ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆದಿವಂಶಾವತರಣ ಪರ್ವ
ಅಧ್ಯಾಯ 58
ಸಾರ
ಪರಶುರಾಮನು ಕ್ಷತ್ರಿಯರನ್ನು ನಾಶಗೊಳಿಸಿದ ನಂತರ ಬ್ರಾಹ್ಮಣರು ಕ್ಷತ್ರಾಣಿಯರಲ್ಲಿ ಕ್ಷತ್ರಿಯರನ್ನು ಹುಟ್ಟಿಸಿದುದು (1-25). ಅಸುರರು ಕ್ಷತ್ರಿಯರಾಗಿ ಜನಿಸುವುದು (26-35). ಮೊರೆಹೊಕ್ಕ ಭೂಮಿಗೆ ನಾರಾಯಣನು ಆಶ್ವಾಸನೆ ನೀಡುವುದು (36-51).
01058001 ಜನಮೇಜಯ ಉವಾಚ।
01058001a ಯ ಏತೇ ಕೀರ್ತಿತಾ ಬ್ರಹ್ಮನ್ಯೇ ಚಾನ್ಯೇ ನಾನುಕೀರ್ತಿತಾಃ।
01058001c ಸಮ್ಯಕ್ತಾಂಶ್ರೋತುಮಿಚ್ಛಾಮಿ ರಾಜ್ಞಶ್ಚಾನ್ಯಾನ್ಸುವರ್ಚಸಃ।।
ಜನಮೇಜಯನು ಹೇಳಿದನು: “ಬ್ರಾಹ್ಮಣ! ನೀನು ಕೆಲವರ ಕುರಿತು ಮಾತ್ರ ಹೇಳಿದ್ದೀಯೆ ಮತ್ತು ಇನ್ನು ಕೆಲವರ ಕುರಿತು ಹೇಳಿಲ್ಲ. ನಾನು ಆ ಎಲ್ಲ ಸುವರ್ಚಸ ರಾಜರ ಹೆಸರುಗಳನ್ನು ಕೇಳಲು ಬಯಸುತ್ತೇನೆ.
01058002a ಯದರ್ಥಮಿಹ ಸಂಭೂತಾ ದೇವಕಲ್ಪಾ ಮಹಾರಥಾಃ।
01058002c ಭುವಿ ತನ್ಮೇ ಮಹಾಭಾಗ ಸಮ್ಯಗಾಖ್ಯಾತುಮರ್ಹಸಿ।।
ಮಹಾಭಾಗ! ಈ ಎಲ್ಲ ದೇವಕಲ್ಪ ಮಹಾರಥರು ಯಾವ ಕಾರಣಕ್ಕಾಗಿ ಭುವಿಯಲ್ಲಿ ಜನ್ಮತಳೆದರು ಎನ್ನುವುದನ್ನು ಸಂಪೂರ್ಣವಾಗಿ ಹೇಳು.”
01058003 ವೈಶಂಪಾಯನ ಉವಾಚ।
01058003a ರಹಸ್ಯಂ ಖಲ್ವಿದಂ ರಾಜನ್ದೇವಾನಾಮಿತಿ ನಃ ಶ್ರುತಂ।
01058003c ತತ್ತು ತೇ ಕಥಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ।।
ವೈಶಂಪಾಯನನು ಹೇಳಿದನು: “ರಾಜನ್! ಇದು ದೇವತೆಗಳಿಗೂ ತಿಳಿಯದಿರುವಂತ ರಹಸ್ಯ ಎಂದು ಕೇಳಿದ್ದೇನೆ. ಆದರೂ ಆ ಸ್ವಯಂಭುವಿಗೆ ನಮಸ್ಕರಿಸಿ ನಿನಗೆ ಹೇಳುತ್ತೇನೆ.
01058004a ತ್ರಿಃಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪುರಾ।
01058004c ಜಾಮದಗ್ನ್ಯಸ್ತಪಸ್ತೇಪೇ ಮಹೇಂದ್ರೇ ಪರ್ವತೋತ್ತಮೇ।।
ಹಿಂದೆ ಜಾಮದಗ್ನಿಯು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಪರ್ವತೋತ್ತಮ ಮಹೇಂದ್ರದ ಮೇಲೆ ತಪಸ್ಸು ಮಾಡುತ್ತಿದ್ದನು.
01058005a ತದಾ ನಿಃಕ್ಷತ್ರಿಯೇ ಲೋಕೇ ಭಾರ್ಗವೇಣ ಕೃತೇ ಸತಿ।
01058005c ಬ್ರಾಹ್ಮಣಾನ್ಕ್ಷತ್ರಿಯಾ ರಾಜನ್ಗರ್ಭಾರ್ಥಿನ್ಯೋಽಭಿಚಕ್ರಮುಃ।।
ರಾಜನ್! ಭಾರ್ಗವನಿಂದ ಲೋಕಗಳಲ್ಲಿ ಕ್ಷತ್ರಿಯರೇ ಇಲ್ಲದಂತಾದಾಗ ಕ್ಷಾತ್ರಿಣಿಯರು ಬ್ರಾಹ್ಮಣರಲ್ಲಿ ಗರ್ಭವನ್ನು ಬೇಡಿದರು.
01058006a ತಾಭಿಃ ಸಹ ಸಮಾಪೇತುರ್ಬ್ರಾಹ್ಮಣಾಃ ಸಂಶಿತವ್ರತಾಃ।
01058006c ಋತಾವೃತೌ ನರವ್ಯಾಘ್ರ ನ ಕಾಮಾನ್ನಾನೃತೌ ತಥಾ।।
ನರವ್ಯಾಘ್ರ! ಆಗ ಸಂಶಿತವ್ರತ ಬ್ರಾಹ್ಮಣರು ಋತುಮತಿಯರಾಗಿದ್ದಾಗ ಮಾತ್ರ ಸಂಭೋಗ ಮಾಡಿದರು. ಕಾಮಕ್ಕಾಗಿ ಎಂದೂ ಕೂಡಲಿಲ್ಲ.
01058007a ತೇಭ್ಯಸ್ತು ಲೇಭಿರೇ ಗರ್ಭಾನ್ ಕ್ಷತ್ರಿಯಾಸ್ತಾಃ ಸಹಸ್ರಶಃ।
01058007c ತತಃ ಸುಷುವಿರೇ ರಾಜನ್ ಕ್ಷತ್ರಿಯಾನ್ವೀರ್ಯಸಮ್ಮತಾನ್।
01058007e ಕುಮಾರಾಂಶ್ಚ ಕುಮಾರೀಶ್ಚ ಪುನಃ ಕ್ಷತ್ರಾಭಿವೃದ್ಧಯೇ।।
ಈ ರೀತಿಯ ಸಂಬಂಧದಿಂದ ಕ್ಷಾತ್ರಿಣಿಯರು ಸಹಸ್ರಾರು ಸಂಖ್ಯೆಯಲ್ಲಿ ಗರ್ಭಧರಿಸಿದರು ಮತ್ತು ಕ್ಷತ್ರಿಯ ವೀರಸಮನ್ವಿತ ಕುಮಾರ ಕುಮಾರಿಯರಿಗೆ ಜನ್ಮವಿತ್ತು ಪುನಃ ಕ್ಷತ್ರಿಯರ ಅಭಿವೃದ್ದಿಯಾಯಿತು.
01058008a ಏವಂ ತದ್ಬ್ರಾಹ್ಮಣೈಃ ಕ್ಷತ್ರಂ ಕ್ಷತ್ರಿಯಾಸುತಪಸ್ವಿಭಿಃ।
01058008c ಜಾತಮೃಧ್ಯತ ಧರ್ಮೇಣ ಸುದೀರ್ಘೇಣಾಯುಷಾನ್ವಿತಂ।
01058008e ಚತ್ವಾರೋಽಪಿ ತದಾ ವರ್ಣಾ ಬಭೂವುರ್ಬ್ರಾಹ್ಮಣೋತ್ತರಾಃ।।
ಈ ರೀತಿ ಸುತಪಸ್ವಿ ಬ್ರಾಹ್ಮಣರು ಮತ್ತು ಕ್ಷಾತ್ರಿಣಿಯರಿಂದ ಕ್ಷತ್ರಿಯಕುಲವು ವೃದ್ಧಿಯಾಯಿತು. ಹೊಸ ಪೀಳಿಗೆಯು ಧರ್ಮ, ಸುದೀರ್ಘಾಯಸ್ಸುಗಳನ್ನು ಹೊಂದಿದ್ದು ಬ್ರಾಹ್ಮಣರೇ ಮೊದಲಾದ ನಾಲ್ಕು ವರ್ಣಗಳ ಪುನಃಸ್ಥಾಪನೆಯಾಯಿತು.
01058009a ಅಭ್ಯಗಚ್ಛನ್ನೃತೌ ನಾರೀಂ ನ ಕಾಮಾನ್ನಾನೃತೌ ತಥಾ।
01058009c ತಥೈವಾನ್ಯಾನಿ ಭೂತಾನಿ ತಿರ್ಯಗ್ಯೋನಿಗತಾನ್ಯಪಿ।
01058009e ಋತೌ ದಾರಾಂಶ್ಚ ಗಚ್ಛಂತಿ ತದಾ ಸ್ಮ ಭರತರ್ಷಭ।।
ನಾರಿಯರು ಋತುಮತಿಯರಾಗಿದ್ದಾಗ ಮಾತ್ರ ಹೋಗುತ್ತಿದ್ದರೇ ಹೊರತು ಋತುಮತಿಯಾಗಿರದಿದ್ದಾಗ ಅಥವಾ ಕಾಮಕ್ಕೋಸ್ಕರ ಹೋಗುತ್ತಿರಲಿಲ್ಲ.
01058010a ತತೋಽವರ್ಧಂತ ಧರ್ಮೇಣ ಸಹಸ್ರಶತಜೀವಿನಃ।
01058010c ತಾಃ ಪ್ರಜಾಃ ಪೃಥಿವೀಪಾಲ ಧರ್ಮವ್ರತಪರಾಯಣಾಃ।
01058010e ಆಧಿಭಿರ್ವ್ಯಾಧಿಭಿಶ್ಚೈವ ವಿಮುಕ್ತಾಃ ಸರ್ವಶೋ ನರಾಃ।।
ಈ ರೀತಿ ಧರ್ಮಪ್ರಕಾರ ಸಹಸ್ರಶತ ಸಂಖ್ಯೆಗಳಲ್ಲಿ ಧರ್ಮವ್ರತಪರಾಯಣ ಪೃಥ್ವೀಪಾಲರು ಜನಿಸಿದರು ಮತ್ತು ವೃದ್ಧಿಸಿದರು. ಸರ್ವ ನರರೂ ದುಃಖ ಮತ್ತು ಅನಾರೋಗ್ಯದಿಂದ ವಿಮುಕ್ತರಾಗಿದ್ದರು.
01058011a ಅಥೇಮಾಂ ಸಾಗರಾಪಾಂಗಾಂ ಗಾಂ ಗಜೇಂದ್ರಗತಾಖಿಲಾಂ।
01058011c ಅಧ್ಯತಿಷ್ಠತ್ಪುನಃ ಕ್ಷತ್ರಂ ಸಶೈಲವನಕಾನನಾಂ।।
ಗಜೇಂದ್ರನ ನಡೆಯ ಸಾಗರಗಳನ್ನು ಗಡಿಯಾಗಿ ಹೊಂದಿದ ಪೃಥ್ವಿಯು ಮತ್ತೊಮ್ಮೆ ಗಿರಿವನಕಾನನಗಳ ಸಮೇತ ಎದ್ದುನಿಂತಂತೆ ಆಯಿತು.
01058012a ಪ್ರಶಾಸತಿ ಪುನಃ ಕ್ಷತ್ರೇ ಧರ್ಮೇಣೇಮಾಂ ವಸುಂಧರಾಂ।
01058012c ಬ್ರಾಹ್ಮಣಾದ್ಯಾಸ್ತದಾ ವರ್ಣಾ ಲೇಭಿರೇ ಮುದಮುತ್ತಮಾಂ।।
ಪುನಃ ಕ್ಷತ್ರಿಯರಿಂದ ಧರ್ಮಪೂರ್ವಕವಾಗಿ ಆಳಲ್ಪಟ್ಟ ವಸುಂಧರೆಯಲ್ಲಿ ಬ್ರಾಹ್ಮಣರೇ ಮೊದಲಾದ ಅನ್ಯ ವರ್ಣದವರೂ ಉತ್ತಮ ಸಂತೋಷವನ್ನು ಹೊಂದಿದ್ದರು.
01058013a ಕಾಮಕ್ರೋಧೋದ್ಭವಾಂದೋಷಾನ್ನಿರಸ್ಯಚ ನರಾಧಿಪಾಃ।
01058013c ದಂಡಂ ದಂಡ್ಯೇಷು ಧರ್ಮೇಣ ಪ್ರಣಯಂತೋಽನ್ವಪಾಲಯನ್।।
ನರಾಧಿಪರೆಲ್ಲರೂ ಕಾಮ-ಕ್ರೋಧಗಳಿಂದ ಉಂಟಾಗಬಹುದಾದ ದೋಷಗಳನ್ನೆಲ್ಲ ತೊರೆದು, ದಂಡಿಸಬೇಕಾದವರಿಗೆ ದಂಡಿಸುತ್ತಾ ಧರ್ಮದಿಂದ ಭೂಮಿಯನ್ನು ಪಾಲಿಸಿದರು.
01058014a ತಥಾ ಧರ್ಮಪರೇ ಕ್ಷತ್ರೇ ಸಹಸ್ರಾಕ್ಷಃ ಶತಕ್ರತುಃ।
01058014c ಸ್ವಾದು ದೇಶೇ ಚ ಕಾಲೇ ಚ ವವರ್ಷಾಪ್ಯಾಯಯನ್ಪ್ರಜಾಃ।।
ಈ ರೀತಿ ಕ್ಷತ್ರಿಯರೆಲ್ಲರೂ ಧರ್ಮಪರರಾಗಿರುವಾಗ ಸಹಸ್ರಾಕ್ಷ ಶತಕ್ರತುವು ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸಿ ದೇಶದ ಪ್ರಜೆಗಳನ್ನೆಲ್ಲಾ ಸುಖದಿಂದ ಇರಿಸುತ್ತಿದ್ದನು.
01058015a ನ ಬಾಲ ಏವ ಮ್ರಿಯತೇ ತದಾ ಕಶ್ಚಿನ್ನರಾಧಿಪ।
01058015c ನ ಚ ಸ್ತ್ರಿಯಂ ಪ್ರಜಾನಾತಿ ಕಶ್ಚಿದಪ್ರಾಪ್ತಯೌವನಃ।।
ನರಾಧಿಪ! ಯಾವ ಬಾಲಕನೂ ಮರಣಹೊಂದುತ್ತಿರಲಿಲ್ಲ, ಮತ್ತು ಯೌವನ ಪ್ರಾಪ್ತವಾಗದೇ ಯಾವ ಸ್ತ್ರೀಯೂ ಮಗುವಿನ ತಾಯಿಯಾಗುತ್ತಿರಲಿಲ್ಲ.
01058016a ಏವಮಾಯುಷ್ಮತೀಭಿಸ್ತು ಪ್ರಜಾಭಿರ್ಭರತರ್ಷಭ।
01058016c ಇಯಂ ಸಾಗರಪರ್ಯಂತಾ ಸಮಾಪೂರ್ಯತ ಮೇದಿನೀ।।
ಭರತರ್ಷಭ! ಈ ರೀತಿ ಸಾಗರಪರ್ಯಂತವೂ ಈ ಮೇದಿನಿಯು ದೀರ್ಘಾಯುಷಿ ಪ್ರಜೆಗಳಿಂದ ತುಂಬಿತ್ತು.
01058017a ಈಜಿರೇ ಚ ಮಹಾಯಜ್ಞೈಃ ಕ್ಷತ್ರಿಯಾ ಬಹುದಕ್ಷಿಣೈಃ।
01058017c ಸಾಂಗೋಪನಿಷದಾನ್ವೇದಾನ್ವಿಪ್ರಾಶ್ಚಾಧೀಯತೇ ತದಾ।।
ಕ್ಷತ್ರಿಯರು ಬಹುದಕ್ಷಿಣೆಗಳನ್ನಿತ್ತು ಮಹಾ ಯಜ್ಞಗಳನ್ನು ನಡೆಸಿದರು ಮತ್ತು ವಿಪ್ರರು ಉಪನಿಷತ್ ಮೊದಲಾದ ಅಂಗಗಳನ್ನೊಡಗೂಡಿದ ವೇದಗಳನ್ನು ಅಭ್ಯಾಸ ಮಾಡಿದರು.
01058018a ನ ಚ ವಿಕ್ರೀಣತೇ ಬ್ರಹ್ಮ ಬ್ರಾಹ್ಮಣಾಃ ಸ್ಮ ತದಾ ನೃಪ।
01058018c ನ ಚ ಶೂದ್ರಸಮಾಭ್ಯಾಶೇ ವೇದಾನುಚ್ಛಾರಯಂತ್ಯುತ।।
ನೃಪ! ಆಗ ಯಾವ ಬ್ರಾಹ್ಮಣನೂ ಬ್ರಹ್ಮವಿದ್ಯೆಯನ್ನು ಮಾರಾಟಮಾಡುತ್ತಿರಲಿಲ್ಲ ಮತ್ತು ಶೂದ್ರರ ಎದುರಿನಲ್ಲಿ ವೇದೋಚ್ಛಾರ ಮಾಡುತ್ತಿರಲಿಲ್ಲ.
01058019a ಕಾರಯಂತಃ ಕೃಷಿಂ ಗೋಭಿಸ್ತಥಾ ವೈಶ್ಯಾಃ ಕ್ಷಿತಾವಿಹ।
01058019c ನ ಗಾಮಯುಂಜಂತ ಧುರಿ ಕೃಶಾಂಗಾಶ್ಚಾಪ್ಯಜೀವಯನ್।।
ವೈಶ್ಯರು ಈ ಕ್ಷಿತಿಯಲ್ಲಿ ಗೋವುಗಳ ಮೂಲಕ ಕೃಷಿ ಮಾಡಿದರು. ಆದರೆ ಬಡಕಲು ಗೋವುಗಳನ್ನು ಕಟ್ಟುತ್ತಿರಲಿಲ್ಲ ಮತ್ತು ಕೃಶಗೋವುಗಳಿಗೆ ಸಾಕಷ್ಟು ಆಹಾರವನ್ನು ಕೊಡುತ್ತಿದ್ದರು.
01058020a ಫೇನಪಾಂಶ್ಚ ತಥಾ ವತ್ಸಾನ್ನ ದುಹಂತಿ ಸ್ಮ ಮಾನವಾಃ।
01058020c ನ ಕೂಟಮಾನೈರ್ವಣಿಜಃ ಪಣ್ಯಂ ವಿಕ್ರೀಣತೇ ತದಾ।।
ಕರುಗಳು ತಾಯಿಯ ಹಾಲನ್ನು ಮಾತ್ರ ಕುಡಿದು ಜೀವಿಸುವವರೆಗೆ ನರರು ಹಾಲನ್ನು ಕರೆಯುತ್ತಿರಲಿಲ್ಲ. ಯಾವ ವರ್ತಕನೂ ಸುಳ್ಳು ತಕ್ಕಡಿಯನ್ನು ಬಳಸಿ ಮಾರುತ್ತಿರಲಿಲ್ಲ.
01058021a ಕರ್ಮಾಣಿ ಚ ನರವ್ಯಾಘ್ರ ಧರ್ಮೋಪೇತಾನಿ ಮಾನವಾಃ।
01058021c ಧರ್ಮಮೇವಾನುಪಶ್ಯಂತಶ್ಚಕ್ರುರ್ಧರ್ಮಪರಾಯಣಾಃ।।
ನರವ್ಯಾಘ್ರ! ಮಾನವರು ಧರ್ಮದಮೇಲೇ ದೃಷ್ಠಿಯನ್ನಿಟ್ಟುಕೊಂಡು ಧರ್ಮಪರಾಯಣರಾಗಿ ಧರ್ಮೋಪೇತ ಕರ್ಮಗಳಲ್ಲಿ ನಿರತರಾಗಿದ್ದರು.
01058022a ಸ್ವಕರ್ಮನಿರತಾಶ್ಚಾಸನ್ಸರ್ವೇ ವರ್ಣಾ ನರಾಧಿಪ।
01058022c ಏವಂ ತದಾ ನರವ್ಯಾಘ್ರ ಧರ್ಮೋ ನ ಹ್ರಸತೇ ಕ್ವ ಚಿತ್।।
ನರಾಧಿಪ! ಸರ್ವ ವರ್ಣದವರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದರು. ನರವ್ಯಾಘ್ರ! ಈ ರೀತಿ ಧರ್ಮವು ಎಂದೂ ಕುಂದಲಿಲ್ಲ.
01058023a ಕಾಲೇ ಗಾವಃ ಪ್ರಸೂಯಂತೇ ನಾರ್ಯಶ್ಚ ಭರತರ್ಷಭ।
01058023c ಫಲಂತ್ಯೃತುಷು ವೃಕ್ಷಾಶ್ಚ ಪುಷ್ಪಾಣಿ ಚ ಫಲಾನಿ ಚ।।
ಭರತರ್ಷಭ! ಗೋವು ಮತ್ತು ನಾರಿಯರು ಸಕಾಲದಲ್ಲಿ ಜನ್ಮನೀಡುತ್ತಿದ್ದರು. ಮತ್ತು ವೃಕ್ಷಗಳು ಋತುವಿಗೆ ತಕ್ಕಂತೆ ಪುಷ್ಪ-ಫಲಗಳನ್ನು ನೀಡುತ್ತಿದ್ದವು.
01058024a ಏವಂ ಕೃತಯುಗೇ ಸಮ್ಯಗ್ವರ್ತಮಾನೇ ತದಾ ನೃಪ।
01058024c ಆಪೂರ್ಯತ ಮಹೀ ಕೃತ್ಸ್ನಾ ಪ್ರಾಣಿಭಿರ್ಬಹುಭಿರ್ಭೃಶಂ।।
ನೃಪ! ಈ ರೀತಿ ಕೃತಯುಗವು ನಡೆಯುತ್ತಿರುವಾಗ ಈ ಭೂಮಿಯು ಬಹಳಷ್ಟು ಶ್ರೇಷ್ಠ ಪ್ರಾಣಿಗಳಿಂದ ತುಂಬಿಕೊಂಡಿತ್ತು.
01058025a ತತಃ ಸಮುದಿತೇ ಲೋಕೇ ಮಾನುಷೇ ಭರತರ್ಷಭ।
01058025c ಅಸುರಾ ಜಜ್ಞಿರೇ ಕ್ಷೇತ್ರೇ ರಾಜ್ಞಾಂ ಮನುಜಪುಂಗವ।।
ಭರತರ್ಷಭ! ಮನುಜಪುಂಗವ! ಮನುಷ್ಯಲೋಕವು ಸಮೃದ್ದವಾಗಿರುವಾಗ ಅಸುರರು ರಾಜ ಕ್ಷತ್ರಿಯರಲ್ಲಿ ಜನಿಸತೊಡಗಿದರು.
01058026a ಆದಿತ್ಯೈರ್ಹಿ ತದಾ ದೈತ್ಯಾ ಬಹುಶೋ ನಿರ್ಜಿತಾ ಯುಧಿ।
01058026c ಐಶ್ವರ್ಯಾದ್ ಭ್ರಂಶಿತಾಶ್ಚಾಪಿ ಸಂಬಭೂವುಃ ಕ್ಷಿತಾವಿಹ।।
ಆದಿತ್ಯರಿಂದ ಬಹಳಷ್ಟು ಬಾರಿ ಯುದ್ಧದಲ್ಲಿ ಸೋತು ಐಶ್ವರ್ಯ ವಂಚಿತ ದೈತ್ಯರು ಕ್ಷಿತಿಯಲ್ಲಿ ಅವತರಿಸಿದರು.
01058027a ಇಹ ದೇವತ್ವಮಿಚ್ಛಂತೋ ಮಾನುಷೇಷು ಮನಸ್ವಿನಃ।
1058027c ಜಜ್ಞಿರೇ ಭುವಿ ಭೂತೇಷು ತೇಷು ತೇಷ್ವಸುರಾ ವಿಭೋ।।
01058028a ಗೋಷ್ವಶ್ವೇಷು ಚ ರಾಜೇಂದ್ರ ಖರೋಷ್ಟ್ರಮಹಿಷೇಷು ಚ।
01058028c ಕ್ರವ್ಯಾದೇಷು ಚ ಭೂತೇಷು ಗಜೇಷು ಚ ಮೃಗೇಷು ಚ।।
ವಿಭೋ! ರಾಜೇಂದ್ರ! ಮನಸ್ವಿ ಮನುಷ್ಯರಲ್ಲಿ ದೇವತ್ವವನ್ನು ಬಯಸಿ ಆ ಅಸುರರು ಭೂಮಿಯ ಹಲವಷ್ಟು ಜೀವಿಗಳಲ್ಲಿ - ಗೋವುಗಳಲ್ಲಿ, ಕುದುರೆಗಳಲ್ಲಿ, ಕತ್ತೆಗಳಲ್ಲಿ, ಒಂಟೆಗಳಲ್ಲಿ, ಎಮ್ಮೆಗಳಲ್ಲಿ, ಆನೆಗಳಲ್ಲಿ, ಜಿಂಕೆಗಳಲ್ಲಿ ಮತ್ತು ಅನ್ಯ ಜೀವಿಗಳಲ್ಲಿ ಜನಿಸತೊಡಗಿದರು.
01058029a ಜಾತೈರಿಹ ಮಹೀಪಾಲ ಜಾಯಮಾನೈಶ್ಚ ತೈರ್ಮಹೀ।
01058029c ನ ಶಶಾಕಾತ್ಮನಾತ್ಮಾನಮಿಯಂ ಧಾರಯಿತುಂ ಧರಾ।।
ಮಹೀಪಾಲ! ಇದಾಗಲೇ ಹುಟ್ಟಿದ್ದ ಮತ್ತು ಇನ್ನೂ ಹುಟ್ಟುತ್ತಿದ್ದವರೆಲ್ಲರನ್ನೂ ಹೊತ್ತು ತನ್ನನ್ನು ತಾನು ಪೋಷಿಸಿಕೊಳ್ಳಲು ಮಹೀಧರೆಯು ಅಸಮರ್ಥಳಾದಳು.
01058030a ಅಥ ಜಾತಾ ಮಹೀಪಾಲಾಃ ಕೇ ಚಿದ್ಬಲಸಮನ್ವಿತಾಃ।
01058030c ದಿತೇಃ ಪುತ್ರಾ ದನೋಶ್ಚೈವ ತಸ್ಮಾಲ್ಲೋಕಾದಿಹ ಚ್ಯುತಾಃ।।
ಅವರ ಲೋಕದಿಂದ ಚ್ಯುತರಾದ ಹಲವು ದಿತಿಯ ಪುತ್ರರು ಇಲ್ಲಿ ಬಲಸಮನ್ವಿತ ಮಹೀಪಾಲರಾಗಿ ಜನಿಸಿದರು.
01058031a ವೀರ್ಯವಂತೋಽವಲಿಪ್ತಾಸ್ತೇ ನಾನಾರೂಪಧರಾ ಮಹೀಂ।
01058031c ಇಮಾಂ ಸಾಗರಪರ್ಯಂತಾಂ ಪರೀಯುರರಿಮರ್ದನಾಃ।।
ಆ ವೀರ್ಯವಂತರು ನಾನಾರೂಪಗಳನ್ನು ಧರಿಸಿ ಮಹಿಯಲ್ಲೆಲ್ಲಾ ತುಂಬಿಕೊಂಡರು. ಆ ಅರಿಮರ್ದನರು ಸಾಗರ ಪರ್ಯಂತ ಭೂಮಿಯಲ್ಲಿ ತುಂಬಿಕೊಂಡರು.
01058032a ಬ್ರಾಹ್ಮಣಾನ್ ಕ್ಷತ್ರಿಯಾನ್ವೈಶ್ಯಾಂಶೂದ್ರಾಂಶ್ಚೈವಾಪ್ಯಪೀಡಯನ್।
01058032c ಅನ್ಯಾನಿ ಚೈವ ಭೂತಾನಿ ಪೀಡಯಾಮಾಸುರೋಜಸಾ।।
ಅವರು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರನ್ನು ಪೀಡಿಸ ತೊಡಗಿದರು ಮತ್ತು ತಮ್ಮ ಅಸುರೀ ಶಕ್ತಿಯಿಂದ ಇನ್ನೂ ಅನ್ಯ ಜೀವಿಗಳನ್ನು ಪೀಡಿಸತೊಡಗಿದರು.
01058033a ತ್ರಾಸಯಂತೋ ವಿನಿಘ್ನಂತಸ್ತಾಂಸ್ತಾನ್ಭೂತಗಣಾಂಶ್ಚ ತೇ।।
01058033c ವಿಚೇರುಃ ಸರ್ವತೋ ರಾಜನ್ಮಹೀಂ ಶತಸಹಸ್ರಶಃ।।
ರಾಜನ್! ಭೂತಗಣಗಳಿಗೆ ಕಷ್ಟಗಳನ್ನೀಡುತ್ತಾ, ಅವರನ್ನು ಕೊಲ್ಲುತ್ತಾ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ಮಹಿಯ ಎಲ್ಲೆಲ್ಲೂ ಸಂಚರಿಸುತ್ತಿದ್ದರು.
01058034a ಆಶ್ರಮಸ್ಥಾನ್ಮಹರ್ಷೀಂಶ್ಚ ಧರ್ಷಯಂತಸ್ತತಸ್ತತಃ।
01058034c ಅಬ್ರಹ್ಮಣ್ಯಾ ವೀರ್ಯಮದಾ ಮತ್ತಾ ಮದಬಲೇನ ಚ।।
ವೀರ್ಯಮದ ಮತ್ತು ಮದಬಲದಿಂದ ಮತ್ತರಾದ ಆ ಅಬ್ರಾಹ್ಮಣರು ಆಶ್ರಮವಾಸಿ ಮಹರ್ಷಿಗಳನ್ನೂ ಕೂಡ ಕಾಡತೊಡಗಿದರು.
01058035a ಏವಂ ವೀರ್ಯಬಲೋತ್ಸಿಕ್ತೈರ್ಭೂರಿಯಂ ತೈರ್ಮಹಾಸುರೈಃ।
01058035c ಪೀಡ್ಯಮಾನಾ ಮಹೀಪಾಲ ಬ್ರಹ್ಮಾಣಮುಪಚಕ್ರಮೇ।। ।
ಮಹೀಪಾಲ! ಈ ರೀತಿ ವೀರ್ಯಬಲಗಳನ್ನು ಹೊಂದಿದ ಮಹಾಸುರರಿಂದ ತುಳಿಯಲ್ಪಟ್ಟ ಭೂಮಿಯು ಬ್ರಹ್ಮನ ಬಳಿ ಹೊರಟಳು.
01058036a ನ ಹೀಮಾಂ ಪವನೋ ರಾಜನ್ನ ನಾಗಾ ನ ನಗಾ ಮಹೀಂ।
01058036c ತದಾ ಧಾರಯಿತುಂ ಶೇಕುರಾಕ್ರಾಂತಾಂ ದಾನವೈರ್ಬಲಾತ್।।
ರಾಜನ್! ದಾನವರ ಬಲದಿಂದಾಗಿ ಮಹಿಯನ್ನು ಹೊರುತ್ತಿದ್ದ ನಾಗ ಮತ್ತು ಗಜಗಳು ಅವಳನ್ನು ಹೊರಲು ಅಸಮರ್ಥರಾಗಿ ರೋದಿಸುತ್ತಿದ್ದರು.
01058037a ತತೋ ಮಹೀ ಮಹೀಪಾಲ ಭಾರಾರ್ತಾ ಭಯಪೀಡಿತಾ।
01058037c ಜಗಾಮ ಶರಣಂ ದೇವಂ ಸರ್ವಭೂತಪಿತಾಮಹಂ।।
ಮಹೀಪಾಲ! ಆಗ ಮಹಿಯು ಭಾರದಿಂದ ಭಯಪೀಡಿತಳಾಗಿ ಸರ್ವಭೂತಪಿತಾಮಹ ದೇವನನ್ನು ಶರಣು ಹೊಕ್ಕಳು.
01058038a ಸಾ ಸಂವೃತಂ ಮಹಾಭಾಗೈರ್ದೇವದ್ವಿಜಮಹರ್ಷಿಭಿಃ।
01058038c ದದರ್ಶ ದೇವಂ ಬ್ರಹ್ಮಾಣಂ ಲೋಕಕರ್ತಾರಮವ್ಯಯಂ।।
01058039a ಗಂಧರ್ವೈರಪ್ಸರೋಭಿಶ್ಚ ಬಂದಿಕರ್ಮಸು ನಿಷ್ಠಿತೈಃ।
01058039c ವಂದ್ಯಮಾನಂ ಮುದೋಪೇತೈರ್ವವಂದೇ ಚೈನಮೇತ್ಯ ಸಾ।।
ದೇವದ್ವಿಜಮಹರ್ಷಿಗಳಿಂದ ಆವೃತ, ಗಂಧರ್ವ ಮತ್ತು ಅಪ್ಸರೆಯರಿಂದ ನಮಸ್ಕರಿಸಿಕೊಳ್ಳುತ್ತಿರುವ, ಲೋಕಕರ್ತಾರನೂ, ಅವ್ಯಯನೂ ಆದ ಮಹಾಭಾಗ ಬ್ರಹ್ಮದೇವನನ್ನು ಅವಳು ಕಂಡಳು.
01058040a ಅಥ ವಿಜ್ಞಾಪಯಾಮಾಸ ಭೂಮಿಸ್ತಂ ಶರಣಾರ್ಥಿನೀ।
01058040c ಸನ್ನಿಧೌ ಲೋಕಪಾಲಾನಾಂ ಸರ್ವೇಷಾಮೇವ ಭಾರತ।।
ಭಾರತ! ಶರಣಾರ್ಥಿನಿಯಾದ ಭೂಮಿಯು ಲೋಕಪಾಲಕರೆಲ್ಲರ ಸನ್ನಿಧಿಯಲ್ಲಿ ಅವನಲ್ಲಿ ವಿಜ್ಞಾಪಿಸಿಕೊಂಡಳು.
01058041a ತತ್ಪ್ರಧಾನಾತ್ಮನಸ್ತಸ್ಯ ಭೂಮೇಃ ಕೃತ್ಯಂ ಸ್ವಯಂಭುವಃ।
01058041c ಪೂರ್ವಮೇವಾಭವದ್ರಾಜನ್ವಿದಿತಂ ಪರಮೇಷ್ಟಿನಃ।।
ರಾಜನ್! ಭೂಮಿಯು ಯಾವ ಕಾರಣಕ್ಕಾಗಿ ಅಲ್ಲಿಗೆ ಬಂದಿದ್ದಾಳೆ ಎನ್ನುವುದು ಪರಮೇಷ್ಟಿ ಸ್ವಯಂಭುವಿಗೆ ಮೊದಲೇ ತಿಳಿದಿತ್ತು.
01058042a ಸ್ರಷ್ಟಾ ಹಿ ಜಗತಃ ಕಸ್ಮಾನ್ನ ಸಂಬುಧ್ಯೇತ ಭಾರತ।
01058042c ಸುರಾಸುರಾಣಾಂ ಲೋಕಾನಾಮಶೇಷೇಣ ಮನೋಗತಂ।।
ಭಾರತ! ಜಗತ್ತಿನ ಸೃಷ್ಟಿಯನ್ನೇ ಮಾಡುತ್ತಿರುವ ಅವನಿಗೆ ಸುರಾಸುರರ ಮತ್ತು ಉಳಿದ ಲೋಕಗಳ ಮನೋಗತವು ಹೇಗೆ ತಾನೆ ತಿಳಿದಿರುವುದಿಲ್ಲ?
01058043a ತಮುವಾಚ ಮಹಾರಾಜ ಭೂಮಿಂ ಭೂಮಿಪತಿರ್ವಿಭುಃ।
01058043c ಪ್ರಭವಃ ಸರ್ವಭೂತಾನಾಮೀಶಃ ಶಂಭುಃ ಪ್ರಜಾಪತಿಃ।।
ಮಹಾರಾಜ! ಭೂಮಿಪತಿಗಳ ವಿಭು, ಸರ್ವಭೂತಗಳ ಈಶ, ಶಂಭು, ಪ್ರಜಾಪತಿಯು ಭೂಮಿಗೆ ಹೇಳಿದನು:
01058044a ಯದರ್ಥಮಸಿ ಸಂಪ್ರಾಪ್ತಾ ಮತ್ಸಕಾಶಂ ವಸುಂಧರೇ।
01058044c ತದರ್ಥಂ ಸನ್ನಿಯೋಕ್ಷ್ಯಾಮಿ ಸರ್ವಾನೇವ ದಿವೌಕಸಃ।।
“ವಸುಂಧರೆ! ನನ್ನ ಸನ್ನಿಧಿಯಲ್ಲಿ ಯಾವ ಕಾರಣಕ್ಕಾಗಿ ಬಂದಿರುವೆಯೋ ಅ ಕೆಲಸಕ್ಕೆ ಸರ್ವ ದಿವೌಕಸರನ್ನೂ ನಿಯೋಜಿಸುತ್ತೇನೆ.”
01058045a ಇತ್ಯುಕ್ತ್ವಾ ಸ ಮಹೀಂ ದೇವೋ ಬ್ರಹ್ಮಾ ರಾಜನ್ವಿಸೃಜ್ಯ ಚ।
01058045c ಆದಿದೇಶ ತದಾ ಸರ್ವಾನ್ವಿಬುಧಾನ್ಭೂತಕೃತ್ಸ್ವಯಂ।।
01058046a ಅಸ್ಯಾ ಭೂಮೇರ್ನಿರಸಿತುಂ ಭಾರಂ ಭಾಗೈಃ ಪೃಥಕ್ ಪೃಥಕ್।
01058046c ಅಸ್ಯಾಮೇವ ಪ್ರಸೂಯಧ್ವಂ ವಿರೋಧಾಯೇತಿ ಚಾಬ್ರವೀತ್।।
ರಾಜನ್! ಈ ರೀತಿ ಹೇಳಿ ದೇವನು ಮಹಿಯನ್ನು ಕಳುಹಿಸಿಕೊಟ್ಟ ನಂತರ ಸರ್ವ ದೇವತೆಗಳಿಗೆ ಈ ರೀತಿ ಆದೇಶವನ್ನಿತ್ತನು: “ಭೂಮಿಯ ಭಾರವನ್ನು ಕಡಿಮೆಮಾಡಲೋಸುಗ ನೀವೆಲ್ಲರು ನಿಮ್ಮ ನಿಮ್ಮ ಅಂಶಗಳನ್ನು ಅಲ್ಲಿ ಅವರಿಗೆ ವಿರೋಧಿಗಳಾಗಿ ಹುಟ್ಟಿಸಿ.”
01058047a ತಥೈವ ಚ ಸಮಾನೀಯ ಗಂಧರ್ವಾಪ್ಸರಸಾಂ ಗಣಾನ್।
01058047c ಉವಾಚ ಭಗವಾನ್ಸರ್ವಾನಿದಂ ವಚನಮುತ್ತಮಂ।
01058047e ಸ್ವೈರಂಶೈಃ ಸಂಪ್ರಸೂಯಧ್ವಂ ಯಥೇಷ್ಟಂ ಮಾನುಷೇಷ್ವಿತಿ।।
ಹಾಗೆಯೇ ಗಂಧರ್ವ ಮತ್ತು ಅಪ್ಸರೆಯರ ಎಲ್ಲ ಗಣಗಳನ್ನೂ ಕರೆದು ಭಗವಂತನು “ನಿಮ್ಮ ನಿಮ್ಮ ಅಂಶಗಳಲ್ಲಿ ಮನುಷ್ಯರಲ್ಲಿ ಯಥೇಚ್ಚವಾಗಿ ಜನ್ಮತಾಳಿ” ಎಂದು ಉತ್ತಮ ಮಾತುಗಳನ್ನಾಡಿದನು.
01058048a ಅಥ ಶಕ್ರಾದಯಃ ಸರ್ವೇ ಶ್ರುತ್ವಾ ಸುರಗುರೋರ್ವಚಃ।
01058048c ತಥ್ಯಮರ್ಥ್ಯಂ ಚ ಪಥ್ಯಂ ಚ ತಸ್ಯ ತೇ ಜಗೃಹುಸ್ತದಾ।।
ಶಕ್ರಾದಿ ಸರ್ವರೂ ಸುರಗುರುವಿನ ಈ ತತ್ವಯುತ, ಅರ್ಥಯುತ ಒಳ್ಳೆಯ ಮಾತುಗಳನ್ನು ಕೇಳಿ ಅದನ್ನು ಸ್ವೀಕರಿಸಿದರು.
01058049a ಅಥ ತೇ ಸರ್ವಶೋಽಂಶೈಃ ಸ್ವೈರ್ಗಂತುಂ ಭೂಮಿಂ ಕೃತಕ್ಷಣಾಃ।
01058049c ನಾರಾಯಣಮಮಿತ್ರಘ್ನಂ ವೈಕುಂಠಮುಪಚಕ್ರಮುಃ।।
01058050a ಯಃ ಸ ಚಕ್ರಗದಾಪಾಣಿಃ ಪೀತವಾಸಾಸಿತಪ್ರಭಃ।
01058050c ಪದ್ಮನಾಭಃ ಸುರಾರಿಘ್ನಃ ಪೃಥುಚಾರ್ವಂಚಿತೇಕ್ಷಣಃ।।
ಅದರಂತೆ ತಮ್ಮ ತಮ್ಮ ಅಂಶಗಳಲ್ಲಿ ಭೂಮಿಗೆ ಹೋಗಿ ಜನಿಸುವ ನಿಶ್ಚಯಮಾಡಿದ ಸರ್ವರೂ ವೈಕುಂಠದಲ್ಲಿರುವ ಅಮಿತ್ರಘ್ನ ನಾರಾಯಣನಲ್ಲಿಗೆ ಹೋದರು. ಅಲ್ಲಿ ಅವರು ಚಕ್ರಗದಾಪಾಣಿ, ಪೀತವಸ್ತ್ರದಲ್ಲಿ ಅಸಿತಪ್ರಭನಾಗಿ ಶೋಭಿಸುತ್ತಿರುವ ಸುರಾರಿಘ್ನ, ತನ್ನ ವಿಶಾಲ ಎದೆಯನ್ನೇ ನೋಡುತ್ತಿದ್ದ, ಪದ್ಮನಾಭನನ್ನು ಕಂಡರು.
01058051a 1ತಂ ಭುವಃ ಶೋಧನಾಯೇಂದ್ರ ಉವಾಚ ಪುರುಷೋತ್ತಮಂ।
01058051c ಅಂಶೇನಾವತರಸ್ವೇತಿ ತಥೇತ್ಯಾಹ ಚ ತಂ ಹರಿಃ।।
ಪುರುಷೋತ್ತಮನಿಗೆ ಇಂದ್ರನು “ಭೂಮಿಯಲ್ಲಿ ಅವತರಿಸು” ಎನ್ನಲಾಗಿ ಹರಿಯು “ಹಾಗೆಯೇ ಆಗಲಿ” ಎಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ಅಷ್ಟಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ಐವತ್ತೆಂಟನೆಯ ಅಧ್ಯಾಯವು.
-
ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಪ್ರಜಾಪತಿಪತಿರ್ದೇವಃ ಸುರನಾಥೋ ಮಹಾಬಲಃ। ಶ್ರೀವತ್ಸಾಂಕೋ ಹೃಷೀಕೇಶಃ ಸರ್ವದೈವತಪೂಜಿತಃ।। ↩︎