ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆದಿವಂಶಾವತರಣ ಪರ್ವ
ಅಧ್ಯಾಯ 56
ಸಾರ
ಜನಮೇಜಯನು ಯುದ್ಧಕ್ಕೆ ಕಾರಣವನ್ನು ಪ್ರಶ್ನಿಸುವುದು (1-10). ಮಹಾಭಾರತದ ಪ್ರಶಂಸೆ (11-33).
01056001 ಜನಮೇಜಯ ಉವಾಚ।
01056001a ಕಥಿತಂ ವೈ ಸಮಾಸೇನ ತ್ವಯಾ ಸರ್ವಂ ದ್ವಿಜೋತ್ತಮ।
01056001c ಮಹಾಭಾರತಮಾಖ್ಯಾನಂ ಕುರೂಣಾಂ ಚರಿತಂ ಮಹತ್।।
01056002a ಕಥಾಂ ತ್ವನಘ ಚಿತ್ರಾರ್ಥಾಮಿಮಾಂ ಕಥಯತಿ ತ್ವಯಿ।
01056002c ವಿಸ್ತರಶ್ರವಣೇ ಜಾತಂ ಕೌತೂಹಲಮತೀವ ಮೇ।।
ಜನಮೇಜಯನು ಹೇಳಿದನು: “ದ್ವಿಜೋತ್ತಮ! ಕುರುಗಳ ಮಹಾ ಚರಿತ್ರೆ ಮಹಾಭಾರತ ಆಖ್ಯಾನವನ್ನು ಸಂಕ್ಷಿಪ್ತರೂಪದಲ್ಲಿ ನೀನು ಹೇಳಿದ್ದೀಯೆ. ಅನಘ! ಚಿತ್ರಾರ್ಥಗಳನ್ನುಳ್ಳ ಈ ಕಥೆಯನ್ನು ನಿನ್ನಿಂದ ವಿಸ್ತಾರವಾಗಿ ಕೇಳುವ ಅತೀವ ಕುತೂಹಲವು ನನ್ನಲ್ಲಿ ಉಂಟಾಗಿದೆ.
01056003a ಸ ಭವಾನ್ವಿಸ್ತರೇಣೇಮಾಂ ಪುನರಾಖ್ಯಾತುಮರ್ಹತಿ।
01056003c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್।।
ನೀನು ಪುನಃ ಇದನ್ನು ವಿಸ್ತಾರವಾಗಿ ಹೇಳಬೇಕು. ಈಗ ಹೇಳಿದ ಮಹಾ ಚರಿತ್ರೆಯನ್ನು ಕೇಳಿ ನಾನು ತೃಪ್ತಿ ಹೊಂದಲಿಲ್ಲ.
01056004a ನ ತತ್ಕಾರಣಮಲ್ಪಂ ಹಿ ಧರ್ಮಜ್ಞಾ ಯತ್ರ ಪಾಂಡವಾಃ।
01056004c ಅವಧ್ಯಾನ್ಸರ್ವಶೋ ಜಘ್ನುಃ ಪ್ರಶಸ್ಯಂತೇ ಚ ಮಾನವೈಃ।।
ಜನರ ಪ್ರಶಂಸೆಗೆ ಪಾತ್ರರಾಗಿರುವ ಆ ಧರ್ಮಜ್ಞ ಪಾಂಡವರು ವಧೆಗೆ ಅರ್ಹರಲ್ಲದ ಸರ್ವರನ್ನೂ ಸಂಹರಿಸಿದರೆಂದರೆ ಅದರ ಕಾರಣವು ಅಲ್ಪವಾಗಿರಲಿಕ್ಕಿಲ್ಲ.
01056005a ಕಿಮರ್ಥಂ ತೇ ನರವ್ಯಾಘ್ರಾಃ ಶಕ್ತಾಃ ಸಂತೋ ಹ್ಯನಾಗಸಃ।
01056005c ಪ್ರಯುಜ್ಯಮಾನಾನ್ಸಂಕ್ಲೇಶಾನ್ ಕ್ಷಾಂತವಂತೋ ದುರಾತ್ಮನಾಂ।।
ಸಂತರೂ, ಶಕ್ತರೂ, ತಪ್ಪಿಲ್ಲದವರೂ ಆದ ಆ ನರವ್ಯಾಘ್ರರು ದುರಾತ್ಮರಿಂದ ತಮಗೊದಗಿದ ಸಂಕ್ಲೇಷಗಳನ್ನು ಏಕೆ ವಿರೋಧಿಸಿದೇ ಸಹಿಸಿದರು?
01056006a ಕಥಂ ನಾಗಾಯುತಪ್ರಾಣೋ ಬಾಹುಶಾಲೀ ವೃಕೋದರಃ।
01056006c ಪರಿಕ್ಲಿಶ್ಯನ್ನಪಿ ಕ್ರೋಧಂ ಧೃತವಾನ್ವೈ ದ್ವಿಜೋತ್ತಮ।।
ದ್ವಿಜೋತ್ತಮ! ಆನೆಗಳ ಬಲವುಳ್ಳ ಬಾಹುಶಾಲಿ ವೃಕೋದರನು ಪರಿಕ್ಲಿಷ್ಟಗಳೊದಗಿದರೂ ಹೇಗೆ ತನ್ನ ಕ್ರೋಧವನ್ನು ಸಹಿಸಿಕೊಂಡನು?
01056007a ಕಥಂ ಸಾ ದ್ರೌಪದೀ ಕೃಷ್ಣಾ ಕ್ಲಿಶ್ಯಮಾನಾ ದುರಾತ್ಮಭಿಃ।
01056007c ಶಕ್ತಾ ಸತೀ ಧಾರ್ತರಾಷ್ಟ್ರಾನ್ನಾದಹದ್ಘೋರಚಕ್ಷುಷಾ।।
ದುರಾತ್ಮರಿಂದ ಕಷ್ಟಕ್ಕೊಳಗಾದ ದ್ರೌಪದಿ ಕೃಷ್ಣೆಯು ಶಕ್ತಳಾಗಿದ್ದರೂ ಏಕೆ ತನ್ನ ಘೋರ ಕಣ್ಣುಗಳಿಂದ ಆ ಧಾರ್ತರಾಷ್ಟ್ರರನ್ನು ಸುಟ್ಟು ಭಸ್ಮಮಾಡಲಿಲ್ಲ?
01056008a ಕಥಂ ವ್ಯತಿಕ್ರಮನ್ದ್ಯೂತೇ ಪಾರ್ಥೌ ಮಾದ್ರೀಸುತೌ ತಥಾ।
01056008c ಅನುವ್ರಜನ್ನರವ್ಯಾಘ್ರಂ ವಂಚ್ಯಮಾನಂ ದುರಾತ್ಮಭಿಃ।।
ಈರ್ವರು ಪಾರ್ಥರು ಮತ್ತು ಈರ್ವರು ಮಾದ್ರೀಸುತರು ದ್ಯೂತದಲ್ಲಿ ದುರಾತ್ಮರಿಂದ ವಂಚನೆಗೊಳಗಾಗುತ್ತಿದ್ದಾಗಲೂ ಆ ನರವ್ಯಾಘ್ರ ಯುಧಿಷ್ಠಿರನನ್ನು ಹೇಗೆ ಅನುಸರಿಸಿದರು?
01056009a ಕಥಂ ಧರ್ಮಭೃತಾಂ ಶ್ರೇಷ್ಠಃ ಸುತೋ ಧರ್ಮಸ್ಯ ಧರ್ಮವಿತ್।
01056009c ಅನರ್ಹಃ ಪರಮಂ ಕ್ಲೇಶಂ ಸೋಢವಾನ್ಸ ಯುಧಿಷ್ಠಿರಃ।।
ಧರ್ಮಸುತ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮವಿತ್ ಯುಧಿಷ್ಠಿರನು ಏಕೆ ಅನರ್ಹನಾಗಿದ್ದರೂ ಆ ಪರಮ ಕ್ಲೇಷವನ್ನು ಅನುಭವಿಸಿದನು?
01056010a ಕಥಂ ಚ ಬಹುಲಾಃ ಸೇನಾಃ ಪಾಂಡವಃ ಕೃಷ್ಣಸಾರಥಿಃ।
01056010c ಅಸ್ಯನ್ನೇಕೋಽನಯತ್ಸರ್ವಾಃ ಪಿತೃಲೋಕಂ ಧನಂಜಯಃ।।
ಬಹುಸಂಖ್ಯೆಯಲ್ಲಿ ಸರ್ವ ಸೇನೆಗಳನ್ನೂ ಒಬ್ಬನೇ ಪಿತೃಲೋಕಕ್ಕೆ ಕಳುಹಿಸಬಲ್ಲ ಕೃಷ್ಣಸಾರಥಿ ಪಾಂಡವ ಧನಂಜಯನು ಕೂಡ ಹೇಗೆ ಸಹಿಸಿದನು?
01056011a ಏತದಾಚಕ್ಷ್ವ ಮೇ ಸರ್ವಂ ಯಥಾವೃತ್ತಂ ತಪೋಧನ।
01056011c ಯದ್ಯಚ್ಚ ಕೃತವಂತಸ್ತೇ ತತ್ರ ತತ್ರ ಮಹಾರಥಾಃ।।
ತಪೋಧನ! ಇವೆಲ್ಲವನ್ನೂ ಹೇಗೆ ನಡೆಯಿತೋ ಹಾಗೆ ಹೇಳು - ಪ್ರತಿಯೊಂದು ಕ್ಷಣದಲ್ಲೂ ಆ ಮಹಾರಥಿಗಳು ನಿರ್ವಹಿಸಿದ ಕಾರ್ಯಗಳನ್ನು ಹೇಳು.”
01056012 ವೈಶಂಪಾಯನ ಉವಾಚ।
01056012a 1ಮಹರ್ಷೇಃ ಸರ್ವಲೋಕೇಷು ಪೂಜಿತಸ್ಯ ಮಹಾತ್ಮನಃ।
01056012c ಪ್ರವಕ್ಷ್ಯಾಮಿ ಮತಂ ಕೃತ್ಸ್ನಂ ವ್ಯಾಸಸ್ಯಾಮಿತತೇಜಸಃ।।
ವೈಶಂಪಾಯನನು ಹೇಳಿದನು: “ಸರ್ವಲೋಕಪೂಜಿತ ಮಹಾತ್ಮ ಅಮಿತತೇಜಸ ಮಹರ್ಷಿ ವ್ಯಾಸನ ಕೃತಿಯನ್ನು ಸಂಪೂರ್ಣವಾಗಿ ಹೇಳುತ್ತೇನೆ.
01056013a ಇದಂ ಶತಸಹಸ್ರಂ ಹಿ ಶ್ಲೋಕಾನಾಂ ಪುಣ್ಯಕರ್ಮಣಾಂ।
01056013c ಸತ್ಯವತ್ಯಾತ್ಮಜೇನೇಹ ವ್ಯಾಖ್ಯಾತಮಮಿತೌಜಸಾ।।
ಅಮಿತೌಜಸ ಸತ್ಯವತಿಯ ಆತ್ಮಜನು ಆಖ್ಯಾಯಿಸಿದ ಈ ಪುಣ್ಯಕೃತಿಯು ನೂರುಸಾವಿರ ಶ್ಲೋಕಗಳನ್ನು ಹೊಂದಿದೆ.
01056014a ಯ ಇದಂ ಶ್ರಾವಯೇದ್ವಿದ್ವಾನ್ಯಶ್ಚೇದಂ ಶೃಣುಯಾನ್ನರಃ।
01056014c ತೇ ಬ್ರಹ್ಮಣಃ ಸ್ಥಾನಮೇತ್ಯ ಪ್ರಾಪ್ನುಯುರ್ದೇವತುಲ್ಯತಾಂ।।
ಇದನ್ನು ಓದುವ ವಿದ್ವಾಂಸ ಮತ್ತು ಕೇಳುವ ನರನು ದೇವಮಾನ ಬ್ರಹ್ಮಸ್ಥಾನವನ್ನು ಪಡೆಯುತ್ತಾರೆ.
01056015a ಇದಂ ಹಿ ವೇದೈಃ ಸಮಿತಂ ಪವಿತ್ರಮಪಿ ಚೋತ್ತಮಂ।
01056015c ಶ್ರಾವ್ಯಾಣಾಮುತ್ತಮಂ ಚೇದಂ ಪುರಾಣಂ ಋಷಿಸಂಸ್ತುತಂ।।
ವೇದಗಳಷ್ಟೇ ಪವಿತ್ರ, ಋಷಿಸಂಸ್ತುತ ಈ ಪುರಾಣವು ಕೇಳಬೇಕಾಗಿದ್ದುದರಲ್ಲೆಲ್ಲಾ ಉತ್ತಮವಾದದ್ದು.
01056016a ಅಸ್ಮಿನ್ನರ್ಥಶ್ಚ ಧರ್ಮಶ್ಚ ನಿಖಿಲೇನೋಪದಿಶ್ಯತೇ।
01056016c ಇತಿಹಾಸೇ ಮಹಾಪುಣ್ಯೇ ಬುದ್ಧಿಶ್ಚ ಪರಿನೈಷ್ಟಿಕೀ।।
ಇದರಲ್ಲಿ ಅರ್ಥ-ಧರ್ಮಗಳನ್ನು ಸಂಪೂರ್ಣವಾಗಿ ಉಪದೇಶಿಸಲಾಗಿದೆ ಮತ್ತು ಈ ಮಹಾಪುಣ್ಯಕರ ಇತಿಹಾಸವು ಮೋಕ್ಷವನ್ನು ಬಯಸುವ ಬುದ್ಧಿಯನ್ನು ನೀಡುತ್ತದೆ.
01056017a ಅಕ್ಷುದ್ರಾನ್ದಾನಶೀಲಾಂಶ್ಚ ಸತ್ಯಶೀಲಾನನಾಸ್ತಿಕಾನ್।
01056017c ಕಾರ್ಷ್ಣಂ ವೇದಮಿಮಂ ವಿದ್ವಾಂ ಶ್ರಾವಯಿತ್ವಾರ್ಥಮಶ್ನುತೇ।।
ಕೃಷ್ಣನ ಈ ವೇದವನ್ನು ಅಕ್ಷುದ್ರರಿಗೆ, ದಾನಶೀಲರಿಗೆ, ಸತ್ಯಶೀಲರಿಗೆ ಮತ್ತು ಆಸ್ತಿಕರಿಗೆ ಓದಿ ಹೇಳಿದ ವಿದ್ವಾಂಸನು ಸಂಪತ್ತನ್ನು ಪಡೆಯುವನು.
01056018a ಭ್ರೂಣಹತ್ಯಾಕೃತಂ ಚಾಪಿ ಪಾಪಂ ಜಹ್ಯಾದಸಂಶಯಂ।
01056018c ಇತಿಹಾಸಮಿಮಂ ಶ್ರುತ್ವಾ ಪುರುಷೋಽಪಿ ಸುದಾರುಣಃ।।
ಈ ಇತಿಹಾಸವನ್ನು ಕೇಳಿ ಪುರುಷನು ಸುದಾರುಣ ಭ್ರೂಣಹತ್ಯಾ ಪಾಪವನ್ನೂ ನಿಸ್ಸಂಶಯವಾಗಿ ಕಳೆದುಕೊಳ್ಳಬಹುದು.
01056019a ಜಯೋ ನಾಮೇತಿಹಾಸೋಽಯಂ ಶ್ರೋತವ್ಯೋ ವಿಜಿಗೀಷುಣಾ।
01056019c ಮಹೀಂ ವಿಜಯತೇ ಸರ್ವಾಂ ಶತ್ರೂಂಶ್ಚಾಪಿ ಪರಾಜಯೇತ್।।
ವಿಜಯಾಕಾಂಕ್ಷಿಗಳು ಜಯ ನಾಮದ ಈ ಇತಿಹಾಸವನ್ನು ಕೇಳಬೇಕು; ಅಂಥವನು ಸರ್ವ ಶತ್ರುಗಳನ್ನೂ ಪರಾಜಯಗೊಳಿಸಿ ಮಹಿಯನ್ನೇ ಜಯಿಸಬಹುದು.
01056020a ಇದಂ ಪುಂಸವನಂ ಶ್ರೇಷ್ಠಮಿದಂ ಸ್ವಸ್ತ್ಯಯನಂ ಮಹತ್।
01056020c ಮಹಿಷೀಯುವರಾಜಾಭ್ಯಾಂ ಶ್ರೋತವ್ಯಂ ಬಹುಶಸ್ತಥಾ।।
ರಾಣಿ ಯುವರಾಜರೀರ್ವರೂ ಇದನ್ನು ಬಹುಬಾರಿ ಕೇಳಿದರೆ ಶ್ರೇಷ್ಠ ಸಂತಾನವನ್ನು ಪಡೆದು ಮಹತ್ತರ ಕಲ್ಯಾಣವನ್ನು ಹೊಂದುತ್ತಾರೆ.
01056021a ಅರ್ಥಶಾಸ್ತ್ರಮಿದಂ ಪುಣ್ಯಂ ಧರ್ಮಶಾಸ್ತ್ರಮಿದಂ ಪರಂ।
01056021c ಮೋಕ್ಷಶಾಸ್ತ್ರಮಿದಂ ಪ್ರೋಕ್ತಂ ವ್ಯಾಸೇನಾಮಿತಬುದ್ಧಿನಾ।।
ಇದು ಪುಣ್ಯಕರ ಅರ್ಥಶಾಸ್ತ್ರ ಮತ್ತು ಶ್ರೇಷ್ಠ ಧರ್ಮಶಾಸ್ತ್ರ. ಅಮಿತಬುದ್ಧಿಶಾಲಿ ವ್ಯಾಸನು ಹೇಳಿದಹಾಗೆ ಇದು ಮೋಕ್ಷಶಾಸ್ತ್ರವೂ ಹೌದು.
01056022a ಸಂಪ್ರತ್ಯಾಚಕ್ಷತೇ ಚೈವ ಆಖ್ಯಾಸ್ಯಂತಿ ತಥಾಪರೇ।
01056022c ಪುತ್ರಾಃ ಶುಶ್ರೂಷವಃ ಸಂತಿ ಪ್ರೇಷ್ಯಾಶ್ಚ ಪ್ರಿಯಕಾರಿಣಃ।।
ಈಗ ಇದನ್ನು ಹೇಳಲಾಗುತ್ತಿದೆ ಮತ್ತು ಇದರ ನಂತರವೂ ಕಥಿಸಲಾಗುತ್ತದೆ. ಮಾತನ್ನು ಕೇಳುವ ಪುತ್ರರು ಜನಿಸುತ್ತಾರೆ ಮತ್ತು ಪ್ರಿಯಕಾರ್ಯಗಳನ್ನು ಮಾಡುವ ಸೇವಕರು ದೊರೆಯುತ್ತಾರೆ.
01056023a ಶರೀರೇಣ ಕೃತಂ ಪಾಪಂ ವಾಚಾ ಚ ಮನಸೈವ ಚ।
01056023c ಸರ್ವಂ ತತ್ತ್ಯಜತಿ ಕ್ಷಿಪ್ರಮಿದಂ ಶೃಣ್ವನ್ನರಃ ಸದಾ।।
ಇದನ್ನು ಸದಾ ಕೇಳುವ ನರನನ್ನು ಅವನು ವಾಚಾ, ಮನಸಾ ಅಥವಾ ಶರೀರದಿಂದ ಮಾಡಿದ ಪಾಪಗಳೆಲ್ಲವೂ ತಕ್ಷಣವೇ ತ್ಯಜಿಸಿಬಿಡುತ್ತವೆ.
01056024a ಭಾರತಾನಾಂ ಮಹಜ್ಜನ್ಮ ಶೃಣ್ವತಾಮನಸೂಯತಾಂ।
01056024c ನಾಸ್ತಿ ವ್ಯಾಧಿಭಯಂ ತೇಷಾಂ ಪರಲೋಕಭಯಂ ಕುತಃ।।
ದೂಷಿಸದೇ ಯಾರು ಭಾರತರ ಮಹಾಜನ್ಮದ ಕುರಿತು ಕೇಳುತ್ತಾರೋ ಅವರಿಗೆ ಯಾವುದೇ ವ್ಯಾಧಿಭಯವೂ ಇರುವುದಿಲ್ಲ. ಪರಲೋಕದ ಭಯವು ಎಲ್ಲಿಂದ?
01056025a ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಪುಣ್ಯಂ ತಥೈವ ಚ।
01056025c ಕೃಷ್ಣದ್ವೈಪಾಯನೇನೇದಂ ಕೃತಂ ಪುಣ್ಯಚಿಕೀರ್ಷುಣಾ।।
01056026a ಕೀರ್ತಿಂ ಪ್ರಥಯತಾ ಲೋಕೇ ಪಾಂಡವಾನಾಂ ಮಹಾತ್ಮನಾಂ।
01056026c 2ಅನ್ಯೇಷಾಂ ಕ್ಷತ್ರಿಯಾಣಾಂ ಚ ಭೂರಿದ್ರವಿಣತೇಜಸಾಂ।।
ಒಳ್ಳೆಯದನ್ನು ಮಾಡಲೋಸುಗ ಕೃಷ್ಣದ್ವೈಪಾಯನನು ಧನ್ಯತೆ, ಯಶಸ್ಸು, ಆಯಸ್ಸು, ಸ್ವರ್ಗ ಮತ್ತು ಪುಣ್ಯಗಳನ್ನು ತರುವಂಥಹ ಇದನ್ನು ರಚಿಸಿ, ಭೂರಿದ್ರವಿಣತೇಜಸ ಮಹಾತ್ಮ ಪಾಂಡವರ ಮತ್ತು ಇನ್ನೂ ಇತರ ಕ್ಷತ್ರಿಯರ ಕೀರ್ತಿಯನ್ನು ಲೋಕಗಳಲ್ಲಿ ಪ್ರಸರಿಸಿದನು.
01056027a 3ಯಥಾ ಸಮುದ್ರೋ ಭಗವಾನ್ಯಥಾ ಚ ಹಿಮವಾನ್ಗಿರಿಃ।
01056027c ಖ್ಯಾತಾವುಭೌ ರತ್ನನಿಧೀ ತಥಾ ಭಾರತಮುಚ್ಯತೇ।। ।
ಭಗವಾನ್ ಸಮುದ್ರ ಮತ್ತು ಹಿಮವತ್ಪರ್ವತಗಳು ರತ್ನನಿಧಿಗಳೆಂದು ಹೇಗೆ ಖ್ಯಾತರಾಗಿದ್ದಾರೋ ಹಾಗೆ ಭಾರತವೂ ಖ್ಯಾತಿಗೊಂಡಿದೆ.
01056028a ಯ ಇದಂ ಶ್ರಾವಯೇದ್ವಿದ್ವಾನ್ಬ್ರಾಹ್ಮಣಾನಿಹ ಪರ್ವಸು।
01056028c ಧೂತಪಾಪ್ಮಾ ಜಿತಸ್ವರ್ಗೋ ಬ್ರಹ್ಮಭೂಯಂ ಸ ಗಚ್ಛತಿ।।
ಇಲ್ಲಿ ಇದನ್ನು ಹುಣ್ಣಿಮೆಯಲ್ಲಿ ಬ್ರಾಹ್ಮಣರಿಗೆ ಹೇಳಿದ ವಿದ್ವಾಂಸನು ಪರಲೋಕದಲ್ಲಿ ಸ್ವರ್ಗವನ್ನು ಗೆದ್ದು ಬ್ರಹ್ಮಲೋಕವನ್ನು ಸೇರುತ್ತಾನೆ.
01056029a 4ಯಶ್ಚೇದಂ ಶ್ರಾವಯೇಚ್ಛ್ರಾದ್ಧೇ ಬ್ರಾಹ್ಮಣಾನ್ಪಾದಮಂತತಃ।
01056029c ಅಕ್ಷಯ್ಯಂ ತಸ್ಯ ತಚ್ಛ್ರಾದ್ಧಮುಪತಿಷ್ಠೇತ್ಪಿತೄನಪಿ।।
ಶ್ರಾದ್ಧದಲ್ಲಿ ಇದರ ಒಂದು ಶ್ಲೋಕವನ್ನಾದರೂ ಬ್ರಾಹ್ಮಣರಿಗೆ ಕೇಳಿಸುವಂತೆ ಹೇಳಿದರೆ ಅವನ ಶ್ರಾದ್ಧವು ಅಕ್ಷಯವಾಗುತ್ತದೆ ಮತ್ತು ಪಿತೃಗಳೂ ಕೂಡ ಸಂತೃಪ್ತರಾಗುತ್ತಾರೆ.
01056030a ಅಹ್ನಾ ಯದೇನಶ್ಚಾಜ್ಞಾನಾತ್ಪ್ರಕರೋತಿ ನರಶ್ಚರನ್5।
01056030c ತನ್ಮಹಾಭಾರತಾಖ್ಯಾನಂ ಶ್ರುತ್ವೈವ ಪ್ರವಿಲೀಯತೇ।। ।
ಅಜ್ಞಾನದಿಂದ ದಿನದಲ್ಲಿ ನರನು ಮಾಡಿದ ಪಾಪವು ಭಾರತದ ಆಖ್ಯಾನವನ್ನು ಕೇಳುತ್ತಿದ್ದಂತೆ ನಶಿಸಿಹೋಗುತ್ತದೆ.
01056031a ಭಾರತಾನಾಂ ಮಹಜ್ಜನ್ಮ ಮಹಾಭಾರತಮುಚ್ಯತೇ।।
01056031c ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ।।
ಭಾರತರ ಮಹಾಜನ್ಮವೇ ಮಹಾಭಾರತವೆಂದು ಕರೆಯಲ್ಪಟ್ಟಿದೆ. ಈ ನಿರುಕ್ತವನ್ನು ತಿಳಿದವನು ಸರ್ವಪಾಪಗಳಿಂದ ವಿಮುಕ್ತನಾಗುತ್ತಾನೆ.
01056032a 6ತ್ರಿಭಿರ್ವರ್ಷೈಃ ಸದೋತ್ಥಾಯೀ ಕೃಷ್ಣದ್ವೈಪಾಯನೋ ಮುನಿಃ।
01056032c ಮಹಾಭಾರತಮಾಖ್ಯಾನಂ ಕೃತವಾನಿದಮುತ್ತಮಂ।।
ಮೂರುವರ್ಷಗಳು ಪ್ರತಿದಿನವೂ ಎದ್ದು ಮುನಿ ಕೃಷ್ಣದ್ವೈಪಾಯನನು ಈ ಅನುತ್ತಮ ಮಹಾಭಾರತ ಆಖ್ಯಾನವನ್ನು ರಚಿಸಿದನು.
01056033a ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ।
01056033c ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್।।
ಭರತರ್ಷಭ! ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿ ಏನಿವೆಯೋ ಅವು ಎಲ್ಲೆಡೆಯಲ್ಲಿಯೂ ಇವೆ. ಆದರೆ ಇಲ್ಲಿ ಇಲ್ಲದಿದ್ದದ್ದು ಎಲ್ಲಿಯೂ ಇಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ಮಹಾಭಾರತಪ್ರಶಂಸಾಯಾಂ ಷಟ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ಮಹಾಭಾರತ ಪ್ರಶಂಸೆ ಎನ್ನುವ ಐವತ್ತಾರನೆಯ ಅಧ್ಯಾಯವು.
-
ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾಧಿಕವಿದೆ: ಕ್ಷಣಂ ಕುರು ಮಹಾರಾಜ ವಿಪುಲೋಽಯಮನುಕ್ರಮಃ। ಪುಣ್ಯಾಖ್ಯಾನಸ್ಯ ವಕ್ತವ್ಯಃ ಕೃಷ್ಣದ್ವೈಪಾಯನೇರಿತಃ।। ಅರ್ಥಾತ್: ಇದಕ್ಕೆ ಸ್ವಲ್ಪ ಸಮಯವನ್ನು ಕೊಡು. ಕೃಷ್ಣದ್ವೈಪಾಯನನು ಈ ಪುಣ್ಯ ಆಖ್ಯಾನವನ್ನು ಬಹಳ ವಿಸ್ತಾರವಾಗಿ ಮತ್ತು ಅನುಕ್ರಮವಾಗಿ ಹೇಳಿದ್ದಾನೆ. ಇದನ್ನು ಹೇಳಲು ಸಮಯಬೇಕಾಗುತ್ತದೆ. ↩︎
-
ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಸರ್ವವಿದ್ಯಾವದಾತಾನಾಂ ಲೋಕೇ ಪ್ರಥಿತಕರ್ಮಣಾಂ। ಯ ಇದಂ ಮಾನವೋ ಲೋಕೇ ಪುಣ್ಯಾರ್ಥೇ ಬ್ರಾಹ್ಮಣಾನ್ ಶುಚೀನ್।। ಶ್ರಾವಯೇತ ಮಹಾಪುಣ್ಯಂ ತಸ್ಯ ಧರ್ಮಃ ಸನಾತನಃ। ಕುರೂಣಾಂ ಪ್ರಥಿತಂ ವಂಶಂ ಕೀರ್ತಯನ್ ಸತತಂ ಶುಚಿಃ।। ವಂಶಮಾಪ್ನೋತಿ ವಿಪುಲಂ ಲೋಕೇ ಪೂಜ್ಯತಮೋ ಭವೇತ್। ಯೋಽಧೀತೇ ಬಾರತಂ ಪುಣ್ಯಂ ಬ್ರಾಹ್ಮಣೋ ನಿಯತವ್ರತಃ।। ಚತುರೋ ವಾರ್ಷಿಕಾನ್ ಮಾಸಾನ್ ಸರ್ವಪಾಪೈಃ ಪ್ರಮುಚ್ಯತೇ। ವಿಜ್ಞೇಯಃ ಸ ಚ ವೇದಾನಾಂ ಪಾರಗೋ ಭಾರತಂ ಪಠನ್।। ದೇವಾ ರಾಜರ್ಷಯೋ ಹ್ಯತ್ರ ಪುಣ್ಯಾ ಬ್ರಹ್ಮರ್ಷಯಸ್ತಥಾ। ಕೀರ್ತ್ಯಂತೇ ಘೂತಪಾಪ್ಮಾನಃ ಕೀರ್ಯತೇ ಕೇಶವಸ್ತಥಾ।। ಭಗವಾಂಶ್ಚಾಪಿ ದೇವೇಶೋ ಯತ್ರ ದೇವೀ ಚ ಕೀರ್ತ್ಯತೇ। ಅನೇಕಜನನೋ ಯತ್ರ ಕಾರ್ತಿಕೇಯಸ್ಯ ಸಂಭವಃ।। ಬ್ರಾಹ್ಮಣಾನಾಂ ಗವಾಂ ಚೈವ ಮಾಹಾತ್ಮ್ಯಂ ಯತ್ರ ಕೀರ್ತ್ಯತೇ। ಸರ್ವಶೃತಿಸಮೂಹೋಽಯಂ ಶ್ರೋತವ್ಯೋ ಧರ್ಮಬುದ್ಧಿಭಿಃ।। ↩︎
-
ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಭಾರತಾನಾಂ ಯತಶ್ಚಾಯಮಿತಿಹಾಸೋ ಮಹಾದ್ಭುತಃ। ಮಹತೋ ಹ್ಯೇನಸೋ ಮರ್ತ್ಯಾನ್ ಮೋಚಯೇದನುಕೀರ್ತಿತಃ।। ತ್ರಿಭಿರ್ವರ್ಷೈರ್ಲಬ್ಧಕಾಮಃ ಕೃಷ್ಣದ್ವೈಪಾಯನೋ ಮುನಿಃ। ನಿತ್ಯೋತ್ಥಿತಃ ಶುಚಿಃ ಶಕ್ತೋ ಮಹಾಭಾರತಮಾದಿತಃ।। ತಪೋ ನಿಯಮಮಾಸ್ಥಾಯ ಕೃತಮೇತನ್ಮಹರ್ಷಿಣಾ। ತಸ್ಮಾನ್ನಿಯಮಸಂಯುಕ್ತೈಃ ಶ್ರೋತವ್ಯಂ ಬ್ರಾಹ್ಮಣೈರಿದಮ್।। ಕೃಷ್ಣಪ್ರೋಕ್ತಾಮಿಮಾಂ ಪುಣ್ಯಾಂ ಭಾರತೀಮುತ್ತಮಾಂ ಕಥಾಮ್। ಶ್ರಾವಯಿಷ್ಯಂತಿ ಯೇ ವಿಪ್ರಾ ಯೇ ಚ ಶ್ರೋಷ್ಯಂತಿ ಮಾನವಾಃ। ಸರ್ವಥಾ ವರ್ತಮಾನಾ ವೈ ನ ತೇ ಶೋಚ್ಯಾಃ ಕೃತಾಕೃತೈಃ।। ನರೇಣ ಧರ್ಮಕಾಮೇನ ಸರ್ವಂ ಶ್ರೋತವ್ಯ ಇತ್ಯಪಿ। ನಿಖಿಲೇನೇತಿಹಾಸೋಽಯಂ ತತಃ ಸಿದ್ಧಿಮವಾಪ್ನುಯಾತ್।। ನ ತಾಂ ಸ್ವರ್ಗಗತಿಂ ಪ್ರಾಪ್ಯ ತುಷ್ಟಿಂ ಪ್ರಾಪ್ನೋತಿ ಮಾನವಃ। ಯಾಂ ಶ್ರುತೈವ ಮಹಾಪುಣ್ಯಮಿತಿಹಾಸಮುಪಾಶ್ನುತೇ।। ಶ್ರುಣ್ವನ್ ಶ್ರಾದ್ಧಃ ಪುಣ್ಯಶೀಲಃ ಶ್ರಾವಯಂಶ್ಚೇದಮದ್ಭುತಮ್। ನರಃ ಫಲಮವಾಪ್ನೋತಿ ರಾಜಸೂಯಾಶ್ವಮೇಧಯೋಃ।। ↩︎
-
ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಈ ಶ್ಲೋಕಗಳಿವೆ: ಯಸ್ತು ರಾಜಾ ಶೃಣೋತೀದಮಖಿಲಾಮಶ್ನುತೇ ಮಹೀಮ್। ಪ್ರಸೂತೀ ಗರ್ಭಿಣೀ ಪುತ್ರಂ ಕನ್ಯಾ ಚಾಶು ಪ್ರದೀಯತೇ।। ವಣಿಜಃ ಸಿದ್ಧಯಾತ್ರಾಃ ಸ್ಯುರ್ವೀರಾ ವಿಜಯಮಾಶ್ನುಯುಃ। ಆಸ್ತಿಕಾನ್ ಶ್ರಾವಯೇನ್ನಿತ್ಯಂ ಬ್ರಾಹ್ಮಣಾನನಸೂಯಕಾನ್।। ವೇದವಿದ್ಯಾವ್ರತಸ್ನಾತಾನ್ ಕ್ಷತ್ರಿಯಾನ್ ಜಯಮಾಶ್ರಿತಾನ್। ಸ್ವಧರ್ಮನಿತ್ಯಾನ್ ವೈಶ್ಯಾಂಶ್ಚ ಶ್ರಾವಯೇತ್ ಕ್ಷತ್ರಸಂಶ್ರಿತಾನ್।। ಏಷ ಧರ್ಮಃ ಪುರಾ ಧೃಷ್ಟಃ ಸರ್ವಧರ್ಮೇಷು ಭಾರತ। ಬ್ರಾಹ್ಮಣಾನ್ ಶ್ರವಣಂ ರಾಜನ್ ವಿಶೇಷೇಣ ವಿಧೀಯತೇ।। ಭೂಯೋ ವಾ ಯಃ ಪಠೇನ್ನಿತ್ಯಂ ಸ ಗಚ್ಛೇತ್ ಪರಮಾಂ ಗತಿಮ್। ಶ್ಲೋಕಂ ವಾಪ್ಯನು ಗೃಹ್ಣೀತ ತಥಾರ್ಧಶ್ಲೋಕಮೇವ ವಾ।। ಅಪಿ ಪಾದಂ ಪಠೇನ್ನಿತ್ಯಂ ನ ಚ ನಿರ್ಭಾರತೋ ಭವೇತ್। ಇಹ ನೈಕಾಶ್ರಯಂ ಜನ್ಮ ರಾಜರ್ಷೀಣಾಂ ಮಹಾತ್ಮನಾಮ್।। ಇಹ ಮಂತ್ರಪದಂ ಯುಕ್ತಂ ಧರ್ಮಂ ಚಾನೇಕದರ್ಶನಮ್। ಇಹ ಯುದ್ಧಾನಿ ಚಿತ್ರಾಣಿ ರಾಜ್ಞಾಂ ಬುದ್ಧಿರಿಹೈವ ಚ।। ಋಷೀಣಾಂ ಚ ಕಥಾಸ್ತಾತ ಇಹ ಗಂಧರ್ವರಕ್ಷಸಾಂ। ಇಹ ತತ್ತತ್ ಸಮಾಸಾದ್ಯ ವಿಹಿತೋ ವಾಕ್ಯವಿಸ್ತರಃ।। ತೀರ್ಥಾನಾಂ ನಾಮ ಪುಣ್ಯಾನಾಂ ದೇಶಾನಾಂ ಚೈವ ಕೀರ್ತಿತಮ್। ವನಾನಾಂ ಪರ್ವತಾನಾಂ ಚ ನದೀನಾಂ ಸಾಗರಸ್ಯ ಚ।। ದೇಶಾನಾಂ ಚೈವ ಪುಣ್ಯಾನಾಂ ಪುರಾಣಂ ಚೈವ ಕೀರ್ತನಮ್। ಉಪಚಾರಸ್ತಥೈವಾಗ್ರ್ಯೋ ಧೀರ್ಯಮಪ್ಯತಿಮಾನುಷಮ್।। ಇಹ ಸತ್ಕಾರಯೋಗಶ್ಚ ಭಾರತೇ ಪರಮರ್ಷಿಣಾ। ರಥಾಶ್ವವಾರಣೇಂದ್ರಾಣಾಂ ಕಲ್ಪನಾ ಯುದ್ಧಕೌಶಲಮ್।। ವಾಕ್ಯಜಾತಿರನೇಕಾ ಚ ಸರ್ವಮಸ್ಮಿನ್ ಸಮರ್ಪಿತಮ್। ↩︎
-
ಇದಕ್ಕೆ ಬದಲಾಗಿ ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಅಹ್ನಾ ಯದೇನಃ ಕ್ರಿಯತಂ ಇಂದ್ರಿಯೈರ್ಮನಸಾಪಿ ವಾ। ಜ್ಞಾನಾದಜ್ಞಾನತೋ ವಾಪಿ ಪ್ರಕರೋತಿ ನರಶ್ಚ ಯತ್।। ↩︎
-
ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಇದಂ ಹಿ ವೇದೈಃ ಸಮಿತಂ ಪವಿತ್ರಮಪಿ ಚೋತ್ತಮಮ್। ಶ್ರವ್ಯಂ ಶೃತಿಸುಖಂ ಚೈವ ಪಾವನಂ ಶೀಲವರ್ಧನಮ್।। ಯ ಇದಂ ಭಾರತಂ ರಾಜನ್ ವಾಚಕಾಯ ಪ್ರಯಚ್ಛತಿ। ತೇನ ಸರ್ವಾ ಮಹೀ ದತ್ತಾ ಭವೇತ್ ಸಾಗರಮೇಖಲಾ।। ಪಾರಿಕ್ಷಿತ ಕಥಾಂ ದಿವ್ಯಾಂ ಪುಣ್ಯಾಯ ವಿಜಯಾಯ ಚ। ಕಥ್ಯಮಾನಾಂ ಮಯಾ ಕೃತ್ಸಾಂ ಶೃಣು ಹರ್ಷಕರೀಮಿಮಾಮ್।। ↩︎