052 ಸರ್ಪನಾಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 52

ಸಾರ ಯಾಗದಲ್ಲಿ ನಾಶವಾದ ಸರ್ಪಗಳ ಹೆಸರುಗಳು (1-22).

01052001 ಶೌನಕ ಉವಾಚ।
01052001a ಯೇ ಸರ್ಪಾಃ ಸರ್ಪಸತ್ರೇಽಸ್ಮಿನ್ಪತಿತಾ ಹವ್ಯವಾಹನೇ।
01052001c ತೇಷಾಂ ನಾಮಾನಿ ಸರ್ವೇಷಾಂ ಶ್ರೋತುಮಿಚ್ಛಾಮಿ ಸೂತಜ।।

ಶೌನಕನು ಹೇಳಿದನು: “ಸೂತಜ! ಆ ಸರ್ಪಸತ್ರದ ಹವ್ಯವಾಹನನಲ್ಲಿ ಬಿದ್ದ ಸರ್ಪಗಳೆಲ್ಲವುಗಳ ಹೆಸರುಗಳನ್ನು ಕೇಳಲು ಬಯಸುತ್ತೇನೆ.”

01052002 ಸೂತ ಉವಾಚ।
01052002a ಸಹಸ್ರಾಣಿ ಬಹೂನ್ಯಸ್ಮಿನ್ಪ್ರಯುತಾನ್ಯರ್ಬುದಾನಿ ಚ।
01052002c ನ ಶಕ್ಯಂ ಪರಿಸಂಖ್ಯಾತುಂ ಬಹುತ್ವಾದ್ವೇದವಿತ್ತಮ।।

ಸೂತನು ಹೇಳಿದನು: “ವೇದವಿತ್ತಮ! ಅವು ಬಹಳ - ಸಹಸ್ರ ಲಕ್ಷಗಟ್ಟಲೆ. ಅವು ಎಷ್ಟಿದ್ದವೆಂದರೆ ಅವುಗಳನ್ನು ಲೆಕ್ಕಮಾಡಲು ಸಾಧ್ಯವೇ ಇಲ್ಲ.

01052003a ಯಥಾಸ್ಮೃತಿ ತು ನಾಮಾನಿ ಪನ್ನಗಾನಾಂ ನಿಬೋಧ ಮೇ।
01052003c ಉಚ್ಯಮಾನಾನಿ ಮುಖ್ಯಾನಾಂ ಹುತಾನಾಂ ಜಾತವೇದಸಿ।।

ಆ ಜಾತವೇದಸದಲ್ಲಿ ಸುಟ್ಟುಹೋದ ಮುಖ್ಯವಾದ ಎಷ್ಟು ಪನ್ನಗಗಳ ಹೆಸರುಗಳನ್ನು ಕೇಳಿದ್ದಿದು ನೆನಪಿದೆಯೋ ಅವುಗಳನ್ನು ಹೇಳುತ್ತೇನೆ.

01052004a ವಾಸುಕೇಃ ಕುಲಜಾಂಸ್ತಾವತ್ಪ್ರಾಧಾನ್ಯೇನ ನಿಬೋಧ ಮೇ।
01052004c ನೀಲರಕ್ತಾನ್ಸಿತಾನ್ಘೋರಾನ್ಮಹಾಕಾಯಾನ್ವಿಷೋಲ್ಬಣಾನ್।।

ನನಗೆ ತಿಳಿದಂತೆ ವಾಸುಕಿಯ ಕುಲದಲ್ಲಿ ಜನಿಸಿದ ಪ್ರಧಾನ ಸರ್ಪಗಳು ನೀಲರಕ್ತವನ್ನು ಹೊಂದಿ ಘೋರವೂ, ಮಹಾಕಾಯಗಳೂ, ಅತ್ಯಂತ ವಿಷಕಾರಿಗಳೂ ಆಗಿದ್ದವು.

01052005a 1ಕೋಟಿಕೋ ಮಾನಸಃ ಪೂರ್ಣಃ ಸಹಃ ಪೈಲೋ ಹಲೀಸಕಃ2
01052005c ಪಿಚ್ಛಿಲಃ ಕೋಣಪಶ್ಚಕ್ರಃ ಕೋಣವೇಗಃ3 ಪ್ರಕಾಲನಃ।।
01052006a ಹಿರಣ್ಯವಾಹಃ4 ಶರಣಃ ಕಕ್ಷಕಃ ಕಾಲದಂತಕಃ।
01052006c ಏತೇ ವಾಸುಕಿಜಾ ನಾಗಾಃ ಪ್ರವಿಷ್ಟಾ ಹವ್ಯವಾಹನಂ।।

ಕೋಟಿಕ, ಮಾನಸ, ಪೂರ್ಣ, ಪೈಲ, ಹಲೀಸಕ, ಪಿಚ್ಛಿಲ, ಕೋಣಪಶ್ಚಕ, ಕೋಣವೇಗ, ಪ್ರಕಾಲನ, ಹಿರಣ್ಯವಾಹ, ಶರಣ, ಕಕ್ಷಕ, ಕಾಲದಂತಕ ಇವರೆಲ್ಲರೂ ಹವ್ಯವಾಹನನಲ್ಲಿ ಬಿದ್ದ ವಾಸುಕಿಯ ಮಕ್ಕಳು.

01052007a 5ತಕ್ಷಕಸ್ಯ ಕುಲೇ ಜಾತಾನ್ಪ್ರವಕ್ಷ್ಯಾಮಿ ನಿಬೋಧ ತಾನ್।
01052007c ಪುಚ್ಛಾಂಡಕೋ ಮಂಡಲಕಃ ಪಿಂಡಭೇತ್ತಾ6 ರಭೇಣಕಃ।।
01052008a ಉಚ್ಛಿಖಃ ಸುರಸೋ ದ್ರಂಗೋ ಬಲಹೇಡೋ ವಿರೋಹಣಃ7
01052008c ಶಿಲೀಶಲಕರೋ ಮೂಕಃ ಸುಕುಮಾರಃ ಪ್ರವೇಪನಃ।।
01052009a ಮುದ್ಗರಃ ಶಶರೋಮಾ ಚ ಸುಮನಾ ವೇಗವಾಹನಃ8
01052009c ಏತೇ ತಕ್ಷಕಜಾ ನಾಗಾಃ ಪ್ರವಿಷ್ಟಾ ಹವ್ಯವಾಹನಂ।।

ತಕ್ಷಕನ ಕುಲದಲ್ಲಿ ಹುಟ್ಟಿದವರ ಕುರಿತು ಹೇಳುತ್ತೇನೆ, ಕೇಳು. ಪುಚ್ಛಾಂಡಕ, ಮಂಡಲಕ, ಪಿಂಡಭೇತ್ತ, ರಭೇಣಕ, ಉಚ್ಛಿಖ, ಸುರಸ, ದ್ರಂಗ, ಬಲಹೇಡ, ವಿರೋಹಣ, ಶಿಲೀಶಲಕರ, ಮೂಕ, ಸುಕುಮಾರ, ಪ್ರವೇಪನ, ಮುದ್ಗರ, ಶಶರೋಮ, ಸುಮನ, ವೇಗವಾಹನ, ಇವರೆಲ್ಲರು ಹವ್ಯವಾಹನನಲ್ಲಿ ಬೆಂದುಹೋದ ತಕ್ಷಕನಲ್ಲಿ ಜನಿಸಿದ ನಾಗಗಳು.

01052010a ಪಾರಾವತಃ ಪಾರಿಯಾತ್ರಃ9 ಪಾಂಡರೋ ಹರಿಣಃ ಕೃಶಃ।
01052010c ವಿಹಂಗಃ ಶರಭೋ ಮೋದಃ10 ಪ್ರಮೋದಃ ಸಂಹತಾಂಗದಃ11।।
01052011a ಐರಾವತಕುಲಾದೇತೇ ಪ್ರೈವಿಷ್ಟಾ ಹವ್ಯವಾಹನಂ।

ಪಾರಾವತ, ಪಾರಿಯಾತ್ರ, ಪಾಂಡರ, ಹರಿಣ, ಕೃಶ, ವಿಹಂಗ, ಶರಭ, ಮೋದ, ಪ್ರಮೋದ, ಸಂಹತಾಂಗದ, ಇವರೆಲ್ಲರೂ ಹವ್ಯವಾಹನನಲ್ಲಿ ಬಿದ್ದ ಐರಾವತ ಕುಲದವರು.

01052011c ಕೌರವ್ಯಕುಲಜಾನ್ನಾಗಾನ್ ಶೃಣು ಮೇ ದ್ವಿಜಸತ್ತಮ।।
01052012a ಐಂಡ್ಢಿಲಃ12 ಕುಂಡಲೋ ಮುಂಡೋ13 ವೇಣಿಸ್ಕಂಧಃ ಕುಮಾರಕಃ।
01052012c ಬಾಹುಕಃ ಶೃಂಗವೇಗಶ್ಚ ಧೂರ್ತಕಃ ಪಾತಪಾತರೌ।।

ದ್ವಿಜಸತ್ತಮ! ಕೌರವ್ಯನ ಕುಲದಲ್ಲಿ ಹುಟ್ಟಿದ ನಾಗಗಳ ಹೆಸರುಗಳನ್ನು ಕೇಳು. ಐಂಡ್ಢಿಲ, ಕುಂಡಲ, ಮುಂಡ, ವೇಣಿಸ್ಕಂಧ, ಕುಮಾರಕ, ಬಾಹುಕ, ಶೃಂಗವೇಗ, ಧೂರ್ತಕ, ಮತ್ತು ಪಾತಪಾತರ.

01052013a ಧೃತರಾಷ್ಟ್ರಕುಲೇ ಜಾತಾನ್ ಶೃಣು ನಾಗಾನ್ಯಥಾತಥಂ।
01052013c ಕೀರ್ತ್ಯಮಾನಾನ್ಮಯಾ ಬ್ರಹ್ಮನ್ವಾತವೇಗಾನ್ವಿಷೋಲ್ಬಣಾನ್।।
01052014a ಶಂಕುಕರ್ಣಃ ಪಿಂಗಲಕಃ ಕುಠಾರಮುಖಮೇಚಕೌ14
01052014c ಪೂರ್ಣಾಂಗದಃ ಪೂರ್ಣಮುಖಃ ಪ್ರಹಸಃ ಶಕುನಿರ್ಹರಿಃ15।।
01052015a ಆಮಾಹಥಃ ಕೋಮಥಕಃ ಶ್ವಸನೋ ಮಾನವೋ ವಟಃ16
01052015c ಭೈರವೋ ಮುಂಡವೇದಾಂಗಃ ಪಿಶಂಗಶ್ಚೋದ್ರಪಾರಗಃ।।
01052016a ಋಷಭೋ ವೇಗವಾನ್ನಾಮ ಪಿಂಡಾರಕಮಹಾಹನೂ।
01052016c ರಕ್ತಾಂಗಃ ಸರ್ವಸಾರಂಗಃ ಸಮೃದ್ಧಃ ಪಾಟರಾಕ್ಷಸೌ17।।
01052017a ವರಾಹಕೋ ವಾರಣಕಃ ಸುಮಿತ್ರಶ್ಚಿತ್ರವೇದಿಕಃ18
01052017c ಪರಾಶರಸ್ತರುಣಕೋ ಮಣಿಸ್ಕಂಧಸ್ತಥಾರುಣಿಃ।।

ಬ್ರಾಹ್ಮಣ! ನಾನು ಈಗ ಧೃತರಾಷ್ಟ್ರನ ಕುಲದಲ್ಲಿ ಜನಿಸಿದ ವಾಯುವೇಗಿ ವಿಷೋಲ್ಬಣ ನಾಗಗಳ ಕುರಿತು ಹೇಳುತ್ತೇನೆ, ಕೇಳು. ಶಂಕುಕರ್ಣ, ಪಿಂಕಲಕ, ಕುಠಾರಮುಖ, ಮೇಚಕ, ಪೂರ್ಣಾಂಗದ, ಪೂರ್ಣಮುಖ, ಪ್ರಹಸ, ಶಕುನಿ, ಹರಿ, ಆಮಹಠ, ಕೋಮಠಕ, ಶ್ವಸನ, ಮಾನವ, ವಟ, ಭೈರವ, ಮುಂಡವೇದಾಂಗ, ಪಿಶಂಗ, ಉದ್ರಪಾರಗ, ವೇಗವಂತ ಋಷಭ, ಮಹಾಹನು ಪಿಂಡಾರಕ, ರಕ್ತಾಂಗ, ಸರ್ವಸಾರಂಗ, ಸಮೃದ್ಧ, ಪಾಟರಾಕ್ಷಸ, ವರಾಹಕ, ವಾರಣಕ, ಸುಮಿತ್ರ, ಚಿತ್ರವೇದಿಕ, ಪರಾಶರ, ತರುಣಕ, ಮಣಿಸ್ಕಂಧ ಮತ್ತು ಅರುಣಿ.

01052018a ಇತಿ ನಾಗಾ ಮಯಾ ಬ್ರಹ್ಮನ್ಕೀರ್ತಿತಾಃ ಕೀರ್ತಿವರ್ಧನಾಃ।
01052018c ಪ್ರಾಧಾನ್ಯೇನ ಬಹುತ್ವಾತ್ತು ನ ಸರ್ವೇ ಪರಿಕೀರ್ತಿತಾಃ।।

ಬ್ರಾಹ್ಮಣ! ಪ್ರಧಾನ ಪ್ರಸಿದ್ಧ ನಾಗಗಳ ಹೆಸರುಗಳನ್ನು ಹೇಳಿದ್ದೇನೆ. ತುಂಬಾ ಇರುವುದರಿಂದ ಎಲ್ಲರ ಹೆಸರುಗಳನ್ನೂ ಹೇಳಲಿಲ್ಲ.

01052019a ಏತೇಷಾಂ ಪುತ್ರಪೌತ್ರಾಸ್ತು ಪ್ರಸವಸ್ಯ ಚ ಸಂತತಿಃ।
01052019c ನ ಶಕ್ಯಾಃ ಪರಿಸಂಖ್ಯಾತುಂ ಯೇ ದೀಪ್ತಂ ಪಾವಕಂ ಗತಾಃ।।

ಉರಿಯುತ್ತಿರುವ ಬೆಂಕಿಯಲ್ಲಿ ಹೋದ ಇವುಗಳ ಪುತ್ರ ಪೌತ್ರರನ್ನು ಮತ್ತು ಅವರ ಸಂತತಿಗಳನ್ನು ಎಣಿಸಲೂ ಸಾಧ್ಯವಿಲ್ಲ.

01052020a ಸಪ್ತಶೀರ್ಷಾ ದ್ವಿಶೀರ್ಷಾಶ್ಚ ಪಂಚಶೀರ್ಷಾಸ್ತಥಾಪರೇ।।
01052020c ಕಾಲಾನಲವಿಷಾ ಘೋರಾ ಹುತಾಃ ಶತಸಹಸ್ರಶಃ।।

ಏಳು ಹೆಡೆಗಳಿದ್ದ, ಎರಡು ಹೆಡೆಗಳಿದ್ದ, ಮತ್ತು ಇನ್ನು ಐದು ಹೆಡೆಗಳನ್ನು ಹೊಂದಿದ್ದ ಕಾಲಾನಲದಂಥ ಘೋರ ವಿಷವನ್ನು ಹೊಂದಿದ್ದ ನೂರಾರು ಸಹಸ್ರಾರು ಸರ್ಪಗಳು ಹುತರಾದರು.

01052021a ಮಹಾಕಾಯಾ ಮಹಾವೀರ್ಯಾಃ ಶೈಲಶೃಂಗಸಮುಚ್ಛ್ರಯಾಃ।
01052021c ಯೋಜನಾಯಾಮವಿಸ್ತಾರಾ ದ್ವಿಯೋಜನಸಮಾಯತಾಃ।।

ಮಹಾಕಾಯ, ಮಹಾವೀರ್ಯ, ಶೈಲಶೃಂಗದಂತೆ ತೋರುತ್ತಿದ್ದ ಅವುಗಳು ವಿಸ್ತಾರದಲ್ಲಿ ಒಂದು ಯೋಜನ ಅಗಲ ಮತ್ತು ಎರಡು ಯೋಜನ ಉದ್ದವಿದ್ದವು.

01052022a ಕಾಮರೂಪಾಃ ಕಾಮಗಮಾ ದೀಪ್ತಾನಲವಿಷೋಲ್ಬಣಾಃ।
01052022c ದಗ್ಧಾಸ್ತತ್ರ ಮಹಾಸತ್ರೇ ಬ್ರಹ್ಮದಂಡನಿಪೀಡಿತಾಃ।।

ಕಾಮರೂಪಿಗಳೂ, ಬೇಕಾದ್ದಲ್ಲಿ ಹೋಗುವಂಥಹವೂ, ಉರಿಯುತ್ತಿರುವ ಬೆಂಕಿಯಂತೆ ವಿಷವನ್ನು ಹೊಂದಿರುವವೂ ಆದ ಹಲವಾರು ನಾಗಗಳು ಬ್ರಹ್ಮದಂಡಪೀಡಿತರಾಗಿ ಆ ಮಹಾಸತ್ರದಲ್ಲಿ ಭಸ್ಮವಾದವು.”

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪನಾಮಕಥನೇ ದ್ವಿಪಂಚಾಶತ್ತಮೋಽಧ್ಯಾಯಃ। ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪನಾಮಕಥನದಲ್ಲಿ ಐವತ್ತೆರಡನೆಯ ಅಧ್ಯಾಯವು.

  1. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಅವಶಾನ್ಮಾತೃವಾಗ್ದಂಡಪೀಡಿತಾನ್ ಕೃಪಣಾನ್ ಹುತಾನ್| ಎಂಬ ಶ್ಲೋಕಾರ್ಧವಿದೆ. ↩︎

  2. ಕೋಟಿಶೋ ಮಾನಸಃ ಪೂರ್ಣಃ ಶಲಃ ಪಾಲೋ ಹಲೀಮಕಃ| ಎಂಬ ಪಾಠಾಂತರವಿದೆ (ನೀಲಕಂಠ). ↩︎

  3. ಕಾಲವೇಗಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  4. ಹಿರಣ್ಯಬಾಹುಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  5. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಅಧಿಕ ಶ್ಲೋಕವಿದೆ: ಅನ್ಯೇ ಚ ಬಹವೋ ವಿಪ್ರ ತಥಾ ವೈ ಕುಲಸಂಭವಾಃ| ಪ್ರದೀಪ್ತಾಗ್ನೌ ಹುತಾಃ ಸರ್ವೇ ಘೋರರೂಪಾ ಮಹಾಬಲಾಃ|| ↩︎

  6. ಪಿಂಡಸೇಕ್ತಾ ಎಂಬ ಪಾಠಾಂತರವಿದೆ (ನೀಲಕಂಠೀಯ). ↩︎

  7. ಉಚ್ಛಿಕಃ ಶರಭೋ ಭಂಗೋ ಬಿಲ್ವತೇಜಾ ವಿರೋಹಣಃ| ಎಂಬ ಪಾಠಾಂತರವಿದೆ (ನೀಲಕಂಠ). ↩︎

  8. ಮುದ್ಗರಃ ಶಿಶುರೋಮಾ ಚ ಸುರೋಮಾ ಚ ಮಹಾಹನುಃ| ಎಂಬ ಪಾಠಾಂತರವಿದೆ (ನೀಲಕಂಠ). ↩︎

  9. ಪಾರಿಜಾತಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  10. ಮೇದಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  11. ಸಂಹತಾಪನಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  12. ಎರಕಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  13. ವೇಣೀ ಎಂಬ ಪಾಠಾಂತರವಿದೆ (ನೀಲಕಂಠ). ↩︎

  14. ಪಿಠರಕಃ ಕುಠಾರಮುಖಸೇಚಕೌ ಎಂಬ ಪಾಠಾಂತರವಿದೆ (ನೀಲಕಂಠ). ↩︎

  15. ಶಕುನಿರ್ದರಿಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  16. ಅಮಾಹಠಃ ಕಾಮಠಕಃ ಸುಷೇಣೋ ಮಾನಸೋಽವ್ಯಯಃ| ಎಂಬ ಪಾಠಾಂತರವಿದೆ (ನೀಲಕಂಠ). ↩︎

  17. ಸಮೃದ್ಧಪಟವಾಸಕೌ ಎಂಬ ಪಾಠಾಂತರವಿದೆ (ನೀಲಕಂಠ). ↩︎

  18. ವರಾಹಕೋ ವೀರಣಕಃ ಸುಚಿತ್ರಶ್ಚಿತ್ರವೇಗಿಕಃ| ಎಂಬ ಪಾಠಾಂತರವಿದೆ (ನೀಲಕಂಠ). ↩︎