಗಿ ಜನಿಸಿದನು.
01061049a ತೇಷಾಮನ್ಯತಮೋ ಯಸ್ತು ಚತುರ್ಥಃ ಪರಿಕೀರ್ತಿತಃ।
01061049c ಶ್ರೇಣಿಮಾನಿತಿ ವಿಖ್ಯಾತಃ ಕ್ಷಿತೌ ರಾಜರ್ಷಿಸತ್ತಮಃ।।
ಅವರಲ್ಲಿ ಇನ್ನೊಬ್ಬ ನಾಲ್ಕನೆಯವನು ಭೂಮಿಯಲ್ಲಿ ರಾಜರ್ಷಿಸತ್ತಮ ಶ್ರೇಣಿಮಾನ್ ಎಂದು ವಿಖ್ಯಾತನಾಗಿದ್ದಾನೆ.
01061050a ಪಂಚಮಸ್ತು ಬಭೂವೈಷಾಂ ಪ್ರವರೋ ಯೋ ಮಹಾಸುರಃ।
01061050c ಮಹೌಜಾ ಇತಿ ವಿಖ್ಯಾತೋ ಬಭೂವೇಹ ಪರಂತಪಃ।।
ಇವರಲ್ಲಿ ಐದನೆಯ ಮಹಾಸುರನು ಪರಂತಪ ಮಹೌಜ ಎಂದು ವಿಖ್ಯಾತನಾದನು.
01061051a ಷಷ್ಠಸ್ತು ಮತಿಮಾನ್ಯೋ ವೈ ತೇಷಾಮಾಸೀನ್ಮಹಾಸುರಃ।
01061051c ಅಭೀರುರಿತಿ ವಿಖ್ಯಾತಃ ಕ್ಷಿತೌ ರಾಜರ್ಷಿಸತ್ತಮಃ।।
ಆರನೆಯ ಮತಿವಂತ ಮಹಾಸುರನು ಭೂಮಿಯಲ್ಲಿ ರಾಜರ್ಷಿಸತ್ತಮ ಅಭೀರು ಎಂದು ವಿಖ್ಯಾತನಾದನು.
01061052a ಸಮುದ್ರಸೇನಶ್ಚ ನೃಪಸ್ತೇಷಾಮೇವಾಭವದ್ಗಣಾತ್।
01061052c ವಿಶ್ರುತಃ ಸಾಗರಾಂತಾಯಾಂ ಕ್ಷಿತೌ ಧರ್ಮಾರ್ಥತತ್ತ್ವವಿತ್।।
ಅದೇ ಗಣದಲ್ಲಿದ್ದ ಒಬ್ಬನು ಭೂಮಿಯಲ್ಲಿ ಸಾಗರ ಪರ್ಯಂತವೂ ಪ್ರಸಿದ್ಧ ಧರ್ಮಾರ್ಥತತ್ವವನ್ನು ತಿಳಿದಿದ್ದ ನೃಪತಿ ಸಮುದ್ರಸೇನನಾದನು.
01061053a ಬೃಹನ್ನಾಮಾಷ್ಟಮಸ್ತೇಷಾಂ ಕಾಲೇಯಾನಾಂ ಪರಂತಪಃ।
01061053c ಬಭೂವ ರಾಜನ್ಧರ್ಮಾತ್ಮಾ ಸರ್ವಭೂತಹಿತೇ ರತಃ।।
ಆ ಕಾಲೇಯರಲ್ಲಿ ಎಂಟನೆಯ ಪರಂತಪ ಬೃಹನನು ಸರ್ವಭೂತಹಿತೋರತ ಧರ್ಮಾತ್ಮ ರಾಜನಾದನು.
01061054a ಗಣಃ ಕ್ರೋಧವಶೋ ನಾಮ ಯಸ್ತೇ ರಾಜನ್ಪ್ರಕೀರ್ತಿತಃ।
01061054c ತತಃ ಸಂಜಜ್ಞಿರೇ ವೀರಾಃ ಕ್ಷಿತಾವಿಹ ನರಾಧಿಪಾಃ।।
ರಾಜನ್! ಕ್ರೋಧವಶ ಎಂಬ ಹೆಸರಿನಿಂದ ಕರೆಯಲ್ಪಟ್ಟ ಗಣದಿಂದ ಈ ಕ್ಷಿತಿಯಲ್ಲಿ ಬಹಳಷ್ಟು ವೀರರು ನರಾಧಿಪರಾಗಿ ಜನ್ಮತಾಳಿದರು.
01061055a ನಂದಿಕಃ ಕರ್ಣವೇಷ್ಟಶ್ಚ ಸಿದ್ಧಾರ್ಥಃ ಕೀಟಕಸ್ತಥಾ।
01061055c ಸುವೀರಶ್ಚ ಸುಬಾಹುಶ್ಚ ಮಹಾವೀರೋಽಥ ಬಾಹ್ಲಿಕಃ।।
01061056a ಕ್ರೋಧೋ ವಿಚಿತ್ಯಃ ಸುರಸಃ ಶ್ರೀಮಾನ್ನೀಲಶ್ಚ ಭೂಮಿಪಃ।
01061056c ವೀರಧಾಮಾ ಚ ಕೌರವ್ಯ ಭೂಮಿಪಾಲಶ್ಚ ನಾಮತಃ।।
01061057a ದಂತವಕ್ತ್ರಶ್ಚ ನಾಮಾಸೀದ್ದುರ್ಜಯಶ್ಚೈವ ನಾಮತಃ।
01061057c ರುಕ್ಮೀ ಚ ನೃಪಶಾರ್ದೂಲೋ ರಾಜಾ ಚ ಜನಮೇಜಯಃ।।
01061058a ಆಷಾದೋ ವಾಯುವೇಗಶ್ಚ ಭೂರಿತೇಜಾಸ್ತಥೈವ ಚ।
01061058c ಏಕಲವ್ಯಃ ಸುಮಿತ್ರಶ್ಚ ವಾಟಧಾನೋಽಥ ಗೋಮುಖಃ।।
01061059a ಕಾರೂಷಕಾಶ್ಚ ರಾಜಾನಃ ಕ್ಷೇಮಧೂರ್ತಿಸ್ತಥೈವ ಚ।
01061059c ಶ್ರುತಾಯುರುದ್ಧವಶ್ಚೈವ ಬೃಹತ್ಸೇನಸ್ತಥೈವ ಚ।।
01061060a ಕ್ಷೇಮೋಗ್ರತೀರ್ಥಃ ಕುಹರಃ ಕಲಿಂಗೇಷು ನರಾಧಿಪಃ।
01061060c ಮತಿಮಾಂಶ್ಚ ಮನುಷ್ಯೇಂದ್ರ ಈಶ್ವರಶ್ಚೇತಿ ವಿಶ್ರುತಃ।।
01061061a ಗಣಾತ್ಕ್ರೋಧವಶಾದೇವಂ ರಾಜಪೂಗೋಽಭವತ್ ಕ್ಷಿತೌ।
01061061c ಜಾತಃ ಪುರಾ ಮಹಾರಾಜ ಮಹಾಕೀರ್ತಿರ್ಮಹಾಬಲಃ।।
ಕೌರವ್ಯ! ಅವರ ಹೆಸರುಗಳು ಇಂತಿವೆ: ನಂದಿಕ, ಕರ್ಣವೇಷ್ಟ, ಸಿದ್ಧಾರ್ಥ, ಕೀಟಕ, ಸುವೀರ, ಸುಬಾಹು, ಮಹಾವೀರ, ಬಾಹ್ಲೀಕ, ಕ್ರೋಧ, ವಿಚಿತ್ಯ, ಸುರಸ, ಭೂಮಿಪ ಶ್ರೀಮಾನ್ ನೀಲ, ಮತ್ತು ವೀರಧಾಮ. ಜನಮೇಜಯ! ಇನ್ನೂ ಇತರರು ಭೂಮಿಪಾಲ, ದಂತವಕ್ತ್ರ, ದುರ್ಜಯ, ನೃಪಶಾರ್ದೂಲ ರಾಜಾ ರುಕ್ಮಿ, ಆಶಾಢ, ವಾಯುವೇಗ, ಭೂರಿತೇಜ, ಏಕಲವ್ಯ, ಸುಮಿತ್ರ, ವಾಟದಾನ, ಗೋಮುಖ, ಕಾರೂಷಕ, ರಾಜ ಕ್ಷೇಮಧೂರ್ತಿ, ಶೃತಾಯು, ಉದ್ಧವ, ಬೃಹತ್ಸೇನ, ಕ್ಷೇಮ, ಉಗ್ರತೀರ್ಥ, ಕುಹರ, ಕಲಿಂಗ ನರಾಧಿಪ, ಮತಿಮಾನ್, ಈಶ್ವರನೆಂದು ಪ್ರಸಿದ್ಧನಾದ ಮನುಷ್ಯೇಂದ್ರ, ಇವರೆಲ್ಲರೂ ಕ್ರೋಧವಶ ಗಣಕ್ಕೆ ಸೇರಿದ್ದು ಭೂಮಿಯಲ್ಲಿ ಮಹಾಕೀರ್ತಿವಂತರಾದ ಮಹಾಬಲಶಾಲಿಗಳಾದ ರಾಜರಾಗಿ ಹುಟ್ಟಿದರು.
01061062a ಯಸ್ತ್ವಾಸೀದ್ದೇವಕೋ ನಾಮ ದೇವರಾಜಸಮದ್ಯುತಿಃ।
01061062c ಸ ಗಂಧರ್ವಪತಿರ್ಮುಖ್ಯಃ ಕ್ಷಿತೌ ಜಜ್ಞೇ ನರಾಧಿಪಃ।।
ನರಾಧಿಪ! ದೇವರಾಜಸಮದ್ಯುತಿ ದೇವಕ ಎಂಬ ಹೆಸರಿನವನು ಭೂಮಿಯಲ್ಲಿ ಗಂಧರ್ವಪತಿ ಮುಖ್ಯನಾಗಿ ಜನಿಸಿದನು.
01061063a ಬೃಹಸ್ಪತೇರ್ಬೃಹತ್ಕೀರ್ತೇರ್ದೇವರ್ಷೇರ್ವಿದ್ಧಿ ಭಾರತ।
01061063c ಅಂಶಾದ್ದ್ರೋಣಂ ಸಮುತ್ಪನ್ನಂ ಭಾರದ್ವಾಜಮಯೋನಿಜಂ।।
ಭಾರತ! ಅಯೋನಿಜ ಭರದ್ವಾಜನ ಮಗ ದ್ರೋಣನು ಮಹಾ ಕೀರ್ತಿವಂತ ದೇವರ್ಷಿ ಬೃಹಸ್ಪತಿಯ ಒಂದು ಅಂಶದಿಂದ ಉತ್ಪನ್ನನಾದನೆಂದು ತಿಳಿ.
01061064a ಧನ್ವಿನಾಂ ನೃಪಶಾರ್ದೂಲ ಯಃ ಸ ಸರ್ವಾಸ್ತ್ರವಿತ್ತಮಃ।
01061064c ಬೃಹತ್ಕೀರ್ತಿರ್ಮಹಾತೇಜಾಃ ಸಂಜಜ್ಞೇ ಮನುಜೇಷ್ವಿಹ।।
ನೃಪಶಾರ್ದೂಲ! ಅವನು ಧನ್ವಿಗಳಲ್ಲೆಲ್ಲ ಶ್ರೇಷ್ಠನಾಗಿದ್ದು ಸರ್ವಾಸ್ತ್ರ ವಿತ್ತಮನೂ ಮಹಾಕೀರ್ತಿವಂತನೂ ಮಹಾತೇಸ್ವಿಯೂ ಆಗಿ ಇಲ್ಲಿ ಮನುಷ್ಯರಲ್ಲಿ ಜನಿಸಿದನು.
01061065a ಧನುರ್ವೇದೇ ಚ ವೇದೇ ಚ ಯಂ ತಂ ವೇದವಿದೋ ವಿದುಃ।
01061065c ವರಿಷ್ಠಮಿಂದ್ರಕರ್ಮಾಣಂ ದ್ರೋಣಂ ಸ್ವಕುಲವರ್ಧನಂ।।
ಧನುರ್ವೇದದಲ್ಲಿಯೂ ವೇದಗಳಲ್ಲಿಯೂ ಪಂಡಿತನೆಂದು ತಿಳಿಯಲ್ಪಟ್ಟಿದ್ದ ಆ ದ್ರೋಣನು ಮಹಾ ಅದ್ಭುತ ಕಾರ್ಯಗಳನ್ನೆಸಗಿ ತನ್ನ ಕುಲದ ಕೀರ್ತಿಯನ್ನು ವೃದ್ಧಿಸಿದನು.
01061066a ಮಹಾದೇವಾಂತಕಾಭ್ಯಾಂ ಚ ಕಾಮಾತ್ಕ್ರೋಧಾಚ್ಚ ಭಾರತ।
01061066c ಏಕತ್ವಮುಪಪನ್ನಾನಾಂ ಜಜ್ಞೇ ಶೂರಃ ಪರಂತಪಃ।।
01061067a ಅಶ್ವತ್ಥಾಮಾ ಮಹಾವೀರ್ಯಃ ಶತ್ರುಪಕ್ಷಕ್ಷಯಂಕರಃ।
01061067c ವೀರಃ ಕಮಲಪತ್ರಾಕ್ಷಃ ಕ್ಷಿತಾವಾಸೀನ್ನರಾಧಿಪ।।
ನರಾಧಿಪ ಭಾರತ! ಮಹಾದೇವ, ಅಂತಕ ಯಮ, ಕಾಮ ಮತ್ತು ಕ್ರೋಧಗಳ ಏಕತ್ವದಿಂದ ಶೂರನೂ ಪರಂತಪನು ಮಹಾವೀರ್ಯನೂ ಶತ್ರುಪಕ್ಷ ಕ್ಷಯಂಕರನೂ ಕಮಲಪತ್ರಾಕ್ಷನೂ ವೀರನೂ ಆದ ಅಶ್ವತ್ಥಾಮನು ಭೂಮಿಯಲ್ಲಿ ಜನಿಸಿದನು.
01061068a ಜಜ್ಞಿರೇ ವಸವಸ್ತ್ವಷ್ಟೌ ಗಂಗಾಯಾಂ ಶಂತನೋಃ ಸುತಾಃ।
01061068c ವಸಿಷ್ಠಸ್ಯ ಚ ಶಾಪೇನ ನಿಯೋಗಾದ್ವಾಸವಸ್ಯ ಚ।।
ವಸಿಷ್ಠನ ಶಾಪ ಮತ್ತು ವಾಸವನ ನಿರ್ದೇಶನದಂತೆ ಅಷ್ಟ ವಸುಗಳು ಗಂಗೆಯಲ್ಲಿ ಶಂತನುವಿನ ಸುತರಾಗಿ ಜನಿಸಿದರು.
01061069a ತೇಷಾಮವರಜೋ ಭೀಷ್ಮಃ ಕುರೂಣಾಮಭಯಂಕರಃ।
01061069c ಮತಿಮಾನ್ವೇದವಿದ್ವಾಗ್ಮೀ ಶತ್ರುಪಕ್ಷಕ್ಷಯಂಕರಃ।।
ಅವರಲ್ಲಿ ಕಿರಿಯವನೇ ಕುರುಗಳಿಗೆ ಅಭಯಕಾರಕ, ಮತಿವಂತ, ವೇದವಿದು, ವಾಗ್ಮಿ, ಶತ್ರುಪಕ್ಷ ಕ್ಷಯಂಕರ ಭೀಷ್ಮ.
01061070a ಜಾಮದಗ್ನ್ಯೇನ ರಾಮೇಣ ಯಃ ಸ ಸರ್ವವಿದಾಂ ವರಃ।
01061070c ಅಯುಧ್ಯತ ಮಹಾತೇಜಾ ಭಾರ್ಗವೇಣ ಮಹಾತ್ಮನಾ।।
ಆ ಸರ್ವವಿದರಲ್ಲಿ ಶ್ರೇಷ್ಠನು ಮಹಾತೇಜಸ್ವಿ, ಮಹಾತ್ಮ ಭಾರ್ಗವ ಜಮದಗ್ನಿಯ ಮಗ ರಾಮನೊಂದಿಗೆ ಯುದ್ಧಗೈದನು.
01061071a ಯಸ್ತು ರಾಜನ್ಕೃಪೋ ನಾಮ ಬ್ರಹ್ಮರ್ಷಿರಭವತ್ ಕ್ಷಿತೌ।
01061071c ರುದ್ರಾಣಾಂ ತಂ ಗಣಾದ್ವಿದ್ಧಿ ಸಂಭೂತಮತಿಪೌರುಷಂ।।
ರಾಜನ್! ಕ್ಷಿತಿಯಲ್ಲಿ ಹುಟ್ಟಿದ ಅತಿಪೌರುಷನಾದ ಕೃಪ ಎಂಬ ಹೆಸರಿನ ಬ್ರಹ್ಮರ್ಷಿಯು ರುದ್ರರ ಗಣಗಳಿಂದ ಹುಟ್ಟಿದನೆಂದು ತಿಳಿ.
01061072a ಶಕುನಿರ್ನಾಮ ಯಸ್ತ್ವಾಸೀದ್ರಾಜಾ ಲೋಕೇ ಮಹಾರಥಃ।
01061072c ದ್ವಾಪರಂ ವಿದ್ಧಿ ತಂ ರಾಜನ್ಸಂಭೂತಮರಿಮರ್ದನಂ।।
ರಾಜನ್! ಲೋಕದಲ್ಲಿ ಮಹಾರಥಿ ಶಕುನಿ ಎಂಬ ಹೆಸರಿನ ಯಾವ ರಾಜನಿದ್ದನೋ ಅವನು ಅರಿಮರ್ದನ ದ್ವಾಪರನಿಂದ ಸಂಭವಿಸಿದನೆಂದು ತಿಳಿ.
01061073a ಸಾತ್ಯಕಿಃ ಸತ್ಯಸಂಧಸ್ತು ಯೋಽಸೌ ವೃಷ್ಣಿಕುಲೋದ್ವಹಃ।
01061073c ಪಕ್ಷಾತ್ಸ ಜಜ್ಞೇ ಮರುತಾಂ ದೇವಾನಾಮರಿಮರ್ದನಃ।।
ವೃಷ್ಣಿಕುಲೋದ್ವಹ, ಸತ್ಯಸಂಧ ಅರಿಮರ್ದನ ಸಾತ್ಯಕಿಯು ದೇವತೆಗಳಾದ ಮರುತರ ಅಂಶದಿಂದ ಹುಟ್ಟಿದನು.
01061074a ದ್ರುಪದಶ್ಚಾಪಿ ರಾಜರ್ಷಿಸ್ತತ ಏವಾಭವದ್ಗಣಾತ್।
01061074c ಮಾನುಷೇ ನೃಪ ಲೋಕೇಽಸ್ಮಿನ್ಸರ್ವಶಸ್ತ್ರಭೃತಾಂ ವರಃ।।
ನೃಪ! ಈ ಮನುಷ್ಯ ಲೋಕದಲ್ಲಿ ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ ರಾಜರ್ಷಿ ದ್ರುಪದನೂ ಕೂಡ ಅದೇ ಗಣಗಳ ಅಂಶದಿಂದ ಸಂಭವಿಸಿದನು.
01061075a ತತಶ್ಚ ಕೃತವರ್ಮಾಣಂ ವಿದ್ಧಿ ರಾಜಂ ಜನಾಧಿಪಂ।
01061075c ಜಾತಮಪ್ರತಿಕರ್ಮಾಣಂ ಕ್ಷತ್ರಿಯರ್ಷಭಸತ್ತಮಂ।।
01061076a ಮರುತಾಂ ತು ಗಣಾದ್ವಿದ್ಧಿ ಸಂಜಾತಮರಿಮರ್ದನಂ।
01061076c ವಿರಾಟಂ ನಾಮ ರಾಜರ್ಷಿಂ ಪರರಾಷ್ಟ್ರಪ್ರತಾಪನಂ।।
ರಾಜನ್! ಅಪ್ರತಿಮ ಕರ್ಮಣಿ, ಕ್ಷತ್ರಿಯರ್ಷಭ, ಸತ್ತಮ, ಜನಾಧಿಪ ಕೃತವರ್ಮನೂ ಮತ್ತು ಅರಿಮರ್ದನ, ಪರರಾಷ್ಟ್ರಪ್ರತಾಪಿ, ವಿರಾಟನೆಂಬ ಹೆಸರಿನ ರಾಜರ್ಷಿಯೂ ಆ ಮರುತ ಗಣಗಳಿಂದಲೇ ಸಂಭವಿಸಿದರೆಂದು ತಿಳಿ.
01061077a ಅರಿಷ್ಟಾಯಾಸ್ತು ಯಃ ಪುತ್ರೋ ಹಂಸ ಇತ್ಯಭಿವಿಶ್ರುತಃ।
01061077c ಸ ಗಂಧರ್ವಪತಿರ್ಜಜ್ಞೇ ಕುರುವಂಶವಿವರ್ಧನಃ।।
01061078a ಧೃತರಾಷ್ಟ್ರ ಇತಿ ಖ್ಯಾತಃ ಕೃಷ್ಣದ್ವೈಪಾಯನಾದಪಿ।
01061078c ದೀರ್ಘಬಾಹುರ್ಮಹಾತೇಜಾಃ ಪ್ರಜ್ಞಾಚಕ್ಷುರ್ನರಾಧಿಪಃ।
01061078e ಮಾತುರ್ದೋಷಾದೃಷೇಃ ಕೋಪಾದಂಧ ಏವ ವ್ಯಜಾಯತ।।
ಹಂಸನೆಂದು ವಿಖ್ಯಾತ ಗಂಧರ್ವಪತಿ ಅರಿಷ್ಟನ ಪುತ್ರನು ಕೃಷ್ಣದ್ವೈಪಾಯನನಿಂದ ಧೃತರಾಷ್ಟ್ರನೆಂದು ಖ್ಯಾತ ಕುರುವಂಶ ವಿವರ್ಧನನಾಗಿ ಜನಿಸಿದನು. ತಾಯಿಯ ದೋಷ ಮತ್ತು ಋಷಿಯ ಕೋಪದಿಂದ ಆ ದೀರ್ಘಬಾಹು ಮಹಾತೇಜಸ್ವಿ ಪ್ರಜ್ಞಾಚಕ್ಷು ನರಾಧಿಪನು ಕುರುಡನಾಗಿ ಹುಟ್ಟಿದನು.
01061079a ಅತ್ರೇಸ್ತು ಸುಮಹಾಭಾಗಂ ಪುತ್ರಂ ಪುತ್ರವತಾಂ ವರಂ।
01061079c ವಿದುರಂ ವಿದ್ಧಿ ಲೋಕೇಽಸ್ಮಿಂಜಾತಂ ಬುದ್ಧಿಮತಾಂ ವರಂ।।
ಈ ಲೋಕದಲ್ಲಿ ಹುಟ್ಟಿದ ಬದ್ಧಿವಂತರಲ್ಲೆಲ್ಲಾ ಶ್ರೇಷ್ಠ ವಿದುರನು ಪುತ್ರವಂತರಲ್ಲೆಲ್ಲಾ ಶ್ರೇಷ್ಠ ಅತ್ರಿಯ ಸುಮಹಾಭಾಗ ಪುತ್ರನೆಂದು ತಿಳಿ.
01061080a ಕಲೇರಂಶಾತ್ತು ಸಂಜಜ್ಞೇ ಭುವಿ ದುರ್ಯೋಧನೋ ನೃಪಃ।
01061080c ದುರ್ಬುದ್ಧಿರ್ದುರ್ಮತಿಶ್ಚೈವ ಕುರೂಣಾಮಯಶಸ್ಕರಃ।।
ದುರ್ಬುದ್ಧಿಯೂ ದುರ್ಮತಿಯೂ, ಕುರುಗಳನ್ನು ಅಪಕೀರ್ತಿಗೊಳಿಸಿದ ನೃಪ ದುರ್ಯೋಧನನು ಭುವಿಯಲ್ಲಿ ಕಲಿಯ ಅಂಶದಿಂದ ಜನಿಸಿದನು.
01061081a ಜಗತೋ ಯಃ ಸ ಸರ್ವಸ್ಯ ವಿದ್ವಿಷ್ಟಃ ಕಲಿಪೂರುಷಃ।
01061081c ಯಃ ಸರ್ವಾಂ ಘಾತಯಾಮಾಸ ಪೃಥಿವೀಂ ಪುರುಷಾಧಮಃ।
01061081e ಯೇನ ವೈರಂ ಸಮುದ್ದೀಪ್ತಂ ಭೂತಾಂತಕರಣಂ ಮಹತ್।।
ಜಗತ್ತಿನ ಸರ್ವಸ್ವವನ್ನು ನಾಶಪಡಿಸಿದ ಆ ಕಲಿಪುರುಷ ಪುರುಷಾಧಮನು ಪೃಥ್ವಿಯ ಸರ್ವವನ್ನೂ ಸಂಹರಿಸಿದನು. ಅವನಿಂದ ಕಿಚ್ಚೆಬ್ಬಿಸಿದ ವೈರದ ಮಹಾ ಬೆಂಕಿಯು ಸರ್ವ ಭೂತಗಳ ಅಂತ್ಯಕ್ಕೆ ಕಾರಣವಾಯಿತು.
01061082a ಪೌಲಸ್ತ್ಯಾ ಭ್ರಾತರಃ ಸರ್ವೇ ಜಜ್ಞಿರೇ ಮನುಜೇಷ್ವಿಹ।
01061082c ಶತಂ ದುಃಶಾಸನಾದೀನಾಂ ಸರ್ವೇಷಾಂ ಕ್ರೂರಕರ್ಮಣಾಂ।।
01061083a ದುರ್ಮುಖೋ ದುಃಸಹಶ್ಚೈವ ಯೇ ಚಾನ್ಯೇ ನಾನುಶಬ್ದಿತಾಃ।
01061083c ದುರ್ಯೋಧನಸಹಾಯಾಸ್ತೇ ಪೌಲಸ್ತ್ಯಾ ಭರತರ್ಷಭ।।
ಪುಲಸ್ತ್ಯನ ಪುತ್ರರೆಲ್ಲರೂ ಇಲ್ಲಿ ಮನುಷ್ಯರೊಡನೆ ದುಃಶಾಸನನೇ ಮೊದಲಾಗಿ ದುರ್ಮುಖ, ದುಃಸಹ ಮತ್ತು ಇಲ್ಲಿ ಹೆಸರಿಸದೇ ಇದ್ದ ಅವನ ಇತರ ನೂರು ಸಹೋದರರಾಗಿ ಜನಿಸಿದರು. ಭರತರ್ಷಭ! ಎಲ್ಲರೂ ಕ್ರೂರಕರ್ಮಿಗಳಾಗಿದ್ದು ದುರ್ಯೋಧನನ ಸಹಾಯಕ್ಕೆಂದು ಜನಿಸಿದ್ದ ಪೌಲಸ್ತ್ಯರು.
01061084a ಧರ್ಮಸ್ಯಾಂಶಂ ತು ರಾಜಾನಂ ವಿದ್ಧಿ ರಾಜನ್ಯುದಿಷ್ಠಿರಂ।
01061084c ಭೀಮಸೇನಂ ತು ವಾತಸ್ಯ ದೇವರಾಜಸ್ಯ ಚಾರ್ಜುನಂ।।
ರಾಜನ್! ರಾಜ ಯುಧಿಷ್ಠಿರನು ಧರ್ಮ, ಭೀಮಸೇನನು ವಾಯು ಮತ್ತು ಅರ್ಜುನನು ದೇವರಾಜನ ಅಂಶಗಳೆಂದು ತಿಳಿ.
01061085a ಅಶ್ವಿನೋಸ್ತು ತಥೈವಾಂಶೌ ರೂಪೇಣಾಪ್ರತಿಮೌ ಭುವಿ।
01061085c ನಕುಲಃ ಸಹದೇವಶ್ಚ ಸರ್ವಲೋಕಮನೋಹರೌ।।
ಹಾಗೆಯೇ ಭೂಮಿಯಲ್ಲಿ ರೂಪದಲ್ಲಿ ಅಪ್ರತಿಮ, ಸರ್ವಲೋಕಮನೋಹರ ನಕುಲ ಸಹದೇವರು ಅಶ್ವಿನೀ ದೇವತೆಗಳ ಅಂಶಗಳು.
01061086a ಯಃ ಸುವರ್ಚಾ ಇತಿ ಖ್ಯಾತಃ ಸೋಮಪುತ್ರಃ ಪ್ರತಾಪವಾನ್।
01061086c ಅಭಿಮನ್ಯುರ್ಬೃಹತ್ಕೀರ್ತಿರರ್ಜುನಸ್ಯ ಸುತೋಽಭವತ್।।
ಪ್ರತಾಪವಾನ್, ಸುವರ್ಚನೆಂದು ಖ್ಯಾತ ಸೋಮಪುತ್ರನು ಅರ್ಜುನನ ಬೃಹತ್ಕೀರ್ತಿವಂತ ಮಗನಾಗಿ ಜನಿಸಿದನು.
01061087a ಅಗ್ನೇರಂಶಂ ತು ವಿದ್ಧಿ ತ್ವಂ ಧೃಷ್ಟದ್ಯುಮ್ನಂ ಮಹಾರಥಂ।
01061087c ಶಿಖಂಡಿನಮಥೋ ರಾಜನ್ ಸ್ತ್ರೀಪುಂಸಂ ವಿದ್ಧಿ ರಾಕ್ಷಸಂ।।
ರಾಜನ್! ಮಹಾರಥಿ ದೃಷ್ಟಧ್ಯುಮ್ನನು ಅಗ್ನಿಯ ಅಂಶವೆಂದು ತಿಳಿ. ಮೊದಲು ಸ್ತ್ರೀಯಾಗಿ ಹುಟ್ಟಿದ್ದ ಶಿಖಂಡಿಯು ರಾಕ್ಷಸನ ಅಂಶವೆಂದು ತಿಳಿ.
01061088a ದ್ರೌಪದೇಯಾಶ್ಚ ಯೇ ಪಂಚ ಬಭೂವುರ್ಭರತರ್ಷಭ।
01061088c ವಿಶ್ವೇದೇವಗಣಾನ್ರಾಜಂಸ್ತಾನ್ವಿದ್ಧಿ ಭರತರ್ಷಭ।।
ರಾಜನ್! ಭರತರ್ಷಭ! ದ್ರೌಪತಿಯ ಐವರು ಮಕ್ಕಳು ವಿಶ್ವೇದೇವ ಗಣಗಳಿಂದ ಎಂದು ತಿಳಿ.
01061089a ಆಮುಕ್ತಕವಚಃ ಕರ್ಣೋ ಯಸ್ತು ಜಜ್ಞೇ ಮಹಾರಥಃ।
01061089c ದಿವಾಕರಸ್ಯ ತಂ ವಿದ್ಧಿ ದೇವಸ್ಯಾಂಶಮನುತ್ತಮಂ।।
ಆಮುಕ್ತಕವಚ ಮತ್ತು ಕುಂಡಲಗಳೊಂದಿಗೆ ಜನಿಸಿದ ಮಹಾರಥಿಯು ದೇವತೆ ದಿವಾಕರನ ಅನುತ್ತಮ ಅಂಶದಿಂದ ಎಂದು ತಿಳಿ.
01061090a ಯಸ್ತು ನಾರಾಯಣೋ ನಾಮ ದೇವದೇವಃ ಸನಾತನಃ।
01061090c ತಸ್ಯಾಂಶೋ ಮಾನುಷೇಷ್ವಾಸೀದ್ವಾಸುದೇವಃ ಪ್ರತಾಪವಾನ್।।
ನಾರಾಯಣನೆಂಬ ಹೆಸರಿನ ಯಾವ ಸನಾತನ ದೇವದೇವನಿದ್ದಾನೋ ಅವನ ಅಂಶವೇ ಮನುಷ್ಯರಲ್ಲಿ ಹುಟ್ಟಿದ ಪ್ರತಾಪಿ ವಾಸುದೇವ.
01061091a ಶೇಷಸ್ಯಾಂಶಸ್ತು ನಾಗಸ್ಯ ಬಲದೇವೋ ಮಹಾಬಲಃ।
01061091c ಸನತ್ಕುಮಾರಂ ಪ್ರದ್ಯುಮ್ನಂ ವಿದ್ಧಿ ರಾಜನ್ಮಹೌಜಸಂ।।
ಮಹಾಬಲಿ ಬಲದೇವನು ನಾಗ ಶೇಷನ ಅಂಶ ಮತ್ತು ರಾಜನ್! ಮಹೌಜಸ ಪ್ರದ್ಯುಮ್ನನು ಸನತ್ಕುಮಾರ ಎಂದು ತಿಳಿ.
01061092a ಏವಮನ್ಯೇ ಮನುಷ್ಯೇಂದ್ರ ಬಹವೋಽಮ್ಶಾ ದಿವೌಕಸಾಂ।
01061092c ಜಜ್ಞಿರೇ ವಸುದೇವಸ್ಯ ಕುಲೇ ಕುಲವಿವರ್ಧನಾಃ।।
ಈ ರೀತಿ ದಿವೌಕಸರ ಬಹಳಷ್ಟು ಅಂಶಗಳು ವಾಸುದೇವನ ಕುಲದಲ್ಲಿ ಅನ್ಯ ಕುಲವಿವರ್ಧನ ಮನುಷ್ಯೇಂದ್ರರಾಗಿ ಜನಿಸಿದರು.
01061093a ಗಣಸ್ತ್ವಪ್ಸರಸಾಂ ಯೋ ವೈ ಮಯಾ ರಾಜನ್ಪ್ರಕೀರ್ತಿತಃ।
01061093c ತಸ್ಯ ಭಾಗಃ ಕ್ಷಿತೌ ಜಜ್ಞೇ ನಿಯೋಗಾದ್ವಾಸವಸ್ಯ ಚ।।
ರಾಜನ್! ವಾಸವನ ನಿಯೋಗದಂತೆ ಈ ಮೊದಲೇ ನಾನು ವಿವರಿಸಿದ ಅಪ್ಸರಗಣಗಳ ಅಂಶಗಳೂ ಕ್ಷಿತಿಯಲ್ಲಿ ಜನ್ಮತಾಳಿದವು.
01061094a ತಾನಿ ಷೋಡಶ ದೇವೀನಾಂ ಸಹಸ್ರಾಣಿ ನರಾಧಿಪ।
01061094c ಬಭೂವುರ್ಮಾನುಷೇ ಲೋಕೇ ನಾರಾಯಣಪರಿಗ್ರಹಃ।।
ನರಾಧಿಪ! ಅವರೆಲ್ಲರೂ ಹದಿನಾರು ಸಾವಿರ ದೇವಿಯರಾಗಿ ಮನುಷ್ಯಲೋಕದಲ್ಲಿ ನಾರಾಯಣನ ಪತ್ನಿಯರಾಗಿ ಜನಿಸಿದರು.
01061095a ಶ್ರಿಯಸ್ತು ಭಾಗಃ ಸಂಜಜ್ಞೇ ರತ್ಯರ್ಥಂ ಪೃಥಿವೀತಲೇ।
01061095c ದ್ರುಪದಸ್ಯ ಕುಲೇ ಕನ್ಯಾ ವೇದಿಮಧ್ಯಾದನಿಂದಿತಾ।।
ಅನಿಂದಿತಾ ಶ್ರೀಯ ಒಂದಂಶವು ಭೂಮಿಯಮೇಲೆ ಆಡಲೋಸುಗ ದ್ರುಪದನ ಕುಲದಲ್ಲಿ ಮಗಳಾಗಿ ವೇದಿಮಧ್ಯದಿಂದ ಜನಿಸಿತು.
01061096a ನಾತಿಹೃಸ್ವಾ ನ ಮಹತೀ ನೀಲೋತ್ಪಲಸುಗಂಧಿನೀ।
01061096c ಪದ್ಮಾಯತಾಕ್ಷೀ ಸುಶ್ರೋಣೀ ಅಸಿತಾಯತಮೂರ್ಧಜಾ।।
01061097a ಸರ್ವಲಕ್ಷಣಸಂಪನ್ನಾ ವೈಡೂರ್ಯಮಣಿಸನ್ನಿಭಾ।
01061097c ಪಂಚಾನಾಂ ಪುರುಷೇಂದ್ರಾಣಾಂ ಚಿತ್ತಪ್ರಮಥಿನೀ ರಹಃ।।
ಅವಳು ಸಣ್ಣವಳಾಗಿಯೂ ಇರಲಿಲ್ಲ. ದೊಡ್ಡವಳಾಗಿಯೂ ಇರಲಿಲ್ಲ. ನೀಲಿಯ ಕಮಲದ ಸುಗಂಧವನ್ನು ಹೊಂದಿದ್ದಳು. ಪದ್ಮಾಯತಾಕ್ಷಿಯಾದ, ಸುಂದರ ಕೂದಲುಗಳನ್ನು ಹೊಂದಿದ್ದ, ದುಂಡಾಗಿರುವ ಸುಂದರ ತೊಡೆಗಳನ್ನುಳ್ಳ, ವೈಡೂರ್ಯ ಮಣಿಸನ್ನಿಭಳಾದ, ಸರ್ವಲಕ್ಷಣಸಂಪನ್ನಳಾದ ಅವಳು ಐದೂ ಪುರುಷೇಂದ್ರರ ಚಿತ್ತಗಳನ್ನು ಕಡೆಯುವಂತಿದ್ದಳು.
01061098a ಸಿದ್ಧಿರ್ಧೃತಿಶ್ಚ ಯೇ ದೇವ್ಯೌ ಪಂಚಾನಾಂ ಮಾತರೌ ತು ತೇ।
01061098c ಕುಂತೀ ಮಾದ್ರೀ ಚ ಜಜ್ಞಾತೇ ಮತಿಸ್ತು ಸುಬಲಾತ್ಮಜಾ।।
ಸಿದ್ಧಿ ಮತ್ತು ಧೃತಿ ದೇವಿಯರು ಆ ಐವರುಗಳ ತಾಯಿಯರಾದ ಕುಂತಿ ಮತ್ತು ಮಾದ್ರಿಯರಾಗಿ ಜನಿಸಿದರು. ದೇವಿ ಮತಿಯು ಸುಬಲನ ಮಗಳಾಗಿ ಜನಿಸಿದಳು.
01061099a ಇತಿ ದೇವಾಸುರಾಣಾಂ ತೇ ಗಂಧರ್ವಾಪ್ಸರಸಾಂ ತಥಾ।
01061099c ಅಂಶಾವತರಣಂ ರಾಜನ್ರಾಕ್ಷಸಾನಾಂ ಚ ಕೀರ್ತಿತಂ।।
ರಾಜನ್! ಈ ರೀತಿ ದೇವಾಸುರರು ಮತ್ತು ಗಂಧರ್ವ ಅಪ್ಸರೆಯರು ಹಾಗೂ ರಾಕ್ಷಸರ ಅಂಶಾವತರಣವನ್ನು ಹೇಳಿದ್ದೇನೆ.
01061100a ಯೇ ಪೃಥಿವ್ಯಾಂ ಸಮುದ್ಭೂತಾ ರಾಜಾನೋ ಯುದ್ಧದುರ್ಮದಾಃ।
01061100c ಮಹಾತ್ಮಾನೋ ಯದೂನಾಂ ಚ ಯೇ ಜಾತಾ ವಿಪುಲೇ ಕುಲೇ।।
ಈ ಪೃಥ್ವಿಯಲ್ಲಿ ಸಮುದ್ಭೂತ ಯುದ್ಧದುರ್ಮದ ಯದುವಿನ ಕುಲದಲ್ಲಿ ಹುಟ್ಟಿದ ಹಲವಾರು ಮಹಾತ್ಮರ ಕುರಿತು ಹೇಳಿದ್ದೇನೆ.
01061101a ಧನ್ಯಂ ಯಶಸ್ಯಂ ಪುತ್ರೀಯಮಾಯುಷ್ಯಂ ವಿಜಯಾವಹಂ।
01061101c ಇದಮಂಶಾವತರಣಂ ಶ್ರೋತವ್ಯಮನಸೂಯತಾ।।
ಈ ಅಂಶಾವತರಣವನ್ನು ಗಮನವಿಟ್ಟು ಯಾರು ಕೇಳುತ್ತಾರೋ ಅವರಿಗೆ ಧನ, ಯಶಸ್ಸು, ಪುತ್ರರು, ಆಯುಷ್ಯ, ಮತ್ತು ವಿಜಯಗಳು ದೊರೆಯುತ್ತವೆ.
01061102a ಅಂಶಾವತರಣಂ ಶ್ರುತ್ವಾ ದೇವಗಂಧರ್ವರಕ್ಷಸಾಂ।
01061102c ಪ್ರಭವಾಪ್ಯಯವಿತ್ಪ್ರಾಜ್ಞೋ ನ ಕೃಚ್ಛ್ರೇಷ್ವವಸೀದತಿ।।
ದೇವಗಂಧರ್ವ ರಾಕ್ಷಸರ ಅಂಶಾವತರಣವನ್ನು ಕೇಳಿ ಸೃಷ್ಟಿಯ ಗುಟ್ಟನ್ನು ಅರಿತವರು ಯಾವ ದೊಡ್ಡ ಕಷ್ಟವನ್ನೂ ಪಾರುಮಾಡ ಬಲ್ಲವರಾಗುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ಅಂಶಾವತರಣಸಮಾಪ್ತೌ ಏಕಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣಪರ್ವದಲ್ಲಿ ಅಂಶಾವತರಣಸಮಾಪ್ತಿ ಎನ್ನುವ ಅರವತ್ತೊಂದನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-6/100, ಅಧ್ಯಾಯಗಳು-61/1995, ಶ್ಲೋಕಗಳು-2305/23784