ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 22
ಸಾರ
ಇಂದ್ರನು ಮಳೆಸುರಿಸಿ ಸರ್ಪಗಳನ್ನು ಪುನಃಶ್ಚೇತರಿಸಿದುದು (1-5).01022001 ಸೂತ ಉವಾಚ।
01022001a ಏವಂ ಸ್ತುತಸ್ತದಾ ಕದ್ರ್ವಾ ಭಗವಾನ್ ಹರಿವಾಹನಃ।
01022001c ನೀಲಜೀಮೂತಸಂಘಾತೈರ್ವ್ಯೋಮ ಸರ್ವಂ ಸಮಾವೃಣೋತ್।।
ಸೂತನು ಹೇಳಿದನು: “ಈ ರೀತಿ ಕದ್ರುವಿನಿಂದ ಸ್ತುತಿಸಲ್ಪಟ್ಟ ಭಗವಾನ್ ಹರಿವಾಹನನು ಆಕಾಶವನ್ನು ಕಪ್ಪು ಮೋಡಗಳಿಂದ ತುಂಬಿದನು.
01022002a ತೇ ಮೇಘಾ ಮುಮುಚುಸ್ತೋಯಂ ಪ್ರಭೂತಂ ವಿದ್ಯುದುಜ್ಜ್ವಲಾಃ।
01022002c ಪರಸ್ಪರಮಿವಾತ್ಯರ್ಥಂ ಗರ್ಜಂತಃ ಸತತಂ ದಿವಿ।।
“ಮಳೆ ಸುರಿಸಿ” ಎಂದು ಅಜ್ಞಾಪಿಸಲು ಆ ಮೇಘಗಳು ಆಕಾಶದಲ್ಲಿ ಸತತವಾಗಿ ಪರಸ್ಪರರನ್ನು ತಾಗಿ ಮಿಂಚಿನಿಂದ ಬೆಳಗಿ ಗುಡುಗಿದವು.
01022003a ಸಂಘಾತಿತಮಿವಾಕಾಶಂ ಜಲದೈಃ ಸುಮಹಾದ್ಭುತೈಃ।
01022003c ಸೃಜದ್ಭಿರತುಲಂ ತೋಯಮಜಸ್ರಂ ಸುಮಹಾರವೈಃ।।
ಹೊಡೆದಾಡುತ್ತಿವೆಯೋ ಎನ್ನುವಹಾಗೆ ಸುಮಹಾದ್ಭುತ ಅತುಲ ನೀರನ್ನು ಮಳೆಯನ್ನಾಗಿ ಸುರಿಸಿದವು.
01022004a ಸಂಪ್ರನೃತ್ತಮಿವಾಕಾಶಂ ಧಾರೋರ್ಮಿಭಿರನೇಕಶಃ।
01022004c ಮೇಘಸ್ತನಿತನಿರ್ಘೋಷಮಂಬರಂ ಸಮಪದ್ಯತ।।
ಅನೇಕ ಮಿಂಚು ಗುಡುಗುಗಳಿಂದ ಮಳೆಯನ್ನು ಸುರಿಸುತ್ತಿರಲು ಅಂಬರವು ಹುಚ್ಚಾಗಿ ಕುಣಿಯುತ್ತಿರುವಂತೆ ತೋರುತ್ತಿತ್ತು.
01022005a ನಾಗಾನಾಮುತ್ತಮೋ ಹರ್ಶಸ್ತದಾ ವರ್ಷತಿ ವಾಸವೇ।
01022005c ಆಪೂರ್ಯತ ಮಹೀ ಚಾಪಿ ಸಲಿಲೇನ ಸಮಂತತಃ।।
ವಾಸವನು ಮಳೆ ಸುರಿಸುತ್ತಿದ್ದಂತೆ ನಾಗಗಳು ತುಂಬಾ ಹರ್ಷಿತಗೊಂಡವು ಮತ್ತು ಮಹಿಯೂ ಕೂಡ ಶೀತಲ ಶುದ್ಧ ನೀರಿನಿಂದ ತುಂಬಿಕೊಂಡಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ದ್ವಾವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.