ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಪರ್ವಸಂಗ್ರಹ ಪರ್ವ
ಅಧ್ಯಾಯ 2
ಸಾರ
ಸಮಂತಪಂಚಕದ ಮೂಲ ಮತ್ತು ಮಹಾತ್ಮೆ (1-10). ಅಕ್ಷೌಹಿಣಿಯ ಪರಿಮಾಣ, ಮಹಾಭಾರತ ಯುದ್ಧದ ದಿನಗಳ ಸಾರಾಂಶ, ಮತ್ತು ಕೃತಿಯ ಮಹತ್ವ (11-30). ನೂರು ಪರ್ವಗಳ ಹೆಸರುಗಳು (31-70). ಹದಿನೆಂಟು ಪರ್ವಗಳ ಸಾರಾಂಶ (71-230). ಕೃತಿಯ ಮಹಾತ್ಮೆ, ಫಲಶ್ರುತಿ (231-240).
01002001 ಋಷಯ ಊಚುಃ।
01002001a ಸಮಂತಪಂಚಕಮಿತಿ ಯದುಕ್ತಂ ಸೂತನಂದನ।
01002001c ಏತತ್ಸರ್ವಂ ಯಥಾನ್ಯಾಯಂ ಶ್ರೋತುಮಿಚ್ಛಾಮಹೇ ವಯಂ।।
ಋಷಿಗಳು ಹೇಳಿದರು: “ಸೂತನಂದನ! ನೀನು ಹೇಳಿದ ಸಮಂತಪಂಚಕದ ಕುರಿತು ಸರ್ವವನ್ನೂ ಯಥಾವತ್ತಾಗಿ ಕೇಳಲು ಬಯಸುತ್ತೇವೆ.”
01002002 ಸೂತ ಉವಾಚ।
01002002a ಶುಶ್ರೂಷಾ ಯದಿ ವೋ1 ವಿಪ್ರಾ ಬ್ರುವತಶ್ಚ ಕಥಾಃ ಶುಭಾಃ।
01002002c ಸಮಂತಪಂಚಕಾಖ್ಯಂ ಚ ಶ್ರೋತುಮರ್ಹಥ ಸತ್ತಮಾಃ।।
ಸೂತನು ಹೇಳಿದನು: “ವಿಪ್ರರೇ! ನನ್ನ ಮಾತುಗಳನ್ನು ಕೇಳಿ. ಸತ್ತಮರಾದ ನೀವು ನಾನು ಈಗ ಹೇಳುವ ಶುಭ ಸಮಂತಪಂಚಕಾಖ್ಯ2ವನ್ನು ಕೇಳಲು ಅರ್ಹರಿದ್ದೀರಿ.
01002003a ತ್ರೇತಾದ್ವಾಪರಯೋಃ ಸಂಧೌ ರಾಮಃ ಶಸ್ತ್ರಭೃತಾಂ ವರಃ।
01002003c ಅಸಕೃತ್ಪಾರ್ಥಿವಂ ಕ್ಷತ್ರಂ ಜಘಾನಾಮರ್ಷಚೋದಿತಃ।।
ತ್ರೇತ-ದ್ವಾಪರ ಯುಗಗಳ ಸಂಧಿಯಲ್ಲಿ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ರಾಮನು ಕ್ಷತ್ರಿಯರ ಮೇಲಿನ ಕೋಪದಿಂದ ಹಲವಾರು ಪಾರ್ಥಿವರನ್ನು ಸಂಹರಿಸಿದನು.
01002004a ಸ ಸರ್ವಂ ಕ್ಷತ್ರಮುತ್ಸಾದ್ಯ ಸ್ವವೀರ್ಯೇಣಾನಲದ್ಯುತಿಃ।
01002004c ಸಮಂತಪಂಚಕೇ ಪಂಚ ಚಕಾರ ರುಧಿರಹ್ರದಾನ್।।
ತನ್ನ ವೀರ್ಯದಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಅವನು ಸರ್ವ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿ ಸಮಂತಪಂಚಕದಲ್ಲಿ ರಕ್ತದ ಐದು ಸರೋವರಗಳನ್ನು ರಚಿಸಿದನು.
01002005a ಸ ತೇಷು ರುಧಿರಾಂಭಸ್ಸು ಹ್ರದೇಷು ಕ್ರೋಧಮೂರ್ಚ್ಛಿತಃ।
01002005c ಪಿತೄನ್ಸಂತರ್ಪಯಾಮಾಸ ರುಧಿರೇಣೇತಿ ನಃ ಶ್ರುತಂ।।
ಆ ಕ್ರೋಧಮೂರ್ಛಿತನು ರಕ್ತಸರೋವರಗಳಲ್ಲಿ ನಿಂತು ತನ್ನ ಪಿತೃಗಳಿಗೆ ರಕ್ತದಿಂದಲೇ ತರ್ಪಣಗಳನ್ನಿತ್ತನೆಂದು ಕೇಳಿದ್ದೇವೆ.
01002006a 3ಅಥರ್ಚೀಕಾದಯೋಽಭ್ಯೇತ್ಯ ಪಿತರೋ ಬ್ರಾಹ್ಮಣರ್ಷಭಂ4।
01002006c ತಂ ಕ್ಷಮಸ್ವೇತಿ ಸಿಷಿಧುಸ್ತತಃ ಸ ವಿರರಾಮ ಹ।।
ಆಗ ಋಚೀಕ5 ಮೊದಲಾದ ಪಿತೃಗಳು ಆಗಮಿಸಿ “ಅವರನ್ನು ಕ್ಷಮಿಸು!” ಎಂದು ಉಪದೇಶಿಸಿ ಅವನನ್ನು ವಿರಮಿಸಿದರು.
01002007a ತೇಷಾಂ ಸಮೀಪೇ ಯೋ ದೇಶೋ ಹ್ರದಾನಾಂ ರುಧಿರಾಂಭಸಾಂ।
01002007c ಸಮಂತಪಂಚಕಮಿತಿ ಪುಣ್ಯಂ ತತ್ಪರಿಕೀರ್ತಿತಂ।।
ರಕ್ತದ ಈ ಸರೋವರಗಳ ಸಮೀಪದ ಪ್ರದೇಶವು ಪುಣ್ಯ ಸಮಂತಪಂಚಕ ಎಂದು ಪ್ರಕೀರ್ತಿಯಲ್ಲಿದೆ.
01002008a ಯೇನ ಲಿಂಗೇನ ಯೋ ದೇಶೋ ಯುಕ್ತಃ ಸಮುಪಲಕ್ಷ್ಯತೇ।
01002008c ತೇನೈವ ನಾಮ್ನಾ ತಂ ದೇಶಂ ವಾಚ್ಯಮಾಹುರ್ಮನೀಷಿಣಃ।।
ವಿದ್ವಾಂಸರ ಪ್ರಕಾರ ಯಾವುದೇ ದೇಶದ ಹೆಸರು ಆ ದೇಶದ ಮುಖ್ಯ ಗುಣಲಕ್ಷಣಗಳಿಗೆ ಹೊಂದಿಕೊಂಡಿರಬೇಕು6.
01002009a ಅಂತರೇ ಚೈವ ಸಂಪ್ರಾಪ್ತೇ ಕಲಿದ್ವಾಪರಯೋರಭೂತ್।
01002009c ಸಮಂತಪಂಚಕೇ ಯುದ್ಧಂ ಕುರುಪಾಂಡವಸೇನಯೋಃ।।
ಕಲಿ-ದ್ವಾಪರಯುಗಗಳ ಸಂಧಿಕಾಲದಲ್ಲಿ ಸಮಂತಪಂಚಕದಲ್ಲಿಯೇ ಕುರುಪಾಂಡವರ ಸೇನೆಗಳ ನಡುವೆ ಯುದ್ಧ ನಡೆಯಿತು.
01002010a ತಸ್ಮಿನ್ಪರಮಧರ್ಮಿಷ್ಠೇ ದೇಶೇ ಭೂದೋಷವರ್ಜಿತೇ।
01002010c ಅಷ್ಟಾದಶ ಸಮಾಜಗ್ಮುರಕ್ಷೌಹಿಣ್ಯೋ ಯುಯುತ್ಸಯಾ।।
ಅದೇ ಭೂದೋಷವರ್ಜಿತ7 ಪರಮಧರ್ಮಿಷ್ಠ ಪ್ರದೇಶದಲ್ಲಿ ಹದಿನೆಂಟು ಅಕ್ಷೌಹಿಣೀ ಸೇನೆಗಳು ಯುದ್ಧಕ್ಕಾಗಿ ಸೇರಿದ್ದವು.
01002011a 8ಏವಂ ನಾಮಾಭಿನಿರ್ವೃತ್ತಂ ತಸ್ಯ ದೇಶಸ್ಯ ವೈ ದ್ವಿಜಾಃ।
01002011c ಪುಣ್ಯಶ್ಚ ರಮಣೀಯಶ್ಚ ಸ ದೇಶೋ ವಃ ಪ್ರಕೀರ್ತಿತಃ।।
ದ್ವಿಜರೇ! ಇದೇ ಪುಣ್ಯ ಮತ್ತು ರಮಣೀಯವೆಂದು ಪ್ರಕೀರ್ತಿತ ಆ ದೇಶದ ಹೆಸರಿಗೆ ಸಂಬಂಧಿಸಿದ ವೃತ್ತಾಂತ.
01002012a ತದೇತತ್ಕಥಿತಂ ಸರ್ವಂ ಮಯಾ ವೋ ಮುನಿಸತ್ತಮಾಃ9।
01002012c ಯಥಾ ದೇಶಃ ಸ ವಿಖ್ಯಾತಸ್ತ್ರಿಷು ಲೋಕೇಷು ವಿಶ್ರುತಃ10।।
ಮುನಿಸತ್ತಮರೇ! ಮೂರು ಲೋಕಗಳಲ್ಲಿಯೂ ವಿಖ್ಯಾತ ಈ ಪ್ರದೇಶದ ಕುರಿತಾದ ಸರ್ವವನ್ನು ನಿಮಗೆ ಹೇಳಿದ್ದೇನೆ.”
01002013 ಋಷಯ ಊಚುಃ।
01002013a ಅಕ್ಷೌಹಿಣ್ಯ ಇತಿ ಪ್ರೋಕ್ತಂ ಯತ್ತ್ವಯಾ ಸೂತನಂದನ।
01002013c ಏತದಿಚ್ಛಾಮಹೇ ಶ್ರೋತುಂ ಸರ್ವಮೇವ ಯಥಾತಥಂ।।
ಋಷಿಗಳು ಹೇಳಿದರು: “ಸೂತನಂದನ! ನೀನು ಅಕ್ಷೌಹಿಣಿ ಎಂದು ಹೇಳಿದೆಯಲ್ಲ ಅದರ ಕುರಿತು ಸರ್ವವನ್ನೂ ಕೇಳಲು ಇಚ್ಛಿಸುತ್ತೇವೆ.
01002014a ಅಕ್ಷೌಹಿಣ್ಯಾಃ ಪರೀಮಾಣಂ ರಥಾಶ್ವನರದಂತಿನಾಂ।
01002014c ಯಥಾವಚ್ಚೈವ ನೋ ಬ್ರೂಹಿ ಸರ್ವಂ ಹಿ ವಿದಿತಂ ತವ।।
ನಿನಗೆ ಸರ್ವವೂ ತಿಳಿದಿರುವುದರಿಂದ ಒಂದು ಅಕ್ಷೌಹಿಣಿಯಲ್ಲಿ ರಥ, ಅಶ್ವ, ನರ ಮತ್ತು ಆನೆಗಳ ಪರಿಮಾಣ ಎಷ್ಟೆಂದು ಹೇಳು.”
01002015 ಸೂತ ಉವಾಚ।
01002015a ಏಕೋ ರಥೋ ಗಜಶ್ಚೈಕೋ ನರಾಃ ಪಂಚ ಪದಾತಯಃ।
01002015c ತ್ರಯಶ್ಚ ತುರಗಾಸ್ತಜ್ಞೈಃ ಪತ್ತಿರಿತ್ಯಭಿಧೀಯತೇ।।
ಸೂತನು ಹೇಳಿದನು: “ಒಂದು ರಥ, ಒಂದು ಆನೆ, ಐದು ಪಾದಾಳುಗಳು ಮತ್ತು ಮೂರು ಕುದುರೆಗಳನ್ನು ಸೇರಿ ಒಂದು ಪತ್ತಿ ಎಂದು ತಜ್ಞರು ಹೇಳುತ್ತಾರೆ.
01002016a ಪತ್ತಿಂ ತು ತ್ರಿಗುಣಾಮೇತಾಮಾಹುಃ ಸೇನಾಮುಖಂ ಬುಧಾಃ।
01002016c ತ್ರೀಣಿ ಸೇನಾಮುಖಾನ್ಯೇಕೋ ಗುಲ್ಮ ಇತ್ಯಭಿಧೀಯತೇ।।
ತಿಳಿದವರ ಪ್ರಕಾರ ಮೂರು ಪತ್ತಿಗಳು ಸೇರಿ ಒಂದು ಸೇನಾಮುಖ, ಮತ್ತು ಮೂರು ಸೇನಾಮುಖಗಳು ಸೇರಿ ಒಂದು ಗುಲ್ಮ.
01002017a ತ್ರಯೋ ಗುಲ್ಮಾ ಗಣೋ ನಾಮ ವಾಹಿನೀ ತು ಗಣಾಸ್ತ್ರಯಃ।
01002017c ಸ್ಮೃತಾಸ್ತಿಸ್ರಸ್ತು ವಾಹಿನ್ಯಃ ಪೃತನೇತಿ ವಿಚಕ್ಷಣೈಃ।।
ಮೂರು ಗುಲ್ಮಗಳು ಒಂದು ಗಣದಲ್ಲಿ, ಮೂರು ಗಣಗಳು ಒಂದು ವಾಹಿನಿಯಲ್ಲಿ ಮತ್ತು ಮೂರು ವಾಹಿನಿಗಳು ಒಂದು ಪೃತದಲ್ಲಿ ಸೇರಿವೆ.
01002018a ಚಮೂಸ್ತು ಪೃತನಾಸ್ತಿಸ್ರಸ್ತಿಸ್ರಶ್ಚಂವಸ್ತ್ವನೀಕಿನೀ।
01002018c ಅನೀಕಿನೀಂ ದಶಗುಣಾಂ ಪ್ರಾಹುರಕ್ಷೌಹಿಣೀಂ ಬುಧಾಃ।।
ಮೂರು ಪೃತಗಳು ಒಂದು ಚಮುವನ್ನೂ, ಮೂರು ಚಮುಗಳು ಒಂದು ಅನೀಕಿನಿಯನ್ನೂ ಮತ್ತು ಹತ್ತು ಅನೀಕಿನಿಗಳು ಒಂದು ಅಕ್ಷೌಹಿಣಿಯನ್ನು ಮಾಡುತ್ತವೆ ಎಂದು ತಿಳಿದವರು ಹೇಳುತ್ತಾರೆ11.
01002019a ಅಕ್ಷೌಹಿಣ್ಯಾಃ ಪ್ರಸಂಖ್ಯಾನಂ ರಥಾನಾಂ ದ್ವಿಜಸತ್ತಮಾಃ।
01002019c ಸಂಖ್ಯಾಗಣಿತತತ್ತ್ವಜ್ಞೈಃ ಸಹಸ್ರಾಣ್ಯೇಕವಿಂಶತಿಃ।।
01002020a ಶತಾನ್ಯುಪರಿ ಚೈವಾಷ್ಟೌ ತಥಾ ಭೂಯಶ್ಚ ಸಪ್ತತಿಃ।
01002020c ಗಜಾನಾಂ ತು ಪರೀಮಾಣಮೇತದೇವಾತ್ರ ನಿರ್ದಿಶೇತ್12।।
ದ್ವಿಜಸತ್ತಮರೇ! ಗಣಿತಜ್ಞರು ಒಂದು ಅಕ್ಷೌಹಿಣಿಯಲ್ಲಿ ಇಪ್ಪತ್ತೊಂದು ಸಾವಿರದ ಎಂಟುನೂರಾ ಎಪ್ಪತ್ತೊಂದು (21,871) ರಥಗಳು ಮತ್ತು ಅಷ್ಟೇ ಸಂಖ್ಯೆಯ ಆನೆಗಳು ಇರುತ್ತವೆಯೆಂದು ಲೆಖ್ಕ ಹಾಕಿದ್ದಾರೆ.
01002021a ಜ್ಞೇಯಂ ಶತಸಹಸ್ರಂ ತು ಸಹಸ್ರಾಣಿ ತಥಾ ನವ13।
01002021c ನರಾಣಾಮಪಿ ಪಂಚಾಶಚ್ಚತಾನಿ ತ್ರೀಣಿ ಚಾನಘಾಃ।।
01002022a ಪಂಚಷಷ್ಠಿಸಹಸ್ರಾಣಿ ತಥಾಶ್ವಾನಾಂ ಶತಾನಿ ಚ।
01002022c ದಶೋತ್ತರಾಣಿ ಷಟ್ ಪ್ರಾಹುರ್ಯಥಾವದಿಹ ಸಂಖ್ಯಯಾ।।
ಒಂದು ಅಕ್ಷೌಹಿಣಿಯಲ್ಲಿ ಒಂದು ಲಕ್ಷ ಒಂಭತ್ತು ಸಾವಿರದ ಮುನ್ನೂರಾ ಐವತ್ತು (109,350) ಕಾಲ್ದಾಳುಗಳೂ ಮತ್ತು ಅರವತ್ತೈದು ಸಾವಿರದ ಆರುನೂರಾ ಹತ್ತು (65,610) ಕುದುರೆಗಳೂ ಇರುತ್ತವೆ.
01002023a ಏತಾಮಕ್ಷೌಹಿಣೀಂ ಪ್ರಾಹುಃ ಸಂಖ್ಯಾತತ್ತ್ವವಿದೋ ಜನಾಃ।
01002023c ಯಾಂ ವಃ ಕಥಿತವಾನಸ್ಮಿ ವಿಸ್ತರೇಣ ದ್ವಿಜೋತ್ತಮಾಃ14।।
ದ್ವಿಜೋತ್ತಮರೇ! ಸಂಖ್ಯಾತತ್ವವನ್ನು ತಿಳಿದ ಜನರು ನಾನು ವಿಸ್ತಾರವಾಗಿ ಹೇಳಿದುದನ್ನೇ ಒಂದು ಅಕ್ಷೌಹಿಣೀ ಎಂದು ಪರಿಗಣಿಸುತ್ತಾರೆ.
01002024a ಏತಯಾ ಸಂಖ್ಯಯಾ ಹ್ಯಾಸನ್ಕುರುಪಾಂಡವಸೇನಯೋಃ।
01002024c ಅಕ್ಷೌಹಿಣ್ಯೋ ದ್ವಿಜಶ್ರೇಷ್ಠಾಃ ಪಿಂಡೇನಾಷ್ಟಾದಶೈವ ತಾಃ15।।
ದ್ವಿಜಶ್ರೇಷ್ಠರೇ! ಕುರುಪಾಂಡವರ ಸೇನೆಗಳ ಸಂಖ್ಯೆ ಇಂತಹ ಹದಿನೆಂಟು ಅಕ್ಷೌಹಿಣಿಗಳಾಗಿತ್ತು16.
01002025a ಸಮೇತಾಸ್ತತ್ರ ವೈ ದೇಶೇ ತತ್ರೈವ ನಿಧನಂ ಗತಾಃ।
01002025c ಕೌರವಾನ್ಕಾರಣಂ ಕೃತ್ವಾ ಕಾಲೇನಾದ್ಭುತಕರ್ಮಣಾ।।
ಅದ್ಭುತ ಕರ್ಮಿ ಕಾಲವು ಕೌರವರನ್ನೇ ಕಾರಣವನ್ನಾಗಿ ಮಾಡಿಕೊಂಡು ಅದೇ ಪ್ರದೇಶದಲ್ಲಿ17 ಅವರೆಲ್ಲರನ್ನೂ ಒಟ್ಟುಮಾಡಿ ಅಲ್ಲಿಯೇ ಎಲ್ಲರನ್ನೂ ನಾಶಮಾಡಿತು.
01002026a ಅಹಾನಿ ಯುಯುಧೇ ಭೀಷ್ಮೋ ದಶೈವ ಪರಮಾಸ್ತ್ರವಿತ್।
01002026c ಅಹಾನಿ ಪಂಚ ದ್ರೋಣಸ್ತು ರರಕ್ಷ ಕುರುವಾಹಿನೀಂ।।
ಪರಮಾಸ್ತ್ರಧಾರಿ ಭೀಷ್ಮನು ಹತ್ತು ದಿವಸ ಯುದ್ಧಮಾಡಿದನು. ದ್ರೋಣನು ಕುರುವಾಹಿನಿಯನ್ನು ಐದು ದಿವಸ ರಕ್ಷಿಸಿದನು.
01002027a ಅಹನೀ ಯುಯುಧೇ ದ್ವೇ ತು ಕರ್ಣಃ ಪರಬಲಾರ್ದನಃ।
01002027c ಶಲ್ಯೋಽರ್ಧದಿವಸಂ ತ್ವಾಸೀದ್ಗದಾಯುದ್ಧಮತಃ ಪರಂ।।
ಪರಬಲರ್ದನ ಕರ್ಣನು ಎರಡು ದಿವಸ ಯುದ್ಧ ಮಾಡಿದನು. ಶಲ್ಯನು ಅರ್ಧ ದಿವಸ ಮತ್ತು ಗದಾಯುದ್ಧವು ನಂತರದ ಅರ್ಧ ದಿವಸದಲ್ಲಿ ನಡೆಯಿತು.
01002028a ತಸ್ಯೈವ ತು ದಿನಸ್ಯಾಂತೇ ಹಾರ್ದಿಕ್ಯದ್ರೌಣಿಗೌತಮಾಃ18।
01002028c ಪ್ರಸುಪ್ತಂ ನಿಶಿ ವಿಶ್ವಸ್ತಂ ಜಘ್ನುರ್ಯೌಧಿಷ್ಠಿರಂ ಬಲಂ।।
ಅದೇ ದಿವಸದ ರಾತ್ರಿ ಹಾರ್ದಿಕ್ಯ, ದ್ರೌಣಿ ಮತ್ತು ಗೌತಮರು ಮಲಗಿದ್ದ ಯುಧಿಷ್ಠಿರನ ಸರ್ವ ಸೇನೆಯನ್ನೂ ಸಂಹರಿಸಿದರು.
01002029a 19ಯತ್ತು ಶೌನಕ ಸತ್ರೇ ತೇ ಭಾರತಾಖ್ಯಾನವಿಸ್ತರಂ20।
01002029c ಆಖ್ಯಾಸ್ಯೇ ತತ್ರ ಪೌಲೋಮಮಾಖ್ಯಾನಂ ಚಾದಿತಃ ಪರಂ।।
ಆದರೆ ಶೌನಕ! ನಿನ್ನ ಸತ್ರದಲ್ಲಿ ಭಾರತಾಖ್ಯಾನವನ್ನು ವಿಸ್ತಾರವಾಗಿ ಹೇಳುವಾಗ ಪೌಲೋಮನ ಕಥೆಯೊಂದಿಗೆ ಪ್ರಾರಂಭಿಸುತ್ತೇನೆ.
01002030a ವಿಚಿತ್ರಾರ್ಥಪದಾಖ್ಯಾನಮನೇಕಸಮಯಾನ್ವಿತಂ।
01002030c ಅಭಿಪನ್ನಂ21 ನರೈಃ ಪ್ರಾಜ್ಞೈರ್ವೈರಾಗ್ಯಮಿವ ಮೋಕ್ಷಿಭಿಃ।।
ವಿಚಿತ್ರಾರ್ಥಪದಗಳನ್ನು ಕೂಡಿದ, ಅನೇಕ ಕಾಲಗಳನ್ನು ಆವರಿಸಿರುವ22 ಈ ಆಖ್ಯಾನವು ಮೋಕ್ಷಕ್ಕೆ ವೈರಾಗ್ಯವಿದ್ದಂತೆ ಎಂದು ಪ್ರಾಜ್ಞರು ಅಭಿಪ್ರಾಯಪಡುತ್ತಾರೆ.
01002031a ಆತ್ಮೇವ ವೇದಿತವ್ಯೇಷು ಪ್ರಿಯೇಷ್ವಿವ ಚ ಜೀವಿತಂ।
01002031c ಇತಿಹಾಸಃ ಪ್ರಧಾನಾರ್ಥಃ ಶ್ರೇಷ್ಠಃ ಸರ್ವಾಗಮೇಷ್ವಯಂ।।
ತಿಳಿಯುವಂಥವುಗಳಲ್ಲಿ ಆತ್ಮ ಮತ್ತು ಪ್ರಿಯವಾದವುಗಳಲ್ಲಿ ಜೀವವು ಹೇಗೋ ಹಾಗೆ ಎಲ್ಲ ಆಗಮಗಳಲ್ಲಿ ಈ ಇತಿಹಾಸವು ಶ್ರೇಷ್ಠ ಪ್ರಧಾನವೆಂದು ಪರಿಗಣಿಸಲ್ಪಟ್ಟಿದೆ.
01002032a 23ಇತಿಹಾಸೋತ್ತಮೇ ಹ್ಯಸ್ಮಿನ್ನರ್ಪಿತಾ ಬುದ್ಧಿರುತ್ತಮಾ।
01002032c ಸ್ವರವ್ಯಂಜನಯೋಃ ಕೃತ್ಸ್ನಾ ಲೋಕವೇದಾಶ್ರಯೇವ ವಾಕ್।।
ಈ ಉತ್ತಮ ಇತಿಹಾಸದಲ್ಲಿ ಬುದ್ಧಿವಂತರು ಉತ್ತಮವೆಂದು ಸ್ವೀಕರಿಸಿರುವ, ವೇದಶಾಸ್ತ್ರಗಳ ಭಾಷೆಯೆಂದು ಪರಿಗಣಿಸಿರುವ ಸ್ವರ-ವ್ಯಂಜನಗಳ ಅದ್ಭುತ ವಿನ್ಯಾಸವಿದೆ.
01002033a ಅಸ್24 ಪ್ರಜ್ಞಾಭಿಪನ್ನಸ್ಯ ವಿಚಿತ್ರಪದಪರ್ವಣಃ।
01002033c 25ಭಾರತಸ್ಯೇತಿಹಾಸಸ್ಯ ಶ್ರೂಯತಾಂ ಪರ್ವಸಂಗ್ರಹಃ।।
ವಿಚಿತ್ರ ಪದಜೋಡಣೆಗಳನ್ನು ಹೊಂದಿ ಜ್ಞಾನವನ್ನು ನೀಡುವ ಈ ಭಾರತ ಇತಿಹಾಸದ ಪರ್ವಸಂಗ್ರಹವನ್ನು ಕೇಳಿರಿ.
01002034a ಪರ್ವಾನುಕ್ರಮಣೀ ಪೂರ್ವಂ ದ್ವಿತೀಯಂ ಪರ್ವಸಂಗ್ರಹಃ।
01002034c ಪೌಷ್ಯಂ ಪೌಲೋಮಮಾಸ್ತೀಕಮಾದಿವಂಶಾವತಾರಣಂ26।।
ಮೊದಲನೆಯದು (1) ಅನುಕ್ರಮಣಿಕಾ ಪರ್ವ, ಎರಡನೆಯದು (2) ಪರ್ವಸಂಗ್ರಹ. ನಂತರ (3) ಪೌಷ್ಯ, (4) ಪೌಲೋಮ, (5) ಆಸ್ತೀಕ, ಮತ್ತು (6) ಆದಿವಂಶಾವತರಣ ಪರ್ವಗಳು.
01002035a ತತಃ ಸಂಭವಪರ್ವೋಕ್ತಮದ್ಭುತಂ ದೇವನಿರ್ಮಿತಂ27।
01002035c ದಾಹೋ ಜತುಗೃಹಸ್ಯಾತ್ರ ಹೈಡಿಂಬಂ ಪರ್ವ ಚೋಚ್ಯತೇ।।
ಅನಂತರ ಅದ್ಭುತವಾದ ದೇವನಿರ್ಮಿತ (7) ಸಂಭವಪರ್ವವನ್ನು ಹೇಳಲಾಗಿದೆ. ಇದರ ನಂತರ (8) ಜತುಗೃಹದಾಹ ಪರ್ವ ಮತ್ತು (9) ಹಿಡಿಂಬ ಪರ್ವಗಳಿವೆ.
01002036a ತತೋ ಬಕವಧಃ ಪರ್ವ ಪರ್ವ ಚೈತ್ರರಥಂ ತತಃ।
01002036c ತತಃ ಸ್ವಯಂವರಂ ದೇವ್ಯಾಃ ಪಾಂಚಾಲ್ಯಾಃ ಪರ್ವ ಚೋಚ್ಯತೇ।।
ಅನಂತರ (10) ಬಕವಧ ಪರ್ವ ಮತ್ತು ನಂತರ (11) ಚೈತ್ರರಥ ಪರ್ವವಿದೆ. ಅನಂತರ ದೇವೀ ಪಾಂಚಾಲಿಯ (12) ಸ್ವಯಂವರ ಪರ್ವ ಎಂದು ಹೇಳಿದ್ದಾರೆ.
01002037a ಕ್ಷತ್ರಧರ್ಮೇಣ ನಿರ್ಜಿತ್ಯ ತತೋ ವೈವಾಹಿಕಂ ಸ್ಮೃತಂ।
01002037c ವಿದುರಾಗಮನಂ ಪರ್ವ ರಾಜ್ಯಲಂಭಸ್ತಥೈವ ಚ।।
ಅನಂತರ ಕ್ಷತ್ರಧರ್ಮದಿಂದ ಗೆದ್ದ (13) ವೈವಾಹಿಕ ಪರ್ವವಿದೆ. ನಂತರ (14) ವಿದುರಾಗಮನ ಪರ್ವ ಮತ್ತು (15) ರಾಜ್ಯಲಂಭ ಪರ್ವಗಳಿವೆ.
01002038a ಅರ್ಜುನಸ್ಯ ವನೇ ವಾಸಃ ಸುಭದ್ರಾಹರಣಂ ತತಃ।
01002038c ಸುಭದ್ರಾಹರಣಾದೂರ್ಧ್ವಂ ಜ್ಞೇಯಂ28 ಹರಣಹಾರಿಕಂ।।
ಅನಂತರ (16) ಅರ್ಜುನ ವನವಾಸ ಮತ್ತು (17) ಸುಭದ್ರಾಹರಣ ಪರ್ವಗಳಿವೆ. ಸುಭದ್ರಾಹರಣದ ನಂತರ (18) ಹರಣಹಾರಿಕ ಪರ್ವವಿದೆಯೆಂದು ತಿಳಿಯಬೇಕು.
01002039a ತತಃ ಖಾಂಡವದಾಹಾಖ್ಯಂ ತತ್ರೈವ ಮಯದರ್ಶನಂ।
01002039c ಸಭಾಪರ್ವ ತತಃ ಪ್ರೋಕ್ತಂ ಮಂತ್ರಪರ್ವ ತತಃ ಪರಂ।।
ಅನಂತರ (19) ಖಾಂಡವದಾಹ ಎಂಬ ಪರ್ವವಿದೆ ಮತ್ತು ಅದರಲ್ಲಿಯೇ ಮಯದರ್ಶನವೂ ಇದೆ. ನಂತರದ್ದು (20) ಸಭಾಪರ್ವವೆಂದೂ ಅದರ ನಂತರದ್ದು (21) ಮಂತ್ರಪರ್ವವೆಂದೂ ಹೇಳಿದ್ದಾರೆ.
01002040a ಜರಾಸಂಧವಧಃ ಪರ್ವ ಪರ್ವ ದಿಗ್ವಿಜಯಸ್ತಥಾ29।
01002040c ಪರ್ವ ದಿಗ್ವಿಜಯಾದೂರ್ಧ್ವಂ ರಾಜಸೂಯಿಕಮುಚ್ಯತೇ।।
(22) ಜರಾಸಂಧವಧ ಪರ್ವ, (23) ದಿಗ್ವಿಜಯ ಪರ್ವ, ಹಾಗೂ ದಿಗ್ವಿಜಯದ ನಂತರ (24) ರಾಜಸೂಯಿಕ ಪರ್ವ ಎನ್ನುತ್ತಾರೆ.
01002041a ತತಶ್ಚಾರ್ಘಾಭಿಹರಣಂ ಶಿಶುಪಾಲವಧಸ್ತತಃ।
01002041c ದ್ಯೂತಪರ್ವ ತತಃ ಪ್ರೋಕ್ತಮನುದ್ಯೂತಮತಃ ಪರಂ।।
ನಂತರದ್ದು (25) ಅರ್ಘ್ಯಾಭಿಹರಣ ಪರ್ವ ಮತ್ತು ಅದರ ನಂತರ (26) ಶಿಶುಪಾಲವಧ ಪರ್ವ. ಅನಂತರ (27) ದ್ಯೂತಪರ್ವ ಮತ್ತು (28) ಅನುದ್ಯೂತ ಪರ್ವ ಎನ್ನುತ್ತಾರೆ.
01002042a ತತ ಆರಣ್ಯಕಂ ಪರ್ವ ಕಿರ್ಮೀರವಧ ಏವ ಚ।
01002042c 30ಈಶ್ವರಾರ್ಜುನಯೋರ್ಯುದ್ಧಂ ಪರ್ವ ಕೈರಾತಸಂಜ್ಞಿತಂ।।
ನಂತರ (29) ಆರಣ್ಯಕ ಪರ್ವ ಮತ್ತು (30) ಕಿರ್ಮೀರವಧ ಪರ್ವ. ಅನಂತರ ಈಶ್ವರ ಮತ್ತು ಅರ್ಜುನರ ಯುದ್ಧವನ್ನೊಳಗೊಂಡ (31) ಕೈರಾತ ಪರ್ವವಿದೆ.
01002043a ಇಂದ್ರಲೋಕಾಭಿಗಮನಂ ಪರ್ವ ಜ್ಞೇಯಮತಃ ಪರಂ।
01002043c 31ತೀರ್ಥಯಾತ್ರಾ ತತಃ ಪರ್ವ ಕುರುರಾಜಸ್ಯ ಧೀಮತಃ।।
ನಂತರ (32) ಇಂದ್ರಲೋಕಾಭಿಗಮನ ಪರ್ವ ಎಂದು ತಿಳಿಯಬೇಕು. ಅನಂತರ ಧೀಮಂತ ಕುರುರಾಜ32ನ (33) ತೀರ್ಥಯಾತ್ರಾ ಪರ್ವವಿದೆ.
01002044a ಜಟಾಸುರವಧಃ ಪರ್ವ ಯಕ್ಷಯುದ್ಧಮತಃ ಪರಂ।
01002044c ತಥೈವಾಜಗರಂ ಪರ್ವ ವಿಜ್ಞೇಯಂ ತದನಂತರಂ।।33
ನಂತರದ್ದು (34) ಜಟಾಸುರವಧ ಪರ್ವ, (35) ಯಕ್ಷಯುದ್ಧ ಪರ್ವ, ಮತ್ತು (36) ಅಜಗರ ಪರ್ವಎಂದು ತಿಳಿಯಬೇಕು.
01002045a ಮಾರ್ಕಂಡೇಯಸಮಸ್ಯಾ ಚ ಪರ್ವೋಕ್ತಂ ತದನಂತರಂ34।
01002045c ಸಂವಾದಶ್ಚ ತತಃ ಪರ್ವ ದ್ರೌಪದೀಸತ್ಯಭಾಮಯೋಃ।।
ಅನಂತರದ ಪರ್ವವನ್ನು (37) ಮಾರ್ಕಂಡೇಯಸಮಸ್ಯಾ ಪರ್ವ ಎನ್ನುತ್ತಾರೆ. ಅನಂತರದ್ದು (38) ದ್ರೌಪದೀಸತ್ಯಭಾಮಾ ಸಂವಾದ ಪರ್ವವು.
01002046a ಘೋಷಯಾತ್ರಾ ತತಃ ಪರ್ವ ಮೃಗಸ್ವಪ್ನಭಯಂ35 ತತಃ।
01002046c ವ್ರೀಹಿದ್ರೌಣಿಕಮಾಖ್ಯಾನಂ ತತೋಽನಂತರಮುಚ್ಯತೇ36।।
ನಂತರ (39) ಘೋಷಯಾತ್ರಾ ಪರ್ವ ಮತ್ತು (40) ಮೃಗಸ್ವಪ್ನಭಯ ಪರ್ವ. ನಂತರದ್ದು (41) ವ್ರೀಹಿದ್ರೌಣಿಕಮಾಖ್ಯಾನ ಪರ್ವ ಎಂದು ಹೇಳುತ್ತಾರೆ.
01002047a ದ್ರೌಪದೀಹರಣಂ ಪರ್ವ ಸೈಂಧವೇನ ವನಾತ್ತತಃ37।
01002047c 38ಕುಂಡಲಾಹರಣಂ ಪರ್ವ ತತಃ ಪರಮಿಹೋಚ್ಯತೇ।।
ಅನಂತರ ಸೈಂಧವನಿಂದಾದ (42) ದ್ರೌಪದೀಹರಣ ಪರ್ವ. ಅನಂತರದ್ದು (43) ಕುಂಡಲಾಹರಣ ಪರ್ವ ಎನ್ನುತ್ತಾರೆ.
01002048a ಆರಣೇಯಂ ತತಃ ಪರ್ವ ವೈರಾಟಂ ತದನಂತರಂ।
01002048c 39ಕೀಚಕಾನಾಂ ವಧಃ ಪರ್ವ ಪರ್ವ ಗೋಗ್ರಹಣಂ ತತಃ।।
ನಂತರ (44) ಆರಣೇಯ ಪರ್ವ ಮತ್ತು (45) ವೈರಾಟ ಪರ್ವ. ಅನಂತರ (46) ಕೀಚಕವಧ ಪರ್ವ ಮತ್ತು (47) ಗೋಗ್ರಹಣ ಪರ್ವ.
01002049a ಅಭಿಮನ್ಯುನಾ ಚ ವೈರಾಟ್ಯಾಃ ಪರ್ವ ವೈವಾಹಿಕಂ ಸ್ಮೃತಂ।
01002049c ಉದ್ಯೋಗಪರ್ವ ವಿಜ್ಞೇಯಮತಊರ್ಧ್ವಂ ಮಹಾದ್ಭುತಂ।।
ನಂತರ ವೈರಾಟಿ40ಯೊಂದಿಗೆ ಅಭಿಮನ್ಯುವಿನ (48) ವೈವಾಹಿಕ ಪರ್ವ ಎನ್ನುತ್ತಾರೆ. ಅನಂತರ ಮಹಾದ್ಭುತವಾದ (49) ಉದ್ಯೋಗ ಪರ್ವವೆಂದು ತಿಳಿಯಬೇಕು.
01002050a ತತಃ ಸಂಜಯಯಾನಾಖ್ಯಂ ಪರ್ವ ಜ್ಞೇಯಮತಃ ಪರಂ।
01002050c ಪ್ರಜಾಗರಂ ತತಃ41 ಪರ್ವ ಧೃತರಾಷ್ಟ್ರಸ್ಯ ಚಿಂತಯಾ।।
ನಂತರದ ಪರ್ವಕ್ಕೆ (50) ಸಂಜಯಯಾನ ಪರ್ವ ಎಂಬ ಹೆಸರಿದೆಯೆಂದು ತಿಳಿಯಬೇಕು. ಅನಂತರ ಧೃತರಾಷ್ಟ್ರನ ಚಿಂತೆಗಳನ್ನೊಳಗೊಂಡ (51) ಪ್ರಜಾಗರ ಪರ್ವವಿದೆ.
01002051a ಪರ್ವ ಸಾನತ್ಸುಜಾತಂ ಚ ಗುಹ್ಯಮಧ್ಯಾತ್ಮದರ್ಶನಂ।
01002051c ಯಾನಸಂದಿಸ್ತತಃ ಪರ್ವ ಭಗವದ್ಯಾನಮೇವ ಚ।।
ನಂತರ ಗುಹ್ಯ ಅಧ್ಯಾತ್ಮದರ್ಶನವನ್ನು ನೀಡುವ (52) ಸನತ್ಸುಜಾತ ಪರ್ವ. ಅನಂತರ (53) ಯಾನಸಂಧಿ ಪರ್ವ ಮತ್ತು (54) ಭಗವದ್ಯಾನ ಪರ್ವ.
01002052a 42ಜ್ಞೇಯಂ ವಿವಾದಪರ್ವಾತ್ರ ಕರ್ಣಸ್ಯಾಪಿ ಮಹಾತ್ಮನಃ।
01002052c ನಿರ್ಯಾಣಂ ಪರ್ವ ಚ ತತಃ43 ಕುರುಪಾಂಡವಸೇನಯೋಃ।।
ನಂತರ ಮಹಾತ್ಮ ಕರ್ಣನ (55) ವಿವಾದ ಪರ್ವ, ಮತ್ತು ಕುರುಪಾಂಡವರ (56) ಸೇನಾನಿರ್ಯಾಣ ಪರ್ವ ಎಂದು ತಿಳಿಯಬೇಕು.
01002053a ರಥಾತಿರಥಸಂಖ್ಯಾ ಚ ಪರ್ವೋಕ್ತಂ ತದನಂತರಂ।
01002053c ಉಲೂಕದೂತಾಗಮನಂ ಪರ್ವಾಮರ್ಷವಿವರ್ಧನಂ।।
ಅದರ ನಂತರದ್ದು (57) ರಥಾತಿರಥಸಂಖ್ಯಾ ಪರ್ವ ಎನ್ನುತ್ತಾರೆ. ಅನಂತರ ಕೋಪವನ್ನು ವರ್ಧಿಸುವ (58) ಉಲೂಕದೂತಾಗಮನ ಪರ್ವ.
01002054a ಅಂಬೋಪಾಖ್ಯಾನಮಪಿ ಚ ಪರ್ವ ಜ್ಞೇಯಮತಃ ಪರಂ।
01002054c ಭೀಷ್ಮಾಭಿಷೇಚನಂ ಪರ್ವ ಜ್ಞೇಯಮದ್ಭುತಕಾರಣಂ44।।
ಅನಂತರ ಅದ್ಭುತಕಾರಣ (59) ಭೀಷ್ಮಾಭಿಷೇಚನ ಪರ್ವ ಮತ್ತು (60) ಅಂಬೋಪಾಖ್ಯಾನ ಪರ್ವ ಎಂದು ತಿಳಿಯಬೇಕು.
01002055a ಜಂಬೂಖಂಡವಿನಿರ್ಮಾಣಂ ಪರ್ವೋಕ್ತಂ ತದನಂತರಂ।
01002055c ಭೂಮಿಪರ್ವ ತತೋ ಜ್ಞೇಯಂ45 ದ್ವೀಪವಿಸ್ತಾರಕೀರ್ತನಂ।।
ಅದರ ನಂತರದ್ದು (61) ಜಂಬೂಖಂಡವಿನಿರ್ಮಾಣ ಪರ್ವ ಎಂದು ಹೇಳುತ್ತಾರೆ. ನಂತರದ್ದು ದ್ವೀಪಗಳನ್ನು ವಿಸ್ತಾರವಾಗಿ ಹೇಳಿರುವ (62) ಭೂಮಿಪರ್ವ ಎಂದು ತಿಳಿಯಬೇಕು.
01002056a ಪರ್ವೋಕ್ತಂ ಭಗವದ್ಗೀತಾ ಪರ್ವ ಭೀಷ್ಮವಧಸ್ತತಃ।
01002056c ದ್ರೋಣಾಭಿಷೇಕಃ ಪರ್ವೋಕ್ತಂ ಸಂಶಪ್ತಕವಧಸ್ತತಃ46।।
ನಂತರ (63) ಭಗವದ್ಗೀತಾ ಪರ್ವ, (64) ಭೀಷ್ಮವಧ ಪರ್ವ ಎನ್ನುತ್ತಾರೆ. ನಂತರದ್ದು (65) ದ್ರೋಣಾಭಿಷೇಕ ಪರ್ವ ಮತ್ತು (66) ಸಂಶಪ್ತಕ ವಧಪರ್ವ ಎನ್ನುತ್ತಾರೆ.
01002057a ಅಭಿಮನ್ಯುವಧಃ ಪರ್ವ ಪ್ರತಿಜ್ಞಾಪರ್ವ ಚೋಚ್ಯತೇ।
01002057c ಜಯದ್ರಥವಧಃ ಪರ್ವ ಘಟೋತ್ಕಚವಧಸ್ತತಃ।।
ಅನಂತರ (67) ಅಭಿಮನ್ಯುವಧ ಪರ್ವ, (68) ಪ್ರತಿಜ್ಞಾ ಪರ್ವ, (69) ಜಯದ್ರಥ ವಧ ಪರ್ವ ಮತ್ತು (70) ಘಟೋತ್ಕಚವಧ ಪರ್ವ ಎನ್ನುತ್ತಾರೆ.
01002058a ತತೋ ದ್ರೋಣವಧಃ ಪರ್ವ ವಿಜ್ಞೇಯಂ ಲೋಮಹರ್ಷಣಂ।
01002058c ಮೋಕ್ಷೋ ನಾರಾಯಣಾಸ್ತ್ರಸ್ಯ ಪರ್ವಾನಂತರಮುಚ್ಯತೇ।।
ನಂತರದ್ದು ಲೋಮಹರ್ಷಣ (71) ದ್ರೋಣವಧ ಪರ್ವ ಎಂದು ತಿಳಿಯಬೇಕು. ನಂತರದ್ದಕ್ಕೆ (72) ನಾರಾಯಣಾಸ್ತ್ರಮೋಕ್ಷ ಪರ್ವ ಎನ್ನುತ್ತಾರೆ.
01002059a ಕರ್ಣಪರ್ವ ತತೋ ಜ್ಞೇಯಂ ಶಲ್ಯಪರ್ವ ತತಃ ಪರಂ।
01002059c ಹ್ರದಪ್ರವೇಶನಂ ಪರ್ವ ಗದಾಯುದ್ಧಮತಃ ಪರಂ।।
ನಂತರದ್ದು (73) ಕರ್ಣ ಪರ್ವ. ಅದರ ನಂತರದ್ದು (74) ಶಲ್ಯ ಪರ್ವ, (75) ಹ್ರದಪ್ರವೇಶ ಪರ್ವ ಮತ್ತು (76) ಗದಾಯುದ್ಧ ಪರ್ವ ಎಂದು ತಿಳಿದಿದೆ.
01002060a ಸಾರಸ್ವತಂ ತತಃ ಪರ್ವ ತೀರ್ಥವಂಶಗುಣಾನ್ವಿತಂ47।
01002060c ಅತ ಊರ್ಧ್ವಂ ತು ಬೀಭತ್ಸಂ48 ಪರ್ವ ಸೌಪ್ತಿಕಮುಚ್ಯತೇ।।
ಅನಂತರ ತೀರ್ಥಗಳ ಹುಟ್ಟು ಮತ್ತು ಗುಣಗಳನ್ನೊಳಗೊಂಡಿರುವ (77) ಸಾರಸ್ವತ ಪರ್ವವಿದೆ. ಇದರ ನಂತರ ಬೀಭತ್ಸವಾದ (78) ಸೌಪ್ತಿಕಪರ್ವವಿದೆ ಎನ್ನುತ್ತಾರೆ.
01002061a ಐಷೀಕಂ ಪರ್ವ ನಿರ್ದಿಷ್ಟಮತ49 ಊರ್ಧ್ವಂ ಸುದಾರುಣಂ।
01002061c ಜಲಪ್ರದಾನಿಕಂ ಪರ್ವ ಸ್ತ್ರೀಪರ್ವ ಚ ತತಃ ಪರಂ50।।
ಅದರ ನಂತರದ್ದು ನಿರ್ದಿಷ್ಟಮತ ಸುದಾರುಣ (79) ಐಷೀಕ ಪರ್ವವು. ಅದರ ನಂತರ (80) ಸ್ತ್ರೀಪರ್ವ ಮತ್ತು (81) ಜಲಪ್ರದಾನಿಕ ಪರ್ವಗಳು.
01002062a ಶ್ರಾದ್ಧಪರ್ವ ತತೋ ಜ್ಞೇಯಂ ಕುರೂಣಾಮೌರ್ಧ್ವದೇಹಿಕಂ।
01002062c ಆಭಿಷೇಚನಿಕಂ ಪರ್ವ ಧರ್ಮರಾಜಸ್ಯ ಧೀಮತಃ।।
ಅನಂತರದ್ದು ಕುರುಗಳ ಔರ್ಧ್ವದೇಹಿಕ ಕರ್ಮಗಳನ್ನೊಳಗೊಂಡ (82) ಶ್ರಾದ್ಧ ಪರ್ವವೆಂದು ತಿಳಿಯಬೇಕು. ನಂತರ ಧೀಮತ ಧರ್ಮರಾಜನ (83) ಅಭಿಷೇಚನಿಕ ಪರ್ವವಿದೆ.
01002063a ಚಾರ್ವಾಕನಿಗ್ರಹಃ ಪರ್ವ ರಕ್ಷಸೋ ಬ್ರಹ್ಮರೂಪಿಣಃ।
01002063c ಪ್ರವಿಭಾಗೋ ಗೃಹಾಣಾಂ ಚ ಪರ್ವೋಕ್ತಂ ತದನಂತರಂ।।
ನಂತರ ಬ್ರಾಹ್ಮಣ ರೂಪದಲ್ಲಿದ್ದ ರಾಕ್ಷಸ (84) ಚಾರ್ವಾಕನಿಗ್ರಹ ಪರ್ವ. ಅದರ ನಂತರ (85) ಗೃಹಪ್ರವಿಭಾಗ ಪರ್ವವಿದೆ.
01002064a ಶಾಂತಿಪರ್ವ ತತೋ ಯತ್ರ ರಾಜಧರ್ಮಾನುಕೀರ್ತನಂ51।
01002064c ಆಪದ್ಧರ್ಮಶ್ಚ ಪರ್ವೋಕ್ತಂ ಮೋಕ್ಷಧರ್ಮಸ್ತತಃ ಪರಂ।।
ಅನಂತರ ರಾಜಧರ್ಮಗಳನ್ನು ಹೇಳಿರುವ (86) ಶಾಂತಿಪರ್ವವಿದೆ. ಅದರ ನಂತರದ್ದು (87) ಆಪದ್ಧರ್ಮಪರ್ವ ಮತ್ತು (88) ಮೋಕ್ಷಧರ್ಮ ಪರ್ವಗಳೆಂದು ಹೇಳಿದ್ದಾರೆ.
01002065a 52ತತಃ ಪರ್ವ ಪರಿಜ್ಞೇಯಂ ಆನುಶಾಸನಿಕಂ ಪರಂ।
01002065c ಸ್ವರ್ಗಾರೋಹಣಿಕಂ ಪರ್ವ ತತೋ ಭೀಷ್ಮಸ್ಯ ಧೀಮತಃ।।
ಅನಂತರದ್ದು (89) ಆನುಶಾಸನಿಕ ಪರ್ವ ಎಂದು ತಿಳಿಯಬೇಕು. ಅನಂತರ ಧೀಮಂತ (90) ಭೀಷ್ಮ ಸ್ವರ್ಗಾರೋಹಣಿಕ ಪರ್ವವಿದೆ.
01002066a ತತೋಽಶ್ವಮೇಧಿಕಂ ಪರ್ವ ಸರ್ವಪಾಪಪ್ರಣಾಶನಂ।
01002066c ಅನುಗೀತಾ ತತಃ ಪರ್ವ ಜ್ಞೇಯಮಧ್ಯಾತ್ಮವಾಚಕಂ।।
ಅನಂತರ ಸರ್ವಪಾಪಗಳನ್ನೂ ನಾಶಪಡಿಸುವ (91) ಅಶ್ವಮೇಧಿಕ ಪರ್ವವಿದೆ. ಅನಂತರದ್ದು ಅಧ್ಯಾತ್ಮವಾಚಕವಾದ (92) ಅನುಗೀತಾ ಪರ್ವವೆಂದು ತಿಳಿಯಬೇಕು.
01002067a ಪರ್ವ ಚಾಶ್ರಮವಾಸಾಖ್ಯಂ ಪುತ್ರದರ್ಶನಮೇವ ಚ।
01002067c ನಾರದಾಗಮನಂ ಪರ್ವ ತತಃ ಪರಮಿಹೋಚ್ಯತೇ।।
ಅನಂತರ (93) ಆಶ್ರಮವಾಸಿಕ ಪರ್ವ, (94) ಪುತ್ರದರ್ಶನ ಪರ್ವ ಮತ್ತು (95) ನಾರದಾಗಮನ ಪರ್ವಗಳೆಂದು ಹೇಳುತ್ತಾರೆ.
01002068a ಮೌಸಲಂ ಪರ್ವ ಚ ತತೋ ಘೋರಂ ಸಮನುವರ್ಣ್ಯತೇ53।
01002068c ಮಹಾಪ್ರಸ್ಥಾನಿಕಂ ಪರ್ವ ಸ್ವರ್ಗಾರೋಹಣಿಕಂ ತತಃ।।
ಅನಂತರ ಘೋರವಾದ (96) ಮೌಸಲ ಪರ್ವದ ವರ್ಣನೆಯಿದೆ. ಅನಂತರ (97) ಮಹಾಪ್ರಸ್ಥಾನಿಕ ಪರ್ವ ಮತ್ತು (98) ಸ್ವರ್ಗಾರೋಹಣ ಪರ್ವ.
01002069a ಹರಿವಂಶಸ್ತತಃ ಪರ್ವ ಪುರಾಣಂ ಖಿಲಸಂಜ್ಞಿತಂ।
01002069c 54ಭವಿಷ್ಯತ್ಪರ್ವ55 ಚಾಪ್ಯುಕ್ತಂ ಖಿಲೇಷ್ವೇವಾದ್ಭುತಂ ಮಹತ್।।
ಅನಂತರ ಮಹಾಭಾರತದ ಖಿಲಭಾಗವೆಂದೂ ಪುರಾಣವೆಂದೂ ಪರಿಗಣಿಸಲ್ಪಟ್ಟಿರುವ (99) ಹರಿವಂಶ ಪರ್ವವಿದೆ. ಅನಂತರ ಮಹಾ ಅದ್ಭುತವಾದ ಖಿಲಭಾಗ (100) ಭವಿಷ್ಯಪರ್ವವಿದೆ56,57.
01002070a ಏತತ್ಪರ್ವಶತಂ ಪೂರ್ಣಂ ವ್ಯಾಸೇನೋಕ್ತಂ ಮಹಾತ್ಮನಾ।
01002070c ಯಥಾವತ್ಸೂತಪುತ್ರೇಣ ಲೌಮಹರ್ಷಣಿನಾ ಪುನಃ।।
01002071a ಕಥಿತಂ58 ನೈಮಿಷಾರಣ್ಯೇ ಪರ್ವಾಣ್ಯಷ್ಟಾದಶೈವ ತು।
01002071c ಸಮಾಸೋ ಭಾರತಸ್ಯಾಯಂ ತತ್ರೋಕ್ತಃ ಪರ್ವಸಂಗ್ರಹಃ।।
ಹೀಗೆ ಮಹಾತ್ಮ ವ್ಯಾಸನು ಸಂಪೂರ್ಣವಾಗಿ ಒಂದು ನೂರು ಪರ್ವಗಳನ್ನು ರಚಿಸಿದ್ದಾನೆ. ನಂತರ ನೈಮಿಷಾರಣ್ಯದಲ್ಲಿ ಸೂತಪುತ್ರ ಲೋಮಹರ್ಷಣನು ಇದನ್ನೇ ೧೮ ಪರ್ವಗಳಲ್ಲಿ ಹೇಳಿದನು. ಅವನು ಹೇಳಿದ ಪರ್ವಗಳ ವಿಷಯ ಸಾರಾಂಶವು ಈ ರೀತಿ ಇದೆ.
01002072a 59ಪೌಷ್ಯೇ ಪರ್ವಣಿ ಮಾಹಾತ್ಮ್ಯಮುತ್ತಂಕಸ್ಯೋಪವರ್ಣಿತಂ।
01002072c ಪೌಲೋಮೇ ಭೃಗುವಂಶಸ್ಯ ವಿಸ್ತಾರಃ ಪರಿಕೀರ್ತಿತಃ।।
ಪೌಷ್ಯ ಪರ್ವದಲ್ಲಿ ಮಹಾತ್ಮ ಉತ್ತಂಕನ ವರ್ಣನೆಯಿದೆ. ಪೌಲೋಮದಲ್ಲಿ ಭೃಗುವಂಶದ ವಿಸ್ತಾರ ಕೀರ್ತನೆಯಿದೆ.
01002073a ಆಸ್ತೀಕೇ ಸರ್ವನಾಗಾನಾಂ ಗರುಡಸ್ಯ ಚ ಸಂಭವಃ।
01002073c ಕ್ಷೀರೋದಮಥನಂ ಚೈವ ಜನ್ಮೋಚ್ಛೈಃಶ್ರವಸಸ್ತಥಾ।।
01002074a ಯಜತಃ ಸರ್ಪಸತ್ರೇಣ ರಾಜ್ಞಃ ಪಾರಿಕ್ಷಿತಸ್ಯ ಚ।
01002074c ಕಥೇಯಮಭಿನಿರ್ವೃತ್ತಾ ಭಾರತಾನಾಂ ಮಹಾತ್ಮನಾಂ।।
01002075a ವಿವಿಧಾಃ ಸಂಭವಾ ರಾಜ್ಞಾಮುಕ್ತಾಃ ಸಂಭವಪರ್ವಣಿ।
01002075c ಅನ್ಯೇಷಾಂ ಚೈವ ವಿಪ್ರಾಣಾಮೃಷೇರ್ದ್ವೈಪಾಯನಸ್ಯ ಚ।।
ಆಸ್ತೀಕದಲ್ಲಿ ಸರ್ವ ನಾಗಗಳ ಮತ್ತು ಗರುಡನ ಹುಟ್ಟು, ಕ್ಷೀರಸಾಗರ ಮಥನ, ಉಚ್ಛೈಶ್ರವದ ಜನನ, ಮತ್ತು ರಾಜ ಪಾರಿಕ್ಷಿತನಿಂದ ಯಜಿಸಲ್ಪಟ್ಟ ಸರ್ಪಸತ್ರದ ಕಥೆಗಳಿವೆ. ಮಹಾತ್ಮ ಭಾರತರ, ವಿವಿಧ ರಾಜರುಗಳ, ಋಷಿ ದ್ವೈಪಾಯನ ಮತ್ತು ಅನ್ಯ ವಿಪ್ರರ ಸಂಭವಗಳನ್ನು ಸಂಭವಪರ್ವದಲ್ಲಿ ಹೇಳಲಾಗಿದೆ.
01002076a ಅಂಶಾವತರಣಂ ಚಾತ್ರ ದೇವಾನಾಂ ಪರಿಕೀರ್ತಿತಂ।
01002076c ದೈತ್ಯಾನಾಂ ದಾನವಾನಾಂ ಚ ಯಕ್ಷಾಣಾಂ ಚ ಮಹೌಜಸಾಂ।।
01002077a ನಾಗಾನಾಮಥ ಸರ್ಪಾಣಾಂ ಗಂಧರ್ವಾಣಾಂ ಪತತ್ರಿಣಾಂ।
01002077c ಅನ್ಯೇಷಾಂ ಚೈವ ಭೂತಾನಾಂ ವಿವಿಧಾನಾಂ ಸಮುದ್ಭವಃ।।
ದೇವ, ದೈತ್ಯ, ದಾನವ, ಯಕ್ಷ, ಮಹೌಜಸ ನಾಗ, ಸರ್ಪ, ಗಂಧರ್ವ, ಪಕ್ಷಿ ಮತ್ತು ಇತರ ವಿವಿಧ ಭೂತಗಳ ಸಮುದ್ಭವವನ್ನು ಅಂಶಾವತರಣದಲ್ಲಿ ವರ್ಣಿಸಲಾಗಿದೆ.
01002078a 60ವಸೂನಾಂ ಪುನರುತ್ಪತ್ತಿರ್ಭಾಗೀರಥ್ಯಾಂ ಮಹಾತ್ಮನಾಂ।
01002078c ಶಂತನೋರ್ವೇಶ್ಮನಿ ಪುನಸ್ತೇಷಾಂ ಚಾರೋಹಣಂ ದಿವಿ।।
01002079a ತೇಜೋಂಶಾನಾಂ ಚ ಸಂಘಾತಾದ್61 ಭೀಷ್ಮಸ್ಯಾಪ್ಯತ್ರ ಸಂಭವಃ।
01002079c ರಾಜ್ಯಾನ್ನಿವರ್ತನಂ ಚೈವ62 ಬ್ರಹ್ಮಚರ್ಯವ್ರತೇ ಸ್ಥಿತಿಃ।।
01002080a ಪ್ರತಿಜ್ಞಾಪಾಲನಂ ಚೈವ ರಕ್ಷಾ ಚಿತ್ರಾಂಗದಸ್ಯ ಚ।
01002080c ಹತೇ ಚಿತ್ರಾಂಗದೇ ಚೈವ ರಕ್ಷಾ ಭ್ರಾತುರ್ಯವೀಯಸಃ।।
01002081a ವಿಚಿತ್ರವೀರ್ಯಸ್ಯ ತಥಾ ರಾಜ್ಯೇ ಸಂಪ್ರತಿಪಾದನಂ।
01002081c ಧರ್ಮಸ್ಯ ನೃಷು ಸಂಭೂತಿರಣೀಮಾಂಡವ್ಯಶಾಪಜಾ।।
01002082a ಕೃಷ್ಣದ್ವೈಪಾಯನಾಚ್ಚೈವ ಪ್ರಸೂತಿರ್ವರದಾನಜಾ।
01002082c ಧೃತರಾಷ್ಟ್ರಸ್ಯ ಪಾಂಡೋಶ್ಚ ಪಾಂಡವಾನಾಂ ಚ ಸಂಭವಃ।।
01002083a ವಾರಣಾವತಯಾತ್ರಾ ಚ ಮಂತ್ರೋ ದುರ್ಯೋಧನಸ್ಯ ಚ।
01002083c 63ವಿದುರಸ್ಯ ಚ ವಾಕ್ಯೇನ ಸುರುಂಗೋಪಕ್ರಮಕ್ರಿಯಾ।।
01002084a 64ಪಾಂಡವಾನಾಂ ವನೇ ಘೋರೇ ಹಿಡಿಂಬಾಯಾಶ್ಚ ದರ್ಶನಂ।
01002084c 65ಘಟೋತ್ಕಚಸ್ಯ ಚೋತ್ಪತ್ತಿರತ್ರೈವ ಪರಿಕೀರ್ತಿತಾ।।
ಮಹಾತ್ಮ ಭಾಗೀರಥಿ ಮತ್ತು ಶಂತನುವಿನಲ್ಲಿ ವಸುಗಳ ಪುನರುತ್ಪತ್ತಿ, ಅವರು ಪುನಃ ದೇವಲೋಕಕ್ಕೆ ತೆರಳುವುದು, ತೇಜೋವಂತ ವೀರ ಭೀಷ್ಮನ ಜನನ, ಅವನು ರಾಜ್ಯವನ್ನು ತೊರೆದು ಬ್ರಹ್ಮಚರ್ಯ ಜೀವನವನ್ನು ಸ್ವೀಕರಿಸುವುದು, ಪ್ರತಿಜ್ಞಾ ಪಾಲನೆ, ಚಿತ್ರಾಂಗದನನ್ನು ರಕ್ಷಿಸಿದುದು, ಚಿತ್ರಾಂಗದನ ಮರಣದ ನಂತರ ರಾಜ್ಯದ ರಕ್ಷಣೆಯನ್ನು ತಮ್ಮ ವಿಚಿತ್ರವೀರ್ಯನಿಗೆ ಸಮರ್ಪಿಸುವುದು, ಅಣಿಮಾಂಡವ್ಯನ ಶಾಪದಿಂದ ಧರ್ಮನು ಮನುಷ್ಯನಾಗಿ ಹುಟ್ಟಿದುದು, ಕೃಷ್ಣದ್ವೈಪಾಯನನ ವರದಾನದಿಂದ ಧೃತರಾಷ್ಟ್ರ ಮತ್ತು ಪಾಂಡುವಿನ ಜನನ, ಪಾಂಡವರ ಹುಟ್ಟು, ವಾರಣಾವತ ಯಾತ್ರೆ, ದುರ್ಯೋಧನನ ಕುತಂತ್ರ, ವಿದುರನ ಮಾತಿನಂತೆ ಸುರಂಗವನ್ನು ತೆಗೆದದ್ದು, ಘೋರ ವನದಲ್ಲಿ ಪಾಂಡವರಿಗೆ ಹಿಡಿಂಬೆಯ ದರ್ಶನ ಮತ್ತು ಘಟೋತ್ಕಚನ ಜನನ ಇವೆಲ್ಲವನ್ನೂ ಆದಿಪರ್ವದಲ್ಲಿ ವಿವರಿಸಲಾಗಿದೆ.
01002085a 66ಅಜ್ಞಾತಚರ್ಯಾ ಪಾಂಡೂನಾಂ ವಾಸೋ ಬ್ರಾಹ್ಮಣವೇಶ್ಮನಿ।
01002085c ಬಕಸ್ಯ ನಿಧನಂ ಚೈವ ನಾಗರಾಣಾಂ ಚ ವಿಸ್ಮಯಃ।।
01002086a 67ಅಂಗಾರಪರ್ಣಂ ನಿರ್ಜಿತ್ಯ ಗಂಗಾಕೂಲೇಽರ್ಜುನಸ್ತದಾ।
01002086c 68ಭ್ರಾತೃಭಿಃ ಸಹಿತಃ ಸರ್ವೈಃ ಪಾಂಚಾಲಾನಭಿತೋ ಯಯೌ।।
01002087a ತಾಪತ್ಯಮಥ ವಾಸಿಷ್ಠಮೌರ್ವಂ ಚಾಖ್ಯಾನಮುತ್ತಮಂ।
01002087c ಪಂಚೇಂದ್ರಾಣಾಮುಪಾಖ್ಯಾನಮತ್ರೈವಾದ್ಭುತಮುಚ್ಯತೇ।।
ಬ್ರಾಹ್ಮಣ ವೇಶದಲ್ಲಿ ಪಾಂಡವರ ಅಜ್ಞಾತವಾಸ, ಬಕನ ಸಾವು ಮತ್ತು ನಾಗರೀಕರ ವಿಸ್ಮಯ, ಗಂಗೆಯ ತಟದಲ್ಲಿ ಅರ್ಜುನನನು ಅಂಗಾರಪರ್ಣನನ್ನು ಸೋಲಿಸಿದುದು ಮತ್ತು ಸರ್ವ ಭ್ರಾತೃಗಳ ಸಹಿತ ಪಾಂಚಾಲಕ್ಕೆ ಆಗಮಿಸಿದುದು, ತಪತಿ, ವಸಿಷ್ಠ ಮತ್ತು ಔರ್ವರ ಉತ್ತಮ ಆಖ್ಯಾನ ಮತ್ತು ಐವರು ಇಂದ್ರರ ಉಪಾಖ್ಯಾನಗಳನ್ನು ಇದರಲ್ಲಿ ಹೇಳಲಾಗಿದೆ.
01002088a 69ಪಂಚಾನಾಮೇಕಪತ್ನೀತ್ವೇ ವಿಮರ್ಶೋ ದ್ರುಪದಸ್ಯ ಚ।
01002088c 70ದ್ರೌಪದ್ಯಾ ದೇವವಿಹಿತೋ ವಿವಾಹಶ್ಚಾಪ್ಯಮಾನುಷಃ।।
01002089a 71ವಿದುರಸ್ಯ ಚ ಸಂಪ್ರಾಪ್ತಿರ್ದರ್ಶನಂ ಕೇಶವಸ್ಯ ಚ।
01002089c ಖಾಂಡವಪ್ರಸ್ಥವಾಸಶ್ಚ ತಥಾ ರಾಜ್ಯಾರ್ಧಶಾಸನಂ।।
01002090a ನಾರದಸ್ಯಾಜ್ಞಯಾ ಚೈವ ದ್ರೌಪದ್ಯಾಃ ಸಮಯಕ್ರಿಯಾ।
01002090c ಸುಂದೋಪಸುಂದಯೋಸ್ತತ್ರ ಉಪಾಖ್ಯಾನಂ72 ಪ್ರಕೀರ್ತಿತಂ।।
ಐವರಿಗೆ ಒಂದೇ ಪತ್ನಿಯ ಕುರಿತು ದ್ರುಪದನ ವಿಮರ್ಶೆ, ದ್ರೌಪದಿಯ ದೇವವಿಹಿತ ಅಮಾನುಷ ವಿವಾಹ, ವಿದುರನ ಆಗಮನ, ಕೇಶವನ ದರ್ಶನ, ಖಾಂಡವಪ್ರಸ್ಥದಲ್ಲಿ ವಾಸಿಸಿ ಅರ್ಧ ರಾಜ್ಯದ ಆಡಳಿತ, ನಾರದನ ಆಜ್ಞೆಯಂತೆ ದ್ರೌಪದಿಯೊಡನೆ ಸಮಯಕ್ರಿಯೆ, ಮತ್ತು ಸುಂದೋಪಸುಂದರ ಉಪಾಖ್ಯಾನವನ್ನು ಇದರಲ್ಲಿ ಹೇಳಲಾಗಿದೆ.
01002091a 73ಪಾರ್ಥಸ್ಯ ವನವಾಸಶ್ಚ ಉಲೂಪ್ಯಾ ಪಥಿ ಸಂಗಮಃ।
01002091c ಪುಣ್ಯತೀರ್ಥಾನುಸಂಯಾನಂ ಬಭ್ರುವಾಹನಜನ್ಮ ಚ।।
01002092a 74ದ್ವಾರಕಾಯಾಂ ಸುಭದ್ರಾ ಚ ಕಾಮಯಾನೇನ ಕಾಮಿನೀ।
01002092c ವಾಸುದೇವಸ್ಯಾನುಮತೇ ಪ್ರಾಪ್ತಾ ಚೈವ ಕಿರೀಟಿನಾ।।
01002093a ಹರಣಂ ಗೃಹ್ಯ ಸಂಪ್ರಾಪ್ತೇ75 ಕೃಷ್ಣೇ ದೇವಕಿನಂದನೇ।
01002093c ಸಂಪ್ರಾಪ್ತಿಶ್ಚಕ್ರಧನುಷೋಃ ಖಾಂಡವಸ್ಯ ಚ ದಾಹನಂ।।
01002094a ಅಭಿಮನ್ಯೋಃ ಸುಭದ್ರಾಯಾಂ ಜನ್ಮ ಚೋತ್ತಮತೇಜಸಃ।
01002094c 76ಮಯಸ್ಯ ಮೋಕ್ಷೋ ಜ್ವಲನಾದ್ ಭುಜಂಗಸ್ಯ ಚ ಮೋಕ್ಷಣಂ।
01002094e ಮಹರ್ಷೇರ್ಮಂದಪಾಲಸ್ಯ ಶಾಂಙ್ರ್ಯಂ ತನಯಸಂಭವಃ।।
01002095a ಇತ್ಯೇತದಾಧಿಪರ್ವೋಕ್ತಂ ಪ್ರಥಮಂ ಬಹುವಿಸ್ತರಂ।
01002095c ಅಧ್ಯಾಯಾನಾಂ ಶತೇ ದ್ವೇ ತು ಸಂಖ್ಯಾತೇ ಪರಮರ್ಷಿಣಾ।
01002095e ಅಷ್ಟಾದಶೈವ ಚಾಧ್ಯಾಯಾ77 ವ್ಯಾಸೇನೋತ್ತಮತೇಜಸಾ।।
01002096a ಸಪ್ತ ಶ್ಲೋಕಸಹಸ್ರಾಣಿ ತಥಾ ನವ ಶತಾನಿ ಚ78।
01002096c ಶ್ಲೋಕಾಶ್ಚ ಚತುರಾಶೀತಿರ್ದೃಷ್ಟೋ ಗ್ರಂಥೋ79 ಮಹಾತ್ಮನಾ।।
ಪಾರ್ಥನ ವನವಾಸ, ಮಾರ್ಗದಲ್ಲಿ ಉಲೂಪಿಯೊಡನೆ ಸಂಗಮ, ಪುಣ್ಯತೀರ್ಥಯಾತ್ರೆಯಲ್ಲಿ ಬಭ್ರುವಾಹನನ ಜನನ, ಕಾಮ ಪೀಡಿತ ಕಿರೀಟಿಯು ವಾಸುದೇವನ ಅನುಮತಿಯಂತೆ ಕಾಮಿನಿ ಸುಭದ್ರೆಯನ್ನು ದ್ವಾರಕೆಯಿಂದ ಕರೆದೊಯ್ದುದು, ದೇವಕಿನಂದನ ಕೃಷ್ಣನು ವಧುದಕ್ಷಿಣೆಯನ್ನು ತೆಗೆದುಕೊಂಡು ಹೋದುದು, ಸುಭದ್ರೆಯಲ್ಲಿ ಉತ್ತಮತೇಜಸ ಅಭಿಮನ್ಯುವಿನ ಜನನ, ಅಗ್ನಿಯಿಂದ ಮಯ ಮತ್ತು ಸರ್ಪಗಳ ಮೋಕ್ಷ, ಮಹರ್ಷಿ ಮಂದಪಾಲನಿಗೆ ಶಾಂಙ್ರಗಳು ಮಕ್ಕಳಾಗಿ ಹುಟ್ಟಿದುದು, ಇವೆಲ್ಲವನ್ನೂ ಬಹಳ ವಿಸ್ತಾರವಾಗಿ ಮೊದಲನೆಯ ಆದಿಪರ್ವದಲ್ಲಿ 21880 ಅಧ್ಯಾಯಗಳಲ್ಲಿ ಪರಮ ಋಷಿ ಉತ್ತಮತೇಜಸ ವ್ಯಾಸನು ರಚಿಸಿದ್ದಾನೆ. ಈ ಪರ್ವದಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ 798481.
01002097a ದ್ವಿತೀಯಂ ತು ಸಭಾಪರ್ವ ಬಹುವೃತ್ತಾಂತಮುಚ್ಯತೇ।
01002097c ಸಭಾಕ್ರಿಯಾ ಪಾಂಡವಾನಾಂ ಕಿಂಕರಾಣಾಂ ಚ ದರ್ಶನಂ।।
01002098a ಲೋಕಪಾಲಸಭಾಖ್ಯಾನಂ ನಾರದಾದ್ದೇವದರ್ಶನಾತ್82।
01002098c ರಾಜಸೂಯಸ್ಯ ಚಾರಂಭೋ ಜರಾಸಂಧವಧಸ್ತಥಾ।।
01002099a ಗಿರಿವ್ರಜೇ ನಿರುದ್ಧಾನಾಂ ರಾಜ್ಞಾಂ ಕೃಷ್ಣೇನ ಮೋಕ್ಷಣಂ।
01002099c 83ರಾಜಸೂಯೇಽರ್ಘಸಂವಾದೇ ಶಿಶುಪಾಲವಧಸ್ತಥಾ।।
01002100a ಯಜ್ಞೇ ವಿಭೂತಿಂ ತಾಂ ದೃಷ್ಟ್ವಾ ದುಃಖಾಮರ್ಷಾನ್ವಿತಸ್ಯ ಚ।
01002100c ದುರ್ಯೋಧನಸ್ಯಾವಹಾಸೋ ಭೀಮೇನ ಚ ಸಭಾತಲೇ।।
01002101a ಯತ್ರಾಸ್ಯ ಮನ್ಯುರುದ್ಭೂತೋ ಯೇನ ದ್ಯೂತಮಕಾರಯತ್।
01002101c ಯತ್ರ ಧರ್ಮಸುತಂ ದ್ಯೂತೇ ಶಕುನಿಃ ಕಿತವೋಽಜಯತ್।।
01002102a ಯತ್ರ ದ್ಯೂತಾರ್ಣವೇ ಮಗ್ನಾನ್ ದ್ರೌಪದೀ84 ನೌರಿವಾರ್ಣವಾತ್।
01002102c ತಾರಯಾಮಾಸ ತಾಂಸ್ತೀರ್ಣಾನ್ ಜ್ಞಾತ್ವಾ ದುರ್ಯೋಧನೋ ನೃಪಃ।
01002102e ಪುನರೇವ ತತೋ ದ್ಯೂತೇ ಸಮಾಹ್ವಯತ ಪಾಂಡವಾನ್।।
01002103a 85ಏತತ್ಸರ್ವಂ ಸಭಾಪರ್ವ ಸಮಾಖ್ಯಾತಂ ಮಹಾತ್ಮನಾ।
01002103c ಅಧ್ಯಾಯಾಃ ಸಪ್ತತಿರ್ಜ್ಞೇಯಾಸ್ತಥಾ ದ್ವೌ ಚಾತ್ರ ಸಂಖ್ಯಯಾ86।।
01002104a ಶ್ಲೋಕಾನಾಂ ದ್ವೇ ಸಹಸ್ರೇ ತು ಪಂಚ ಶ್ಲೋಕಶತಾನಿ ಚ।
01002104c ಶ್ಲೋಕಾಶ್ಚೈಕಾದಶ ಜ್ಞೇಯಾಃ ಪರ್ವಣ್ಯಸ್ಮಿನ್ ಪ್ರಕೀರ್ತಿತಾಃ87।।
ಎರಡನೆಯ ಸಭಾಪರ್ವದಲ್ಲಿ ಬಹಳಷ್ಟು ವೃತ್ತಾಂತಗಳನ್ನು ಹೇಳಲಾಗಿದೆ. ಸಭಾಕ್ರಿಯೆ, ಪಾಂಡವರ ಕಿಂಕರರ ವಿವರಣೆ, ನಾರದ ದೇವದರ್ಶನದ ವೇಳೆಯಲ್ಲಿ ಲೋಕಪಾಲಕರ ಸಭಾಖ್ಯಾನ, ರಾಜಸೂಯದ ಸಿದ್ಧತೆ ಮತ್ತು ಜರಾಸಂಧನ ವಧೆ, ಗಿರಿವ್ರಜದಲ್ಲಿ ಬಂಧಿಗಳಾಗಿದ್ದ ರಾಜರಿಗೆ ಕೃಷ್ಣನಿಂದ ಬಿಡುಗಡೆ, ರಾಜಸೂಯದಲ್ಲಿ ಅರ್ಘ್ಯದ ಕುರಿತ ವಿವಾದದಲ್ಲಿ ಶಿಶುಪಾಲನ ವಧೆ, ವೈಭವೋಪೇತ ಯಜ್ಞವನ್ನು ನೋಡಿ ದುರ್ಯೋಧನನು ದುಃಖ-ಅಸೂಯೆಗೊಳಗಾಗಿದ್ದುದು, ಸಭಾತಲದಲ್ಲಿ ಅವನು ಭೀಮನಿಂದ ಅಪಹಾಸ್ಯಕ್ಕೊಳಗಾಗಿದ್ದುದು, ಅಸೂಯೆಯಿಂದ ಹುಟ್ಟಿದ ದ್ಯೂತದ ಆಯೋಜನೆ, ಆ ದ್ಯೂತದಲ್ಲಿ ಕಪಟಿ ಶಕುನಿಯಿಂದ ಧರ್ಮಸುತನ ಸೋಲು, ದ್ಯೂತದಿಂದಾದ ಶೋಕಸಾಗರದಲ್ಲಿ ಮುಳುಗಿದ್ದ ದ್ರೌಪದಿಯನ್ನು ಪಾರುಮಾಡಿದ್ದುದು, ಮತ್ತು ಸೋಲಿನ ಪರಿಣಾಮಗಳಿಂದ ಪಾಂಡವರಿಗೆ ಬಿಡುಗಡೆಯಾದುದನ್ನು ತಿಳಿದು ರಾಜ ದುರ್ಯೋಧನನು ಪಾಂಡವರನ್ನು ಪುನಃ ದ್ಯೂತಕ್ಕೆ ಆಹ್ವಾನಿಸಿದುದು, ಇವೆಲ್ಲವನ್ನೂ ಸಭಾಪರ್ವದ 7288 ಅಧ್ಯಾಯಗಳಲ್ಲಿ ಮಹಾತ್ಮನು ಹೇಳಿದ್ದಾನೆ. ತಿಳಿದವರು ಈ ಪರ್ವದಲ್ಲಿ ಒಟ್ಟು 2511 ಶ್ಲೋಕಗಳಿವೆ ಎಂದು ಹೇಳುತ್ತಾರೆ.
01002105a ಅತಃ ಪರಂ ತೃತೀಯಂ ತು ಜ್ಞೇಯಮಾರಣ್ಯಕಂ ಮಹತ್।
01002105c 89ಪೌರಾನುಗಮನಂ ಚೈವ ಧರ್ಮಪುತ್ರಸ್ಯ ಧೀಮತಃ।।
01002106a 90ವೃಷ್ಣೀನಾಮಾಗಮೋ ಯತ್ರ ಪಾಂಚಾಲಾನಾಂ ಚ ಸರ್ವಶಃ।
01002106c 91ಯತ್ರ ಸೌಭವಧಾಖ್ಯಾನಂ ಕಿರ್ಮೀರವಧ ಏವ ಚ92।
01002106e 93ಅಸ್ತ್ರಹೇತೋರ್ವಿವಾಸಶ್ಚ ಪಾರ್ಥಸ್ಯಾಮಿತತೇಜಸಃ।।
01002107a ಮಹಾದೇವೇನ ಯುದ್ಧಂ ಚ ಕಿರಾತವಪುಷಾ ಸಹ।
01002107c ದರ್ಶನಂ ಲೋಕಪಾಲಾನಾಂ ಸ್ವರ್ಗಾರೋಹಣಮೇವ ಚ94।।
01002108a 95ದರ್ಶನಂ ಬೃಹದಶ್ವಸ್ಯ ಮಹರ್ಷೇರ್ಭಾವಿತಾತ್ಮನಃ।
01002108c ಯುಧಿಷ್ಠಿರಸ್ಯ ಚಾರ್ತಸ್ಯ ವ್ಯಸನೇ ಪರಿದೇವನಂ।।
01002109a ನಲೋಪಾಖ್ಯಾನಮತ್ರೈವ ಧರ್ಮಿಷ್ಠಂ ಕರುಣೋದಯಂ।
01002109c ದಮಯಂತ್ಯಾಃ ಸ್ಥಿತಿರ್ಯತ್ರ ನಲಸ್ಯ ವ್ಯಸನಾಗಮೇ96।।
01002110a 97ವನವಾಸಗತಾನಾಂ ಚ ಪಾಂಡವಾನಾಂ ಮಹಾತ್ಮನಾಂ।
01002110c ಸ್ವರ್ಗೇ ಪ್ರವೃತ್ತಿರಾಖ್ಯಾತಾ ಲೋಮಶೇನಾರ್ಜುನಸ್ಯ ವೈ।।
01002111a 98ತೀರ್ಥಯಾತ್ರಾ ತಥೈವಾತ್ರ ಪಾಂಡವಾನಾಂ ಮಹಾತ್ಮನಾಂ।
01002111c ಜಟಾಸುರಸ್ಯ ತತ್ರೈವ ವಧಃ ಸಮುಪವರ್ಣ್ಯತೇ99।।
01002112a 100ನಿಯುಕ್ತೋ ಭೀಮಸೇನಶ್ಚ ದ್ರೌಪದ್ಯಾ ಗಂಧಮಾದನೇ।
01002112c ಯತ್ರ ಮಂದಾರಪುಷ್ಪಾರ್ಥಂ ನಲಿನೀಂ ತಾಮಧರ್ಷಯತ್।।
01002113a ಯತ್ರಾಸ್ಯ ಸುಮಹದ್ಯುದ್ಧಮಭವತ್ಸಹ ರಾಕ್ಷಸೈಃ।
01002113c ಯಕ್ಷೈಶ್ಚಾಪಿ ಮಹಾವೀರ್ಯೈರ್ಮಣಿಮತ್ಪ್ರಮುಖೈಸ್ತಥಾ।।
01002114a ಆಗಸ್ತ್ಯಮಪಿ ಚಾಖ್ಯಾನಂ ಯತ್ರ ವಾತಾಪಿಭಕ್ಷಣಂ।
01002114c ಲೋಪಾಮುದ್ರಾಭಿಗಮನಮಪತ್ಯಾರ್ಥಂ ಋಷೇರಪಿ101।।
01002115a ತತಃ ಶ್ಯೇನಕಪೋತೀಯಮುಪಾಖ್ಯಾನಮನಂತರಂ।
01002115c ಇಂದ್ರೋಽಗ್ನಿರ್ಯತ್ರ ಧರ್ಮಶ್ಚ ಅಜಿಜ್ಞಾಸನ್ ಶಿಬಿಂ ನೃಪಂ।।
01002116a ಋಶ್ಯಶೃಂಗಸ್ಯ ಚರಿತಂ ಕೌಮಾರಬ್ರಹ್ಮಚಾರಿಣಃ।
01002116c ಜಾಮದಗ್ನ್ಯಸ್ಯ ರಾಮಸ್ಯ ಚರಿತಂ ಭೂರಿತೇಜಸಃ।।
01002117a ಕಾರ್ತವೀರ್ಯವಧೋ ಯತ್ರ ಹೈಹಯಾನಾಂ ಚ ವರ್ಣ್ಯತೇ।
01002117c 102ಸೌಕನ್ಯಮಪಿ ಚಾಖ್ಯಾನಂ ಚ್ಯವನೋ ಯತ್ರ ಭಾರ್ಗವಃ।।
01002118a ಶರ್ಯಾತಿಯಜ್ಞೇ ನಾಸತ್ಯೌ ಕೃತವಾನ್ ಸೋಮಪೀಥಿನೌ।
01002118c ತಾಭ್ಯಾಂ ಚ ಯತ್ರ ಸ ಮುನಿರ್ಯೌವನಂ ಪ್ರತಿಪಾದಿತಃ।।
01002119a 103ಜಂತೂಪಾಖ್ಯಾನಮತ್ರೈವ ಯತ್ರ ಪುತ್ರೇಣ ಸೋಮಕಃ।
01002119c ಪುತ್ರಾರ್ಥಮಯಜದ್ರಾಜಾ ಲೇಭೇ ಪುತ್ರಶತಂ ಚ ಸಃ।।
01002120a 104ಅಷ್ಟಾವಕ್ರೀಯಮತ್ರೈವ ವಿವಾದೇ ಯತ್ರ ಬಂದಿನಂ105।
01002120c 106ವಿಜಿತ್ಯ ಸಾಗರಂ ಪ್ರಾಪ್ತಂ ಪಿತರಂ ಲಬ್ಧವಾನೃಷಿಃ।।
01002121a 107ಅವಾಪ್ಯ ದಿವ್ಯಾನ್ಯಸ್ತ್ರಾಣಿ ಗುರ್ವರ್ಥೇ ಸವ್ಯಸಾಚಿನಾ।
01002121c ನಿವಾತಕವಚೈರ್ಯುದ್ಧಂ ಹಿರಣ್ಯಪುರವಾಸಿಭಿಃ।।
01002122a 108ಸಮಾಗಮಶ್ಚ ಪಾರ್ಥಸ್ಯ ಭ್ರಾತೃಭಿರ್ಗಂಧಮಾದನೇ109।
01002122c ಘೋಷಯಾತ್ರಾ ಚ ಗಂಧರ್ವೈರ್ಯತ್ರ ಯುದ್ಧಂ ಕಿರೀಟಿನಃ।।
01002123a ಪುನರಾಗಮನಂ ಚೈವ ತೇಷಾಂ ದ್ವೈತವನಂ ಸರಃ।
01002123c ಜಯದ್ರಥೇನಾಪಹಾರೋ ದ್ರೌಪದ್ಯಾಶ್ಚಾಶ್ರಮಾಂತರಾತ್।। 01002124a 110ಯತ್ರೈನಮನ್ವಯಾದ್ಭೀಮೋ ವಾಯುವೇಗಸಮೋ ಜವೇ। 01002124c ಮಾರ್ಕಂಡೇಯಸಮಸ್ಯಾಯಾಮುಪಾಖ್ಯಾನಾನಿ ಭಾಗಶಃ111।।
01002125a 112ಸಂದರ್ಶನಂ ಚ ಕೃಷ್ಣಸ್ಯ ಸಂವಾದಶ್ಚೈವ ಸತ್ಯಯಾ।
01002125c ವ್ರೀಹಿದ್ರೌಣಿಕಮಾಖ್ಯಾನಂ ಐಂದ್ರದ್ಯುಮ್ನಂ ತಥೈವ ಚ।।
01002126a 113ಸಾವಿತ್ರ್ಯೌದ್ದಾಲಕೀಯಂ ಚ ವೈನ್ಯೋಪಾಖ್ಯಾನಮೇವ ಚ।
01002126c ರಾಮಾಯಣಮುಪಾಖ್ಯಾನಮತ್ರೈವ ಬಹುವಿಸ್ತರಂ।।
01002127a 114ಕರ್ಣಸ್ಯ ಪರಿಮೋಷೋಽತ್ರ ಕುಂಡಲಾಭ್ಯಾಂ ಪುರಂದರಾತ್।
01002127c 115ಆರಣೇಯಮುಪಾಖ್ಯಾನಂ ಯತ್ರ ಧರ್ಮೋಽನ್ವಶಾತ್ಸುತಂ।
01002127e ಜಗ್ಮುರ್ಲಬ್ಧವರಾ ಯತ್ರ ಪಾಂಡವಾಃ ಪಶ್ಚಿಮಾಂ ದಿಶಂ।।
01002128a ಏತದಾರಣ್ಯಕಂ ಪರ್ವ ತೃತೀಯಂ ಪರಿಕೀರ್ತಿತಂ।
01002128c ಅತ್ರಾಧ್ಯಾಯಶತೇ116 ದ್ವೇ ತು ಸಂಖ್ಯಾತೇ ಪರಮರ್ಷಿಣಾ117।
01002128e ಏಕೋನಸಪ್ತತಿಶ್ಚೈವ ತಥಾಧ್ಯಾಯಾಃ ಪ್ರಕೀರ್ತಿತಾಃ।।
01002129a ಏಕಾದಶ ಸಹಸ್ರಾಣಿ ಶ್ಲೋಕಾನಾಂ ಷಟ್ ಶತಾನಿ ಚ।
01002129c ಚತುಃಷಷ್ಠಿಸ್ತಥಾ ಶ್ಲೋಕಾಃ ಪರ್ವೈತತ್ ಪರಿಕೀರ್ತಿತಂ118।।
ನಂತರದ ಮೂರನೆಯ ಪರ್ವ ದೊಡ್ಡದಾದ ಅರಣ್ಯಕ ಪರ್ವವೆಂದು ತಿಳಿಯಿರಿ. ಧೀಮಂತ ಧರ್ಮಪುತ್ರನನನ್ನು ಪೌರಜನರು ಹಿಂಬಾಲಿಸಿದ್ದುದು, ಅಲ್ಲಿಗೆ ವೃಷ್ಣಿ ಮತ್ತು ಪಾಂಚಾಲರೆಲ್ಲರ ಆಗಮನ, ಸೌಭವಧೆ ಮತ್ತು ಕಿರ್ಮೀರ ವಧೆಯ ಅಖ್ಯಾನಗಳು, ಅಸ್ತ್ರಗಳಿಗೋಸ್ಕರ ಅಮಿತ ತೇಜಸ ಪಾರ್ಥನ ನಿರ್ಗಮನ, ಕಿರಾತ ರೂಪದಲ್ಲಿದ್ದ ಮಹಾದೇವನೊಡನೆ ಯುದ್ಧ, ಲೋಕಪಾಲಕರ ದರ್ಶನ ಮತ್ತು ಸ್ವರ್ಗಾರೋಹಣ, ಭಾವಿತಾತ್ಮ ಮಹರ್ಷಿ ಬೃಹದಶ್ವನನ್ನು ಕಂಡು ಅವನಲ್ಲಿ ಯುಧಿಷ್ಠಿರನ ವ್ಯಸನ ಪರಿವೇದನೆ, ಧರ್ಮಿಷ್ಠ ನಳನನ್ನು ಕಳೆದುಕೊಂಡ ದಮಯಂತಿಯ ಕರುಣೋದಯ ಪರಿಸ್ಥಿತಿಯನ್ನು ವರ್ಣಿಸುವ ನಲೋಪಾಖ್ಯಾನ, ಲೋಮಶನಿಂದ ವನವಾಸದಲ್ಲಿದ್ದ ಮಹಾತ್ಮ ಪಾಂಡವರಿಗೆ ಸ್ವರ್ಗದಲ್ಲಿ ಅರ್ಜುನನ ಜೀವನದ ವರದಿ, ಮಹಾತ್ಮ ಪಾಂಡವರ ತೀರ್ಥಯಾತ್ರೆ, ಜಟಾಸುರ ವಧೆ, ಮಂದಾರಪುಷ್ಪಕ್ಕಾಗಿ ದ್ರೌಪದಿಯಿಂದ ಕಳುಹಿಸಲ್ಪಟ್ಟ ಭೀಮಸೇನನು ಗಂಧಮಾದನ ಪರ್ವತದ ಸರೋವರದಿಂದ ಅದನ್ನು ಕೀಳುವುದು, ಅಲ್ಲಿ ರಾಕ್ಷಸರು ಮತ್ತು ಯಕ್ಷರ ಪ್ರಮುಖ ಮಹಾವೀರ ಮಣಿಮತನೊಂದಿಗೆ ಅವನ ಭೀಕರ ಯುದ್ಧ, ವಾತಾಪಿ ಭಕ್ಷಣ, ಪುತ್ರಾರ್ಥ ಋಷಿ ಮತ್ತು ಲೋಪಾಮುದ್ರೆಯ ಸಮಾಗಮಗಳನ್ನೊಳಗೊಂಡ ಅಗಸ್ತ್ಯನ ಕಥೆ, ಗಿಡುಗ ಮತ್ತು ಪಾರಿವಾಳಗಳ ಕಥೆ, ಇಂದ್ರ, ಅಗ್ನಿ ಮತ್ತು ಧರ್ಮರು ನೃಪ ಶಿಬಿಯನ್ನು ಪರೀಕ್ಷಿಸಿದ್ದುದು, ಕೌಮಾರ ಬ್ರಹ್ಮಚಾರಿ ಋಷ್ಯಶೃಂಗನ ಚರಿತ್ರೆ, ಭೂರಿತೇಜಸ ಜಾಮದಗ್ನಿ ರಾಮನ ಚರಿತ್ರೆ, ಹೈಹಯ ಕಾರ್ತಿವೀರ್ಯನ ವಧೆ, ಭಾರ್ಗವ ಚ್ಯವನನು ಶರ್ಯಾತಿಯ ಯಜ್ಞದಲ್ಲಿ ನಾಸತ್ಯರೀರ್ವರೂ ಸೋಮವನ್ನು ಕುಡಿಯುವ ಹಾಗೆ ಮಾಡಿ ಅವರೀರ್ವರಿಗೂ ಯೌವನವನ್ನು ಪ್ರತಿಪಾದಿಸಿದ್ದುದನ್ನು ಒಳಗೂಡಿದ ಸುಕನ್ಯೋಪಾಖ್ಯಾನ, ಒಬ್ಬ ಪುತ್ರನನ್ನು ಯಜಿಸಿ ನೂರು ಪುತ್ರರನ್ನು ಪಡೆದ ರಾಜ ಸೋಮಕ ಜಂತುವಿನ ಕಥೆ, ವಿವಾದದಲ್ಲಿ ಬಂದಿಯನ್ನು ಸೋಲಿಸಿ ಸಾಗರದಲ್ಲಿ ಮುಳುಗಿದ್ದ ತಂದೆಯನ್ನು ಪಡೆದ ಋಷಿ ಅಷ್ಟಾವಕ್ರನ ಕಥೆ, ಹಿರಿಯವನಿಗಾಗಿ ದಿವ್ಯಶಸ್ತ್ರಗಳನ್ನು ಪಡೆದ ಸವ್ಯಸಾಚಿಯು ಹಿರಣ್ಯಪುರವಾಸಿ ನಿವಾತಕವಚರೊಂದಿಗೆ ಯುದ್ಧ ಮಾಡಿದ್ದುದು, ಗಂಧಮಾದನದಲ್ಲಿ ಭ್ರಾತೃಗಳೊಂದಿಗೆ ಪಾರ್ಥನ ಸಮಾಗಮ, ಘೋಷಯಾತ್ರೆ ಮತ್ತು ಗಂಧರ್ವರೊಡನೆ ಕಿರೀಟಿಯ ಯುದ್ಧ, ಅವರು ಪುನಃ ದ್ವೈತವನಕ್ಕೆ ಆಗಮಿಸಿದ್ದುದು, ಅಲ್ಲಿ ಜಯದ್ರಥನಿಂದ ಆಶ್ರಮದಲ್ಲಿದ್ದ ದ್ರೌಪದಿಯ ಅಪಹರಣ ಮತ್ತು ಭೀಮನು ಅವನನ್ನು ವಾಯುವೇಗದಲ್ಲಿ ಬೆನ್ನಟ್ಟಿದುದು, ಮಾರ್ಕಂಡೇಯನಿಂದ ವಿವರಿಸಲ್ಪಟ್ಟ ಉಪಾಖ್ಯಾನಗಳು, ಕೃಷ್ಣನ ಸಂದರ್ಶನ ಮತ್ತು ಸತ್ಯಭಾಮೆಯೊಂದಿಗೆ ಸಂವಾದ, ವ್ರೀಹಿದ್ರೌಣಿ ಮತ್ತು ಇಂದ್ರದ್ಯುಮ್ನನ ಕಥೆಗಳು, ಸಾವಿತ್ರಿ, ಉದ್ದಾಲಕ ಮತ್ತು ಇತರ ಉಪಾಖ್ಯಾನಗಳು, ಬಹುವಿಸ್ತಾರ ರಾಮಾಯಣೋಪಖ್ಯಾನ, ಪುರಂದರನು ಕರ್ಣನ ಕುಂಡಲಗಳನ್ನು ದಾನವನ್ನಾಗಿ ಪಡೆಯುವುದು, ಧರ್ಮನು ತನ್ನ ಮಗನಿಗೆ ವರವನ್ನಿತ್ತ ಅರಣ್ಯೋಪಾಖ್ಯಾನ, ಮತ್ತು ಅಲ್ಲಿಂದ ಪಾಂಡವರು ಪಶ್ಚಿಮ ದಿಶೆಯಲ್ಲಿ ಹೊರಟಿದ್ದುದು, ಇವೆಲ್ಲವನ್ನೂ ಮೂರನೆಯ ಅರಣ್ಯಕ ಪರ್ವದಲ್ಲಿ ವಿವರಿಸಲಾಗಿದೆ. ಇದರಲ್ಲಿ ಒಟ್ಟು 269 ಅಧ್ಯಾಯಗಳು ಮತ್ತು 11,664 ಶ್ಲೋಕಗಳಿವೆಯೆಂದು ತಿಳಿದವರು ಹೇಳುತ್ತಾರೆ119.
01002130a ಅತಃ ಪರಂ ನಿಬೋಧೇದಂ ವೈರಾಟಂ ಪರ್ವವಿಸ್ತರಂ।
01002130c ವಿರಾಟನಗರಂ ಗತ್ವಾ ಶ್ಮಶಾನೇ ವಿಪುಲಾಂ ಶಮೀಂ।
01002130e ದೃಷ್ಟ್ವಾ ಸನ್ನಿದಧುಸ್ತತ್ರ ಪಾಂಡವಾ ಆಯುಧಾನ್ಯುತ।।
01002131a ಯತ್ರ ಪ್ರವಿಶ್ಯ ನಗರಂ ಚದ್ಮಭಿರ್ನ್ಯವಸಂತ120 ತೇ।
01002131c 121ದುರಾತ್ಮನೋ ವಧೋ ಯತ್ರ ಕೀಚಕಸ್ಯ ವೃಕೋದರಾತ್।।
01002132a 122ಗೋಗ್ರಹೇ ಯತ್ರ ಪಾರ್ಥೇನ ನಿರ್ಜಿತಾಃ ಕುರವೋ ಯುಧಿ123।
01002132c 124ಗೋಧನಂ ಚ ವಿರಾಟಸ್ಯ ಮೋಕ್ಷಿತಂ ಯತ್ರ ಪಾಂಡವೈಃ।।
01002133a 125ವಿರಾಟೇನೋತ್ತರಾ ದತ್ತಾ ಸ್ನುಷಾ ಯತ್ರ ಕಿರೀಟಿನಃ।
01002133c ಅಭಿಮನ್ಯುಂ ಸಮುದ್ದಿಶ್ಯ ಸೌಭದ್ರಮರಿಘಾತಿನಂ।।
01002134a ಚತುರ್ಥಮೇತದ್ ವಿಪುಲಂ ವೈರಾಟಂ ಪರ್ವ ವರ್ಣಿತಂ।
01002134c ಅತ್ರಾಪಿ ಪರಿಸಂಖ್ಯಾತಮಧ್ಯಾಯಾನಾಂ ಮಹಾತ್ಮನಾ126।।
01002135a ಸಪ್ತಷಷ್ಠಿರಥೋ ಪೂರ್ಣಾ ಶ್ಲೋಕಾಗ್ರಮಪಿ127 ಮೇ ಶೃಣು।
01002135c ಶ್ಲೋಕಾನಾಂ ದ್ವೇ ಸಹಸ್ರೇ ತು ಶ್ಲೋಕಾಃ ಪಂಚಾಶದೇವ ತು।
01002135e ಪರ್ವಣ್ಯಸ್ಮಿನ್ ಸಮಾಖ್ಯಾತಾಃ ಸಂಖ್ಯಯಾ ಪರಮರ್ಷಿಣಾ128।।
ನಂತರದ್ದು ವಿಸ್ತಾರದ ವಿರಾಟ ಪರ್ವ. ವಿರಾಟನಗರಕ್ಕೆ ಹೋಗಿ ಶ್ಮಶಾನದಲ್ಲಿ ದಟ್ಟ ಶಮೀ ವೃಕ್ಷವನ್ನು ನೋಡಿ ಅಲ್ಲಿ ಪಾಂಡವರು ಆಯುಧಗಳನ್ನು ಅಡಗಿಸಿಟ್ಟುದುದು, ನಗರವನ್ನು ಪ್ರವೇಶಿಸಿ ಅಲ್ಲಿ ಅಜ್ಞಾತವಾಸ, ವೃಕೋದರನಿಂದ ದುರಾತ್ಮ ಕೀಚಕನ ವಧೆ, ಗೋವುಗಳನ್ನು ಕೊಂಡೊಯ್ಯುತ್ತಿದ್ದ ಕೌರವರನ್ನು ಯುದ್ಧದಲ್ಲಿ ಪಾಂಡವ ಪಾರ್ಥನು ಸೋಲಿಸಿ ವಿರಾಟನ ಗೋಧನವನ್ನು ರಕ್ಷಿಸಿದುದು, ಮಗಳು ಉತ್ತರೆಯನ್ನು ವಿರಾಟನು ಕಿರೀಟಿಗೆ ಕೊಟ್ಟಿದ್ದುದು ಮತ್ತು ಅವನು ಅರಿಘಾತಿ, ಸೌಭದ್ರಿ ಅಭಿಮನ್ಯುವಿಗೆ ಅವಳನ್ನು ಸ್ವೀಕರಿಸಿದ್ದುದು, ಇವೆಲ್ಲವನ್ನೂ ನಾಲ್ಕನೆಯ ವಿರಾಟ ಪರ್ವದಲ್ಲಿ ಸವಿಸ್ತಾರವಾಗಿ ವರ್ಣಿಸಲಾಗಿದೆ. ಮಹಾತ್ಮನು ಇದರಲ್ಲಿಯ 2050129 ಶ್ಲೋಕಗಳನ್ನು ಸಂಪೂರ್ಣ 67130 ಅಧ್ಯಾಯಗಳಲ್ಲಿ ರಚಿಸಿದ್ದಾನೆ.
01002136a ಉದ್ಯೋಗಪರ್ವ ವಿಜ್ಞೇಯಂ ಪಂಚಮಂ ಶೃಣ್ವತಃ ಪರಂ।
01002136c ಉಪಪ್ಲವ್ಯೇ ನಿವಿಷ್ಟೇಷು ಪಾಂಡವೇಷು ಜಿಗೀಷಯಾ।
01002136e ದುರ್ಯೋಧನೋಽರ್ಜುನಶ್ಚೈವ ವಾಸುದೇವಮುಪಸ್ಥಿತೌ।।
01002137a ಸಾಹಾಯ್ಯಮಸ್ಮಿನ್ ಸಮರೇ ಭವಾನ್ನೌ ಕರ್ತುಮರ್ಹತಿ।
01002137c ಇತ್ಯುಕ್ತೇ ವಚನೇ ಕೃಷ್ಣೋ ಯತ್ರೋವಾಚ ಮಹಾಮತಿಃ।।
01002138a ಅಯುಧ್ಯಮಾನಮಾತ್ಮಾನಂ ಮಂತ್ರಿಣಂ ಪುರುಷರ್ಷಭೌ।
01002138c ಅಕ್ಷೌಹಿಣೀಂ ವಾ ಸೈನ್ಯಸ್ಯ ಕಸ್ಯ ವಾ ಕಿಂ ದದಾಮ್ಯಹಂ।।
01002139a ವವ್ರೇ ದುರ್ಯೋಧನಃ ಸೈನ್ಯಂ ಮಂದಾತ್ಮಾ ಯತ್ರ ದುರ್ಮತಿಃ।
01002139c ಅಯುಧ್ಯಮಾನಂ ಸಚಿವಂ ವವ್ರೇ ಕೃಷ್ಣಂ ಧನಂಜಯಃ।।
01002140a 131ಸಂಜಯಂ ಪ್ರೇಷಯಾಮಾಸ ಶಮಾರ್ಥಂ ಪಾಂಡವಾನ್ ಪ್ರತಿ।
01002140c ಯತ್ರ ದೂತಂ ಮಹಾರಾಜೋ ಧೃತರಾಷ್ಟ್ರಃ ಪ್ರತಾಪವಾನ್।।
01002141a ಶ್ರುತ್ವಾ ಚ ಪಾಂಡವಾನ್ಯತ್ರ ವಾಸುದೇವಪುರೋಗಮಾನ್।
01002141c ಪ್ರಜಾಗರಃ ಸಂಪ್ರಜಜ್ಞೇ ಧೃತರಾಷ್ಟ್ರಸ್ಯ ಚಿಂತಯಾ।।
01002142a ವಿದುರೋ ಯತ್ರ ವಾಕ್ಯಾನಿ ವಿಚಿತ್ರಾಣಿ ಹಿತಾನಿ ಚ।
01002142c ಶ್ರಾವಯಾಮಾಸ ರಾಜಾನಂ ಧೃತರಾಷ್ಟ್ರಂ ಮನೀಷಿಣಂ।।
01002143a ತಥಾ ಸನತ್ಸುಜಾತೇನ ಯತ್ರಾಧ್ಯಾತ್ಮಮನುತ್ತಮಂ।
01002143c ಮನಸ್ತಾಪಾನ್ವಿತೋ ರಾಜಾ ಶ್ರಾವಿತಃ ಶೋಕಲಾಲಸಃ।।
01002144a ಪ್ರಭಾತೇ ರಾಜಸಮಿತೌ ಸಂಜಯೋ ಯತ್ರ ಚಾಭಿಭೋಃ132।
01002144c ಐಕಾತ್ಮ್ಯಂ ವಾಸುದೇವಸ್ಯ ಪ್ರೋಕ್ತವಾನರ್ಜುನಸ್ಯ ಚ।।
01002145a ಯತ್ರ ಕೃಷ್ಣೋ ದಯಾಪನ್ನಃ ಸಂದಿಮಿಚ್ಛನ್ಮಹಾಯಶಾಃ133।
01002145c ಸ್ವಯಮಾಗಾಚ್ಚಮಂ ಕರ್ತುಂ ನಗರಂ ನಾಗಸಾಹ್ವಯಂ।।
01002146a ಪ್ರತ್ಯಾಖ್ಯಾನಂ ಚ ಕೃಷ್ಣಸ್ಯ ರಾಜ್ಞಾ ದುರ್ಯೋಧನೇನ ವೈ।
01002146c ಶಮಾರ್ಥಂ ಯಾಚಮಾನಸ್ಯ ಪಕ್ಷಯೋರುಭಯೋರ್ಹಿತಂ।।
01002147a 134ಕರ್ಣದುರ್ಯೋಧನಾದೀನಾಂ ದುಷ್ಟಂ ವಿಜ್ಞಾಯ ಮಂತ್ರಿತಂ।
01002147c ಯೋಗೇಶ್ವರತ್ವಂ ಕೃಷ್ಣೇನ ಯತ್ರ ರಾಜಸು ದರ್ಶಿತಂ135।।
01002148a ರಥಮಾರೋಪ್ಯ ಕೃಷ್ಣೇನ ಯತ್ರ ಕರ್ಣೋಽನುಮಂತ್ರಿತಃ।
01002148c ಉಪಾಯಪೂರ್ವಂ ಶೌಂಡೀರ್ಯಾತ್136 ಪ್ರತ್ಯಾಖ್ಯಾತಶ್ಚ ತೇನ ಸಃ।।
01002149a 137ತತಶ್ಚಾಪ್ಯಭಿನಿರ್ಯಾತ್ರಾ ರಥಾಶ್ವನರದಂತಿನಾಂ138।
01002149c ನಗರಾದ್ಧಾಸ್ತಿನಪುರಾದ್ ಬಲಸಂಖ್ಯಾನಮೇವ ಚ।।
01002150a ಯತ್ರ ರಾಜ್ಞಾ ಉಲೂಕಸ್ಯ ಪ್ರೇಷಣಂ ಪಾಂಡವಾನ್ ಪ್ರತಿ।
01002150c ಶ್ವೋಭಾವಿನಿ ಮಹಾಯುದ್ಧೇ ದೂತ್ಯೇನ ಕ್ರೂರವಾದಿನಾ139।
01002150e ರಥಾತಿರಥಸಂಖ್ಯಾನಮಂಬೋಪಾಖ್ಯಾನಮೇವ ಚ।।
01002151a ಏತತ್ಸುಬಹುವೃತ್ತಾಂತಂ ಪಂಚಮಂ ಪರ್ವ ಭಾರತೇ।
01002151c ಉದ್ಯೋಗಪರ್ವ ನಿರ್ದಿಷ್ಟಂ ಸಂಧಿವಿಗ್ರಹಸಂಶ್ರಿತಂ।।
01002152a ಅಧ್ಯಾಯಾಃ ಸಂಖ್ಯಯಾ ತ್ವತ್ರ ಷಢಶೀತಿಶತಂ ಸ್ಮೃತಂ140।
01002152c ಶ್ಲೋಕಾನಾಂ ಷಟ್ಸಹಸ್ರಾಣಿ ತಾವಂತ್ಯೇವ ಶತಾನಿ ಚ।।
01002153a ಶ್ಲೋಕಾಶ್ಚ ನವತಿಃ ಪ್ರೋಕ್ತಾಸ್ತಥೈವಾಷ್ಟೌ ಮಹಾತ್ಮನಾ।
01002153c ವ್ಯಾಸೇನೋದಾರಮತಿನಾ ಪರ್ವಣ್ಯಸ್ಮಿಂಸ್ತಪೋಧನಾಃ।।
ಈಗ ಶ್ರೇಷ್ಠವಾದ ಐದನೆಯ ಉದ್ಯೋಗಪರ್ವದ ಕುರಿತು ತಿಳಿಯಿರಿ. ಪಾಂಡವರು ಉಪಪ್ಲವದಲ್ಲಿ ಇರುವಾಗ ದುರ್ಯೋಧನ ಮತ್ತು ಅರ್ಜುನ ಇಬ್ಬರೂ ವಾಸುದೇವನ ಬಳಿಗೆ ಹೋಗಿದ್ದುದು, “ಈ ಸಮರದಲ್ಲಿ ನೀನು ನಮಗೆ ಸಹಾಯ ಮಾಡಬೇಕು” ಎಂದು ಕೇಳಿಕೊಂಡಾಗ ಮಹಾಮತಿ ಕೃಷ್ಣನು “ಪುರುಷರ್ಷಭರೇ! ಯುದ್ಧವನ್ನು ಮಾಡದೇ ಇರುವ ನನ್ನ ಸಲಹೆ ಅಥವಾ ಒಂದು ಅಕ್ಷೌಹಿಣೀ ಸೈನ್ಯ ಇವೆರಡರಲ್ಲಿ ಯಾವುದು ಯಾರಿಗೆ ಬೇಕು?” ಎಂದು ಕೇಳಿದಾಗ ಮಂದಾತ್ಮ ದುರ್ಮತಿ ದುರ್ಯೋಧನನು ಸೈನ್ಯವನ್ನು ಮತ್ತು ಧನಂಜಯನು ಯುದ್ಧಮಾಡದೇ ಇರುವ ಸಚಿವನನ್ನಾಗಿ ಕೃಷ್ಣನನ್ನು ಆರಿಸಿಕೊಂಡಿದ್ದುದು, ಪ್ರತಾಪಿ ಮಹಾರಾಜ ಧೃತರಾಷ್ಟ್ರನು ಶಾಂತಿಗೋಸ್ಕರ ಸಂಜಯನನ್ನು ಪಾಂಡವರ ಬಳಿ ದೂತನನ್ನಾಗಿ ಕಳುಹಿಸಿದ್ದುದು, ಪಾಂಡವರು, ವಾಸುದೇವ ಮತ್ತು ಅವರ ಬೆಂಬಲಿಗರ ಕುರಿತು ಕೇಳಿದ ಧೃತರಾಷ್ಟ್ರನು ಚಿಂತೆಯಿಂದ ನಿದ್ರಾಹೀನನಾಗಿದ್ದುದು, ಮನುಷ್ಯರ ರಾಜ ಧೃತರಾಷ್ಟ್ರನಿಗೆ ವಿದುರನು ವಿಚಿತ್ರ ವಾಖ್ಯಗಳಿಂದ ಹಿತವನ್ನು ಹೇಳಿದ್ದುದು, ಶೋಕಲಾಲಸ ಮತ್ತು ಮನಸ್ತಾಪದಿಂದ ಬಳಲಿದ ರಾಜನಿಗೆ ಸನತ್ಸುಜಾತನು ಉತ್ತಮ ಆಧ್ಯಾತ್ಮ ವಿಷಯಗಳನ್ನು ಹೇಳಿದ್ದುದು, ಪ್ರಭಾತದಲ್ಲಿ ರಾಜಸಭೆಯಲ್ಲಿ ಸಂಜಯನು ವಾಸುದೇವ ಮತ್ತು ಅರ್ಜುನರ ಏಕಾತ್ಮತೆಯನ್ನು ವರ್ಣಿಸಿದ್ದುದು, ಶಾಂತಿಯನ್ನು ತರಲು ಸಂಧಿಯನ್ನಿಚ್ಛಿಸಿ ಮಹಾಯಶ ದಯಾಪನ್ನ ಕೃಷ್ಣನು ನಾಗಸಾಹ್ವಯ ನಗರಕ್ಕೆ ಸ್ವಯಂ ಆಗಮಿಸಿದ್ದುದು, ಕೃಷ್ಣನು ಯಾಚಿಸಿದ ಉಭಯ ಪಕ್ಷಗಳ ಹಿತಕಾರಣಿ ಶಾಂತಿಯನ್ನು ರಾಜ ದುರ್ಯೋಧನನು ತಿರಸ್ಕರಿದ್ದುದು, ಕರ್ಣ-ದುರ್ಯೋಧನರ ದುಷ್ಟ ಉಪಾಯವನ್ನು ತಿಳಿದ ಕೃಷ್ಣನು ರಾಜರ ಸಮಕ್ಷಮದಲ್ಲಿ ತನ್ನ ಯೋಗೇಶ್ವರತ್ವವನ್ನು ಪ್ರದರ್ಶಿಸಿದ್ದುದು, ಕರ್ಣನನ್ನು ರಥದಮೇಲೆ ಕೂರಿಸಿಕೊಂಡು ಕೃಷ್ಣನು ಸಲಹೆಗಳನ್ನು ನೀಡಿದ್ದುದು, ಅವುಗಳನ್ನು ಕರ್ಣನು ಅಭಿಮಾನದಿಂದ ತಿರಸ್ಕರಿಸಿದ್ದುದು, ಹಸ್ತಿನಾಪುರ ನಗರದಿಂದ ಬಹುಸಂಖ್ಯೆಯಲ್ಲಿ ರಥ, ಕುದುರೆ, ಕಾದಾಳುಗಳು ಮತ್ತು ಆನೆಗಳು ಹೊರಟಿದ್ದುದು, ಕ್ರೂರವಾದಿ ರಾಜನು ಮಹಾಯುದ್ಧದ ಒಂದು ದಿನದ ಮೊದಲು ಪಾಂಡವರ ಕಡೆ ಉಲೂಕನನ್ನು ದೂತನನ್ನಾಗಿ ಕಳುಹಿಸಿದ್ದುದು, ರಥ ಮತ್ತು ಅತಿರಥರನ್ನು ಎಣಿಸುವುದು ಮತ್ತು ಅಂಬೋಪಾಖ್ಯಾನ, ಈ ಎಲ್ಲ ಮತ್ತು ಇತರ ಬಹಳ ವೃತ್ತಾಂತಗಳನ್ನು ಭಾರತದ ಐದನೆಯ ಪರ್ವ ಉದ್ಯೋಗಪರ್ವದಲ್ಲಿ ವರ್ಣಿಸಲಾಗಿದೆ. ಇದರಲ್ಲಿ 168 ಅಧ್ಯಾಯಗಳು ಮತ್ತು 6,698 ಶ್ಲೋಕಗಳಿವೆ141.
01002154a ಅತ ಊರ್ಧ್ವಂ142 ವಿಚಿತ್ರಾರ್ಥಂ ಭೀಷ್ಮಪರ್ವ ಪ್ರಚಕ್ಷತೇ।
01002154c ಜಂಬೂಖಂಡವಿನಿರ್ಮಾಣಂ ಯತ್ರೋಕ್ತಂ ಸಂಜಯೇನ ಹ।।
01002155a ಯತ್ರ ಯುದ್ಧಮಭೂದ್ಘೋರಂ ದಶಾಹಾನ್ಯತಿದಾರುಣಂ143।
01002155c ಯತ್ರ ಯೌಧಿಷ್ಠಿರಂ ಸೈನ್ಯಂ ವಿಷಾದಮಗಮತ್ ಪರಂ।।
01002156a ಕಶ್ಮಲಂ ಯತ್ರ ಪಾರ್ಥಸ್ಯ ವಾಸುದೇವೋ ಮಹಾಮತಿಃ।
01002156c ಮೋಹಜಂ ನಾಶಯಾಮಾಸ ಹೇತುಭಿರ್ಮೋಕ್ಷದರ್ಶನೈಃ144।।
01002157a 145ಶಿಖಂಡಿನಂ ಪುರಸ್ಕೃತ್ಯ ಯತ್ರ ಪಾರ್ಥೋ ಮಹಾಧನುಃ।
01002157c ವಿನಿಘ್ನನ್ನಿಶಿತೈರ್ಬಾಣೈ ರಥಾದ್ಭೀಷ್ಮಮಪಾತಯತ್।।
01002158a 146ಷಷ್ಟಮೇತನ್ಮಹಾಪರ್ವ ಭಾರತೇ ಪರಿಕೀರ್ತಿತಂ147।
01002158c ಅಧ್ಯಾಯಾನಾಂ ಶತಂ ಪ್ರೋಕ್ತಂ ಸಪ್ತದಶ ತಥಾಪರೇ148।।
01002159a ಪಂಚ ಶ್ಲೋಕಸಹಸ್ರಾಣಿ ಸಂಖ್ಯಯಾಷ್ಟೌ ಶತಾನಿ ಚ।
01002159c ಶ್ಲೋಕಾಶ್ಚ ಚತುರಾಶೀತಿಃ ಪರ್ವಣ್ಯಸ್ಮಿನ್ ಪ್ರಕೀರ್ತಿತಾಃ149।
01002159e ವ್ಯಾಸೇನ ವೇದವಿದುಷಾ ಸಂಖ್ಯಾತಾ ಭೀಷ್ಮಪರ್ವಣಿ।।
ಮುಂದಿನದು ವಿಚಿತ್ರಾರ್ಥಗಳುಳ್ಳ ಭೀಷ್ಮಪರ್ವ. ಸಂಜಯನು ವರ್ಣಿಸಿದ ಜಂಬೂಖಂಡ ನಿರ್ಮಾಣ, ಘೋರ ದಾರುಣ ಯುದ್ಧದ ಹತ್ತು ದಿನಗಳಲ್ಲಿ ಯುಧಿಷ್ಠಿರನ ಸೈನ್ಯವು ಮಹತ್ತರ ವಿಷಾದವನ್ನು ಹೊಂದಿದ್ದುದು, ಮಹಾಮತಿ ವಾಸುದೇವನು ಮೋಹದಿಂದ ಹುಟ್ಟಿದ ಪಾರ್ಥನ ಕಶ್ಮಲವನ್ನು ಮೋಕ್ಷ ದರ್ಶನಗಳಿಂದ ನಾಶಮಾಡಿದ್ದುದು, ಮಹಾಧನು ಪಾರ್ಥನು ಶಿಖಂಡಿಯನ್ನು ಮುಂದೆ ನಿಲ್ಲಿಸಿಕೊಂಡು ತೀಕ್ಷ್ಣ ಬಾಣಗಳಿಂದ ಹೊಡೆದು ಭೀಷ್ಮನನ್ನು ರಥದಿಂದ ಉರುಳಿಸಿದ್ದುದು ಇವೆಲ್ಲವನ್ನೂ ವೇದವಿದುಷ ವ್ಯಾಸ ರಚಿತ ಭಾರತದ ಈ ಆರನೆಯ ಮಹಾಪರ್ವದಲ್ಲಿ 117 ಅಧ್ಯಾಯಗಳಲ್ಲಿ ಒಟ್ಟು 5884 ಶ್ಲೋಕಗಳಲ್ಲಿ ಹೇಳಲಾಗಿವೆ150.
01002160a ದ್ರೋಣಪರ್ವ ತತಶ್ಚಿತ್ರಂ ಬಹುವೃತ್ತಾಂತಮುಚ್ಯತೇ।
01002160c 151ಯತ್ರ ಸಂಶಪ್ತಕಾಃ ಪಾರ್ಥಮಪನಿನ್ಯೂ ರಣಾಜಿರಾತ್।।
01002161a ಭಗದತ್ತೋ ಮಹಾರಾಜೋ ಯತ್ರ ಶಕ್ರಸಮೋ ಯುಧಿ।
01002161c ಸುಪ್ರತೀಕೇನ ನಾಗೇನ ಸಹ ಶಸ್ತಃ ಕಿರೀಟಿನಾ152।।
01002162a ಯತ್ರಾಭಿಮನ್ಯುಂ ಬಹವೋ ಜಘ್ನುರ್ಲೋಕಮಹಾರಥಾಃ153।
01002162c ಜಯದ್ರಥಮುಖಾ ಬಾಲಂ ಶೂರಮಪ್ರಾಪ್ತಯೌವನಂ।।
01002163a ಹತೇಽಭಿಮನ್ಯೌ ಕ್ರುದ್ಧೇನ ಯತ್ರ ಪಾರ್ಥೇನ ಸಂಯುಗೇ।
01002163c ಅಕ್ಷೌಹಿಣೀಃ ಸಪ್ತ ಹತ್ವಾ ಹತೋ ರಾಜಾ ಜಯದ್ರಥಃ।
01002163e 154ಸಂಶಪ್ತಕಾವಶೇಷಂ ಚ ಕೃತಂ ನಿಃಶೇಷಮಾಹವೇ।।
01002164a 155ಅಲಂಬುಸಃ156 ಶ್ರುತಾಯುಶ್ಚ ಜಲಸಂಧಶ್ಚ ವೀರ್ಯವಾನ್।
01002164c ಸೌಮದತ್ತಿರ್ವಿರಾಟಶ್ಚ ದ್ರುಪದಶ್ಚ ಮಹಾರಥಃ।
01002164e ಘಟೋತ್ಕಚಾದಯಶ್ಚಾನ್ಯೇ ನಿಹತಾ ದ್ರೋಣಪರ್ವಣಿ।।
01002165a ಅಶ್ವತ್ಥಾಮಾಪಿ ಚಾತ್ರೈವ ದ್ರೋಣೇ ಯುಧಿ ನಿಪಾತಿತೇ।
01002165c ಅಸ್ತ್ರಂ ಪ್ರಾದುಶ್ಚಕಾರೋಗ್ರಂ ನಾರಾಯಣಮಮರ್ಷಿತಃ।।
01002166a 157ಸಪ್ತಮಂ ಭಾರತೇ ಪರ್ವ ಮಹದೇತದುದಾಹೃತಂ।
01002166c ಅತ್ರ158 ತೇ ಪೃಥಿವೀಪಾಲಾಃ ಪ್ರಾಯಶೋ ನಿಧನಂ ಗತಾಃ।
01002166e ದ್ರೋಣಪರ್ವಣಿ ಯೇ ಶೂರಾ ನಿರ್ದಿಷ್ಟಾಃ ಪುರುಷರ್ಷಭಾಃ।।
ನಂತರ ವಿಚಿತ್ರ ಬಹು ವೃತ್ತಾಂತಗಳನ್ನು ಹೇಳಿರುವ ದ್ರೋಣಪರ್ವ. ಇದರಲ್ಲಿ ಸಂಶಪ್ತಕರು ಪಾರ್ಥನನ್ನು ರಣಭೂಮಿಯಿಂದ ಕರೆದೊಯ್ಯುವುದು, ಕಿರೀಟಿಯು ಯುದ್ಧದಲ್ಲಿ ಶಕ್ರಸಮ ಮಹಾರಾಜ ಭಗದತ್ತನನ್ನು ಅವನ ಆನೆ ಸುಪ್ರತೀಕನ ಸಹಿತ ಸಂಹರಿಸಿದ್ದುದು, ಇನ್ನೂ ಯೌವನವನ್ನು ಹೊಂದದೇ ಇದ್ದ ಶೂರ ಬಾಲಕ ಅಭಿಮನ್ಯುವನ್ನು ಜಯದ್ರಥನೂ ಸೇರಿ ಹಲವಾರು ಲೋಕಮಹಾರಥಿಗಳು ಸಂಹರಿಸಿದ್ದುದು, ಅಭಿಮನ್ಯುವಿನ ಮೃತ್ಯುವಿನಿಂದ ಕೃದ್ಧನಾದ ಪಾರ್ಥನು ಒಟ್ಟು ಏಳು ಅಕ್ಷೌಹಿಣೀ ಸೇನೆಗಳನ್ನು ಸಂಹರಿಸಿದ್ದುದು, ವೀರ ಅಲಂಬುಸ, ಶೃತಾಯು, ಜಲಸಂಘ, ಸೋಮದತ್ತ, ವಿರಾಟ, ಮಹಾರಥಿ ದ್ರುಪದ, ಘಟೋತ್ಕಚ, ದ್ರೋಣ ಮೊದಲಾದವರ ಮೃತ್ಯು, ಮತ್ತು ಯುದ್ಧದಲ್ಲಿ ದ್ರೋಣನು ಸಾವನ್ನಪ್ಪಿದ ನಂತರ ಅಶ್ವತ್ಥಾಮನು ಉಗ್ರ ನಾರಾಯಣಾಸ್ತ್ರವನ್ನು ಪ್ರಯೋಗಿಸಿದ್ದುದು ಇವೆಲ್ಲವುಗಳನ್ನೂ ವರ್ಣಿಸಲಾಗಿದೆ. ದ್ರೋಣ ಪರ್ವದಲ್ಲಿ ಶೂರ ಪುರುಷರ್ಷಭ ಮಹಾ ಮಹೀಪಾಲರ ಸಾವನ್ನು ವರ್ಣಿಸಲಾಗಿದೆ.
01002167a ಅಧ್ಯಾಯಾನಾಂ ಶತಂ ಪ್ರೋಕ್ತಮಧ್ಯಾಯಾಃ ಸಪ್ತತಿಸ್ತಥಾ159।
01002167c ಅಷ್ಟೌ ಶ್ಲೋಕಸಹಸ್ರಾಣಿ ತಥಾ ನವ ಶತಾನಿ ಚ।।
01002168a ಶ್ಲೋಕಾ ನವ ತಥೈವಾತ್ರ ಸಂಖ್ಯಾತಾಸ್ತತ್ತ್ವದರ್ಶಿನಾ।
01002168c ಪಾರಾಶರ್ಯೇಣ ಮುನಿನಾ ಸಂಚಿಂತ್ಯ ದ್ರೋಣಪರ್ವಣಿ।।
ಮುನಿ ಪಾರಾಶರಿಯಿಂದ ಭಾರತದ ಸಪ್ತಮ ಪರ್ವ ಈ ದ್ರೋಣಪರ್ವವು ಒಟ್ಟು 8,909 ಶ್ಲೋಕಗಳನ್ನೊಳಗೊಂಡ 170 ಅಧ್ಯಾಯಗಳಲ್ಲಿ ರಚಿತವಾಗಿದೆ160.
01002169a ಅತಃ ಪರಂ ಕರ್ಣಪರ್ವ ಪ್ರೋಚ್ಯತೇ ಪರಮಾದ್ಭುತಂ।
01002169c ಸಾರಥ್ಯೇ ವಿನಿಯೋಗಶ್ಚ ಮದ್ರರಾಜಸ್ಯ ಧೀಮತಃ।
01002169e ಆಖ್ಯಾತಂ ಯತ್ರ ಪೌರಾಣಂ ತ್ರಿಪುರಸ್ಯ ನಿಪಾತನಂ।।
01002170a ಪ್ರಯಾಣೇ ಪರುಷಶ್ಚಾತ್ರ ಸಂವಾದಃ ಕರ್ಣಶಲ್ಯಯೋಃ।
01002170c ಹಂಸಕಾಕೀಯಮಾಖ್ಯಾನಮತ್ರೈವಾಕ್ಷೇಪಸಂಹಿತಂ।।
01002171a 161ಅನ್ಯೋನ್ಯಂ ಪ್ರತಿ ಚ ಕ್ರೋಧೋ ಯುಧಿಷ್ಠಿರಕಿರೀಟಿನೋಃ।
01002171c 162ದ್ವೈರಥೇ ಯತ್ರ ಪಾರ್ಥೇನ ಹತಃ ಕರ್ಣೋ ಮಹಾರಥಃ।।
ಇದರ ನಂತರದ್ದು ಪರಮಾದ್ಭುತ ಕರ್ಣಪರ್ವವೆಂದು ಹೇಳುತ್ತಾರೆ. ಇದರಲ್ಲಿ ದೀಮತ ಮದ್ರರಾಜನನ್ನು ಸಾರಥಿಯನ್ನಾಗಿ ನಿಯೋಜಿಸಿದ್ದುದು, ತ್ರಿಪುರವನ್ನು ಕೆಳಗುರುಳಿಸಿದುದರ ಪೌರಾಣಿಕ ಕಥೆ, ದಾರಿಯಲ್ಲಿ ಕ್ಷಾತ್ರಪೌರುಷ ಕರ್ಣ ಮತ್ತು ಶಲ್ಯರ ಸಂವಾದ, ಕರ್ಣನನ್ನು ಅವಮಾನಗೊಳಿಸುವ ಹಂಸ-ಕಾಗೆಗಳ ಕಥೆ, ಯುಧಿಷ್ಠಿರ ಮತ್ತು ಕಿರೀಟಿಗಳ ಪರಸ್ಪರರಲ್ಲಿ ಕ್ರೋಧ ಮತ್ತು ದ್ವಂದ್ವಯುದ್ಧದಲ್ಲಿ ಪಾರ್ಥನಿಂದ ಮಹಾರಥಿ ಕರ್ಣನ ನಿಧನ ಇವೆಲ್ಲವುಗಳ ವರ್ಣನೆಯಿದೆ.
01002172a ಅಷ್ಟಮಂ ಪರ್ವ ನಿರ್ದಿಷ್ಟಮೇತದ್ಭಾರತಚಿಂತಕೈಃ।
01002172c ಏಕೋನಸಪ್ತತಿಃ ಪ್ರೋಕ್ತಾ ಅಧ್ಯಾಯಾಃ ಕರ್ಣಪರ್ವಣಿ।
01002172e ಚತ್ವಾರ್ಯೇವ ಸಹಸ್ರಾಣಿ ನವ ಶ್ಲೋಕಶತಾನಿ ಚ।।163
ಭಾರತದ ಎಂಟನೆಯ ಪರ್ವ ಕರ್ಣಪರ್ವದಲ್ಲಿ ಒಟ್ಟು 4900 ಶ್ಲೋಕಗಳು ಮತ್ತು 69 ಅಧ್ಯಾಯಗಳಿವೆ164.
01002173a ಅತಃ ಪರಂ ವಿಚಿತ್ರಾರ್ಥಂ ಶಲ್ಯಪರ್ವ ಪ್ರಕೀರ್ತಿತಂ।
01002173c 165ಹತಪ್ರವೀರೇ ಸೈನ್ಯೇ ತು ನೇತಾ ಮದ್ರೇಶ್ವರೋಽಭವತ್।।
01002174a ವೃತ್ತಾನಿ ರಥಯುದ್ಧಾನಿ ಕೀರ್ತ್ಯಂತೇ ಯತ್ರ ಭಾಗಶಃ।
01002174c ವಿನಾಶಃ ಕುರುಮುಖ್ಯಾನಾಂ ಶಲ್ಯಪರ್ವಣಿ ಕೀರ್ತ್ಯತೇ।।
01002175a ಶಲ್ಯಸ್ಯ ನಿಧನಂ ಚಾತ್ರ ಧರ್ಮರಾಜಾನ್ ಮಹಾರಥಾತ್166।
01002175c 167ಗದಾಯುದ್ಧಂ ತು ತುಮುಲಮತ್ರೈವ ಪರಿಕೀರ್ತಿತಂ।
01002175e ಸರಸ್ವತ್ಯಾಶ್ಚ ತೀರ್ಥಾನಾಂ ಪುಣ್ಯತಾ ಪರಿಕೀರ್ತಿತಾ।।
ಇದರ ನಂತರದ್ದು ವಿಚಿತ್ರಾರ್ಥಗಳನ್ನುಳ್ಳ ಶಲ್ಯಪರ್ವ. ಇದರಲ್ಲಿ ಹಲವಾರು ಪ್ರವೀಣರು ಸತ್ತನಂತರ ಮದ್ರೇಶ್ವರನು ಸೈನ್ಯದ ನಾಯಕನಾಗಿದ್ದುದು, ರಥಯುದ್ಧಗಳ ವೃತ್ತಾಂತಗಳು, ಕುರುಮುಖ್ಯರ ವಿನಾಶ, ಮಹಾರಥಿ ಧರ್ಮರಾಜನಿಂದ ಶಲ್ಯನ ವಧೆ, ಗದಾಯುದ್ಧದ ತುಮುಲ, ಮತ್ತು ಸರಸ್ವತೀ ತೀರ್ಥದ ಪುಣ್ಯತೆಯನ್ನು ವರ್ಣಿಸಲಾಗಿದೆ.
01002176a 168ನವಮಂ ಪರ್ವ ನಿರ್ದಿಷ್ಟಮೇತದದ್ಭುತಮರ್ಥವತ್।
01002176c ಏಕೋನಷಷ್ಟಿರಧ್ಯಾಯಾಸ್ತತ್ರ ಸಂಖ್ಯಾವಿಶಾರದೈಃ169।।
01002177a ಸಂಖ್ಯಾತಾ ಬಹುವೃತ್ತಾಂತಾಃ ಶ್ಲೋಕಾಗ್ರಂ ಚಾತ್ರ ಶಸ್ಯತೇ170।
01002177c ತ್ರೀಣಿ ಶ್ಲೋಕಸಹಸ್ರಾಣಿ ದ್ವೇ ಶತೇ ವಿಂಶತಿಸ್ತಥಾ।
01002177e ಮುನಿನಾ ಸಂಪ್ರಣೀತಾನಿ ಕೌರವಾಣಾಂ ಯಶೋಭೃತಾಂ।।
ಕೌರವರ ಯಶಸ್ಸನ್ನು ಪ್ರಸರಿಸಿದ ಮುನಿಯು 3220 ಶ್ಲೋಕಗಳ ಮತ್ತು 59 ಅಧ್ಯಾಯಗಳ ಈ ಒಂಭತ್ತನೆಯ ಪರ್ವವನ್ನು ರಚಿಸಿದನು171.
01002178a ಅತಃ ಪರಂ ಪ್ರವಕ್ಷ್ಯಾಮಿ ಸೌಪ್ತಿಕಂ ಪರ್ವ ದಾರುಣಂ।
01002178c ಭಗ್ನೋರುಂ ಯತ್ರ ರಾಜಾನಂ ದುರ್ಯೋಧನಮಮರ್ಷಣಂ।।
01002179a ವ್ಯಪಯಾತೇಷು172 ಪಾರ್ಥೇಷು ತ್ರಯಸ್ತೇಽಭ್ಯಾಯಯೂ ರಥಾಃ।
01002179c ಕೃತವರ್ಮಾ ಕೃಪೋ ದ್ರೌಣಿಃ ಸಾಯಾಹ್ನೇ ರುಧಿರೋಕ್ಷಿತಾಃ।।
01002180a 173ಪ್ರತಿಜಜ್ಞೇ ದೃಢಕ್ರೋಧೋ ದ್ರೌಣಿರ್ಯತ್ರ ಮಹಾರಥಃ।
01002180c ಅಹತ್ವಾ ಸರ್ವಪಾಂಚಾಲಾನ್ ಧೃಷ್ಟದ್ಯುಮ್ನಪುರೋಗಮಾನ್।
01002180e ಪಾಂಡವಾಂಶ್ಚ ಸಹಾಮಾತ್ಯಾನ್ನ ವಿಮೋಕ್ಷ್ಯಾಮಿ ದಂಶನಂ174।।
01002181a 175ಪ್ರಸುಪ್ತಾನ್ನಿಶಿ ವಿಶ್ವಸ್ತಾನ್ಯತ್ರ ತೇ ಪುರುಷರ್ಷಭಾಃ176।
01002181c ಪಾಂಚಾಲಾನ್ ಸಪರೀವಾರಾನ್ ಜಘ್ನುರ್ದ್ರೌಣಿಪುರೋಗಮಾಃ177।।
01002182a ಯತ್ರಾಮುಚ್ಯಂತ ಪಾರ್ಥಾಸ್ತೇ178 ಪಂಚ ಕೃಷ್ಣಬಲಾಶ್ರಯಾತ್।
01002182c ಸಾತ್ಯಕಿಶ್ಚ ಮಹೇಷ್ವಾಸಃ ಶೇಷಾಶ್ಚ ನಿಧನಂ ಗತಾಃ।।
01002183a 179ದ್ರೌಪದೀ ಪುತ್ರಶೋಕಾರ್ತಾ ಪಿತೃಭ್ರಾತೃವಧಾರ್ದಿತಾ।
01002183c ಕೃತಾನಶನಸಂಕಲ್ಪಾ ಯತ್ರ ಭರ್ತೄನುಪಾವಿಶತ್।।
01002184a ದ್ರೌಪದೀವಚನಾದ್ಯತ್ರ ಭೀಮೋ ಭೀಮಪರಾಕ್ರಮಃ।
01002184c 180ಅನ್ವಧಾವತ ಸಂಕ್ರುದ್ಧೋ ಭಾರದ್ವಾಜಂ ಗುರೋಃ ಸುತಂ।।
01002185a ಭೀಮಸೇನಭಯಾದ್ಯತ್ರ ದೈವೇನಾಭಿಪ್ರಚೋದಿತಃ।
01002185c ಅಪಾಂಡವಾಯೇತಿ ರುಷಾ ದ್ರೌಣಿರಸ್ತ್ರಮವಾಸೃಜತ್।।
01002186a ಮೈವಮಿತ್ಯಬ್ರವೀತ್ ಕೃಷ್ಣಃ ಶಮಯಂಸ್ತಸ್ಯ ತದ್ವಚಃ।
01002186c ಯತ್ರಾಸ್ತ್ರಮಸ್ತ್ರೇಣ ಚ ತಚ್ಚಮಯಾಮಾಸ ಫಾಲ್ಗುನಃ।।
01002187a 181ದ್ರೌಣಿದ್ವೈಪಾಯನಾದೀನಾಂ ಶಾಪಾಶ್ಚಾನ್ಯೋನ್ಯಕಾರಿತಾಃ।
01002187c 182ತೋಯಕರ್ಮಣಿ ಸರ್ವೇಷಾಂ ರಾಜ್ಞಾಮುದಕದಾನಿಕೇ।।
01002188a ಗೂಢೋತ್ಪನ್ನಸ್ಯ ಚಾಖ್ಯಾನಂ ಕರ್ಣಸ್ಯ ಪೃಥಯಾತ್ಮನಃ।
01002188c ಸುತಸ್ಯೈತದಿಹ ಪ್ರೋಕ್ತಂ ದಶಮಂ ಪರ್ವ ಸೌಪ್ತಿಕಂ183।।
ನಂತರ ದಾರುಣ ಸೌಪ್ತಿಕ ಪರ್ವದ ಕುರಿತು ಹೇಳುತ್ತೇನೆ. ಪಾರ್ಥರು ತೆರಳಿದನಂತರ ಸಾಯಂಕಾಲ ರಥವೇರಿ ಬರುತ್ತಿದ್ದ ಕೃತವರ್ಮ, ಕೃಪ ಮತ್ತು ದ್ರೌಣಿ ಈ ಮೂವರೂ ತೊಡೆಮುರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜ ದುರ್ಯೋಧನನನ್ನು ಕಂಡಿದ್ದುದು, ಮಹಾರಥಿ ದ್ರೌಣಿಯು ಕ್ರೋಧದಿಂದ “ಧೃಷ್ಟದ್ಯುಮ್ನನನ್ನೊಡಗೂಡಿ ಸರ್ವ ಪಾಂಚಾಲರನ್ನೂ ಮತ್ತು ಅಮಾತ್ಯರ ಸಹಿತ ಪಾಂಡವರನ್ನೂ ಕೊಲ್ಲದೇ ಈ ಕವಚವನ್ನು ಬಿಚ್ಚುವುದಿಲ್ಲ!” ಎನ್ನುವ ದೃಢ ಪ್ರತಿಜ್ಞೆಯನ್ನು ಮಾಡಿದ್ದುದು, ರಾತ್ರಿಯಲ್ಲಿ ಸಪರಿವಾರರಾಗಿ ಮಲಗಿದ್ದ ಎಲ್ಲ ಪಾಂಚಾಲರನ್ನು ದ್ರೌಣಿಯು ಕೊಲೆಗೈದಿದ್ದುದು, ಮಹೇಷ್ವಾಸ ಕೃಷ್ಣನ ಆಶ್ರಯಬಲದಿಂದ ಉಳಿದುಕೊಂಡ ಪಂಚ ಪಾರ್ಥರು ಮತ್ತು ಸಾತ್ಯಕಿಯನ್ನು ಬಿಟ್ಟು ಎಲ್ಲರೂ ಸಾವನ್ನಪ್ಪಿದ್ದುದು, ಪಿತೃ-ಭ್ರಾತೃಗಳ ವಧೆಯಿಂದ ಆರ್ತ ಪುತ್ರಶೋಕಾರ್ತಳಾದ ದ್ರೌಪದಿಯು ತನ್ನ ಗಂಡಂದಿರ ಎದಿರು ಅಶನಸಂಕಲ್ಪ ಮಾಡಿ ಕುಳಿತುಕೊಂಡಿದ್ದುದು, ದ್ರೌಪದಿಯ ವಚನದಂತೆ ಸಂಕೃದ್ಧ ಭೀಮಪರಾಕ್ರಮಿ ಭೀಮನು ಗುರುಸುತ ಭಾರದ್ವಾಜನನ್ನು ಬೆನ್ನಟ್ಟಿ ಹೋಗಿದ್ದುದು, ಭೀಮಸೇನನ ಭಯದಿಂದ ದೇವತೆಗಳನ್ನು ಅಭಿಪ್ರಚೋದಿಸಿ “ಅಪಾಂಡವ!” ಎಂದು ರೋಷದಿಂದ ದ್ರೌಣಿಯು ಅಸ್ತ್ರವನ್ನು ಬಿಟ್ಟಿದ್ದುದು, “ಇದು ಸುಳ್ಳಾಗಲಿ!” ಎಂದು ಕೃಷ್ಣನು ಹೇಳಿದ ನಂತರ ಫಲ್ಗುಣನು ತನ್ನದೇ ಆದ ಇನ್ನೊಂದು ಅಸ್ತ್ರದಿಂದ ಅದನ್ನು ಶಾಂತಗೊಳಿಸಿದ್ದುದು, ದ್ರೌಣಿ ಮತ್ತು ದ್ವೈಪಾಯನರು ಅನ್ಯೋನ್ಯರನ್ನು ಶಪಿಸಿದ್ದುದು, 184ಸರ್ವ ರಾಜರುಗಳಿಗೆ ನೀರಿನಲ್ಲಿ ತರ್ಪಣವನ್ನಿತ್ತಿದ್ದುದು, ಪೃಥೆಯು ತನ್ನಿಂದ ಕರ್ಣನ ಜನನ ಮತ್ತು ಅವನೂ ತನ್ನ ಮಗನೇ ಎನ್ನುವ ಗೂಢ ವೃತಾಂತವನ್ನು ಹೇಳಿದ್ದುದು, ಇವೆಲ್ಲವನ್ನೂ ಈ ಹತ್ತನೆಯ ಸೌಪ್ತಿಕ ಪರ್ವದಲ್ಲಿ ಹೇಳಲಾಗಿದೆ.
01002189a 185ಅಷ್ಟಾದಶಾಸ್ಮಿನ್ನಧ್ಯಾಯಾಃ ಪರ್ವಣ್ಯುಕ್ತಾ ಮಹಾತ್ಮನಾ।
01002189c ಶ್ಲೋಕಾಗ್ರಮತ್ರ ಕಥಿತಂ ಶತಾನ್ಯಷ್ಟೌ ತಥೈವ ಚ186।।
01002190a ಶ್ಲೋಕಾಶ್ಚ ಸಪ್ತತಿಃ ಪ್ರೋಕ್ತಾ ಯಥಾವದಭಿಸಂಖ್ಯಯಾ187।
01002190c ಸೌಪ್ತಿಕೈಷೀಕಸಂಬಂಧೇ ಪರ್ವಣ್ಯಮಿತಬುದ್ಧಿನಾ188।।
ಮಹಾತ್ಮನು ಈ ಪರ್ವವನ್ನು 18 ಅಧ್ಯಾಯಗಳಲ್ಲಿ ಹೇಳಿದ್ದಾನೆ. ಸೌಪ್ತಿಕ-ಐಷೀಕ ಸಂಬಿಂಧಿತ ಈ ಪರ್ವದಲ್ಲಿ ಅಮಿತಬುದ್ಧಿಯು 870 ಶ್ಲೋಕಗಳನ್ನು ಸೇರಿಸಿದ್ದಾನೆ189.
01002191a ಅತ ಊರ್ಧ್ವಮಿದಂ ಪ್ರಾಹುಃ ಸ್ತ್ರೀಪರ್ವ ಕರುಣೋದಯಂ।
01002191c 190ವಿಲಾಪೋ ವೀರಪತ್ನೀನಾಂ ಯತ್ರಾತಿಕರುಣಃ ಸ್ಮೃತಃ।
01002191e ಕ್ರೋಧಾವೇಶಃ ಪ್ರಸಾದಶ್ಚ ಗಾಂಧಾರೀಧೃತರಾಷ್ಟ್ರಯೋಃ।।
01002192a ಯತ್ರ ತಾನ್ ಕ್ಷತ್ರಿಯಾನ್ ಶೂರಾನ್ ದಿಷ್ಟಾಂತಾನನಿವರ್ತಿನಃ191।
01002192c ಪುತ್ರಾನ್ ಭ್ರಾತೄನ್ ಪಿತೄಂಶ್ಚೈವ ದದೃಶುರ್ನಿಹತಾನ್ರಣೇ।।
01002193a 192ಯತ್ರ ರಾಜಾ ಮಹಾಪ್ರಾಜ್ಞಃ ಸರ್ವಧರ್ಮಭೃತಾಂ ವರಃ।
01002193c ರಾಜ್ಞಾಂ ತಾನಿ ಶರೀರಾಣಿ ದಾಹಯಾಮಾಸ ಶಾಸ್ತ್ರತಃ।।
01002194a 193ಏತದೇಕಾದಶಂ ಪ್ರೋಕ್ತಂ ಪರ್ವಾತಿಕರುಣಂ ಮಹತ್194।
ಮುಂದಿನದು ಕರುಣೋದಯ ಸ್ತ್ರೀಪರ್ವ. ಇದರಲ್ಲಿ ವೀರಪತ್ನಿಯರ ಅತಿಕರುಣ ವಿಲಾಪ, ಗಾಂಧಾರಿ-ಧೃತರಾಷ್ಟ್ರರ ಕ್ರೋಧಾವೇಶ, ಅವರೆಲ್ಲರೂ ರಣದಲ್ಲಿ ಹತರಾಗಿ ಬಿದ್ದಿದ್ದ ಶೂರ ಕ್ಷತ್ರಿಯ ಪುತ್ರ, ಭ್ರಾತೃ ಪಿತೃಗಳನ್ನು ಕಂಡಿದ್ದುದು, ಸರ್ವ ಧರ್ಮಭೃತರಲ್ಲಿ ಶ್ರೇಷ್ಠ ಮಹಾಪ್ರಾಜ್ಞ ರಾಜನಿಂದ ಶಾಸ್ತ್ರೋಕ್ತವಾಗಿ ರಾಜರ ಶರೀರ ದಹನ ಇವೆಲ್ಲವುಗಳ ವರ್ಣನೆಯಿದೆ. ಹನ್ನೊಂದನೆಯ ಈ ಪರ್ವವು ಅತ್ಯಂತ ಕರುಣಾಜನಕವೆಂದು ಪರಿಗಣಿಸಲ್ಪಟ್ಟಿದೆ.
01002194c 195ಸಪ್ತವಿಂಶತಿರಧ್ಯಾಯಾಃ ಪರ್ವಣ್ಯಸ್ಮಿನ್ನುದಾಹೃತಾಃ196।।
01002195a ಶ್ಲೋಕಾಃ ಸಪ್ತಶತಂ ಚಾತ್ರ ಪಂಚಸಪ್ತತಿರುಚ್ಯತೇ197।
01002195c ಸಂಖ್ಯಯಾ ಭಾರತಾಖ್ಯಾನಂ ಕರ್ತ್ರಾ ಹ್ಯತ್ರ ಮಹಾತ್ಮನಾ198।
01002195e ಪ್ರಣೀತಂ ಸಜ್ಞನಮನೋವೈಕ್ಲವ್ಯಾಶ್ರುಪ್ರವರ್ತಕಂ।।
ಒಟ್ಟು 775 ಶ್ಲೋಕಗಳುಳ್ಳ 27 ಅಧ್ಯಾಯಗಳು ಇದರಲ್ಲಿವೆ ಎಂದು ಹೇಳುತ್ತಾರೆ199.
01002196a ಅತಃ ಪರಂ ಶಾಂತಿಪರ್ವ ದ್ವಾದಶಂ ಬುದ್ಧಿವರ್ಧನಂ।
01002196c ಯತ್ರ ನಿರ್ವೇದಮಾಪನ್ನೋ ಧರ್ಮರಾಜೋ ಯುಧಿಷ್ಠಿರಃ।
01002196e ಘಾತಯಿತ್ವಾ ಪಿತೄನ್ ಭ್ರಾತೄನ್ ಪುತ್ರಾನ್ ಸಂಬಂಧಿಬಾಂಧವಾನ್200।।
ನಂತರ ಬುದ್ಧಿವರ್ಧಕ ಶ್ರೇಷ್ಠ ಹನ್ನೆರಡನೆಯ ಶಾಂತಿಪರ್ವ. ಇದರಲ್ಲಿ ಪಿತೃ, ಭ್ರಾತೃ, ಪುತ್ರ ಮತ್ತು ಸಂಬಂಧಿ ಬಾಂಧವರನ್ನು ಕೊಂದ ಧರ್ಮರಾಜ ಯುಧಿಷ್ಠಿರನು ಪಶ್ಚಾತ್ತಾಪ ಪಟ್ಟಿದ್ದುದರ ವೃತ್ತಾಂತವಿದೆ.
01002197a ಶಾಂತಿಪರ್ವಣಿ ಧರ್ಮಾಶ್ಚ ವ್ಯಾಖ್ಯಾತಾಃ ಶರತಲ್ಪಿಕಾಃ।
01002197c ರಾಜಭಿರ್ವೇದಿತವ್ಯಾ ಯೇ ಸಮ್ಯಙ್ನಯಬುಭುತ್ಸುಭಿಃ201।।
01002198a ಆಪದ್ಧರ್ಮಾಶ್ಚ ತತ್ರೈವ ಕಾಲಹೇತುಪ್ರದರ್ಶಕಾಃ202।
01002198c ಯಾನ್ಬುದ್ಧ್ವಾ ಪುರುಷಃ ಸಮ್ಯಕ್ಸರ್ವಜ್ಞತ್ವಮವಾಪ್ನುಯಾತ್।
01002198e ಮೋಕ್ಷಧರ್ಮಾಶ್ಚ ಕಥಿತಾ ವಿಚಿತ್ರಾ ಬಹುವಿಸ್ತರಾಃ।।
ಶರತಲ್ಪದಮೇಲೆ ಮಲಗಿದ್ದ ಭೀಷ್ಮನು ಹೇಳಿದ, ರಾಜರು ಕೇಳಿ ತಿಳಿದುಕೊಳ್ಳಬೇಕಾದಂಥಹ, ಧಾರ್ಮಿಕ ವಿಷಯಗಳನ್ನು ಒಳಗೊಂಡಿದೆ. ಕಾಲಪ್ರದೇಶಕ್ಕನುಗುಣವಾದ ನಡತೆಗಳನ್ನೊಳಗೊಂಡ ಆಪದ್ಧರ್ಮ ಮತ್ತು ಸರ್ವಜ್ಞಾನವನ್ನು ನೀಡುವ ಮೋಕ್ಷಧರ್ಮಗಳನ್ನು ವಿಚಿತ್ರ ಕಥೆಗಳ ಮೂಲಕ ಬಹಳ ವಿಸ್ತಾರವಾಗಿ ಶಾಂತಿಪರ್ವದಲ್ಲಿ ಹೇಳಲಾಗಿದೆ.
01002199a ದ್ವಾದಶಂ ಪರ್ವ ನಿರ್ದಿಷ್ಟಮೇತತ್ ಪ್ರಾಜ್ಞಜನಪ್ರಿಯಂ।
01002199c ಪರ್ವಣ್ಯತ್ರ ಪರಿಜ್ಞೇಯಮಧ್ಯಾಯಾನಾಂ ಶತತ್ರಯಂ203।
01002199e ತ್ರಿಂಶಚ್ಚೈವ ತಥಾಧ್ಯಾಯಾ ನವ ಚೈವ ತಪೋಧನಾಃ।।
01002200a ಶ್ಲೋಕಾನಾಂ ತು ಸಹಸ್ರಾಣಿ ಕೀರ್ತಿತಾನಿ ಚತುರ್ದಶ204।
01002200c ಪಂಚ ಚೈವ ಶತಾನ್ಯಾಹುಃ ಪಂಚವಿಂಶತಿಸಂಖ್ಯಯಾ205।।
ಪ್ರಾಜ್ಞಜನರಿಗೆ ಪ್ರಿಯವಾದ ಈ ಹನ್ನೆರಡನೆಯ ಪರ್ವದಲ್ಲಿ 14,525 ಶ್ಲೋಕಗಳು ಮತ್ತು 339 ಅಧ್ಯಾಯಗಳಿವೆ206.
01002201a ಅತ ಊರ್ಧ್ವಂ ತು207 ವಿಜ್ಞೇಯಮಾನುಶಾಸನಮುತ್ತಮಂ।
01002201c ಯತ್ರ ಪ್ರಕೃತಿಮಾಪನ್ನಃ ಶ್ರುತ್ವಾ ಧರ್ಮವಿನಿಶ್ಚಯಂ।
01002201e ಭೀಷ್ಮಾದ್ಭಾಗೀರಥೀಪುತ್ರಾತ್ಕುರುರಾಜೋ ಯುಧಿಷ್ಠಿರಃ।।
01002202a ವ್ಯವಹಾರೋಽತ್ರ ಕಾರ್ತ್ಸ್ನ್ಯೆನ ಧರ್ಮಾರ್ಥೀಯೋ ನಿದರ್ಶಿತಃ208।
01002202c ವಿವಿಧಾನಾಂ ಚ ದಾನಾನಾಂ ಫಲಯೋಗಾಃ ಪೃಥಗ್ವಿಧಾಃ209।।
ನಂತರದ್ದು ಉತ್ತಮ ಅನುಶಾಸನ ಪರ್ವ. ಇದರಲ್ಲಿ ಭಾಗಿರಥೀಪುತ್ರ ಭೀಷ್ಮನು ಕುರುರಾಜ ಯುಧಿಷ್ಠಿರನಿಗೆ ಧರ್ಮವಿನಿಶ್ಚಯವನ್ನು ಹೇಳಿ ಸಾಂತ್ವನಗೊಳಿಸಿದ್ದುದು, ಧರ್ಮಾರ್ಥಗಳನ್ನು ನೀಡುವ ವ್ಯವಹಾರ ಮತ್ತು ನಡವಳಿಕೆಗಳ ನಿದರ್ಶನ, ಮತ್ತು ವಿವಿಧ ದಾನ ಫಲ-ಯೋಗಗಳನ್ನು ವರ್ಣಿಸಲಾಗಿದೆ.
01002203a ತಥಾ ಪಾತ್ರವಿಶೇಷಾಶ್ಚ ದಾನಾನಾಂ ಚ ಪರೋ ವಿಧಿಃ।
01002203c ಆಚಾರವಿಧಿಯೋಗಶ್ಚ ಸತ್ಯಸ್ಯ ಚ ಪರಾ ಗತಿಃ।।
01002204a 210ಏತತ್ ಸುಬಹುವೃತ್ತಾಂತಮುತ್ತಮಂ ಚಾನುಶಾಸನಂ।
01002204c ಭೀಷ್ಮಸ್ಯಾತ್ರೈವ ಸಂಪ್ರಾಪ್ತಿಃ ಸ್ವರ್ಗಸ್ಯ ಪರಿಕೀರ್ತಿತಾ।।
ದಾನಗಳ ಪಾತ್ರವಿಶೇಷ, ಆಚಾರವಿಧಿಗಳ ಪ್ರಾಮುಖ್ಯತೆ ಮತ್ತು ಸತ್ಯದ ಪರಾಕಾಷ್ಠತೆ ಈ ಎಲ್ಲ ವೃತ್ತಾಂತಗಳನ್ನು ಮತ್ತು ಭೀಷ್ಮನು ಸ್ವರ್ಗವನ್ನು ಸೇರಿದ್ದುದನ್ನು ಈ ಉತ್ತಮ ಅನುಶಾಸನದಲ್ಲಿ ವರ್ಣಿಸಲಾಗಿದೆ.
01002205a ಏತತ್ತ್ರಯೋದಶಂ ಪರ್ವ ಧರ್ಮನಿಶ್ಚಯಕಾರಕಂ।
01002205c ಅಧ್ಯಾಯಾನಾಂ ಶತಂ ಚಾತ್ರ ಷಟ್ಚತ್ವಾರಿಂಶದೇವ ಚ।
01002205e ಶ್ಲೋಕಾನಾಂ ತು ಸಹಸ್ರಾಣಿ ಷಟ್ಸಪ್ತೈವ ಶತಾನಿ ಚ211।।
ಈ ಹದಿಮೂರನೆಯ ಪರ್ವವು ಧರ್ಮನಿಶ್ಚಯ-ಕಾರಕವಾಗಿದ್ದು 6700 ಶ್ಲೋಕಗಳನ್ನೂ 146 ಅಧ್ಯಾಯಗಳನ್ನೂ ಹೊಂದಿದೆ212.
01002206a ತತೋಽಶ್ವಮೇಧಿಕಂ ನಾಮ ಪರ್ವ ಪ್ರೋಕ್ತಂ ಚತುರ್ದಶಂ।
01002206c ತತ್ಸಂವರ್ತಮರುತ್ತೀಯಂ ಯತ್ರಾಖ್ಯಾನಮನುತ್ತಮಂ।।
ಹದಿನಾಲ್ಕನೆಯ ಪರ್ವವನ್ನು ಅಶ್ವಮೇಧಿಕ ಪರ್ವವೆಂದು ಕರೆಯುತ್ತಾರೆ. ಇದರಲ್ಲಿ ಸರಿಸಾಟಿಯಿಲ್ಲದ ಸಂವರ್ತ-ಮರುತ್ತರ ಕಥೆಯನ್ನು ಹೇಳಲಾಗಿದೆ.
01002207a ಸುವರ್ಣಕೋಶಸಂಪ್ರಾಪ್ತಿರ್ಜನ್ಮ ಚೋಕ್ತಂ ಪರಿಕ್ಷಿತಃ213।
01002207c ದಗ್ಧಸ್ಯಾಸ್ತ್ರಾಗ್ನಿನಾ ಪೂರ್ವಂ ಕೃಷ್ಣಾತ್ ಸಂಜೀವನಂ ಪುನಃ।।
01002208a ಚರ್ಯಾಯಾಂ ಹಯಮುತ್ಸೃಷ್ಟಂ ಪಾಂಡವಸ್ಯಾನುಗಚ್ಛತಃ।
01002208c ತತ್ರ ತತ್ರ ಚ ಯುದ್ಧಾನಿ ರಾಜಪುತ್ರೈರಮರ್ಷಣೈಃ।।
01002209a ಚಿತ್ರಾಂಗದಾಯಾಃ ಪುತ್ರೇಣ ಪುತ್ರಿಕಾಯಾ ಧನಂಜಯಃ।
01002209c ಸಂಗ್ರಾಮೇ ಬಭ್ರುವಾಹೇನ214 ಸಂಶಯಂ ಚಾತ್ರ ದರ್ಶಿತಃ।
01002209e ಅಶ್ವಮೇಧೇ ಮಹಾಯಜ್ಞೇ ನಕುಲಾಖ್ಯಾನಮೇವ ಚ।।
01002210a ಇತ್ಯಾಶ್ವಮೇಧಿಕಂ ಪರ್ವ ಪ್ರೋಕ್ತಮೇತನ್ಮಹಾದ್ಭುತಂ।
ಸುವರ್ಣಕೋಶ ಸಂಪ್ರಾಪ್ತಿ, ಪೂರ್ವದಲ್ಲಿ ಅಸ್ತ್ರಾಗ್ನಿಯಿಂದ ಸುಟ್ಟುಹೋಗಿ ಕೃಷ್ಣನಿಂದ ಪುನಃ ಸಂಜೀವನಗೊಂಡ ಪರಿಕ್ಷಿತನ ಜನನ, ಹೊರಬಿಟ್ಟ ಹಯವನ್ನು ಅನುಸರಿಸಿ ಪಾಂಡವನು ಹೋಗಿದ್ದುದು ಮತ್ತು ಅಲ್ಲಲ್ಲಿ ಕುಪಿತ ರಾಜಪುತ್ರರೊಂದಿಗೆ ಯುದ್ಧ, ಚಿತ್ರಾಂಗದೆಯ ಪುತ್ರ ಬಭ್ರುವಾಹನನೊಂದಿಗೆ ಸಂಗ್ರಾಮದಲ್ಲಿ ಧನಂಜಯನು ಸಂಶಯನಾಗಿ ತೋರಿದ್ದುದು, ಅಶ್ವಮೇಧ ಮಹಾಯಜ್ಞದಲ್ಲಿ ನಕುಲಾಖ್ಯಾನ, ಈ ಎಲ್ಲಾ ಮಹಾದ್ಭುತಗಳನ್ನೂ ಈ ಅಶ್ವಮೇಧಿಕ ಪರ್ವದಲ್ಲಿ ಹೇಳಲಾಗಿದೆ.
01002210c ಅತ್ರಾಧ್ಯಾಯಶತಂ ತ್ರಿಂಶತ್ತ್ರಯೋಽಧ್ಯಾಯಾಶ್ಚ ಶಬ್ದಿತಾಃ215।।
01002211a ತ್ರೀಣಿ ಶ್ಲೋಕಸಹಸ್ರಾಣಿ ತಾವಂತ್ಯೇವ ಶತಾನಿ ಚ।
01002211c ವಿಂಶತಿಶ್ಚ ತಥಾ ಶ್ಲೋಕಾಃ ಸಂಖ್ಯಾತಾಸ್ತತ್ತ್ವದರ್ಶಿನಾ।।
ಇದರಲ್ಲಿ 103 ಅಧ್ಯಾಯಗಳಿವೆಯೆಂದು ಹೇಳಿದ್ದಾರೆ. 3,320 ಶ್ಲೋಕಗಳಿವೆಯೆಂದು ತತ್ತ್ವದರ್ಶಿಗಳು ಎಣಿಸಿದ್ದಾರೆ216.
01002212a ತತ ಆಶ್ರಮವಾಸಾಕ್ಯಂ217 ಪರ್ವ ಪಂಚದಶಂ ಸ್ಮೃತಂ।
01002212c ಯತ್ರ ರಾಜ್ಯಂ ಪರಿತ್ಯಜ್ಯ ಗಾಂಧಾರೀಸಹಿತೋ ನೃಪಃ218।
01002212e ಧೃತರಾಷ್ಟ್ರಾಶ್ರಮಪದಂ219 ವಿದುರಶ್ಚ ಜಗಾಮ ಹ।।
01002213a ಯಂ ದೃಷ್ಟ್ವಾ ಪ್ರಸ್ಥಿತಂ ಸಾಧ್ವೀ ಪೃಥಾಪ್ಯನುಯಯೌ ತದಾ।
01002213c ಪುತ್ರರಾಜ್ಯಂ ಪರಿತ್ಯಜ್ಯ ಗುರುಶುಶ್ರೂಷಣೇ ರತಾ।।
01002214a ಯತ್ರ ರಾಜಾ ಹತಾನ್ ಪುತ್ರಾನ್ ಪೌತ್ರಾನನ್ಯಾಂಶ್ಚ ಪಾರ್ಥಿವಾನ್।
01002214c ಲೋಕಾಂತರಗತಾನ್ ವೀರಾನಪಶ್ಯತ್ ಪುನರಾಗತಾನ್।।
01002215a ಋಷೇಃ ಪ್ರಸಾದಾತ್ ಕೃಷ್ಣಸ್ಯ ದೃಷ್ಟ್ವಾಶ್ಚರ್ಯಮನುತ್ತಮಂ।
01002215c ತ್ಯಕ್ತ್ವಾ ಶೋಕಂ ಸದಾರಶ್ಚ ಸಿದ್ಧಿಂ ಪರಮಿಕಾಂ ಗತಃ।।
01002216a ಯತ್ರ ಧರ್ಮಂ ಸಮಾಶ್ರಿತ್ಯ ವಿದುರಃ ಸುಗತಿಂ ಗತಃ।
01002216c ಸಂಜಯಶ್ಚ ಮಹಾಮಾತ್ರೋ220 ವಿದ್ವಾನ್ ಗಾವಲ್ಗಣಿರ್ವಶೀ।।
01002217a ದದರ್ಶ ನಾರದಂ ಯತ್ರ ಧರ್ಮರಾಜೋ ಯುಧಿಷ್ಠಿರಃ।
01002217c ನಾರದಾಚ್ಚೈವ ಶುಶ್ರಾವ ವೃಷ್ಣೀನಾಂ ಕದನಂ ಮಹತ್।।
01002218a ಏತದಾಶ್ರಮವಾಸಾಖ್ಯಂ ಪೂರ್ವೋಕ್ತಂ ಸುಮಹಾದ್ಭುತಂ221।
01002218c ದ್ವಿಚತ್ವಾರಿಂಶದಧ್ಯಾಯಾಃ ಪರ್ವೈತದಭಿಸಂಖ್ಯಯಾ।।
01002219a ಸಹಸ್ರಮೇಕಂ ಶ್ಲೋಕಾನಾಂ ಪಂಚ ಶ್ಲೋಕಶತಾನಿ ಚ।
01002219c ಷಢೇವ ಚ ತಥಾ ಶ್ಲೋಕಾಃ ಸಂಖ್ಯಾತಾಸ್ತತ್ತ್ವದರ್ಶಿನಾ।।
ಹದಿನೈದನೆಯ ಪರ್ವ ಆಶ್ರಮವಾಸಿಕ ಪರ್ವ. ಇದರಲ್ಲಿ ನೃಪ ಧೃತರಾಷ್ಟ್ರನು ರಾಜ್ಯವನ್ನು ಪರಿತ್ಯಜಿಸಿ ಗಾಂಧಾರಿ ಮತ್ತು ವಿದುರರೊಡಗೂಡಿ ಆಶ್ರಮದೆಡೆಗೆ ತೆರಳಿದ್ದುದು, ಅದನ್ನು ನೋಡಿ ಗುರುಶುಶ್ರೂಷಣನಿರತೆ ಸಾಧ್ವಿ ಪೃಥೆಯೂ ಪುತ್ರರಾಜ್ಯವನ್ನು ಪರಿತ್ಯಜಿಸಿ ಅವರನ್ನು ಹಿಂಬಾಲಿಸಿದ್ದುದು, ಹತರಾಗಿ ಲೋಕಾಂತರಕ್ಕೆ ತೆರಳಿದ್ದ ವೀರ ಪುತ್ರ-ಪೌತ್ರರು ಮತ್ತು ಇತರ ಪಾರ್ಥಿವರು ಮರಳಿ ಬರುವ ಆಶ್ಚರ್ಯಕರ ಅನುತ್ತಮ ದೃಶ್ಯವನ್ನು ಋಷಿ ಕೃಷ್ಣನ ಪ್ರಸಾದದಿಂದ ನೋಡಿದ ರಾಜನು ಶೋಕವನ್ನು ತ್ಯಜಿಸಿ ಶ್ರೇಷ್ಠ ಸಿದ್ಧಿಯನ್ನು ಹೊಂದಿದ್ದುದು, ಧರ್ಮಸಮಾಶ್ರಿತ ವಿದುರ ಮತ್ತು ಮಹಾಮಾತ್ರ ವಿದ್ವಾನ್ ಗಾವಲ್ಗಣಿ ಸಂಜಯರು ಸುಗತಿಯನ್ನು ಹೊಂದಿದ್ದುದು, ನಾರದನನ್ನು ಧರ್ಮರಾಜ ಯುಧಿಷ್ಠಿರನು ಕಂಡಿದ್ದುದು ಮತ್ತು ನಾರದನು ವೃಷ್ಣಿಯರ ಮಹತ್ತರ ಕದನದ ಕುರಿತು ಹೇಳಿದ್ದುದು, ಇವೆಲ್ಲವನ್ನೂ ಸುಮಹಾದ್ಭುತ ಆಶ್ರಮವಾಸಾಖ್ಯದಲ್ಲಿ ಹೇಳಲಾಗಿದೆ. ಇದರಲ್ಲಿ 1,506 ಶ್ಲೋಕಗಳನ್ನು 42 ಅಧ್ಯಾಯಗಳಲ್ಲಿ ರಚಿಸಲಾಗಿದೆ222.
01002220a ಅತಃ ಪರಂ ನಿಬೋಧೇದಂ ಮೌಸಲಂ ಪರ್ವ ದಾರುಣಂ।
01002220c ಯತ್ರ ತೇ ಪುರುಷವ್ಯಾಘ್ರಾಃ ಶಸ್ತ್ರಸ್ಪರ್ಶಸಹಾ223 ಯುಧಿ।
01002220e ಬ್ರಹ್ಮದಂಡವಿನಿಷ್ಪಿಷ್ಟಾಃ ಸಮೀಪೇ ಲವಣಾಂಭಸಃ।।
01002221a ಆಪಾನೇ ಪಾನಗಲಿತಾ224 ದೈವೇನಾಭಿಪ್ರಚೋದಿತಾಃ।
01002221c ಏರಕಾರೂಪಿಭಿರ್ವಜ್ರೈರ್ನಿಜಘ್ನುರಿತರೇತರಂ।।
01002222a ಯತ್ರ ಸರ್ವಕ್ಷಯಂ ಕೃತ್ವಾ ತಾವುಭೌ ರಾಮಕೇಶವೌ।
01002222c ನಾತಿಚಕ್ರಮತುಃ ಕಾಲಂ ಪ್ರಾಪ್ತಂ ಸರ್ವಹರಂ ಸಮಂ225।।
01002223a ಯತ್ರಾರ್ಜುನೋ ದ್ವಾರವತೀಮೇತ್ಯ ವೃಷ್ಣಿವಿನಾಕೃತಾಂ।
01002223c ದೃಷ್ಟ್ವಾ ವಿಷಾದಮಗಮತ್ ಪರಾಂ ಚಾರ್ತಿಂ ನರರ್ಷಭಃ।।
01002224a ಸ ಸತ್ಕೃತ್ಯ ಯದುಶ್ರೇಷ್ಠಂ226 ಮಾತುಲಂ ಶೌರಿಮಾತ್ಮನಃ।
01002224c ದದರ್ಶ ಯದುವೀರಾಣಾಮಾಪಾನೇ ವೈಶಸಂ ಮಹತ್।।
01002225a ಶರೀರಂ ವಾಸುದೇವಸ್ಯ ರಾಮಸ್ಯ ಚ ಮಹಾತ್ಮನಃ।
01002225c ಸಂಸ್ಕಾರಂ ಲಂಭಯಾಮಾಸ ವೃಷ್ಣೀನಾಂ ಚ ಪ್ರಧಾನತಃ।।
01002226a ಸ ವೃದ್ಧಬಾಲಮಾದಾಯ ದ್ವಾರವತ್ಯಾಸ್ತತೋ ಜನಂ।
01002226c ದದರ್ಶಾಪದಿ ಕಷ್ಟಾಯಾಂ ಗಾಂಡೀವಸ್ಯ ಪರಾಭವಂ।।
01002227a ಸರ್ವೇಷಾಂ ಚೈವ ದಿವ್ಯಾನಾಮಸ್ತ್ರಾಣಾಮಪ್ರಸನ್ನತಾಂ।
01002227c ನಾಶಂ ವೃಷ್ಣಿಕಲತ್ರಾಣಾಂ ಪ್ರಭಾವಾನಾಮನಿತ್ಯತಾಂ227।।
01002228a ದೃಷ್ಟ್ವಾ ನಿರ್ವೇದಮಾಪನ್ನೋ ವ್ಯಾಸವಾಕ್ಯಪ್ರಚೋದಿತಃ।
01002228c ಧರ್ಮರಾಜಂ ಸಮಾಸಾದ್ಯ ಸನ್ಯಾಸಂ ಸಮರೋಚಯೇತ್228।।
01002229a ಇತ್ಯೇತನ್ಮೌಸಲಂ ಪರ್ವ ಷೋಡಶಂ ಪರಿಕೀರ್ತಿತಂ।
01002229c ಅಧ್ಯಾಯಾಷ್ಟೌ ಸಮಾಖ್ಯಾತಾಃ ಶ್ಲೋಕಾನಾಂ ಚ ಶತತ್ರಯಂ229।।
ಮುಂದಿನದು ದಾರುಣ ಮೌಸಲ ಪರ್ವ. ಇದರಲ್ಲಿ ದೇವಪ್ರಚೋದಿತ ಬ್ರಾಹ್ಮಣರ ಶಿಕ್ಷೆಗೊಳಗಾದ ಪುರುಷವ್ಯಾಘ್ರರು ಸಮುದ್ರತೀರದಲ್ಲಿ ಕುಡಿದು ಮದೋನ್ಮತ್ತರಾಗಿ ವಜ್ರರೂಪವನ್ನು ತಾಳಿದ ಎರಕದ ಹುಲ್ಲಿನಿಂದ ಪರಸ್ಪರರನ್ನು ಹೊಡೆದು ಕೊಂದಿದ್ದುದು, ಎಲ್ಲವೂ ನಶಿಸಿದರೂ ರಾಮ-ಕೇಶವರು ಏನನ್ನೂ ಪ್ರತಿಭಟಿಸದೇ ಇರುವುದು, ಅದೇ ಸಮಯದಲ್ಲಿ ಸರ್ವಹರ ಕಾಲನು ಬಂದಿದ್ದುದು, ದ್ವಾರವತಿಗೆ ಬಂದು ವೃಷ್ಣಿಯರ ವಿನಾಶವನ್ನು ನೋಡಿದ ನರರ್ಷಭ ಅರ್ಜುನನು ಅತೀವ ವಿಷಾದವನ್ನು ಹೊಂದಿದ್ದುದು, ಅವನು ತನ್ನ ಸೋದರಮಾವ ಯದುಶ್ರೇಷ್ಠ ಶೌರಿಯನ್ನು ಸತ್ಕರಿಸಿ, ಯದುವೀರರು ಸತ್ತು ಬಿದ್ದುದನ್ನು ನೋಡಿ, ಮಹಾತ್ಮರಾದ ವಾಸುದೇವ ಮತ್ತು ರಾಮರ ಶರೀರವನ್ನು ನೋಡಿ, ಆ ಎಲ್ಲ ವೃಷ್ಣಿ ಪ್ರಧಾನರ ಶರೀರ ಸಂಸ್ಕಾರವನ್ನು ಮಾಡಿದ್ದುದು, ಹೆಂಗಸರು ವೃದ್ಧರು ಮತ್ತು ಬಾಲಕರನ್ನು ದ್ವಾರವತಿಯಿಂದ ಕರೆದುಕೊಂಡು ಹೋಗುತ್ತಿದ್ದಾಗ ಗಾಂಡೀವದ ಪರಾಭವ, ಸರ್ವ ದಿವ್ಯಾಸ್ತ್ರಗಳ ಅಪ್ರಸನ್ನತೆ, ವೃಷ್ಣಿಸ್ತ್ರೀಯರ ಶೀಲವನ್ನು ಕಾಪಾಡುವುದರಲ್ಲಿ ಅಸಮರ್ಥತೆ ಮುಂತಾದ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದುದು, ಇವೆಲ್ಲವನ್ನೂ ನೋಡಿ ವ್ಯಾಸನ ಮಾತಿನಂತೆ ಧರ್ಮರಾಜನ ಬಳಿ ಹೋಗಿ ಸನ್ಯಾಸವನ್ನು ಸ್ವೀಕರಿಸಿದ್ದುದು ಇವೆಲ್ಲವನ್ನೂ ಹದಿನಾರನೆಯ ಈ ಮೌಸಲ ಪರ್ವದಲ್ಲಿ ವರ್ಣಿಸಲಾಗಿದೆ. ಇದರಲ್ಲಿ 8 ಅಧ್ಯಾಯಗಳು ಮತ್ತು 300 ಶ್ಲೋಕಗಳಿವೆ230.
01002230a ಮಹಾಪ್ರಸ್ಥಾನಿಕಂ ತಸ್ಮಾದೂರ್ಧ್ವಂ ಸಪ್ತದಶಂ ಸ್ಮೃತಂ।
01002230c ಯತ್ರ ರಾಜ್ಯಂ ಪರಿತ್ಯಜ್ಯ ಪಾಂಡವಾಃ ಪುರುಷರ್ಷಭಾಃ।
01002230e ದ್ರೌಪದ್ಯಾ ಸಹಿತಾ ದೇವ್ಯಾ ಸಿದ್ಧಿಂ ಪರಮಿಕಾಂ ಗತಾಃ231।।
01002231a 232ಅತ್ರಾಧ್ಯಾಯಾಸ್ತ್ರಯಃ ಪ್ರೋಕ್ತಾಃ ಶ್ಲೋಕಾನಾಂ ಚ ಶತಂ ತಥಾ233।
01002231c ವಿಂಶತಿಶ್ಚ ತಥಾ ಶ್ಲೋಕಾಃ ಸಂಖ್ಯಾತಾಸ್ತತ್ತ್ವದರ್ಶಿನಾ।।
ಹದಿನೇಳನೆಯ ಪರ್ವವು ಮಹಾಪ್ರಸ್ತಾನಿಕ ಪರ್ವವೆಂದು ಕರೆಯಲ್ಪಟ್ಟಿದೆ. ಇದರಲ್ಲಿ ರಾಜ್ಯವನ್ನು ಪರಿತ್ಯಜಿಸಿ ಪುರುಷರ್ಷಭ ಪಾಂಡವರು ದೇವಿ ದ್ರೌಪದಿಯ ಸಹಿತ ಉನ್ನತ ಸಿದ್ಧಿಯನ್ನು ಪಡೆಯಲು ಹೋಗಿದ್ದುದನ್ನು ವರ್ಣಿಸಲಾಗಿದೆ. ತತ್ವದರ್ಶಿಗಳ ಪ್ರಕಾರ ಇದರಲ್ಲಿ ಮೂರು ಅಧ್ಯಾಯಗಳು ಮತ್ತು 120 ಶ್ಲೋಕಗಳಿವೆ234.
01002232a ಸ್ವರ್ಗಪರ್ವ ತತೋ ಜ್ಞೇಯಂ ದಿವ್ಯಂ ಯತ್ತದಮಾನುಷಂ।
01002232c 235ಅಧ್ಯಾಯಾಃ ಪಂಚ ಸಂಖ್ಯಾತಾಃ ಪರ್ವೈತದಭಿಸಂಖ್ಯಯಾ।
01002232e ಶ್ಲೋಕಾನಾಂ ದ್ವೇ ಶತೇ ಚೈವ ಪ್ರಸಂಖ್ಯಾತೇ ತಪೋಧನಾಃ236।।
ನಂತರ ದಿವ್ಯ ಅಮಾನುಷ ಸ್ವರ್ಗಪರ್ವ; 200 ಶ್ಲೋಕಗಳನ್ನು ಐದು ಅಧ್ಯಾಯಗಳಲ್ಲಿ ರಚಿಸಲಾಗಿದೆ237.
01002233a ಅಷ್ಟಾದಶೈವಮೇತಾನಿ ಪರ್ವಾಣ್ಯುಕ್ತಾನ್ಯಶೇಷತಃ।
01002233c ಖಿಲೇಷು ಹರಿವಂಶಶ್ಚ ಭವಿಷ್ಯಚ್ಚ ಪ್ರಕೀರ್ತಿತಂ।।
01002234a 238ಏತದಖಿಲಮಾಖ್ಯಾತಂ ಭಾರತಂ ಪರ್ವಸಂಗ್ರಹಾತ್239।
ಇವು ಸಂಪೂರ್ಣ ಹದಿನೆಂಟು ಪರ್ವಗಳು240. ಹರಿವಂಶ ಮತ್ತು ಭವಿಷ್ಯಗಳು ಇವುಗಳ ಅನುಬಂಧಗಳೆಂದು ಪರಿಗಣಿಸಲ್ಪಟ್ಟಿವೆ. ಭಾರತದ ಪರ್ವಸಂಗ್ರಹದಲ್ಲಿ ಇವೆಲ್ಲವನ್ನೂ ಹೇಳಲಾಗಿದೆ.
01002234c ಅಷ್ಟಾದಶ ಸಮಾಜಗ್ಮುರಕ್ಷೌಹಿಣ್ಯೋ ಯುಯುತ್ಸಯಾ।
01002234e ತನ್ಮಹದ್ದಾರುಣಂ ಯುದ್ಧಮಹಾನ್ಯಷ್ಟಾದಶಾಭವತ್।।
ಈ ರೀತಿಯಲ್ಲಿ ಹದಿನೆಂಟು ದಿನಗಳು ನಡೆದ ದಾರುಣ ಯುದ್ಧದಲ್ಲಿ ಹದಿನೆಂಟು ಅಕ್ಷೌಹಿಣೀ ಸೇನೆಗಳು ಪಾಲ್ಗೊಂಡವು.
01002235a ಯೋ ವಿದ್ಯಾಚ್ಚತುರೋ ವೇದಾನ್ಸಾಂಗೋಪನಿಷದಾನ್ ದ್ವಿಜಃ।
01002235c ನ ಚಾಖ್ಯಾನಮಿದಂ ವಿದ್ಯಾನ್ನೈವ ಸಸ್ಯಾದ್ವಿಚಕ್ಷಣಃ।।
ವೇದ ವೇದಾಂಗ ಉಪನಿಷತ್ತುಗಳಲ್ಲಿ ವಿದ್ಯಾಚತುರನಾದ ದ್ವಿಜನು ಈ ಆಖ್ಯಾನವನ್ನು ತಿಳಿದಿಲ್ಲ ಎಂದರೆ ಎರಡೂ ಕಣ್ಣುಳ್ಳವನೆಂದು ಪರಿಗಣಿಸಲ್ಪಡುವುದಿಲ್ಲ.
01002236a 241ಶ್ರುತ್ವಾ ತ್ವಿದಮುಪಾಖ್ಯಾನಂ ಶ್ರಾವ್ಯಮನ್ಯನ್ನ ರೋಚತೇ।
01002236c ಪುಂಸ್ಕೋಕಿಲರುತಂ ಶ್ರುತ್ವಾ ರೂಕ್ಷಾ ಧ್ವಾಂಕ್ಷಸ್ಯ ವಾಗಿವ।।
ಕೋಗಿಲೆಯ ಕೂಗನ್ನು ಕೇಳಿದವರು ಕಾಗೆಯ ಕೂಗನ್ನು ಕೇಳಲು ಹೇಗೆ ಬಯಸುವುದಿಲ್ಲವೋ ಹಾಗೆ ಈ ಉಪಾಖ್ಯಾನವನ್ನು ಕೇಳಿದವರಿಗೆ ಬೇರೆ ಯಾವುದನ್ನು ಕೇಳುವುದಕ್ಕೂ ಆಸಕ್ತಿಯಿರುವುದಿಲ್ಲ.
01002237a ಇತಿಹಾಸೋತ್ತಮಾದಸ್ಮಾಜ್ಞಾಯಂತೇ ಕವಿಬುದ್ಧಯಃ।
01002237c ಪಂಚಭ್ಯ ಇವ ಭೂತೇಭ್ಯೋ ಲೋಕಸಂವಿಧಯಸ್ತ್ರಯಃ।।
ಪಂಚಭೂತಗಳಿಂದ ಮೂರೂ ಲೋಕಗಳು ಹೇಗೋ ಹಾಗೆ ಈ ಉತ್ತಮ ಇತಿಹಾಸದಿಂದ ಎಲ್ಲ ಕವಿಗಳ ಬುದ್ಧಿಯೂ ಪ್ರಚೋದಿತಗೊಂಡಿದೆ.
01002238a ಅಸ್ಯಾಖ್ಯಾನಸ್ಯ ವಿಷಯೇ ಪುರಾಣಂ ವರ್ತತೇ ದ್ವಿಜಾಃ।
01002238c ಅಂತರಿಕ್ಷಸ್ಯ ವಿಷಯೇ ಪ್ರಜಾ ಇವ ಚತುರ್ವಿಧಾಃ।।
ದ್ವಿಜರೇ! ಅಂತರಿಕ್ಷದಲ್ಲಿಯೇ ಹೇಗೆ ನಾಲ್ಕುವಿಧದ ಜೀವಿಗಳೂ ಇವೆಯೋ ಹಾಗೆ ಎಲ್ಲ ಪುರಾಣಗಳೂ ಈ ಆಖ್ಯಾನದ ವಿಷಯಗಳೇ ಆಗಿವೆ.
01002239a ಕ್ರಿಯಾಗುಣಾನಾಂ ಸರ್ವೇಷಾಮಿದಮಾಖ್ಯಾನಮಾಶ್ರಯಃ।
01002239c ಇಂದ್ರಿಯಾಣಾಂ ಸಮಸ್ತಾನಾಂ ಚಿತ್ರಾ ಇವ ಮನಃಕ್ರಿಯಾಃ।।
ಸಮಸ್ತ ಇಂದ್ರಿಯಗಳ ಚಿತ್ರಣಗಳನ್ನು ಮನಸ್ಸಿನ ಕ್ರಿಯೆಯ ಮೂಲಕ ಹೇಗೋ ಹಾಗೆ ಸರ್ವ ಕ್ರಿಯಾಗುಣಗಳನ್ನು ಈ ಆಖ್ಯಾನದ ಸಹಾಯದಿಂದ ತಿಳಿಯಬಹುದು.
01002240a ಅನಾಶ್ರಿತ್ಯೈತದಾಖ್ಯಾನಂ ಕಥಾ ಭುವಿ ನ ವಿದ್ಯತೇ।
01002240c ಆಹಾರಮನಪಾಶ್ರಿತ್ಯ ಶರೀರಸ್ಯೇವ ಧಾರಣಂ।।
ಆಹಾರವನ್ನು ಅವಲಂಬಿಸಿ ಹೇಗೆ ಶರೀರ ಧಾರಣ ಮಾಡುತ್ತೇವೋ ಹಾಗೆ ಭೂಮಿಯಲ್ಲಿರುವ ಎಲ್ಲ ಕಥೆಗಳೂ ಈ ಆಖ್ಯಾನವನ್ನು ಅವಲಂಬಿಸಿವೆ.
01002241a ಇದಂ ಸರ್ವೈಃ ಕವಿವರೈರಾಖ್ಯಾನಮುಪಜೀವ್ಯತೇ।
01002241c ಉದಯಪ್ರೇಪ್ಸುಭಿರ್ಭೃತ್ಯೈರಭಿಜಾತ ಇವೇಶ್ವರಃ।।
ಸೇವಕರೆಲ್ಲರೂ ಅವರ ಸ್ವಾಮಿಯನ್ನು ಹೇಗೆ ಅವಲಂಬಿಸಿರುತ್ತಾರೋ ಹಾಗೆ ಎಲ್ಲ ಕವಿಶ್ರೇಷ್ಠರೂ ಈ ಉಪಾಖ್ಯಾನವನ್ನು ಅವಲಂಬಿಸಿ ಜೀವಿಸುತ್ತಾರೆ.
01002242a 242ದ್ವೈಪಾಯನೌಷ್ಟಪುಟನಿಃಸೃತಮಪ್ರಮೇಯಂ ಪುಣ್ಯಂ ಪವಿತ್ರಮಥ ಪಾಪಹರಂ ಶಿವಂ ಚ।
01002242c ಯೋ ಭಾರತಂ ಸಮಧಿಗಚ್ಛತಿ ವಾಚ್ಯಮಾನಂ ಕಿಂ ತಸ್ಯ ಪುಷ್ಕರಜಲೈರಭಿಷೇಚನೇನ।।
ದ್ವೈಪಾಯನನ ತುಟಿಗಳಿಂದ ಹೊರಬಂದ ಈ ಭಾರತವು ಅಪ್ರಮೇಯವಾದದ್ದು, ಪುಣ್ಯವಾದದ್ದು, ಪವಿತ್ರವಾದದ್ದು ಮತ್ತು ಮಂಗಳವಾದದ್ದು. ಇದನ್ನು ಓದಿದವನಿಗೆ ಪುಷ್ಕರ ತೀರ್ಥದಲ್ಲಿ ಸ್ನಾನಮಾಡುವುದರ ಅವಶ್ಯಕತೆಯಾದರೂ ಏನಿದೆ?
01002243a 243ಆಖ್ಯಾನಂ ತದಿದಮನುತ್ತಮಂ ಮಹಾರ್ಥಂ ವಿನ್ಯಸ್ತಂ ಮಹದಿಹ ಪರ್ವಸಂಗ್ರಹೇಣ।
01002243c ಶ್ರುತ್ವಾದೌ ಭವತಿ ನೃಣಾಂ ಸುಖಾವಗಾಹಂ ವಿಸ್ತೀರ್ಣಂ ಲವಣಜಲಂ ಯಥಾ ಪ್ಲವೇನ।।
ಹಡಗಿನಿಂದ ವಿಸ್ತೀರ್ಣ ಸಮುದ್ರವನ್ನು ಹೇಗೆ ತಿಳಿದುಕೊಳ್ಳಬಹುದೋ ಹಾಗೆ ಮಹಾರ್ಥಗಳನ್ನುಳ್ಳ ಅನುತ್ತಮ ಈ ಆಖ್ಯಾನವನ್ನು ಪರ್ವಸಂಗ್ರಹದ ಸಹಾಯದಿಂದ ತಿಳಿದುಕೊಳ್ಳಬಹುದು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪರ್ವಸಂಗ್ರಹಪರ್ವಣಿ ದ್ವಿತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪರ್ವಸಂಗ್ರಹಪರ್ವದಲ್ಲಿ ಎರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪರ್ವಸಂಗ್ರಹಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪರ್ವಸಂಗ್ರಹಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೨/೧೦೦, ಅಧ್ಯಾಯಗಳು-೨, ಶ್ಲೋಕಗಳು-೪೫೩244.
2
-
ಶೃಣುಧ್ವಂ ಮಮ ಭೋ ↩︎
-
ಸಮಂತಪಂಚಕ ತೀರ್ಥಮಹಾತ್ಮೆಯು ವನಪರ್ವದ 81ನೇ ಅಧ್ಯಾಯದ (ತೀರ್ಥಯಾತ್ರಾಪರ್ವ) ಶ್ಲೋಕಸಂಖ್ಯೆ 22-33 ರಲ್ಲಿ ಬರುತ್ತದೆ. ↩︎
-
ಅಥರ್ಚೀಕಾದಯೋಽಭ್ಯೇತ್ಯ ಪಿತರೋ ರಾಮಮಬ್ರುವನ್। ರಾಮ ರಾಮ ಮಹಾಭಾಗ ಪ್ರೀತಾಃ ಸ್ಮ ತವ ಭಾರ್ಗವ।। ಅನಯಾ ಪಿತೃಭಕ್ತ್ಯಾ ಚ ವಿಕ್ರಮೇಣ ತವ ಪ್ರಭೋ। ವರಂ ವೃಣೀಷ್ವ ಭದ್ರಂ ತೇ ಯಮಿಚ್ಛಸಿ ಮಹಾದ್ಯುತೇ।। ರಾಮ ಉವಾಚ । ಯದಿ ಮೇ ಪಿತರಃ ಪ್ರೀತಾ ಯದ್ಯನುಗ್ರಾಹ್ಯತಾ ಮಯಿ। ಅತಶ್ಚ ಪಾಪನ್ಮುಚ್ಯೇಽಹಮೇಷ ಮೇ ಪ್ರಾರ್ಥಿತೋ ವರಃ। ಹ್ರದಾಶ್ಚ ತೀರ್ಥಭೂತಾ ಮೇ ಭವೇಯುರ್ಭುವಿ ವಿಶ್ರುತಾಃ।। ಏವಂ ಭವಿಷ್ಯತೀತ್ಯೇವಂ ಪಿತರಸ್ತಮಥಾಬ್ರುವನ್। ಅರ್ಥಾತ್: ಅನಂತರ ಋಚೀಕ ಮೊದಲಾದ ಪಿತೃಗಳು ರಾಮನಿಗೆ ಹೇಳಿದರು: “ರಾಮ! ರಾಮ! ಮಹಾಭಾಗ! ನಿನ್ನಿಂದ ನಾವು ಪ್ರೀತರಾಗಿದ್ದೇವೆ. ನಿನಗೆ ಮಂಗಳವಾಗಲಿ! ಮಹಾದ್ಯುತೇ! ನಿನಗಿಷ್ಟವಾದ ವರವನ್ನು ಕೇಳಿಕೋ!” ರಾಮನು ಉತ್ತರಿಸಿದನು: “ಪಿತೃಗಳು ನನ್ನ ಮೇಲೆ ಪ್ರೀತಿಯಿಂದ ಅನುಗ್ರಹಿಸುವುದಾದರೆ ನನ್ನನ್ನು ಈ ಪಾಪದಿಂದ ಮುಕ್ತಗೊಳಿಸಿ ಎನ್ನುವ ವರವನ್ನೇ ಪ್ರಾರ್ಥಿಸುತ್ತೇನೆ. ನನ್ನಿಂದ ರಚಿಸಲ್ಪಟ್ಟ ಈ ತೀರ್ಥಗಳು ಭುವಿಯಲ್ಲಿ ವಿಶ್ರುತವಾಗಲಿ!” ಹಾಗೆಯೇ ಆಗುತ್ತದೆಯೆಂದು ಪಿತೃಗಳು ಅವನಿಗೆ ಹೇಳಿದರು. ↩︎
-
ರಾಮಮಬ್ರುವನ್ । ↩︎
-
ಋಚೀಕನ ಮಗ ಜಮದಗ್ನಿ. ಜಮದಗ್ನಿಯ ಮಗ ಪರಶುರಾಮ. ↩︎
-
ತ್ರೇತ-ದ್ವಾಪರಗಳ ಸಂಧ್ಯದಲ್ಲಾದ ಕ್ಷತ್ರಿಯರ ವಿನಾಶವು ಯಾವ ಸ್ಥಳದಲ್ಲಿ ಕೊನೆಗೊಂಡಿತೋ ಅದೇ ಸ್ಥಳದಲ್ಲಿ ದ್ವಾಪರ-ಕಲಿಗಳ ಸಂಧ್ಯದಲ್ಲಿಯೂ ಕ್ಷತ್ರಿಯರ ವಿನಾಶವು ನಡೆಯಿತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ↩︎
-
ಹೆಚ್ಚು ಏರು-ತಗ್ಗಾಗಿರುವುದು, ಮುಳ್ಳು ಗಿಡ-ಮರಗಳಿರುವುದು, ಮತ್ತು ಹಚ್ಚು ಕಲ್ಲು-ಬಂಡೆಗಳಿರುವುದು – ಇವನ್ನು ಭೋಮಿಸಂಬಂಧ ದೋಷಗಳೆಂದು ಹೇಳುತ್ತಾರೆ. ↩︎
-
ಸಮೇತ್ಯ ತಂ ದ್ವಿಜಾಸ್ತಾಶ್ಚ ತತ್ರೈವ ನಿಧನಂ ಗತಾಃ। ಅರ್ಥಾತ್: ಅಲ್ಲಿ ಕ್ಷತ್ರಿಯರು ಒಂದುಗೂಡಿ ಅಲ್ಲಿಯೇ ನಿಧನ ಹೊಂದಿದರು. ↩︎
-
ಬ್ರಾಹ್ಮಣಸತ್ತಮಾಃ । ↩︎
-
ಸುವ್ರತಾಃ । ↩︎
-
ಅಕ್ಷೌಹಿಣಿಯ ಲೆಖ್ಕಾಚಾರವು ಕಾಲದ ಅಳತೆಯಂತೆ ಅತ್ಯಂತ ಸಣ್ಣ ಘಟಕವನ್ನು ಆಧಾರವನ್ನಾಟ್ಟುಕೊಂಡು ಅತಿ ದೊಡ್ಡ ಪ್ರಮಾಣವನ್ನು ಅಳತೆ ಮಾಡುತ್ತದೆ. ↩︎
-
ಪರೀಮಾಣಮೇತದೇವ ವಿನಿರ್ದಿಶೇತ್। ↩︎
-
ಸಹಸ್ರಾಣಿ ನವೈವ ತು। ↩︎
-
ತಪೋಧನಾಃ । ↩︎
-
ಪಿಂಡಿತಾಷ್ಟದಶೈವ ತು। ↩︎
-
ಇದರ ಪ್ರಕಾರ ಮಹಾಭಾರತ ಯುದ್ಧದಲ್ಲಿ ಒಟ್ಟು ಮೂರುಲಕ್ಷ ತೊಂಭತ್ತಮೂರು ಸಾವಿರದ ಆರುನೂರಾ ಎಪ್ಪತ್ತೆಂಟು (3,93,678) ರಥಗಳು, ಇಷ್ಟೇ ಸಂಖ್ಯೆಯ ಆನೆಗಳು, ಹತ್ತೊಂಭತ್ತು ಲಕ್ಷ ಅರವತ್ತೆಂಟು ಸಾವಿರದ ಮುನ್ನೂರು (19,68,300) ಕಾಲ್ದಾಳುಗಳು ಮತ್ತು ಹನ್ನೊಂದುಲಕ್ಷ ಎಂಭತ್ತು ಸಾವಿರದ ಒಂಬೈನೂರಾ ಎಂಭತ್ತು (11,80,980) ಕುದುರೆಗಳು ಭಾಗವಹಿಸಿದ್ದವು. ↩︎
-
ಸಮಂತಪಂಚಕದಲ್ಲಿ . ↩︎
-
ದ್ರೌಣಿಹಾರ್ದಿಕ್ಯಗೌತಮಾಃ । ↩︎
-
ಜನಮೇಜಯಸ್ಯ ತತ್ಸತ್ರೇ ವ್ಯಾಸಶಿಷ್ಯೇಣ ಧೀಮತಾ। ಕಥಿತಂ ವಿಸ್ತರಾರ್ಥಂ ಚ ಯಶೋ ವೀರ್ಯಂ ಮಹೀಕ್ಷಿತಾಂ। ಪೌಷ್ಯಂ ತತ್ರ ಚ ಪೌಲೋಮಮಾಸ್ತೀಕಂ ಚಾದಿತಃ ಸ್ಮೃತಂ।। ಅರ್ಥಾತ್: ಜನಮೇಜಯನ ಆ ಸತ್ರದಲ್ಲಿ ಧೀಮತ ವ್ಯಾಸಶಿಷ್ಯನು ಮಹೀಕ್ಷಿತರ ವೀರ್ಯ ಮತ್ತು ಯಶಸ್ಸನ್ನು ವಿಸ್ತರಿಸಲೋಸುಗ ಪ್ರಾರಂಭದಲ್ಲಿ ಪೌಷ್ಯ, ಪೌಲೋಮ ಮತ್ತು ಆಸ್ತೀಕ ಪರ್ವಗಳನ್ನು ವರ್ಣಿಸಿದನು. ↩︎
-
ಭಾರತಾಖ್ಯಾನಮುತ್ತಮಮ್ । ↩︎
-
ಪ್ರತಿಪನ್ನಂ । ↩︎
-
ಮಹಾಭಾರತದಲ್ಲಿ ವಿವರಿಸಲಾದ ವೃತ್ತಾಂತಗಳು ಬೇರೆ ಬೇರೆ ಯುಗಗಳು, ಮನ್ವಂತರಗಳು ಮತ್ತು ಕಲ್ಪಗಳನ್ನು ಆವರಿಸಿವೆ. ↩︎
-
ಅನಾಶ್ರಿತ್ಯೇದಮಾಖ್ಯಾನಂ ಕಥಾ ಭುವಿ ನ ವಿದ್ಯತೇ। ಆಹಾರಮನಪಾಶ್ರಿತ್ಯ ಶರೀರಸ್ಯೇವ ಧಾರಣಂ।। ತದೇತದ್ಭಾರತಂ ನಾಮ ಕವಿಭಿಸ್ತೂಪಜೀವ್ಯತೇ। ಉದಯಪ್ರೇಪ್ಸುಭಿರ್ಭೃತೈರಭಿಜಾತ ಇವೇಶ್ವರಃ।। ಅರ್ಥಾತ್: ಆಹಾರವನ್ನು ಸ್ವೀಕರಿಸದೇ ಶರೀರಧಾರಣೆಯು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮಹಾಭಾರತವನ್ನು ಆಶ್ರಯಿಸದಿರುವ ಯಾವುದೊಂದು ಆಖ್ಯಾನವೂ ಈ ಪ್ರಪ್ರಂಚದಲ್ಲಿಲ್ಲ. ಔನ್ನತ್ಯವನ್ನಪೇಕ್ಷಿಸುವ ಸೇವಕರು ತಮ್ಮ ಸ್ವಾಮಿಯನ್ನು ನಿರಂತರವಾಗಿ ಆಶ್ರಯಿಸುವಂತೆ ಕೀರ್ತಿಕಾಮ ಕವಿಗಳು ಭಾರತವನ್ನಾಶ್ರಯಿಸಿ ಕಾವ್ಯ-ನಾಟಕಗಳನ್ನು ರಚಿಸಿ ಕೀರ್ತಿವಂತರಾಗುತ್ತಾರೆ. ↩︎
-
ತಸ್ಯ । ↩︎
-
ಸೂಕ್ಷ್ಮಾರ್ಥನ್ಯಾಯಯುಕ್ತಸ್ಯ ವೇದಾರ್ಥೈರ್ಭೂಷಿತಸ್ಯ ಚ। ಅರ್ಥಾತ್: ಸೂಕ್ಷ್ಮಾರ್ಥನ್ಯಾಯಗಳನ್ನೊಳಗೊಂಡ ಮತ್ತು ವೇದಾರ್ಥಗಳಿಂದ ಭೂಷಿತವಾದ ↩︎
-
ಪೌಷ್ಯಂಪೌಲೋಮಮಾಸ್ತೀಕಮಾದಿರಂಶಾವತಾರಣಂ । ↩︎
-
ರೋಮಹರ್ಷಣಮ್ । ↩︎
-
ಜ್ಞೇಯಾ । ↩︎
-
ದಿಗ್ವಿಜಯಂ ತಥಾ। ↩︎
-
ಅರ್ಜುನಸ್ಯಾಭಿಗಮನಂ ಪರ್ವ ಜ್ಞೇಯಮತಃ ಪರಂ। ಅರ್ಥಾತ್: ನಂತರದ್ದು ಅರ್ಜುನಾಭಿಗಮನ ಪರ್ವ ಎಂದು ತಿಳಿಯಬೇಕು. ↩︎
-
ನಲೋಪಾಖ್ಯಾನಮಪಿ ಚ ಧಾರ್ಮಿಕಂ ಕರುಣೋದಯಂ। ಅರ್ಥಾತ್: ಧಾರ್ಮಿಕವೂ ಕರುಣೋದಯವೂ ಆದ ನಲೋಪಾಖ್ಯಾನ ಪರ್ವ. ↩︎
-
ಯುಧಿಷ್ಠಿರ . ↩︎
-
ನಿವಾತಕವಚೈರ್ಯುದ್ಧಂ ಪರ್ವ ಚಾಜಗರಂ ತತಃ। ↩︎
-
ಪರ್ವಾನಂತರಮುಚ್ಯತೇ । ↩︎
-
ಮೃಗಸ್ವಪ್ನೋದ್ಭವ । ↩︎
-
ವ್ರೀಹಿದ್ರೌಣಿಕಮಾಖ್ಯಾನಮೈಂದ್ರದ್ಯುಮ್ನಂ ತಥೈವ ಚ। ↩︎
-
ಜಯದ್ರಥವಿಮೋಕ್ಷಣಮ್ । ↩︎
-
ಪತಿವ್ರತಾಯಾ ಮಾಹಾತ್ಮ್ಯಂ ಸಾವಿತ್ರ್ಯಾಶ್ಚೈವಮದ್ಭುತಂ। ರಾಮೋಪಾಖ್ಯಾನಮತ್ರೈವ ಪರ್ವ ಶ್ರೇಯಮತಃ ಪರಂ।। ಅರ್ಥಾತ್: ಸಾವಿತ್ರಿಯ ಅದ್ಭುತ ಕಥೆಯನ್ನುಳ್ಳ ಪತಿವ್ರತಾಮಾಹಾತ್ಮ್ಯ ಪರ್ವ ಮತ್ತು ನಂತರದ್ದು ಶ್ರೇಯಸ್ಕರವಾದ ರಾಮೋಪಾಖ್ಯಾನ ಪರ್ವ. ↩︎
-
ಪಾಂಡವಾನಾಂ ಪ್ರವೇಶಶ್ಚ ಸಮಯಸ್ಯ ಚ ಪಾಲನಂ। ಅರ್ಥಾತ್: ಪಾಂಡವ ಪ್ರವೇಶ ಪರ್ವ ಮತ್ತು ಸಮಯಪಾಲನ ಪರ್ವ. ↩︎
-
ವಿರಾಟನ ಮಗಳು, ಉತ್ತರೆ. ↩︎
-
ತಥಾ । ↩︎
-
ಮಾತಲೀಯಮುಪಾಖ್ಯಾನಂ ಚರಿತಂ ಗಾಲವಸ್ಯ ಚ। ಸಾವಿತ್ರಂ ವಾಮದೇವ್ಯಂ ಚ ವೈನ್ಯೋಪಾಖ್ಯಾನಮೇವ ಚ। ಜಾಮದಗ್ನ್ಯಮುಪಾಖ್ಯಾನಂ ಪರ್ವ ಷೋಡಶರಾಜಿಕಂ। ಸಭಾಪ್ರವೇಶಃ ಕೃಷ್ಣಸ್ಯ ವಿದುಲಾಪುತ್ರಶಾಸನಂ। ಉದ್ಯೋಗಃ ಸೈನ್ಯನಿರ್ಯಾಣಂ ವಿಶ್ವೋಪಾಖ್ಯಾನವೇವ ಚ। ಅರ್ಥಾತ್: ಮಾತಲಿಯ ಉಪಾಖ್ಯಾನ, ಗಾಲವ ಚರಿತೆ, ಸಾವಿತ್ರ, ವಾಮದೇವ ಮತ್ತು ವೈನ್ಯೋಪಾಖ್ಯಾನಗಳು, ಹದಿನಾರು ರಾಜರ ಕಥೆಯುಳ್ಳ ಜಾಮದಗ್ನ್ಯುಪಾಖ್ಯಾನ ಪರ್ವ, ಕೃಷ್ಣನ ಸಭಾಪ್ರವೇಶ, ವಿದುಲೆಯು ಪುತ್ರನಿಗೆ ನೀಡಿದ ಉಪದೇಶ, ಸೈನ್ಯನಿರ್ಯಾಣೋದ್ಯೋಗ, ಮತ್ತು ವಿಶ್ವೋಪಾಖ್ಯಾನ. ↩︎
-
ನಿರ್ವಾಣಂ ಚ ತತಃ ಪರ್ವ ↩︎
-
ತತಶ್ಚಾದ್ಭುತಮುಚ್ಯತೇ । ↩︎
-
ತತಃ ಪ್ರೋಕ್ತಂ ↩︎
-
ದ್ರೋಣಾಭಿಷೇಚನಂ ಪರ್ವ ಸಂಶಪ್ತಕವಧಸ್ತತಃ। ↩︎
-
ತೀರ್ಥವಂಶಾನುಕೀರ್ತನಮ್ । ↩︎
-
ಸುಬೀಭತ್ಸಂ । ↩︎
-
ಚೋದ್ದಿಷ್ಟಮತ । ↩︎
-
ಸ್ತ್ರೀವಿಲಾಪಸ್ತತಃ ಪರಂ। ↩︎
-
ರಾಜಧರ್ಮಾನುಶಾಸನಮ್ । ↩︎
-
ಶುಕಪ್ರಶ್ನಾಭಿಗಮನಂ ಬ್ರಹ್ಮಪ್ರಶ್ನಾನುಶಾಸನಂ। ಪ್ರಾದುರ್ಭಾವಶ್ಚ ದುರ್ವಾಸಃ ಸಂವಾದಶ್ಚೈವ ಮಾಯಯಾ।। ಅರ್ಥಾತ್: ಶುಕಪ್ರಶ್ನಾಭಿಗಮನ ಪರ್ವ, ಬ್ರಹ್ಮಪ್ರಶ್ನಾನುಶಾಸನ ಪರ್ವ, ದುರ್ವಾಸ ಪ್ರಾದುರ್ಭಾವ ಮತ್ತು ಮಾಯಾ ಸಂವಾದ ಪರ್ವಗಳಿವೆ. ↩︎
-
ಮೌಸಲಂ ಪರ್ವ ಚೋದ್ದಿಷ್ಟಂ ತತೋ ಘೋರಂ ಸುದಾರುಣಮ್। ↩︎
-
ವಿಷ್ಣುಪರ್ವಂ ಶಿಶೋಶ್ಚರ್ಯಾಂ ವಿಷ್ಣೋಃ ಕಂಸವಧಸ್ತಥಾ। ಅರ್ಥಾತ್: ನಂತರ ವಿಷ್ಣುವಿನ ಶಿಶುಚರ್ಯಗಳನ್ನೂ ಕಂಸವಧೆಯನ್ನೂ ವರ್ಣಿಸುವ ವಿಷ್ಣುಪರ್ವವಿದೆ. ↩︎
-
ಭವಿಷ್ಯಪರ್ವ । ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಈ ಅಧ್ಯಾಯದಲ್ಲಿ ವಿಷ್ಣುಪರ್ವವನ್ನು ಸೇರಿಸದೇ ಇದ್ದರೂ ಅದರ ಮಹಾಭಾರತ ಖಿಲಭಾಗ ಹರಿವಂಶದಲ್ಲಿ ಹರಿವಂಶ ಪರ್ವ, ವಿಷ್ಣು ಪರ್ವ ಮತ್ತು ಭವಿಷ್ಯ ಪರ್ವ ಈ ಮೂರೂ ಪರ್ವಗಳು ಸೇರಿವೆ. ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಗೂ ಗೀತಾ ಪ್ರೆಸ್ (ನೀಲಕಂಠೀಯ) ಸಂಪುಟಕ್ಕೂ ವ್ಯಾಸನು ರಚಿಸಿದ ಮಹಾಭಾರತದ ಪರ್ವಗಳ ಪಟ್ಟಿಯಲ್ಲಿ ವ್ಯತ್ಯಾಸಗಳಿವೆ. ಕರ್ಣ ಮತ್ತು ಶಲ್ಯ ಪರ್ವಗಳು ಹಾಗೂ ಹರಿವಂಶ ಮತ್ತು ಭವಿಷ್ಯಪರ್ವಗಳನ್ನು ನೀಲಕಂಠೀಯ ಸಂಪುಟವು 100 ಪರ್ವಗಳಲ್ಲಿ ಸೇರಿಸಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ನೀಲಕಂಠೀಯದಲ್ಲಿ ಈ 100 ಪರ್ವಗಳ ಹೆಸರುಗಳು ಈ ಕೆಳಗಿನಂತಿವೆ. (1) ಅನುಕ್ರಮಣಿಕಾ (2) ಪರ್ವಸಂಗ್ರಹ (3) ಪೌಷ್ಯ (4) ಪೌಲೋಮ (5) ಆಸ್ತೀಕ (6) ಆದಿ-ವಂಶಾವತರಣ (7) ಸಂಭವ (8) ಜತುಗೃಹದಾಹ (9) ಹಿಂಡಿಂಬವಧ (10) ಬಕವಧ (11) ಚೈತ್ರರಥ (12) ಸ್ವಯಂವರ (13) ವೈವಾಹಿಕ (14) ವಿದುರಾಗಮನ (15) ರಾಜ್ಯಲಂಭ (16) ಅರ್ಜುನವನವಾಸ (17) ಸುಭದ್ರಾಹರಣ (18) ಹರಣಾಹರಣ (19) ಖಾಂಡವದಾಹ (20) ಮಯದರ್ಶನ (21) ಮಂತ್ರ ಅಥವಾ ಸಭಾಕ್ರಿಯಾ (22) ಲೋಕಪಾಲಸಭಾಖ್ಯಾನ (23) ರಾಜಸೂಯಾರಂಭ (24) ಜರಾಸಂಧವಧ (25) ದಿಗ್ವಿಜಯ (26) ರಾಜಸೂಯ (27) ಅರ್ಘ್ಯಾಭಿಹರಣ (28) ಶಿಶುಪಾಲವಧ (29) ದ್ಯೂತ (30) ಅನುದ್ಯೂತ (31) ಆರಣ್ಯ (32) ಕಿರ್ಮೀರವಧ (33) ಅರ್ಜುನಾಭಿಗಮನ (34) ಕೈರಾತ (35) ಇಂದ್ರಲೋಕಾಭಿಗಮನ (36) ನಲೋಪಾಖ್ಯಾನ (37) ತೀರ್ಥಯಾತ್ರಾ (38) ಜಟಾಸುರವಧ (39) ಯಕ್ಷಯುದ್ಧ (40) ನಿವಾತಕವಚಯುದ್ಧ (41) ಅಜಗರ (42) ಮಾರ್ಕಂಡೇಯಸಮಸ್ಯಾ (43) ದ್ರೌಪದೀ-ಸತ್ಯಭಾಮಾಸಂವಾದ (44) ಘೋಷಯಾತ್ರಾ (45) ಮೃಗಸ್ವಪ್ನೋದ್ಭವ (46) ವ್ರೀಹಿದ್ರೌಣಿಕ (47) ದ್ರೌಪದೀಹರಣ (48) ಜಯದ್ರಥವಿಮೋಕ್ಷಣ (49) ರಾಮೋಪಾಖ್ಯಾನ (50) ಪತಿವ್ರತಾಮಹಾತ್ಮ್ಯ (51) ಕುಂಡಲಾಹರಣ (52) ಅರಣೇಯ (53) ಪಾಂಡವಪ್ರವೇಶ (54) ಸಮಯಪಾಲನ (55) ಕೀಚಕವಧ (56) ಗೋಹರಣ (57) ವೈವಾಹಿಕ (58) ಸೇನೋದ್ಯೋಗ (59) ಸಂಜಯಯಾನ (60) ಪ್ರಜಾಗರ (61) ಸನತ್ಸುಜಾತ (62) ಯಾನಸಂಧಿ (63) ಭಗವದ್ಯಾನ (64) ಸೇನಾನಿರ್ಯಾಣ (65) ಉಲೂಕದೂತಾಗಮನ (66) ರಥಾತಿರಥಸಂಖ್ಯಾನ (67) ಅಂಬೋಪಾಖ್ಯಾನ (68) ಜಂಬೂಖಂಡವಿನಿರ್ಮಾಣ (69) ಭೂಮಿ (70) ಭಗವದ್ಗೀತಾ (71) ಭೀಷ್ಮವಧ (72) ದ್ರೋಣಾಭಿಷೇಚನ (73) ಸಂಶಪ್ತಕವಧ (74) ಅಭಿಮನ್ಯುವಧ (75) ಪ್ರತಿಜ್ಞಾ (76) ಜಯದ್ರಥವಧ (77) ಘಟೋತ್ಕಚವಧ (78) ದ್ರೋಣವಧ (79) ನಾರಾಯಣಾಸ್ತ್ರಮೋಚನ (80) ಹ್ರದಪ್ರವೇಶ (81) ಗದಾಯುದ್ಧ (82) ಸೌಪ್ತಿಕ (83) ಐಷೀಕ (84) ಜಲಪ್ರದಾನಿಕ (85) ಸ್ತ್ರೀವಿಲಾಪ (86) ಶ್ರಾದ್ಧ (87) ರಾಜಧರ್ಮಾನುಷಾಸನ (88) ಆಪದ್ಧರ್ಮ (89) ಮೋಕ್ಷಧರ್ಮ (90) ದಾನಧರ್ಮ (91) ಭೀಷ್ಮಸ್ವರ್ಗಾರೋಹಣ (92) ಅಶ್ವಮೇಧ (93) ಅನುಗೀತಾ (94) ವೈಷ್ಣವಧರ್ಮ (95) ಆಶ್ರಮವಾಸ (96) ಪುತ್ರದರ್ಶನ (97) ನಾರದಾಗಮನ (98) ಮೌಸಲ (99) ಮಹಾಪ್ರಸ್ಥಾನಿಕ (100) ಸ್ವರ್ಗಾರೋಹಣ. ↩︎
-
ಉಕ್ತಾನಿ । ↩︎
-
ಪೌಷ್ಯಂ ಪೌಲೋಮಮಾಸ್ತೀಕಮಾದಿರಂಶಾವತಾರಣಂ।। ಸಂಭವೋ ಜತುವೇಶ್ಮಾಖ್ಯಂ ಹಿಡಿಂಬಬಕಯೋರ್ವಧಃ। ತಥಾ ಚೈತ್ರರಥಂ ದೇವ್ಯಾಃ ಪಾಂಚಾಲ್ಯಾಶ್ಚ ಸ್ವಯವರಂ।। ಕ್ಷಾತ್ರಧರ್ಮೇಣ ನಿರ್ಜಿತ್ಯ ತತೋ ವೈವಾಹಿಕಂ ಸ್ಮೃತಂ। ವಿದುರಾಗಮನಂ ಚೈವ ರಾಜ್ಯಲಂಭಸ್ತಥೈವ ಚ।। ವನವಾಸೋಽರ್ಜುನಸ್ಯಾಪಿ ಸುಭದ್ರಾಹರಣಂ ತತಃ। ಹರಣಾಹರಣಂ ಚೈವ ದಹನಂ ಖಾಂಡವಸ್ಯ ಚ। ಮಯಸ್ಯ ದರ್ಶನಂ ಚೈವ ಆದಿಪರ್ವಣಿ ಕಥ್ಯತೇ।। ಅರ್ಥಾತ್: ಪೌಷ್ಯ, ಪೌಲೋಮ, ಆಸ್ತಿಕ, ಆದಿವಂಶಾವತರಣ, ಸಂಭವ, ಲಾಕ್ಷಾಗೃಹ, ಹಿಡಿಂಬವಧ, ಬಕವಧ, ಚೈತ್ರರಥ, ದೌಪದೀ ಸ್ವಯಂವರ, ಕ್ಷಾತ್ರಧರ್ಮಾನುಸಾರವಾಗಿ ಕ್ಷತ್ರಿಯರೆಲ್ಲರನ್ನೂ ಜಯಿಸಿ ಪಾಂಡವರು ದ್ರೌಪದಿಯನ್ನು ವಿವಾಹಮಾಡಿಕೊಂಡಿದುದು, ವಿದುರಾಗಮನ, ರಾಜ್ಯಲಂಭ, ಅರ್ಜುನನ ವನವಾಸ, ಸುಭದ್ರಾಹರಣ, ಹರಣಾಹರಣ, ಖಾಂಡವದಾಹ, ಮಯದರ್ಶನ – ಇವುಗಳು ಆದಿಪರ್ವದಲ್ಲಿ ಉಕ್ತವಾಗಿರುವ ಕಥಾಪ್ರಸಂಗಗಳು. ↩︎
-
ಮಹರ್ಷೇರಾಶ್ರಮಪದಂ ಕಣ್ವಸ್ಯ ಚ ತಪಸ್ವಿನಃ। ಶಕುಂತಲಾಯಾಂ ದುಷ್ಯಂತಾದ್ ಭರತಶ್ಚಾಪಿ ಜಜ್ಞಿವಾನ್। ಯಸ್ಯ ಲೋಕೇಷು ನಾಮ್ನೇದಂ ಪ್ರಥಿತಂ ಭಾರತಂ ಕುಲಂ।। ಅರ್ಥಾತ್: ಕಣ್ವರ ಆಶ್ರಮದಲ್ಲಿ ಶಕುಂತಲೆಯು ಬೆಳೆದುದು, ಶಕುಂತಲಾ-ದುಷ್ಯಂತರ ಸಮಾಗಮ, ಭರತನ ಜನ್ಮ. ↩︎
-
ಸಂಪಾತೋ । ↩︎
-
ತಸ್ಯ । ↩︎
-
ಕೂಟಸ್ಯ ಧಾರ್ತರಾಷ್ಟ್ರೇಣ ಪ್ರೇಷಣಂ ಪಾಂಡವಾನ್ ಪ್ರತಿ। ಹಿತೋಪದೇಶಶ್ಚ ಪಥಿ ಧರ್ಮರಾಜಸ್ಯ ಧೀಮತಃ। ವಿದುರೇಣ ಕೃತೋ ಯತ್ರ ಹಿತಾರ್ಥಂ ಮ್ಲೇಚ್ಛಭಾಷಯಾ।। ಅರ್ಥಾತ್: ಪಾಂಡವರ ವಾರಣಾವತ ಯಾತ್ರಾ ವಿಷಯದಲ್ಲಿ ದುರ್ಯೋಧನನು ಧೃತರಾಷ್ಟ್ರನೊಡನೆ ಮಾಡಿದ ಕುಟಿಲೋಪಾಯ, ದಾರಿಯಲ್ಲಿ ವಿದುರನು ಧರ್ಮರಾಜನ ಹಿತಾರ್ಥಕ್ಕಾಗಿ ಮ್ಲೇಚ್ಛಭಾಷೆಯಲ್ಲಿ ನೀಡಿದ ಹಿತೋಪದೇಶ ↩︎
-
ನಿಷಾಧ್ಯಾಃ ಪಂಚಪುತ್ರಾಯಾಃ ಸುಪ್ತಾಯಾ ಜತುವೇಶ್ಮನಿ। ಪುರೋಚನಸ್ಯ ಚಾತ್ರೈವ ದಹನಂ ಸಂಪ್ರಕೀರ್ತಿತಂ।। ಅರ್ಥಾತ್: ಜತುಗೃಹದಲ್ಲಿ ಮಲಗಿದ್ದ ನಿಷಾದಿ, ಅವಳ ಐವರು ಪುತ್ರರು ಮತ್ತು ಅಲ್ಲಿಯೇ ಪುರೋಚನನ ದಹನ ↩︎
-
ತತ್ರೈವ ಚ ಹಿಡಿಂಬಶ್ಚ ವಧೋ ಭೀಮಾನ್ಮಹಾಬಲಾತ್। ಅರ್ಥಾತ್: ಅಲ್ಲಿಯೇ ಮಹಾಬಲಿ ಭೀಮನಿಂದ ಹಿಡಿಂಬನ ವಧೆ ↩︎
-
ಮಹರ್ಷೇರ್ದರ್ಶನಂ ಚೈವ ವ್ಯಾಸಸ್ಯಾಮಿತತೇಜಸಃ। ಅರ್ಥಾತ್: ಅಮಿತತೇಜಸ್ವೀ ಮಹರ್ಷಿ ವ್ಯಾಸನ ದರ್ಶನ ↩︎
-
ಸಂಭವಶ್ಚೈವ ಕೃಷ್ಣಾಯಾಂ ಧೃಷ್ಟದ್ಯುಮ್ನಸ್ಯ ಚೈವ ಹ। ಬ್ರಾಹ್ಮಣಾತ್ ಸಮುಪಶೃತ್ಯ ವ್ಯಾಸವಾಕ್ಯಪ್ರಚೋದಿತಾಃ।। ದೌಪದೀಂ ಪ್ರಾರ್ಯಯಂತಸ್ತೇ ಸ್ವಯಂವರದಿಧೃಕ್ಷಯಾ। ಪಾಂಚಾನಾನಭಿತೋ ಜಗ್ಮುರ್ಯತ್ರ ಕೌತೂಹಲಾನ್ವಿತಾಃ।। ಅರ್ಥಾತ್: ಬ್ರಾಹ್ಮಣನೋರ್ವನಿಂದ ಕೃಷ್ಣೆ ಮತ್ತು ಧೃಷ್ಟದ್ಯುಮ್ನರ ಜನ್ಮವೃತ್ತಾಂತ, ವ್ಯಾಸನ ಮಾತಿನಿಂದ ಪ್ರಚೋದಿತರಾಗಿ ಕುತೂಹಲದಿಂದ ಪಾಂಡವರು ದ್ರೌಪದೀ ಸ್ವಯಂವಕ್ಕೆ ಹೊರಟಿದುದು ↩︎
-
ಸಖ್ಯಂ ಕೃತ್ವಾ ತತಸ್ತೇನ ತಸ್ಮಾದೇವ ಚ ಶುಶೃವೇ। ಅರ್ಥಾತ್: ಅನಂತರ ಅವನೊಂದಿಗೆ ಸಖ್ಯಮಾಡಿಕೊಂಡಿದುದನ್ನು ಅಲ್ಲಿಯೇ ಹೇಳಲಾಗಿದೆ. ↩︎
-
ಪಾಂಚಾಲನಗರೇ ಚಾಪಿ ಲಕ್ಷ್ಯಂ ಭಿತ್ವಾ ಧನಂಜಯಃ। ದ್ರೌಪದೀಂ ಲಬ್ಧವಾನತ್ರ ಮಧ್ಯೇ ಸರ್ವಮಹೀಕ್ಷಿತಾಂ।। ಭೀಮಸೇನಾರ್ಜುನೌ ಯತ್ರ ಸಂರಬ್ಧಾನ್ ಪೃಥಿವೀಪತೀನ್। ಶಲ್ಯಕರ್ಣೌ ಚ ತರಸಾ ಜಿತವಂತೌ ಮಹಾಮೃಧೇ।। ದೃಷ್ಟ್ವಾ ತಯೋಶ್ಚ ತದ್ವೀರ್ಯಮಪ್ರಮೇಯಮಮಾನುಷಮ್। ಶಂಕಮಾನೌ ಪಾಂಡವಾಂಸ್ತಾನ್ ರಾಮಕೃಷ್ಣೌ ಮಹಾಮತೀ।। ಜಗ್ಮತುಸ್ತೈಃ ಸಮಾಗಂತುಂ ಶಾಲಾಂ ಭಾರ್ಗವವೇಶ್ಮನಿ। ಅರ್ಥಾತ್: ಪಾಂಚಾಲನಗರದಲ್ಲಿ ಅರ್ಜುನನು ಸರ್ವಮಹೀಕ್ಷಿತರ ಮಧ್ಯದಲ್ಲಿ ಲಕ್ಷ್ಯವನ್ನು ಭೇದಿಸಿ ದ್ರೌಪದಿಯನ್ನು ಪಡೆದುದು, ಭೀಮಾರ್ಜುನರು ಶಲ್ಯ-ಕರ್ಣರನ್ನೂ ಇತರ ರಾಜರನ್ನೂ ಯುದ್ಧದಲ್ಲಿ ಪರಾಜಯಗೊಳಿಸಿದುದು, ಅವರಿಬ್ಬರ ಅಪ್ರಮೇಯ ಅಮಾನುಷ ವೀರ್ಯವನ್ನು ಕಂಡು ಮಹಾಮತಿ ರಾಮ-ಕೃಷ್ಣರು ಅವರು ಪಾಂಡವರಿರಬಹುದೆಂದು ಶಂಕಿಸಿ ಕುಂಬಾರನ ಮನೆಗೆ ಹೋಗಿ ಪಾಂಡವರನ್ನು ಗುರುತಿಸಿದುದು ↩︎
-
ಪಂಚೇಂದ್ರಾಣಾಮುಖ್ಯಾನಮತ್ರೈವದ್ಭುತಮುಚ್ಯತೇ। ಅರ್ಥಾತ್: ಇಲ್ಲಿಯೇ ಐವರು ಇಂದ್ರರ ಅದ್ಭುತ ಉಪಾಖ್ಯಾನವನ್ನೂ ಹೇಳಲಾಗಿದೆ. ↩︎
-
ಕ್ಷತ್ತುಶ್ಚ ಧೃತರಾಷ್ಟ್ರೇಣ ಪ್ರೇಷಣಂ ಪಾಂಡವಾನ್ ಪ್ರತಿ। ಅರ್ಥಾತ್: ಧೃತರಾಷ್ಟ್ರನಾದರೋ ವಿದುರನನ್ನು ಪಾಂಡವರ ಬಳಿ ಕಳುಹಿಸಿದುದು ↩︎
-
ಸುಂದೋಪಸುಂದಯೋಸ್ತದ್ದದಾಖ್ಯಾನಂ । ↩︎
-
ಅನಂತರಂ ದ್ರೌಪದ್ಯಾ ಸಹಾಸೀನಂ ಯುಧಿಷ್ಠಿರಮ್। ಅನುಪ್ರವಿಶ್ಯ ವಿಪ್ರಾರ್ಥೇ ಫಾಲ್ಗುನೇ ಗೃಹ್ಯಚಾಯುಧಮ್।। ಮೋಕ್ಷಯಿತ್ವಾ ಗೃಹಂ ಗತ್ವಾ ವಿಪ್ರಾರ್ಥಂ ಕೃತನಿಶ್ಚಯಃ। ಸಮಯಂ ಪಾಲಯನ್ ವೀರೋ ವನಂ ಯತ್ರ ಜಗಾಮ ಹ।। ಅರ್ಥಾತ್: ಅನಂತರ ವಿಪ್ರನಿಗೋಸ್ಕರ ಫಲ್ಗುನನು ದ್ರೌಪದಿಯೊಡನೆ ಯುಧಿಷ್ಠಿರನಿದ್ದ ಆಯುಧಾಗಾರವನ್ನು ಪ್ರವೇಶಿಸಿದುದು, ವಿಪ್ರನ ಕಾರ್ಯವನ್ನೆಸಗಲು ನಿಶ್ಚಯಿಸಿ, ಅವನ ಗೋವುಗಳನ್ನು ಬಿಡಿಸಿಕೊಟ್ಟು, ಮನೆಗೆ ಹಿಂದಿರುಗಿದ ವೀರನು ಒಪ್ಪಂದವನ್ನು ಪಾಲಿಸಲು ವನಕ್ಕೆ ತೆರಳಿದುದು ↩︎
-
ತತ್ರೈವ ಮೋಕ್ಷಯಾಮಾಸ ಪಂಚ ಸೋಽಪ್ಸರಸಃ ಶುಭಾಃ। ಶಾಪಾದ್ ಗ್ರಾಹತ್ವಮಾಪನ್ನಾ ಬ್ರಾಹ್ಮಣಸ್ತೇ ತಪಸ್ವಿನಃ। ಪ್ರಭಾಸತೀರ್ಥೇ ಪಾರ್ಥೇನ ಕೃಷ್ಣಸ್ಯ ಚ ಸಮಾಗಮಃ।। ಅರ್ಥಾತ್: ಅಲ್ಲಿಯೇ ತಪಸ್ವೀ ಬ್ರಾಹ್ಮಣನ ಶಾಪದಿಂದ ಮೊಸಳೆಯ ರೂಪಗಳನ್ನು ಪಡೆದಿದ್ದ ಐವರು ಶುಭ ಅಪ್ಸರೆಯರನ್ನು ಶಾಪಮೋಚರರನ್ನಾಗಿಸಿದುದು, ಪ್ರಭಾಸತೀರ್ಥದಲ್ಲಿ ಪಾರ್ಥ-ಕೃಷ್ಣರ ಸಮಾಗಮ ↩︎
-
ಗೃಹೀತ್ವಾ ಹರಣಂ ಪ್ರಾಪ್ತೇ ↩︎
-
ದ್ರೌಪದ್ಯಾಸ್ತನಯಾನಾಂ ಚ ಸಂಭವೋಽನುಪ್ರಕೀರ್ತಿತಃ। ವಿಹಾರಾರ್ಥಂ ಚ ಗತಯೋಃ ಕೃಷ್ಣಯೋರ್ಯಮುನಾಮನು। ಸಂಪ್ರಾಪ್ತಿಶ್ಚಕ್ರಧನುಷೋಃ ಖಾಂಡವಸ್ಯ ಚ ದಾಹನಮ್।। ಅರ್ಥಾತ್: ದ್ರೌಪದಿಯರ ಮಕ್ಕಳ ಜನ್ಮದ ವರ್ಣನೆ, ವಿಹಾರಾರ್ಥಕ್ಕಾಗಿ ಕೃಷ್ಣರೀರ್ವರೂ ಯಮುನಾ ತೀರಕ್ಕೆ ಹೋದುದು, ಚಕ್ರ-ಧನುಸ್ಸುಗಳನ್ನು ಪಡೆದುಕೊಂಡಿದುದು ಮತ್ತು ಖಾಂಡವ ದಹನ ↩︎
-
ಸಪ್ತವಿಂಶತಿರಧ್ಯಾಯಾ (ನೀಲಕಂಠೀಯದ ಆದಿಪರ್ವದಲ್ಲಿ 227 ಅಧ್ಯಾಯಗಳಿವೆ). ↩︎
-
ಅಷ್ಟೌಶ್ಲೋಕಸಹಸ್ರಾಣಿ ಅಷ್ಟೌ ಶ್ಲೋಕಶತಾನಿ ಚ। ↩︎
-
ಶ್ಲೋಕಾಶ್ಚ ಚತುರಾಶೀತಿರ್ಮುನಿನೋಕ್ತಾ (ನೀಲಕಂಠೀಯದ ಆದಿಪರ್ವದಲ್ಲಿ ಒಟ್ಟು 8884 ಶ್ಲೋಕಗಳಿವೆ). ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಆದಿಪರ್ವದಲ್ಲಿ 225 ಅಧ್ಯಾಯಗಳಿವೆ. ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಆದಿಪರ್ವದಲ್ಲಿ ಒಟ್ಟು 7190 ಶ್ಲೋಕಗಳಿವೆ. ↩︎
-
ನಾರದಾದ್ದೇವದರ್ಶಿನಃ । ↩︎
-
ತಥಾ ದಿಗ್ವಿಜಯೋಽತ್ರೈವ ಪಾಂಡವಾನಾಂ ಪ್ರಕೀರ್ತಿತಃ। ರಾಜ್ಞಾಗಮನಂ ಚೈವ ಸಾರ್ಹಣಾನಾಂ ಮಹಾಕ್ರತೌ।। ಅರ್ಥಾತ್: ಅಲ್ಲಿಯೇ ಪಾಂಡವರ ದಿಗ್ವಿಜಯದ ವರ್ಣನೆಯಿದೆ, ಮತ್ತು ಮಹಾಕ್ರತುವಿಗೆ ಕಾಣಿಕೆಗಳೊಂದಿಗೆ ರಾಜರ ಆಗಮನ ↩︎
-
ಮಗ್ನಾಂ ದ್ರೌಪದೀಂ ↩︎
-
ಜಿತ್ವಾ ಸ ವನವಾಸಾಯ ಪ್ರೇಷಯಾಮಾಸ ತಾಂಸ್ತತಃ। ಅರ್ಥಾತ್: ಗೆದ್ದು ಅವರನ್ನು ವನವಾಸಕ್ಕೆ ಕಳುಹಿಸಿದುದು ↩︎
-
ಚಾಷ್ಟೌ ಪ್ರಸಂಖ್ಯಯಾ। ↩︎
-
ದ್ವಿಜೋತ್ತಮಾಃ । ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಸಭಾಪರ್ವದಲ್ಲಿ 72 ಅದ್ಯಾಯಗಳಿವೆ ಮತ್ತು 2390 ಶ್ಲೋಕಗಳಿವೆ. ನೀಲಕಂಠೀಯದ ಸಭಾಪರ್ವದಲ್ಲಿ 81 ಅಧ್ಯಾಯಗಳು ಮತ್ತು 3905 ಶ್ಲೋಕಗಳಿವೆ. ↩︎
-
ವನವಾಸಂ ಪ್ರಯಾತೇಷು ಪಾಂಡವೇಷು ಮಹಾತ್ಮಸು। ಅರ್ಥಾತ್: ಮಹಾತ್ಮ ಪಾಂಡವರು ವನವಾಸಕ್ಕೆ ಹೊರಡುವಾಗ ↩︎
-
ಅನ್ನೌಷಧೀನಾಂ ಚ ಕೃತೇ ಪಾಂಡವೇನ ಮಹಾತ್ಮನಾ। ದ್ವಿಜಾನಾಂ ಭರಣಾರ್ಥಂ ಚ ಕೃತಮಾರಾಧನಂ ರವೇಃ।। ಧೌಮ್ಯೋಪದೇಶಾತ್ ತಿಗ್ಮಾಂಶುಪ್ರಸಾದಾದನ್ನಸಂಭವಃ। ಹಿತಂ ಚ ಬ್ರುವತಃ ಕ್ಷತ್ತುಃ ಪರಿತ್ಯಾಗೋಽಂಬಿಕಾಸುತಾತ್।। ತ್ಯಕ್ತಸ್ಯ ಪಾಂಡುಪುತ್ರಾಣಾಂ ಸಮೀಪಗಮನಂ ತಥಾ। ಪುನರಾಗಮನಂ ಚೈವ ಧೃತರಾಷ್ಟ್ರಸ್ಯ ಶಾಸನಾತ್।। ಕರ್ಣಪ್ರೋತ್ಸಾಹನಾಚ್ಚೈವ ಧಾರ್ತರಾಷ್ಟ್ರಸ್ಯ ದುರ್ಮತೇಃ। ವನಸ್ಥಾನ್ ಪಾಂಡವಾನ್ ಹಂತುಂ ಮಂತ್ರೋ ದುರ್ಯೋಧನಸ್ಯ ಚ।। ತಂ ದುಷ್ಟಭಾವಂ ವಿಜ್ಞಾಯ ವ್ಯಾಸಸ್ಯಾಗಮನಂ ದ್ರುತಮ್। ನಿರ್ಯಾಣಪ್ರತಿಷೇಧಶ್ಚ ಸುರಭ್ಯಾಖ್ಯಾನಮೇವ ಚ।। ಮೈತ್ರೇಯಾಗಮನಂ ಚಾತ್ರ ರಾಜ್ಞಶ್ಚೈವಾನುಶಾಸನಮ್। ಶಾಪೋತ್ಸರ್ಗಶ್ಚ ತೇನೈವ ರಾಜ್ಞೋ ದುರ್ಯೋಧನಸ್ಯ ಚ।। ಕಿರ್ಮೀರಸ್ಯ ವಧಶ್ಚಾತ್ರ ಭೀಮಸೇನೇನ ಸಂಯುಗೇ। ಅರ್ಥಾತ್: ದ್ವಿಜರ ಭರಣ-ಪೋಷಣೆಗೆ ಮಹಾತ್ಮಾ ಪಾಂಡವನು ರವಿಯನ್ನು ಅರಾಧಿಸಿ ಅನ್ನ-ಔಷಧಿಗಳ ವ್ಯವಸ್ಥೆಯನ್ನು ಮಾಡಿದುದು, ಧಮ್ಯನ ಉಪದೇಶದಂತೆ ತಿಗ್ಮಾಂಶು ಸೂರ್ಯನ ಪ್ರಸಾದದಿಂದ ಆಹಾರವು ಹುಟ್ಟಿಕೊಂಡಿದುದು, ಹಿತವಚನವನ್ನು ಹೇಳುತ್ತಿದ್ದ ಕ್ಷತ್ತ ವಿದುರನನ್ನು ಅಂಬಿಕಾಸುತ ಧೃತರಾಷ್ಟ್ರನು ಪರಿತ್ಯಜಿಸಿದುದು, ತ್ಯಕ್ತನಾದ ಅವನು ಪಾಂಡುಸುತರ ಬಳಿ ತೆರಳಿದುದು, ಧೃತರಾಷ್ಟ್ರನ ಆಜ್ಞೆಯಂತೆ ಪುನಃ ಅವನಲ್ಲಿಗೆ ಹಿಂದಿರುಗಿದುದು, ದುರ್ಮತಿ ಧಾರ್ತರಾಷ್ಟ್ರ ದುಯೋಧನನು ಕರ್ಣನ ಪ್ರೋತ್ಸಾಹದಂತೆ ವನವಾಸೀ ಪಾಂಡವರನ್ನು ಸಂಹರಿಸಲು ಯೋಚಿಸಿದುದು, ಅವನ ಆ ದುಷ್ಟಭಾವವನ್ನು ತಿಳಿದ ವ್ಯಾಸನು ಅವಸರದಲ್ಲಿ ಅಲ್ಲಿಗೆ ಆಗಮಿಸಿದುದು, ದುರ್ಯೋಧನನ ಪ್ರಯಾಣವನ್ನು ನಿಷೇಧಿಸಿದುದು ಮತ್ತು ಸುರಭ್ಯಾಖ್ಯಾನ, ಅಲ್ಲಿಗೆ ಮೈತ್ರೇಯನ ಆಗಮನ ಮತ್ತು ರಾಜಾ ಧೃತರಾಷ್ಟ್ರನಿಗೆ ಉಪದೇಶಿಸಿದುದು, ಅವನಿಂದಲೇ ರಾಜಾ ದುರ್ಯೋಧನನಿಗೆ ಶಾಪವು ದೊರಕಿದುದು, ಯುದ್ಧದಲ್ಲಿ ಭೀಮಸೇನನಿಂದ ಕಿರ್ಮೀರನ ವಧೆ, ↩︎
-
ಶ್ರುತ್ವಾ ಶಕುನಿನಾ ದ್ಯೂತೇ ನಿಕೃತ್ಯಾ ನಿರ್ಜಿತಾಂಶ್ಚ ತಾನ್। ಕ್ರುದ್ಧಸ್ಯಾನುಪ್ರಶಮನಂ ಹರೇಶ್ಚೈವ ಕಿರೀಟಿನಾ।। ಪರಿವೇದನಂ ಚ ಪಾಂಚಾಲ್ಯಾ ವಾಸುದೇವಸ್ಯ ಸನ್ನಿಧೌ। ಆಶ್ವಾಸನಂ ಚ ಕೃಷ್ಣೇನ ದುಃಖಾರ್ತಾಯಾಃ ಪ್ರಕೀರ್ತಿತಮ್।। ಅರ್ಥಾತ್: ಶಕುನಿಯು ದ್ಯೂತದಲ್ಲಿ ಮೋಸದಿಂದ ಅವರನ್ನು ಗೆದ್ದನೆಂದು ಕೇಳಿ ಕ್ರುದ್ಧನಾದ ಹರಿಯನ್ನು ಕಿರೀಟಿ ಅರ್ಜುನನು ಸಮಾಧಾನಗೊಳಿಸಿದುದು, ವಾಸುದೇವನ ಸನ್ನಿಧಿಯಲ್ಲಿ ಪಾಂಚಾಲಿಯ ಪರಿವೇದನೆ ಮತ್ತು ದುಃಖಾರ್ತಳಾಗಿದ್ದ ಅವಳಿಗೆ ಕೃಷ್ಣನ ಆಶ್ವಾಸನೆ – ಇವುಗಳನ್ನು ವರ್ಣಿಸಲಾಗಿದೆ. ↩︎
-
ತಥಾ ಸೌಭವಧಾಖ್ಯಾನಮತ್ರೈವೋಕ್ತಂ ಮಹರ್ಷಿಣಾ। ↩︎
-
ಸುಭದ್ರಾಯಾಃ ಸಪುತ್ರಾಯಾಃ ಕೃಷ್ಣೇನ ದ್ವಾರಕಾಂ ಪುರೀಮ್। ನಯನಂ ದ್ರೌಪದೇಯಾನಾಂ ಧೃಷ್ಟದ್ಯುಮ್ನೇನ ಚೈವ ಹ। ಪ್ರವೇಶಃ ಪಾಂಡವೇಯಾನಾಂ ರಮ್ಯೇ ದ್ವೈತವನೇ ತತಃ।। ಧರ್ಮರಾಜಸ್ಯ ಚಾತ್ರೈವ ಸಂವಾದಃ ಕೃಷ್ಣಯಾ ಸಹ। ಸಂವಾದಶ್ಚ ತಥಾ ರಾಜ್ಞಾ ಭೀಮಸ್ಯಾಪಿ ಪ್ರಕೀರ್ತಿತಾಃ।। ಸಮೀಪಂ ಪಾಂಡುಪುತ್ರಾಣಾಂ ವ್ಯಾಸಸ್ಯಾಗಮನಂ ತಥಾ। ಪ್ರತಿಸ್ಮೃತ್ಯಾಥ ವಿದ್ಯಾಯಾ ದಾನಾಂ ರಾಜ್ಞೋ ಮಹರ್ಷಿಣಾ।। ಗಮನಂ ಕಾಮ್ಯಕೇ ಚಾಪಿ ವ್ಯಾಸೇ ಪ್ರತಿಗತೇ ತತಃ। ಅರ್ಥಾತ್: ಮಗನೊಂದಿಗೆ ಸುಭದ್ರೆಯನ್ನು ಕೃಷ್ಣನು ದ್ವಾರಕಾ ಪುರಿಗೆ ಕರೆದುಕೊಂಡು ಹೋದುದು, ದ್ರೌಪದೇಯರನ್ನು ಧೃಷ್ಟದ್ಯುಮ್ನನು ಕರೆದುಕೊಂಡು ಹೋದುದು, ಪಾಂಡವರು ರಮ್ಯ ದ್ವೈತವನವನ್ನು ಪ್ರವೇಶಿಸಿದುದು, ಅಲ್ಲಿಯೇ ಕೃಷ್ಣೆಯೊಂದಿಗೆ ಧರ್ಮರಾಜನ ಸಂವಾದ, ಮತ್ತು ಭೀಮನೊಂದಿಗೆ ರಾಜನ ಸಂವಾದವನ್ನೂ ವರ್ಣಿಸಲಾಗಿದೆ. ಹಾಗೆಯೇ ಪಾಂಡುಪುತ್ರರ ಬಳಿ ವ್ಯಾಸನ ಆಗಮನ, ಮಹರ್ಷಿಯು ರಾಜನಿಗೆ ಪ್ರತಿಸ್ಮೃತಿ ವಿದ್ಯೆಯನ್ನು ನೀಡಿದುದು, ವ್ಯಾಸನು ತೆರಳಿದ ನಂತರ ಪಾಂಡವರು ಕಾಮ್ಯಕ ವನಕ್ಕೆ ಹೋದುದು, ↩︎
-
ಅಸ್ತ್ರಪ್ರಾಪ್ತಿಸ್ತಥೈವ ಚ। ↩︎
-
ಮಹೇಂದ್ರಲೋಕಗಮನಮಸ್ತ್ರಾರ್ಥೇ ಚ ಕಿರೀಟಿನಃ। ಯತ್ರ ಚಿಂತಾ ಸಮುತ್ಪನ್ನಾ ಧೃತರಾಷ್ಟ್ರಸ್ಯ ಭೂಯಸೀ।। ಅರ್ಥಾತ್: ಅಸ್ತ್ರಗಳಿಗಾಗಿ ಕಿರೀಟಿಯು ಮಹೇಂದ್ರಲೋಕಕ್ಕೆ ಹೋದುದು, ಅದರಿಂದಾಗಿ ಧೃತರಾಷ್ಟ್ರನಿಗೆ ಇನ್ನೂ ಹೆಚ್ಚಿನ ಚಿಂತೆಯಾದುದು, ↩︎
-
ಚರಿತಂ ತಥಾ। ↩︎
-
ತಥಾಕ್ಷಹೃದಯಪ್ರಾಪ್ತಿಸ್ತಸ್ಮಾದೇವ ಮಹರ್ಷಿತಃ। ಲೋಮಶಸ್ಯಾಗಮಸ್ತತ್ರ ಸ್ವರ್ಗಾತ್ ಪಾಂಡುಸುತಾನ್ ಪ್ರತಿ।। ಅರ್ಥಾತ್: ಆ ಮಹರ್ಷಿಯಿಂದಲೇ ಯುಧಿಷ್ಠಿರನಿಗೆ ಅಕ್ಷಹೃದಯವು ಪ್ರಾಪ್ತವಾದುದು, ಅಲ್ಲಿ ಪಾಂಡುಸುತರ ಬಳಿಗೆ ಸ್ವರ್ಗದಿಂದ ಲೋಮಶನ ಆಗಮನ ↩︎
-
ಸಂದೇಶಾದರ್ಜುನಸ್ಯಾತ್ರ ತೀರ್ಥಾಭಿಗಮನಕ್ರಿಯಾ। ತೀರ್ಥಾನಾಂ ಚ ಫಲಪ್ರಾಪ್ತಿಃ ಪುಣ್ಯತ್ವಂ ಚಾಪಿ ಕೀರ್ತಿತಮ್।। ತಥಾ ಯಜ್ಞವಿಭೂತಿಶ್ಚ ಗಯಸ್ಯಾತ್ರ ಪ್ರಕೀರ್ತಿತಾ। ಅರ್ಥಾತ್: ಅಲ್ಲಿ ಅರ್ಜುನನ ಸಂದೇಶ, ತೀರ್ಥಯಾತ್ರೆಗೆ ಹೊರಡುವ ನಿಶ್ಚಯ, ತೀರ್ಥಗಳ ಪುಣ್ಯತ್ವ ಮತ್ತು ಫಲಪ್ರಾಪ್ತಿಗಳ ವರ್ಣನೆಯಿದೆ. ಹಾಗೆಯೇ ಅಲ್ಲಿ ಗಯನ ಯಜ್ಞದ ಮಹಿಮೆಯನ್ನು ವರ್ಣಿಸಲಾಗಿದೆ. ↩︎
-
ಜಟಾಸುರಸ್ಯ ಚ ವಧೋ ರಾಕ್ಷಸಸ್ಯ ವೃಕೋದರಾತ್। ↩︎
-
ವೃಷಪರ್ವಣಶ್ಚ ರಾಜರ್ಷೇಸ್ತತೋಽಭಿಗಮನಂ ಸ್ಮೃತಮ್। ಆರ್ಷ್ಟಿಷೇಣಾಶ್ರಮೇ ಚೈಷಾಂ ಗಮನಂ ವಾಸ ಎವ ಚ। ಪ್ರೋತ್ಸಾಹನಂ ಚ ಪಾಂಚಾಲ್ಯಾ ಭೀಮಸ್ಯಾತ್ರ ಮಹಾತ್ಮನಃ।। ಕೈಲಾಸಾರೋಹಣಂ ಪ್ರೋಕ್ತಂ ಯತ್ರ ಯಕ್ಷೈರ್ಬಲೋತ್ಕಟೈಃ। ಅರ್ಥಾತ್: ಅನಂತರ ರಾಜರ್ಷಿ ವೃಷಪರ್ವ ಮತ್ತು ಆರ್ಷ್ಟಿಷೇಣರ ಆಶ್ರಮಗಳಿಗೆ ಹೋಗಿ ಅಲ್ಲಿಯೇ ತಂಗಿದುದು; ಮತ್ತು ಅಲ್ಲಿಯೇ ಪಾಂಚಾಲಿಯು ಮಹಾತ್ಮಾ ಭೀಮಸೇನನನ್ನು ಪ್ರೋತ್ಸಾಹಿಸಲು ಅವನು ಬಲೋತ್ಕಟರಾದ ಯಕ್ಷರಿರುವ ಕೈಲಾಸವನ್ನು ಏರಿದುದನ್ನು ಹೇಳಲಾಗಿದೆ. ↩︎
-
ಋಷೇಸ್ತಥಾ । ↩︎
-
ಪ್ರಭಾಸತೀರ್ಥೇ ಪಾಂಡೂನಾಂ ವೃಷ್ಣಿಭಿಶ್ಚ ಸಮಾಗಮಃ। ಅರ್ಥಾತ್: ಪ್ರಭಾಸತೀರ್ಥದಲ್ಲಿ ಪಾಂಡವರ ಮತ್ತು ವೃಷ್ಣಿಗಳ ಸಮಾಗಮ ↩︎
-
ಮಾಂಧಾತುಶ್ಚಾಪ್ಯುಪಾಖ್ಯಾನಂ ರಾಜ್ಞೋಽತ್ರೈವ ಪ್ರಕೀರ್ತಿತಮ್। ಅರ್ಥಾತ್: ರಾಜಾ ಮಾಂಧಾತನ ಉಪಾಖ್ಯಾನವನ್ನೂ ಅಲ್ಲಿಯೇ ಹೇಳಲಾಗಿದೆ. ↩︎
-
ತತಃ ಶ್ಯೇನಕಪೋತೀಯಮುಪಾಖ್ಯಾನಮನುತ್ತಮಮ್। ಇಂದ್ರಾಗ್ನೀ ಯತ್ರ ಧರ್ಮಸ್ಯ ಜಿಜ್ಞಾಸಾರ್ಥಂ ಶಿಬಿಂ ನೃಪಮ್।। ಅರ್ಥಾತ್: ಅನಂತರ ಅಗ್ನಿ ಮತ್ತು ಇಂದ್ರರು ಧರ್ಮಜಿಜ್ಞಾಸೆಗೋಸ್ಕರವಾಗಿ ನೃಪ ಶಿಬಿಯ ಬಳಿ ಹೋದ ಗಿಡುಗ-ಪಾರಿವಾಳಗಳ ಅನುತ್ತಮ ಉಪಾಖ್ಯಾನವಿದೆ. ↩︎
-
ಬಂದಿನಾ । ↩︎
-
ಅಷ್ಟಾವಕ್ರಸ್ಯ ವಿಪ್ರರ್ಷೇರ್ಜನಕಸ್ಯಾಧ್ವರೇಽಭವತ್।। ನೈಯಾಯಿಕಾನಾಂ ಮುಖ್ಯೇನ ವರುಣಸ್ಯಾತ್ಮಜೇನ ಚ। ಪರಾಜಿತೋ ಯತ್ರ ಬಂದೀ ವಿವಾದೇನ ಮಹಾತ್ಮನಾ।। ಅರ್ಥಾತ್: ಜನಕನ ಅಧ್ವರದಲ್ಲಿ ವರುಣನ ಮಗ ಮತ್ತು ನೈಯಾಯಿಕರ ಪ್ರಮುಖ ಬಂದಿಯನ್ನು ಮಹತ್ಮಾ ವಿಪ್ರರ್ಷಿ ಅಷ್ಟಾವಕ್ರನು ವಿವಾದದಲ್ಲಿ ಸೋಲಿಸಿದ ವರ್ಣನೆಯಿದೆ. ↩︎
-
ಯವಕ್ರೀತಸ್ಯ ಚಾಖ್ಯಾನಂ ರೈಭ್ಯಸ್ಯ ಚ ಮಹಾತ್ಮನಃ। ಗಂಧಮಾದನಯಾತ್ರಾ ಚ ವಾಸೋ ನಾರಾಯಣಾಶ್ರಮೇ।। ಅರ್ಥಾತ್: ಯವಕ್ರೀತನ ಮತ್ತು ಮಹಾತ್ಮಾ ರೈಭ್ಯನ ಆಖ್ಯಾನ ಹಾಗೂ ಗಂಧಮಾದನ ಯಾತ್ರೆ ಮತ್ತು ನಾರಾಯಣಾಶ್ರಮದಲ್ಲಿ ವಾಸ ↩︎
-
ನಿವಾತಕವಚೈರ್ಘೋರೈರ್ದಾನವೈಃ ಸುರಶತ್ರುಭಿಃ। ಪೌಲೋಮೈಃ ಕಾಲಕೇಯೈಶ್ಚ ಯತ್ರ ಯುದ್ಧಂ ಕಿರೀಟನಃ।। ವಧಶ್ಚೈಷಾಂ ಸಮಾಖ್ಯಾತೋ ರಾಜ್ಞಸ್ತೇನೈವ ಧೀಮತಾ। ಅಸ್ತ್ರಸಂದರ್ಶನಾರಂಭೋ ಧರ್ಮರಾಜಸ್ಯ ಸನ್ನಿಧೌ।। ಪಾರ್ಥಸ್ಯ ಪ್ರತಿಷೇಧಶ್ಚ ನಾರದೇನ ಸುರರ್ಷಿಣಾ। ಅವರೋಹಣಂ ಪುನಶ್ಚೈವ ಪಾಂಡೂನಾಂ ಗಂಧಮಾದನಾತ್।। ಭೀಮಸ್ಯ ಗ್ರಹಣಂ ಚಾತ್ರ ಪರ್ವತಾಭೋಗವರ್ಷ್ಮಣಾ। ಭುಜಗೇಂದ್ರೇಣ ಬಲಿನಾ ತಸ್ಮಿನ್ ಸುಗಹನೇ ವನೇ।। ಅಮೋಕ್ಷಯದ್ಯತ್ರ ಚೈನಂ ಪ್ರಶ್ನಾನುಕ್ತ್ವಾ ಯುಧಿಷ್ಠಿರಃ। ಕಾಮ್ಯಕಾಗಮನಂ ಚೈವ ಪುನಸ್ತೇಷಾಂ ಮಹಾತ್ಮನಾಮ್।। ತತ್ರಸ್ಥಾಂಶ್ಚ ಪುನರ್ದ್ರಷ್ಟುಂ ಪಾಂಡವಾನ್ ಪುರುಷರ್ಷಭಾನ್। ವಾಸುದೇವಸ್ಯಾಗಮನಮತ್ರೈವ ಪರಿಕೀರ್ತಿತಮ್।। ಅರ್ಥಾತ್: ಸುರಶತ್ರುಗಳಾದ ಘೋರ ದಾನವ ನಿವಾತಕವಚರು, ಪೌಲೋಮರು ಮತ್ತು ಕಾಲಕೇಯರೊಂದಿಗೆ ಯುದ್ಧಮಾಡಿ ಅವರನ್ನು ವಧಿಸಿದುದನ್ನು ಕಿರೀಟಿಯು ರಾಜನಿಗೆ ವರ್ಣಿಸಿದುದು, ಅಲ್ಲಿಯೇ ಧರ್ಮರಾಜನ ಸನ್ನಿಧಿಯಲ್ಲಿ ಅಸ್ತ್ರಸಂದರ್ಶನವನ್ನು ಆರಂಭಿಸಿದುದು, ಸುರರ್ಷಿ ನಾರದನು ಪಾರ್ಥನನ್ನು ತಡೆದುದು, ಪುನಃ ಪಾಂಡವರು ಗಂಧಮಾದನದಿಂದ ಕೆಳಗಿಳಿದುದು, ಅಲ್ಲಿ ಗಹನ ವನದಲ್ಲಿ ಪರ್ವತೋಪಮ ವಿಶಾಲ ಶರೀರಧಾರೀ ಬಲಶಾಲೀ ಹೆಬ್ಬಾವು ಭೀಮನನ್ನು ಹಿಡಿದುದು, ಯುಧಿಷ್ಠಿರನು ಪ್ರಶ್ನೆಗಳಿಗೆ ಉತ್ತರಿಸಿ ಅವನನ್ನು ಬಿಡುಗಡೆಗೊಳಿಸಿದುದು, ಪುನಃ ಆ ಮಹಾತ್ಮರು ಕಾಮ್ಯಕವನಕ್ಕೆ ಹೋದುದು, ಅಲ್ಲಿ ಪುರುಷರ್ಷಭ ಪಾಂಡವರನ್ನು ನೋಡಲು ಪುನಃ ವಾಸುದೇವನ ಆಗಮನ – ಇವುಗಳನ್ನು ವರ್ಣಿಸಲಾಗಿದೆ. ↩︎
-
ಸಮಾಗಮಶ್ಚಾರ್ಜುನಸ್ಯ ತತ್ರೈವ ಭ್ರಾತೃಭಿಃ ಸಹ।। ↩︎
-
ಚಕ್ರೇ ಚೈನಂ ಪಂಚಶಿಖಂ ಯತ್ರ ಭೀಮೋ ಮಹಾಬಲಃ।। ಅರ್ಥಾತ್: ಮಹಾಬಲ ಭೀಮನು ಅವನನ್ನು ಪಂಚಶಿಖನನ್ನಾಗಿ ಮಾಡಿದುದು ↩︎
-
ಸರ್ವಶಃ । ↩︎
-
ಪೃಥೋರ್ವೈನ್ಯಸ್ಯ ಯತ್ರೋಕ್ತಮಾಖ್ಯಾನಂ ಪರಮರ್ಷಿಣಾ। ಸಂವಾದಶ್ಚ ಸರಸ್ವತ್ಯಾಸ್ತಾರ್ಕ್ಷ್ಯರ್ಷೇಃ ಸುಮಹಾತ್ಮನಃ। ಮತ್ಸ್ಯೋಪಾಖ್ಯಾನಮತ್ರೈವ ಪ್ರೋಚ್ಯತೇ ತದನಂತರಮ್।। ಮಾರ್ಕಂಡೇಯಸಮಸ್ಯಾ ಚ ಪುರಾಣಂ ಪರಿಕೀರ್ತ್ಯತೇ। ಐಂದ್ರದ್ಯುಮ್ನಮುಪಾಖ್ಯಾನಂ ಧೌಂಧುಮಾರಂ ತಥೈವ ಚ।। ಪತಿವ್ರತಾಯಾಶ್ಚಾಖ್ಯಾನಂ ತಥೈವಾಂಗಿರಸಂ ಸ್ಮೃತಮ್। ದ್ರೌಪದ್ಯಾಃ ಕೀರ್ತಿತಶ್ಚಾತ್ರ ಸಂವಾದಃ ಸತ್ಯಭಾಮಯಾ।। ಪುನರ್ದ್ವೈತವನಂ ಚೈವ ಪಾಂಡವಾಃ ಸಮುಪಾಗತಾಃ। ಅರ್ಥಾತ್: ಅಲ್ಲಿ ಪರಮಋಷಿಯು ವೈನ್ಯ ಪೃಥುವಿನ ಉಪಾಖ್ಯಾನ, ಸರಸ್ವತಿಯೊಡನೆ ಮಹಾತ್ಮ ಋಷಿ ತಾರ್ಕ್ಷ್ಯನ ಸಂವಾದ, ಮತ್ಸ್ಯೋಪಾಖ್ಯಾನಗಳನ್ನು ಹೇಳಿದುದು, ಅನಂತರ ಮಾರ್ಕಂಡೇಯ ಸಮಸ್ಯಾ ಮತ್ತು ಇಂದ್ರದ್ಯುಮ್ನನ, ಧುಂಧುಮಾರರ ಉಪಾಖ್ಯಾನಗಳು, ಪತಿವ್ರತೆಯ ಆಖ್ಯಾನ, ಆಂಗಿರಸ ಪುರಾಣಗಳಿವೆ. ಅಲ್ಲಿ ದ್ರೌಪದಿ-ಸತ್ಯಭಾಮೆಯರ ಸಂವಾದ ಮತ್ತು ಪುನಃ ಪಾಂಡವರು ದ್ವೈತವನಕ್ಕೆ ಹೋದದು ವರ್ಣಿತವಾಗಿವೆ. ↩︎
-
ದುರ್ವಾಸಸೋಽಪ್ಯುಪಾಖ್ಯಾನಮತ್ರೈವ ಪರಿಕೀರ್ತಿತಮ್। ಅರ್ಥಾತ್: ದುರ್ವಾಸನ ಉಪಾಖ್ಯಾನವನ್ನೂ ಇಲ್ಲಿಯೇ ಹೇಳಲಾಗಿದೆ. ↩︎
-
ಯತ್ರ ರಾಮೇಣ ವಿಕ್ರಮ್ಯ ನಿಹತೋ ರಾವಣೋ ಯುಧಿ।। ಅರ್ಥಾತ್: ಅಲ್ಲಿ ಯುದ್ಧದಲ್ಲಿ ರಾಮನು ವಿಕ್ರಮದಿಂದ ರಾವಣನನ್ನು ವಧಿಸಿದುದು ↩︎
-
ಯತ್ರಾಸ್ಯ ಶಕ್ತಿಂ ತುಷ್ಟೋಽಸಾವದಾದೇಕವಧಾಯ ಚ। ಅಲ್ಲಿಯೇ ಇಂದ್ರನು ಪ್ರಸನ್ನನಾಗಿ ಕರ್ಣನಿಗೆ ಓರ್ವನೇ ವೀರನನ್ನು ವಧಿಸುವ ಶಕ್ತಿಯನ್ನು ಕರುಣಿಸಿದುದು, ↩︎
-
ಅತ್ರಾಧ್ಯಾಸತೇ । ↩︎
-
ಸಂಖ್ಯಯಾ ಪರಿಕೀರ್ತಿತೇ। ↩︎
-
ಪರ್ವಣ್ಯಸ್ಮಿನ್ ಪರಿಕೀರ್ತಿತಾಃ।। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಅರಣ್ಯಕ ಪರ್ವದಲ್ಲಿ 299 ಅಧ್ಯಾಯಗಳೂ 10,314 ಶ್ಲೋಕಗಳೂ ಇವೆ. ಗೋರಖಪುರ ಸಂಪುಟದ ವನಪರ್ವದಲ್ಲಿ 315 ಅಧ್ಯಾಯಗಳೂ 11,966 ಶ್ಲೋಕಗಳೂ ಇವೆ. ↩︎
-
ಛದ್ಮನಾ ನ್ಯವಸಂಸ್ತು ತೇ। ↩︎
-
ಪಾಂಚಾಲೀ ಪ್ರಾರ್ಥಯಾನಸ್ಯ ಕಾಮೋಪಹತಚೇತಸಃ। ಅರ್ಥಾತ್: ಕಾಮಬಾಣಪೀಡಿತನಾಗಿ ಪಾಂಚಾಲಿಯನ್ನು ಬಯಸುತ್ತಿದ್ದ ↩︎
-
ಪಾಂಡವಾನ್ವೇಷಣಾರ್ಥಂ ಚ ರಾಜ್ಞೋ ದುರ್ಯೋಧನಸ್ಯ ಚ। ಚಾರಾಃ ಪ್ರಸ್ಥಾಪಿತಾಶ್ಚಾತ್ರ ನಿಪುಣಾಃ ಸರ್ವತೋದಿಶಮ್। ನ ಚ ಪ್ರವೃತ್ತಿಸ್ತೈರ್ಲಬ್ಧಾ ಪಾಂಡವಾನಾಂ ಮಹಾತ್ಮನಾಮ್।। ಅರ್ಥಾತ್: ರಾಜಾ ದುರ್ಯೋಧನನು ಪಾಂಡವರನ್ನು ಹುಡುಕಲು ನಿಪುಣ ಚಾರರನ್ನು ಎಲ್ಲಕಡೆ ಕಳುಹಿಸಿದುದು, ಆದರೆ ಅವರಿಂದ ಮಹಾತ್ಮ ಪಾಂಡವರ ಗತಿವಿಧಿಗಳು ತಿಳಿಯದೇ ಹೋದುದು ↩︎
-
ಗೋಗ್ರಹಶ್ಚ ವಿರಾಟಸ್ಯ ತ್ರಿಗರ್ತೈಃ ಪ್ರಥಮಂ ಕೃತಃ। ↩︎
-
ಯತ್ರಾಸ್ಯ ಯುದ್ಧಂ ಸುಮಹತ್ ತೈರಾಸೀಲ್ಲೋಮಹರ್ಷಣಮ್। ಹ್ರಿಯಮಾಣಶ್ಚ ಯತ್ರಾಸೌ ಭೀಮಸೇನೇನ ಮೋಕ್ಷಿತಃ।। ಅರ್ಥಾತ್: ಅಲ್ಲಿ ಲೋಮಹರ್ಷಣ ಮಹಾಯುದ್ಧವು ನಡೆದುದು, ಅಲ್ಲಿ ಕದ್ದುಕೊಂಡು ಹೋಗಿದ್ದ ಗೋವುಗಳನ್ನು ಭೀಮಸೇನನು ಬಿಡುಗಡೆಗೊಳಿಸಿದುದು ↩︎
-
ಅನಂತರಂ ಚ ಕುರುಭಿಸ್ತಸ್ಯ ಗೋಗ್ರಹಣಂ ಕೃತಮ್। ಸಮಸ್ತಾ ಯತ್ರ ಪಾರ್ಥೇನ ನಿರ್ಜಿತಾಃ ಕುರವೋ ಯುಧಿ। ಪ್ರತ್ಯಾಹೃತಂ ಗೋಧನಂ ಚ ವಿಕ್ರಮೇಣ ಕಿರೀಟಿನಾ।। ಅರ್ಥಾತ್: ಅನಂತರ ಕುರುಗಳು ಗೋಗ್ರಹಣ ಮಾಡಿದುದು, ಅಲ್ಲಿ ಯುದ್ಧದಲ್ಲಿ ಸಮಸ್ತ ಕುರುಗಳೂ ಪಾರ್ಥನಿಂದ ಸೋಲನ್ನಪ್ಪಿದುದು, ಮತ್ತು ಕಿರೀಟಿಯು ವಿಕ್ರಮದಿಂದ ಅಪಹರಿಸಲ್ಪಟ್ಟಿದ್ದ ಗೋಧನವನ್ನು ಹಿಂದೆ ಪಡೆದುಕೊಂಡಿದುದು ↩︎
-
ಅತ್ರಾಪಿ ಪರಿಸಂಖ್ಯಾತಾ ಅಧ್ಯಾಯಾಃ ಪರಮರ್ಷಿಣಾ।। ↩︎
-
ಶ್ಲೋಕಾನಾಮಪಿ । ↩︎
-
ಉಕ್ತಾನಿ ವೇದವಿದುಷಾ ಪರ್ವಣ್ಯಸ್ಮಿನ್ ಮಹರ್ಷಿಣಾ। ಈ ಪರ್ವದಲ್ಲಿ ವೇದವಿದು ಮಹರ್ಷಿಯು ಹೇಳಿದ್ದಾನೆ. ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ವಿರಾಟಪರ್ವದಲ್ಲಿ ಒಟ್ಟು 1824 ಶ್ಲೋಕಗಳಿವೆ. ಗೋರಖಪುರ ಸಂಪುಟದ ವಿರಾಟಪರ್ವದಲ್ಲಿ ಒಟ್ಟು 2539 ಶ್ಲೋಕಗಳಿವೆ. ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯಲ್ಲಿ 67 ಅಧ್ಯಾಯಗಳಿವೆ. ಗೋರಖಪುರ ಸಂಪುಟದಲ್ಲಿ 72 ಅಧ್ಯಾಯಗಳಿವೆ. ↩︎
-
ಮದ್ರರಾಜಂ ಚ ರಾಜಾನಮಾಯಂತಂ ಪಾಂಡವಾನ್ ಪ್ರತಿ। ಉಪಹಾರೈರ್ವಂಚಯಿತ್ವಾ ವರ್ತ್ಮನ್ಯೇವ ಸುಯೋಧನಃ।। ವರದಂ ತಂ ವರಂ ವವ್ರೇ ಸಾಹಾಹ್ಯಂ ಕ್ರಿಯತಾಂ ಮಮ। ಶಲ್ಯಸ್ತಸ್ಮೈ ಪ್ರತಿಶ್ರುತ್ಯ ಜಗಾಮೋದ್ದಿಶ್ಯ ಪಾಂಡವಾನ್।। ಶಾಂತಿಪೂರ್ವಂ ಚಾಕಥಯದ್ ಯತ್ರೇಂದ್ರವಿಜಯಂ ನೃಪಃ। ಪುರೋಹಿತಪ್ರೇಷಣಂ ಚ ಪಾಂಡವೈಃ ಕೌರವಾನ್ ಪ್ರತಿ।। ವೈಚಿತ್ರವೀರ್ಯಸ್ಯ ವಚಃ ಸಮಾದಾಯ ಪುರೋಧಸಃ। ತಥೇಂದ್ರವಿಜಯಂ ಚಾಪಿ ಯಾನಂ ಚೈವ ಪುರೋಧಸಃ।। ಅರ್ಥಾತ್: ಪಾಂಡವರ ಕಡೆ ಬರುತ್ತಿದ್ದ ರಾಜಾ ಮದ್ರರಾಜನನ್ನು ಉಡುಗೊರೆಗಳಿಂದ ವಂಚಿಸಿ ಸುಯೋಧನನು ತೃಪ್ತಿಗೊಳಿಸಿ ನನಗೆ ಸಯಾಯವನ್ನು ಮಾಡು ಎಂಬ ವರವನ್ನು ಆ ವರದನಿಂದ ಪಡೆದುಕೊಂಡಿದುದು, ಅವನಿಗೆ ಉತ್ತರಿಸಿ ನೃಪ ಶಲ್ಯನು ಪಾಂಡವರ ಬಳಿ ಹೋಗಿ ಶಾಂತಿಪೂರ್ವಕವಾಗಿ ವಿಷಯವನ್ನು ತಿಳಿಸಿ ಇಂದ್ರವಿಜಯದ ಕುರಿತು ಹೇಳಿದುದು, ಪಾಂಡವರು ಕೌರವರ ಬಳಿ ಪುರೋಹಿತನನ್ನು ಕಳುಹಿಸಿದುದು, ವೈಚಿತ್ರವೀರ್ಯ ಧೃತರಾಷ್ಟ್ರನು ಪುರೋಹಿತನಿಂದ ಇಂದ್ರವಿಜಯದ ಮಾತನ್ನು ಕೇಳಿ ಪುರೋಹಿತನನ್ನು ಕಳುಹಿಸಿದುದು ↩︎
-
ಯತ್ರ ವಾ ವಿಭೋ। ↩︎
-
ಸಂಧಿಮಿಚ್ಛನ್ ಮಹಾಮತಿಃ। ↩︎
-
ದಂಭೋದ್ಭವಸ್ಯ ಚಾಖ್ಯಾನಮತ್ರೈವ ಪರಿಕೀರ್ತಿತಮ್। ವರಾನ್ವೇಷಣಮತ್ರೈವ ಮಾತಲೇಶ್ಚ ಮಹಾತ್ಮನಃ।। ಮಹರ್ಷೇಶ್ಚಾಪಿ ಚರಿತಂ ಕಥಿತಂ ಗಾಲವಸ್ಯ ವೈ। ವಿದುಲಾಯಾಶ್ಚ ಪುತ್ರಸ್ಯ ಪ್ರೋಕ್ತಂ ಚಾಪ್ಯನುಶಾಸನಮ್।। ಅರ್ಥಾತ್: ಇಲ್ಲಿಯೇ ದಂಭೋದ್ಭವನ ಆಖ್ಯಾನ ಮತ್ತು ಮಹಾತ್ಮ ಮಾತಲಿಯ ವರನ್ವೇಷಣೆಯನ್ನು ಹೇಳಲಾಗಿದೆ. ಮಹರ್ಷಿ ಗಾಲವನ ಚರಿತ್ರೆ ಮತ್ತು ವಿದುಲೆಯು ಮಗನಿಗೆ ನೀಡಿದ ಉಪದೇಶಗಳನ್ನೂ ಹೇಳಲಾಗಿದೆ. ↩︎
-
ಯತ್ರ ರಾಜ್ಞಾಂ ಪ್ರದರ್ಶಿತಮ್।। ↩︎
-
ಶೌಟೀರ್ಯಾತ್ । ↩︎
-
ತೇ ತಸ್ಯ ವಚನಂ ಶ್ರುತ್ವಾ ಮಂತ್ರಯಿತ್ವಾ ಚ ಯದ್ಧಿತಮ್। ಸಾಂಗ್ರಾಮಿಕಂ ತತಃ ಸರ್ವಂ ಸಜ್ಜಂ ಚಕ್ರುಃ ಪರಂತಪಾಃ।। ಅರ್ಥಾತ್: ಪರಂತಪ ಪಾಂಡವರು ಅವನ ಮಾತನ್ನು ಕೇಳಿ ತಮಗೆ ಹಿತವಾದುದನ್ನು ಆಲೋಚಿಸಿ, ಯುದ್ಧಸಂಬಂಧೀ ಎಲ್ಲ ಸಾಮಾಗ್ರಿಗಳನ್ನೂ ಸಂಗ್ರಹಿಸಿಕೊಂಡರು. ↩︎
-
ತತೋ ಯುದ್ಧಾಯ ನಿರ್ಯಾತಾ ನರಾಶ್ವರಥದಂತಿನಃ। ↩︎
-
ದೌತ್ಯೇನ ಕೃತವಾನ್ ಪ್ರಭುಃ।। ↩︎
-
ಅಧ್ಯಾಯಾನಾಂ ಶತಂ ಪ್ರೋಕ್ತಂ ಷಡಶೀತಿರ್ಮಹರ್ಷಿಣಾ।। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಉದ್ಯೋಗಪರ್ವದಲ್ಲಿ 197 ಅಧ್ಯಾಯಗಳು ಮತ್ತು 6032 ಶ್ಲೋಕಗಳಿವೆ. ಗೋರಖಪುರ ಸಂಪುಟದ ಉದ್ಯೋಗಪರ್ವದಲ್ಲಿ 196 ಅಧ್ಯಾಯಗಳು ಮತ್ತು 6672 ಶ್ಲೋಕಗಳಿವೆ. ↩︎
-
ಊರ್ಧ್ವಂ । ↩︎
-
ದಶಾಹಾನಿ ಸುದಾರುಣಮ್। ↩︎
-
ಹೇತುಭಿರ್ಮೋಕ್ಷದರ್ಶಿಭಿಃ । ↩︎
-
ಸಮೀಕ್ಷ್ಯಾಧೋಕ್ಷಜಃ ಕ್ಷಿಪ್ರಂ ಯುಧಿಷ್ಠಿರಹಿತೇ ರತಃ। ರಥಾದಾಪ್ಲ್ಯುತ್ಯ ವೇಗೇನ ಸ್ವಯಂ ಕೃಷ್ಣ ಉದಾರಧೀಃ। ಪ್ರತೋದಪಾಣಿರಾಧಾವದ್ ಭೀಷ್ಮಂ ಹಂತುಂ ವ್ಯಪೇತಭೀಃ।। ವಾಕ್ಯಪ್ರತೋದಾಭಿಹತೋ ಯತ್ರ ಕೃಷ್ಣೇನ ಪಾಂಡವಃ। ಗಾಂಡೀವಧನ್ವಾ ಸಮರೇ ಸರ್ವಶಸ್ತ್ರಭೃತಾಂ ವರಃ।। ಅರ್ಥಾತ್: ಯುಧಿಷ್ಠಿರನ ಹಿತವನ್ನೇ ನೋಡುವ ಅಧೋಕ್ಷಜ ಉದಾರಧೀ ಕೃಷ್ಣನು ಸ್ವಯಂ ತಾನೇ ಭೀಷ್ಮನನ್ನು ಹೊಡೆಯಲು ಕೈಯಲ್ಲಿ ಬಾರಿಕೋಲನ್ನು ಹಿಡಿದು ಕ್ಷಿಪ್ರ ವೇಗದಲ್ಲಿ ರಥದಿಂದ ಧುಮುಕಿದನು ಮತ್ತು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಗಾಂಡೀವಧನ್ವಿ ಪಾಂಡವನನ್ನು ಸಮರದಲ್ಲಿ ಬಾರಿಕೋಲಿನ ಏಟಿನಂತಿರುವ ಮಾತುಗಳಿಂದ ಗಾಯಗೊಳಿಸಿದನು. ↩︎
-
ಶರತಲ್ಪಗತಶ್ಚೈವ ಭೀಷ್ಮೋ ಯತ್ರ ಬಭೂವ ಹ। ಅರ್ಥಾತ್: ಅಲ್ಲಿ ಭೀಷ್ಮನು ಶರತಲ್ಪಗತನಾದನು. ↩︎
-
ಷಷ್ಠಮೇತತ್ ಸಮಾಖ್ಯಾತಂ ಭಾರತೇ ಪರ್ವ ವಿಸ್ತೃತಮ್। ↩︎
-
ತಥಾ ಸಪ್ತದಶಾಪರೇ। ↩︎
-
ಅಸ್ಮಿನ್ ಪರ್ವಣಿ ಕೀರ್ತಿತಾಃ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಭೀಷ್ಮಪರ್ವದಲ್ಲಿ 117 ಅಧ್ಯಾಯಗಳು ಮತ್ತು 5396 ಶ್ಲೋಕಗಳಿವೆ. ಗೋರಖಪುರ ಸಂಪುಟದ ಭೀಷ್ಮಪರ್ವದಲ್ಲಿ 122 ಅಧ್ಯಾಯಗಳು ಮತ್ತು 5945 ಶ್ಲೋಕಗಳಿವೆ. ↩︎
-
ಸೈನಾಪತ್ಯೇಽಭಿಷಿಕ್ತೋಽಥ ಯತ್ರಾಚಾರ್ಯಃ ಪ್ರತಾಪವಾನ್। ದುರ್ಯೋಧನಸ್ಯ ಪ್ರೀತ್ಯರ್ಥಂ ಪ್ರತಿಜಜ್ಞೇ ಮಹಾಸ್ತ್ರವಿತ್। ಗ್ರಹಣಂ ಧರ್ಮರಾಜಸ್ಯ ಪಾಂಡುಪುತ್ರಸ್ಯ ಧೀಮತಃ।। ↩︎
-
ಸ ಹಿ ಸಾಂತಃ ಕಿರೀಟಿನಾ। ↩︎
-
ಜಘ್ನುರೇಕಂ ಮಹಾರಥಾಃ। ↩︎
-
ಯತ್ರ ಭೀಮೋ ಮಹಾಬಾಹುಃ ಸಾತ್ಯಕಿಶ್ಚ ಮಹಾರಥಃ। ಅನ್ವೇಷಣಾರ್ಥಂ ಪಾರ್ಥಸ್ಯ ಯುಧಿಷ್ಠಿರನೃಪಾಜ್ಞಯಾ। ಪ್ರವಿಷ್ಟೌ ಭಾರತೀಂ ಸೇನಾಮಪ್ರಧೃಷ್ಯಾಂ ಸುರೈರಪಿ।। ಅರ್ಥಾತ್: ಅಲ್ಲಿ ಮಹಾಬಾಹು ಭೀಮ ಮತ್ತು ಮಹಾರಥ ಸಾತ್ಯಕಿಯರು ನೃಪ ಯುಧಿಷ್ಠಿರನ ಆಜ್ಞೆಯಂತೆ ಪಾರ್ಥನನ್ನು ಹುಡುಕುವುದಕ್ಕಾಗಿ ಸುರರಿಗೂ ದುರ್ಧರ್ಷವಾಗಿದ್ದ ಭಾರತೀ ಸೇನೆಯನ್ನು ಪ್ರವೇಶಿಸಿದರು. ↩︎
-
ಸಂಶಪ್ತಕಾನಾಂ ವೀರಾಣಾಂ ಕೋಟ್ಯೋ ನವ ಮಹಾತ್ಮನಾಮ್। ಕಿರೀಟಿನಾಭಿನಿಷ್ಕ್ರಮ್ಯ ಪ್ರಾಪಿತಾ ಯಮಸಾದನಮ್।। ಧೃತರಾಷ್ಟ್ರಸ್ಯ ಪುತ್ರಾಶ್ಚ ತಥಾ ಪಾಷಾಣಯೋಧಿನಃ। ನಾರಾಯಣಶ್ಚ ಗೋಪಾಲಾಃ ಸಮರೇ ಚಿತ್ರಯೋಧಿನಃ।। ಅರ್ಥಾತ್: ಒಂಭತ್ತು ಕೋಟಿ ಮಹಾತ್ಮ ವೀರ ಸಂಶಪ್ತಕರನ್ನು, ಧೃತರಾಷ್ಟ್ರನ ಮಕ್ಕಳು, ಪಾಷಾಣಯೋಧಿಗಳು, ಮತ್ತು ಸಮರದಲ್ಲಿ ವಿಚಿತ್ರಯೋಧೀ ಗೋಪಾಲ ಮತ್ತು ನಾರಾಯಣರನ್ನು ಆಕ್ರಮಣಿಸಿ ಕಿರೀಟಿಯು ಯಮಸಾದನಕ್ಕೆ ಕಳುಹಿಸಿದನು. ↩︎
-
ಅಲಂಬುಷಃ । ↩︎
-
ಆಗ್ನೇಯಂ ಕೀರ್ತ್ಯತೇ ಯತ್ರ ರುದ್ರಮಾಹಾತ್ಮ್ಯಮುತ್ತಮಮ್। ವ್ಯಾಸಸ್ಯ ಚಾಪ್ಯಾಗಮನಂ ಮಾಹಾತ್ಮ್ಯಂ ಕೃಷ್ಣಪಾರ್ಥಯೋಃ।। ಅರ್ಥಾತ್: ಇದರಲ್ಲಿಯೇ ಆಗ್ನೇಯಾಸ್ತ್ರ ಮತ್ತು ರುದ್ರನ ಉತ್ತಮ ಮಹಾತ್ಮೆಯ ವರ್ಣನೆಯಿದೆ. ವ್ಯಾಸನ ಆಗಮನ ಮತ್ತು ಮಹಾತ್ಮ ಕೃಷ್ಣ-ಪಾರ್ಥರ ಮಹಾತ್ಮೆಯನ್ನೂ ವರ್ಣಿಸಲಾಗಿದೆ. ↩︎
-
ಯತ್ರ । ↩︎
-
ಅತ್ರಾಧ್ಯಾಯಶತಂ ಪ್ರೋಕ್ತಂ ತಥಾಧ್ಯಾಯಾಶ್ಚ ಸಪ್ತತಿಃ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ದ್ರೋಣಪರ್ವದಲ್ಲಿ 173 ಅಧ್ಯಾಯಗಳು ಮತ್ತು 8152 ಶ್ಲೋಕಗಳಿವೆ. ಗೋರಖಪುರ ಸಂಪುಟದ ದ್ರೋಣಪರ್ವದಲ್ಲಿ 202 ಅಧ್ಯಾಯಗಳು ಮತ್ತು 9703 ಶ್ಲೋಕಗಳಿವೆ. ↩︎
-
ವಧಃ ಪಾಂಡಸ್ಯ ಚ ತಥಾ ಅಶ್ವತ್ಥಾಮ್ನಾ ಮಹಾತ್ಮನಾ। ದಂಡಸೇನಸ್ಯ ಚ ತತೋ ದಂಡಸ್ಯ ಚ ವಧಸ್ತಥಾ।। ದ್ವೈರಥೇ ಯತ್ರ ಕರ್ಣೇನ ಧರ್ಮರಾಜೋ ಯುಧಿಷ್ಠಿರಃ। ಸಂಶಯಂ ಗಮಿತೋ ಯುದ್ಧೇ ಮಿಷತಾಂ ಸರ್ವಧನ್ವಿನಾಮ್।। ಅರ್ಥಾತ್: ಹಾಗೆಯೇ ಮಹಾತ್ಮಾ ಅಶ್ವತ್ಥಾಮನಿಂದ ಪಾಂಡ್ಯನ ವಧೆ, ನಂತರ ದಂಡ ಮತ್ತು ದಂಡಸೇನರ ವಧೆ, ಕರ್ಣನೊಡನೆ ದ್ವೈರಥ ಯುದ್ಧದಲ್ಲಿ ಧರ್ಮರಾಜಾ ಯುಧಿಷ್ಠಿರನು ಸರ್ವಧನ್ವಿಗಳೂ ನೋಡುತ್ತಿದ್ದಂತೆಯೇ ಸಂಶಯಾಸ್ಪದನಾಗಿದ್ದುದು ↩︎
-
ಯತ್ರೈವಾನುನಯಃ ಪ್ರೋಕ್ತೋ ಮಾಧವೇನಾರ್ಜುನಸ್ಯ ಹಿ। ಪ್ರತಿಜ್ಞಾಪೂರ್ವಕಂ ಚಾಪಿ ವಕ್ಷೋ ದುಃಶಾಸನಸ್ಯ ಚ। ಭಿತ್ವಾ ವೃಕೋದರೋ ರಕ್ತಂ ಪೀತವಾನ್ ಯತ್ರ ಸಂಯುಗೇ।। ಅರ್ಥಾತ್: ಮಾಧವನು ಅರ್ಜುನನನ್ನು ತಿಳಿಯ ಹೇಳಿ ಸಮಾಧಾನ ಪಡಿಸಿದುದು, ಪ್ರತಿಜ್ಞಾಪೂರ್ವಕವಾಗಿ ವೃಕೋದರನು ಯುದ್ಧದಲ್ಲಿ ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿದುದು ↩︎
-
ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಚತುಃಷಷ್ಟಿಸ್ತಥಾ ಶ್ಲೋಕಾಃ ಪರ್ವಣ್ಯಸ್ಮಿನ್ ಪ್ರಕೀರ್ತಿತಾಃ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಕರ್ಣಪರ್ವದಲ್ಲಿ 69 ಅಧ್ಯಾಯಗಳು ಮತ್ತು 3871 ಶ್ಲೋಕಗಳಿವೆ. ಗೋರಖಪುರ ಸಂಪುಟದ ಕರ್ಣಪರ್ವದಲ್ಲಿ 96 ಅಧ್ಯಾಯಗಳು ಮತ್ತು 5164 ಶ್ಲೋಕಗಳಿವೆ. ↩︎
-
ಯತ್ರ ಕೌಮಾರಮಾಖ್ಯಾನಮಭಿಷೇಕಸ್ಯ ಕರ್ಮ ಚ। ಅರ್ಥಾತ್: ಅಲ್ಲಿ ಕುಮಾರನ ಆಖ್ಯಾನ ಮತ್ತು ಅಭಿಷೇಕದ ವಿಷಯಗಳಿವೆ. ↩︎
-
ಮಹಾತ್ಮನಃ । ↩︎
-
ಶಕುನೇಶ್ಚ ವಧೋಽತ್ರೈವ ಸಹದೇವೇನ ಸಂಯುಗೇ। ಸೈನ್ಯೇ ಚ ಹತಭೂಯಿಷ್ಠೇ ಕಿಂಚಿದಿಷ್ಟೇ ಸುಯೋಧನಃ। ಹ್ರದಂ ಪ್ರವಿಶ್ಯ ಯತ್ರಾಸೌ ಸಂಸ್ತಭ್ಯಾಪೋ ವ್ಯವಸ್ಥಿತಃ।। ಪ್ರವೃತ್ತಿಸ್ತತ್ರ ಚಾಖ್ಯಾತಾ ಯತ್ರ ಭೀಮಸ್ಯ ಲುಬ್ಧಕೈಃ। ಕ್ಷೇಪಯುಕ್ತೈರ್ವಚೋಭಿಶ್ಚ ಧರ್ಮರಾಜಸ್ಯ ಧೀಮತಃ।। ಹ್ರದಾತ್ ಸಮುತ್ಥಿತೋ ಯತ್ರ ಧಾರ್ತರಾಷ್ಟ್ರೋಽತ್ಯಮರ್ಷಣಃ। ಭೀಮೇನ ಗದಯಾ ಯುದ್ಧಂ ಯತ್ರಾಸೌ ಕೃತವಾನ್ ಸಹ।। ಸಮವಾಯೇ ಚ ಯುದ್ಧಸ್ಯ ರಾಮಸ್ಯಾಗಮನಂ ಸ್ಮೃತಮ್। ಅರ್ಥಾತ್: ಅಲ್ಲಿಯೇ ಯುದ್ಧದಲ್ಲಿ ಸಹದೇವನಿಂದ ಶಕುನಿಯ ವಧೆ, ಸೇನೆಯು ಅಧಿಕವಾಗಿ ನಷ್ಟಹೊಂದಿ ಸ್ವಲ್ಪವೇ ಉಳಿದುಕೊಂಡಿರಲು ಸುಯೋಧನನು ಸರೋವರವನ್ನು ಪ್ರವೇಶಿಸಿ ನೀರನ್ನು ಸ್ತಂಭಿತಗೊಳಿಸಿ ಅಲ್ಲಿಯೇ ಕುಳಿತು ವಿಶ್ರಮಿಸಿದುದು, ಆದರೆ ವ್ಯಾಧರು ಭೀಮಸೇನನಿಗೆ ಅವನ ಕುರುಹನ್ನು ಹೇಳಿದುದು, ಆಗ ಧೀಮಂತ ಧರ್ಮರಾಜನು ಆಕ್ಷೇಪಯುಕ್ತ ಮಾತುಗಳಿಂದ ಅತ್ಯಂತ ಕುಪಿತನಾದ ಧೃತರಾಷ್ಟ್ರಪುತ್ರನು ಸರೋವರದಿಂದ ಮೇಲೆ ಏಳುವಂತೆ ಮಾಡಿದುದು, ಭೀಮಸೇನನೊಂದಿಗೆ ಗದಾಯುದ್ಧದಲ್ಲಿ ತೊಡಗಿದುದು, ಯುದ್ಧದ ಸಮಯದಲ್ಲಿಯೇ ಬಲರಾಮನ ಆಗಮನದ ಕುರಿತು ಹೇಳಲಾಗಿದೆ. ↩︎
-
ದುರ್ಯೋಧನಸ್ಯ ರಾಜ್ಞೋಽಥ ಯತ್ರ ಭೀಮೇನ ಸಂಯುಗೇ। ಊರೂ ಭಗ್ನೌ ಪ್ರಸಹ್ಯಾಜೌ ಗದಯಾ ಭೀಮವೇಗಯಾ।। ಅರ್ಥಾತ್: ಯುದ್ಧದಲ್ಲಿ ಭೀಮಸೇನನು ಭಯಂಕರ ವೇಗದಲ್ಲಿ ತನ್ನ ಗದೆಯಿಂದ ರಾಜಾ ದುರ್ಯೋಧನನ ತೊಡೆಗಳನ್ನು ಮುರಿದುದು. ↩︎
-
ಏಕೋನಷಷ್ಟ್ರಧ್ಯಾಯಾಃ ಪರ್ವಣ್ಯತ್ರ ಪ್ರಕೀರ್ತಿತಾಃ। ↩︎
-
ಶ್ಲೋಕಸಂಖ್ಯಾತ್ರ ಕಥ್ಯತೇ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಶಲ್ಯಪರ್ವದಲ್ಲಿ 64 ಅಧ್ಯಾಯಗಳು ಮತ್ತು 3315 ಶ್ಲೋಕಗಳಿವೆ. ಗೋರಖಪುರ ಸಂಪುಟದ ಶಲ್ಯಪರ್ವದಲ್ಲಿ 65 ಅಧ್ಯಾಯಗಳು ಮತ್ತು 3685 ಶ್ಲೋಕಗಳಿವೆ. ↩︎
-
ಅಪಯಾತೇಷು । ↩︎
-
ಸಮೇತ್ಯ ದದೃಶುರ್ಭೂಮೌ ಪತಿತಂ ರಣಮೂರ್ಧನಿ। ಒಟ್ಟಾಗಿ ಬಂದು ರಣಭೂಮಿಯ ಮೇಲೆ ಬಿದ್ದಿದ್ದ ದುರ್ಯೋಧನನನ್ನು ನೋಡಿದರು. ↩︎
-
ಪಾಂಡವಾಂಶ್ಚ ಸಹಾಮಾತ್ಯಾನ್ ವಿಮೋಕ್ಷ್ಯಾಮಿ ದಂಶನಮ್। ↩︎
-
ಯತ್ರೈವಮುಕ್ತ್ವಾ ರಾಜಾನಮಪಕ್ರಮ್ಯ ತ್ರಯೋ ರಥಾಃ। ಸೂರ್ಯಾಸ್ತಮನವೇಲಾಯಾಮಾಸೇದುಸ್ತೇ ಮಹದ್ವನಮ್।। ನ್ಯಗ್ರೋಧಸ್ಯಾಥ ಮಹತೋ ಯತ್ರಾಧಸ್ತಾದ್ ವ್ಯವಸ್ಥಿತಾ। ತತಃ ಕಾಕಾನ್ ಬಹೂನ್ ರಾತ್ರೌ ದೃಷ್ಟ್ವೋಲೂಕೇನ ಹಿಂಸಿತಾನ್।। ದ್ರೌಣಿಃ ಕ್ರೋಧಸಮಾವಿಷ್ಟಃ ಪಿತುರ್ವಧಮನುಸ್ಮರನ್। ಪಂಚಾಲಾನಾಂ ಪ್ರಸುಪ್ತಾನಾಂ ವಧಂ ಪ್ರತಿ ಮನೋ ದಧೇ।। ಗತ್ವಾ ಚ ಶಿಬಿರದ್ವಾರಿ ದುರ್ದರ್ಶಂ ತತ್ರ ರಾಕ್ಷಸಮ್। ಘೋರರೂಪಮಪಶ್ಯತ್ ಸ ದಿವಮಾವೃತ್ಯ ಧಿಷ್ಠಿತಮ್।। ತೇನ ವ್ಯಾಘಾತಮಸ್ತ್ರಾಣಾಂ ಕ್ರಿಯಮಾಣಮವೇಕ್ಷ್ಯ ಚ। ದ್ರೌಣಿರ್ಯತ್ರ ವಿರೂಪಾಕ್ಷಂ ರುದ್ರಮಾರಾಧ್ಯ ಸತ್ವರಃ।। ಅರ್ಥಾತ್: ರಾಜನಿಗೆ ಹೀಗೆ ಹೇಳಿ ಆ ಮೂವರು ಮಹಾರಥಿಗಳೂ ಹೊರಟುಹೋದುದು, ಸೂರ್ಯಾಸ್ತವಾಗುತ್ತಿದ್ದಂತೆ ಅವರು ಒಂದು ಮಹಾ ವನವನ್ನು ತಲುಪಿದುದು, ಅಲ್ಲಿ ಒಂದು ಮಹಾ ನ್ಯಗ್ರೋಧವೃಕ್ಷದ ಬುಡದಲ್ಲಿ ವಿಶ್ರಮಿಸಿದುದು, ರಾತ್ರಿವೇಳೆ ಒಂದು ಗೂಬೆಯು ಮರದ ಮೇಲೆ ಮಲಗಿದ್ದ ಕಾಗೆಗಳನ್ನು ಕೊಂದುದು, ಅದನ್ನು ನೋಡಿ ಕ್ರೋಧಭರಿತನಾದ ಅಶ್ವತ್ಥಾಮನು ತನ್ನ ತಂದೆಯ ಅನ್ಯಾಯಪೂರ್ವಕ ಮರಣದ ಘಟನೆಯನ್ನು ಸ್ಮರಿಸಿಕೊಳ್ಳುತ್ತಾ ಮಲಗಿರುವ ಪಾಂಚಾಲರನ್ನು ವಧಿಸಲು ನಿಶ್ಚಯಿಸಿದುದು, ಅನಂತರ ಪಾಂಡವರ ಶಿಬಿರದ ದ್ವಾರದಲ್ಲಿ ನಿಂತಿದ್ದ ನೋಡಲೂ ಅತ್ಯಂತ ದುಷ್ಕರನಾಗಿದ್ದ, ಭೂಮ್ಯಾಕಾಶಗಳನ್ನು ಆವರಿಸಿದ್ದ ರಾಕ್ಷಸನೋರ್ವನನ್ನು ನೋಡಿದುದು, ಅಶ್ವತ್ಥಾಮನು ಪ್ರಯೋಗಿಸಿದ ಅಸ್ತ್ರಗಳೆಲ್ಲವನ್ನೂ ರಾಕ್ಷಸನು ನಷ್ಟಗೊಳಿಸಿದುದು, ಆಗ ದ್ರೌಣಿಯು ವಿರೂಪಾಕ್ಷ ರುದ್ರನನ್ನು ಆರಾಧಿಸಿ ತೃಪ್ತಿಗೊಳಿಸಿದುದು. ↩︎
-
ಧೃಷ್ಟದ್ಯುಮ್ನಪುರೋಗಮಾನ್। । ↩︎
-
ದ್ರೌಪದೇಯಾಂಶ್ಚ ಸರ್ವಶಃ।। ↩︎
-
ತೇ ಪಾರ್ಥಾಃ ↩︎
-
ಪಂಚಾಲಾನಾಂ ಪ್ರಸುಪ್ತಾನಾಂ ಯತ್ರ ದ್ರೋಣಸುತಾದ್ವಧಃ। ಧೃಷ್ಟದ್ಯುಮ್ನಸ್ಯ ಸೂತೇನ ಪಾಂಡವೇಷು ನಿವೇದಿತಃ।। ಅರ್ಥಾತ್: ಮಲಗಿದ್ದ ಪಂಚಾಲರು ಮತ್ತು ಧೃಷ್ಟದ್ಯುಮ್ನನನ್ನು ದ್ರೋಣಸುತನು ವಧಿಸಿದುದನ್ನು ಸೂತನು ಪಾಂಡವರಿಗೆ ನಿವೇದಿಸಿದುದು. ↩︎
-
ಪ್ರಿಯಂ ತಸ್ಯಾಶ್ಚಿಕೀರ್ಷನ್ವೈ ಗದಮಾದಾಯ ವೀರ್ಯವಾನ್। ಅರ್ಥಾತ್: ಅವಳಿಗೆ ಪ್ರಿಯವಾದುದನ್ನು ಮಾಡಲು ಆ ವೀರ್ಯವಾನನು ಗದೆಯನ್ನು ಎತ್ತಿಕೊಂಡಿದುದು. ↩︎
-
ದ್ರೌಣೇಶ್ಚ ದ್ರೋಹಬುದ್ಧಿತ್ವಂ ವೀಕ್ಷ್ಯ ಪಾಪಾತ್ಮನಸ್ತದಾ। ಪಾಪಾತ್ಮಾ ದ್ರೌನಿಯ ದ್ರೋಹಬುದ್ಧಿಯನ್ನು ವೀಕ್ಷಿಸಿ ↩︎
-
ತೋಯಕರ್ಮಣಿ ಸರ್ವೇಷಾಂ ರಾಜ್ಞಾಮುದಕದಾನಿಕೇ।। ಗೂಢೋತ್ಪನ್ನಸ್ಯ ಚಾಖ್ಯಾನಂ ಕರ್ಣಸ್ಯ ಪೃಥಯಾತ್ಮನಃ। ಸುತಸ್ಯೈತದಿಹ ಪ್ರೋಕ್ತಂ – ಈ ಶ್ಲೋಕಗಳು ಗೋರಖಪುರ ಸಂಪುಟದಲ್ಲಿ ಇಲ್ಲಿ ಸೇರಿಸಿಲ್ಲ. ಈ ವಿಷಯಗಳು ಸ್ತ್ರೀಪರ್ವದಲ್ಲಿ ಬರುತ್ತವೆ. ↩︎
-
ಏತದ್ವೈ ದಶಮಂ ಪರ್ವ ಸೌಪ್ತಿಕಂ ಸಮುದಾಹೃತಮ್। ↩︎
-
ಸರ್ವ ರಾಜರುಗಳಿಗೆ ನೀರಿನಲ್ಲಿ ತರ್ಪಣವನ್ನಿತ್ತಿದ್ದುದು, ಪೃಥೆಯು ತನ್ನಿಂದ ಕರ್ಣನ ಜನನ ಮತ್ತು ಅವನೂ ತನ್ನ ಮಗನೇ ಎನ್ನುವ ಗೂಢ ವೃತಾಂತವನ್ನು ಹೇಳಿದ್ದುದು – ಈ ವಿಷಯಗಳು ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಸೌಪ್ತಿಕ ಪರ್ವದಲ್ಲಿ ಬರುವುದಿಲ್ಲ. ಇದು ಸ್ತ್ರೀಪರ್ವದಲ್ಲಿ ಬರುತ್ತದೆ. ↩︎
-
ಮಣಿಂ ತಥಾ ಸಮಾದಾಯ ದ್ರೋಣಪುತ್ರಾನ್ಮಹಾರಥಾತ್। ಪಾಂಡವಾಃ ಪ್ರದದುರ್ಹೃಷ್ಟಾ ದ್ರೌಪದೈ ಜಿತಕಾಶಿನಃ।। ಮಹಾರಥಿ ದ್ರೋಣಪುತ್ರನಿಂದ ಮಣಿಯನ್ನು ಕಸಿದುಕೊಂಡು ವಿಜಯದಿಂದ ಸುಶೋಭಿತ ಪಾಂಡವರು ಹರ್ಷದಿಂದ ಅದನ್ನು ದ್ರೌಪದಿಗೆ ನೀಡಿದುದು. ↩︎
-
ಶ್ಲೋಕಾನಾಂ ಕಥಿತಾನ್ಯತ್ರ ಶತಾನ್ಯಷ್ಟೌ ಪ್ರಸಂಖ್ಯಯಾ। ↩︎
-
ಮುನಿನಾ ಬ್ರಹ್ಮವಾದಿನಾ। ↩︎
-
ಸೌಪ್ತಿಕೈಷೀಕೇ ಸಂಬದ್ದೇ ಪರ್ವಣ್ಯುತ್ತಮತೇಜಸಾ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಸೌಪ್ತಿಕಪರ್ವದಲ್ಲಿ 18 ಅಧ್ಯಾಯಗಳು ಮತ್ತು 772 ಶ್ಲೋಕಗಳಿವೆ. ಗೋರಖಪುರ ಸಂಪುಟದ ಸೌಪ್ತಿಕಪರ್ವದಲ್ಲಿ 18 ಅಧ್ಯಾಯಗಳು ಮತ್ತು 804 ಶ್ಲೋಕಗಳಿವೆ. ↩︎
-
ಪುತ್ರಶೋಕಾಭಿಸಂತಪ್ತಃ ಪ್ರಜ್ಞಾಚಕ್ಷುರ್ನರಾಧಿಪಃ। ಕೃಷ್ಣೋಪನೀತಾಂ ಯತ್ರಾಸಾವಾಯಸೀಂ ಪ್ರತಿಮಾಂ ದೃಢಾಮ್।। ಭೀಮಸೇನದ್ರೋಹಬುದ್ಧಿರ್ಧೃತರಾಷ್ಟ್ರೋ ಬಭಂಜ ಹ। ತಥಾ ಶೋಕಾಭಿತಪ್ತಸ್ಯ ಧೃತರಾಷ್ಟ್ರಸ್ಯ ಧೀಮತಃ।। ಸಂಸಾರಗಹನಂ ಬುದ್ಧ್ಯಾ ಹೇತುಭಿರ್ಮೋಕ್ಷದರ್ಶನೈಃ। ವಿದುರೇಣ ಚ ಯತ್ರಾಸ್ಯ ರಾಜ್ಞ ಆಶ್ವಾಸನಂ ಕೃತಮ್।। ಧೃತರಾಷ್ಟ್ರಸ್ಯ ಚಾತ್ರೈವ ಕೌರವಾಯೋಧನಂ ತಥಾ। ಸಾಂತಃಪುರಸ್ಯ ಗಮನಂ ಶೋಕಾರ್ತಸ್ಯ ಪ್ರಕೀರ್ತಿತಮ್।। ಅರ್ಥಾತ್: ಪ್ರಜ್ಞಾಚಕ್ಷು ನರಾಧಿಪ ಧೃತರಾಷ್ಟ್ರನು ಪುತ್ರಶೋಕದಿಂದ ಸಂತಪ್ತನಾಗಿ ಭೀಮಸೇನನ ಮೇಲಿನ ದ್ರೋಹಬುದ್ಧಿಯಿಂದ ಕೃಷ್ಣನು ತಂದಿರಿಸಿದ್ದ ಉಕ್ಕಿನ ದೃಢ ಪ್ರತಿಮೆಯನ್ನು ಮುರಿದುದು, ಹಾಗೆಯೇ ಶೋಕಾಭಿತಪ್ತನಾದ ಧೃತರಾಷ್ಟ್ರನಿಗೆ ಧೀಮಂತ ವಿದುರನು ಮೋಕ್ಷದರ್ಶನವನ್ನು ನೀಡುವ ಸಂಸಾರಗಹನವನ್ನು ಬುದ್ಧಿಪೂರ್ವಕವಾಗಿ ವರ್ಣಿಸಿ ಆಶ್ವಾಸನೆಯನ್ನು ನೀಡಿದುದು, ಶೋಕಾರ್ತನಾದ ಧೃತರಾಷ್ಟ್ರನು ಅಂತಃಪುರದ ಸ್ತ್ರೀಯರೊಂದಿಗೆ ಯುದ್ಧಸ್ಥಾನಕ್ಕೆ ಹೋಗುವ ವರ್ಣನೆಯಿದೆ. ↩︎
-
ಸಂಗ್ರಾಮೇಷ್ವನಿವರ್ತಿನಃ । ↩︎
-
ಪುತ್ರಪೌತ್ರವಧಾರ್ತಾಯಾಸ್ತಥಾತ್ರೈವ ಪ್ರಕೀರ್ತಿತಾ। ಗಾಂಧಾರ್ಯಾಶ್ಚಾಪಿ ಕೃಷ್ಣೇನ ಕ್ರೋಧೋಪಶಮನಕ್ರಿಯಾ।। ಅರ್ಥಾತ್: ಪುತ್ರ-ಪೌತ್ರರ ವಧೆಗಳಿಂದ ಆರ್ತಳಾಗಿದ್ದ ಗಾಂಧಾರಿಯ ಬಳಿಸಾರಿ ಕೃಷ್ಣನು ಅವಳ ಕ್ರೋಧವನ್ನು ಶಾಂತಗೊಳಿಸಿದುದು. ↩︎
-
ತೋಯಕರ್ಮಾಣಿ ಚಾರಬ್ಧೇ ರಾಜ್ಞಾಮುದಕದಾನಿಕೇ। ಗೂಢೋತ್ಪನ್ನಸ್ಯ ಚಾಖ್ಯಾನಂ ಕರ್ಣಸ್ಯ ಪೃಥಯಾಽಽತ್ಮನಃ। ಸುತಸೈತಾದಿಹ ಪ್ರೋಕ್ತಂ ವ್ಯಾಸೇನ ಪರಮರ್ಷಿಣಾ।। ಅರ್ಥಾತ್: ರಾಜರ ಜಲತರ್ಪಣದ ಸಮಯದಲ್ಲಿ ಪೃಥೆಯು ಕರ್ಣನು ತನ್ನಲ್ಲಿ ಹುಟ್ಟಿದವನೆಂಬ ಗೂಢವಿಷಯವನ್ನು ಹೇಳಿದುದು ಮತ್ತು ಪರಮ ಋಷಿ ವ್ಯಾಸನು ಕರ್ಣನು ಅವಳ ಮಗನೆಂದು ಹೇಳಿದುದು. ↩︎
-
ಏತದೇಕಾದಶಂ ಪರ್ವ ಶೋಕವೈಕ್ಲವ್ಯಕಾರಣಮ್। ↩︎
-
ಪ್ರಣೀತಂ ಸಜ್ಜನಮನೋವೈಕ್ಲವ್ಯಾಶ್ರುಪ್ರವರ್ತಕಮ್।। ಅರ್ಥಾತ್ ಸಜ್ಜನರ ಮನಸ್ಸನ್ನೂ ವ್ಯಾಕುಲಗೊಳಿಸಿ ಅವರ ಕಣ್ಣೀರಿಳಿಸುವಂತಿರುವ. ↩︎
-
ಪ್ರಕೀರ್ತಿತಾಃ । ↩︎
-
ಶ್ಲೋಕಸಪ್ತಶತೀ ಚಾಪಿ ಪಂಚಸಪ್ತತಿಸಂಯುತಾ। ↩︎
-
ಸಂಖ್ಯಯಾ ಭಾರತಾಖ್ಯಾನಮುಕ್ತಂ ವ್ಯಾಸೇನ ಧೀಮತಾ।। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಸ್ತ್ರೀಪರ್ವದಲ್ಲಿ 27 ಅಧ್ಯಾಯಗಳು ಮತ್ತು 730 ಶ್ಲೋಕಗಳಿವೆ. ಗೋರಖಪುರ ಸಂಪುಟದ ಸ್ತ್ರೀಪರ್ವದಲ್ಲಿ 27 ಅಧ್ಯಾಯಗಳು ಮತ್ತು 826 ಶ್ಲೋಕಗಳಿವೆ. ↩︎
-
ಸಂಬಂಧಿಮಾತುಲಾನ್ । ↩︎
-
ರಾಜಭಿರ್ವೇದಿದವ್ಯಾಸ್ತೇ ಸಮ್ಯಜ್ಞಾನಬುಭುತ್ಸುಭಿಃ। ↩︎
-
ಕಾಲಹೇತುಪ್ರದರ್ಶಿನಃ । ↩︎
-
ಅತ್ರ ಪರ್ವಣಿ ವಿಜ್ಞೇಯಮಧ್ಯಾಯಾನಾಂ ಶತತ್ರಯಮ್। ↩︎
-
ಚತುರ್ದಶ ಸಹಸ್ರಾಣಿ ತಥಾ ಸಪ್ತ ಶತಾನಿ ಚ। ↩︎
-
ಸಪ್ತ ಶ್ಲೋಕಾಸ್ತಥೈವಾತ್ರ ಪಂಚವಿಂಶತಿಸಂಖ್ಯಯಾ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಶಾಂತಿಪರ್ವದಲ್ಲಿ 353 ಅಧ್ಯಾಯಗಳು ಮತ್ತು 12,863 ಶ್ಲೋಕಗಳಿವೆ. ಗೋರಖಪುರ ಸಂಪುಟದ ಶಾಂತಿಪರ್ವದಲ್ಲಿ 365 ಅಧ್ಯಾಯಗಳು ಮತ್ತು 14,172 ಶ್ಲೋಕಗಳಿವೆ. ↩︎
-
ಚ । ↩︎
-
ಧರ್ಮಾರ್ಥೀ ಯಃ ಪ್ರಕೀರ್ತಿತಃ। ↩︎
-
ಪ್ರಕೀರ್ತಿತಾಃ । ↩︎
-
ಮಹಾಭಾಗ್ಯಂ ಗವಾಂ ಚೈವ ಬ್ರಾಹ್ಮಣಾನಾಂ ತಥೈವ ಚ। ರಹಸ್ಯಂ ಚೈವ ಧರ್ಮಾಣಾಂ ದೇಶಕಾಲೋಪಸಂಹಿತಮ್।। ಅರ್ಥಾತ್: ಗೋ-ಬ್ರಾಹ್ಮಣರ ಮಹಾಭಾಗ್ಯ, ಮತ್ತು ದೇಶ-ಕಾಲಗಳ ಮತ್ತು ಧರ್ಮಗಳ ರಹಸ್ಯ. ↩︎
-
ಪ್ರೋಕ್ತಾನ್ಯಷ್ಟೌ ಪ್ರಸಂಖ್ಯಯಾ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಅನುಶಾಸನಪರ್ವದಲ್ಲಿ 154 ಅಧ್ಯಾಯಗಳು ಮತ್ತು 6,534 ಶ್ಲೋಕಗಳಿವೆ. ಗೋರಖಪುರ ಸಂಪುಟದ ಅನುಶಾಸನಪರ್ವದಲ್ಲಿ 168 ಅಧ್ಯಾಯಗಳು ಮತ್ತು 9,580 ಶ್ಲೋಕಗಳಿವೆ. ↩︎
-
ಪರೀಕ್ಷಿತಃ । ↩︎
-
ಬಭ್ರುವಾಹೇಣ । ↩︎
-
ಅಧ್ಯಾಯಾನಾಂ ಶತಂ ಚೈವ ತ್ರಯೋಽಧ್ಯಾಯಾಶ್ಚ ಕೀರ್ತಿತಾಃ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಅಶ್ವಮೇಧಿಕಪರ್ವದಲ್ಲಿ 96 ಅಧ್ಯಾಯಗಳು ಮತ್ತು 2,742 ಶ್ಲೋಕಗಳಿವೆ. ಗೋರಖಪುರ ಸಂಪುಟದ ಅನುಶಾಸನಪರ್ವದಲ್ಲಿ 92 ಅಧ್ಯಾಯಗಳು ಮತ್ತು 2,906 ಶ್ಲೋಕಗಳಿವೆ. ↩︎
-
ತತಸ್ತ್ವಾಶ್ರಮವಾಸಾಖ್ಯಂ । ↩︎
-
ಯತ್ರ ರಾಜ್ಯಂ ಸಮುತ್ಸೃಜ್ಯ ಗಾಂಧಾರ್ಯಾ ಸಹಿತೋ ನೃಪಃ। ↩︎
-
ಧೃತರಾಷ್ಟ್ರೋಽಽಶ್ರಮಪದಂ । ↩︎
-
ಮಹಾಮಾತ್ಯೋ । ↩︎
-
ಮಹದದ್ಭುತಮ್। । ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಆಶ್ರಮವಾಸಿಕಪರ್ವದಲ್ಲಿ 47 ಅಧ್ಯಾಯಗಳು ಮತ್ತು 1,062 ಶ್ಲೋಕಗಳಿವೆ. ಗೋರಖಪುರ ಸಂಪುಟದ ಆಶ್ರಮವಾಸಿಕಪರ್ವದಲ್ಲಿ 39 ಅಧ್ಯಾಯಗಳು ಮತ್ತು 1,090 ಶ್ಲೋಕಗಳಿವೆ. ↩︎
-
ಶಸ್ತ್ರಸ್ಪರ್ಷಹತಾ । ↩︎
-
ಪಾನಕಲಿತಾ । ↩︎
-
ಮಹತ್ । ↩︎
-
ಸ ಸಂಸ್ಕೃತ್ಯ ನರಶ್ರೇಷ್ಠಂ ↩︎
-
ಪ್ರಭಾವಾಣಾಮನಿತ್ಯತಾಮ್। । ↩︎
-
ಸಮರೋಚಯತ್ । ↩︎
-
ಗೋರಖಪುರ ಸಂಪುಟದಲ್ಲಿ ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಶ್ಲೋಕಾನಾಂ ವಿಂಶತಿಶ್ಚೈವ ಸಂಖ್ಯ್ತಾಸ್ತತ್ವದರ್ಶಿನಾ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಮೌಸಲಪರ್ವದಲ್ಲಿ 9 ಅಧ್ಯಾಯಗಳು ಮತ್ತು 273 ಶ್ಲೋಕಗಳಿವೆ. ಗೋರಖಪುರ ಸಂಪುಟದ ಮೌಸಲಪರ್ವದಲ್ಲಿ 8 ಅಧ್ಯಾಯಗಳು ಮತ್ತು 290 ಶ್ಲೋಕಗಳಿವೆ. ↩︎
-
ಮಹಾಪ್ರಸ್ಥಾನಮಾಸ್ಥಿತಾಃ । ↩︎
-
ಯತ್ರ ತೇಽಗ್ನಿಂ ದದೃಶಿರೇ ಲೌಹಿತ್ಯಂ ಪ್ರಾಪ್ಯ ಸಾಗರಮ್। ಯತ್ರಾಗ್ನಿನಾ ಚೋದಿತಶ್ಚ ಪಾರ್ಥಸ್ತಸ್ಮೈ ಮಹಾತ್ಮನೇ।। ದದೌ ಸಂಪೂಜ್ಯ ತದ್ದಿವ್ಯಂ ಗಾಂಡೀವಂ ಧನುರುತ್ತಮಮ್। ಯತ್ರ ಭ್ರಾತೄನ್ನಿಪತಿತಾನ್ ದ್ರೌಪದೀಂ ಚ ಯುಧಿಷ್ಠಿರಃ।। ದೃಷ್ಟ್ವಾ ಹಿತ್ವಾ ಜಗಾಮೈವ ಸರ್ವಾನನವಲೋಕಯನ್। ಏತತ್ಸಪ್ತದಶಂ ಪರ್ವ ಮಹಾಪ್ರಸ್ಥಾನಿಕಂ ಸ್ಮೃತಮ್।। ಅರ್ಥಾತ್: ಕೆಂಪುಸಾಗರವನ್ನು ತಲುಪಿ ಅಲ್ಲಿ ಅಗ್ನಿಯನ್ನು ನೋಡಿ ಅಗ್ನಿಯ ಪ್ರೇರಣೆಯಂತೆ ಆ ಮಹಾತ್ಮನಿಗೆ ಪಾರ್ಥನು ಉತ್ತಮ ಧನುಸ್ಸು ದಿವ್ಯ ಗಾಂಡೀವವನ್ನು ಪೂಜಿಸಿ ನೀಡಿದನು. ಅಲ್ಲಿ ದ್ರೌಪದಿ ಮತ್ತು ಸಹೋದರರು ಬಿದ್ದುದನ್ನು ನೋಡಿಯೂ ಎಲ್ಲರನ್ನೂ ಅವಲೋಕಿಸದೆಯೇ ಯುಧಿಷ್ಠಿರನು ಮುಂದುವರೆದನು. ↩︎
-
ಯತ್ರಾಧ್ಯಾಯಾಸ್ತ್ರಯಃ ಪ್ರೋಕ್ತಾಃ ಶ್ಲೋಕಾನಾಂ ಚ ಶತತ್ರಯಮ್। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಮಹಾಪ್ರಸ್ಥಾನಿಕಪರ್ವದಲ್ಲಿ 3 ಅಧ್ಯಾಯಗಳು ಮತ್ತು 106 ಶ್ಲೋಕಗಳಿವೆ. ಗೋರಖಪುರ ಸಂಪುಟದ ಮಹಾಪ್ರಸ್ಥಾನಿಕಪರ್ವದಲ್ಲಿ 3 ಅಧ್ಯಾಯಗಳು ಮತ್ತು 110 ಶ್ಲೋಕಗಳಿವೆ. ↩︎
-
ಪ್ರಾಪ್ತಂ ದೈವರಥಂ ಸ್ವರ್ಗಾನ್ನೇಷ್ಟವಾನ್ಯತ್ರ ಧರ್ಮರಾಟ್। ಆರೋಢುಂ ಸುಮಹಾಪ್ರಾಜ್ಞ ಅನೃಷಂಸ್ಯಾಚ್ಛುನಾ ವಿನಾ।। ತಾಮಸ್ಯಾವಿಚಲಾಂ ಜ್ಞಾತ್ವಾ ಸ್ಥಿತಿಂ ಧರ್ಮೇ ಮಹಾತ್ಮನಃ। ಸ್ವರೂಪಂ ಯತ್ರ ತತ್ತ್ಯಕ್ತ್ವಾ ಧರ್ಮೇಣಾಸೌ ಸಮನ್ವಿತಃ। ಸ್ವರ್ಗಂ ಪ್ರಾಪ್ತಃ ಸ ಚ ತಥಾ ಯಾತನಾ ವಿಪುಲಾ ಭೃಶಮ್। ದೇವದೂತೇನ ನರಕಂ ಯತ್ರ ವ್ಯಾಜೇನ ದರ್ಶಿತಮ್।। ಶುಶ್ರಾವ ಯತ್ರ ಧರ್ಮಾತ್ಮಾ ಭ್ರಾತೄಣಾಂ ಕರುಣಾ ಗಿರಃ। ನಿದೇಶೇ ವರ್ತಮಾನಾನಾಂ ದೇಶೇ ತತ್ರೈವ ವರ್ತತಾಮ್।। ಅನುದರ್ಶಿತಶ್ಚ ಧರ್ಮೇಣ ದೇವರಾಜೇನ ಪಾಂಡವಃ। ಆಪ್ಲುತ್ಯಾಕಾಶಗಂಗಾಯಾಂ ದೇಹಂ ತ್ಯಕ್ತ್ವಾ ಸ ಮಾನುಷಮ್।। ಸ್ವಧರ್ಮನಿರ್ಜಿತಂ ಸ್ಥಾನಂ ಸ್ವರ್ಗೇ ಪ್ರಾಪ್ಯ ಸ ಧರ್ಮರಾಟ್। ಮುಮುದೇ ಪೂಜಿತಃ ಸರ್ವೈಃ ಸೇಂದ್ರೈಃ ಸುರಗಣೈಃ ಸಹ।। ಏತದಷ್ಟಾದಶಂ ಪರ್ವ ಪ್ರೋಕ್ತಂ ವ್ಯಾಸೇನ ಧೀಮತಾ। ಅರ್ಥಾತ್: ದೈವರಥವು ಪ್ರಾಪ್ತವಾಗಲು ಸುಮಹಾಪ್ರಾಜ್ಞ ಧರ್ಮರಾಜನು ದಯಾವಶನಾಗಿ ನಾಯಿಯ ವಿನಾ ಸ್ವರ್ಗವನ್ನೇರಲು ಬಯಸದೇ ಇರುವುದು, ಧರ್ಮದಲ್ಲಿ ಆ ಮಹಾತ್ಮನ ಅವಿಚಲ ಶ್ರದ್ಧೆಯನ್ನು ತಿಳಿದು ನಾಯಿಯು ತನ್ನ ಸ್ವರೂಪವನ್ನು ತೊರೆದು ಧರ್ಮನಾಗಿ ತೋರಿದುದು, ಧರ್ಮನೊಂದಿಗೆ ಸ್ವರ್ಗಕ್ಕೆ ಹೋಗಿ ಅಲ್ಲಿ ದೇವದೂತನು ವ್ಯಾಜದಲ್ಲಿ ನರಕದ ವಿಪುಲ ಯಾತನೆಯನ್ನು ತೋರಿಸಿದುದು, ಧರ್ಮಾತ್ಮನು ಅಲ್ಲಿ ಸಹೋದರರ ಕರುಣೆಯ ಮಾತುಗಳನ್ನು ಕೇಳಿದುದು, ಆ ಪ್ರದೇಶದಲ್ಲಿ ನಡೆಯುತ್ತಿದ್ದುದರ ವಿಷಯವನ್ನು ಪಾಂಡವನಿಗೆ ಧರ್ಮರಾಜ ಮತ್ತು ದೇವರಾಜರು ತೋರಿಸಿದುದು, ಧರ್ಮರಾಜನು ಆಕಾಶಗಂಗೆಯಲ್ಲಿ ಮುಳುಗಿ ಮನುಷ್ಯದೇಹವನ್ನು ತೊರೆದು ಸ್ವಧರ್ಮದಿಂದ ಗೆದ್ದ ಸ್ವರ್ಗವನ್ನು ಪಡೆದು ಇಂದ್ರನೊಂದಿಗೆ ಸರ್ವಸುರಗಣಗಳಿಂದ ಪೂಜಿತನಾಗಿ ಮೋದಿಸಿದುದು ಇವುಗಳನ್ನು ಹದಿನೆಂಟನೇ ಪರ್ವದಲ್ಲಿ ಧೀಮಂತ ವ್ಯಾಸನು ಹೇಳಿದ್ದಾನೆ. ↩︎
-
ಇದರ ನಂತರ ಗೋರಖಪುರ ಸಂಪುಟದಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನವ ಶ್ಲೋಕಾಸತಥೈವಾನ್ಯೇ ಸಂಖ್ಯಾತಾಃ ಪರಮರ್ಷಿಣಾ। ↩︎
-
ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಸ್ವರ್ಗಾರೋಹಣಪರ್ವದಲ್ಲಿ 5 ಅಧ್ಯಾಯಗಳು ಮತ್ತು 194 ಶ್ಲೋಕಗಳಿವೆ. ಗೋರಖಪುರ ಸಂಪುಟದ ಸ್ವರ್ಗಾರೋಹಣಪರ್ವದಲ್ಲಿ 5 ಅಧ್ಯಾಯಗಳು ಮತ್ತು 215 ಶ್ಲೋಕಗಳಿವೆ. ↩︎
-
ದಶಶ್ಲೋಕಸಹಸ್ರಾಣಿ ವಿಂಶಶ್ಲೋಕಶತಾನಿ ಚ। ಖಿಲೇಷು ಹರಿವಂಶೇ ಚ ಸಂಖ್ಯಾತಾನಿ ಮಹರ್ಷಿಣಾ।। ಅರ್ಥಾತ್: ಅನುಬಂಧವಾಗಿರುವ ಹರಿವಂಶದಲ್ಲಿ 12,000 ಶ್ಲೋಕಗಳಿವೆ ಎಂದು ಮಹರ್ಷಿಗಳು ಹೇಳಿದ್ದಾರೆ. ↩︎
-
ಏತತ್ಸರ್ವಂ ಸಮಾಖ್ಯಾತಂ ಭಾರತೇ ಪರ್ವಸಂಗ್ರಹಃ। ↩︎
-
ಇಲ್ಲಿ ಕೊಟ್ಟಿರುವ ಪ್ರತಿ ಮಹಾಪರ್ವದಲ್ಲಿರುವ ಶ್ಲೋಕ ಮತ್ತು ಅಧ್ಯಾಯಗಳ ಸಂಖ್ಯೆಯ ಪ್ರಕಾರ ಮಹಾಭಾರತದಲ್ಲಿ ಒಟ್ಟು ೮೪,೮೮೩ ಶ್ಲೋಕಗಳೂ ೧,೮೯೬ ಅಧ್ಯಾಗಳೂ ಇವೆಯೆಂದು ತಿಳಿಯುತ್ತದೆ. ಆದರೆ ಈ ನಿರ್ದಿಷ್ಟ ಶ್ಲೋಕಸಂಖ್ಯೆಗಳು ಈಗಿರುವ ಮಹಾಭಾರತದ ಯಾವ ಸಂಪುಟಗಳಲ್ಲಿಯೂ ಇಲ್ಲವೆಂಬುದು ಗಮನಾರ್ಹ. ಉದಾಹರಣೆಗೆ, ಈ ಕನ್ನಡ ಅನುವಾದಕ್ಕೆ ತೆಗೆದುಕೊಂಡಿರುವ ಪುಣೆಯ ವಿಶೇಷ ಸಂಪುಟದಲ್ಲಿರುವ ೧೮ ಮಹಾಪರ್ವಗಳಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ ೭೩,೭೮೪ ಮತ್ತು ಅಧ್ಯಾಯಗಳ ಸಂಖ್ಯೆ ೧,೯೯೫. ಗೋರಖಪುರದ ಮಹಾಭಾರತ ಸಂಪುಟದ ೧೮ ಅಧ್ಯಾಯಗಳಲ್ಲಿ ದೊರಕುವ ಶ್ಲೋಕ ಸಂಖ್ಯೆ ೯೦,೧೧೩ ಮತ್ತು ಅಧ್ಯಾಯಗಳ ಸಂಖ್ಯೆ ೨,೧೦೭. ↩︎
-
ಅರ್ಥಶಾಸ್ತ್ರಮಿದಂ ಪ್ರೋಕ್ತಂ ಧರ್ಮಶಾಸ್ತ್ರಮಿದಂ ಮಹತ್। ಕಾಮಶಾಸ್ತ್ರಮಿತಂ ಪ್ರೋಕ್ತಂ ವ್ಯಾಸೇನಾಮಿತಬುದ್ಧಿನಾ।। ಅರ್ಥಾತ್: ಅಮಿತಬುದ್ಧಿ ವ್ಯಾಸನ ಈ ಕೃತಿಯನ್ನು ಅರ್ಥಶಾಸ್ತ್ರವೆಂದೂ, ಮಹಾ ಧರ್ಮಶಾಸ್ತ್ರವೆಂದೂ ಮತ್ತು ಕಾಮಶಾಸ್ತ್ರವೆಂದೂ ಹೇಳಲ್ಪಟ್ಟಿದೆ. ↩︎
-
ಅಸ್ಯ ಕಾವ್ಯಸ್ಯ ಕವಯೋ ನ ಸಮರ್ಥಾ ವಿಶೇಷಣೇ। ಸಾಧೋರಿವ ಗೃಹಸ್ಥಸ್ಯ ಶೇಷಾಸ್ತ್ರಯ ಇವಾಶ್ರಮಾಃ।। ಧರ್ಮೇ ಮತಿರ್ಭವತು ವಃ ಸತತೋತ್ಥಿತಾನಾಂ ಸ ಹ್ಯೇಕ ಏವ ಪರಲೋಕಗತಸ್ಯ ಬಂಧುಃ। ಅರ್ಥಾಃ ಸ್ತ್ರಿಯಶ್ಚ ನಿಪುಣೈರಪಿ ಸೇವ್ಯಮಾನಾ। ನೈವಾಪ್ತಭಾವಮುಪಯಾಂತಿ ನ ಚ ಸ್ಥಿರತ್ವಂ।। ಅರ್ಥಾತ್: ಉಳಿದ ಮೂರು ಆಶ್ರಮ (ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ) ಗಳಿಗಿಂತ ಗೃಹಸ್ಥಾಶ್ರಮವು ಶ್ರೇಷ್ಠವಾಗಿರುವಂತೆ ಈ ಕಾವ್ಯವನ್ನು ಕೂಡ ಕವಿಗಳು ಮೀರಿಸಲು ಅಶಕ್ಯರು. ↩︎
-
ಯದಹ್ನಾ ಕುರುತೇ ಪಾಪಂ ಬ್ರಾಹ್ಮಣಸ್ತ್ವಿಂದ್ರಿಯೈಶ್ಚರನ್। ಮಹಾಭಾರತಮಾಖ್ಯಾಯ ಸಂಧ್ಯಾಂ ಮುಚ್ಯತಿ ಪಶ್ಚಿಮಾಮ್।। ಯದ್ರಾತ್ರೌ ಕುರುತೇ ಪಾಪಂ ಕರ್ಮಣಾ ಮನಸಾ ಗಿರಾ। ಮಹಾಭಾರತಮಾಖ್ಯಾಯ ಪೂರ್ವಾಂ ಸಂಧ್ಯಾಂ ಪ್ರಮುಚ್ಯತೇ।। ಅರ್ಥಾತ್: ಬ್ರಾಹ್ಮಣನು ಇಂದ್ರಿಯವಶನಾಗಿ ಹಗಲಿನಲ್ಲಿ ಮಾಡಿರಬಹುದಾದ ಪಾಪವು ಸಾಯಂ ಸಂಧ್ಯಾ ಸಮಯದಲ್ಲಿ ಮಹಾಭಾರತಪ್ರವಚನಮಾಡುವುದರಿಂದ ಪರಿಹಾರವಾಗುತ್ತದೆ. ಶರೀರ, ಮನಸ್ಸು, ಮತ್ತು ಮಾತುಗಳಿಂದ ರಾತ್ರಿಯಲ್ಲಿ ಮಾಡಿದ ಮಾಪವು ಪ್ರಾತಃಸಂಧ್ಯಾಸಮಯದಲ್ಲಿ ಮಹಾಭಾರತ ಪ್ರವಚನ ಮಾಡುವುದರಿಂದ ಪರಿಹಾರವಾಗುತ್ತದೆ. ಯೋ ಗೋಶತಂ ಕನಕಶೃಂಗಮಯಂ ದದಾತಿ ವಿಪ್ರಾಯ ವೇದವಿದುಷೇ ಚ ಬಹುಶೃತಾಯ। ಪುಣ್ಯಾಂ ಚ ಭಾರತಕಥಾಂ ಶೃಣುಯಾಚ್ಚ ನಿತ್ಯಂ ತುಲ್ಯಂ ಫಲಂ ಭವತಿ ತಸ್ಯ ಚ ತಸ್ಯ ಚೈವ।। ಅರ್ಥಾತ್: ಬಹುಶ್ರುತ, ವೇದವಿದ ಬ್ರಾಹ್ಮಣನಿಗೆ ಅಲಂಕೃತ ಸ್ವರ್ಣಮಯ ಕೊಂಬುಗಳಿಂದ ಕೂಡಿರುವ ನೂರು ಹಸುಗಳನ್ನು ದಾನಮಾಡುವುದರಿಂದ ದೊರಕುವ ಪುಣ್ಯ ಮತ್ತು ಭಾರತಕಥೆಯನ್ನು ನಿತ್ಯವೂ ಕೇಳುವುದರಿಂದ ಬರುವುದರ ಪುಣ್ಯ ಇವೆರಡರ ಫಲಗಳೂ ಸಮನಾಗಿರುತ್ತವೆ. ↩︎
-
ಪುಣೆಯ ವಿಶೇಷ ಸಂಪುಟದ ಪ್ರಕಾರ ಈ ಉಪಪರ್ವದಲ್ಲಿರುವ ಶ್ಲೋಕಗಳ ಒಟ್ಟು ಸಂಖ್ಯೆ ೨೪೩. ನೀಲಕಂಠೀಯ ಸಂಪುಟದ ಪ್ರಕಾರ ಈ ಉಪಪರ್ವದಲ್ಲಿರುವ ಶ್ಲೋಕಗಳ ಒಟ್ಟು ಸಂಖ್ಯೆ ೩೯೬. ↩︎