012 ಸರ್ಪಸತ್ರಪಸ್ತಾವನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ ಶ್ರೀ ಮಹಾಭಾರತ ಆದಿ ಪರ್ವ ಪೌಲೋಮ ಪರ್ವ

12

ಸಾರ

ಆಸ್ತೀಕನ ಕುರಿತು ರುರುವು ತನ್ನ ತಂದೆಯನ್ನು ಪ್ರಶ್ನಿಸುವುದು (1-5).

01012001 ರುರುರುವಾಚ।
01012001a ಕಥಂ ಹಿಂಸಿತವಾನ್ಸರ್ಪಾನ್ ಕ್ಷತ್ರಿಯೋ ಜನಮೇಜಯಃ।
01012001c ಸರ್ಪಾ ವಾ ಹಿಂಸಿತಾಸ್ತಾತ ಕಿಮರ್ಥಂ ದ್ವಿಜಸತ್ತಮ।।

ರುರುವು ಹೇಳಿದನು: “ದ್ವಿಜಸತ್ತಮ! ಕ್ಷತ್ರಿಯ ಜನಮೇಜಯನು ಸರ್ಪಗಳನ್ನು ಹೇಗೆ ಮತ್ತು ಯಾವ ಕಾರಣಕ್ಕಾಗಿ ಹಿಂಸಿಸಿದನು?

01012002a ಕಿಮರ್ಥಂ ಮೋಕ್ಷಿತಾಶ್ಚೈವ ಪನ್ನಗಾಸ್ತೇನ ಶಂಸ ಮೇ।
01012002c ಆಸ್ತೀಕೇನ ತದಾಚಕ್ಷ್ವ ಶ್ರೋತುಮಿಚ್ಛಾಮ್ಯಶೇಷತಃ।।

ಆ ಪನ್ನಗಗಳು ಏಕೆ ಆಸ್ತೀಕನಿಂದ ರಕ್ಷಿಸಲ್ಪಟ್ಟವು ವಿವರಿಸು. ಏನನ್ನೂ ಬಿಡದೇ ಕೇಳಲು ಇಚ್ಛಿಸುತ್ತೇನೆ.”

01012003 ಋಷಿರುವಾಚ।
01012003a ಶ್ರೋಷ್ಯಸಿ ತ್ವಂ ರುರೋ ಸರ್ವಮಾಸ್ತೀಕಚರಿತಂ ಮಹತ್।
0112003c ಬ್ರಾಹ್ಮಣಾನಾಂ ಕಥಯತಾಮಿತ್ಯುಕ್ತ್ವಾಂತರಧೀಯತ।।

ಋಷಿಯು ಹೇಳಿದನು: “ರುರು! ಬ್ರಾಹ್ಮಣರು ಕಥೆಯನ್ನು ಹೇಳುವಾಗ ನೀನು ಮಹತ್ತರ ಆಸ್ತೀಕಚರಿತವನ್ನು ಸಂಪೂರ್ಣವಾಗಿ ಕೇಳುತ್ತೀಯೆ” ಹೀಗೆ ಹೇಳಿ ಅವನು ಅಂತರ್ಧಾನನಾದನು.”

01012004 ಸೂತ ಉವಾಚ।
01012004a ರುರುಶ್ಚಾಪಿ ವನಂ ಸರ್ವಂ ಪರ್ಯಧಾವತ್ಸಮಂತತಃ।
01012004c ತಂ ಋಷಿಂ ದ್ರಷ್ಟುಮನ್ವಿಚ್ಛನ್ಸಂಶ್ರಾಂತೋ ನ್ಯಪತದ್ಭುವಿ।।

ಸೂತನು ಹೇಳಿದನು: “ರುರುವು ಆ ಋಷಿಗಾಗಿ ವನವನ್ನೆಲ್ಲಾ ಹುಡುಕಿದನು. ಹುಡುಕಾಡಿ ಬಳಲಿದ ಅವನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು.

01012005a ಲಬ್ಧಸಂಜ್ಞೋ ರುರುಶ್ಚಾಯಾತ್ತಚ್ಚಾಚಖ್ಯೌ ಪಿತುಸ್ತದಾ।
01012005c ಪಿತಾ ಚಾಸ್ಯ ತದಾಖ್ಯಾನಂ ಪೃಷ್ಟಃ ಸರ್ವಂ ನ್ಯವೇದಯತ್।।

ಎಚ್ಚೆತ್ತ ರುರುವು ತನ್ನ ತಂದೆಗೆ ಆ ಕಥೆಯನ್ನು ಹೇಳಲು ಕೇಳಿಕೊಂಡನು. ಆಗ ಅವನ ತಂದೆಯು ಆ ಕಥೆಯನ್ನು ಸಂಪೂರ್ಣವಾಗಿ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಸರ್ಪಸತ್ರಪ್ರಸ್ತಾವನೋ ನಾಮ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಸರ್ಪಸತ್ರಪಸ್ತಾವನವೆಂಬ ಹನ್ನೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೪/೧೦೦, ಅಧ್ಯಾಯಗಳು-೧೨/೧೯೯೫, ಶ್ಲೋಕಗಳು-೭೯೮/೭೩೭೮೪